Tag: ವಿನಯ್

  • Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್

    Bigg Boss: ಟೀಕಿಸಿದ ನಮ್ರತಾ, ಸಂಗೀತಾಗೆ ತಿರುಗೇಟು ಕೊಟ್ಟ ಕಾರ್ತಿಕ್

    ದೊಡ್ಮನೆಯಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಅವರು ಸ್ಟ್ರಾಂಗ್‌ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಕಾರ್ತಿಕ್ ಆಟದಲ್ಲಿ ಎಡವಿದ್ದಾರೆ. ಹಾಗಾಗಿಯೇ ವೀಕೆಂಡ್ ಪಂಚಾಯಿತಿಯಲ್ಲಿ ಕಾರ್ತಿಕ್ ಕುಗ್ಗಿದ್ದಾರಾ? ಎಂಬ ಪ್ರಶ್ನೆಯನ್ನು ಸುದೀಪ್ ಮನೆ ಮಂದಿಗೆ ಕೇಳಿದ್ದಾರೆ. ಕಾರ್ತಿಕ್‌ ಆಟಕ್ಕೆ ಸಂಗೀತಾ- ನಮ್ರತಾ (Namratha) ಹೌದು ಅವರು ಕುಗ್ಗಿದ್ದಾರೆ ಎಂದು ಟೀಕಿಸಿದ್ದಾರೆ. ಅದಕ್ಕೆ, ಕಾರ್ತಿಕ್ ಕೂಡ ಖಡಕ್ ಆಗಿ ಉತ್ತರಿಸಿದ್ದಾರೆ.

    ಬಿಗ್ ಬಾಸ್ (Bigg Boss Kannada 10) ಆಟ ಶುರುವಾದಾಗ ಸಂಗೀತಾ (Sangeetha Sringeri) ಜೊತೆ ಕಾರ್ತಿಕ್ ಅವರು ಆಪ್ತವಾಗಿದ್ದರು. ಅನೇಕ ಟಾಸ್ಕ್‌ಗಳಲ್ಲಿ ಸಂಗೀತಾ-ಕಾರ್ತಿಕ್ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಿದ್ದರು. ಇಬ್ಬರ ನಡುವೆ ಆದ ಮನಸ್ತಾಪದ ಬಳಿಕ ಕಾರ್ತಿಕ್ ಅವರು ನಮ್ರತಾ ಜೊತೆ ಸ್ನೇಹ ಬೆಳೆಸಿದರು. ಈಗ ಆ ಸ್ನೇಹ ಕೂಡ ಅಂತ್ಯವಾಗಿದೆ. ಈ ವಿಚಾರದಲ್ಲಿ ಕಾರ್ತಿಕ್ ಅವರನ್ನು ಸಂಗೀತಾ ಮತ್ತು ನಮ್ರತಾ ಟೀಕಿಸಿದ್ದಾರೆ. ಲಾಭಕ್ಕಾಗಿ ನನ್ನ ಸ್ನೇಹ ಬಳಸಿಕೊಂಡರು ಎಂದು ನಮ್ರತಾ ನೇರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ದೊಡ್ಮನೆಯಲ್ಲಿ ಒಬ್ಬರ ಜೊತೆ ಸ್ನೇಹ ಮೂಡುವುದು, ಬಳಿಕ ಆ ಸ್ನೇಹ ಅಂತ್ಯವಾಗುವುದು ಸಹಜ. ಆದರೂ ಅವರ ವರ್ತನೆಯನ್ನು ಸಂಗೀತಾ, ನಮ್ರತಾ ಮಾತಿನ ಮೂಲಕ ತಿವಿದಿದ್ದಾರೆ. ಕಾರ್ತಿಕ್‌ಗೆ ಒಂಟಿಯಾಗಿ ಇರಲು ಸಾಧ್ಯವಿಲ್ಲ ಎಂದು ಸಂಗೀತಾ ಮತ್ತು ನಮ್ರತಾ ಹೇಳಿದ್ದಾರೆ. ಒಂದು ವೇಳೆ ಒಂಟಿಯಾಗಿದ್ದರೆ ಯಾರ ಜೊತೆಯೂ ಸೇರುವುದಿಲ್ಲ ಎಂಬ ಕಾರಣ ನೀಡಿ ನಾಮಿನೇಟ್ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಜೊತೆಗೆ ಇದ್ದರೂ ಕಷ್ಟ, ಒಬ್ಬರೇ ಇದ್ದರೂ ಕಷ್ಟ ಎಂಬ ಪರಿಸ್ಥಿತಿ ಕಾರ್ತಿಕ್ ಅವರದ್ದಾಗಿದೆ ಎಂದಿದ್ದಾರೆ.

    ನಾನು ಕುಗ್ಗಿದ್ದು ನಿಜ. ಆದರೆ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಅಷ್ಟೇ. ಆಟದಿಂದ ನಾನು ಡೈವರ್ಟ್ ಆಗಿಲ್ಲ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್ ಮಾಡೋದು ಸಹಜ ಎಂದು ಕಾರ್ತಿಕ್ ಖಡಕ್‌ ಆಗಿ ಮಾತನಾಡಿದ್ದಾರೆ. ಸಂಗೀತಾ, ನಮ್ರತಾ, ತನಿಷಾ ಜೊತೆಗಿನ ಸ್ನೇಹ ಅಂತ್ಯವಾದ ಬಳಿಕ ಕಾರ್ತಿಕ್ ಅವರು ತುಕಾಲಿ ಸಂತೋಷ್- ವರ್ತೂರು ಸಂತೋಷ್ ಜೊತೆ ಹೆಚ್ಚು ಕಾಲ ಕಳೆಯಲು ಆರಂಭಿಸಿದ್ದಾರೆ.

  • ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕೊನೆಯ ಕಿಚ್ಚನ ಪಂಚಾಯಿತಿ ನಡೆದಿದೆ. ಈ ಬಾರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್ ಸ್ಪರ್ಧಿಗಳ ಜೊತೆ ಚರ್ಚಿಸಿದ್ದಾರೆ. ಇಡೀ ಸೀಸನ್‌ನಲ್ಲಿ ಉತ್ತಮವಾಗಿ ಆಡಿದವರಿಗೆ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಸಂಗೀತಾ (Sangeetha) ಮತ್ತು ವಿನಯ್‌ಗೆ (Vinay) ಕಿಚ್ಚನ ಕೊನೆಯ ಚಪ್ಪಾಳೆ ಸಿಕ್ಕಿದೆ.

    ದೊಡ್ಮನೆ ಆಟದಲ್ಲಿ ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಫಿನಾಲೆಗೆ ಟಿಕೆಟ್ ಪಡೆದು ಫೈನಲಿಸ್ಟ್ ಆಗಿದ್ದಾರೆ. ಇನ್ನೂ ಇಬ್ಬರಿಗೆ ಮಾತ್ರ ಫಿನಾಲೆಗೆ ಬರಲು ಅವಕಾಶ ಸಿಗಲಿದೆ. ಇದರ ನಡುವೆ ಈ ಸೀಸನ್‌ನಲ್ಲಿ ವಿನಯ್- ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ ಎಂದು ಇಬ್ಬರಿಗೆ ಮೆಚ್ಚುಗೆ ಸಲ್ಲಿಸುತ್ತಾ ಕಿಚ್ಚನ ಚಪ್ಪಾಳೆ ನೀಡಿದ್ದಾರೆ ಸುದೀಪ್.

    ಈ ವಾರಾಂತ್ಯ ಸುದೀಪ್‌ ಮಾತನಾಡಿ,  ಕೆಲ ವಾರ ಕಿಚ್ಚನ ಚಪ್ಪಾಳೆ ಕೊಟ್ಟೆ, ಇನ್ನೂ ಕೆಲ ವಾರ ಚಪ್ಪಾಳೆ ಕೊಡಬೇಕು ಅಂತ ಅನಿಸಿರಲಿಲ್ಲ, ಕೊಡಲಿಲ್ಲ. ಈ ಜರ್ನಿಯಲ್ಲಿ ಬೈಸಿಕೊಂಡಿದ್ದಾರೆ, ತಪ್ಪು ಮಾಡಿದ್ದಾರೆ, ಅತ್ತಿದ್ದಾರೆ, ನಕ್ಕಿದ್ದಾರೆ. ಈ ಸೀಸನ್‌ನಲ್ಲಿ ವಿನಯ್, ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ. ಈ ಜರ್ನಿಯಲ್ಲಿ ಇಬ್ಬರಿಗೆ ಚಪ್ಪಾಳೆ ಕೊಡಲು ಇಷ್ಟಪಡ್ತಿದೀನಿ. ಅಭಿಪ್ರಾಯಗಳನ್ನು ಹೇಳಿದ್ರಿ, ಜಗಳ ಆಡಿದ್ರಿ, ತಪ್ಪು ಮಾಡಿದ್ರಿ, ಸರಿಯೂ ಮಾಡಿದ್ರಿ, ಕಿರುಚಾಡಿದ್ರಿ, ಕೆಟ್ಟವರಾಗಿದ್ರಿ. ಇಡೀ ಸೀಸನ್‌ನಲ್ಲಿ ಅದ್ಭುತವಾಗಿ ಕೊಡುಗೆ ಕೊಟ್ಟಿದ್ದೀರಿ. ಈ ಸೀಸನ್‌ನ ಕೊನೆಯ ಚಪ್ಪಾಳೆ ಸಂಗೀತಾ, ವಿನಯ್‌ಗೆ ಎಂದು ಸುದೀಪ್ ಹೇಳಿದ್ದಾರೆ.

    ಈ ಸೀಸನ್‌ನಲ್ಲಿ ಬಿದ್ದಿದ್ದೀರಿ, ಎದ್ದಿದ್ದೀರಿ. ಸೋತಿದ್ದಿರಿ, ಗೆದ್ದಿದ್ದೀರಿ ನಿಮ್ಮಿಬ್ಬರನ್ನು ಈ ಸೀಸನ್‌ನಿಂದ ತೆಗೆದು ಇಟ್ಟರೆ ಈ ಸೀಸನ್ ಅಪೂರ್ಣ. ಈ ಸೀಸನ್‌ನ್ನು ಅದ್ಭುತ ಮಾಡಿದ್ದಕ್ಕೆ ಅಭಿನಂದನೆಗಳು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ:ಜ.22 ರಂದು ಅಯೋಧ್ಯೆಗೆ ಹೋಗುತ್ತಿದ್ದು, ಬರ್ತ್‌ ಡೇ ಆಚರಿಸಿಕೊಳ್ತಿಲ್ಲ: ನಿಖಿಲ್‌

    ಕಿಚ್ಚನ ಚಪ್ಪಾಳೆ ಹೆಸರು ಬಂದಾಗ ನನಗೆ ಚಪ್ಪಾಳೆ ಸಿಗಬಹುದಾ ಅಂತ ಕಾಯುತ್ತಿದ್ದೆ. ಉತ್ತಮವೇ ಸಿಗೋದಿಲ್ಲ, ಅಂಥದರಲ್ಲಿ ಪ್ರತಿ ಸಲ ನನಗೆ ಯಾಕೆ ಚಪ್ಪಾಳೆ ಸಿಗತ್ತೆ ಅಂತ ಯೋಚನೆ ಮಾಡುತ್ತಿದ್ದೆ, ಅಮ್ಮನ ಫೋಟೋ ನೋಡಿ ದಿನಾ ಇದರ ಬಗ್ಗೆ ಹೇಳುತ್ತಿದ್ದೆ.ಈಗ ನನಗೆ ತುಂಬ ಖುಷಿಯಾಗುತ್ತಿದೆ. ಇದಕ್ಕೋಸ್ಕರ ನಾವು ಕೆಲಸ ಮಾಡಬೇಕಿಲ್ಲ, ನಾವು ನಾವಾಗಿದ್ದರೆ ಚಪ್ಪಾಳೆ ಸಿಗುತ್ತದೆ ಅಂತ ಅರ್ಥ ಆಗಿದೆ. ನನಗೂ, ವಿನಯ್‌ಗೂ ಒಟ್ಟಿಗೆ ಚಪ್ಪಾಳೆ ಸಿಕ್ಕಿರೋದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಸಂಗೀತಾ ಶೃಂಗೇರಿ ಅವರು ಹೇಳಿದ್ದಾರೆ. ಬಳಿಕ ವಿನಯ್ ಮಾತನಾಡಿ, ಎಲ್ಲಿ ಕಿಚ್ಚನ ಚಪ್ಪಾಳೆ ಕೊನೆವರೆಗೂ ಸಿಗೋದಿಲ್ವೋ ಎಂದು ಭಾವಿಸಿದ್ದೆ, ಕೊನೆಗೂ ಸಿಕ್ಕಿದೆ ಎಂದು ಸಂಭ್ರಮಿಸಿದ್ದರು.

  • ಮುನಿಸು ಮರೆತು ಮತ್ತೆ ಒಂದಾದ ಕಾರ್ತಿಕ್, ಸಂಗೀತಾ

    ಮುನಿಸು ಮರೆತು ಮತ್ತೆ ಒಂದಾದ ಕಾರ್ತಿಕ್, ಸಂಗೀತಾ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕಾರ್ತಿಕ್ ಮತ್ತು ಸಂಗೀತಾ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್ (Karthik Mahesh) ಜೊತೆ ಬ್ರೇಕಪ್ ಮಾಡಿಕೊಂಡಿದ್ದ ಸಂಗೀತಾ ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಸಂಕ್ರಾಂತಿ ಹಬ್ಬದಂದು ಮತ್ತೆ ಕಾರ್ತಿಕ್- ಸಂಗೀತಾ (Sangeetha Sringeri) ನಡುವೆ ಸ್ನೇಹ ಚಿಗುರಿದೆ.

    ಚೆನ್ನಾಗಿದ್ದ ಜೋಡಿ ಕಾರ್ತಿಕ್- ಸಂಗೀತಾ ದೂರ ದೂರ ಆಗಿದ್ದರು. ಮತ್ತೆ ಒಂದಾಗೋದೇ ಇಲ್ವೇನೋ ಅನ್ನುವಷ್ಟರ ಮಟ್ಟಿಗೆ ಜಗಳ ಆಡಿಕೊಂಡಿದ್ದರು. ಈಗ ಸಂಕ್ರಾಂತಿ ಹಬ್ಬದಂದು ಈ ಜೋಡಿ ಸ್ನೇಹಕ್ಕೆ ಬೆಲೆ ಕೊಟ್ಟು ಒಂದಾಗಿದ್ದಾರೆ. ‘ಬಿಗ್ ಬಾಸ್’ ಸಂಕ್ರಾಂತಿ ದಿನದಂದು, ನೀವು ನಿಮ್ಮ ಯಾವ ಒಂದು ಗುಣವನ್ನು ಬಿಡುತ್ತೀರಿ, ಯಾವ ಗುಣವನ್ನು ಇಲ್ಲಿಂದ ನಿಮ್ಮಲ್ಲಿ ಅಳವಡಿಸಿಕೊಳ್ಳುತ್ತೀರಿ ಹಾಗೂ ಯಾರೊಟ್ಟಿಗೆ ದ್ವೇಷವನ್ನು ಬಿಟ್ಟು ಸ್ನೇಹವನ್ನು ಬೆಳೆಸುತ್ತೀರಿ ಎಂದು ಸೂಚಿಸಿ ಆ ವ್ಯಕ್ತಿಯನ್ನು ಕರೆದು ಎಳ್ಳು ಬೆಲ್ಲ ನೀಡಿ ಎಂದು ಆದೇಶ ನೀಡಿದ್ದರು. ಇದನ್ನೂ ಓದಿ:ಯುವ ಪ್ರತಿಭೆ ವಿನಯ್- ದಿಶಾ ರಮೇಶ್ ನಟನೆಯ ‘ದಿ’ ಸಿನಿಮಾದ ಸಾಂಗ್‌ ಔಟ್

    ಆಗ ಕಾರ್ತಿಕ್, ಇಲ್ಲಿ ನನ್ನ ಮುಂಗೋಪವನ್ನ ಬಿಡುತ್ತೇನೆ. ಯಾಕಂದ್ರೆ, ನಾನು ಬಹಳ ಬೇಗ ರಿಯಾಕ್ಟ್ ಮಾಡಿಬಿಡುತ್ತೇನೆ. ಆಮೇಲೆ ಕೊರಗೋದು ನಿಜ. ಸಂಗೀತಾ ಜೊತೆಗೆ ನಾನು ಎಷ್ಟೋ ವಿಷಯಗಳಲ್ಲಿ ಓವರ್ ಆಗಿ ರಿಯಾಕ್ಟ್ ಮಾಡಿ, ಕೋಪದಿಂದ ಮಾತಾಡಿದ್ದೇನೆ ಎಂದರು. ಬಳಿಕ ಸಂಗೀತಾರನ್ನು (Sangeetha) ಕರೆದು ಅವರಿಗೆ ಎಳ್ಳು-ಬೆಲ್ಲವನ್ನ ಕಾರ್ತಿಕ್ ತಿನ್ನಿಸಿದರು. ನನಗೆ ಇಲ್ಲಿ ಸಿಕ್ಕಿದ ಒಳ್ಳೆಯ ಫ್ರೆಂಡ್ ಸಂಗೀತಾ. ಈ ಸಂಕ್ರಾಂತಿ ಹಬ್ಬದಿಂದ ನಿಮಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದರು.

    ಅದಾದ ಬಳಿಕ ಸಂಗೀತಾ, ನನಗೆ ಒಬ್ಬರನ್ನ ಬೇಗ ಕ್ಷಮಿಸೋಕೆ ಆಗಲ್ಲ. ಒಬ್ಬ ವ್ಯಕ್ತಿಯ ಮೇಲೆ ತುಂಬಾ ನಂಬಿಕೆ ಇಡುತ್ತೇನೆ. ಆ ನಂಬಿಕೆಗೆ ಹರ್ಟ್ ಮಾಡಿದರೆ ಮಾತ್ರ ನನಗೆ ಕ್ಷಮಿಸೋಕೆ ಆಗಲ್ಲ. ನಾನು ನಂಬಿಕೆಯಿಟ್ಟ ಇಬ್ಬರು ವ್ಯಕ್ತಿಗಳು ತನಿಷಾ ಮತ್ತು ಕಾರ್ತಿಕ್. ಒಂದು ಆಯ್ಕೆಯಲ್ಲಿ ತಪ್ಪಾದಾಗ, ಅವರಿಗೆ ಬೇಜಾರು ಮಾಡಿದೆ. ಅದು ನನ್ನ ಕೆಟ್ಟ ಗುಣ. ಇಲ್ಲಿಂದ ನಾನು ತಾಳ್ಮೆಯನ್ನ ಕಲಿಯುತ್ತೇನೆ ಎಂದು ಸಂಗೀತಾ ಮಾತನಾಡಿದರು.

    ಕೆಲವು ಬಾರಿ ಫ್ರೆಂಡ್ಸ್ ಬಿಟ್ಟು ನಾನು ಬೇರೆಯವರೊಂದಿಗೆ ಇದ್ದದ್ದು, ಅವರವರ ದೃಷ್ಟಿಕೋನ ಅರ್ಥ ಮಾಡಿಕೊಳ್ಳೋಕೆ. ಆಗ ಅವರು ಒಳ್ಳೆಯವರಾಗಿಯೇ ಕಂಡಿದ್ದಾರೆ ಎಂದರು ಸಂಗೀತಾ. ನಾನು ಅಹಂ ಬಿಡೋಕೆ ನಾನು ಕಲಿಯುತ್ತೇನೆ. ಇಬ್ಬರು ಹೀರೋಗಳು ವಿನಯ್ ಮತ್ತು ಕಾರ್ತಿಕ್. ವಿನಯ್‌ಗೆ ನಾನು ಹೋಗೋ, ಬಾರೋ ಅಂದಿದ್ದೇನೆ. ಅದರ ಬಗ್ಗೆ ನನಗೆ ಪಶ್ಚಾತ್ತಾಪ ಇದೆ ಎಂದು ಸಂಗೀತಾ ವಿನಯ್‌ಗೆ (Vinay Gowda) ಕ್ಷಮೆ ಕೇಳಿದ್ದರು. ಬಳಿಕ ಕಾರ್ತಿಕ್‌ನ ಯಾವತ್ತೂ ಕ್ಷಮಿಸೋದಿಲ್ಲ ಅಂದುಕೊಂಡಿದ್ದೆ. ಅದಕ್ಕೆ ಸುಮಾರು ಕಾರಣಗಳಿವೆ. ನಾನು ತುಂಬಾ ನಂಬಿದ್ದೆ. ಸಾರಿ ಹೇಳಿದ್ಮೇಲೂ ಮತ್ತೆ ಮಾಡೋದಿದೆ ಅಲ್ಲ ಅದನ್ನ ನಂಬೋಕೆ ಆಗಲ್ಲ. ಕ್ಷಮಿಸಿ, ಮುಂದೆ ಸಾಗಬೇಕು ಅಂತ ಇಲ್ಲಿ ಕಲಿತಿದ್ದೇನೆ ಎಂದು ಹೇಳುತ್ತಾ ಕಾರ್ತಿಕ್‌ಗೆ ಸಂಗೀತಾ ಎಳ್ಳು-ಬೆಲ್ಲ ತಿನ್ನಿಸಿದ್ದಾರೆ.

    ಸಂಕ್ರಾಂತಿ ಹಬ್ಬದಂದು ಸಂಗೀತಾ ನಡೆ ನೋಡಿ, ಮನೆಮಂದಿ ಅಚ್ಚರಿಗೊಂಡಿದ್ದಾರೆ. ಸಂಗೀತಾ ಮಾತೆಲ್ಲವೂ ಸ್ವತಃ ಕಾರ್ತಿಕ್‌ಗೆ ಅಚ್ಚರಿ ಮೂಡಿಸಿದೆ. ಅದೇನೇ ಇರಲಿ ಸಂಗೀತಾ- ಕಾರ್ತಿಕ್ ಜೊತೆಯಾಗಿರಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

  • ಯುವ ಪ್ರತಿಭೆ ವಿನಯ್- ದಿಶಾ ರಮೇಶ್ ನಟನೆಯ ‘ದಿ’ ಸಿನಿಮಾದ ಸಾಂಗ್‌ ಔಟ್

    ಯುವ ಪ್ರತಿಭೆ ವಿನಯ್- ದಿಶಾ ರಮೇಶ್ ನಟನೆಯ ‘ದಿ’ ಸಿನಿಮಾದ ಸಾಂಗ್‌ ಔಟ್

    ನ್ನಡದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ವಿಭಿನ್ನ ಬಗೆಯ ಕಥಾಹಂದರ ಸಿನಿಮಾ ಮೂಲಕ ಯುವ ಸಿನಿಮೋತ್ಸಾಹಿಗಳು ಪ್ರೇಕ್ಷಕರ ಎದುರು ಹಾಜರಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾ ದಿ.‌ ಇದನ್ನೂ ಓದಿ:ಬಾಲಿವುಡ್‌ಗೆ ಕಾಲಿಟ್ಟ ಕೀರ್ತಿ ಸುರೇಶ್- ವರುಣ್‌ಗೆ ‘ಮಹಾನಟಿ’ ನಾಯಕಿ

    ‘ದಿ’ ಸಿನಿಮಾ (Dee Film) ಮೂಲಕ ವಿನಯ್ (Vinay) ನಾಯಕನಾಗಿ ಹಾಗೂ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು ವರ್ಷಗಳ ಅನುಭವವಿರುವ ಅವರೀಗ ‘ದಿ’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರದ ‘ನಾನು ಮೌನಿ’ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಕವಿರಾಜ್ ಸಾಹಿತ್ಯದ ಈ ಹಾಡಿಗೆ ಸಾಯಿ ವಿಘ್ನೇಶ್ ಧ್ವನಿಯಾಗಿದ್ದು, ಯುಎಂ ಸ್ಟೀವನ್ ಸತೀಶ್ ಸಂಗೀತ ಒದಗಿಸಿದ್ದಾರೆ. ನಾನು ಮೌನಿ ಅಂತಾ ವಿನಯ್- ದಿಶಾ ರಮೇಶ್ (Disha Ramesh) ಹಾಡಿನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ಯಶ್ ಫ್ಯಾನ್ಸ್ ದುರಂತ ಸಾವಿನ ಬಳಿಕ ದುನಿಯಾ ವಿಜಯ್ ವಿಶೇಷ ಮನವಿ

    ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ದಿ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

     

    View this post on Instagram

     

    A post shared by Disha Ramesh (@disha.ramesh)

    ‘ವಿಡಿಕೆ’ ಸಿನಿಮಾಸ್ ಬ್ಯಾನರ್ ನಡಿ ‘ವಿಡಿಕೆ’ ಗ್ರೂಪ್ ‘ದಿ’ ಚಿತ್ರವನ್ನು ನಿರ್ಮಾಣ ಮಾಡಿದೆ. ತುಮಕೂರು, ಮೈಸೂರು, ಮೂಡುಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಕೇರಳದಲ್ಲಿ ‘ದಿ’ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಲನ್ ಭರತ್ ಕ್ಯಾಮೆರಾ ವರ್ಕ್‌ ಮಾಡಿದ್ದು, ಯುಎಂ ಸ್ಟೀವನ್ ಸತೀಶ್ ಅವರು ಸಂಗೀತ ನಿರ್ದೇಶನ, ಕವಿರಾಜ್ – ವಿನಯ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ಸಿದ್ದಾರ್ಥ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡಿದ್ದಾರೆ.

