Tag: ವಿಧಾನ ಮಂಡಲ ಅಧಿವೇಶನ

  • Assembly Session: ಪರಿಷತ್‌ನಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ; ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಬಿಗಿಪಟ್ಟು!

    Assembly Session: ಪರಿಷತ್‌ನಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ; ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಬಿಗಿಪಟ್ಟು!

    – 56 ಸಾವಿರ ಕಾರ್ಡ್ ಬಿಪಿಎಲ್‌ಗೆ ಅನರ್ಹ: ಸಚಿವ ಮುನಿಯಪ್ಪ
    – ಪರಿಷತ್‌ನಲ್ಲಿ ನಿರೂಪಕಿ ದಿ. ಅಪರ್ಣಾ ಸೇರಿದಂತೆ ಗಣ್ಯರಿಗೆ ಸಂತಾಪ

    ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ (Karnataka Assembly Session) ಇಂದಿನಿಂದ ಆರಂಭವಾಗಿದೆ. ಪರಿಷತ್‌ನಲ್ಲಿ ಮೊದಲ ದಿನವೇ ಹಗರಣಗಳ ಸದ್ದು ಪ್ರಸ್ತಾಪವಾಗಿದೆ. ಅಧಿವೇಶನದಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಾಲ್ಮೀಕಿ ನಿಗಮದ ಹಗರಣ (Valmiki Corporation Corruption) ವಿಚಾರ ಪ್ರಸ್ತಾಪವಾಗಿದೆ.

    ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಭೋಜೇಗೌಡ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಸಭಾಪತಿ ಘೋಷಣೆ ಮಾಡಿದರು. ಬಳಿಕ ನಿಯಮ 59ರ ಅಡಿ ನಿಲುವಳಿ ಸೂಚನೆಗೆ ಪ್ರಸ್ತಾಪಿಸಲಾಯಿತು.ಈ ವೇಳೆ ಬಿಜೆಪಿ ಸದಸ್ಯ ಸಿ.ಟಿ ರವಿ (CT Ravi), ವಾಲ್ಮೀಕಿ ನಿಗಮದ ಹಗರಣ ಕುರಿತು ನಿಲುವಳಿ ಮಂಡಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್‌ ಸಹ ವಾಲ್ಮೀಕಿ ಹಗರಣದ 187 ಕೋಟಿ ರೂ. ಹಣವನ್ನು ಬಳ್ಳಾರಿ ಚುನಾವಣೆ (Bellary Lok Sabha Election) ಹಾಗೂ ತೆಲಂಗಾಣ ಚುನಾವಣೆಗೆ ಬಳಕೆ ಮಾಡಲಾಗಿದೆ. ದೊಡ್ಡ ಈ ಬಗ್ಗೆ ದೊಡ್ಡ ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.

    ಇದೇ ವೇಳೆ ಸಿ.ಟಿ ರವಿ ಸಹ, 187 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ. ಅಹಿಂದ ರಾಜಕಾರಣ ಮಾಡೋರು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಣ ನುಂಗಿದ್ದಾರೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ನಿಯಮದ ಪ್ರಕಾರ ನಾವು ಎಲ್ಲದಕ್ಕೂ ಸಮಯ ಕೊಡುತ್ತೇವೆ. ಪ್ರಶ್ನೋತ್ತರ ಅವಧಿ ಆದ್ಮೇಲೆ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡ್ತೀನಿ ಎಂದು ಹೇಳಿದರು.

    ಬಿಪಿಎಲ್‌ ಕಾರ್ಡ್‌ ವಿಚಾರ ಪ್ರಸ್ತಾಪ:
    ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಆಡಳಿತ ಕಾಂಗ್ರೆಸ್‌ ಪಕ್ಷದ ವಿರುದ್ಧ ಮುಗಿಬಿದ್ದರು. ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟರು. ಪಡಿತರ ಚೀಟಿ ವಿವರಣೆ ಮಾಡಿ 3 ವರ್ಷ ಆಗಿದೆ. ಇದರಿಂದ ಬಡವರಿಗೆ ತೊಂದರೆಯಾಗಿದೆ, ಕೂಡಲೇ ಸರ್ಕಾರದಿಂದ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ (BPL Card) ವಿತರಿಸುವ ಕೆಲಸ ಆಗಬೇಕು. ಬಿಪಿಎಲ್‌ ಕಾರ್ಡ್ ಜೊತೆಗೆ ಎಪಿಎಲ್‌ ಕಾರ್ಡನ್ನೂ ಕೊಡಬೇಕು. ಬಿಪಿಎಲ್‌ಕಾರ್ಡ್ ಮತ್ತು ಎಪಿಎಲ್‌ ಕಾರ್ಡ್ ನಿಂದ ಮೆಡಿಕಲ್ ಗೂ ಸಹಾಯ ಆಗಲಿದೆ. ಹೀಗಾಗಿ ಶೀಘ್ರವೇ ಪಡಿತರ ಚೀಟಿ ಕೊಡಿ ಎಂದು ಆಗ್ರಹಿಸಿರು.

