Tag: ವಿಧಿ ವಿಜ್ಞಾನ ಪ್ರಯೋಗಾಲಯ

  • ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

    ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ (FSL Report) ದರ್ಶನ್‌ ಗ್ಯಾಂಗ್‌ ಡಿಲೀಟ್‌ ಮಾಡಿದ್ದ ದೃಶ್ಯ ಸಿಕ್ಕಿದೆ.

    ದರ್ಶನ್ ಮತ್ತು ಇತರರಿಂದ ಸ್ವಾಧೀನಪಡಿಸಿಕೊಂಡ ರಕ್ತದ ಕಲೆಗಳಿದ್ದ ಬಟ್ಟೆ, ಚಪ್ಪಲಿಗಳನ್ನು, ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

    ಇಷ್ಟೇ ಅಲ್ಲದೇ ಡಿಲೀಟ್ ಮಾಡಿದ್ದ ಮೊಬೈಲ್, ಸಿಸಿಟಿವಿ ಡಿವಿಆರ್‌ಗಳನ್ನು ರಿಟ್ರೀವ್‌ ಮಾಡಲು ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿ ನೀಡಿತ್ತು. ಈ ಬಗ್ಗೆಯೂ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

     

    ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ?
    ದರ್ಶನ್ ಮನೆಯಲ್ಲಿದ್ದ ಲಾಠಿ, ರಿಪೀಸ್ ಪಟ್ಟಿ, ದೊಣ್ಣೆ, ಬೆಲ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿತ್ತು. ನಟಿ ಪವಿತ್ರಾಗೌಡ ಚಪ್ಪಲಿ ಮೇಲೆಯೂ ರಕ್ತದ ಕಲೆ ಸಿಕ್ಕಿತ್ತು. ಡಿಎನ್‌ಎ ಪರೀಕ್ಷೆಯಿಂದ ಪತ್ತೆಯಾದ ರಕ್ತ ಮಾದರಿ ರೇಣುಕಾಸ್ವಾಮಿಯದ್ದೇ ಎನ್ನುವುದು ದೃಢಪಟ್ಟಿದೆ. ಇದನ್ನೂ ಓದಿ: ದರ್ಶನ್ ಸೇರಿ 14 ಮಂದಿ ವಿರುದ್ಧ ಕೊಲೆ ಕೇಸ್ – ಅಂಕಿಗಳಲ್ಲಿ ಚಾರ್ಜ್‌ಶೀಟ್‌

    ರೇಣುಕಾ ಕೊಲೆ ಬಳಿಕ ದರ್ಶನ್, ಪವಿತ್ರಾಗೌಡ ಮಾತನಾಡಿದ್ದರು. ಆದರೆ ಸಿಕ್ಕಿಬೀಳುವ ಭಯದಲ್ಲಿ ಸಿಸಿಟಿವಿ ವಿಡಿಯೋವನ್ನು ದರ್ಶನ್ ಗ್ಯಾಂಗ್‌ ಡಿಲೀಟ್‌ ಮಾಡಿತ್ತು. ಸಿಸಿಟಿವಿ ಡಿವಿಆರ್‌ಗಳ ರಿಟ್ರೀವ್‌ ಮಾಡಿದಾಗ ದರ್ಶನ್ ಡಿಲೀಟ್ ಮಾಡಿಸಿದ ದೃಶ್ಯಗಳು ಪತ್ತೆಯಾಗಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಲ್ಲಿ ಆರೋಪಿ ದೀಪಕ್ ಕೂದಲು ಪತ್ತೆಯಾಗಿದೆ.

    ಇಡೀ ಪ್ರಕರಣ ತನಿಖೆಯಲ್ಲಿ ಹೈದರಾಬಾದ್ ಎಫ್‌ಎಸ್‌ಎಲ್‌ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

  • ಚಿತ್ರದುರ್ಗ ಆಶ್ರಮದ ತೊಟ್ಟಿಯಲ್ಲಿ ತಾಯಿ-ಮಗಳ ನಿಗೂಢ ಸಾವು – ಪ್ರರಣದ ಸುತ್ತ ಅನುಮಾನದ ಹುತ್ತ!

