Tag: ವಿಧಾನ ಸೌಧ

  • ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ಬೆಂಗಳೂರು: ವಿಧಾನಸೌಧದಲ್ಲಿರೋ ನಾಯಿಗಳ ರಕ್ಷಣೆ ಸಂಬಂಧ ಸರ್ಕಾರಕ್ಕೆ ವಿವರವಾದ ಮಾಹಿತಿ ಜೊತೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಸರ್ಕಾರ ನಮಗೆ ಅನುಮತಿ ಕೊಟ್ಟರೆ ನಾಯಿಗಳಿಗೆ ಪ್ರತ್ಯೇಕ ನಿರ್ವಹಣೆ ಮಾಡೋ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ 53 ನಾಯಿಗಳು (Dogs) ಇವೆ. ನಾಯಿಗಳು ವಿಧಾನಸೌಧದ ಒಳಗೆ ಬಾರದಂತೆ ತಡೆಯಲು ಗೇಟ್ ವ್ಯವಸ್ಥೆ ಇಲ್ಲ. ಶಾಸಕರು ವಾಕಿಂಗ್ ಮಾಡಬೇಕಾದ್ರೆ, ಜನರು ವಿಸಿಟ್ ಮಾಡಿದಾಗ ತೊಂದರೆ ಆಗ್ತಿದೆ. ಹೀಗಾಗಿ ನಾವು ಅವುಗಳ ರಕ್ಷಣೆಗೆ ಶೆಡ್ ನಿರ್ಮಾಣ ಮಾಡೋ ಪ್ಲ್ಯಾನ್ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    ಖಾಸಗಿ ಎಸ್‌ಜಿಒಗೆ ಕೊಟ್ಟು ಇವುಗಳಲ್ಲಿ ಸಾಕುವ ವ್ಯವಸ್ಥೆ ಮಾಡುವ ತೀರ್ಮಾನವಾಗಿ ಚರ್ಚೆ ಆಗಿವೆ.ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನ ಸರ್ಕಾರಕ್ಕೆ ರವಾನೆ ಮಾಡಿದ್ದೇವೆ. ಸರ್ಕಾರ ಅದಕ್ಕೆ ಒಪ್ಪಿಗೆ ಕೊಟ್ಟರೆ ಅನುಷ್ಟಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.

  • ಸರ್‌, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್‌ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?

    ಸರ್‌, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್‌ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?

    – ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಈಗಿನಿಂದಲೇ ಸಿದ್ಧತೆ
    – ಮಾರ್ಚ್‌ 6ವರೆಗೆ ಆರೋಪಿಗಳು ಪೊಲೀಸ್‌ ಕಸ್ಟಡಿಗೆ

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan Zindabad) ಪರ ಘೋಷಣೆ ಕೂಗಿ ಬಂಧನಕ್ಕೆ ಒಳಗಾದ ಬ್ಯಾಡಗಿ ಮೆಣಸಿಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿಪುಡಿ (Mohammed Nashipudi) ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿರುವ ವಿಚಾರ ಪೊಲೀಸ್‌ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

    ಹೌದು. ಧ್ವನಿ ಪರೀಕ್ಷೆಗೆ (Voice Test) ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಮಯದಲ್ಲಿ ಪೊಲೀಸರ ಮುಂದೆ ನಾಶಿಪುಡಿ, ಸರ್‌ ನಾನು ನೂರಾರು ಕೋಟಿ ರೂ.ಗೆ ಬಾಳ್ತೀನಿ. ನಾನು ಪಾಕ್‌ ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.  ಇದನ್ನೂ ಓದಿ: ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ನಾಸೀರ್‌ ಹುಸೇನ್‌ ಬೆಂಬಲಿಗನಾಗಿದ್ದ ನಾಶಿಪುಡಿ, ಮುಂದಿನ ಬಾರಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ (Byadgi Vidhan Sabha Constituency) ಸ್ಪರ್ಧಿಸಲು ಈಗಿನಿಂದಲೇ ಸಿದ್ಧತೆ ಸಹ ನಡೆಸಿದ್ದ. ನಾಶಿಪುಡಿ ಕುಟುಂಬ ಸುಮಾರು 50 ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡಿಕೊಂಡು ಬಂದಿದೆ. ಆದರೆ ವಿಧಾನಸೌಧದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಎ1 ಆರೋಪಿಯಾಗಿ ಮಹಮ್ಮದ್ ಶಫಿ ನಾಶಿಪುಡಿ ಅರೆಸ್ಟ್ ಆಗಿದ್ದಾನೆ.

    3 ದಿನ ಪೊಲೀಸ್‌ ಕಸ್ಟಡಿಗೆ:
    ಕೋರಮಂಗಲದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಬಂಧಿತ ಮೂವರನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿ ಆದೇಶ ನೀಡಿದ್ದಾರೆ. ಮಾರ್ಚ್ 6 ರವರೆಗೂ ಕಸ್ಟಡಿಗೆ ಪಡೆದಿರುವ ವಿಧಾನಸೌಧ ಪೊಲೀಸರು ಮೂವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್‌ ಖರ್ಗೆ

     

    ಬಂಧಿತ ಮೂವರ ಪೈಕಿ ನಾಶೀಪುಡಿ, ಮುನಾವರ್ ಸ್ನೇಹಿತರಾಗಿದ್ದರೆ ಮಹಮ್ಮದ್ ಇಲ್ತಾಜ್‌ಗೂ ಇಬ್ಬರು ಆರೋಪಿಗಳಿಗೂ ಪರಿಚಯವಿಲ್ಲ. ಬಂಧಿತ ಮೂವರ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಈಗ ಮುಂದಾಗಿದ್ದಾರೆ.

    ಎಫ್‌ಎಸ್‌ಎಲ್‌ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದು ದೃಢಪಡುತ್ತಿದ್ದಂತೆ ವಿಧಾನಸೌಧ ಪೊಲೀಸರು 40ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ 15 ಮಂದಿ ಧ್ವನಿಯ ಮಾದರಿಯನ್ನು ಸಂಗ್ರಹಿಸಿದ್ದರು. ಸೋಮವಾರ ಮಧ್ಯಾಹ್ನ ಪೊಲೀಸರ ಕೈಗೆ ಎಫ್‌ಎಸ್‌ಎಲ್‌ ವರದಿ ಸೇರುತ್ತಿದ್ದಂತೆ ಘೋಷಣೆ ಕೂಗಿದ ಮೂವರನ್ನು ಬಂಧಿಸಲಾಗಿದೆ.

     

    ಸದ್ಯ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪೂರ್ವ ಪರ ಏನು? ಅವರ ಉದ್ದೇಶ ಏನಾಗಿತ್ತು? ಈ ವೇಳೆ ಬೇರೆ ಯಾರಾದರೂ ಇವರಿಗೆ ಬೆಂಬಲ ನೀಡಿದ್ರಾ? ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಆಕಸ್ಮಿಕವೇ? ಅಥವಾ ಉದ್ದೇಶ ಪೂರ್ವಕವೇ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ..

    ಬಂಧನಕ್ಕೆ ಒಳಗಾದವರು ಯಾರು?
    * ಎ1- ಮೊಹಮ್ಮದ್‌ ಶಾಫಿ ನಾಶಿಪುಡಿ: 45 ವರ್ಷ, ಬ್ಯಾಡಗಿ
    * ಎ2- ಮುನಾವರ್ ಅಹ್ಮದ್ : 29 ವರ್ಷ, ಜಯಮಹಲ್, ಬೆಂಗಳೂರು
    * ಎ3- ಮೊಹಮ್ಮದ್‌ ಇಲ್ತಾಜ್; 31 ವರ್ಷ, ಕಿಶಾನ್‌ಗಂಜ್, ದೆಹಲಿ

     

  • ಪರಿಷತ್ ನೂತನ ಸದಸ್ಯರಾಗಿ ಮೂವರು ನಾಯಕರಿಂದ ಪ್ರಮಾಣ ವಚನ ಸ್ವೀಕಾರ

    ಪರಿಷತ್ ನೂತನ ಸದಸ್ಯರಾಗಿ ಮೂವರು ನಾಯಕರಿಂದ ಪ್ರಮಾಣ ವಚನ ಸ್ವೀಕಾರ

    ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ ನೂತನ ಸದಸ್ಯರಾಗಿ (Vidhaan Parishad Members) ನಾಮ ನಿರ್ದೇಶನ ಗೊಂಡಿರುವ ಮಾಜಿ ಸಚಿವರಾದ ಎಂ.ಆರ್ ಸೀತಾರಾಂ, ಉಮಾಶ್ರೀ ಹಾಗೂ ಮುಖಂಡ ಹೆಚ್.ಪಿ ಸುದಾಮ್ ದಾಸ್ ಅವರಿಂದು ಪ್ರಮಾಣವಚನ ಸ್ವೀಕರಿಸಿದರು.

    ವಿಧಾನಸೌಧ (Vidhaan Soudha) ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಸಮ್ಮುಖದಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಬಿಎಲ್ ಸಂತೋಷ್ ಟಾನಿಕ್ – ವಲಸಿಗರ ಪರ ಬ್ಯಾಟಿಂಗ್

    ಈ ಸಂದರ್ಭದಲ್ಲಿ ಸಭಾಪತಿ ಹೊರಟ್ಟಿ ನೂತನ ಸದಸ್ಯರಿಗೆ ಸಂಪ್ರದಾಯದಂತೆ ವಿಧಾನಪರಿಷತ್ತಿನ ನಡಾವಳಿ ಪುಸ್ತಕ ಒಳಗೊಂಡ ಸೂಟ್ ಕೇಸ್ ನೀಡಿ ಶುಭ ಹಾರೈಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನೂತನ ಸದಸ್ಯರಿಗೆ ಹೂಗುಚ್ಚ ನೀಡಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಇದನ್ನೂ ಓದಿ: BJP ಸ್ಥಿರ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ – ತೇಜಸ್ವಿ ಸೂರ್ಯ

    ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು, ಹಲವು ಶಾಸಕರು ಭಾಗವಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು: ಬಸವರಾಜ ಹೊರಟ್ಟಿ

    ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು: ಬಸವರಾಜ ಹೊರಟ್ಟಿ

    ಧಾರವಾಡ: ಒಂದು ಮಠದ ಸ್ವಾಮೀಜಿ ಎಂದರೆ ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರು. ಮೊನ್ನೆ 8 ಸ್ವಾಮೀಜಿಗಳು ವಿಧಾನಸೌಧಕ್ಕೆ ಬಂದಿದ್ದರು. ಆದರೆ ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು ಎಂದು ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

    ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು ಸ್ವಾಮೀಜಿಗಳನ್ನು ರಾಜಕಾರಣಕ್ಕೆ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ವಿಧಾನಸೌಧಕ್ಕೆ ಬರುವಂತಾಗಬಾರದು. ಮಠ ಬಿಟ್ಟು ಹೊರಬರುವುದರಿಂದ ಏನಾಗುತ್ತದೆ ಎಂಬ ಅರ್ಥದಲ್ಲಿ ನಡ್ಡಾ ಅವರು ಹೇಳಿರಬಹುದು ಎಂದರು. ಇದನ್ನೂ ಓದಿ: ಮೋದಿ ಬಂದ್ಮೇಲೆ ದೇಶ ಅಭಿವೃದ್ಧಿಯಾಗಿಲ್ಲ, ನಾವು ಹುಟ್ಟುವ ಮುಂಚೆಯೇ ಆಗಿದೆ: ಹೆಚ್‌ಡಿಕೆ

    ಮಠದಲ್ಲಿ ರಾಜಕಾರಣ ಸೇರಬಾರದು ಎಂದು ನಾನು ಹೇಳಿದ್ದೇನೆ. ಆದರೆ, ಅದನ್ನು ಎಲ್ಲರೂ ಕೇಳಬೇಕಲ್ಲ. ಎಲ್ಲ ವಿಷಯಗಳು ಕೆಲ ಮಠಗಳಲ್ಲೇ ಹುಟ್ಟಿಕೊಳ್ಳುತ್ತವೆ. ಎಲ್ಲ ಮಠಗಳು ಹಾಗೇ ಇಲ್ಲ. ಆದರೆ, ಕೆಲ ಮಠಗಳಲ್ಲಿ ಮಾತ್ರ ಬೇರೆ ಬೇರೆ ವಿಷಯಗಳು ಹುಟ್ಟಿಕೊಳ್ಳುತ್ತವೆ ಎಂದ ಅವರು, ನಮಗೆ ಮಾದರಿ ಎಂದರೆ ಸ್ವಾಮೀಜಿಗಳು. ಅವರು ಇನ್ನೊಬ್ಬರಿಗೆ ಮಾದರಿಯಾಗಬೇಕು. ರಾಜಕಾರಣ ಇವತ್ತು ಕಲುಷಿತವಾಗಿದೆ. ಮತ ಹಾಕುವವರು ಎಲ್ಲಿಯವರೆಗೆ ಬುದ್ಧಿವಂತರಾಗುವುದಿಲ್ಲವೋ ಅಲ್ಲಿಯವರೆಗೆ ಈ ದೇಶದಲ್ಲಿ ಒಳ್ಳೆಯ ಸರ್ಕಾರ ಬರುವುದಿಲ್ಲ ಎಂದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡಿದ ಚೀನಾ – ಅಮೆರಿಕ ಕಳವಳ

  • ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಚಿವರಿಂದ ಸ್ಥಳ ಪರಿಶೀಲನೆ

    ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಚಿವರಿಂದ ಸ್ಥಳ ಪರಿಶೀಲನೆ

    ಬೆಂಗಳೂರು: ಜಗಜ್ಯೋತಿ ಬಸವೇಶ್ವರರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ವಿಧಾನಸೌಧದ ಎದುರು ಪ್ರತಿಷ್ಠಾಪಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಕಂದಾಯ ಸಚಿವ ಆರ್. ಅಶೋಕ್ (R Ashok) ಮತ್ತು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ (CC Patil) ಅವರು ಶನಿವಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಲನಕ್ಷೆ ಪರಿಶೀಲಿಸಿ, ಸ್ಥಳಕ್ಕೆ ಜಂಟಿಯಾಗಿ ಭೇಟಿ ನೀಡಿ ತಪಾಸಣೆ ನಡೆಸಿದರು.

    ಬಸವಣ್ಣನವರ ಮತ್ತು ಕೆಂಪೇಗೌಡರ ಪ್ರತಿಮೆಗಳ ಮಾದರಿಯನ್ನು ಸಿದ್ಧಪಡಿಸಿ ವಿಧಾನಸೌಧದ (Vidhan Soudha) ಮುಂಭಾಗದಲ್ಲಿ ಸೂಕ್ತ ಸ್ಥಳ ನಿಗದಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿತ್ತು. ಅದರಂತೆ ಅವರು ಇಂದು ಸಿದ್ಧಪಡಿಸಿಕೊಂಡು ತಂದಿರುವ ನೀಲನಕ್ಷೆ ಮತ್ತು ಪ್ರತಿಮೆಗಳ ಮಾದರಿಗಳನ್ನು ಉಭಯ ಸಚಿವರೂ ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

    ಈ ಪ್ರತಿಮೆಗಳನ್ನು ಆದಷ್ಟು ಶೀಘ್ರವೇ ನಿರ್ಮಿಸಿ, ವಿಧಾನಸೌಧದ ಮುಂಭಾಗ ಈ ತಿಂಗಳಿನಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಉಭಯ ಸಚಿವರು ಸೂಚಿಸಿದರು.

    ತಲಾ 4 ಮೀ. ಎತ್ತರದ ಈ ಎರಡು ಪ್ರತಿಮೆಗಳನ್ನು ಅಶ್ವಾರೂಢ ಭಂಗಿಗಳಲ್ಲಿ ಸ್ಥಾಪಿಸಬೇಕು ಮತ್ತು ಸುತ್ತಮುತ್ತ ಹಸಿರು ಸೂಸುವ ಪರಿಸರವನ್ನು ಕಾಪಾಡಿಕೊಳ್ಳಬೇಕೆಂದು ಸಚಿವ ಅಶೋಕ್ ತಿಳಿಸಿದರು. ಇದನ್ನೂ ಓದಿ: ಗಣರಾಜೋತ್ಸವ ಪರೇಡ್‍ನಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗುತ್ತೆ: ಸಿಎಂ

    ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೃಷ್ಣಾರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆಯಲ್ಲಿದ್ದರು. ಇದನ್ನೂ ಓದಿ: ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡದಿದ್ರೆ ಕೇಂದ್ರ ಸಚಿವರಿಗೆ ಘೇರಾವ್‌ ಹಾಕ್ತೇವೆ: ಡಿಕೆ ಸುರೇಶ್‌ ಎಚ್ಚರಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ಪುಗೆ ನಾಳೆ ‘ಕರ್ನಾಟಕ ರತ್ನ’ ಪ್ರದಾನ: ಕಾರ್ಯಕ್ರಮದ ಫುಲ್ ಡಿಟೇಲ್ಸ್

    ಅಪ್ಪುಗೆ ನಾಳೆ ‘ಕರ್ನಾಟಕ ರತ್ನ’ ಪ್ರದಾನ: ಕಾರ್ಯಕ್ರಮದ ಫುಲ್ ಡಿಟೇಲ್ಸ್

    ಪುನೀತ್ ರಾಜ್ ಕುಮಾರ್ ಅವರಿಗೆ ನಾಳೆ ಕರ್ನಾಟಕ ರತ್ನ  (Karnataka Ratna) ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಅತಿಥಿಗಳಾಗಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತೆಲುಗಿನ ಸ್ಟಾರ್ ನಟ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ಸುಧಾಮೂರ್ತಿ ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ವಿಧಾನ ಸೌಧ ಮುಂಭಾಗದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ಸಂಜೆ 4 ಗಂಟೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಇಂದು ಪುನೀತ್ ಮನೆಗೆ ಆಗಮಿಸಿದ್ದ ಸಚಿವ ಆರ್. ಅಶೋಕ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಬೆಂಗಳೂರಿನ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರೆ, ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಹಾಗೂ ವಿಧಾನ ಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೆರೆ ಅವರು ಗೌರವ ಉಪಸ್ಥಿತಿ ಇರಲಿದೆ. ಸಚಿವರಾದ ಆರ್. ಅಶೋಕ್ ಹಾಗೂ ವಿ ಸುನೀಲ್ ಕುಮಾರ್ ಅವರ ಘನ ಉಪಸ್ಥಿತಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಜಾ ಮಾಡೋದಾದ್ರೆ ಕಾಂಗ್ರೆಸ್‍ನವರನ್ನೇ ಮಾಡಬೇಕು: ಆರ್ ಅಶೋಕ್

    ವಜಾ ಮಾಡೋದಾದ್ರೆ ಕಾಂಗ್ರೆಸ್‍ನವರನ್ನೇ ಮಾಡಬೇಕು: ಆರ್ ಅಶೋಕ್

    ಬೆಂಗಳೂರು: ಕಾಂಗ್ರೆಸ್‍ನವರಿಗೆ ಮಾತನಾಡುವ ನೈತಿಕತೆಯೇ ಇಲ್ಲ. ವಜಾ ಮಾಡೋದಾದರೆ ಕಾಂಗ್ರೆಸ್ ಅವರನ್ನೇ ಮಾಡಬೇಕು ಎಂದು ಸಚಿವ ಆರ್. ಅಶೋಕ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಳಿನಾ ಕೇಳಿ ಖಾರ ಅರಿಯೋ ಅಭ್ಯಾಸ ಬಿಜೆಪಿಗಿಲ್ಲ. ವಜಾ ಮಾಡುವುದಾದರೆ ಕಾಂಗ್ರೆಸ್ ಅವರನ್ನು ವಜಾ ಮಾಡಬೇಕು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಬಾವುಟ ಹಾರಿಸಿ ಎಂದಾಗ ಇವರು ಎಲ್ಲಿದ್ದರು? ಇದು ಕಾಂಗ್ರೆಸ್ ಅವರ ರಾಜಕೀಯ ಮೇಲಾಟ ಅಷ್ಟೆ. ಧರಣಿ ಮಾಡಲಿ, ನಮಗೆ ಏನೂ ತೊಂದರೆ ಇಲ್ಲ. ಮೋದಿ ಬಂದ ಮೇಲೆ ಇವರು ಎಲ್ಲಾ ಕಡೆ ನಿದ್ದೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

    ಸಚಿವ ಈಶ್ವರಪ್ಪ ಮಾತಾನಾಡಿರುವ ಪೂರ್ತಿ ವಿಷಯದಲ್ಲಿ ರಾಷ್ಟ್ರ ಧ್ವಜಕ್ಕೆ ಯಾರದಾರೂ ಅಗೌರವ ತೊರಿಸಿದರೆ ಅವರು ದೇಶದ್ರೋಹಿಗಳು ಎಂದು ಹೇಳಿದ್ದಾರೆ. ಇದರಲ್ಲಿ ಈಶ್ವರಪ್ಪ ಅವರ ಪಾತ್ರ ಏನಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ ಅವರು ಪ್ರಚಾರ ತೆಗೆದುಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲಾ ನಾಟಕ, ಶೋ ಎಂದು ಕುಮಾರಸ್ವಾಮಿಯೇ ಹೇಳಿದ್ದಾರೆ. ನಿನ್ನೆಯ ಸದನದಲ್ಲಿ ನಡೆದ ವರ್ತನೆ ಇದು ಕಾಂಗ್ರೆಸ್‍ನ ಗೂಂಡಾಗಿರಿಯಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ

    ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡಲು ಹೋದಾಗ ಧ್ವಜ ಹಾರಿಸಬಾರದು ಎಂದು ಕಾಂಗ್ರೆಸ್‍ನವರು ಲಾಠಿ ಚಾರ್ಜ್ ಮಾಡಿದ್ದರು. ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ರಾಷ್ಟ್ರಧ್ವಜ ಹಾರಿಸಿದ್ದೇವೆ. ಕಾಂಗ್ರೆಸ್‍ನವರು ಧರಣಿ ಮಾಡಲಿ. ನಿದ್ರೆ ಮಾಡಲಿ. ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತೆ ಎಂದು ವ್ಯಂಗ್ಯವಾಡಿದರು.

    ಎಲ್ಲಾ ಕಡೆ ಕಾಂಗ್ರೆಸ್ ಖಾಲಿ ಆಗುತ್ತಿದೆ. ಬಿಜೆಪಿ ಇಲ್ಲ ಅಂದಿದ್ದರೆ ಕಾಂಗ್ರೆಸ್ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ಇವರಿಗೆ ಇಟಲಿ ಮೇಲೆ ತುಂಬಾ ಆಸೆ. ಇಟಲಿಯವರು ಏನ್ ಹೇಳುತ್ತಾರೋ ಅದನ್ನು ಕೇಳುತ್ತಾರೆ. ಜೊತೆಗೆ ಅಲ್ಪಸಂಖ್ಯಾತರ ಓಲೈಕೆ ಮಾಡುವುದಷ್ಟೇ ಗೊತ್ತು ಎಂದರು. ಇದನ್ನೂ ಓದಿ: ತಮ್ಮ ಮನೆಯಲ್ಲಿ ಸುರಕ್ಷಿತವಾಗಿಲ್ಲ ಅಂದ್ರೆ ಹಿಜಬ್ ಧರಿಸಿ, ಶಾಲಾ-ಕಾಲೇಜುಗಳಲ್ಲ: ಪ್ರಜ್ಞಾ ಠಾಕೂರ್

    ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್. ಈಗ ಇರುವುದು ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್‍ಗೂ ಈಗಿರುವ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

  • ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ- ಅಶೋಕ್

    ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ- ಅಶೋಕ್

    ಬೆಂಗಳೂರು: ಬೆಳೆ ಪರಿಹಾರದ ಮೊತ್ತವನ್ನು ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಅಪಾರ ಬೆಳೆ ಮತ್ತು ಆಸ್ತಿ ಹಾನಿ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಪ್ರವಾಸ ನಡೆಸಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ವಿತರಿಸುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು

    ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ‘ಇಂದಿನವರೆಗೆ 3 ಲಕ್ಷ ರೈತರಿಗೆ 226.57 ಕೋಟಿ ಪರಿಹಾರ ವಿತರಿಸಿದ್ದೇವೆ. ಇಂದು 1.61 ರೈತರಿಗೆ 92.30 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಒಟ್ಟು 4.61 ರೈತರಿಗೆ 318.87 ಕೋಟಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ಮಧ್ಯವರ್ತಿಗಳಿಗೆ ಯಾವುದೇ ಅವಕಾಶ ಸಿಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

    ಈ ಹಿಂದೆ ಮೂರು ತಿಂಗಳಿಗೊಮ್ಮೆ ಬೆಳೆ ಪರಿಹಾರ ವಿತರಿಸಲಾಗುತ್ತಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡಿದ್ದು, ಎರಡು ಮೂರು ದಿನಕ್ಕೆ ಒಮ್ಮೆ ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಕೇಂದ್ರಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ವರದಿ ಸಿದ್ಧಪಡಿಸುತ್ತಿದ್ದೇವೆ. ಬೆಳೆ ಪರಿಹಾರ ನೀಡಲು ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ರೈತರಿಗೆ ಅನುಕೂಲವಾಗಬೇಕು. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ ಎಂದರು.

    ಸದ್ಯಕ್ಕಿಲ್ಲ ಲಾಕ್ ಡೌನ್
    ಲಾಕ್‍ಡೌನ್ ಕುರಿತು ಮಾತನಾಡಿದ ಅವರು, ಸದ್ಯಕ್ಕೆ ಲಾಕ್ ಡೌನ್ ಇಲ್ಲ. ರಾಜ್ಯದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ನಡೆಸಬೇಕು. ನಿರಂತರವಾಗಿ ಸರ್ಕಾರ ಕೋವಿಡ್ ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ. ಹೊರದೇಶದಿಂದ ಬರುವವರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತೇವೆ. ಹೊರದೇಶಗಳ ಸ್ಥಿತಿ ಸಹ ನಮ್ಮ ಗಮನದಲ್ಲಿದೆ ಎಂದರು.

    ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಾಕಷ್ಟು ಹಣ ಬಿಡುಗಡೆ ಮಾಡುತ್ತೇನೆ. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಸಾರ್ವಜನಿಕರು ಸಹಕರಿಸಬೇಕು. ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ. ಜನರು ಭಯ ಬಿಟ್ಟು ಜವಾಬ್ದಾರಿಯಿಂದ ಇರಬೇಕು ಎಂದು ಮನವಿ ಮಾಡಿದರು.

  • ರಾಜ್ಯದಲ್ಲಿ ಮತ್ತೆ ನಕಲಿ ಛಾಪಾಕಾಗದ ಸದ್ದು- ವಿಧಾನಸೌಧದ ನೆರಳಲ್ಲೇ ಡೀಲ್!

    ರಾಜ್ಯದಲ್ಲಿ ಮತ್ತೆ ನಕಲಿ ಛಾಪಾಕಾಗದ ಸದ್ದು- ವಿಧಾನಸೌಧದ ನೆರಳಲ್ಲೇ ಡೀಲ್!

    ಬೆಂಗಳೂರು: ಶಕ್ತಿಕೇಂದ್ರ ವಿಧಾನಸೌಧದ ನೆರಳಲ್ಲೇ ನಕಲಿ ಛಾಪ ಕಾಗದ ಹಗರಣ ನಡೆದಿದೆ. ನಕಲಿ ಛಾಪಾ ಕಾಗದ ಮಾರಾಟ ಮಾಡ್ತಿದ್ದ ಐವರು ಆರೋಪಿಗಳನ್ನು ಎಸ್‍ಐಟಿ ಬಂಧಿಸಿದೆ.

    ಬಂಧಿತ ಆರೋಪಿ ಬಾಬು, ವಿಧಾನಸೌದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡ್ಕೊಂಡಿದ್ದ, ಆತನ ಹೆಂಡತಿಯೂ ವಿಧಾನಸೌಧದದಲ್ಲೇ ಕ್ಲೀನಿಂಗ್ ಕೆಲಸ ಮಾಡ್ತಾ ಇದ್ದರು. ಈಗಾಗಲೇ ಅರೆಸ್ಟ್ ಆಗಿರೋ ನಕಲಿ ಛಾಪಾಕಾಗದ ಜಾಲದ ಸೀಮಾಳಿಂದ ಛಾಪ ಕಾಗದ ಪಡೆಯುತ್ತಿದ್ದ ವಂಚಕ ಬಾಬು, ಅವುಗಳನ್ನು ವಿಧಾನಸೌದದ ಆವರಣದಲ್ಲೇ ಮಾರಾಟ ಮಾಡಿದ್ದ. ಡೀಲ್ ಮಾಡೋರ ಬಳಿ ತಾನು ವಿಧಾನಸೌದದಲ್ಲೇ ಕೆಲಸ ಮಾಡ್ತಿರೋದಾಗಿ ಹೇಳಿಕೊಳ್ತಿದ್ದ.

    ಸದ್ಯ ಬಂಧಿತ ಆರೋಪಿಗಳಿಂದ 63 ಲಕ್ಷ ಮೌಲ್ಯದ ನಕಲಿ ಛಾಪಾ ಕಾಗದಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಬಾಬು ಸೇರಿ ಐವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ. ಇದನ್ನೂ ಓದಿ: ಗ್ರಾಮದ ಕಷ್ಟ ನಿವಾರಣೆಗಾಗಿ ಬಲೂನು ಹಾರಿಬಿಟ್ಟ ಗ್ರಾಮಸ್ಥರು!

  • ವಿಧಾನಮಂಡಲ ಅಧಿವೇಶನ ಶುರು- ಹೋರಾಟದ ಕಾರ್ಯತಂತ್ರ ಬದಲಿಸಿದ ಕಾಂಗ್ರೆಸ್

    ವಿಧಾನಮಂಡಲ ಅಧಿವೇಶನ ಶುರು- ಹೋರಾಟದ ಕಾರ್ಯತಂತ್ರ ಬದಲಿಸಿದ ಕಾಂಗ್ರೆಸ್

    ಬೆಂಗಳೂರು: ಸದನದ ಹೊರಗೆ ವಿಪಕ್ಷ ಕಾಂಗ್ರೆಸ್ ನಡೆಸಿದ ಹೈಡ್ರಾಮಾ ನಡ್ವೆ ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರುವಾಗಿದೆ. ಬೊಮ್ಮಾಯಿ ಸಿಎಂ ಆದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಕಾಂಗ್ರೆಸ್ ಹೋರಾಟದ ಕಾರ್ಯತಂತ್ರವನ್ನು ಬದಲಿಸಿದೆ.

    ಗದ್ದಲ ಪ್ರತಿಭಟನೆ ಬದಲಿಗೆ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ. ಹೀಗಾಗಿ ಮೊದಲ ದಿನದ ಕಲಾಪದಲ್ಲಿ ಯಾವುದೇ ಸದ್ದುಗದ್ದಲ ಕಂಡುಬರಲಿಲ್ಲ.. ಸಂಪ್ರದಾಯದಂತೆ ಆರಂಭದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಸಿಎಂ ಉದಾಸಿ, ಕೆಬಿ ಶಾಣಪ್ಪ, ಜಿ ಮಾದೇಗೌಡ, ಕವಿ ಸಿದ್ದಲಿಂಗಯ್ಯ, ನಟಿ ಜಯಂತಿ ಸೇರಿ ಇಹಲೋಕ ತ್ಯಜಿಸಿದ 31 ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಇದನ್ನೂ ಓದಿ: ಬೆಲೆ ಏರಿಕೆಗೆ ವಿರೋಧ – ಎತ್ತಿನ ಗಾಡಿ ಏರಿದ ಕೈ ನಾಯಕರು

    ಮುಖ್ಯಮಂತ್ರಿಗಳು ಅಗಲಿದ ಉದಾಸಿ ಮತ್ತು ಯಡಿಯೂರಪ್ಪ ಸ್ನೇಹವನ್ನು ಸ್ಮರಿಸಿಕೊಂಡ್ರು. ಯಡಿಯೂರಪ್ಪ ಕೂಡ ಸ್ನೇಹ ಸಂಬಂಧ ಸ್ಮರಿಸಿಕೊಂಡು ಭಾವುಕರಾದ್ರು. ಈಶ್ವರಪ್ಪದು ನಂದೂ ಒಂಥರಾ ಲವ್ ಅಂಡ್ ಹೇಟ್ ಗೆಳೆತನ ಎಂದು ಸಿದ್ದರಾಮಯ್ಯ ಬಣ್ಣಿಸಿದ್ರು. ಇನ್ನು, ಯಾವಾಗ್ಲೂ ಸದನದಲ್ಲಿ ಮೊದಲ ಸಾಲಿನಲ್ಲಿ ಇರ್ತಿದ್ದ ಯಡಿಯೂರಪ್ಪ ನಾಲ್ಕನೇ ಸಾಲಿಗೆ ಶಿಫ್ಟ್ ಆಗಿದ್ದಾರೆ. ಇದನ್ನೂ ಓದಿ: ಗುಜರಾತ್ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‍ಗೆ ಶುಭ ಕೋರಿದ ಬಸವರಾಜ ಬೊಮ್ಮಾಯಿ

    ಶೆಟ್ಟರ್, ಸುರೇಶ್ ಕುಮಾರ್ ಸಹ ಹಿಂದಿನ ಸಾಲಿನಲ್ಲಿ ಕುಳಿತ್ರು. ಈ ಮಧ್ಯೆ, ಸದನದಲ್ಲಿ ಹೊಸ ಸಚಿವರ ಸಂಭ್ರಮ ಜೋರಾಗಿತ್ತು. ಅತ್ತ ಸಂತಾಪ ಸೂಚನೆ ಪಟ್ಟಿಯಲ್ಲಿ ನಟ ಸಂಚಾರಿ ವಿಜಯ್ ಹೆಸರು ಇಲ್ಲದಕ್ಕೆ ಪರಿಷತ್‍ನಲ್ಲಿ ಆಕ್ಷೇಪ ವ್ಯಕ್ತವಾಯ್ತು. ಸಂಜೆ, ಸರ್ಕಾರದ ಮುಖ್ಯ ಸಚೇತಕರನ್ನಾಗಿ ಸತೀಶ್ ರೆಡ್ಡಿಯನ್ನು ಆಯ್ಕೆ ಮಾಡಲಾಗಿದೆ.