Tag: ವಿನಯ್

  • ಮಾನವೀಯತೆಗೂ ಆರೋಗ್ಯ ವಿಚಾರಿಸದ ವಿನಯ್ & ಟೀಮ್‌ ನಡೆಗೆ ಪ್ರೇಕ್ಷಕರು ಛೀಮಾರಿ

    ಮಾನವೀಯತೆಗೂ ಆರೋಗ್ಯ ವಿಚಾರಿಸದ ವಿನಯ್ & ಟೀಮ್‌ ನಡೆಗೆ ಪ್ರೇಕ್ಷಕರು ಛೀಮಾರಿ

    ಬಿಗ್ ಬಾಸ್ ಮನೆಗೆ (Bigg Boss Kannada 10) ಸಂಗೀತಾ ಹಾಗೂ ಡ್ರೋನ್ ಪ್ರತಾಪ್ (Drone Prathap) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ಕಣ್ಣಿಗೂ ಬಲವಾದ ಪೆಟ್ಟಾಗಿದೆ. ಈ ವೇಳೆ, ಲೈಟ್ ಸೆನ್ಸಿಟಿವ್ ಇರೋದ್ರಿಂದ ಇಬ್ಬರೂ ಕಪ್ಪು ಕನ್ನಡಕ ಧರಿಸಿ ಬಂದರು. ಸಂಗೀತಾ, ಪ್ರತಾಪ್ ಸ್ಥಿತಿ ಕಂಡು ಮನೆಮಂದಿ ಮರುಗಿದ್ದರು. ಆದರೆ ಸಂಗೀತಾ, ಡ್ರೋನ್ ಆರೋಗ್ಯದ ಬಗ್ಗೆ ಕ್ಯಾರೆ ಎನ್ನದೇ ವಿನಯ್, ನಮ್ರತಾ ಕುಳಿತಿದ್ದರು. ಇವರ ನಡೆಗೆ ಇದೀಗ ಪ್ರೇಕ್ಷಕರು ಖಂಡಿಸಿದ್ದಾರೆ.

    ಸಂಗೀತಾ ಹಾಗೂ ಡ್ರೋನ್ ಪ್ರತಾಪ್‌ಗೆ ಏನಾಯ್ತು ಎಂದು ಎಲ್ಲರೂ ವಿಚಾರಿಸುತ್ತಿದ್ದರು. ಆದರೆ ಮಾನವೀಯತೆಯನ್ನೇ ಮರೆತು ನಡೆದುಕೊಂಡ ವಿನಯ್ ಮಾತ್ರ ಇಬ್ಬರ ಹತ್ತಿರ ಬರಲೇ ಇಲ್ಲ. ಬಾಯ್ಮಾತಿಗೂ ಸಂಗೀತಾ ಮತ್ತು ಡ್ರೋನ್ ಪ್ರತಾಪ್‌ನ ವಿನಯ್ ಆಗಲಿ, ನಮ್ರತಾ ಆಗಲಿ ಮಾತನಾಡಿಸಲೇ ಇಲ್ಲ. ಇಬ್ಬರ ಆರೋಗ್ಯ ಸ್ಥಿತಿಯ ಬಗ್ಗೆ ರಾಕ್ಷಸರ ತಂಡ ಕ್ಯಾರೆ ಎನ್ನಲಿಲ್ಲ. ಮಾಡಿದ ತಪ್ಪು ಅರಿವಾಗಲೇ ಇಲ್ಲ. ಇದೀಗ ವಿನಯ್‌ ತಂಡದ ನಡೆಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.

    ಸೋಪು ನೀರಿನ ದಾಳಿಯಿಂದಾಗಿ ಬುಧವಾರ ರಾತ್ರಿ ಚಿಕಿತ್ಸೆಗೆಂದು ದೊಡ್ಮನೆಯಿಂದ ಸಂಗೀತಾ, ಡ್ರೋನ್ ಪ್ರತಾಪ್ ಹೊರಹೋದರು. ಶನಿವಾರ (ಡಿ.9) ಬಿಗ್ ಬಾಸ್ ಮನೆಗೆ ಮರಳಿದರು. ಇಬ್ಬರೂ ಕಪ್ಪು ಕನ್ನಡಕ ಧರಿಸಿ ಬಂದಿದ್ದನ್ನ ನೋಡಿ ಕಾರ್ತಿಕ್, ತನಿಷಾ ಶಾಕ್ ಆದರು. ಇಬ್ಬರ ಸ್ಥಿತಿ ಕಂಡು ತಬ್ಬಿಕೊಂಡು ಕಾರ್ತಿಕ್, ತನಿಷಾ ಅತ್ತುಬಿಟ್ಟರು.

    ಕಣ್ಣು ಬಿಡೋಕೆ ಆಗ್ತಿರ್ಲಿಲ್ಲ. ವಾಶಿಂಗ್ ಪೌಡರ್ ಎಲ್ಲಾ ಒಳಗೆ ಹೋಗಿತ್ತು. ಪ್ರತಿ ಬಾರಿ ತೊಳೆಯಬೇಕಾದರೂ, ಆ ಪಾರ್ಟಿಕಲ್ಸ್ನಿಂದ ಫೋಮ್ ಕ್ರಿಯೇಟ್ ಆಗಿ ಉರಿಯಾಗುತ್ತಿತ್ತು. ಪ್ರಾಣ ಹೋಗುವ ತರಹ ನೋವಾಗಿತ್ತು. ಕಣ್ಣನ್ನೇ ತೆಗೆದುಹಾಕಿಬಿಡಿ ಅಂತ ಹೇಳೋಣ ಅನಿಸುತ್ತಿತ್ತು. ಡಾಕ್ಟರ್ ಕ್ಲೀನ್ ಮಾಡೋಕೆ ಟ್ರೈ ಮಾಡಿದ್ರೂ, ಹೆಚ್ಚು ಫೋಮ್ ಕ್ರಿಯೇಟ್ ಆಗುತ್ತಿತ್ತು. ಅದು ಪ್ರಾಣ ಹೋಗುವ ಹಿಂಸೆ. ಏನೇನು ಕೆಮಿಕಲ್ಸ್ ಬಿದ್ದಿದೆ ಅಂತ ಹೇಳಿ, ಅದರ ಪ್ರಕಾರ ಟ್ರೀಟ್‌ಮೆಂಟ್ ಆಯ್ತು. 48 ಗಂಟೆ ಕಣ್ಣು ಬಿಡೋಕೆ ಆಗಲಿಲ್ಲ. ಊತ ಕಡಿಮೆ ಆಗಲಿಲ್ಲ. ಕಣ್ಮುಚ್ಚಿಕೊಂಡೇ ಇದೆ. ಇವತ್ತು ಕಣ್ಣು ಬಿಡೋಕೆ ಆಗುತ್ತಿದೆ. ಆದರೆ, ಬಿಸಿಲನ್ನ ಫೇಸ್ ಮಾಡೋಕೆ ಆಗ್ತಿಲ್ಲ. ಪಿನ್ ತಗೊಂಡು ಚುಚ್ಚಿದಂತೆ ನೋವು, ಉರಿ ಇದೆ. ಪ್ರೆಶರ್ ಜಾಸ್ತಿ ಇದ್ದಿದ್ರಿಂದ ಕಾರ್ನಿಯಲ್‌ಗೆ ಎಫೆಕ್ಟ್ ಆಗಿದೆ. ಕ್ಲಿಯರ್ ಆಗಿ ಕಾಣುತ್ತಿಲ್ಲ. ನನಗೀಗ ದೂರದ್ದೇನೂ ಕಾಣ್ತಿಲ್ಲ. ಹತ್ತಿರದಲ್ಲಿ ಎಲ್ಲಾ ಎರಡೆರಡು ಕಾಣುತ್ತಿದೆ ಎಂದು ಸುದೀಪ್ ಮುಂದೆ ಸಂಗೀತಾ (Sangeetha Sringeri) ಮಾತನಾಡಿದ್ದಾರೆ. ಇದನ್ನೂ ಓದಿ:ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟಿದ್ವಿ- ವಿನೋದ್ ರಾಜ್

    ಕಣ್ಣೊಳಗೆ ಮರಳು ಮರಳು ಹೋದ ಹಾಗೆ ಆಗುತ್ತಿತ್ತು. ಬಟ್ಟೆ ಕೂಡ ಬಿಗ್ ಬಾಸ್ ಟೀಮ್‌ನವರು ಬದಲಾಯಿಸಿದರು. ಕಣ್ಣುಜ್ಜುವ ಹಾಗೆ ಆಗುತ್ತಿತ್ತು. ಎಷ್ಟೇ ಕಂಟ್ರೋಲ್ ಮಾಡಿದರೂ ತಡೆಯೋಕೆ ಆಗ್ತಿರ್ಲಿಲ್ಲ. ಕಣ್ಣು ಕಿತ್ತು ಹಾಕೋಣ ಅನ್ನೋಷ್ಟು ಉರಿ ಇತ್ತು. ಆಸ್ಪತ್ರೆಯಲ್ಲಿ ಕ್ಲೀನ್ ಮಾಡುವಾಗ ಏನೇನೋ ಕೆಮಿಕಲ್ ಹಾಕಿದಾಗ ಇನ್ನೂ ಜಾಸ್ತಿ ಉರಿ ಆಯ್ತು. ಒಂದು ಕಣ್ಣು ಚಿಕ್ಕದಾಗಿ ಗಾಯ ಆಗಿದೆ ಅಂತ ಹೇಳಿದರು. ಎಲ್ಲಾ ಸರಿ ಹೋಗೋಕೆ ಸ್ವಲ್ಪ ಸಮಯ ಬೇಕು. ಮಾತ್ರೆ, ಐ ಡಾಪ್ಸ್ ಕೊಟ್ಟಿದ್ದಾರೆ. ಬೆಳಕಿಗೆ ಕಣ್ಣು ಬಿಡೋಕೆ ಆಗಲ್ಲ. ಕಣ್ಣು ಬಿಟ್ಟರೆ ನೋವಾಗುತ್ತೆ. ಮಂಜು ಮಂಜಾಗಿ ಕಾಣುತ್ತಿದೆ ಎಂದರು ಡ್ರೋನ್ ಪ್ರತಾಪ್. ನೀವು ಸರಿಹೋಗ್ತೀರಾ. ಆದಷ್ಟು ಬೇಗ ಇಬ್ಬರೂ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ ಎಂದರು ಕಿಚ್ಚ ಸುದೀಪ್.

    ಇಷ್ಟೆಲ್ಲಾ ಆಗುವಾಗ ಬಾಯ್ಮಾತಿಗೂ ಇಬ್ಬರ ಬಳಿ ವಿನಯ್, ನಮ್ರತಾ, ಪವಿ ಪೂವಪ್ಪ, ಮೈಕಲ್ ಮಾತನಾಡಲಿಲ್ಲ. ಕರುಣೆಗೂ ಹೇಗಿದ್ದೀರಾ ಎಂದು ಕೇಳಲಿಲ್ಲ. ಇವರ ನಡೆಗೆ ಇದೀಗ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

  • ಕಳಪೆ ಎಂದು ಜೈಲಿಗಟ್ಟಿದ ವಿನಯ್‌ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್‌

    ಕಳಪೆ ಎಂದು ಜೈಲಿಗಟ್ಟಿದ ವಿನಯ್‌ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್‌

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮೋಸ ಮಾಡಿ ಕ್ಯಾಪ್ಟನ್ ಪಟ್ಟ ಏರೋದ್ದಕ್ಕೂ ಒಗ್ಗಟ್ಟಿದೆ. ಕಳಪೆ ಹಣೆಪಟ್ಟಿ ಕೊಟ್ಟು ಸ್ಪರ್ಧಿಯನ್ನ ಜೈಲಿಗೆ ಕಳುಹಿಸೋದ್ದಕ್ಕೂ ಒಗ್ಗಟ್ಟಿದೆ. ಇದೀಗ ವಿನಯ್ ತಾಳಕ್ಕೆ ಕುಣಿದು ಕಳಪೆ ಎಂದು ಜೈಲಿಗಟ್ಟಿದ ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ವಾರದ ಆಟ, ಅವಮಾನ, ಹಠ ಇವೆಲ್ಲವೂ ಗಮನಿಸಿ ಈ ಬಾರಿ ಸುದೀಪ್, ಕಾರ್ತಿಕ್‌ಗೆ (Karthik Mahesh) ಭೇಷ್ ಎಂದಿದ್ದಾರೆ. ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ (Kichchana Chappale) ಸಿಕ್ಕಿದೆ. ಇದನ್ನೂ ಓದಿ:ಮಾನವೀಯತೆ ಮರೆತ ಸ್ಪರ್ಧಿಗಳು- ಸಂಗೀತಾ ಸಹೋದರ ಬೇಸರ

    ಈ ವಾರವಿಡೀ ಮನೆಯಲ್ಲಿ ಸ್ಪರ್ಧಿಗಳ ಜಗಳ, ರಂಪಾಟ ಇತ್ತು. ಇದರ ನಡುವೆ ಟಾಸ್ಕ್‌ನಲ್ಲಿ ಚಪ್ಪಲಿ ಎಸೆದರು ಎಂಬ ಕಾರಣಕ್ಕೆ, ಟಾಯ್ಲೆಟ್ ವಿಚಾರ & ಮೈಮ್‌ನಿಂದಾಗಿ ಕಾರ್ತಿಕ್ ಕಳಪೆ ಕೊಟ್ಟು ಜೈಲಿಗಟ್ಟಿದ್ದರು ವಿನಯ್ & ಟೀಮ್. ಇದೀಗ ಅದೇ ಕಾರ್ತಿಕ್‌ಗೆ ಸುದೀಪ್ (Sudeep) ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದ ಕಾರ್ತಿಕ್ ಭಾವುಕರಾಗಿ ಗಳಗಳನೇ ಅತ್ತಿದ್ದಾರೆ.

    ಕಾರ್ತಿಕ್ ಟಾಯ್ಲೆಟ್ ವಿಚಾರವಾಗಿ ಪವಿ ಪೂವಪ್ಪ, ವಿನಯ್ (Vinay), ಸ್ನೇಹಿತ್ ಹಾಗೂ ನಮ್ರತಾ (Namratha Gowda) ಬೇಡದ ವಿಚಾರವನ್ನ ಒತ್ತಿ ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದರು. ಏನೂ ನಡೆಯದ ಸನ್ನಿವೇಶವನ್ನ ಇಟ್ಟುಕೊಂಡು ಮತ್ತೆ ಮತ್ತೆ ಪವಿ ಬಳಿ ಮಾತನಾಡಿ, ಏನೋ ಒಂದು ಅವರ ತಲೆಯಲ್ಲಿ ಕೂತುಕೊಳ್ಳುವ ಹಾಗೆ ಮಾಡಿ ಒಬ್ಬ ವ್ಯಕ್ತಿ ಕಳಪೆಗೆ ಹೋದಾಗ ಅದು ಚೆನ್ನಾಗಿ ಕಾಣಿಸಲ್ಲ ಎಂದು ಕಾರ್ತಿಕ್ ಟಾಯ್ಲೆಟ್ ಮ್ಯಾಟರ್‌ಗೆ ವಿನಯ್-ನಮ್ರತಾ ತಂಡಕ್ಕೆ ಕ್ಲಾಸ್ ತೆಗೆದುಕೊಂಡರು.

    ಅವಮಾನದ ನಡುವೆ ಆಡಿ ಸ್ವಾಭಿಮಾನ ಬಿಟ್ಟುಕೊಡದೆ, ಹಠದಿಂದ ಆಟ ಆಡಿ, ಬಹಳಷ್ಟು ನೋಡಿದ ನಂತರ ನನಗೆ ಅನಿಸಿದ್ದು ಈ ವಾರದ ಕಿಚ್ಚನ ಚಪ್ಪಾಳೆ ಕಾರ್ತಿಕ್‌ಗೆ ಎಂದು ಹೇಳುತ್ತಾರೆ ಮೆಚ್ಚುಗೆ ಚಪ್ಪಾಳೆ ನೀಡಿದ್ದರು ಕಿಚ್ಚ. ಈ ವೇಳೆ, ಕಣ್ಣಿಗೆ ಪೆಟ್ಟಾಗಿದ್ದರೂ, ಸಂಗೀತಾ ಹಾಗೂ ಪ್ರತಾಪ್ ಕೂಡ ಎದ್ದು ನಿಂತು ಸಂತಸದಿಂದ ಕಾರ್ತಿಕ್‌ಗೆ ಚಪ್ಪಾಳೆ ತಟ್ಟಿದ್ದಾರೆ.

    8 ವಾರದಿಂದ ಅನಿಸುತ್ತಿತ್ತು ಇದಕ್ಕಾಗಿ ಕೊರಗುತ್ತಿದ್ದೆ. ಯಾಕೆ ಬರುತ್ತಿಲ್ಲ? ಎಲ್ಲಾದರೂ ಮಿಸ್ ಆಗ್ತಿದ್ಯಾ ಅಂತ. ಇದು ನನಗೆ ತುಂಬಾ ಮುಖ್ಯ ಸರ್. ಥ್ಯಾಂಕ್ಯು ಸರ್ ಎಂದು ಕಾರ್ತಿಕ್ ಭಾವುಕರಾದರು. ವಾಲ್ ಆಫ್ ಮೊಮೆಂಟ್‌ನಲ್ಲಿ ಹಾಕಲು ಕಾರ್ತಿಕ್‌ಗೆ ತಾವು ಜೈಲಿನಲ್ಲಿದ್ದ ಫೋಟೋವನ್ನೇ ಬಿಗ್ ಬಾಸ್ ಕಳುಹಿಸಿದ್ದರು.

  • Bigg Boss: ಅವಳು ಯಾವ ಸೀಮೆ ರಾಣಿ- ಸಂಗೀತಾ ವಿರುದ್ಧ ಸಿಡಿದೆದ್ದ ನಮ್ರತಾ

    Bigg Boss: ಅವಳು ಯಾವ ಸೀಮೆ ರಾಣಿ- ಸಂಗೀತಾ ವಿರುದ್ಧ ಸಿಡಿದೆದ್ದ ನಮ್ರತಾ

    ಬಿಗ್ ಬಾಸ್ ಮನೆ (Bigg Boss Kannada 10) ಇದೀಗ ಅಲ್ಲೋಲ ಕಲ್ಲೋಲ ಆಗಿದೆ. ಕಾರ್ತಿಕ್ ಮತ್ತು ವಿನಯ್ ಜಟಾಪಟಿಗೆ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಕಾರ್ತಿಕ್ ಕಡೆಯಿಂದ ಚಪ್ಪಲಿ ಏಟು ಬಿದ್ದಿದೆ ಅಂತ ವಿನಯ್ ಪರ ನಮ್ರತಾ ಗುಡುಗಿದ್ದಾರೆ. ಈ ವೇಳೆ, ಎದುರಾಳಿ ತಂಡದ ಸಂಗೀತಾ ಮೇಲೆ ನಮ್ರತಾ (Namratha Gowda) ತಿರುಗಿಬಿದ್ದಿದ್ದಾರೆ. ಅವಳು ಯಾವ ಸೀಮೆ ರಾಣಿ ಎಂದು ನಮ್ರತಾ ಕಿಡಿಕಾರಿದ್ದಾರೆ.

    ವಿನಯ್ ರಾಕ್ಷಸನಾದ್ಮೇಲೆ ಇಬ್ಬರ ನಡುವಿನ ಜಗಳ ಬೇರೆಯದ್ದೇ ಹಂತ ತಲುಪಿದೆ. ಕಾರ್ತಿಕ್ ಮುಖಕ್ಕೆ ಚಪಾತಿ ಹಿಟ್ಟಿನಿಂದ ವಿನಯ್ ಜೋರಾಗಿ ಬೀಸಿದರು. ಇದು ದೈಹಿಕ ದೌರ್ಜನ್ಯ ಅಂತ ಕಾರ್ತಿಕ್ ಹೇಳುತ್ತಿದ್ದರೂ, ವಿನಯ್ ನಿಲ್ಲಿಸಲಿಲ್ಲ. ಸಿಟ್ಟಿನಿಂದ ಕಾರ್ತಿಕ್ ಚಪ್ಪಲಿಯನ್ನ ನೆಲಕ್ಕೆ ಜೋರಾಗಿ ಬೀಸಿದರು. ಆಗ ಚಪ್ಪಲಿ ಬೌನ್ಸ್ ಆಗಿ ವಿನಯ್‌ಗೆ ತಾಕಿತು. ಪರಿಣಾಮ, ವಿನಯ್ ದೊಡ್ಡ ರಂಪ ಮಾಡಿದರು.

    ನನಗೆ ಚಪ್ಪಲಿಯಲ್ಲಿ ಹೊಡಿತೀಯಾ? ಇವನ ಹತ್ತಿರ ಚಪ್ಪಲಿಯಲ್ಲಿ ಹೊಡೆಸಿಕೊಂಡು ನಾನಿಲ್ಲಿ ಇರಬೇಕಾ? ನಾನಿಲ್ಲಿ ಇರೋಲ್ಲ. ಆಚೆ ಹೋಗ್ಬೇಕು ಎಂದು ವಿನಯ್ ಕಿರುಚಾಡಿದರು. ಸಿಟ್ಟಿನಲ್ಲಿ ನೆಲಕ್ಕೆ ಕಾರ್ತಿಕ್ ಚಪ್ಪಲಿ ಎಸೆದಾಗ. ಅದು ಬೌನ್ಸ್ ಆಗಿ ವಿನಯ್‌ಗೆ ತಾಗಿತು. ಆಗ ವಿನಯ್ ದೊಡ್ಡ ರಂಪಾಟ ಮಾಡಿದರು. ಕಾರ್ತಿಕ್ ನನಗೆ ಚಪ್ಪಲಿಯಲ್ಲಿ ಹೊಡೆದ. ನಾನು ಇಲ್ಲಿ ಇರಲ್ಲ. ನನಗೆ ಮರ್ಯಾದೆ ಇಲ್ವಾ? ಅಂತೆಲ್ಲಾ ಕೂಗಾಡಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ವಿನಯ್ ಮುಂದಾಗಿದ್ದರು.

    ಈ ವೇಳೆ, ನಮ್ರತಾ ತಮ್ಮ ತಂಡದ ವಿನಯ್ ಪರ ವಹಿಸಿದ್ದರು. ಎದುರಾಳಿ ತಂಡದವರು ನಮ್ಮ ಮಾತು ಕೇಳುತ್ತಿಲ್ಲ. ಅದಕ್ಕೆಲ್ಲಾ ಕಾರಣ ಅವರ ತಂಡದ ಕ್ಯಾಪ್ಟನ್ ಸಂಗೀತಾ (Sangeetha Sringeri) ಎಂದು ಗುಡುಗಿದ್ದರು. ಅವಳು ಯಾವ ಸೀಮೆ ರಾಣಿ ಗುರು? ಸಂಗೀತಾನ ಯಾರು ರಾಣಿ ಮಾಡಿದ್ದರು. ಅವಿನಾಶ್ ನಿಮಗೆ ತಲೆಯಲ್ಲಿ ಬುದ್ಧಿ ಇಲ್ವಾ? ಸಿಂಗಲ್ ಆಗಿ ತಾನೇ ಆಟ ಆಡೋಕೆ ಬಂದಿದ್ದೀರಾ ತಾನೇ ಎಂದು ನಮ್ರತಾ ಕೇಳುತ್ತಾರೆ. ಅವಳು ಯಾರು ನಿಮಗೆ ಹೇಳೋಕೆ? ಎನ್ನುತ್ತಾರೆ. ಕಾರ್ತಿಕ್ ಕಡೆಯಿಂದ ಚಪ್ಪಲಿ ಏಟು ಬಿದ್ದಿದೆ ಅಂತ ವಿನಯ್ ಪರ ನಮ್ರತಾ ನಿಂತಿದ್ದಾರೆ. ಎದುರಾಳಿ ತಂಡದ ನಡೆಗೆ ನಮ್ರತಾ ಸಿಡಿದೆದ್ದಿದ್ದಾರೆ. ಇದನ್ನೂ ಓದಿ:Bigg Boss: ವಿನಯ್‌ಗೆ ಚಪ್ಪಲಿ ಏಟು ಬಿದ್ದಿಲ್ಲ- ಕಾರ್ತಿಕ್ ಪರ‌ ನಿಂತ ಮೈಕಲ್

    ನಾವು ಸೇವಕರಾ, ಗಂಧರ್ವರಾ ನಾವು ಗುಲಾಮರಲ್ಲ. ನಾವ್ಯಾಕೆ ಶಿಕ್ಷೆ ತಗೊಳ್ಬೇಕು ಸ್ಮಾರ್ಟ್ ಆಗಿ ಆಡೋಣ. ಸ್ವಿಮ್ಮಿಂಗ್ ಪೂಲ್ ಹತ್ತಿರ ಕರ್ಕೊಂಡ್ ಹೋಗಿ ನೀರು ಹಾಕ್ತೀವಿ ಅಂದ್ರೆ ನಾವಿದನ್ನ ಒಪ್ಪುವುದಿಲ್ಲ ಅಂತ್ಹೇಳಿ ಎಂದು ತಂಡಕ್ಕೆ ಸಂಗೀತಾ ಹೇಳಿದರು. ಆಗ, ನಾವು ನಿರಾಕರಿಸುವಂತಿಲ್ಲ. ಆದರೆ ಒಡೆಯನ ಕರೆದು ಹೇಳಬೇಕು ಎಂದರು ತನಿಷಾ. ಬೇಡಿಕೆಯನ್ನ ಪೂರೈಸುತ್ತೇವೆ. ಆದರೆ, ದೈಹಿಕವಾಗಿ ಶಿಕ್ಷಿಸುವ ಹಕ್ಕು ಅವರಿಗೆ ಇಲ್ಲ ಅಷ್ಟೇ ಎಂದರು ಕಾರ್ತಿಕ್. ಈ ಮೂಲಕ ಸ್ಮಾರ್ಟ್ ಆಗಿ ಸಂಗೀತಾ ಟೀಮ್ ಆಟ ಆಡಿದ್ದರು. ಕಾದು ನೋಡೋಣ ವಾರಾಂತ್ಯದಲ್ಲಿ ಸುದೀಪ್‌ ಯಾವ ತಂಡಕ್ಕೆ ಯಾವ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಅಂತ. ಯಾವುದು ಸರಿ? ಯಾವುದು ತಪ್ಪು? ಕಿಚ್ಚನ ನಿಲುವೇನು ಎಂದು ತಿಳಿಯಲಿದೆ.

  • ವಿನಯ್ ಭವಿಷ್ಯದಂತೆ ಬಿಗ್ ಬಾಸ್ ಗೆಲ್ಲೋರು ಯಾರು?

    ವಿನಯ್ ಭವಿಷ್ಯದಂತೆ ಬಿಗ್ ಬಾಸ್ ಗೆಲ್ಲೋರು ಯಾರು?

    ದೊಡ್ಮನೆಯಲ್ಲಿ ಮತ್ತೆ ವಿನಯ್ ಗುಡುಗಿದ್ದಾರೆ. ಬಲು ಆತ್ಮ ವಿಶ್ವಾಸದಿಂದ ಅವರು ಮಾತನಾಡಿದ್ದಾರೆ. ಬಳೆ ಪ್ರಕರಣದ ನಂತರ ವಿನಯ್ (Vinay) ತಣ್ಣಗಾಗುತ್ತಾರೆ ಎಂದು ನಂಬಲಾಗಿತ್ತು. ಆ ರೀತಿಯಲ್ಲಿ ಸುದೀಪ್ ಝಾಡಿಸಿದ್ದರು. ಕಿಚ್ಚನ ಮಾತಿಗೆ ಕ್ಯಾರೆ ಎನ್ನದೇ ಮತ್ತೆ ತಮ್ಮ ಫಾರ್ಮಗೆ ಮರಳಿದ್ದಾರೆ ವಿನಯ್. ಹಾಗಾಗಿ ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಅವರ ಟೀಮ್ ನಲ್ಲೇ ಕಿತ್ತಾಟ ಕೂಡ ನಡೆದಿತ್ತು. ಏನೇ ಆದರೂ, ತಲೆ ಕೆಡಿಸಿಕೊಳ್ಳದೇ ಈ ಬಾರಿ ಬಿಗ್ ಬಾಸ್ ಟೈಟಲ್ ಗೆಲ್ಲೋದು (Win) ನಾನೇ ಎಂದು ಘೋಷಿಸಿಕೊಂಡಿದ್ದಾರೆ.

    ಬಿಗ್ ಬಾಸ್ (Bigg Boss Kannada) ಮುಗಿಯೋಕೆ ಇನ್ನೂ ಅರ್ಧ ಜರ್ನಿ ಬಾಕಿ ಇದೆ. ಯಾರು ಮನೆಯಲ್ಲಿ ಉಳಿಯುತ್ತಾರೋ, ಇಲ್ಲವೋ ಒಂದೂ ಗೊತ್ತಿಲ್ಲ. ವಾರದಿಂದ ವಾರಕ್ಕೆ ಅಚ್ಚರಿ ಕಂಟೆಸ್ಟೆಂಟ್ ಗಳು ಎಲಿಮಿನೇಟ್ ಆಗುತ್ತಿದ್ದಾರೆ. ಇದಾವುದನ್ನೂ ಲೆಕ್ಕಿಸದೇ ವಿನಯ್, ಧೈರ್ಯವಾಗಿ ತಾವೇ ಗೆಲುವಿನ ಕುದುರೆ ಎಂದು ಹೇಳಿಕೊಂಡಿದ್ದಾರೆ. ವಿನಯ್ ಮಾತಿಗೆ ಮತ್ತೋರ್ವ ಸ್ಪರ್ಧಿ ಸ್ನೇಹಿತ್ ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಆನೆಗೆ ಮತ್ತಷ್ಟು ಬಲ ಬಂದಿದೆ. ತಾನು ನಡೆದದ್ದೇ ಹಾದಿ ಎಂದು ಹೇಳಿಕೊಂಡಿದೆ.

    ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೊನೆವರೆಗೂ ನಾವು ಮೂವರೇ ಇರಬೇಕು ಎಂದು ಮಾತನಾಡಿಕೊಂಡಿದ್ದಾರೆ. ಆದರೆ, ಈ ವಾರ ನಮ್ರತಾ ಅವರು ವಿನಯ್ ಗೆ ಸಖತ್ ಠಕ್ಕರ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾಗಿ ಈ ಗುಂಪಿನಿಂದ ಹೊರ ನಡೆದಿದ್ದಾರೆ.

    ನಮ್ರತಾ ಗುಂಪಿನಿಂದ ಹೊರ ಹೋಗುತ್ತಿದ್ದಂತೆಯೇ ಸ್ನೇಹಿತ್ ಮತ್ತು ವಿನಯ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ. ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ.

    ಸದ್ಯ ವಿನಯ್ ತಮ್ಮನ್ನು ತಾವು ಗೆಲುವಿನ ಕುದುರೆ ಅಂದುಕೊಂಡಿದ್ದಾರೆ. ನಿಜವಾಗಿಯೂ ಅವರು ಕನಸು ಈಡೇರತ್ತಾ? ಅಥವಾ ಅರ್ಧಕ್ಕೆ ವಾಪಸ್ಸು ಬರ್ತಾರಾ? ಎಂದು ಕಾದು ನೋಡಬೇಕು.

  • ಬಿಗ್ ಬಾಸ್ ಕನ್ನಡ: ಗುದ್ದಾಡಿಕೊಂಡ ಸ್ನೇಹಿತ್-ತುಕಾಲಿ

    ಬಿಗ್ ಬಾಸ್ ಕನ್ನಡ: ಗುದ್ದಾಡಿಕೊಂಡ ಸ್ನೇಹಿತ್-ತುಕಾಲಿ

    ಬಿಗ್‌ಬಾಸ್ (Bigg Boss Kannada) ಮನೆಯೊಳಗೆ ಇಬ್ಬರು ಹೊಸ ಕಂಟೆಸ್ಟೆಂಟ್‌ಗಳು ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆಯೊಳಗಿನ ಸದಸ್ಯರ ಮನಸ್ಥಿತಿಯನ್ನು ಅರಿವು ಮಾಡಿಕೊಳ್ಳುತ್ತಿರುವಾಗಲೇ ಬಿಗ್‌ಬಾಸ್‌ ಟಾಸ್ಕ್‌ ಕೊಟ್ಟಿದ್ದಾರೆ.

    ಸ್ವಿಮಿಂಗ್ ಫೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತೆಗೆದುಕೊಂಡು ಕೊಳವೆಯ ಒಳಗೆ ಎಸೆಯಬೇಕು. ಎದುರಾಳಿ ತಂಡದವರು ಅವರ ಗುರಿ ತಪ್ಪುವಂತೆ ಅವರನ್ನು ತಡೆಯಬೇಕು. ಇದು ಟಾಸ್ಕ್‌. ಆದರೆ ಈ ನೀರಾಟದ ಟಾಸ್ಕ್‌. ನೀರಿನಾಟದಲ್ಲಿ ಕಿಡಿಹೊತ್ತಿಕೊಂಡಿರುವುದು JioCinemaಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಹಿರಂಗಗೊಂಡಿದೆ.

    ನೀರಿನ ಆಟ ಆಡುತ್ತಾಡುತ್ತ ಹೋರಾಟವನ್ನೇ ಶುರುಮಾಡಿದ್ದಾರೆ ಮನೆಯ ಸದಸ್ಯರು. ತುಕಾಲಿ ಸಂತೋಷ್ (Tukali Santu) ಅವರನ್ನು ಸ್ನೇಹಿತ್‌ ತಮ್ಮ ಗುರಾಣಿಯಿಂದ ನೂಕಿದ್ದಾರೆ. ವಿನಯ್ (Vinay) ಅವರಂತೂ ಸಂತೋಷ್ ಅವರನ್ನು ಬೀಳಿಸಿಯೇ ಬಿಟ್ಟಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಸ್ನೇಹಿತ್ ಮತ್ತು ತುಕಾಲಿ ಪರಸ್ಪರ ಡಿಕ್ಕಿ ಹೊಡೆದು ಬಿದ್ದೇ ಬಿಟ್ಟಿದ್ದಾರೆ.

     

    ಕೊನೆಗೆ ತುಕಾಲಿ ಅವರು, ‘ಬೇಕಂತ್ಲೇ ಮಾಡ್ತಿದ್ದಾರೆ. ನಾನು ಆಟ ಆಡಲ್ಲ ಎಂದು ಹೊರಟುಹೋಗಿದ್ದಾರೆ. ವಿನಯ್‌, ‘ಸತ್ಯವಾಗ್ಲೂ ಬೇಕಂತ ಮಾಡಿಲ್ಲ’ ಎಂದರೂ ಅವರು ಕೇಳಿಲ್ಲ. ವಿನಯ್ ಮತ್ತು ತುಕಾಲಿ ನಡುವೆ ಹೊತ್ತಿಕೊಂಡ ಕಿಡಿ ಏರುತ್ತಲೇ ಹೋಗಿದೆ. ನೀರಿನಾಟದ ಈ ಟಾಸ್ಕ್ ನಲ್ಲಿ ಕೊನೆಗೂ ಗೆದ್ದವರು ಯಾರು? ಸೋತವರು ಯಾರು? ಇಂದು ರಾತ್ರಿ ಗೊತ್ತಾಗಲಿದೆ.

  • ‘ಬಿಗ್ ಬಾಸ್’ ಮನೆಯಲ್ಲಿ ಕಾರ್ತಿಕ್, ವಿನಯ್ ನಡುವೆ ಗುದ್ದಾಟ

    ‘ಬಿಗ್ ಬಾಸ್’ ಮನೆಯಲ್ಲಿ ಕಾರ್ತಿಕ್, ವಿನಯ್ ನಡುವೆ ಗುದ್ದಾಟ

    ಬಾರೋ ಅಂದ್ರೆ ಬರದೆ ಇರ್ತೀವಾ ನಾವು?’ ‘ಇದು ನಿಮ್ಮ ಆಟ… ನಿಮ್ಮನ್…’ ‘ಏನೋ ನಿಮ್ಮನ್… ಹೇಳೋ… ಮುಂದಕ್ಕೆ ಹೇಳೋ…’ ‘ಅಗ್ರೆಸಿವ್ ಆಗಿ ಆಡ್ಬೇಕಾ? ಡರ್ಟಿ ಗೇಮ್ ನಾನ್ ತೋರಿಸ್ತೀನಿ’ ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಮಾತುಗಳ ಚಕಮಕಿ ತಾರಕಕ್ಕೇರಿದೆ. ಮಾತಿನ ಜೊತೆಗೆ ಕೈ ಕೈ ಮಿಲಾಯಿಸುವ, ಎದುರಾಬದಿರು ನಿಂತು ಕೆಣಕುವ ಪ್ರಸಂಗಗಳೂ ನಡೆದಿವೆ.

    ವಿನಯ್‌ (Vinay) ಮತ್ತು ಕಾರ್ತಿಕ್ (Karthik) ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ. JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಈ ಬೆಂಕಿಯ ಕಿಡಿಗಳು ಸಿಡಿಯುತ್ತಿರುವುದು ಜಾಹೀರಾಗಿದೆ. ಬಿಗ್‌ಬಾಸ್ ಮನೆಯ ಸದಸ್ಯರಿಗೆ ‘ಮಣ್ಣಿನಲ್ಲಿ ಬಣ್ಣದ ಹೂಗಳನ್ನು ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು’ ಎಂಬ ಟಾಸ್ಕ್ ನೀಡಲಾಗಿದೆ. ಹೂವಿನಿಂದ ಶುರುವಾದ ಈ ಆಟ ಸ್ವಲ್ಪವೇ ಹೊತ್ತಿನಲ್ಲಿ ಜಿದ್ದಾಜಿದ್ದಿಯ ಬೆಂಕಿಯಾಗಿ ಬೆಳೆದಿದೆ.

    ಒಂದು ತಂಡದ ಹೂವನ್ನು ಇನ್ನೊಂದು ತಂಡ ಕಿತ್ತುಕೊಳ್ಳಲು ಹಾಳುಗೆಡವಲು ಯತ್ನಿಸಿದ್ದು ಮಾತಿನ ಚಕಮಕಿಗೆ ಕಾರಣವಾಗಿದೆ. ಒಬ್ಬರು ಇನ್ನೊಬ್ಬರನ್ನು ಎಳದಾಡಿ, ಜಗಳವಾಡಿಕೊಳ್ಳುವವರೆಗೂ ಮುಟ್ಟಿದೆ. ತುಕಾಲಿ ಸಂತೋಷ್, ಪ್ರತಾಪ್ ಅವರನ್ನು  ನೆಲಕ್ಕುರುಳಿಸಿ ಹೂ ಹಾಳು ಮಾಡಿದ್ದಾರೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಅವರನ್ನು ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ. ಮೈಕಲ್ ಹೂಬುಟ್ಟಿ ಗಟ್ಟಿಯಾಗಿ ಹಿಡಿದುಕೊಂಡರೆ ಉಳಿದವರೆಲ್ಲ ಅವರ ಮೇಲೆ ಬಿದ್ದಿದ್ದಾರೆ.

     

    ಕಳೆದ ಒಂದೆರಡು ವಾರಗಳಲ್ಲಿ ಸೈಲೆಂಟ್ ಆಗಿದ್ದ ವಿನಯ್ ಈ ವಾರ ಸಖತ್ ಅಗ್ರೆಸಿವ್ ಆಗಿದ್ದಾರೆ. ಅದರ ಪರಿಣಾಮ ಈ ಗೇಮ್‌ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತಿದೆ.

  • ಸುನಿ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್: ಶೂಟಿಂಗ್ ಮುಗಿಸಿದ ಟೀಮ್

    ಸುನಿ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್: ಶೂಟಿಂಗ್ ಮುಗಿಸಿದ ಟೀಮ್

    ನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ಸಿಂಪಲ್ ಸುನಿ ಹಾಗೂ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಒಂದು ಸರಳ ಪ್ರೇಮ ಕಥೆ. ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಶೂಟಿಂಗ್ (Shooting) ಕಂಪ್ಲೀಟ್ ಆಗಿದೆ. ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ವಿಶೇಷ ಅಂದರೆ ವಿನಯ್ ಸಿನಿಮಾದಲ್ಲಿ ಅಪ್ಪ ರಾಘಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿ ಮಾಧ್ಯಮದವರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

    ನಿರ್ದೇಶಕ ಸುನಿ (Simple Suni) ಮಾತನಾಡಿ, ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮಕಥೆಯಾಗಿರುವುದರಿಂದ ಸಂಗೀತಮಯ ಜರ್ನಿ. ಅಂದರೆ ನಮ್ಮ ಆಲ್ಬಂ ತೆಗೆದುಕೊಂಡು ಹಾಕಿಕೊಂಡರೆ ಮೈಸೂರಿನಿಂದ ಬೆಂಗಳೂರು ತಲುಪುತ್ತೀರಾ. ಒಟ್ಟು ಸಿನಿಮಾದಲ್ಲಿ 11 ಸಾಂಗ್ ಗಳು ಇವೆ. ಎಲ್ಲಾ ಪ್ರಕಾರದ ಸಂಗೀತಗಳು ಹಾಡಿನಲ್ಲಿದೆ. ಖುಷಿ ವಿಷಯ ಏನಂದರೆ ಮೊದಲ ದಿನ ವಿನಯ್ ಸರ್ ಚಿತ್ರೀಕರಣ ಮಾಡಿದೆ. ಕೊನೆಯ ದಿನ ರಾಘಣ್ಣ ಅವರು ಚಿತ್ರೀಕರಣ ಮಾಡಿದ್ದೇನೆ. ದೊಡ್ಮನೆ ಕುಟುಂಬದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಒಟ್ಟು 83 ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ತಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

    ರಾಘಣ್ಣ (Raghavendra Rajkumar) ಮಾತನಾಡಿ, ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ನೋಡಿದ್ಮೇಲಿನಿಂದ ಸುನಿ ಅವರ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿತ್ತು. ನನ್ನ ಮಗ ನಟಿಸುತ್ತಿದ್ದೇನೆ ಎಂದಾಗ ದೊಡ್ಡ ವಿಷಯ ಎನಿಸಿತು. ನನಗೆ ಟೈಟಲ್ ತುಂಬಾ ಇಷ್ಟವಾಯಿತು. ಸಂಗೀತ ಅಂದರೆ ಏಳು ಸ್ವರಗಳು ಇರುತ್ತವೆ. ನನ್ನ ಒಂದು ಸ್ವರವಾಗಿ ಸೇರಿಸಿಕೊಂಡಿದ್ದಾರೆ. ಅದು ನನಗೆ ಸಂತೋಷ ಕೊಡುತ್ತದೆ. ಕುಂಬಳಕಾಯಿ ಒಡೆದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಚೆನ್ನಾಗಿ ಆಗಲಿ. ಸಿನಿಮಾ ನಿಮ್ಮ ಮುಂದೆ ಬರಲಿ. ನಿಮ್ಮ ಬೆಂಬಲ ಇರಲಿದೆ ಎಂದರು.

    ನಟ ವಿನಯ್ ರಾಜ್ ಕುಮಾರ್ (Vinay) ಮಾತನಾಡಿ, ಒಂದು ಸರಳ ಪ್ರೇಮಕಥೆ. ಈ ಸಿನಿಮಾದಲ್ಲಿ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಶೂಟಿಂಗ್ ಗೆ ಯಾವುದೇ ತೊಂದರೆ ಆಗದಂತೆ ನಿರ್ಮಾಪಕರಾದ ರಮೇಶ್ ಅವರು ಮಾಡಿಕೊಟ್ಟರು. ಸುನಿ ಅವರ ಜೊತೆ ಕೆಲಸ ಮಾಡಲು ಖುಷಿ ಕೊಡ್ತು. ಸುನಿ ಅವರಂತೂ ಒಬ್ಬ ಕಲಾವಿದನಿಗೆ ನಟಿಸಲು ತುಂಬ ಕಂಫರ್ಟ್ ಫೀಲ್ ಕೊಡ್ತಾರೆ. ಆಕ್ಟಿಂಗ್ ಮಾಡಲು ಟ್ರೈ ಮಾಡುವುದು ಬೇಡ. ಅದು ತಾನಾಗಿಯೇ ಬರುತ್ತದೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಕಲಾವಿದರ ಅದ್ಭುತವಾಗಿ ನಟಿಸಿದ್ದಾರೆ ಎಂದರು.

    ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, ನನ್ನ ಸಿನಿಮಾ ಕರಿಯರ್ ನ ಅತ್ಯಂತ ಉತ್ಕೃಷ್ಟ ಮ್ಯೂಸಿಕ್ ಸಂಗೀತ ಸಿನಿಮಾ ಒಂದು ಸರಳ ಪ್ರೇಮ ಕಥೆ. ನನ್ನ ಎರಡನೇ ಸಿನಿಮಾದಲ್ಲಿ 10 ಹಾಡುಗಳಿದ್ದವು. ತುಂಬ ದೊಡ್ಡ ಹೆಸರು ತಂದುಕೊಟ್ಟಿತ್ತು. ಆ ನಂತರ ಯೋಗರಾಜ್ ಭಟ್ ಅವರ ಪ್ರೊಡಕ್ಷನ್ ನಲ್ಲಿ ದೇವ್ರೇ ಅಂತಾ ಮಾಡಿದ್ದೆ. ಅದು ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಆ ಎರಡು ಸಿನಿಮಾಗಳನ್ನು ಈ ಚಿತ್ರ ಮೀರಿಸುತ್ತದೆ ಅನಿಸುತ್ತಿದೆ. ಯಾಕೆಂದರೆ ಈ ಸಿನಿಮಾದಲ್ಲಿ 11 ಹಾಡುಗಳಿವೆ. ಸಿನಿಮಾದ ನಡುವೆ ಚಿಕ್ಕ ಚಿಕ್ಕ ಬೀಟ್ ಬರುತ್ತದೆ. 2 ಗಂಟೆ 20 ನಿಮಿಷ ಸಿನಿಮಾದಲ್ಲಿ ಮ್ಯೂಸಿಕ್ ಜೊತೆ ಕನೆಕ್ಟ್ ಆಗುತ್ತದೆ ಎಂದರು.

    ನಿರ್ಮಾಪಕರಾದ ಮೈಸೂರು ರಮೇಶ್ ಮಾತನಾಡಿ, ನಾನು ಪುಣ್ಯವಂತ. ಕನ್ನಡ ಚಿತ್ರರಂಗದಲ್ಲಿ ಯಾರೇ ಏನೇ ಮಾಡಬೇಕು ಎಂದರೆ ದೊಡ್ಮನೆ ಆಶೀರ್ವಾದ ಬೇಕು. ನನ್ನ ಸಿನಿಮಾದಲ್ಲಿ ರಾಘಣ್ಣ ಹಾಗೂ ವಿನಯ್ ಅವರು ನಟಿಸಿರುವುದು ಖುಷಿ ಕೊಟ್ಟಿದೆ. ಈ ಸಿನಿಮಾವನ್ನು ತುಂಬಾ ಪ್ರೀತಿಯಿಂದ ಮಾಡಿದ್ದೇನೆ ಎಂದರು. ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ವಿನಯ್ ರಾಜ್ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.

  • Bigg Boss Kannada: ಸಂಗೀತಾ ತಂಡ ಗೆಲ್ಲಿಸಿ ನೆಮ್ಮದಿಗೆ ಕಾರಣವಾದ ಫನ್ ಫ್ರೈಡೆ

    Bigg Boss Kannada: ಸಂಗೀತಾ ತಂಡ ಗೆಲ್ಲಿಸಿ ನೆಮ್ಮದಿಗೆ ಕಾರಣವಾದ ಫನ್ ಫ್ರೈಡೆ

    ವಾರದ (Bigg Boss Kannada) ಟಾಸ್ಕ್‌ನಲ್ಲಿ ಸೋತು ಒಳಗೊಳಗೇ ಕುದಿಯುತ್ತಿರುವ ಸಂಗೀತಾ ತಂಡ, ಶುಕ್ರವಾರ JioCinema ವತಿಯಿಂದ ನೀಡಲಾದ Fun Friday ಟಾಸ್ಕ್‌ನಲ್ಲಿ ಗೆದ್ದು ಸಮಾಧಾನದ ನಿಟ್ಟುಸಿರು ಬಿಟ್ಟಿದೆ.  ಈ ವಾರದ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದಾರೆ. ಅದು ಸಂಗೀತಾ (Sangeetha) ಗ್ಯಾಂಗ್‌ನ ತಳಮಳಕ್ಕೂ ಕಾರಣವಾಗಿದೆ. ಟಾಸ್ಕ್‌ನ ನಂತರ ಮನೆಯವರೆಲ್ಲರ ಬಹುಮತದ ಅಭಿಪ್ರಾಯದ ಮೇರೆಗೆ ವಿನಯ್‌ (Vinay) ‘ಅತ್ಯುತ್ತಮ ಪ್ರದರ್ಶನ’ದ ಪದಕ ಕೊರಳಿಗೇರಿಸಿಕೊಂಡರೆ, ಸಂಗೀತ ಜೈಲಿನುಡುಗೆ ತೊಟ್ಟು ಬಂಧಿಯಾಗಿದ್ದಾರೆ.

    ಈ ನಡುವೆ ಜಿಯೊ ಸಿನಿಮಾ ಮನೆಯ ಸ್ಪರ್ಧಿಗಳಿಗೆ ‘ಏಳೋಂದ್ಲ ಏಳು’ ಎಂಬ ಟಾಸ್ಕ್‌ ನೀಡಿತ್ತು. ಅದರ ನಿರ್ವಹಣೆಯ ಜವಾಬ್ದಾರಿಯನ್ನು ಭಾಗ್ಯಶ್ರೀ ಅವರಿಗೆ ನೀಡಿತ್ತು. ತುಕಾಲಿ ಸಂತೋಷ್ ಅವರು ಸಂಗೀತಾ ಅವರ ತಂಡದಿಂದ ಆಡಿದರು.

    ‘ಏಳೊಂದ್ಲ ಏಳು’ ಇದು ಸಂಖ್ಯೆಗಳ ಆಟ. ಸಂಗೀತಾ ತಂಡದವರು ನೀಲಿ ಬಣ್ಣದ ಟೀ- ಶರ್ಟ್‌ ಮತ್ತು ವಿನಯ್ ತಂಡದವರು ಕೆಂಪು ಬಣ್ಣದ ಟೀ- ಶರ್ಟ್‌ ಧರಿಸಿದ್ದರು. ಅವರ ಟೀ- ಶರ್ಟ್‌ ಮೇಲೆ ಒಂದೊಂದು ಅಂಕಿ ಬರೆಯಲಾಗಿತ್ತು. ಭಾಗ್ಯಶ್ರೀ (Bhagyashree) ಒಮ್ಮೆ ಒಂದಿಷ್ಟು ಸಂಖ್ಯೆಗಳನ್ನು ಹೇಳುತ್ತಾರೆ. ತಂಡದ ಸದಸ್ಯರೆಲ್ಲ ತಮ್ಮ ಟೀ- ಶರ್ಟ್‌ ಮೇಲಿನ ಅಂಕಿಗಳಿಗೆ ಅನುಗುಣವಾಗಿ ಭಾಗ್ಯಶ್ರೀ ಹೇಳಿದ ಸಂಖ್ಯೆಯಂತೆ ತಮ್ಮನ್ನು ತಾವು ಜೋಡಿಸಿಕೊಳ್ಳಬೇಕು.

    ತಂಡದ ಸದಸ್ಯರ ನಡುವಿನ ಹೊಂದಾಣಿಕೆಯನ್ನು ಬಿಂಬಿಸುವ ಈ ಆಟಕ್ಕೆ ಎರಡೂ ತಂಡದವರು ಸಾಕಷ್ಟು ಉತ್ಸಾಹದಿಂದಲೇ ಸಿದ್ಧರಾದರು. ಒಂದು ಕಡೆಯಲ್ಲಿ ವಿನಯ್, ಸಿರಿ, ನೀತು, ಸ್ನೇಹಿತ್, ಇಶಾನಿ, ರಕ್ಷಕ್, ನಮ್ರತಾ ನಿಂತಿದ್ದರೆ ಮತ್ತೊಂದು ಕಡೆಯಲ್ಲಿ ಸಂಗೀತಾ, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಮೈಕಲ್, ಡ್ರೋಣ್ ಪ್ರತಾಪ್‌, ಕಾರ್ತಿಕ್ ನಿಂತಿದ್ದರು.

     

    ಭಾಗ್ಯಶ್ರೀ ಹೇಳಿದ ನಂಬರ್‌ಗೆ ಅನುಗುಣವಾಗಿ ತಮ್ಮನ್ನು ತಾವು ಜೋಡಿಸಿಕೊಂಡು ನಿಲ್ಲುವಲ್ಲಿ ಮೊದಲು ಯಶಸ್ವಿಯಾಗಿದ್ದು ಸಂಗೀತಾ ತಂಡ. ಹಾಗಾಗಿ ಸಂಗೀತಾ ತಂಡದವರು ಈ ಆಟದಲ್ಲಿ ಗೆಲುವು ಸಾಧಿಸಿದರು. ಆದರೆ ಅವರ ಗೆಲುವು ಸಂಭ್ರಮವಾಗಿ ಬದಲಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ. ಯಾಕೆಂದರೆ ಇಡೀ ಮನೆಯ ಕ್ಯಾಪ್ಟನ್ ಆಗಿ ವಿನಯ್‌ ಆಯ್ಕೆಯಾಗಿದ್ದರು. ಹಾಗಾಗಿ ಆಗಲೇ ಸೋತುಹೋಗಿದ್ದ ಸಂಗೀತಾ ತಂಡಕ್ಕೆ ತಾತ್ಕಾಲಿಕ ನೆಮ್ಮದಿಯನ್ನಷ್ಟೇ ಈ ಗೆಲುವು ನೀಡಿತು.

  • ವಿನಯ್ ಕೋಪಕ್ಕೆ ಜೈಲು ಪಾಲಾದ ಸಂಗೀತ

    ವಿನಯ್ ಕೋಪಕ್ಕೆ ಜೈಲು ಪಾಲಾದ ಸಂಗೀತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]