    ಚಿತ್ರದುರ್ಗ ಆಶ್ರಮದ ತೊಟ್ಟಿಯಲ್ಲಿ ತಾಯಿ-ಮಗಳ ನಿಗೂಢ ಸಾವು – ಪ್ರರಣದ ಸುತ್ತ ಅನುಮಾನದ ಹುತ್ತ!

    ಚಿತ್ರದುರ್ಗ: ಇಲ್ಲಿನ ಆಶ್ರಮದ (Chitradurga Ashram) ನೀರಿನ ತೊಟ್ಟಿಯಲ್ಲಿ ಬಿದ್ದು ತಾಯಿ-ಮಗಳು ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಮೇಲ್ನೋಟಕ್ಕೆ ಇದು ಸಹಜ ಸಾವು ಎನಿಸಿದ್ದರೂ, ಕೊಲೆ ಶಂಕೆ ವ್ಯಕ್ತವಾಗಿದೆ.

    ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿನ ತಿಪ್ಪೇರುದ್ರಸ್ವಾಮಿ ‌ಆಶ್ರಮದಲ್ಲಿ ಹಲವು ವರ್ಷಗಳಿಂದ ಈ ಆಶ್ರಮದ ಪೂಜಾರಿಯಾಗಿರುವ ಸುರೇಶ್ ಪತ್ನಿ ಗೀತಾ (42) ಹಾಗೂ ಪುತ್ರಿ ಪ್ರಿಯಾಂಕಾ (20) ಅವರ ಮೃತದೇಹಗಳು ಆಶ್ರಮದಲ್ಲಿರುವ ನೀರಿನ ತೊಟ್ಟಿಯಲ್ಲಿ ನಿನ್ನೆ (ಮಂಗಳವಾರ) ರಾತ್ರಿ ಪತ್ತೆಯಾಗಿವೆ. ನೋಡಲು ಸಹಜ ಸಾವಿನಂತೆ ಕಂಡುಬಂದರೂ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: 9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿದ್ದಕ್ಕೆ ಡಿಕೆಶಿ ಕೈ ಬಲಪಡಿಸಬೇಕಾ?: ಹೆಚ್‍ಡಿಡಿ ವಾಗ್ದಾಳಿ

    ಮೊದಲಿಗೆ ಗೀತಾ ಮಾನಸಿಕ ಖಿನ್ನತೆಯಿಂದ (Mental Depression) ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿತ್ತು. ಈ ವೇಳೆ ಆಶ್ರಮದ ಗೋಡೆ ಮೇಲೆ ತಾಯಿ-ಮಗಳ ಹೆಸರಲ್ಲಿ ಬರೆದಿಟ್ಟಿದ್ದ ಡೆತ್‌ ನೋಟ್‌ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಡೆತ್‌ ನೋಟ್‌ ಪರಿಶೀಲಿಸಿದ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ನಡುವೆ ಮೃತ ಗೀತಾಳ ಸಹೋದರ ಠಾಣೆಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

    ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ‌ಧರ್ಮೇಂದರ್‌ ಕುಮಾರ್‌ ಮೀನಾ, ಪ್ರಕರಣದ ತನಿಖೆ ಚುರುಕುಗೊಳಿಸಿದ್ದೇವೆ. ವಶಪಡಿಸಿಕೊಂಡಿರುವ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನತಂತ್ರದ ಹಬ್ಬ – ಚುನಾವಣಾ ಖರ್ಚು ವೆಚ್ಚ ಹೇಗೆ ನಡೆಯುತ್ತೆ? – ಈ ಬಾರಿ ಅಂದಾಜಿಸಿರುವ ವೆಚ್ಚ ಎಷ್ಟು?