    ‘ದಿ’ ಸಿನಿಮಾಗೆ ವಿನಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಿಂಪಲ್ ಸುನಿ (Simple Suni) ಈ ಹಿಂದೆ ಟೈಟಲ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದರು. ಸದ್ಯದಲ್ಲೇ ರಿಲೀಸ್‌ ಬಗ್ಗೆ ಚಿತ್ರತಂಡ ಅಪ್‌ಡೇಟ್‌ ನೀಡಲಿದೆ.

  • ಸಂಗೀತಾ ಯೋಗ್ಯತೆ ಬಗ್ಗೆ ಮಾತನಾಡಿದ ಕಾರ್ತಿಕ್‌ಗೆ ಕಿವಿಹಿಂಡಿದ ವಿನಯ್‌

    ಸಂಗೀತಾ ಯೋಗ್ಯತೆ ಬಗ್ಗೆ ಮಾತನಾಡಿದ ಕಾರ್ತಿಕ್‌ಗೆ ಕಿವಿಹಿಂಡಿದ ವಿನಯ್‌

    ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳು ಕಾರ್ತಿಕ್ (Karthik Mahesh) ಮತ್ತು ಸಂಗೀತಾ (Sangeetha Sringeri) ದೂರವಾಗಿ ಹಲವು ದಿನಗಳು ಕಳೆದಿದೆ. ಜೊತೆಯಾಗಿ ಶತ್ರುಗಳಿಗೆ ಠಕ್ಕರ್ ಕೊಡುತ್ತಿದ್ದ ಈ ಜೋಡಿ ದೂರ ದೂರ ಆಗಿದ್ದಾರೆ. ಇಬ್ಬರೂ ಶತ್ರುಗಳಾಗಿ ಜಗಳ ಆಡೋಕೆ ಟೊಂಕ ಕಟ್ಟಿ ನಿಂತಿದ್ದಾರೆ. ಇದೀಗ ಸಂಗೀತಾಗೆ ವುಮೆನ್ ಕಾರ್ಡ್ ಪ್ಲೇ ಮಾಡುತ್ತಿದ್ದೀಯಾ ಎಂದು ಕಾರ್ತಿಕ್ ಗುಡುಗಿದ್ದಾರೆ. ಇದನ್ನೂ ಓದಿ:ನಟ ‘ದರ್ಶನ್’ಗೆ ಟಾರ್ಗೆಟ್ ಮಾಡಲಾಗ್ತಿದೆ : ರಾಕ್ ಲೈನ್ ಕಿಡಿಕಿಡಿ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಟಿಕೆಟ್ ಟು ಫಿನಾಲೆ ಟಾಸ್ಕ್ ಚಾಲ್ತಿಯಲ್ಲಿದೆ. ಇದರಲ್ಲಿ ಗೆದ್ದು ಅತೀ ಹೆಚ್ಚು ಪಾಯಿಂಟ್ ಗಳಿಸುವ ಒಬ್ಬ ಸ್ಪರ್ಧಿ ಮುಂದಿನ ವಾರದ ನಾಮಿನೇಷನ್‌ನಲ್ಲಿ ಸೇಫ್ ಆಗಲಿದ್ದಾರೆ. ಆ ಮೂಲಕ ಫಿನಾಲೆ ವಾರಕ್ಕೆ ನೇರವಾಗಿ ಕಾಲಿಡಲಿದ್ದಾರೆ. ಕಾರ್ತಿಕ್ ಪ್ರಬಲ ಸ್ಪರ್ಧಿ ಎಂಬ ಕಾರಣಕ್ಕೆ ಏನೋ, ಅವರನ್ನ ಟಾಸ್ಕ್‌ಗಳಿಗೆ ನಮ್ರತಾ(Namratha Gowda), ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಆಯ್ಕೆ ಮಾಡಿರಲಿಲ್ಲ.

    ಕಾರ್ತಿಕ್ ಅವರನ್ನ ತನಿಷಾ (Tanisha) ಆಯ್ಕೆ ಮಾಡಿದ್ದರು. ಆದರೆ ಕಾರ್ತಿಕ್‌ನ ಹೊರದಬ್ಬಿ ಆ ಜಾಗಕ್ಕೆ ವರ್ತೂರು ಸಂತೋಷ್ ಬಂದರು. ಕಾರ್ತಿಕ್‌ಗೆ ವಿನಯ್ ಕೂಡ ಅವಕಾಶ ಕೊಟ್ಟಿದ್ದರು. ಆದರೆ, ಕಾರ್ತಿಕ್‌ನ ಸಂಗೀತಾ ಹೊರಗಿಟ್ಟು, ಆ ಜಾಗಕ್ಕೆ ಸಂಗೀತಾ ಬಂದು ಟಾಸ್ಕ್ ಆಡಿದರು.

    ಕಾರ್ತಿಕ್ ಟಾಸ್ಕ್ ಆಡೋದು ತಮಗೆ ಇಷ್ಟವಿಲ್ಲ ಎಂದು ಸಂಗೀತಾ ಹೇಳಿದ್ದರು. ಇದರಿಂದ ಕಾರ್ತಿಕ್‌ಗೆ ಸಿಟ್ಟು ತರಿಸಿತ್ತು. ಆಟದ ವೇಳೆ ಸಂಗೀತಾಗೆ ಪೆಟ್ಟು ಬಿದ್ದಿತ್ತು. ಹೀಗಾಗಿ, ದಿ ಗರ್ಲ್ ಹು ಗೆಟ್ಸ್ ಇನ್ ಜುರ್ಡ್ ಇನ್ ಎವರಿಥಿಂಗ್ ಅಂತ ಸಂಗೀತಾ ಹೇಳಿದರು. ಆಗ, ವುಮನ್ ಕಾರ್ಡ್ ಎಂದರು ಕಾರ್ತಿಕ್. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ನಿಮ್ಮ ವ್ಯಕ್ತಿತ್ವ ಏನು ತೋರಿಸುತ್ತದೆ ಎಂದು ಸಂಗೀತಾ ಹೇಳಿದಾಗ ರೊಚ್ಚಿಗೆದ್ದ ಕಾರ್ತಿಕ್, ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡುವ ಯೋಗ್ಯತೆ, ಅರ್ಹತೆ ನಿನಗೆ ಇಲ್ಲ ಎಂದು ಗುಡುಗಿದ್ದರು.

    ಇಬ್ಬರ ಜಗಳದ ಮಧ್ಯೆ ವಿನಯ್ ಬೆಳೆ ಬೆಳೆಯಿಸುವ ಕೆಲಸ ಮಾಡಿದ್ದಾರೆ. ನನಗೆ ಎಲ್ಲರೂ ಕೆಟ್ಟ ಪದ ಉಪಯೋಗಸಬೇಡ ಅಂತ ಹೇಳ್ತೀರಾ ಈಗ ನೀವೇನು ಮಾಡ್ತಿದ್ದೀರಾ? ಯೋಗ್ಯತೆ ಬಗ್ಗೆ ಯಾಕೆ ಮಾತನಾಡಿದೆ ಎಂದು ಸಂಗೀತಾ ಪರ ವಿನಯ್ ಬ್ಯಾಟ್ ಬೀಸಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಒಂದು ಸಮಯದಲ್ಲಿ ಹಾವು ಮತ್ತು ಮುಂಗುಸಿಯಂತೆ ವಿನಯ್ ಮತ್ತು ಸಂಗೀತಾ ಕಿತ್ತಾಡುತ್ತಿದ್ದರು. ಈಗ ಇಬ್ಬರೂ ಒಂದಾಗಿರೋದು ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.

  • ಕಾರ್ತಿಕ್‌ ಸಖತ್‌ ಕೇರಿಂಗ್‌, ಒಳ್ಳೆಯ ಹುಡುಗ ಎಂದ ನಮ್ರತಾ ಕಾಲೆಳೆದ ವಿನಯ್

    ಕಾರ್ತಿಕ್‌ ಸಖತ್‌ ಕೇರಿಂಗ್‌, ಒಳ್ಳೆಯ ಹುಡುಗ ಎಂದ ನಮ್ರತಾ ಕಾಲೆಳೆದ ವಿನಯ್

    ಬಿಗ್ ಬಾಸ್ ಶೋನ (Bigg Boss Kannada 10)  ಪ್ರತಿ ಸೀಸನ್‌ನಲ್ಲಿಯೂ ಒಬ್ಬರಲ್ಲ ಒಬ್ಬರು ಜೋಡಿಗಳಾಗಿ ಹೈಲೆಟ್‌ ಆಗುತ್ತಾರೆ. ಸ್ನೇಹಿತ್‌ ಜೊತೆ ನಮ್ರತಾ ಲವ್ವಿ ಡವ್ವಿ ಇತ್ತು. ಆದರೆ ಅವರ ಎಲಿಮಿನೇಷನ್‌ ನಂತರ ಕಾರ್ತಿಕ್‌ (Karthik) ಜೊತೆ ನಮ್ರತಾಗೆ (Namratha) ಸಲುಗೆ ಜಾಸ್ತಿ ಆಗಿದೆ. ಇದೀಗ ಕಾರ್ತಿಕ್ ಬಗೆಗಿನ ಮನದಾಳದ ಮಾತನ್ನು ವಿನಯ್‌ ಬಳಿ ಹೇಳಿಕೊಂಡಿದ್ದಾರೆ. ಆಗ ಕಾರ್ತಿಕ್‌ಗೆ ಬೀಳಬೇಡ ಅಂತ ನಮ್ರತಾಗೆ, ವಿನಯ್ (Vinay Gowda) ಕಿವಿಹಿಂಡಿದ್ದಾರೆ.

    ದೊಡ್ಮನೆಗೆ ಬರುವ ಮುನ್ನವೇ ನಮ್ರತಾ, ವಿನಯ್ ಅವರು ಒಳ್ಳೆಯ ಸ್ನೇಹಿತರು. ವಿನಯ್ ಟೀಂನಲ್ಲಿದ್ದುಕೊಂಡು ನಮ್ರತಾ ಆಟ ಆಡುತ್ತಿದ್ದಾರೆ. ಸ್ವಂತ ಅಸ್ತಿತ್ವ ಇಲ್ಲ, ವಿನಯ್ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಮನೆಯ ಸ್ಪರ್ಧಿಗಳೇ ನಮ್ರತಾ ವಿರುದ್ಧ ಅಪಸ್ವರ ಎತ್ತಿದ್ದರು. ಯಾರು ಏನೇ ಹೇಳಿದ್ರೂ ಕೂಡ ನಾನು ನನ್ನ ಆಟವನ್ನೇ ಆಡ್ತಿದ್ದೀನಿ ಎಂದು ಹೇಳಿದ್ದರು ನಮ್ರತಾ. ಆಟ ಬೇರೆ ಫ್ರೆಂಡ್‌ಶಿಪ್ ಬೇರೆ ಎಂದು ನಮ್ರತಾ ಸಮರ್ಥನೆ ನೀಡಿದ್ದರು.

    ಇನ್ನೂ ಮೊನ್ನೆಯಷ್ಟೇ ಸದಾ ಫ್ಲಟ್ ಮಾಡೋ ಕಾರ್ತಿಕ್ ನಡೆಗೆ ನಮ್ರತಾ ಗುಡುಗಿದ್ದರು. ನನ್ನ ಮೇಲೆ ಫೀಲಿಂಗ್ಸ್ ಇಲ್ಲ ಅಂದ್ಮೇಲೆ ಯಾಕೆ ಫ್ಲರ್ಟ್ ಮಾಡುತ್ತೀರಿ ಎಂದು ಕಾರ್ತಿಕ್‌ಗೆ ನಮ್ರತಾ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ಕಾರ್ತಿಕ್, ಇನ್ನೂ ಮುಂದೆ ನಾನು ಹೀಗೆಲ್ಲಾ ವರ್ತಿಸೋದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಈಗ ವಿನಯ್ ಬಳಿ ಕಾರ್ತಿಕ್ ಜೊತೆಗಿನ ಬಾಂಧವ್ಯದ ಬಗ್ಗೆ ನಮ್ರತಾ ಮಾತನಾಡಿದ್ದಾರೆ. ಇದನ್ನೂ ಓದಿ:ಒಟಿಟಿಯಿಂದ ನಯನತಾರಾ ನಟನೆಯ ಸಿನಿಮಾ ಡಿಲಿಟ್

    ನನಗೆ ಆರಂಭದಲ್ಲಿ ಕಾರ್ತಿಕ್ ತುಂಬಾ ಇರಿಟೇಟ್ ಅಂತ ಅನಿಸ್ತಿತ್ತು. ಈಗ ಅವರು ಒಳ್ಳೆಯ ಮನುಷ್ಯ ಅಂತ ಅನಿಸ್ತಿದೆ. ಅವರು ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಗೌಡ ಮುಂದೆ ಹೇಳಿಕೊಂಡಿದ್ದಾರೆ. ಆಗ ವಿನಯ್ ಅವರು ನಮ್ರತಾಗೆ ಕಾರ್ತಿಕ್‌ಗೆ ಬೀಳಬೇಡ ಎಂದು ಕಿವಿಮಾತು ಹೇಳಿದ್ದಾರೆ.

    ಕಾರ್ತಿಕ್ ಸಖತ್ ಕೇರಿಂಗ್, ಸ್ವೀಟ್, ಒಳ್ಳೆಯ ಹುಡುಗ. ಮುಂಚಿನಂತೆ ಇರೀಟೇಟ್ ಆಗೋದು ನಿಂತಿದೆ. ಬಳಿಕ ಕಾರ್ತಿಕ್ ನನ್ನ ಕೈ ಹಿಡ್ಕೊಂಡು ಕೂತಾಗ ಕಂಫರ್ಟ್ ಅಂತ ಅನಿಸತ್ತೆ ಎಂದು ನಮ್ರತಾ ಅವರು ವಿನಯ್ ಬಳಿ ಹೇಳಿಕೊಂಡರು. ವಿನಯ್ ನಗುತ್ತಲೇ ನಮ್ರತಾ ಕಾಲೆಳೆದರು. ಕೂಡಲೇ ನಮ್ರತಾ, ನಮ್ಮದು ಫ್ರೆಂಡ್‌ಶಿಪ್ ಅಂತಹದ್ದೇನು ಇಲ್ಲ ಅಂತ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು. ಆದರೆ ನಮ್ರತಾ ನಡೆಗೆ ವೀಕ್ಷಕರು ಕನ್ಫೂಸ್‌ ಆಗಿದ್ದಾರೆ. ಕಾರ್ತಿಕ್‌ ಜೊತೆಗಿನ ನಮ್ರತಾ ಒಡನಾಟ ನೋಡಿ ಸ್ನೇಹಿತ್‌ ಕಥೆಯೇನು ಅಂತ ಕೇಳ್ತಿದ್ದಾರೆ ಅಭಿಮಾನಿಗಳು. ಎಲ್ಲದ್ದಕ್ಕೂ ಬಿಗ್‌ ಬಾಸ್‌ ಶೋ ಮುಗಿದ ಮೇಲೆಯೇ ಉತ್ತರ ಸಿಗಲಿದೆ.

  • Bigg Boss Kannada: ಡ್ರೋನ್ ಪ್ರತಾಪ್ ಎದುರು ನಿಂತು ಕ್ಷಮೆ ಕೇಳಿದ ವಿನಯ್

    Bigg Boss Kannada: ಡ್ರೋನ್ ಪ್ರತಾಪ್ ಎದುರು ನಿಂತು ಕ್ಷಮೆ ಕೇಳಿದ ವಿನಯ್

    ಬಿಗ್ ಬಾಸ್ (Bigg Boss Kannada) ಮನೆ ಅಚ್ಚರಿಗೆ ಕಾರಣವಾಗಿದೆ. ಫಿನಾಲೆಗೆ ಹೋಗೋಕೆ ಯಾರು ಅರ್ಹರು ಎನ್ನುವ ಟಾಸ್ಕ್ ವಿಚಾರವಾಗಿ ಡ್ರೋನ್ ಪ್ರತಾಪ್ (Drone Pratap) ಮತ್ತು ವಿನಯ್ (Vinay) ನಡುವೆ ಕೋಲಾಹಲವೇ ನಡೆದಿತ್ತು. ಬಿಗ್ ಬಾಸ್ ಮನೆಯಲ್ಲಿ ಜಗಳ ಕಾಮನ್ ಆಗಿದ್ದರೂ, ಈ ಬಾರಿಯ ಜಗಳ ನೋಡುಗರಿಗೂ ಅಸಹ್ಯ ಮೂಡಿಸಿತ್ತು. ಡ್ರೋನ್ ಪ್ರತಾಪ್ ಅವರಿಗೆ ವಿನಯ್ ಕೊಳಕು ಭಾಷೆಯಲ್ಲಿ ಬೈದಿದ್ದರು. ಆಡಬಾರದ ಮಾತುಗಳನ್ನು ಆಡಿದ್ದರು. ಹಾಗಾಗಿ ಮನೆಮಂದಿಯಲ್ಲ ವಿನಯ್ ಮೇಲೆ ಬೇಸರಿಸಿಕೊಂಡಿದ್ದರು.

    ಈವರೆಗೂ ಎಲಿಮಿನೇಟ್ ಆದವರಲ್ಲಿ ವಿನಯ್ ಗುಂಪಿನವರೇ ಹೆಚ್ಚಿದ್ದಾರೆ. ಇದನ್ನು ನೋಟಿಸ್ ಮಾಡಿದ್ದ ಪ್ರತಾಪ್, ‘ವಿನಯ್ ಅವರು ತಮ್ಮ ಸ್ನೇಹಿತರ ತಪ್ಪನ್ನು ತಿದ್ದಲು ಹೋಗಲಿಲ್ಲ. ಈ ಕಾರಣದಿಂದಾಗಿಯೇ ಅವರು ಮನೆಯಿಂದ ಆಚೆ ಹೋಗಬೇಕಾಯಿತು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಮಾತು ವಿನಯ್ ಅವರಿಗೆ ಸಾಕಷ್ಟು ಕೋಪ ತರಿಸಿತ್ತು. ಆ ಕೋಪ ಹೇಗಿತ್ತು ಅಂದರೆ, ತಮ್ಮ ಮುಂದೆ ಮೂವರು ಹುಡುಗಿಯರು ಇದ್ದಾರೆ, ಈ ಶೋ ಅನ್ನು ಕೋಟ್ಯಂತರ ಜನರು ವೀಕ್ಷಿಸ್ತಾರೆ ಎನ್ನೋದನ್ನು ಮರೆತು ಸೊಂಟದ ಕೆಳಗಿನ ಪದಗಳನ್ನು ಬಳಸಿದ್ದರು.

    ಹೌದು, ವಿನಯ್ ಅವರಿಗೆ ಕೋಪ ಬಂದರೆ, ನಾಲಿಗೆಯ ಮೇಲೆ ಹಿಡಿತವಿರುವುದಿಲ್ಲ. ಹಾಗಾಗಿ ಬಿಗ್ ಬಾಸ್ ಮನೆಯ ಬಹುತೇಕ ಸದಸ್ಯರನ್ನು ಅವರು ನಿಂದಿಸಿದ್ದಾರೆ. ಕೂಗಾಡಿ ಮನೆಯ ವಾತಾವರಣವನ್ನೇ ಹಾಳು ಮಾಡಿದ್ದಾರೆ. ಇವತ್ತು ದೋಸ್ತ್ ಅಂತ ಯಾರ ಹೆಗಲ ಮೇಲೆ ಕೈ ಹಾಕಿದ್ದರೋ, ಅವರನ್ನು ದುಸ್ಮನ್ ಅಂತಾನೂ ಕರೆದಿದ್ದಾರೆ. ತಪ್ಪಿನ ಅರಿವಾದ ನಂತರ ಮತ್ತೆ ಸ್ಸಾರಿ ಕೇಳಿದ್ದಾರೆ. ಡ್ರೋನ್ ಪ್ರತಾಪ್ ವಿಷಯದಲ್ಲೂ ಅದೇ ಆಗಿದೆ. ತಾನು ಮಾತನಾಡಿದ್ದು ತಪ್ಪು ಅಂತ ಅನಿಸಿ, ಡ್ರೋನ್ ಬಳಿ ಬಂದು ಕ್ಷಮೆ ಕೇಳಿದ್ದಾರೆ.

    ನೀನು ಫಿನಾಲೆ ವೇದಿಕೆಯ ಮೇಲೆ ಇರಬೇಕು ಅಂತ ನನಗೂ ಆಸೆ. ಅವತ್ತು ಕೋಪದಲ್ಲಿ ಬೈದೆ. ನನಗೆ ಕೋಪ ಬಂದರೆ ಏನು ಮಾಡ್ತೀನಿ ಅಂತ ಗೊತ್ತೇ ಇರಲ್ಲ. ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ ಎಂದು ವಿನಯ್ ಮಾತನಾಡಿದ್ದಾರೆ. ಅಷ್ಟೇ ಪ್ರೀತಿಯಿಂದ ಡ್ರೋನ್ ಕೂಡ ಕ್ಷಮೆಯನ್ನು ಒಪ್ಪಿದ್ದಾರೆ. ಒಳ್ಳೆಯದಾಗಲಿ, ಬಿಗ್ ಬಾಸ್ ಗೆಲ್ಲಲಿ ಎಂದು ಹಾರೈಸಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ಗಾಯಗೊಂಡ ವಿನಯ್: ವೈದ್ಯರ ಸಲಹೆ ಏನು?

    ಬಿಗ್ ಬಾಸ್ ಮನೆಯಲ್ಲಿ ಗಾಯಗೊಂಡ ವಿನಯ್: ವೈದ್ಯರ ಸಲಹೆ ಏನು?

    ಟಾಸ್ಕ್ ನಲ್ಲಿ ಗಾಯಗಳಾಗೋದು ಸಹಜ. ಎಷ್ಟೋ ಬಾರಿ ವಿಪರೀತ ಏಟು ಮಾಡಿಕೊಂಡು ಬಿಗ್ ಬಾಸ್ (Bigg Boss Kannada) ಮನೆಯಿಂದ ಆಚೆ ಬಂದವರು ಇದ್ದಾರೆ. ಈ ಸೀಸನ್ ನಲ್ಲಿ ತನಿಷಾ ಏಟು ಮಾಡಿಕೊಂಡು ಆಸ್ಪತ್ರೆ ಪಾಲಾಗಿದ್ದರು. ಹುಷಾರಾಗಿ ಮತ್ತೆ ಮನೆ ಪ್ರವೇಶ ಮಾಡಿದರು. ಮೊನ್ನೆ ಮೊನ್ನೆಯಷ್ಟೇ ಪ್ರತಾಪ್ ಮತ್ತು ಸಂಗೀತಾ ಕೂಡ ಕಣ್ಣಿಗೆ ಕೆಮಿಕಲ್ ನೀರು ಹಾಕಿಸಿಕೊಂಡು ಆಸ್ಪತ್ರೆ ಸೇರಿಕೊಂಡಿದ್ದರು. ನಿನ್ನೆ ನಡೆದ ಟಾಸ್ಕ್ ನಲ್ಲಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಗಾಯಗೊಂಡಿದ್ದಾರೆ. ಅದರಲ್ಲೂ ವಿನಯ್ ಬೆರಳಿಗೆ ಬಲವಾಗಿಯೇ ಏಟು ಬಿದ್ದಿದೆ.

    ಟಾಸ್ಕ್ ನಲ್ಲಿ ವಿನಯ್ (Vinay) ಗೌಡ ಸಿಕ್ಕಾಪಟ್ಟೆ ಅಗ್ರೆಸಿವ್ ಆಗಿ ಆಡುತ್ತಾರೆ. ಅವರನ್ನು ಕಂಟ್ರೋಲ್ ಮಾಡೋದು ತುಂಬಾ ಕಷ್ಟ. ಕುಸ್ತಿ ಪಟುವಿನಂತೆ ಸದಾ ಮುಸಿಮುಸಿ ಅನ್ನುತ್ತಲೇ ಇರುತ್ತಾರೆ. ನಿನ್ನೆ ನಡೆದ ಕಲೆ ಒಳ್ಳೆಯದಲ್ಲ ಟಾಸ್ಕ್ ನಲ್ಲೂ ಅವರು ಸಖತ್ ಅಗ್ರೆಸಿವ್ ಆಗಿಯೇ ಆಟವಾಡಿದರು. ಪರಿಣಾಮ ಬೆರಳಿಗೆ ಏಟು ಮಾಡಿಕೊಂಡರು. ಅದಕ್ಕಾಗಿ ಅವರು ಆ ಟಾಸ್ಕ್ ನಿಂದಲೇ ಹೊರ ಬರಬೇಕಾಯಿತು. ಬೆರಳಿಗೆ ತೀವ್ರ ತರಹದ ಗಾಯವಾಗಿದ್ದರಿಂದ ಟಾಸ್ಕ್ ನಲ್ಲಿ ಭಾಗಿ ಆಗದಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಟಾಸ್ಕ್ ನಲ್ಲಿ ಭಾಗಿಯಾಗಬೇಡಿ ಎಂದು ಬಿಗ್ ಬಾಸ್ ಕೂಡ ಅನೌನ್ಸ್ ಮಾಡಿದ್ದಾರೆ.

    ಅಗ್ರೆಸಿವ್ ಕಾರಣದಿಂದಾಗಿಯೇ ಈ ಹಿಂದೆಯೂ ಆಟ ರದ್ದಾದ ಉದಾಹರಣೆ ಇದೆ. ಅದು ವಿನಯ್ ಕಾರಣದಿಂದಾಗಿಯೇ ಟಾಸ್ಕ್ ರದ್ದಾಗಿದೆ.  ಹಾಗಾಗಿ ವಿನಯ್ ಆಡುವಾಗ ಪದೇ ಪದೇ ತುಕಾಲಿ ಸಂತು, ಅದನ್ನು ನೆನಪಿಸುತ್ತಲೇ ಇದ್ದರು. ತುಕಾಲಿ ಏನೇ ಹೇಳಿದರೂ, ಅವರ ಮಾತನ್ನು ಕೇಳಲಿಲ್ಲ ವಿನಯ್. ಹಾಗಾಗಿ ಬೆರಳಿಗೆ ಏಟು ಮಾಡಿಕೊಳ್ಳುವಂತಹ ಪ್ರಸಂಗ ಎದುರಾಯಿತು. ಅದರಲ್ಲೂ ವಿನಯ್, ಕಾರ್ತಿಕ್ ಮತ್ತು ಅವಿನಾಶ್ ಶೆಟ್ಟಿ ನಡುವಿನ ಗಲಾಟೆ ತಾರಕಕ್ಕೇರಿತ್ತು. ಮೂವರು ಪರಸ್ಪರ ಕಿತ್ತಾಡಿಕೊಂಡ ಪರಿಣಾಮ ಕಾರ್ತಿಕ್ ಅವರಿಗೆ ಬೆನ್ನಿಗೆ ಏಟಾಗಿದೆ. ಅವರು ಕೂಡ ಆರೈಕೆಯಲ್ಲಿದ್ದಾರೆ.

    ಟಾಸ್ಕ್ ಗೆಲ್ಲಲು ಹೋರಾಡೋದು ಸಹಜ. ಆದರೆ, ಅದನ್ನು ಜಟ್ಟಿಗಳಂತೆ ಕಿತ್ತಾಡುವುದು ಸರಿಯಾದ ಕ್ರಮವಲ್ಲ. ವಿನಯ್ ವಿಷಯದಲ್ಲಿ ಟಾಸ್ಕ್ ಅಂದರೆ, ಅದೊಂದು ಕುಸ್ತಿ ಪಂದ್ಯವೇ. ಜಗಳಕ್ಕೆ ಅವರು ಯಾವತ್ತಿಗೂ ಮುಂದು. ಒಟ್ಟಾರೆ ಪರಿಣಾಮ ಗಾಯ ಮಾಡಿಕೊಳ್ಳೋದು. ವಿನಯ್ ಗಾಯ ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಭಾಗಿ ಆಗಬಾರದು ಎಂದು ವೈದ್ಯರು (Doctor) ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ವಿನಯ್, ಹೇಗೆ ಇರಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದು.

  • ಬಿಗ್ ಬಾಸ್ ಮನೆಯಲ್ಲಿ ಗಲಾಟೆ: ಮತ್ತೋರ್ವ ಸ್ಪರ್ಧಿ ಆಸ್ಪತ್ರೆಗೆ ದಾಖಲು

    ಬಿಗ್ ಬಾಸ್ ಮನೆಯಲ್ಲಿ ಗಲಾಟೆ: ಮತ್ತೋರ್ವ ಸ್ಪರ್ಧಿ ಆಸ್ಪತ್ರೆಗೆ ದಾಖಲು

    ಬಿಗ್ ಬಾಸ್ (Bigg Boss Kannada) ಮನೆಯ ಬಣ್ಣದ ಟಾಸ್ಕ್ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿನಯ್ ಮತ್ತು ಅವಿನಾಶ್ ಶೆಟ್ಟಿ (Avinash Shetty) ಜಗಳ ತಾರಕಕ್ಕೇರಿದ್ದು, ಇದರ ಮುಂದುವರಿಕೆಯಾಗಿ ವಿನಯ್ (Vinay) ಬೆರಳು ಮುರಿದುಕೊಂಡಿದ್ದಾರೆ. ಕಾರ್ತಿಕ್ ಮತ್ತು ಅವಿನಾಶ್ ನಡುವೆ ನಡೆದ ಕಾಳಗದಲ್ಲಿ ಕಾರ್ತಿಕ್ (Karthik) ಏಟು ಮಾಡಿಕೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಬಣ್ಣದ ಟಾಸ್ಕ್‌ನಲ್ಲಿ ಎರಡೂ ತಂಡಗಳ ನಡುವೆ ಮಾರಾಮಾರಿಯೇ ನಡೆದಿದೆ ಎನ್ನುವುದು ಹರಿದಾಡುತ್ತಿರುವ ಸುದ್ದಿ.

    ತನಿಷಾ ಮತ್ತು ಸಂಗೀತಾ ಇಬ್ಬರ ತಂಡಗಳ ಸದಸ್ಯರನ್ನು ನೋಡಿದಾಗ ಗ್ಯಾರಂಟಿ ಜಗಳ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ತನಿಷಾ ಕಡೆ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದಾರೆ. ಸಂಗೀತಾ ಅವರ ಟೀಮ್‌ನಲ್ಲಿ ಇರೋದು ಅಷ್ಟೇನೂ ಬಲಿಷ್ಠರಲ್ಲದ ಪಡೆ. ಹೀಗಾಗಿ ಕಾರ್ತಿಕ್ ಮತ್ತು ವಿನಯ್ ಗೆಲ್ಲುವುದಕ್ಕಾಗಿ ಏನು ಬೇಕಾದರೋ ಮಾಡೋಕೆ ರೆಡಿ ಎನ್ನೋದು ಗೊತ್ತಿರೋ ವಿಚಾರ. ಇವತ್ತು ಟಾಸ್ಕ್‌ನಲ್ಲಿ ಅದೇ ಆಗಿದೆ. ಹಾಗಾಗಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಏಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಣ್ಣ ಮತ್ತು ಬಟ್ಟೆ ಟಾಸ್ಕ್‌ನಲ್ಲಿ ಬೆಳ್ಳಂಬೆಳಗ್ಗೆ ಗುದ್ದಾಟ ನಡೆದಿತ್ತು. ಅದರ ಪ್ರೊಮೋ ಕೂಡ ರಿಲೀಸ್ ಆಗಿತ್ತು. ಕಾರ್ತಿಕ್, ವಿನಯ್ ಮತ್ತು ಅವಿನಾಶ್ ನಡುವೆ ಭಾರೀ ಪೈಪೋಟಿಯೇ ಏರ್ಪಟ್ಟಿತ್ತು. ಒಬ್ಬರ ಮೇಲೆ ಒಬ್ಬರು ಬಿದ್ದು ಆಟ ಆಡುತ್ತಿದ್ದರು. ವಿನಯ್ ತುಂಬಾನೇ ಅಗ್ರೆಸಿವ್‌ ಆಗಿ ಆಟ ಆಡುತ್ತಿದ್ದರು. ಅವಿನಾಶ್ ಮೇಲೆ ಮುಗಿಬಿದ್ದಿದ್ದರು. ವಿನಯ್ ನಡೆ ಸ್ವತಃ ಅವರ ಟೀಮ್‌ಗೆ ಇಷ್ಟವಾಗಿರಲಿಲ್ಲ. ವಿನಯ್ ಆಡಿದ ಆಟ ಮತ್ತು ಅದಕ್ಕೆ ಕಾರ್ತಿಕ್ ನೀಡಿದ್ದ ಸಾಥ್ ಅನಾಹುತಕ್ಕೆ ಕಾರಣವಾಗಿದೆಯಂತೆ.