    1.73 ಲಕ್ಷ ಕಾರ್ಡ್ ಗಳ ಅಂತಿಮ ಹಂತದ ಪರಿಶೀಲನೆ:
    ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಹಿಂದಿನ ಸರ್ಕಾರದಲ್ಲಿ ಚುನಾವಣೆಗೂ ಮುನ್ನ 2.95 ಲಕ್ಷ ಅರ್ಜಿಗಳು ಬಿಪಿಎಲ್‌ಗೆ ಬಂದಿದ್ದವು. ಈಪೈಕಿ 2.35 ಲಕ್ಷ ಕಾರ್ಡ್ ಬಿಪಿಎಲ್‌ಗೆ ಅರ್ಹತೆ ಪಡೆದಿದೆ. 56 ಸಾವಿರ ಕಾರ್ಡ್ ಬಿಪಿಎಲ್‌ ಅರ್ಹತೆ ಪಡೆದಿಲ್ಲ. ಅರ್ಹತೆ ಪಡೆದ 2.35 ಲಕ್ಷ ಕಾರ್ಡ್ ಪೈಕಿ 62 ಸಾವಿರ ಕಾರ್ಡ್ ಗಳಿಗೆ ಈಗಾಗಲೇ ಪಡಿತರ ಕೊಡ್ತಿದ್ದೇವೆ. ಉಳಿದ 1.73 ಲಕ್ಷ ಕಾರ್ಡ್ ಗಳ ಅಂತಿಮ ಹಂತದ ಪರಿಶೀಲನೆ ಕಾರ್ಯ ನಡೆಯುತ್ತಿದ್ದು ಶೀಘ್ರವೇ ಪಡಿತರ ಕೊಡುವ ವ್ಯವಸ್ಥೆ ಮಾಡಿಸ್ತೀವಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಪಡಿತರ ಚೀಟಿಗೆ ಅರ್ಜಿ ಹಾಕೋರಿಗೆ ಒಂದು ವಾರದಲ್ಲಿ ಪಡಿತರ ಚೀಟಿ ಕೊಡೋ ಕೆಲಸ ಮಾಡ್ತೀವಿ ಎಂದು ಭರವಸೆ ನೀಡಿದರು.

    ಅರ್ಪಣಾ ನಿಧನಕ್ಕೆ ಸಂತಾಪ:
    ಪರಿಷತ್‌ ಕಲಾಪ ಆರಂಭಿಸುವುದಕ್ಕೂ ಇತ್ತೀಚೆಗೆ ರಾಜ್ಯದಲ್ಲಿ ನಿಧನಹೊಂದಿದ ರಾಜಕೀಯ ನಾಯಕರು ಹಾಗೂ ಗಣ್ಯಮಾನ್ಯರಿಗೆ ಸಂತಾಪ ಸೂಚಿಸಲಾಯಿತು. ಪಾಟೀಲ ಸುನಂದಾ ನಿಂಗನಗೌಡ, ಟಿ.ಕೆ.ಚಿನ್ನಸ್ವಾಮಿ, ಇಕ್ಬಾಲ್ ಅಹಮದ್ ಸರಡಗಿ, ಎಂ.ಬಿ.ಭಾನು ಪ್ರಕಾಶ್, ನಾಗಮ್ಮ, ಕೇಶವಮೂರ್ತಿ, ವಿ.ಶ್ರೀನಿವಾಸ್ ಪ್ರಸಾದ್, ಎಂ.ಪಿ ಕೇಶವಮೂರ್ತಿ, ಪಾಡ್ಡನ ಕಲಾವಿದೆ ಗಿಡಿಗೆರೆ ರಾಮಕ್ಕ, ದ್ವಾರಕೀಶ್, ಭಗಾವತ ಸುಬ್ರಮಣ್ಯ ಧಾರೇಶ್ವರ, ಪೇತ್ರಿ ಮಾಧವ ನಾಯಕ್, ಕಮಲಾ ಹಂಪನಾ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

