Tag: ವಿಧಾನಪರಿಷತ್ ಚುನಾವಣೆ

  • ವಿಧಾನಪರಿಷತ್ ಚುನಾವಣೆ ಮತದಾನಕ್ಕೆ ಅಂತಿಮ ಸಿದ್ಧತೆ- ಮತಗಟ್ಟೆ ಬಳಿ ಬಿಗಿ ಭದ್ರತೆ

    ವಿಧಾನಪರಿಷತ್ ಚುನಾವಣೆ ಮತದಾನಕ್ಕೆ ಅಂತಿಮ ಸಿದ್ಧತೆ- ಮತಗಟ್ಟೆ ಬಳಿ ಬಿಗಿ ಭದ್ರತೆ

    ರಾಯಚೂರು: ಸೋಮವಾರ ನಡೆಯಲಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ರಾಯಚೂರು (Raichur) ಜಿಲ್ಲಾಡಳಿತ ಅಂತಿಮ ಸಿದ್ದತೆ ನಡೆಸಿದೆ. ಈಗಾಗಲೇ ಚುನಾವಣಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದ್ದು, ಮತದಾನ ಸಲಕರಣೆಗಳನ್ನ ಸಿಬ್ಬಂದಿಗೆ ವಿತರಿಸಲಾಗಿದೆ.

    ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ರಾಯಚೂರು ಜಿಲ್ಲೆಯಾದ್ಯಂತ 30 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಸಿಂಧನೂರಿನಲ್ಲಿ ಒಂದು ಹೆಚ್ಚುವರಿ ಆಕ್ಸಿಲರಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 30 ಮತಗಟ್ಟೆಗಳ ಪೈಕಿ 23 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ 7 ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕಾಗಿ 41ಪಿಆರ್ ಒ, 41 ಎಆರ್ ಒ ಹಾಗೂ 82 ಪಿಒ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

    ಜಿಲ್ಲೆಯಾದ್ಯಂತ ಒಟ್ಟು 20 ಸಾವಿರದ 317 ಮತದಾರರು ನೋಂದಣಿ ಮಾಡಿಕೊಂಡಿದ್ದು, ನಾಳೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಭದ್ರತೆಗೆ 645 ಪೊಲೀಸ್ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿ, 1 ಸಿಎಪಿಎಫ್ ತುಕಡಿ, 10 ಡಿಎಆರ್ ತುಕಡಿ ಸೇರಿದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ಇದು ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಫ್ಯಾಂಟಸಿ ಪೋಲ್‌ – ʻಇಂಡಿಯಾʼ ಒಕ್ಕೂಟಕ್ಕೆ 295 ಸೀಟ್‌ ಪಕ್ಕಾ: ರಾಗಾ ವಿಶ್ವಾಸ

  • ವಿಧಾನಪರಿಷತ್ ಚುನಾವಣೆ – ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮಠಾಧೀಶರಿಂದ ಬಿಜೆಪಿ ಹೈಕಮಾಂಡ್‍ಗೆ ಪತ್ರ

    ವಿಧಾನಪರಿಷತ್ ಚುನಾವಣೆ – ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮಠಾಧೀಶರಿಂದ ಬಿಜೆಪಿ ಹೈಕಮಾಂಡ್‍ಗೆ ಪತ್ರ

    ನವದೆಹಲಿ: ವಿಧಾನ ಪರಿಷತ್‍ನ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ರಾಜ್ಯದ ಮೂರು ಪ್ರಭಾವಿ ಮಠಾಧೀಶರು ಶಿಫಾರಸ್ಸು ಮಾಡಿದ್ದಾರೆ.

    ಹೌದು, ದಾವಣಗೆರೆ ಮೂಲದ ಡಾ.ಸಿ.ಆರ್ ನಸೀರ್ ಅಹ್ಮದ್‍ಗೆ ಟಿಕೆಟ್ ನೀಡಲು ಮಠಾಧೀಶರು ಮನವಿ ಮಾಡಿದ್ದಾರೆ. ಮೂರು ಪ್ರಭಾವಿ ಮಠಗಳ ಮಠಾಧೀಶರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ರಾಜ್ಯ ಯೋಜನಾ ಆಯೋಗದ ಸದಸ್ಯ ಡಾ.ಸಿ.ಆರ್ ನಸೀರ್ ಅಹ್ಮದ್‍ಗೆ ಅವಕಾಶ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

    ಕರಾವಳಿ, ಉತ್ತರ ಕರ್ನಾಟಕ, ಹಾಗೂ ಮಧ್ಯ ಕರ್ನಾಟಕದ ಪ್ರಭಾವಿಗಳ ಮಠಗಳ ಮಠಾಧೀಶರು ಈ ಪತ್ರ ಬರೆದಿದ್ದು ಡಾ.ಸಿ.ಆರ್ ನಸೀರ್ ಅಹ್ಮದ್ ಮಠದ ಭಕ್ತರಾಗಿದ್ದು, ಬಹಳಷ್ಟು ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ರಾಜಕೀಯ ಅನುಭವವನ್ನು ಬಳಸಿಕೊಳ್ಳುವಂತೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಬಡ್ಡಿ ಆಡುತ್ತಲೇ ಕೋರ್ಟ್‍ನಲ್ಲಿ ಕೊನೆಯುಸಿರೆಳೆದ ಕ್ರೀಡಾಪಟು!

    ಪ್ರಭಾವಿ ಮಠಾಧೀಶರು ಮನವಿ ಮಾಡಿರುವ ಹಿನ್ನೆಲೆ ಬಿಜೆಪಿ ಡಾ.ಸಿ.ಆರ್ ನಸೀರ್ ಅಹ್ಮದ್‍ಗೆ ಟಿಕೆಟ್ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ. ಈ ಹಿಂದಿನ ಯಾವ ಚುನಾವಣೆಯಲ್ಲೂ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿಲ್ಲ. ಹೀಗಾಗಿ ಚುನಾವಣಾ ವರ್ಷದಲ್ಲಿ ಅವಕಾಶ ನೀಡುವ ಮೂಲಕ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಬಹುದಾ ಎನ್ನುವ ಕುತೂಹಲವಿದೆ. ಇದನ್ನೂ ಓದಿ: ಬಾಯಿ ಬಡಿದುಕೊಂಡು ಸಾಕಾಗಿ ಕಾಂಗ್ರೆಸ್ಸಿಗರು ಇಂದು ಮೌನಕ್ಕೆ ಶರಣಾಗಿದ್ದಾರೆ: ಸುಧಾಕರ್ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಜೊತೆ ಲಕ್ಕಿ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಹೊರಟ್ಟಿ

    ಪತ್ನಿ ಜೊತೆ ಲಕ್ಕಿ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಹೊರಟ್ಟಿ

    ಧಾರವಾಡ: ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

    ಪತ್ನಿ ಹೇಮಲತಾ ಜೊತೆ ತಮ್ಮ ಲಕ್ಕಿ ಕಾರ್ ಅಂಬಾಸಿಡರ್‌ ