Tag: ವಿಧಾನಸೌಧ ಮುತ್ತಿಗೆ

  • ವಿಧಾನಸೌಧ ಮುತ್ತಿಗೆ ಹಾಕಲು ಮುಂದಾದ ಹೋಂಗಾರ್ಡ್ ಗಳಿಗೆ ಗೃಹ ಬಂಧನ

    ವಿಧಾನಸೌಧ ಮುತ್ತಿಗೆ ಹಾಕಲು ಮುಂದಾದ ಹೋಂಗಾರ್ಡ್ ಗಳಿಗೆ ಗೃಹ ಬಂಧನ

    ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಗೃಹ ರಕ್ಷಕ ದಳ (ಹೋಂಗಾರ್ಡ್ಸ್) ಸಿಬ್ಬಂದಿಯನ್ನು ಅಧಿಕಾರಿಗಳು ಸಿಎಆರ್ ಗ್ರೌಂಡ್‍ನಲ್ಲಿ ಕೂಡಿ ಹಾಕಿದ್ದಾರೆ.

    ಇಂದು ಅಧಿವೇಶನ ಪ್ರಾರಂಭವಾಗಿದ್ದರಿಂದ ರಾಮನಗರ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 25 ಸಾವಿರ ಜನ ಗೃಹ ರಕ್ಷಕ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. 3-4 ತಿಂಗಳಿನಿಂದ ಸರಿಯಾಗಿ ಸಂಬಳವಾಗುತ್ತಿಲ್ಲ. ಅಷ್ಟೇ ಅಲ್ಲದೆ ತೀರಾ ಕಡಿಮೆ ಸಂಬಳಕ್ಕೆ ದುಡಿಯಬೇಕಿದೆ. ಹೀಗಾಗಿ ವೇತನ ಹೆಚ್ಚಳ, ಶಾಶ್ವತ ಉದ್ಯೋಗ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು.

    ಸದ್ಯ ಅಧಿಕಾರಿಗಳು 1.5 ಸಾವಿರ ಗೃಹರಕ್ಷಕ ಸಿಬ್ಬಂದಿಯನ್ನು ಸಿಎಆರ್ ಗ್ರೌಂಡ್‍ನಲ್ಲಿ ಇರಿಸಿ ಪರೇಡ್ ಮಾಡಿಸುತ್ತಿದ್ದಾರೆ. ಅಲ್ಲದೇ ಇನ್ನುಳಿದವರನ್ನು ಬೇರೊಂದು ಕಡೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.