  • ಸದನದಲ್ಲಿ ಶರ್ಟ್ ಬಿಚ್ಚಿ ಆಕ್ರೋಶ ಹೊರಹಾಕಿದ ಕೈ ಶಾಸಕ ಬಿ.ಕೆ ಸಂಗಮೇಶ್

    ಸದನದಲ್ಲಿ ಶರ್ಟ್ ಬಿಚ್ಚಿ ಆಕ್ರೋಶ ಹೊರಹಾಕಿದ ಕೈ ಶಾಸಕ ಬಿ.ಕೆ ಸಂಗಮೇಶ್

    – ತನ್ನನ್ನು ತಾನು ಸಮರ್ಥಿಸಿಕೊಂಡ ಎಂಎಲ್‍ಎ

    ಬೆಂಗಳೂರು: ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಸದನದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಶರ್ಟ್ ಬಿಚ್ಚಿ ತಮ್ಮ ಆಕ್ರೋಶ ಹೊರಹಾಕಿರುವ ಪ್ರಸಂಗ ನಡೆದಿದೆ.

     

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಬೇಕು ಅಂತಾನೇ ಶರ್ಟ್ ಬಿಚ್ಚಿದ್ದು, ನನಗೆ ವಿಷಾದ ಇಲ್ಲ. ನ್ಯಾಯ ಸಿಗಬೇಕು ಎಂದೇ ಶರ್ಟ್ ಬಿಚ್ಚಿದ್ದು. ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸ್ಪೀಕರ್ ಬಿಜೆಪಿ ಪರ, ನಾನು ಧರಣಿ ಮುಂದುವರಿಸುತ್ತೇನೆ. ಅಪ್ಪ ಮಕ್ಕಳು, ಈಶ್ವರಪ್ಪ ಭದ್ರಾವತಿಯನ್ನ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ನಿಂತಿದ್ದಾರೆ ಎಂದರು.

    ವಿಧಾನಸಭಾ ಕಲಾಪದಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತು ವಿಶೇಷ ಚರ್ಚೆ ಬಗ್ಗೆ ಸ್ಪೀಕರ್ ಕಾಗೇರಿ ಪ್ರಸ್ತಾಪಿಸಿದರು. ಈ ವೇಳೆ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ನಿಯಮಾವಳಿಗಳಲ್ಲಿ ಈ ಚರ್ಚೆ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದರು.

    ವಿಧಾನಸಭೆ ಕಲಾಪಕ್ಕೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಅಖಂಡ ಶ್ರೀನಿವಾಸ್, ಕಲಾಪಕ್ಕೆ ಜೆಡಿಎಸ್ ನಾಯಕ ಹೆಚ್‍ಡಿಕೆ ಗೈರಾಗಿದ್ದಾರೆ ಎಂದರು. ಈ ವೇಳೆ ಸಿದ್ದರಾಮಯ್ಯರವರಿಗೆ ಸಾಥ್ ನೀಡಿದ ರಮೇಶ್ ಕುಮಾರ್ ಮತ್ತು ಹೆಚ್.ಕೆಪಾಟೀಲ್ ಒನ್ ನೇಷನ್ ಒನ್ ಎಲೆಕ್ಷನ್ ಚರ್ಚೆಗೆ ಅವಕಾಶ ಕೊಟ್ಟರೆ ಕ್ರಿಯಾಲೋಪ ಆಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮಧ್ಯೆ ಎದ್ದು ನಿಂತು ಸಿಎಂ ಬಿಎಸ್ ಯಡಿಯೂರಪ್ಪ ಸ್ಪೀಕರ್ ಅವರು ಸಂವಿಧಾನದ ಚೌಕಟ್ಟಿನಲ್ಲೇ ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ ಸಹಕರಿ ಎಂದು ಮನವಿ ಮಾಡಿದರು.

    ಈ ಎಲ್ಲಾ ಗೊಂದಲಗಳ ನಡುವೆ ಸ್ಪೀಕರ್ ಒಂದು ದೇಶ ಒಂದು ಚುನಾವಣೆ ಚರ್ಚೆಯ ಪ್ರಸ್ತಾವನೆ ಓದಲು ಮುಂದುವರಿಸಿದರು. ಈ ವೇಳೆ ಇದು ಆರ್‍ಎಸ್‍ಎಸ್ ಅಜೆಂಡಾ, ಪ್ರಧಾನಿ ಡಿಕ್ಟೇಟರ್ ಎಂದು ಸಿದ್ದರಾಮಯ್ಯ ಜರಿದರು. ಅಲ್ಲದೆ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಇದರಿಂದ ಕೋಪಗೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 19 ಜನ ಮಾತನಾಡುವವರ ಪಟ್ಟಿಯನ್ನು ಕೊಟ್ಟಿದ್ದೀರಿ. ಮೊದಲಿನಿಂದಲೂ ಇದನ್ನು ಒಪ್ಪಿಕೊಂಡು ಈಗ ಬೆಳಗ್ಗೆ ಏಕಾಏಕಿ ಬೇಡ ಅಂದರೆ ಏನು ಅರ್ಥ. ಇದು ಯಾರಿಗೂ ಕ್ಷೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

  • ಇಂದಿನಿಂದ ವಿಧಾನ ಮಂಡಲ ಅಧಿವೇಶನ- ಸರ್ಕಾರಕ್ಕೆ ಸಿಡಿ ಜೊತೆಗೆ ಮೀಸಲಾತಿ ಅಗ್ನಿಪರೀಕ್ಷೆ

    ಇಂದಿನಿಂದ ವಿಧಾನ ಮಂಡಲ ಅಧಿವೇಶನ- ಸರ್ಕಾರಕ್ಕೆ ಸಿಡಿ ಜೊತೆಗೆ ಮೀಸಲಾತಿ ಅಗ್ನಿಪರೀಕ್ಷೆ

    ಬೆಂಗಳೂರು: ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಲಿದೆ. ಸುಮಾರು 19 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ.

    ಸೋಮವಾರ ಸಿಎಂ ಯಡಿಯೂರಪ್ಪ ರಾಜ್ಯದ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಇಂದು ಮತ್ತು ನಾಳೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ.

    ವಿಧಾನಸಭೆ ಕಲಾಪ ಪ್ರಾರಂಭವಾದ ಕೂಡಲೇ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಚರ್ಚೆಗೆ ಅವಕಾಶ ಕೊಡಲಾಗಿದೆ. ವಿಧಾನ ಪರಿಷತ್ ನಲ್ಲಿ ಮೊದಲು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯ ಕಲಾಪ ನಡೆಯುತ್ತೆ. ಬಳಿಕ ಪ್ರಶ್ನೋತ್ತರ ಮತ್ತು ನಿಯಮ 330, ಗಮನ ಸೆಳೆಯುವ ಸೂಚನೆ ಬಳಿಕ ಒಂದು ರಾಷ್ಟ್ರ ಮತ್ತು ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಬಗ್ಗೆ ಮಾತ್ರ ಇರಲಿದೆ. ರಾಜ್ಯ ಚುನಾವಣೆ ಆಯೋಗ ನಡೆಸುವ ಚುನಾವಣೆ ಬಗ್ಗೆ ಚರ್ಚೆ ಆಗೋದಿಲ್ಲ ಅಂತ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದ್ದಾರೆ.

    ಇತ್ತ ಕಲಾಪದಲ್ಲಿ ರಾಸಲೀಲೆ ಪ್ರಕರಣ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟರೂ ಅಧಿವೇಶನದಲ್ಲಿ ಕಾಂಗ್ರೆಸ್, ಜೆಡಿಎಸ್ ಅದೇ ಅಸ್ತ್ರ ಉಪಯೋಗಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಸಲೀಲೆ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಮುಜುಗರ ತರೋ ಪ್ಲ್ಯಾನ್ ಅನ್ನು ಕಾಂಗ್ರೆಸ್, ಜೆಡಿಎಸ್ ಹೂಡಿವೆ.

    ಜಾರಕಿಹೊಳಿ ಸಿಡಿ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರವಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡುವುದು. ಪಂಚರಾಜ್ಯ ಚುನಾವಣೆಯಲ್ಲಿ ಸಿಡಿ ಅಸ್ತ್ರ ಬಳಸಿ ಮತ್ತಷ್ಟು ಡ್ಯಾಮೇಜ್ ಮಾಡೋದು. ಸಿಡಿಯಲ್ಲಿ ಬಿಎಸ್‍ವೈಯವರನ್ನ ಭ್ರಷ್ಟ ಎಂದಿರುವ ಜಾರಕಿಹೊಳಿ ಹೇಳಿಕೆ ಆಧರಿಸಿ ಸಿಎಂ ಮೇಲೆಯೂ ಮುಗಿಬೀಳಲು ಪ್ಲ್ಯಾನ್ ಮಾಡಲಾಗಿದೆ. ಈ ಮೂಲ ತನಿಖೆಗೆ ಒತ್ತಾಯಿಸಿ ಯಡಿಯೂರಪ್ಪರನ್ನ ಇಕ್ಕಟ್ಟಿಗೆ ಸಿಲುಕಿಸೋದು ಕಾಂಗ್ರೆಸ್, ಜೆಡಿಎಸ್ ತಂತ್ರವಾಗಿದೆ.