Tag: ವಿಧಾನ ಸೌಧ

  • ಲಿಂಗಾಯತ ಪ್ರತ್ಯೇಕ ಧರ್ಮ ಗೊಂದಲ: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚರ್ಚೆ ಮಡೋಣ- ಪೇಜಾವರಶ್ರೀ

    ಲಿಂಗಾಯತ ಪ್ರತ್ಯೇಕ ಧರ್ಮ ಗೊಂದಲ: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚರ್ಚೆ ಮಡೋಣ- ಪೇಜಾವರಶ್ರೀ

    ಉಡುಪಿ: ನಾವು ಇಷ್ಟರವರೆಗೆ ಹಿಂದೂಗಳಾಗಿಯೇ ಇರಲಿಲ್ಲ ಅಂತ ಜಾಮ್ದಾರ್ ಹೇಳುತ್ತಾರೆ. ಜಾಮ್ದಾರ್ ಅವರ ಹೇಳಿಕೆ ಸರಿಯಲ್ಲ. ಎಲ್ಲಾ ಹಿಂದೂ ಸಮಾವೇಶದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯತರು, ವಿರಕ್ತಿ ಮಠಾಧೀಶರು ಪಾಲ್ಗೊಂಡಿದ್ದಾರೆ ಎಂದು ಪೇಜಾವರ ಮಠಾಧೀಶರು ಐಎಎಸ್ ಅಧಿಕಾರಿ ಜಾಮ್ದಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಐಎಸ್‍ಎಸ್ ಅಧಿಕಾರಿ ಜಾಮ್ದಾರರು ಹೇಳಿದ್ದೆಲ್ಲಾ ಸತ್ಯಕ್ಕೆ ವಿರುದ್ಧವಾದದ್ದು. ಲಿಂಗಾಯತರ ಮೇಲೆ ಪ್ರೀತಿಯಿಂದ ಇಷ್ಟೆಲ್ಲಾ ಹೇಳುತ್ತಿದ್ದೇನೆ. ಹಿಂದೂ ಧರ್ಮ ದುರ್ಬಲವಾಗಬಾರದು. ಕರ್ನಾಟಕದಲ್ಲಿ ಹಿಂದೂ ಧರ್ಮ ಉತ್ತಮ ರೀತಿಯಲ್ಲಿ ಬೆಂಬಲಿಸಿಕೊಂಡು ಬಂದಿದ್ದೀರಿ. ನನ್ನ ಕಾಳಜಿ, ಹೇಳಿಕೆಯಲ್ಲಿ ವೈಯಕ್ತಿಕ ಸ್ವಾರ್ಥ ಇಲ್ಲ, ನಾನೇನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ರು.

    ಈ ಬಗ್ಗೆ ಚರ್ಚೆಯಾಗಲಿ, ಜನವರಿ 18 ರ ನಂತರ ಆದರೆ ಬೆಂಗಳೂರಿನಲ್ಲಿ ಚರ್ಚೆಯಾಗಲಿ. ನಾನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೆ ಬರಲು ಸಿದ್ಧ. ಅದಕ್ಕೂ ಮೊದಲು ಚರ್ಚೆ ಆಗಬೇಕಾದರೆ ಉಡುಪಿಗೆ ಬನ್ನಿ ಅಂತ ವೀಳ್ಯ ಕೊಟ್ಟಿದ್ದಾರೆ. ಉಡುಪಿಯಲ್ಲಿ 1968 ರಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಸಿದ್ದಗಂಗಾಶ್ರೀ, ಆಗಿನ ಸುತ್ತೂರು ಶ್ರೀ ಭಾಗವಹಿಸಿದ್ದರು. ಜಾಮ್ದಾರ್ ಅವರ ಈ ಹೇಳಿಕೆಯಲ್ಲಿ ಸತ್ಯ ಇಲ್ಲ. ಹಿಂದೂ ಹೋರಾಟದಲ್ಲಿ ನಿಮ್ಮದು ಪ್ರಥಮ ಧ್ವನಿ ಅಂತ ಈವರೆಗೆ ಎಲ್ಲಾ ಮಠಾಧೀಶರು ಹೇಳಿದ್ದಾರೆ. ಈಗ ಮಾತ್ರ ಹೊಸದಾಗಿ ವಿವಾದ ಪ್ರಾರಂಭವಾಗಿದೆ. ಧರ್ಮ ಬೇರೆ ಎಂಬ ಚರ್ಚೆ ಯಾಕೆ ಆರಂಭವಾಗಿದೆ ಎಂದು ಖೇದ ವ್ಯಕ್ತಪಡಿಸಿದ್ರು.

