Tag: ವಿನಯ್ ಕುಲಕರ್ಣಿ

  • ಮೋದಿಯ ಸುಳ್ಳಿನ ಕಂತೆ ನಡೆಯಲ್ಲ ಅನ್ನೋದಕ್ಕೆ ಈ ಉಪಚುನಾವಣೆಯೇ ಸಾಕ್ಷಿ: ವಿನಯ್ ಕುಲಕರ್ಣಿ

    ಮೋದಿಯ ಸುಳ್ಳಿನ ಕಂತೆ ನಡೆಯಲ್ಲ ಅನ್ನೋದಕ್ಕೆ ಈ ಉಪಚುನಾವಣೆಯೇ ಸಾಕ್ಷಿ: ವಿನಯ್ ಕುಲಕರ್ಣಿ

    ಧಾರವಾಡ: ಜನರಿಗೆ ಸುಳ್ಳು ಹೇಳಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, 5 ವರ್ಷದಲ್ಲಿ ಹೇಳಿದ ಮಾತಿನಂತೆ ನಡೆದುಕೊಂಡಿಲ್ಲವೆಂದು ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಕಿಡಿಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲದರ ಖಂಡಿಸಿ ಭಾರತ್ ಬಂದ್ ವೇಳೆ ಕೆಲವರು ತಮ್ಮ ಫೇಸ್ ಬುಕ್ ನಲ್ಲಿ ನೂರು ರೂಪಾಯಿ ಆದರೂ ನಾವು ಮೋದಿಗೆ ಓಟ್ ಹಾಕುತ್ತೇವೆ ಎಂದು ಹಾಕಿಕೊಂಡಿದ್ದರು. ಇದನ್ನು ಯಾವುದೇ ಸಾರ್ವಜನಿಕರು ಹಾಕಿಲ್ಲ. ಬಿಜೆಪಿಯವರೇ ಈ ರೀತಿ ಪೋಸ್ಟ್ ಗಳನ್ನು ಫೇಸ್‍ಬುಕ್ ನಲ್ಲಿ ಹಾಕಿದ್ದಾರೆ. ಬಿಜೆಪಿಯವರು ಸಾಮಾನ್ಯ ಜನರಲ್ಲ. ಮೋದಿಯ ಸುಳ್ಳಿನ ಕಂತೆ ಬಹಳ ದಿನ ನಡೆಯುವುದಿಲ್ಲ ಎಂದರು.

    ಜನರಿಗೆ ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಳೆದ 5 ವರ್ಷಗಳಲ್ಲಿ ತಾನು ಹೇಳಿದ್ದ ಮಾತಿನಂತೆ ಎಂದಿಗೂ ನಡೆದುಕೊಂಡಿಲ್ಲ. ಕೆಲವು ದಿನಗಳ ಹಿಂದೆ ರೈತರಿಂದ ಹೆಸರುಕಾಳಿಗೆ ಪ್ರತಿ ಕ್ವಿಂಟಾಲ್‍ಗೆ 6,800 ರೂಪಾಯಿಯಂತೆ ಖರೀದಿ ಮಾಡುತ್ತೇವೆಂದು ಹೇಳಿ, ಕೇವಲ 3 ರಿಂದ 4 ಕ್ವಿಂಟಾಲ್ ಖರೀದಿ ಮಾಡಿದ್ದರು. ಆದರೆ ಖರೀದಿ ಪ್ರಕ್ರಿಯಿಯನ್ನು ಏಕಾಏಕಿ ನಾಲ್ಕೇ ದಿನಕ್ಕೆ ನಿಲ್ಲಿಸಿದ್ದಾರೆ. ಇವರ ಸರ್ಕಾರದ ಅವಧಿಯಲ್ಲಿ ರೈತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ವೇಳೆ ಜನಾರ್ದನ ರೆಡ್ಡಿ ಕುರಿತು ಮಾತನಾಡಿದ ಅವರು, ಇಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಅವರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತಿದೆ. ಪ್ರಧಾನಿ ಮೋದಿಯವರು ಸಿಬಿಐ ಪ್ರಕರಣದಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಇಂತಹ ಹಲವು ಪ್ರಕರಣಗಳಲ್ಲಿ ರಫೇಲ್ ಕೂಡ ಒಂದು. ಈ ದೇಶದಲ್ಲಿ ಯಾರಿಗೂ ಸ್ವತಂತ್ರವೇ ಇಲ್ಲವೆಂಬುವಂತೆ ಆಗಿದೆ. ರೆಡ್ಡಿ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಗೊತ್ತಿಲ್ಲದೇ ಮಾತನಾಡಲ್ಲ. ಬಿಜೆಪಿ ವಿರೋಧ ಅಲೆಗೆ ಉಪಚುನಾವಣೆಯ ಫಲಿತಾಂಶಗಳೇ ಸಾಕ್ಷಿ. ನಮಗೆ ಉಪಚುನಾವಣೆಯಲ್ಲಿ ಅಭೂತಪೂರ್ವ ಜಯ ತಂದು ಕೊಟ್ಟ ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಬ್ಬರು ಜೀವ ತೆಗೆದ್ರು, ಇನ್ನೊಬ್ಬರು ಜೀವ ಉಳಿಸಿದ್ರು- ಇದು ಹಾಲಿ, ಮಾಜಿ ಸಚಿವರ ಒಳ್ಳೆ-ಕೆಟ್ಟ ಕೆಲಸದ ಸ್ಟೋರಿ

