Tag: ವಿಧಿವಶ

  • ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

    ಅಣ್ಣಾವ್ರ ಸಹೋದರಿ ನಾಗಮ್ಮ ವಿಧಿವಶ

    ಚಾಮರಾಜನಗರ: ನಟ ಸಾರ್ವಭೌಮ ಡಾ.ರಾಜ್‌ಕುಮಾರ್ (Dr.Rajkumar) ಅವರ ಸಹೋದರಿ ನಾಗಮ್ಮ ಅವರು ಇಂದು (ಆ.1) ವಿಧಿವಶರಾಗಿದ್ದಾರೆ.ಇದನ್ನೂ ಓದಿ: ಬೆಂಗಳೂರು | ರೈಲ್ವೇ ಪ್ಲಾಟ್​ಫಾರ್ಮ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಚಾಮರಾಜನಗರ ಜಿಲ್ಲೆಯ ಗಾಜನೂರಿನ ಸ್ವಗ್ರಹದಲ್ಲಿ ವಾಸಿಸುತ್ತಿದ್ದ ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    ರಾಜ್‌ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ಇಂದು ತಮ್ಮ 92ನೇ ವಯಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಇದನ್ನೂ ಓದಿ: ಪಬ್, ಹೋಟೆಲ್‌ಗಳಿಗೆ BBMP ಶಾಕ್ – 1 ವಾರದಲ್ಲಿ ಸ್ಮೋಕಿಂಗ್ ಝೋನ್ ನಿರ್ಮಿಸದಿದ್ರೆ ಲೈಸೆನ್ಸ್ ರದ್ದು!

  • ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

    ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

    ಹಾಸನ: ಶ್ರವಣಬೆಳಗೊಳ ಮಠದ ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ (Charukeerthi Bhattaraka Swamiji) ವಿಧಿವಶರಾಗಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಶ್ರೀ ಕ್ಷೇತ್ರ ಶ್ರವಣಬೆಳಗೊಳ (Shravanabelagola) ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಕಳೆದ 4 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಭಂಡಾರ ಭವನದಲ್ಲಿ ಬಿಪಿ, ಶುಗರ್ ಏರುಪೇರಿನಿಂದ ಅಸ್ವಸ್ಥಗೊಂಡು ಸ್ವಾಮೀಜಿ ಕೆಳಗೆ ಬಿದ್ದಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಅಂಜನಮೂರ್ತಿ ನಿಧನ

     ಕೂಡಲೇ ಮಠದಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್‌ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕ್ಷೇತ್ರ ಆಯ್ಕೆಯಲ್ಲಿ ಗೊಂದಲ: ಸಿದ್ದು ಪತ್ನಿ ಹೇಳಿದ್ದೇನು? ಪುತ್ರ ಹೇಳಿದ್ದೇನು?

  • ‘ಸಾಕ್ಷಾತ್ಕರ’ ಸಿನಿಮಾದ ನಾಯಕಿ ಜಮುನಾ ವಿಧಿವಶ

    ‘ಸಾಕ್ಷಾತ್ಕರ’ ಸಿನಿಮಾದ ನಾಯಕಿ ಜಮುನಾ ವಿಧಿವಶ

    ನ್ನಡದಲ್ಲಿ ಭೂಕೈಲಾಸ, ಸಾಕ್ಷಾತ್ಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಜಮುನಾ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 86ರ ವಯಸ್ಸಿನ ಹಿರಿಯ ನಟಿ ಹೈದರಾಬಾದ್ ನಲ್ಲಿ ನೆಲೆಸಿದ್ದರು. ವಯೋಸಹಜ ಕಾಯಿಲೆಗಳು ಅವರನ್ನು ಹೈರಾಣು ಮಾಡಿದ್ದವು. ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

    1953ರಲ್ಲಿ ತೆರೆಕಂಡ ಪುಟ್ಟಿಲ್ಲು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದವರು ಜಮುನಾ.  ಆನಂತರ ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ನಾನಾ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ದಕ್ಷಿಣದ ಅಷ್ಟೂ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಜೊತೆ ಭೂ ಕೈಲಾಸ ಮತ್ತು ಸಾಕ್ಷಾತ್ಕಾರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು

    ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಜಮುನಾ, ಎನ್.ಟಿ.ಆರ್. ಜಗ್ಗಯ್ಯ ಸೇರಿದಂತೆ ಆ ಕಾಲದ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದ್ದು. ದೊಂಗ ರಾಮುಟು, ಗುಂಡಮ್ಮ ಕಥ, ತೆನಾಲಿ ರಾಮಕೃಷ್ಣ ಹೀಗೆ ಇವರ ನಟನೆಯ ಸೂಪರ್ ಹಿಟ್ ಚಿತ್ರಗಳು. ಪುಟ್ಟಣ್ಣ ಕಣಗಾಲ್ ನಿರ್ದೇಶನ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ.

    ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಜಮುನಾ, 1980ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಅವರು 1989ರಲ್ಲಿ ರಾಜಮಂಡ್ರಿಗೆ ಎಂಪಿ ಆಗಿ ಆಯ್ಕೆಯಾದರು. 1990ರಲ್ಲಿ ಜನತಾ ಪಕ್ಷದ ಪರವಾಗಿಯೂ ಅವರು ಕೆಲಸ ಮಾಡಿದರು. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಯಶಸ್ಸಿ ಕಂಡ ಹಿರಿಯ ಜೀವವಿದು. ನಟಿಯ ಅಗಲಿಕೆಗೆ ಚಿತ್ರೋದ್ಯಮ ಕಂಬಿನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೀರಾಬೆನ್ ವಿಧಿವಶ- ತಾಯಿ ಮಾತುಗಳನ್ನು ಸ್ಮರಿಸಿಕೊಂಡು ಮೋದಿ ಭಾವುಕ ಟ್ವೀಟ್

    ಹೀರಾಬೆನ್ ವಿಧಿವಶ- ತಾಯಿ ಮಾತುಗಳನ್ನು ಸ್ಮರಿಸಿಕೊಂಡು ಮೋದಿ ಭಾವುಕ ಟ್ವೀಟ್

    ನವದೆಹಲಿ: ವಹೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಧಾನಿಯವರ ತಾಯಿ ಹೀರಾಬೆನ್ (Heeraben Modi) ಅವರು ವಿಧಿವಶರಾಗಿದ್ದು, ನರೇಂದ್ರ ಮೋದಿ (Narendra Modi) ಯವರು ಭಾವುಕರಾಗಿ ತಾಯಿ ಬಗ್ಗೆ ಬರೆದುಕೊಂಡಿದ್ದಾರೆ.

    ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ತಾಯಿಯಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ. ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಅಂತ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ನನ್ನ ತಾಯಿಯ 100 ನೇ ವರ್ಷದ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಜೀವನ ಮಾಡಿ. ಅಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಜೀವನವನ್ನು ಪರಿಶುದ್ಧತೆಯಿಂದ ಬದುಕಿರಿ, ಎಂದು ಅವರು ಹೇಳಿದ್ದರು ಅಂತ ಪ್ರಧಾನಿ ತಾಯಿಯ ಮಾತುಗಳನ್ನು ಸ್ಮರಿಸಿಕೊಂಡಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೀರಾಬೆನ್ ಅವರು ಬುಧವಾರ ಅಹಮ್ಮದಾಬಾದ್‍ನ ಮೆಹ್ತಾ ಆಸ್ಪತ್ರೆ (Mehta Hospital) ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಬಳಿಕ ಅವರ ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಇತ್ತ ಆಸ್ಪತ್ರೆಗೆ ದಾಖಲಾದಂದೇ ಪ್ರಧಾನಿಯವರು ತಾಯಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.

    ಇಂದು ಮುಂಜಾನೆ 3.39ರ ಸುಮಾರಿಗೆ ಹೀರಾಬೆನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ತಮ್ಮ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಳಿಸಿರುವ ಮೋದಿ, ತಾಯಿಯ ಅಂತಿಮ ದರ್ಶನ ಪಡೆಯಲಿದ್ದಾರೆ. ಇತ್ತ ಗಣ್ಯರು ಕೂಡ ಸಂತಾಪ ಸೂಚಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ನರೇಂದ್ರ ಮೋದಿಗೆ ಮಾತೃ ವಿಯೋಗ

    ಪ್ರಧಾನಿ ನರೇಂದ್ರ ಮೋದಿಗೆ ಮಾತೃ ವಿಯೋಗ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ತಾಯಿ ಹೀರಾಬೆನ್ ಮೋದಿ (Heeraben Modi) ವಿಧಿವಶರಾಗಿದ್ದಾರೆ.

    ಕಳೆದ ಜೂನ್ ನಲ್ಲಿ 100 ವರ್ಷ ಪೂರೈಸಿದ್ದ ಮೋದಿ ತಾಯಿ, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ 3.39ರ ಸುಮಾರಿಗೆ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ  ಕೊನೆಯುಸಿರೆಳೆದರು.

    ಬುಧವಾರ ಅಹಮದಾಬಾದ್‌ನ (Ahmedabad)ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಅವರ ಆರೋಗ್ಯ ಸುಧಾರಿಸಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿದ ಅಮಿತ್ ಶಾ

    ಹೀರಾಬೆನ್‌ ನಿಧನಕ್ಕೆ ಗಣ್ಯರೆಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಪ್ರಧಾನಿಯವರು ತಮ್ಮ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಳಿಸಿದ್ದು, ತಾಯಿಯ ಅಂತಿಮ ದರ್ಶನ ಪಡೆಯಲಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ  ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಾಲಿವುಡ್ ಖ್ಯಾತ ಬರಹಗಾರ-ನಿರ್ದೇಶಕ ರಾಬರ್ಟ್ ವಿನ್ಸೆಂಟ್ ಓ’ನೀಲ್ ವಿಧಿವಶ

    ಹಾಲಿವುಡ್ ಖ್ಯಾತ ಬರಹಗಾರ-ನಿರ್ದೇಶಕ ರಾಬರ್ಟ್ ವಿನ್ಸೆಂಟ್ ಓ’ನೀಲ್ ವಿಧಿವಶ

    ನ್ಯೂಯಾರ್ಕ್: ಹಾಲಿವುಡ್ ಚಿತ್ರರಂಗದ ಖ್ಯಾತ ಬರಹಗಾರ ಮತ್ತು ಎಂಜಲ್ ಚಿತ್ರದ ನಿರ್ದೇಶಕ ವಿನ್ಸೆಂಟ್ ಓ’ನೀಲ್ (91) ನಿಧನರಾಗಿದ್ದಾರೆ. ರಾಬರ್ಟ್ ನಿದ್ರಾವಸ್ಥೆಯಲ್ಲಿ ಇದ್ದಾಗಲೇ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

    ಓ’ನೀಲ್ ಅವರಿಗೆ ಲಾರಿ ಮತ್ತು ನಿಕೋಲ್ ಲಾಯ್ಡ್ ಇಬ್ಬರು ಅವಳಿ ಹೆಣ್ಣುಮಕ್ಕಳಿದ್ದು, ಲಾರಿ ಅವರ ಪತಿ ಆಂಡ್ರ್ಯೂ ಮತ್ತು ಮೊಮ್ಮಗಳು ಲಿಸಾ ಬಿಲ್, ಸಹೋದರ ರಾನ್ ಇವಿ, ಹಾಗೂ ಜೆಸ್ಸಿಕಾ, ಕ್ವಿನ್, ಸಾರಾ, ರಸ್ಸೆಲ್, ಜೆಸ್ ಏಳು ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ

    ಹಾಲಿವುಡ್-ಸೆಟ್ ವೈಸ್ ಸ್ಕ್ವಾಡ್ (1982), ದಿ ಬಾಲ್ಟಿಮೋರ್ ಬುಲೆಟ್ (1980), ಲೈಕ್ ಮದರ್ ಲೈಕ್ ಡಾಟರ್ (1969), ದಿ ಸೈಕೋ ಲವರ್ (1970), ಬ್ಲಡ್ ಮೇನಿಯಾ (1970), ವಂಡರ್ ವುಮೆನ್ (1973) ಮತ್ತು ಪ್ಯಾಕೊ (1975) ಹೀಗೆ ಹಾಲಿವುಡ್‍ನಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದ ಕೀರ್ತಿ ಇವರದ್ದು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

  • ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಆರ್.ಬಿ.ಪಾಟೀಲ್ ವಿಧಿವಶ

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಆರ್.ಬಿ.ಪಾಟೀಲ್ ವಿಧಿವಶ

    ಹುಬ್ಬಳ್ಳಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಿದ್ದ ಖ್ಯಾತ ವೈದ್ಯ ಆರ್.ಬಿ.ಪಾಟೀಲ್ (95) ಅವರು ಇಂದು ವಿಧಿವಶರಾಗಿದ್ದಾರೆ.