    ಬಲ್ಲ ಮೂಲಗಳ ಪ್ರಕಾರ ಕಾರ್ತಿಕ್ ಆಸ್ಪತ್ರೆ ಸೇರಿದ್ದಾರೆ. ವಿನಯ್ ಅವರ ಬೆರಳು ಮೂಳೆ ಮುರಿತವಾಗಿದೆ. ಅವಿನಾಶ್ ಕೂಡ ಏಟು ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ಇದೆಲ್ಲವೂ ಕಾಮನ್ ಆದರೂ, ಇವತ್ತು ಮತ್ತು ಈ ಹಿಂದೆ ಗಂಧರ್ವರು ಹಾಗೂ ರಾಕ್ಷಸರ ನಡುವಿನ ಟಾಸ್ಕ್ ಇಂಥದ್ದೇ ಜಗಳಕ್ಕೆ ಕಾರಣವಾಗಿತ್ತು. ಅವತ್ತು ಕೂಡ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಆಸ್ಪತ್ರೆ ಪಾಲಾಗಿದ್ದರು. ಈಗ ಕಾರ್ತಿಕ್ ಸರದಿಯಾಗಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ.

  • ದುಡುಕಿದ ‘ಚಾರ್ಲಿ’ ನಟಿ- ಮತ್ತೆ ಸ್ಪರ್ಧಿಗಳ ಕೆಂಗಣ್ಣಿಗೆ ಸಂಗೀತಾ ಗುರಿ

    ದುಡುಕಿದ ‘ಚಾರ್ಲಿ’ ನಟಿ- ಮತ್ತೆ ಸ್ಪರ್ಧಿಗಳ ಕೆಂಗಣ್ಣಿಗೆ ಸಂಗೀತಾ ಗುರಿ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಇದೀಗ ಸಂಗೀತಾ ಶೃಂಗೇರಿ (Sangeetha Sringeri) ಅವರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ, ಸಂಗೀತಾ ಅವರು ಮಾಡಿರುವ ಯಡವಟ್ಟು. ಇಡೀ ಮನೆಗೆ ದಿನಸಿ ಪಡೆಯಲು ಬಿಗ್ ಬಾಸ್ ಟಾಸ್ಕ್‌ವೊಂದನ್ನ ನೀಡಿದ್ದರು. ಅದರಲ್ಲಿ ಸಂಗೀತಾ ದುಡುಕಿದ್ದಾರೆ. ಇದರಿಂದ ಮನೆಮಂದಿಯೆಲ್ಲಾ ಉಪವಾಸ ಬೀಳುವ ಪರಿಸ್ಥಿತಿ ಎದುರಾಗಿದೆ.

    ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ (Sudeep) ಮನೆಯ ದಿನಸಿಗಳನ್ನು ಗಳಿಸುವ ಚಟುವಟಿಕೆಯ ಬಗ್ಗೆ ಹಲವು ಕಿವಿಮಾತುಗಳನ್ನು ಹೇಳಿದ್ದರು. ಹಿಂದಿನ ಹಲವು ವಾರಗಳಲ್ಲಿ ತಪ್ಪು ಲೆಕ್ಕಾಚಾರದಿಂದ, ಸಿಲ್ಲಿ ತಪ್ಪುಗಳಿಂದ ದಿನಸಿಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಟಿಪ್ಸ್ ಕೂಡ ಕೊಟ್ಟಿದ್ದರು. ಇದನ್ನೂ ಓದಿ:ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ತೃಪ್ತಿ ದಿಮ್ರಿ ನಯಾ ಫೋಟೋಶೂಟ್

    ಆಗ ಯಾರಿಗೂ ಸುದೀಪ್ ಯಾಕೆ ಇದನ್ನು ಹೇಳುತ್ತಿದ್ದಾರೆ ಎಂದು ಅರ್ಥವಾಗಿರಲಿಲ್ಲ. ಅವರ ಮಾತಿನ ಅರ್ಥ ಈಗ ಅಂದರೆ, ವಾರದ ಮೊದಲ ದಿನ ಅರ್ಥವಾಗಿದೆ. ಅದೂ ಕಾಲಮಿಂಚಿ ಹೋದಮೇಲೆ.. ಹಾಗಾದರೆ ಆಗಿದ್ದೇನು? ಬಿಗ್‌ಬಾಸ್ ದಿನಸಿ ಪಡೆದುಕೊಳ್ಳುವ ಕುರಿತು ಒಂದು ಟಾಸ್ಕ್ ನೀಡಿದ್ದಾರೆ. ನಾಲ್ಕು ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಝರ್ ಎದುರು ನಿಂತುಕೊಂಡಿದ್ದಾರೆ. ಬಿಗ್‌ಬಾಸ್ ಮನೆಗೆ ಬೇಕಾದ ದಿನಸಿಗಳನ್ನು ಮತ್ತು ಅವುಗಳ ಪ್ರಮಾಣವನ್ನು ಹೇಳುತ್ತ ಹೋಗುತ್ತಾರೆ. ಆಗ ಬೇಕಾದ ದಿನಸಿಗಳ ಹೆಸರು-ಪ್ರಮಾಣ ಬಂದಾಗ ಬಝರ್ ಒತ್ತಬೇಕು.

    ಈ ಟಾಸ್ಕ್ ಮೂಲಕ ಲಾಜಿಕ್ ಗೊತ್ತಾಗದೆ ಸದಸ್ಯರು ಯಡವಟ್ಟು ಮಾಡಿಕೊಂಡಿರುವಂತಿದೆ. ಪ್ರಮಾಣ ನೋಡಿಕೊಂಡು ಬಝರ್ ಒತ್ತುವಲ್ಲಿ ಎಡವಿರುವ ಸಂಗೀತಾ ಅಕ್ಕಿ ಐದು ಕೆಜಿ ಎಂದು ಬಿಗ್‌ಬಾಸ್ (Bigg Boss) ಘೋಷಿಸಿದ ತಕ್ಷಣ ಬಝರ್ ಒತ್ತಿಬಿಟ್ಟಿದ್ದಾರೆ. ಇದರಿಂದ ಇಡೀ ಮನೆ ಐದು ಕೆಜಿ ಅಕ್ಕಿಯಲ್ಲಿ ವಾರ ಕಳೆಯಬೇಕಾಗಿದೆ. ಜೊತೆಗೆ ಎಂಟು ಕೆಜಿ ಗೋದಿಹಿಟ್ಟು ಸಿಕ್ಕಿದೆ. ಉಳಿದ ಹಲವು ದಿನಸಿಗಳು ಒಂದು ಎರಡು ಕೆಜಿಗಳಷ್ಟೇ ದೊರಕಿವೆ.

    ಇಲ್ಲಿ ಎಲ್ಲರೂ ಅಹಂಕಾರದಿಂದಲೇ ಸಾಯ್ತಾರೆ. ಮನೆಗೆ ದಿನಸಿ ಬೇಕು ಎಂದು ಹೇಳಿ ಕಳುಹಿಸಿದ್ದೀನಿ ಎಂದು ಸಿಡಿದಿದ್ದಾರೆ ವಿನಯ್. ಈ ವೇಳೆ ತುಕಾಲಿ ಸಂತೋಷ್, ಹೊಟ್ಟೆ ಹಸಿವು ಕಂಟ್ರೋಲ್ ಮಾಡಿಕೊಂಡು ಬಿಡೋಣ ಎಂದು ಅಸಮಾಧಾನ ಹೊರಹಾಕಿದ್ದಾರೆ. ಹಸಿವಿನಿಂದಲೇ ಎಲ್ಲ ಗಲಾಟೆಗಳೂ ಶುರುವಾಗುವುದು ಎಂಬ ಕಿಚ್ಚನ ಮಾತಿಗೆ ವಾರದ ಮೊದಲ ದಿನವೇ ಪುರಾವೆ ಸಿಕ್ಕಿದೆ. ಇಡೀ ವಾರ ಇದೀಗ ಸಿಕ್ಕಿರೋ ಕಡಿಮೆ ದಿನಸಿಗಳಲ್ಲಿ ಬಿಗ್‌ಬಾಸ್ ಮನೆಯವರು ಹೇಗೆ ಕಳೆಯುತ್ತಾರೆ? ಇದಕ್ಕೆ ಏನು ಪರಿಹಾರ ಕಂಡುಕೊಳ್ಳುತ್ತಾರೆ? ಅಥವಾ ಬಿಗ್‌ಬಾಸ್ ಅವರ ಸಹಾಯಕ್ಕೆ ಬರುತ್ತಾರಾ? ಕಾಯಬೇಕಿದೆ.