    ಲಿಂಗಾಯತರು ಹಿಂದೂ ಧರ್ಮ ತೊರೆಯದಿರಿ ಎಂದು ನಾನು ಹೇಳುತ್ತಾ ಬಂದಿದ್ದೇನೆ. ನಾನು ಭಯದಿಂದ ಹೇಳಿದ ಹೇಳಿಕೆ ಇದಲ್ಲ. ಲಿಂಗಾಯತರ ಮೇಲೆ ಯಾವ ವಿರೋಧವೂ ಇಲ್ಲ. ಲಿಂಗಾಯತರು ನಮ್ಮವರು ಎಂಬುದಷ್ಟೇ ನನ್ನ ಕಾಳಜಿ. ಇದು ಸಲಹೆ, ಒತ್ತಡ ಅಲ್ಲ. ಕೇವಲ ನಿವೇದನೆಯಷ್ಟೇ ಎಂದು ಸ್ಪಷ್ಟಪಡಿಸಿದರು.

    ಬೌದ್ಧ-ಜೈನ ಧರ್ಮ ಪ್ರತ್ಯೇಕವಾದ ಕಾಲದಲ್ಲಿ ನಾನು ಇರಲಿಲ್ಲ. ಬಸವಣ್ಣ ಕೂಡಾ ಶಿವನೇ ಸರ್ವೋತ್ತಮ ಅಂತ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಹಲವು ಪಂಥಗಳಿವೆ. ಆದರೆ ನಮ್ಮಲ್ಲಿ ತತ್ವ, ಆಚರಣೆ ವಿಭಿನ್ನವಾದ್ರೂ ಹಿಂದೂ ಧರ್ಮದೊಳಗೆ ಎಲ್ಲರೂ ಇದ್ದೇವೆ ಎಂದು ಹೇಳಿದರು.

    ಬಸವಣ್ಣ ಪುನರ್ಜನ್ಮವನ್ನು ಒಪ್ಪಿದ್ದಾರೆ. ಯಾರಾದರೂ ಅಪರಾಧ ಮಾಡಿದರೆ ನಾಯಿ, ಹಂದಿಯಾಗಿ ಹುಟ್ಟುತ್ತಾರೆಂದು ಶರಣರ ವಚನದಲ್ಲಿದೆ. ಶಿವ ಸರ್ವೋತ್ತಮ ಎನ್ನಲು ಬಸವಣ್ಣ ಆಗಮವನ್ನು ಉಲ್ಲೇಖಿಸಿದ್ದಾರೆ, ಉದಾಹರಿಸಿದ್ದಾರೆ. ನಮ್ಮ ಶಿವ ಅವೈದಿಕ ಎನ್ನಲು ಆಧಾರವೇನು? ಸುಮ್ಮನೆ ಏನೋ ಹೇಳುವುದಲ್ಲ ಎಂದು ಸ್ವಾಮೀಜಿ ಗರಂ ಆದ್ರು.

     

  • ಬಿಎಸ್‍ವೈಗೆ ಸಂಕಷ್ಟ – ವಿಧಾನಸೌಧದಲ್ಲಿ ಹಣ ಸಿಕ್ಕ ಕೇಸ್‍ನಲ್ಲಿ ಎಫ್‍ಐಆರ್?

    ಬಿಎಸ್‍ವೈಗೆ ಸಂಕಷ್ಟ – ವಿಧಾನಸೌಧದಲ್ಲಿ ಹಣ ಸಿಕ್ಕ ಕೇಸ್‍ನಲ್ಲಿ ಎಫ್‍ಐಆರ್?

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿದಾನಸೌಧದಲ್ಲಿ ಸಿಕ್ಕ 4 ಕೋಟಿ ಹಣ ಸಂಬಂಧ ಎಫ್‍ಐಆರ್ ದಾಖಲಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

    ಯಡಿಯೂರಪ್ಪ ಆಪ್ತ ವಕೀಲ ಸಿದ್ಧಾರ್ಥ ಬಳಿ ಸಿಕ್ಕಿದ್ದ ಹಣಕ್ಕೆ ಸಂಬಂಧಿಸಿದಂತೆ ಎಸಿಬಿನಲ್ಲಿ ಎಫ್‍ಐಆರ್ ದಾಖಲಾಗೋ ಸಾಧ್ಯತೆ ಇದೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು.

    ಸಾಮಾಜಿಕ ಹೋರಾಟಗಾರ ರವಿಕೃಷ್ಣ ರೆಡ್ಡಿ ವಿಧಾನಸೌಧದಲ್ಲಿ ಸಿಕ್ಕ ಹಣದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಈ ದೂರಿನ ಅನ್ವಯ ಮುಂದಿನ ಕ್ರಮ ಕೈಗೊಳ್ಳೋ ನಿಟ್ಟಿನಲ್ಲಿ ಕೇಂದ್ರದಿಂದ ಎಸಿಬಿಗೆ ಪತ್ರ ಬಂದಿದೆ. ಈ ಹಿನ್ನಲೆ ಇಂದು ಅಥವಾ ನಾಳೆ ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    https://www.youtube.com/watch?v=e1lr_aCAWhk

  • ವಿಧಾನ ಸೌಧವೇನು ಗಂಗೋತ್ರಿಯಲ್ಲ, ಅಲ್ಲೂ ಭ್ರಷ್ಟಾಚಾರವಿದೆ: ಆರ್.ರಮೇಶ್ ಕುಮಾರ್

    ವಿಧಾನ ಸೌಧವೇನು ಗಂಗೋತ್ರಿಯಲ್ಲ, ಅಲ್ಲೂ ಭ್ರಷ್ಟಾಚಾರವಿದೆ: ಆರ್.ರಮೇಶ್ ಕುಮಾರ್

    ಧಾರವಾಡ: ವಿಧಾನ ಸೌಧವೇನು ಗಂಗೋತ್ರಿ ಅಲ್ಲ, ವಿಧಾನ ಸೌಧದಲ್ಲಿಯೂ ಭ್ರಷ್ಟಾಚಾರವಿದೆ ಎಂದು ಆರೋಗ್ಯ ಸಚಿವ ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

    ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸೂಟ್‍ಕೇಸ್ ಕೊಟ್ಟರೆ ಮಾತ್ರ ಕೆಲಸ ನಡೆಯೋದು ಎಂಬ ಹಂಪಿ ವಿವಿ ಕುಲಪತಿ ಮಲ್ಲಿಕಾ ಘಂಟಿ ಹೇಳಿಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಲ್ಲಿಕಾ ಘಂಟಿ ಅವರು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರ ಹೇಳಿಕೆಯನ್ನು ಕಡೆಗಣಿಸಲು ಆಗಲ್ಲ. ಆದರೆ ಆರೋಪದ ಬಗ್ಗೆ ದಾಖಲೆಗಳಿದ್ದರೆ ಒದಗಿಸಲಿ ಎಂದು ಹೇಳಿದರು.

    ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಪ್ರತಿಯೊಬ್ಬರಿಗೂ ತಮ್ಮ ವಿಚಾರ ಪ್ರತಿಪಾದಿಸುವ ಹಕ್ಕಿದೆ. ಆದರೆ ಸಮಾಜದ ಮುಖಂಡರೆಲ್ಲ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಬದಲಾಗಿ ಭಿನ್ನಾಭಿಪ್ರಾಯಕ್ಕಾಗಿ ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಹಿಂಸಾ ರೂಪದ ಪ್ರತಿಭಟನೆ ಯಾರೂ ಮಾಡಕೂಡದು ಎಂದು ಮನವಿ ಮಾಡಿಕೊಂಡರು.

  • ವಿಧಾನಸೌಧದಲ್ಲಿ ಮತ್ತೆ ಕಾಣಿಸಿಕೊಂಡ ಗೂಬೆ! ಬಿಸಿಬಿಸಿ ಚರ್ಚೆ ಆರಂಭ

    ವಿಧಾನಸೌಧದಲ್ಲಿ ಮತ್ತೆ ಕಾಣಿಸಿಕೊಂಡ ಗೂಬೆ! ಬಿಸಿಬಿಸಿ ಚರ್ಚೆ ಆರಂಭ

    ಬೆಂಗಳೂರು: ಕಾಗೆ, ಗೂಬೆ, ಹಾವು ಆಯ್ತು ಇದೀಗ ಮತ್ತೆ ವಿಧಾನಸೌಧದಲ್ಲಿ ಗೂಬೆ ಕಾಣಿಸಿಕೊಂಡಿದೆ. ಮೂರನೇ ಮಹಡಿಯಲ್ಲಿರುವ ಕ್ಯಾಬಿನೆಟ್ ಹಾಲ್ ಎದುರುಗಿರುವ ಸಿಎಂ ಕೊಠಡಿಯ ಬಾಗಿಲಲ್ಲಿ ಕೆಲಕಾಲ ಗೂಬೆ ಕುಳಿತಿದ್ದು ವಿಧಾನಸೌಧ ಸಿಬ್ಬಂದಿ ನಡುವೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

    ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ ಮೇಲೆ ಕಾಗೆ ಮರಿ ಕುಳಿಕುಕೊಂಡಿತ್ತು. ಕಾಕತಾಳೀಯ ಎಂಬಂತೆ ಕಾಗೆ ಮರಿ ಕುಳಿತ ಕೆಲ ದಿನಗಳ ಬಳಿಕ ಕಾರು ಬದಲಾಗಿತ್ತು.

    ಈ ಘಟನೆಯ ನಂತರ ಕೇರಳದ ಮಂಜೇಶ್ವರದಲ್ಲಿರುವ ನಡೆದ ಕಾರ್ಯಕ್ರಮದಲ್ಲಿ ಸಿಎಂ ಅವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಈ ಮಧ್ಯೆ ಗೂಬೆಯೂ ವಿಧಾನಸೌಧಕ್ಕೆ ಬಂದಿತ್ತು ತದನಂತರ ಇತ್ತೀಚೆಗೆ ವಿಧಾನ ಸೌಧ ಆವರಣದಲ್ಲಿ ನಾಗರ ಹಾವು ಕೂಡ ಬುಸುಗುಟ್ಟಿತ್ತು. ಇದೀಗ ಮತ್ತೆ ಗೂಬೆ ವಿಧಾನಸೌಧ ಆವರಣದೊಳಗೆ ಪ್ರವೇಶಿಸಿದೆ.

    ಇದನ್ನೂ ಓದಿ:ಕಾಗೆ ಹಿಕ್ಕೆ ಹಾಕಿದ ವಿಷಯದ ಬಗ್ಗೆ ಸಿಎಂ ಹೀಗಂದ್ರು!

    ಇತ್ತೀಚೆಗಷ್ಟೇ ಇಂಧನ ಸಚಿವ ಡಿಕೆ ಶಿವಕುವಾರ್ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಸಿಎಂ ಸಂಪುಟಕ್ಕೆ ಸಚಿವ ಸ್ಥಾನ ತುಂಬಲು ತಯಾರಿ ನಡೆಯುತ್ತಿದೆ. ಇವುಗಳ ಮಧ್ಯೆ ಇದೀಗ ಗೂಬೆ ಪ್ರವೇಶಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಶುಭವೋ ಅಥವಾ ಅಶುಭವೋ ಎನ್ನುವ ಬಗ್ಗೆ ವಿಧಾನಸೌಧದ ಸಿಬ್ಬಂದಿ ಮಾತನಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಕಾಗೆ, ಗೂಬೆ ಆಯ್ತು, ಈಗ ಹಾವು: ವಿಧಾನಸೌಧದಲ್ಲಿ ಬುಸ್ ಎಂದ ನಾಗರಹಾವು

    https://www.youtube.com/watch?v=hbmbFBDlBsQ

    https://www.youtube.com/watch?v=7kkETPn6ThA

  • ವಿಧಾನಸೌಧದಲ್ಲಿ ಸ್ಕಾರ್ಫ್ ಧರಿಸಿ ಕಲಾಪ ವೀಕ್ಷಿಸಲು ಬಂದಿದ್ದ ಮುಸ್ಲಿಂ ಯುವತಿಗೆ ತಡೆ

    ವಿಧಾನಸೌಧದಲ್ಲಿ ಸ್ಕಾರ್ಫ್ ಧರಿಸಿ ಕಲಾಪ ವೀಕ್ಷಿಸಲು ಬಂದಿದ್ದ ಮುಸ್ಲಿಂ ಯುವತಿಗೆ ತಡೆ

    ಬೆಂಗಳೂರು: ಸದನ ವೀಕ್ಷಣೆಗೆ ಸ್ಕಾರ್ಫ್ ಧರಿಸಿ ಬಂದಿದ್ದ ಯುವತಿಯನ್ನು ಮಾರ್ಷಲ್‍ಗಳು ಕೆಲಕಾಲ ಒಳಗಡೆ ಪ್ರವೇಶಿಸದಂತೆ ತಡೆದ ಘಟನೆ ಇಂದು ನಡೆದಿದೆ.

    ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಇಂದು ಸದನ ವೀಕ್ಷಣೆಗೆ ಎಂದು ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಹಿಜಾಬ್ ಧರಿಸಿದ್ದ ಯುವತಿಗೆ ಅಧಿಕಾರಿಗಳು ಕಪ್ಪು ಸ್ಕಾರ್ಫ್ ತೆಗೆಯುವಂತೆ ಒತ್ತಾಯಿಸಿದ್ರು ಎನ್ನಲಾಗಿದೆ. ಆದರೆ ಯುವತಿ ತನ್ನ ತಲೆಯ ಮೇಲಿನ ಸ್ಕಾರ್ಫ್ ತೆಗೆಯಲು ನಿರಾಕರಿಸಿದ್ದಾಳೆ. ಈ ಕಾರಣಕ್ಕಾಗಿ ಸುಮಾರು 15 ನಿಮಿಷ ಯುವತಿಗೆ ಗ್ಯಾಲರಿಗೆ ಪ್ರವೇಶ ನೀಡಿರಲಿಲ್ಲ.

    ಕೊನೆಗೆ ಪರೀಕ್ಷೆಗೆ ಒಳಪಡಿಸಿದ ನಂತರ ಯುವತಿಯನ್ನು ಸ್ಕಾರ್ಫ್ ಸಹಿತ ಪ್ರೇಕ್ಷಕರ ಗ್ಯಾಲರಿಗೆ ಪ್ರವೇಶ ನೀಡಲಾಯ್ತು.

     

  • ಕಾಗೆ, ಗೂಬೆ ಆಯ್ತು, ಈಗ ಹಾವು: ವಿಧಾನಸೌಧದಲ್ಲಿ ಬುಸ್ ಎಂದ ನಾಗರಹಾವು

    ಬೆಂಗಳೂರು: ಕಾಗೆ ಆಯ್ತು, ಗೂಬೆ ಆಯ್ತು, ಈಗ ಹಾವಿನ ಸರದಿ. ವಿಧಾನಸೌಧದ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡಿದೆ.

    ನಾರ್ಥ್ ಗೇಟ್‍ನ ಲಾನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಜನ ಸೇರಿದ ಕೂಡಲೇ ಹಾವು ಬಿಲದ ಒಳಗಡೆ ಸೇರಿಕೊಂಡಿತು.

    ಈ ಹಿಂದೆ ಸಿಎಂ ಸಿದ್ದರಾಮಯ್ಯನವರ ಫಾರ್ಚುನರ್ ಕಾರು ಮೇಲೆ ಕಾಗೆಯೊಂದು ಕುಳಿತುಕೊಂಡಿತ್ತು. ಎರಡು ವಾರದ ಹಿಂದೆ ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಈ ಮಧ್ಯೆ ಗೂಬೆಯೂ ಬಂದಿತ್ತು. ಈ ಮೂರು ವಿಚಾರದ ಬಗ್ಗೆ ವಿಧಾನಸೌಧದ ಸಿಬ್ಬಂದಿ ಮಾತನಾಡುತ್ತಿದ್ದರು. ಈಗ ಈ ಚರ್ಚೆಗೆ ನಾಗರಹಾವು ವಿಷಯ ಹೊಸದಾಗಿ ಸೇರ್ಪಡೆಯಾಗಿದೆ.

    ಇದನ್ನೂ ಓದಿ:ಕಾಗೆ ಹಿಕ್ಕೆ ಹಾಕಿದ ವಿಷಯದ ಬಗ್ಗೆ ಸಿಎಂ ಹೀಗಂದ್ರು!

    https://www.youtube.com/watch?v=hbmbFBDlBsQ

    https://www.youtube.com/watch?v=7kkETPn6ThA

    https://www.youtube.com/watch?v=uuT-NXjnhhU