    ಆರ್.ಬಿ.ಪಾಟೀಲ್ ಅವರು ಕಳೆದ ಹಲವು ದಿನಗಳಿಂದ ಮೆದುಳು ರಕ್ತಸ್ರಾವ (brain hemorrhage) ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆವನ್ನು ಸ್ವಗ್ರಾಮ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕೌಲಗಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಮೂಲತಃ ವಿಜಯಪುರ ಜಿಲ್ಲೆ ಕೌಲಗಿ ಗ್ರಾಮದವರಾದ ಆರ್.ಬಿ.ಪಾಟೀಲ್ ಅವರು, ಮುಂಬೈನಲ್ಲಿ 1951ರಂದು ಎಂಬಿಬಿಎಸ್, ಇಂಗ್ಲೆಂಡ್‍ನಲ್ಲಿ ಎಫ್‍ಆರ್‍ಸಿಎಸ್ ಪದವಿಯನ್ನು 1956ರಲ್ಲಿ ಪಡೆದಿದ್ದರು. ಬಳಿಕ ಹುಬ್ಬಳ್ಳಿಯಲ್ಲಿ ಹಲವು ದಶಕಗಳ ಕಾಲ ಕೋ ಆಪರೇಟಿವ್ ಆಸ್ಪತ್ರೆ ನಡೆಸಿ ನಾಡಿನ ಮನೆ ಮಾತಾಗಿದ್ದರು.

    ಆರ್.ಬಿ.ಪಾಟೀಲ್ ಅವರು ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಆರಂಭಿದರು. ಈ ಮೂಲಕ ಉತ್ತರ ಕರ್ನಾಟಕ ಭಾಗದ ಮೊದಲ ಹಾಗೂ ಏಕೈಕ ಕ್ಯಾನ್ಸರ್ ಆಸ್ಪತ್ರೆಯ ಎನ್ನುವ ಖ್ಯಾತಿಯನ್ನು ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆ ಗಳಿಸಿತ್ತು. ಆರ್.ಬಿ. ಪಾಟೀಲ್ ಅವರು 25 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    ಆರ್.ಬಿ.ಪಾಟೀಲ್ ಅವರ ಸಾಧನೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹತ್ತು ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ. 1969ರಲ್ಲಿ ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಅಂದಿನ ರಾಷ್ಟ್ರಪತಿ ಜಾಕೀರ ಹುಸೇನ್ ಅವರು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ವಿಧಿವಶ

    ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ವಿಧಿವಶ

    ನವದೆಹಲಿ: ಬಾಲಿವುಡ್ ನಟ ರಾಜ್ ಕಪೂರ್ ಅವರ ಪತ್ನಿ ಕೃಷ್ಣ ರಾಜ್ ಕಪೂರ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಹಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕೃಷ್ಣಾ ರಾಜ್ ಕಪೂರ್(88) ಅವರು ಸೋಮವಾರ ಬೆಳಗಿನ ಜಾವ 5ರ ವೇಳೆಗೆ ಮೃತಪಟ್ಟಿದ್ದಾರೆ.

    ಕೃಷ್ಣಾರಾಜ್ ಕಪೂರ್ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ರವೀನಾ ಟಂಡನ್, ಕಪೂರ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ದೇವರು ಅವರ ಕುಟುಂಬಕ್ಕೆ ಕೃಷ್ಣ ಕಪೂರ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಅವರಿಗೆ ಶಾಂತಿ ದೊರಕಲಿ. ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ನನ್ನ ತಾಯಿಯು ಹೃದಯಾಘಾತದಿಂದ ಸುಮಾರು 5 ಗಂಟೆಗೆ ನಿಧನರಾದರು. ನಾವು ಅವರ ನಿಧನದಿಂದ ದುಖಿಃತರಾಗಿದ್ದೇವೆ ಎಂದು ಪುತ್ರ ರಣ್‌ಧೀರ್ ಕಪೂರ್ ಹೇಳಿದ್ದಾರೆ.

    ರಾಜ್ ಕಪೂರ್ ಅವರು ಕೃಷ್ಣಾ ಮಲ್ಹೋತ್ರ ಅವರನ್ನು 1946ರ ಮೇ ನಲ್ಲಿ ವಿವಾಹವಾಗಿದ್ದರು. ಇವರಿಗೆ ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  ರಣ್‌ಧೀರ್  ಕಪೂರ್, ರಿಷಿ ಕಪೂರ್, ರಾಜೀವ್ ಕಪೂರ್ ಮತ್ತು ರಿತು, ರಿಮಾ ಅವರನ್ನು ಕೃಷ್ಣಾ ಮಲ್ಹೋತ್ರಾ ಈಗ ಅಗಲಿದ್ದಾರೆ.

    ರಾಜ್ ಕಪೂರ್ ತಮ್ಮ 63ನೇ ವಯಸ್ಸಿನಲ್ಲಿ 1998ರ ಜೂನ್ 2 ರಂದು ನಿಧನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

    ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

    ನವದೆಹಲಿ: ಕ್ರಾಂತಿಕಾರಿ ಜೈನಮುನಿ ತರುಣ್ ಸಾಗರ್ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

    51 ವರ್ಷ ವಯಸ್ಸಿನ ಮುನಿ ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ ಆಶ್ರಮದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜಾಂಡೀಸ್ ಹಾಗೂ ಇತರ ಕೆಲ ಕಾಯಿಲೆಗಳಿಂದ ಬಳುತ್ತಿದ್ದ ಸಾಗರ್ ಅವರು, ಕಳೆದ 3 ವಾರಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀರಾ ಹದಗೆಟ್ಟಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸದೆ ಇದ್ದರು. ಜೊತೆಗೆ ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಅವರೇ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು.

    ಜೈನ ಸಮುದಾಯದಲ್ಲಿ ಅನುಯಾಯಿಗಳನ್ನು ಹೊಂದಿರುವ ಮುನಿ ತರುಣ್ ಸಾಗರ್ ಜಾಂಡೀಸ್ ನಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮುನಿಯ ಅಂತಿಮ ವಿಧಿ ವಿಧಾನಗಳು ಇಂದು ಉತ್ತರ ಪ್ರದೇಶದ ತರುಣಸಾಗರಂ ನಲ್ಲಿ ನಡೆಯಲಿದೆ. ಸದ್ಯ ಮುನಿಯವರ ಅಕಾಲಿಕ ನಿಧನಕ್ಕೆ ಕೇಂದ್ರ ಸಚಿವರು ಸೇರಿದಂತೆ ಗಣ್ಯರಿಂದ ಸಂತಾಪ ಸೂಚಿಸಿದ್ದಾರೆ.

    1967 ರ ಜೂನ್ 26ರಂದು ಮಧ್ಯ ಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜನಿಸಿದ ಪವನ್ ಕುಮಾರ್ ಜೈನ್ 1981 ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ತಮ್ಮ ಭಾಷಣಗಳ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಪತ್ನಿ ವಿಧಿವಶ

    ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಪತ್ನಿ ವಿಧಿವಶ

    ಬೆಂಗಳೂರು: ಕಡೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಪತ್ನಿ ಆರ್.ನಿರ್ಮಲಾ (60) ವಿಧಿವಶರಾಗಿದ್ದಾರೆ.

    ಕ್ಯಾನ್ಸರ್‍ನಿಂದ ಬಳಲುತ್ತಿದ್ದ ನಿರ್ಮಲಾ ಅವರನ್ನು ನಗರದ ಶಂಕರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ರಾಜಾಜಿನಗರ ನಿವಾಸದಲ್ಲಿ ನಾಳೆ ಬೆಳಗ್ಗೆ 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಳಿಕ ಚಿಕ್ಕಮಗಳೂರಿನ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ಅವರ ತೋಟದಲ್ಲಿ ಗುರುವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪುತ್ರಿಯನ್ನು ನಿರ್ಮಲಾ ಅಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv