Tag: ವಿಧಾನಪರಿಷತ್ ಚುನಾವಣೆ

  • ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯು ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆ ಕಣವಾಗಿ ಪರಿಣಾಮಿಸಿದೆ.

    ಬೆಳಗಾವಿಯ ವಿಧಾನ ಪರಿಷತ್ ಚುನಾವಣೆಯು ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆಯಾಗಿದೆ. ಲಖನ್ ಜಾರಕಿಹೊಳಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನೆ ಮೂಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಹಾಂತೇಶ್ ಕವಟಗಿಮಠ, ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಗಳಾಗಿ ನಿಂತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿ ರಮೇಶ್ ಜಾರಕಿಹೊಳಿ ಅವರ ಹೆಗಲ ಮೇಲೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲ್ಲಿಸಿ ತರುವ ಜವಾಬ್ದಾರಿ ಸತೀಶ್ ಅವರದ್ದಾಗಿದೆ. ಈ ಹಿನ್ನೆಲೆ ಇವರಿಬ್ಬರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ತುಂಬಾ ಸುತ್ತಾಡುತ್ತಿದ್ದಾರೆ.

    ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸುವ ಹೊಣೆ ಕೇವಲ ರಮೇಶ್ ಜಾರಕಿಹೊಳಿ ಹೆಗಲಿಗೆ ಬಿಟ್ರಾ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿಯೂ ಓಡಾಡುತ್ತಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಸೋತ್ರೆ ಅದಕ್ಕೆ ರಮೇಶ್ ಜಾರಕಿಹೊಳಿ ಒಬ್ಬರೇ ಕಾರಣ ಎಂದು ಬಿಂಬಿಸಲು ವ್ಯವಸ್ಥಿತ ಸಂಚು ನಡೀತಿದ್ಯಾ ಎಂದು ಕೆಲವರು ಆರೋಪವನ್ನು ಮಾಡುತ್ತಿದ್ದಾರೆ. ಈ ರೀತಿ ಹಲವು ಚರ್ಚೆಗಳು ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್

    ಬಹುತೇಕ ಬಿಜೆಪಿ ನಾಯಕರು ಪರಿಷತ್ ಚುನಾವಣೆಯಿಂದ ದೂರ ಉಳಿದುಕೊಂಡಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಜನಸ್ವರಾಜ್ ಸಮಾವೇಶ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಚಿವೆ ಶಶಿಕಲಾ ಜೊಲ್ಲೆ ಅವರು ಒಂದೆರಡು ದಿನ ಪ್ರಚಾರ ನಡೆಸಿ ಬೆಂಗಳೂರಿಗೆ ತೆರಳಿದರು. ಇನ್ನೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಚುನಾವಣಾ ಅಖಾಡದಿಂದ ದೂರ ಉಳಿದ್ರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.

    ಸಚಿವ ಉಮೇಶ್ ಕತ್ತಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದು, ಈಗ ಅವರು ಸಹ ಕಾಣಿಸುತ್ತಿಲ್ಲ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹ ಚುನಾವಣಾ ಉಸಾಬರಿಯಿಂದ ದೂರ ಉಳಿದ್ರಾ ಎಂಬ ಅನುಮಾನವಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಬ್ಬರು ಬಿಜೆಪಿ ಸಂಸದರು, ಓರ್ವ ರಾಜ್ಯಸಭಾ ಸದಸ್ಯ ಇದ್ದರೂ ಬಿಜೆಪಿ ಪಾಳಯದಲ್ಲಿ ಆತಂಕ ಉಂಟಾಗಿದೆ. ಇದನ್ನೂ ಓದಿ:  ಇಂದು 400 ಗಡಿದಾಟಿದ ಕೊರೊನಾ – 6 ಸಾವು

    ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಾಹುಕಾರ್ ಪಣ ತೊಟ್ಟಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸತೀಶ್ ಜಾರಕಿಹೊಳಿ ಕಸರತ್ತು ಮಾಡುತ್ತಿದ್ದಾರೆ. ಜಾರಕಿಹೊಳಿ ಸಹೋದರರ ಮಧ್ಯೆ ಗೆಲ್ಲೋರು ಯಾರು? ಸೋಲೋರು ಯಾರು? ಅನ್ನೋದೇ ಸಸ್ಪೆನ್ಸ್.

  • ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ: ಸಚಿವ ಈಶ್ವರಪ್ಪ

    ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ: ಸಚಿವ ಈಶ್ವರಪ್ಪ

    ಚಾಮರಾಜನಗರ: ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ, ಮುಂದಿನ ಚುವಾಣೆಯಲ್ಲಿ ಎಲ್ಲರೂ ಸೇರಿಕೊಂಡು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಇಂದು ಚಾಮರಾಜನಗರದಲ್ಲಿ ಬಿಜೆಪಿಯಿಂದ ಜನ ಸ್ವರಾಜ್ ಸಮಾವೇಶ ನಡೆಯಿತು. ಚಾಮರಾಜನಗರದ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ನಡೆದ ಸಮಾವೇಶದ ನೇತೃತ್ವ ವಹಿಸಿದ್ದ ಕೆ.ಎಸ್. ಈಶ್ವರಪ್ಪ, ಸಮಾವೇಶ ಉದ್ಘಾಟಿಸಿ ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

    ಶುಕ್ರವಾರ ತಮ್ಮ ಮುಖಂಡರೊಬ್ಬರಿಗೆ ಟಿಕೆಟ್ ಕೇಳಲು ಹೋದ ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮನ್ನು ಸೋಲಿಸಿದ್ದರೆಂದು ಸಿದ್ದರಾಮಯ್ಯ ಬೈದ ಪ್ರಕರಣ ಪ್ರಸ್ತಾಪಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಎಲ್ಲರೂ ಸೇರಿಕೊಂಡು ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ. ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ ಎಂದರು.

    ಉಪ ಚುನಾವಣೆಯಲ್ಲಿ ಕುರುಬರ ನಾಯಕ ನಾನೇ ಎಂದು ಸಿದ್ದರಾಮಯ್ಯ ಪ್ರಚಾರ ಮಾಡಿದ್ದರು. ಸಿಂದಗಿಯಲ್ಲಿ 35 ಸಾವಿರ ಕುರುಬರ ಓಟ್ ಇದೆ. ಆದರೂ ಸಿಂದಗಿಯಲ್ಲಿ ಬಿಜೆಪಿ ಗೆದ್ದಿತು ಎಂದು ಲೇವಡಿ ಮಾಡಿದರು. ಸುಳ್ಳಿಗೆ ಇನ್ನೊಂದೇ ಹೆಸರೇ ಸಿದ್ದರಾಮಯ್ಯ ಎಂದು ಆರೋಪಿಸಿದರು. ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಿವೆ ಅಲ್ಪಸಂಖ್ಯಾತರ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಇದು ಜಗಜ್ಜಾಹೀರಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ರಾಜ್ಯದ ಜನರು ದುರಹಂಕಾರದ ಕಾಂಗ್ರೆಸ್‍ಗೆ ಬುದ್ಧಿ ಕಲಿಸಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಈಶ್ವರಪ್ಪ ಟೀಕಿಸಿದರು. ಇದನ್ನೂ ಓದಿ: ನಿನ್ನಿಂದಲೇ ನಾನು ಹುಷಾರಾಗಿದ್ದು, ನಿನ್ನ ಹಾರೈಕೆಯಿಂದಲೇ ಹೊಸ ಚೈತನ್ಯ ಸಿಕ್ಕಿದ್ದು: ರಾಘಣ್ಣ

    ವಿಧಾನಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಲಸಿಕೆ ಹಾಕಿಸಿಕೊಂಡ್ರೆ ಗಂಡಸ್ತನ ಹೋಗುತ್ತೆ ಎಂದು ಕಾಂಗ್ರೆಸ್‍ನವರು ಅಪಪ್ರಚಾರ ಮಾಡಿದ್ದರು. ನಂತರದ ದಿನಗಳಲ್ಲಿ ಕಾಂಗ್ರೆಸ್‍ನವರೇ ಕದ್ದು ಮುಚ್ಚಿ ಕ್ಯೂ ನಿಂತು ಲಸಿಕೆ ಹಾಕಿಸಿಕೊಂಡ್ರು ಎಂದು ಲೇವಡಿ ಮಾಡಿದರು.

  • ಮತ್ತೆ ಕಾಂಗ್ರೆಸ್, ಜೆಡಿಎಸ್ ಕಮಾಲ್ – ಎಂಬಿಪಿ ಸಹೋದರನಿಗೆ ಗೆಲುವು

    ಮತ್ತೆ ಕಾಂಗ್ರೆಸ್, ಜೆಡಿಎಸ್ ಕಮಾಲ್ – ಎಂಬಿಪಿ ಸಹೋದರನಿಗೆ ಗೆಲುವು

    ವಿಜಯಪುರ: ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್‍ರಿಂದ ತೆರವಾದ ವಿಜಯಪುರ-ಬಾಗಲಕೋಟೆ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ ಜಯಗಳಿಸಿದ್ದಾರೆ.

    ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸಹೋದರ ಸುನೀಲಗೌಡ ಪಾಟೀಲ್ ಅವರಿಗೆ ಜೆಡಿಎಸ್ ಬೆಂಬಲ ನೀಡಿದ್ದರಿಂದ 2,040 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

    ಸುನೀಲ ಗೌಡ ಪಾಟೀಲ 4,819 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ 2,779 ಮತಗಳನ್ನು ಪಡೆದರು. ಉಳಿದ ಐವರು ಪಕ್ಷೇತರ ಅಭ್ಯರ್ಥಿಗಳು ಕೇವಲ 59 ಮತಗಳನ್ನು ಪಡೆದಿದ್ದಾರೆ. 454 ಮತಗಳು ತಿರಸೃತವಾಗಿದ್ದು, ಒಟ್ಟು 8,111 ಮತಗಳು ಚಲಾವಣೆಯಾಗಿವೆ.

    ಇದೆ ವೇಳೆ ಮಾತನಾಡಿದ ಸುನೀಲ ಗೌಡ ಗೆಲವು ಸಂತಸ ತಂದಿದೆ. 2019ರ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv