Tag: ವಿನಾಯಿತಿ

  • ಮಧ್ಯಮ ವರ್ಗದರಿಗೆ ಬಂಪರ್‌ – 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

    ಮಧ್ಯಮ ವರ್ಗದರಿಗೆ ಬಂಪರ್‌ – 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

    ನವದೆಹಲಿ: ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ (Union Budget 2023) ಬಂಪರ್‌ ಘೋಷಣೆ ಮಾಡಿದ್ದು ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಏರಿಕೆ ಮಾಡಲಾಗಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಬಜೆಟ್‌ ನಲ್ಲಿ ವಿನಾಯಿತಿ ಘೋಷಣೆ ಮಾಡುತ್ತಿದ್ದಂತೆ ಸರ್ಕಾರದ ಪರ ಸಚಿವರು, ಸಂಸದರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೊದಲು ವಾರ್ಷಿಕ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು.

    ನಿರ್ಮಲಾ ಸೀತಾರಾಮನ್‌ ಹೊಸ ಸ್ಲ್ಯಾಬ್‌ ದರವನ್ನು ಪ್ರಕಟಿಸಿದ್ದಾರೆ.

    ಯಾವುದಕ್ಕೆ ಎಷ್ಟು?
    0-3 ಲಕ್ಷ ರೂ. – ಇಲ್ಲ
    3- 6 ಲಕ್ಷ ರೂ. – 5%

    6- 9 ಲಕ್ಷ ರೂ. – 10%
    9-12 ಲಕ್ಷ ರೂ. – 15%

    12-15 ಲಕ್ಷ ರೂ. 20%
    15 ಲಕ್ಷ ರೂ. 30%

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಯೋಧ್ಯೆ ದೇವಾಲಯಗಳಿಗೆ ತೆರಿಗೆ ವಿನಾಯ್ತಿ: ಯೋಗಿ ಆದಿತ್ಯನಾಥ್

    ಅಯೋಧ್ಯೆ ದೇವಾಲಯಗಳಿಗೆ ತೆರಿಗೆ ವಿನಾಯ್ತಿ: ಯೋಗಿ ಆದಿತ್ಯನಾಥ್

    ಲಕ್ನೋ: ಅಯೋಧ್ಯೆ ದೇವಾಲಯಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ತೆರಿಗೆ ವಿನಾಯಿತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

    ಅಯೋಧ್ಯೆಯ ದೇವಾಲಯಗಳು ಮತ್ತು ಇತರ ದೇವಾಲಯಗಳ ಮೇಲೆ ವಾಣಿಜ್ಯ ತೆರಿಗೆಯನ್ನು ವಿಧಿಸದಂತೆ ನಗರದ ಮುನ್ಸಿಪಲ್ ಕಾರ್ಪೊರೇಶನ್‍ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅದೇಶಿಸಿದ್ದಾರೆ. ನಗರದ ದೇವಸ್ಥಾನಗಳು, ಧರ್ಮಶಾಲೆಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

    ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ನಂತರ ನಡೆಯುವ ಜಾತ್ರೆಯಲ್ಲಿ ಸುಮಾರು 10 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ, ಆದಿತ್ಯನಾಥ್ ಅವರು ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಭಗವಾನ್ ರಾಮ ಮಂದಿರದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ರಾಜ್ಯದ ಉಸ್ತುವಾರಿ ವಹಿಸಿಕೊಂಡ ನಂತರ ಅಯೋಧ್ಯೆಗೆ ಮೊದಲ ಭೇಟಿ ನೀಡಿದ ಆದಿತ್ಯನಾಥ್ ಅವರು ದೇವಾಲಯದ ಪಟ್ಟಣದಲ್ಲಿ ಮುಂಬರುವ ರಾಮ ನವಮಿ ಮೇಳದ ಸಿದ್ಧತೆಯನ್ನು ಪರಿಶೀಲಿಸಿದರು.

  • ಕಾರಿನಲ್ಲಿ ಏಕಾಂಗಿಯಾಗಿ ಓಡಾಡುವಾಗ ಮಾಸ್ಕ್ ಅಗತ್ಯ ಇಲ್ಲ – ದೆಹಲಿಯಲ್ಲಿ ವಿನಾಯಿತಿ

    ನವದೆಹಲಿ: ಕಾರುಗಳಲ್ಲಿ ಒಂಟಿಯಾಗಿ ಸಂಚರಿಸುವವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

    ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ನಿರ್ಬಂಧಗಳನ್ನು ಪರಿಶೀಲಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ದೆಹಲಿಯಲ್ಲಿ ಕೋವಿಡ್ ನಿಯಮಗಳ ಬಗೆಗಿನ ಕೆಲವು ವಲಯಗಳಲ್ಲಿ ವಿನಾಯಿತಿ ದೊರಕಿದೆ.

    ದೆಹಲಿಯಲ್ಲಿ ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವವರಿಗೆ ಕೊನೆಗೂ ಮಾಸ್ಕ್‌ಗಳಿಂದ ಮುಕ್ತಿ ದೊರಕಿದೆ. ಏಕಾಂಗಿಯಾಗಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಕಡ್ಡಾಯ ಮಾಸ್ಕ್ ನಿಯಮವನ್ನು ತೆಗೆದು ಹಾಕಿದೆ. ಆದರೆ ಒಬ್ಬರಿಗಿಂತ ಹೆಚ್ಚು ಮಂದಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಹಾಕಿಕೊಳ್ಳಲೇ ಬೇಕು ಎಂದು ದೆಹಲಿ ಸರ್ಕಾರ ಎಚ್ಚರಿಸಿದೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

    ಈ ಹಿಂದೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಜನರು ಒಂಟಿಯಾಗಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸಬೇಕು ಎಂಬ ಯಾವುದೇ ನಿರ್ದೇಶನ ನೀಡಿರಲಿಲ್ಲ. ಹೀಗಾಗಿ ಮಾಸ್ಕ್ ಇಲ್ಲದೇ ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಂದಲೂ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದರು. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ದೆಹಲಿಯಲ್ಲಿ ಜಿಮ್ ಹಾಗೂ ಶಾಲೆಗಳನ್ನು ತೆರೆಯಲು ಸರ್ಕಾರ ಶುಕ್ರವಾರ ನಿರ್ಧರಿಸಿದೆ.

  • ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ- ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ

    ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ- ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ

    ಬೆಂಗಳೂರು: ನಾಳೆ ಇರುವ ಲಾಕ್‍ಡೌನ್‍ನಿಂದ ವಿನಾಯಿತಿ ಕೇಳಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚುತ್ತಿರುವ ಕಾರಣ, ಸರ್ಕಾರ ಸಂಡೇ ಲಾಕ್‍ಡೌನ್ ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಕೊರೊನಾ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದೆ. ಈಗ ನಾಳೆ ಮೊದಲ ಸಂಡೇ ಲಾಕ್‍ಡೌನ್ ಮಾಡುತ್ತಿದ್ದು, ಜನತೆ ಸ್ವಯಂ ಪ್ರೇರಿತವಾಗಿ ಬೆಂಬಲ ಕೊಡುವಂತೆ ಭಾಸ್ಕರ್ ರಾವ್ ಅವರು ಕೇಳಿಕೊಂಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಸಿಟಿಯಲ್ಲಿ ಲಾಕ್‍ಡೌನ್ ಇಂದು ರಾತ್ರಿ 8ಗಂಟೆಗೆ ಪ್ರಾರಂಭವಾಗಿ ಸೋಮವಾರ ಬೆಳಿಗ್ಗೆ 5ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಗೌರವಾನ್ವಿತ ನಾಗರಿಕರೇ, ಮನೆಯಲ್ಲಿಯೇ ಇರಿ ಮತ್ತು ಎಲ್ಲರ ಹಿತದೃಷ್ಟಿಯಿಂದ ಲಾಕ್‍ಡೌನ್ ಮಾಡಲಾಗುತ್ತಿರುವುದರಿಂದ ವಿನಾಯಿತಿಗಳನ್ನು ಕೇಳಬೇಡಿ. ನೀವು ಒಂದು ದಿನ ನಿಮ್ಮ ಕೆಲಸ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ನೀವೇ ಸ್ವಯಂ ಪ್ರೇರಿತವಾಗಿ ಸಹಕಾರ ನೀಡಿ. ಹ್ಯಾಪಿ ಸಂಡೇ ಎಂದು ಹೇಳಿದ್ದಾರೆ.

    ನಾಳೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಲಾಕ್‍ಡೌನ್ ವಿನಾಯಿತಿ ನೀಡಲಾಗಿದೆ. ಈ ಮೂಲಕ ಏರ್ ಟಿಕೆಟ್ ಮತ್ತು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿದೆ. ನಾಳೆ ಅಗತ್ಯ ಸೇವೆ ಹೊರತುಪಡಿಸಿ ಖಾಸಗಿ ವಾಹನಗಳು, ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುಮತಿಯಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

  • KSRTC ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ವಿನಾಯಿತಿ

    KSRTC ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ವಿನಾಯಿತಿ

    – ಜಾಹೀರಾತುದಾರರಿಗೂ ರಿಲೀಫ್

    ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಜನರ ಬಳಿ ಹಣ ಇಲ್ಲದಂತಾಗಿದ್ದು, ಜೀವನ ಸಾಗಿಸುವುದೇ ದುಸ್ತರವಾಗಿದೆ. ಹೀಗಾಗಿ ಕೆಎಸ್‍ಆರ್ ಟಿಸಿ ತನ್ನ ಬಾಡಿಗೆದಾರರು ಹಾಗೂ ಜಾಹೀರಾತುದಾರರಿಗೆ ವಿನಾಯಿತಿ ನೀಡಿ ಸುತ್ತೋಲೆ ಹೊರಡಿಸಿದೆ.

    ಲಾಕ್‍ಡೌನ್ ಆದಾಗಿನಿಂದ ಎಲ್ಲ ಮಳಿಗೆಗಳು ಬಂದ್ ಆಗಿದ್ದು, ವ್ಯಾಪಾರವಿಲ್ಲದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಕೆಎಸ್‍ಆರ್ ಟಿಸಿಯಿಂದ ವಾಣಿಜ್ಯ ಮಳಿಗೆಗಳು, ಹೋಟೆಲ್‍ಗಳು ಹಾಗೂ ಜಾಹಿರಾತುದಾರರಿಗೆ ವಿನಾಯಿತಿ ನೀಡಲಾಗಿದೆ. ಲಾಕ್‍ಡೌನ್ ಆರಂಭವಾದ ದಿನದಿಂದ ಮುಗಿಯುವವರೆಗೂ ಬಾಡಿಗೆ ಕಟ್ಟುವುದರಿಂದ ವಿನಾಯಿತಿ ನೀಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಕೆಎಸ್‍ಆರ್ ಟಿಸಿ ತಿಳಿಸಿದೆ.

    ಈ ಮೂಲಕ ರಾಜ್ಯಾದ್ಯಂತ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಇರುವ ವಾಣಿಜ್ಯ ಮಳಿಗೆಗಳು, ಹೋಟೆಲ್ ಜಾಹೀರಾತುದಾರರಿಗೆ ವಿನಾಯಿತಿ ಸಿಕ್ಕಂತಾಗಿದೆ. ಯಾರಿಂದಲೂ ಬಾಡಿಗೆ, ಹಣ ಪಡೆಯದಂತೆ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕೆಎಸ್‍ಆರ್ ಟಿಸಿ ಸುತ್ತೋಲೆ ಹೊರಡಿಸಿದೆ.

  • ರಿಲೀಫ್ ಸಿಗ್ತಿದ್ದಂತೆ ರಸ್ತೆಯಲ್ಲಿ ಸಾಲು ಸಾಲು ವಾಹನ – ಅರ್ಧ ಕಿ.ಮೀ.ವರೆಗೂ ನಿಂತ ಬೈಕ್, ಕಾರುಗಳು

    ರಿಲೀಫ್ ಸಿಗ್ತಿದ್ದಂತೆ ರಸ್ತೆಯಲ್ಲಿ ಸಾಲು ಸಾಲು ವಾಹನ – ಅರ್ಧ ಕಿ.ಮೀ.ವರೆಗೂ ನಿಂತ ಬೈಕ್, ಕಾರುಗಳು

    ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಜನರ ಓಡಾಟ ಹೆಚ್ಚಾಗಿದೆ. ಜೊತೆಗೆ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಸರ್ಕಾರಿ ಕಚೇರಿ, ಐಟಿ-ಬಿಟಿ, ಗೂಡ್ಸ್ ಸರ್ವೀಸ್, ಕೃಷಿ ಚಟುವಟಿಕೆ, ಎಪಿಎಂಸಿ ಮತ್ತು ಇನ್ನಿತರ ತುರ್ತು ಸೇವೆಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ಇದರಿಂದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಜಾಸ್ತಿ ಆಗಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸುಮಾರು ಅರ್ಧ ಕಿಲೋ ಮೀಟರ್ ವರೆಗೆ ಬೈಕ್ ಮತ್ತು ಕಾರುಗಳು ನಿಂತಿವೆ. ಇದನ್ನೂ ಓದಿ: ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಹೆಬ್ಬಾಳದ ಕೊಡಿಗೇಹಳ್ಳಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಪ್ರತಿಯೊಂದು ವಾಹನದ ಪಾಸ್ ಚೆಕ್ ಮಾಡಿ ಬಿಡುತ್ತಿದ್ದಾರೆ. ಹೀಗಾಗಿ ಪಾಸ್ ಚೆಕ್ ಮಾಡುವ ಸಂದರ್ಭದಲ್ಲಿ ವಾಹನಗಳು ಸಾಲು ಸಾಲಾಗಿ ನಿಂತುಕೊಳ್ಳುತ್ತಿವೆ. ಈ ಮಧ್ಯೆ ಅನಗತ್ಯವಾಗಿ ಓಡಾಡುವ ವಾಹಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.

    ಇನ್ನೂ ಕೆ.ಆರ್.ಸರ್ಕಲ್‍ನಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದು, ಪಾಸ್ ಇಲ್ಲದೆ ಇರುವ ವಾಹನಗಳನ್ನ ಸೀಜ್ ಮಾಡುತ್ತಿದ್ದಾರೆ. ಕೆಲಸಕ್ಕೆ ತೆರಳುತ್ತಿರುವ ಸಿಬ್ಬಂದಿಯ ಐಡಿ ಕಾರ್ಡ್ ಚೆಕ್ ಮಾಡಿ ಬಿಡಲಾಗುತ್ತಿದೆ. ಅಲ್ಲದೇ ಕಾವೇರಿ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಟೌನ್‍ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.

  • ಕೇರಳದಲ್ಲಿ ನಾಳೆಯಿಂದ ಹೋಟೆಲ್ ಓಪನ್- ವಾಹನ ಸಂಚಾರಕ್ಕೆ ಷರತ್ತುಬದ್ಧ ಅನುಮತಿ

    ಕೇರಳದಲ್ಲಿ ನಾಳೆಯಿಂದ ಹೋಟೆಲ್ ಓಪನ್- ವಾಹನ ಸಂಚಾರಕ್ಕೆ ಷರತ್ತುಬದ್ಧ ಅನುಮತಿ

    – ಕೇರಳದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
    – ಷರತ್ತುಗಳೊಂದಿಗೆ ಅನುಮತಿ ನೀಡಿದ ಕೇರಳ
    – ಕೆಂಪು ವಲಯದಲ್ಲಿ ಮೇ 3ರವರೆಗೆ ಲಾಕ್‍ಡೌನ್ ಮುಂದುವರಿಕೆ

    ತಿರುವನಂತಪುರಂ: ಮಹತ್ವದ ನಿರ್ಧಾರವೊಂದರಲ್ಲಿ ಕೇರಳ ಸರ್ಕಾರ ರಾಜ್ಯದಲ್ಲಿ ಹೋಟೆಲ್, ರೆಸ್ಟೋರೆಂಟ್‍ಗಳ ಓಪನ್‍ಗೆ ಅನುಮತಿ ನೀಡುವುದರ ಜೊತೆಗೆ  ಕೆಲ ಜಿಲ್ಲೆಗಳಲ್ಲಿ  ವಾಹನಗಳ ಓಡಾಟಕ್ಕೆ  ಲಾಕ್ಡೌನ್‍ನಿಂದ ವಿನಾಯಿತಿ ನೀಡಿದೆ.

    21 ದಿನಗಳ ಲಾಕ್‍ಡೌನ್ ಬಳಿಕ ವಿನಾಯ್ತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೇರಳ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆ ಪ್ರಸ್ತಾವನೆಯನ್ನು ಶುಕ್ರವಾರ ಪ್ರಧಾನಿ ಮೋದಿ ಸರ್ಕಾರ ಒಪ್ಪಿಕೊಂಡಿದೆ. ಲಾಕ್‍ಡೌನ್‍ನಿಂದ ವಿನಾಯ್ತಿ ನೀಡುವ ಸಲುವಾಗಿ ಕೇರಳದಲ್ಲಿರುವ ಒಟ್ಟು 14 ಜಿಲ್ಲೆಗಳನ್ನು ಕೆಂಪು ವಲಯ, ಹಳದಿ ವಲಯ(ಎ), ಹಳದಿ ವಲಯ(ಬಿ), ಹಸಿರು ವಲಯವಾಗಿ ವಿಂಗಡಿಸಲಾಗಿತ್ತು. ಶನಿವಾರ ಕೇರಳದಲ್ಲಿ ಕೇವಲ ಮೂರು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಕೆಂಪು ವಲಯ:
    ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲ್ಲಪುರಂ ಮೇ3 ರವರೆಗೆ ಸಂಪೂರ್ಣ ಲಾಕ್‍ಡೌನ್ ಆಗಿರಲಿದೆ. ಕೊರೊನಾ ಹಾಟ್ ಸ್ಪಾಟ್ ಜಾಗದಲ್ಲಿ ಅಗತ್ಯ ವಸ್ತು ಸಾಗಾಟಕ್ಕೆ ಎರಡು ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ಇರಲಿದೆ. ಇಲ್ಲಿ ಯಾವುದೇ ವಿನಾಯಿತಿ ಇಲ್ಲ. ಇದನ್ನೂ ಓದಿ: ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ಕಿತ್ತಳೆ(ಎ) ವಲಯ:
    ಪತನಂತಿಟ್ಟ, ಎರ್ನಾಕುಲಂ, ಕೊಲ್ಲಂ ಜಿಲ್ಲೆಗಳಲ್ಲಿ ಏಪ್ರಿಲ್ 24ರ ಬಳಿಕ ಲಾಕ್‍ಡೌನ್ ಸಡಿಲಿಕೆ ಆಗಲಿದೆ.

    ಕಿತ್ತಳೆ(ಬಿ) ವಲಯ:
    ಅಲಪ್ಪುಜ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರಂ, ವಯನಾಡಿನಲ್ಲಿ ಏಪ್ರಿಲ್ 20ರ ಬಳಿಕ ಕೆಲವೆಡೆ ವಿನಾಯಿತಿ.

    ಹಸಿರು ವಲಯ:
    ಕೊರೊನಾ ಪ್ರಕರಣಗಳು ಬಾರದೇ ಇರುವ ಕೊಟ್ಟಾಯಂ, ಇಡುಕ್ಕಿಯಲ್ಲಿ ಏಪ್ರಿಲ್ 20ರಿಂದ ವಿನಾಯಿತಿ ಸಿಗಲಿದೆ.

    ವಿನಾಯಿತಿ ಹೇಗಿರಲಿದೆ?
    ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಸ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳು ಸಂಚರಿಸಬಹುದು. ಮಂಗಳವಾರ, ಗುರುವಾರ ಶನಿವಾರ – ಸಮ ಸಂಖ್ಯೆಯೊಂದಿಗೆ ಅಂತ್ಯವಾಗುವ ವಾಹನಗಳ ಓಡಾಟಕ್ಕೆ ಅನುಮತಿ ಸಿಕ್ಕಿದೆ.

    ಬೈಕ್ ಸವಾರರು ತಮ್ಮ ಸಂಬಂಧಿಕರೊಂದಿಗೆ ಡಬಲ್ ರೈಡಿಂಗ್‍ಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಶನಿವಾರ ಮತ್ತು ಭಾನುವಾರ ಸಲೂನ್ ಅಂಗಡಿ ತೆರೆಯಬಹುದು. ಸಂಜೆ 7 ಗಂಟೆವರೆಗೆ ಹೋಟೆಲ್-ರೆಸ್ಟೋರೆಂಟ್ ತೆರೆಯಬಹುದು, 8 ಗಂಟೆವೆರೆಗೆ ಪಾರ್ಸೆಲ್‍ಗೆ ಅವಕಾಶ ಸಿಕ್ಕಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, ಹಸಿರು ವಲಯದಲ್ಲಿ ಬಟ್ಟೆ ಅಂಗಡಿ ತೆರೆಯಬಹುದು. ವಾರದಲ್ಲಿ ಎರಡು ದಿನ ಮೊಬೈಲ್, ಆಟೋ ವರ್ಕ್‍ಶಾಪ್, ಕಂಪ್ಯೂಟರ್ ಸೆಂಟರ್, ಬುಕ್‍ಸ್ಟೋರ್  ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.

    ಶನಿವಾರ ಮತ್ತು ಭಾನುವಾರ ಹೊರತು ಪಡಿಸಿದ ವಾರದ ಎಲ್ಲ ದಿನ ಸರ್ಕಾರಿ ಕಚೇರಿಗಳು ತೆರೆದಿರುತ್ತದೆ. ಸಹಕಾರ ಸಂಸ್ಥೆಗಳಲ್ಲಿ ಶೇ.33 ರಷ್ಟು ಉದ್ಯೋಗಿಗಳು, ಗ್ರಾಮೀಣ ಪಂಚಾಯತ್ ನಲ್ಲಿ ಶೇ. 35ರಷ್ಟು ಉದ್ಯೋಗಿಗಳು ಕರ್ತವ್ಯ ನಿರ್ವಹಿಸಲು ಅನುಮತಿ. ಇದನ್ನೂ ಓದಿ: ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ ಹಚ್ಚಿದ ಪೊಲೀಸರು

    ನಿರ್ಬಂಧ ಮುಂದುವರಿಕೆ:
    ಹಸಿರು ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು, ಶಿಕ್ಷಣ, ಧಾರ್ಮಿಕ ಸ್ಥಳ ತೆರೆಯುವಂತಿಲ್ಲ. ಜಿಲ್ಲೆಯಿಂದ ಯಾರೂ ಹೊರಗಡೆ ತೆರಳುವಂತಿಲ್ಲ. ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಯಂತೆ ಮದುವೆ ಮತ್ತು ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ.

    ಎಷ್ಟು ಪ್ರಕರಣವಿದೆ?
    ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ ಕೇರಳದಲ್ಲಿ 399 ಮಂದಿಗೆ ಸೋಂಕು ಬಂದಿದ್ದು, 257 ಮಂದಿ ಗುಣಮುಖರಾಗಿದ್ದಾರೆ. ಈಗ 140 ಸಕ್ರೀಯ ಪ್ರಕರಣವಿದ್ದು, ಕೇವಲ 2 ಮಂದಿ ಮಾತ್ರ ಮೃತಪಟ್ಟಿದ್ದಾರೆ.

  • ಏ.20ರ ನಂತರ ಕೆಲ ಉದ್ಯಮಗಳಿಗೆ ವಿನಾಯಿತಿ

    ಏ.20ರ ನಂತರ ಕೆಲ ಉದ್ಯಮಗಳಿಗೆ ವಿನಾಯಿತಿ

    ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಏಪ್ರಿಲ್ 20ರ ಬಳಿಕ ವಿನಾಯಿತಿ ಕೊಡೋದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ.

    ಸಾಫ್ಟ್ ವೇರ್ ಮತ್ತು ಐಟಿ ಪಾರ್ಕ್‍ಗಳಲ್ಲಿರುವ ಸ್ಟಾರ್ಟ್ ಅಪ್‍ಗಳಿಗೆ 4 ತಿಂಗಳ  ಬಾಡಿಗೆ ಇಲ್ಲ ಅಂತ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    “ಭಾರತದಾದ್ಯಂತ 60 ಎಸ್‍ಟಿಪಿಐ ಕೇಂದ್ರಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್‍ಗಳಿಗೆ ಮಾಚ್ 1 ರಿಂಂದ ಜೂನ್ 30ರ ವರೆಗೆ ಬಾಡಿಗೆ ಪಾವತಿಸುವುದನ್ನು ಮನ್ನಾ ಮಾಡಲಾಗಿದೆ. ಇದರಿಂದ 3000 ಜನರಿಗೆ ಉದ್ಯೋಗ ನೀಡಿರುವ ಸುಮಾರು 200 ಸಣ್ಣ ಮತ್ತು ಮಧ್ಯಮ ಐಟಿ/ಐಟಿಇಎಸ್ ಘಟಕಗಳಿಗೆ ಪ್ರಯೋಜನವಾಗಲಿದೆ” ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಯಾವುದಕ್ಕೆ ವಿನಾಯಿತಿ?
    * ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಹಕಾರಿ ಕ್ರೆಡಿಟ್ ಸೊಸೈಟಿಗಳು
    * ಇತರ ಹಣಕಾಸು ಸಂಸ್ಥೆಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ
    * ನೀರು ಪೂರೈಕೆ, ಶುಚಿತ್ವ, ವಿದ್ಯುತ್ ಪ್ರಸರಣ ವಾಹಕಗಳ ಕೆಲಸ
    * ಟೆಲಿಕಾಂ ಆಪ್ಟಿಕಲ್ ಫೈಬರ್ ಮತ್ತು ಕೇಬಲ್
    * ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿಗಳು
    * ಸಣ್ಣ ಅರಣ್ಯ ಉತ್ಪನ್ನಗಳ ಸಂಗ್ರಹ, ಅರಣ್ಯ ಚಟುವಟಿಕೆಗಳು
    * ಬೆಳೆ ಮತ್ತು ಸಂಸ್ಕರಣೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಚಟುವಟಿಕೆ
    * ಬಿದಿರು, ತೆಂಗಿನಕಾಯಿ, ಅಡಿಕೆ, ಕೊಕ್ಕೊ, ಮಸಾಲೆ ಪದಾರ್ಥ ಬೆಳೆಗಳನ್ನು ಬೆಳೆಯುವುದು
    * ಈ ಬೆಳೆಗಳ ಸಂಸ್ಕರಣೆ, ಪ್ಯಾಕೆಜಿಂಗ್, ಮಾರಾಟ ಮತ್ತು ಮಾರುಕಟ್ಟೆಗೆ ವಿನಾಯ್ತಿ
    * ಹೌಸಿಂಗ್ ಫೈನಾನ್ಸ್ ಮತ್ತು ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಸಿಬ್ಬಂದಿ ನೆರವಿನೊಂದಿಗೆ ಕಾರ್ಯ