    ಒಬ್ಬರು ಜೀವ ತೆಗೆದ್ರು, ಇನ್ನೊಬ್ಬರು ಜೀವ ಉಳಿಸಿದ್ರು- ಇದು ಹಾಲಿ, ಮಾಜಿ ಸಚಿವರ ಒಳ್ಳೆ-ಕೆಟ್ಟ ಕೆಲಸದ ಸ್ಟೋರಿ

    ದಾವಣಗೆರೆ/ಧಾರವಾಡ: ಒಬ್ಬರು ಜೀವ ತೆಗೆಯುತ್ತಾರೆ, ಇನ್ನೊಬ್ಬರು ಜೀವ ಉಳಿಸ್ತಾರೆ. ಚೆನ್ನಾಗಿದ್ದವರನ್ನ ಸಾಯಿಸೇಬಿಟ್ರು ಕಾಂಗ್ರೆಸ್‍ನ ಮಾಜಿ ಸಚಿವ. ರಕ್ತದ ಮಡುವಲ್ಲಿ ಬಿದ್ದ ಮಹಿಳೆಯ ಜೀವ ಉಳಿಸಿದ್ದು ಹಾಲಿ ಸಚಿವ. ಇದು ಹಾಲಿ ಮತ್ತು ಮಾಜಿ ಸಚಿವರ ಒಳ್ಳೆ ಕೆಲಸ, ಕೆಟ್ಟ ಕೆಲಸದ ಸ್ಟೋರಿ.

    ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ರಸ್ತೆಯಲ್ಲಿ ಹೋಗ್ತಿದ್ದ ಬಡಪಾಯಿ ಜೀವ ತೆಗೆದರೆ ಅತ್ತ ಧಾರವಾಡದಲ್ಲಿ ಅಪಘಾತದಲ್ಲಿ ನರಳುತ್ತಿದ್ದ ಮಹಿಳೆಗೆ ಸಚಿವ ವಿನಯ್ ಕುಲಕರ್ಣಿ ಮರುಜೀವ ಕೊಟ್ಟಿದ್ದಾರೆ.

    ಕಾಂಗ್ರೆಸ್ ಸರ್ಕಾರದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿ ಸಚಿವ ಸ್ಥಾನ ಕಳೆದುಕೊಂಡ ಪರಮೇಶ್ವರ್ ನಾಯ್ಕ್ ಬಡ ಯುವಕನ ಜೀವ ತೆಗೆದಿದ್ದಾರೆ. ಡಿಸೆಂಬರ್ 4ರಂದು ಚಿತ್ರದುರ್ಗದ ಸಿಬಾರ್ ಬಳಿ ಪರಮೇಶ್ವರ್ ನಾಯ್ಕ್ ಇದ್ದ ಕಾರು 24 ವರ್ಷದ ಓಬಳೇಶ್ ಎಂಬ ಯುವಕನಿಗೆ ಗುದ್ದಿತ್ತು.

    ಆದ್ರೆ ಆ ಪುಣ್ಯಾತ್ಮ ಯುವಕನನ್ನ ಆಸ್ಪತ್ರೆಗೆ ಸೇರಿಸದೇ ಹೊರಟು ಹೋಗಿದ್ರು. ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಇವತ್ತು ಜೀವ ಬಿಟ್ಟಿದ್ದಾನೆ.

    ಅತ್ತ ಧಾರವಾಡದ ಹೈಕೋರ್ಟ್ ಬಳಿ ಅಪರಚಿತ ವಾಹನ ಮಹಿಳೆಗೆ ಡಿಕ್ಕಿ ಹೊಡೆದಿತ್ತು. ಅದೇ ದಾರಿಯಲ್ಲಿ ಬರ್ತಿದ್ದ ಸಚಿವ ವಿನಯ್ ಕುಲಕರ್ಣಿ ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಕಾರಿನಿಂದ ಕೆಳಗಿಳಿದು ತಮ್ಮ ಕಾರಿನಲ್ಲಿ ಮಹಿಳೆಯನ್ನ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

  • ವಿನಯ್ ಕುಲಕರ್ಣಿ ಬೆನ್ನು ಬಿಡದ ಕೊಲೆ ಕೇಸ್- ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

    ವಿನಯ್ ಕುಲಕರ್ಣಿ ಬೆನ್ನು ಬಿಡದ ಕೊಲೆ ಕೇಸ್- ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

    ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿಗೆ ಕಂಟಕವಾಗಿ ಪರಿಣಮಿಸಿದೆ.

    ಮಂತ್ರಿ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇವತ್ತು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ಇಂದು ಅಥಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜೊತೆಗೆ ಡಿವೈಎಸ್‍ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ರಾಜೀನಾಮೆಗೂ ಆಗ್ರಹಿಸಲಿದೆ.

    ಸಿಬಿಐ ಎಫ್‍ಐಆರ್‍ನಲ್ಲಿ ಜಾರ್ಜ್ ಮೊದಲ ಆರೋಪಿಯಾಗಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಇದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಪಕ್ಷದ ಕೆಲ ನಾಯಕರೊಂದಿಗೆ ಮಾಡಿರುವ ಷಡ್ಯಂತ್ರ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಕಂಗೆಟ್ಟಿರುವ ಅವರೆಲ್ಲಾ ತಮ್ಮ ವಿರುದ್ಧ ಸಂಚು ರೂಪಿಸಿದ್ದಾರೆ ಅಂತಾ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿನಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ.

  • ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ ಸಿಬಿಐಗೆ ಒಪ್ಪಿಸಲಿ: ಪ್ರಹ್ಲಾದ ಜೋಶಿ

    ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ ಸಿಬಿಐಗೆ ಒಪ್ಪಿಸಲಿ: ಪ್ರಹ್ಲಾದ ಜೋಶಿ

    ಧಾರವಾಡ: ಸರ್ಕಾರ ತಪ್ಪು ಮಾಡಿಲ್ಲದೇ ಇದ್ದರೆ ತಕ್ಷಣವೇ ಕಲ್ಲಿದ್ದಲು ಹಗರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಸಂಸದ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ.

    ಯಡಿಯೂರಪ್ಪ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ ದಾಖಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಎಸಿಬಿ ಸರ್ಕಾರದ ಕೈಗೊಂಬೆಯಾಗಿದೆ. ಎಸಿಬಿಯಿಂದ ಸತ್ಯ ಹೊರಬರುವುದಿಲ್ಲ. ಸಿಎಂ ಸಿದ್ದರಾಮಯ್ಯ ಲೋಕಾಯುಕ್ತರನ್ನು ಹಲ್ಲು ಕಿತ್ತು ಹಾವು ಮಾಡಿದ್ದಾರೆ. ಮುಖ್ಯಮಂತ್ರಿಗಳೇ ನಿಮಗೆ ನೈತಿಕತೆ ಅನ್ನೋದು ಏನಾದರೂ ಇದ್ದರೆ ರಾಜಿನಾಮೆ ನೀಡಿ ಎಂದು ಆಗ್ರಹಿಸಿದರು.

    ಸಚಿವ ವಿನಯ್ ಕುಲಕರ್ಣಿ ಕೈಲಾಗದವನು, ಕೈಲಾಗದವನು ಮೈ ಪರಚಿಕೊಂಡ ಎಂಬಂತಾಗಿದೆ. ವಿನಯ್ ಕುಲಕರ್ಣಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿನಯ್ ಕುಲಕರ್ಣಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದು ಮರೆತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಯಾಗಲು ವಿನಯ್ ಕುಲಕರ್ಣಿ ಅವರೇ ಕಾರಣ ಎಂದು ಜೋಶಿ ಆರೋಪಿಸಿದರು.

    ವಿನಯ್ ಕುಲಕರ್ಣಿ ಅವರು ಅಲ್ಪಸಂಖ್ಯಾತರ ಓಲೈಕೆಗಾಗಿ, ಹಿಂದೂಗಳ ವಿರೋಧವಾಗಿ ನಿಲ್ಲುತ್ತಿದ್ದಾರೆ. ನಿಜವಾಗಿಯೂ ನಿಮಗೆ ತಾಕತ್ತಿದ್ದರೆ ನಮ್ಮ ಮಹಾನಗರ ಪಾಲಿಕೆಗೆ ಬರುವ 137 ಕೋಟಿ ಪಿಂಚಣಿ ಹಣ ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದರು.

    ಇದನ್ನೂ ಓದಿ: 418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್‍ವೈ ದಾಖಲೆ ಬಿಡುಗಡೆ

    ರಾಹುಲ್ ಗಾಂಧಿ ತರಹ ಮಾತನಾಡಬೇಡಿ, ಯಾರೋ ಬರೆದು ಕೊಟ್ಟಿದ್ದನ್ನು ಓದಬೇಡಿ, ಸ್ವಂತ ಬುದ್ದಿ ಉಪಯೋಗಿಸಿ ಮಾತನಾಡಿ. ಸಚಿವ ದೇಶಪಾಂಡೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಹಗಲು ಕನಸು ಕಾಣುತ್ತಿದ್ದಾರೆ. ಮೊದಲು ಅವರು ಮುಂದಿನ ಚುನಾವಣೆಗೆ ಯಾವ ಪಕ್ಷದಲ್ಲಿ ಇರುತ್ತಾರೆ ಎಂದು ಜನರಿಗೆ ತಿಳಿಸಲಿ. ರಾಜ್ಯ ಸರ್ಕಾರ ಧಾರವಾಡದಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಇದು ಸಾಧನಾ ಸಮಾವೇಶ ಅಲ್ಲ, ಕಾಂಗ್ರೆಸ್ ಸಮಾವೇಶ ಎಂದು ಜೋಶಿ ದೂರಿದರು.

    \

     

  • ಸಚಿವ ವಿನಯ್ ಕುಲಕರ್ಣಿ ಹತ್ಯೆಗೆ ಸುಪಾರಿ!

    ಸಚಿವ ವಿನಯ್ ಕುಲಕರ್ಣಿ ಹತ್ಯೆಗೆ ಸುಪಾರಿ!

    -ಧಾರವಾಡಕ್ಕೆ ಬಂದಿದ್ದಾರಂತೆ ಶಾರ್ಪ್ ಶೂಟರ್ಸ್!

    ಧಾರವಾಡ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ್ ಕುಲಕುರ್ಣಿ ಕೊಲೆಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ರಾಜ್ಯದ ಭೂಗತ ರೌಡಿಯೊಬ್ಬನಿಗೆ ಸುಪಾರಿ ಕೊಡಲಾಗಿದೆ ಎನ್ನುವ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆಯಿಂದ ಸಚಿವರಿಗೆ ಸೂಚನೆ ನೀಡಲಾಗಿದೆ.

    ಖಚಿತ ಮೂಲಗಳ ಮಾಹಿತಿ ಆಧರಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಸೋಮವಾರ ಬೆಳಗ್ಗೆ ಈ ವಿಷಯವನ್ನು ಸಿಎಂ ಗಮನಕ್ಕೂ ತಂದಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ತೆಗೆದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ವಿದೇಶದಲ್ಲಿದ್ದುಕೊಂಡು ರಾಜ್ಯದಲ್ಲಿ ಚಟುವಟಿಕೆ ನಡೆಸುತ್ತಿರುವ ಇಬ್ಬರು ರೌಡಿಗಳ ಅಪರಾಧ ಚರಿತ್ರೆಯನ್ನ ಇಂಟರ್ ಪೋಲ್‍ಗೆ ರವಾನಿಸಿ ಅವರ ಬಂಧನಕ್ಕೆ ಪೂರಕವಾಗಿ ತಾಂತ್ರಿಕ ಕಾರ್ಯಾಚರಣೆ ನಡೆಸಲು ಡಿವೈಎಸ್‍ಪಿ ಮಟ್ಟದ ಅಧಿಕಾರಿಗೆ ಜವಾಬ್ದಾರಿ ನೀಡಲಾಗಿದೆ.

    1 ಕೋಟಿ ರೂ.ಗೆ ಡೀಲ್: ಒಂದು ಕೋಟಿ ರೂ. ಸುಪಾರಿ ಹಣ 2 ಕಂತುಗಳಲ್ಲಿ ಹವಾಲಾ ಮಾರ್ಗವಾಗಿ ಥೈಲ್ಯಾಂಡ್‍ನಲ್ಲಿರುವ ಭೂಗತ ರೌಡಿಯ ಕೈ ಸೇರಿದೆ ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಶಿವಮೊಗ್ಗದಿಂದ ಬಂದು ಬೆಂಗಳೂರಿನಲ್ಲಿ ಹೆಸರು ಮಾಡಿ ಸದ್ಯ ಥೈಲ್ಯಾಂಡ್‍ನಲ್ಲಿ ತಲೆ ಮರೆಸಿಕೊಂಡಿದ್ದಾನೆ ಆ ಭೂಗತ ಪಾತಕಿಗೆ 30 ಲಕ್ಷ, 70 ಲಕ್ಷ 2 ಹಂತಗಳಲ್ಲಿ ಸುಪಾರಿ ನೀಡಲಾಗಿದೆ ಎನ್ನಲಾಗಿದೆ.

    ಮುಂಬೈ ಮತ್ತು ಪುಣೆ ಮೂಲದ ಶಾರ್ಪ್ ಶೂಟರ್ಸ್ ಗೆ ಈ ಸುಪಾರಿ ನೀಡಲಾಗಿದೆ ಅಂತ ಹೇಳಲಾಗಿದ್ದು, ಅವರಲ್ಲಿ ಒಂದಿಬ್ಬರು ಧಾರವಾಡಕ್ಕೂ ಬಂದಿರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದೀಗ ಬೆಂಗಳೂರು, ಧಾರವಾಡದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

  • ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಹುತ್ತದಿಂದ ಹಾವುಗಳು ಹೊರಬರುತ್ತವೆ: ವಿನಯ್ ಕುಲಕರ್ಣಿ

    ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಹುತ್ತದಿಂದ ಹಾವುಗಳು ಹೊರಬರುತ್ತವೆ: ವಿನಯ್ ಕುಲಕರ್ಣಿ

    ಧಾರವಾಡ: ಚುನಾವಣೆ ಸಮೀಪಿಸುತ್ತಿದ್ದಂತೆ ಹುತ್ತದಿಂದ ಅನೇಕ ಹಾವುಗಳು ಹೊರ ಬರುತ್ತವೆ. ನೋಡೋಣ ಇನ್ನೂ ಯಾವ ಯಾವ ಹಾವುಗಳು ಬರುತ್ತವೆ ಎಂದು ಸಚಿವ ವಿನಯ್ ಕುಲಕರ್ಣಿ ನಟ ಉಪೇಂದ್ರ ಅವರ ರಾಜಕೀಯ ಪ್ರವೇಶಕ್ಕೆ ಟಾಂಗ್ ನೀಡಿದ್ದಾರೆ.

    ರಾಜಕೀಯಕ್ಕೆ ಬರೋದು ಅವರವರ ಆಸಕ್ತಿ ಅವರಿಗೆ ಬಿಟ್ಟಿದ್ದು. ಉಪೇಂದ್ರ ಸಿನಿಮಾದಲ್ಲಿ ಕ್ಲಿಕ್ ಆಗಿದ್ದಾರೆ. ರಾಜಕಾರಣದಲ್ಲೂ ಕ್ಲಿಕ್ ಆಗಬಹುದು. ಆದ್ರೆ ಉಪೇಂದ್ರ ಇದೂವರೆಗೂ ರೈತಪರ ಮತ್ತು ಬಡವರ ಪರ ಕೆಲಸಗಳನ್ನು ಮಾಡಿಲ್ಲ. ನೇರವಾಗಿ ರಾಜಕೀಯ ಪ್ರವೇಶ ಮಾಡ್ತಾಯಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ವಿನಯ್ ಕುಲಕರ್ಣಿ ಹೇಳಿದರು.

    ಇದನ್ನೂ ಓದಿ: ಸಿಎಂ ತರಾಟೆಗೆ ತೆಗೆದುಕೊಂಡ ಜನಾರ್ದನ ಪೂಜಾರಿ- ನಟ ಉಪೇಂದ್ರ ಬಗ್ಗೆ ಹೀಗಂದ್ರು

    ಇದನ್ನೂ ಓದಿ: ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ

    ಈ ಹಿಂದೆ ಹೊಸ ಪಕ್ಷ ಕಟ್ಟಿ ಚಿರಂಜಿವಿ ಅಂಥವರೇ ಸಕ್ಸಸ್ ಆಗಿಲ್ಲ. ಸಿನಿಮಾದವರ ಬಳಿ ದುಡ್ಡು ಇರುತ್ತೆ, ಹಾಗಾಗಿ ರಾಜಕೀಯಕಕ್ಕೆ ಬರ್ತಾ ಇದ್ದಾರೆ. ಉಪೇಂದ್ರ ಅಭಿಮಾನಿಗಳನ್ನು ಹೊಂದಿದ್ದಾರೆ. ಉಪೇಂದ್ರ ತಾವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತವೆ. ಉಪೇಂದ್ರ ಅವರ ಎಂಟ್ರಯಿಂದ ನಮ್ಮಲ್ಲಿ ಯಾವುದೇ ಬದಲಾವಣೆಗಳು ಆಗುವದಿಲ್ಲ ಅಂದ್ರು.

    ಇದನ್ನೂ ಓದಿ: ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಹೀಗಂದ್ರು

    https://youtu.be/JYm5AOfz8jM

  • ರಜೆ ಕೇಳಿದ ಕಂಡಕ್ಟರ್ ಕೈ ಮುರಿದ ಡಿಪೋ ಮ್ಯಾನೇಜರ್!

    ರಜೆ ಕೇಳಿದ ಕಂಡಕ್ಟರ್ ಕೈ ಮುರಿದ ಡಿಪೋ ಮ್ಯಾನೇಜರ್!

    ಧಾರವಾಡ: ಒಂದು ದಿನ ರಜೆ ಕೇಳಿದಕ್ಕೆ ಡಿಪೋ ಮ್ಯಾನೇಜರ್ ಬಸ್‍ನ ನಿರ್ವಾಹಕರಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

    ನಗರದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಮ್ಯಾನೇಜರ್ ದೀಪಕ್ ಜಾಧವ್, ಕಂಡೆಕ್ಟರ್ ಮಂಜುನಾಥ್ ಹುಕ್ಕೇರಿ ಎಂಬವರಿಗೆ ಹಲ್ಲೆ ಮಾಡಿದ್ದಾರೆ. ಲಾಠಿಯಿಂದ ಹೊಡೆದಿದ್ದರಿಂದ ಮಂಜುನಾಥ್ ಅವರ ಕೈ ಮುರಿದಿದೆ. ಸದ್ಯ ಮಂಜುನಾಥ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಂಜುನಾಥ್ ಅವರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಡಿಪೋ ಕಾರ್ಮಿಕರು ಇಂದು ಎಲ್ಲಾ ಬಸ್‍ಗಳನ್ನ ಬಂದ್ ಮಾಡಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹಲ್ಲೆಗೊಳಗಾದ ಕಂಡಕ್ಟರ್ ಆರೋಗ್ಯ ವಿಚಾರಿಸಿದ್ರು. ಬಳಿಕ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ತಿವಿ ಹೋರಾಟ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

    ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.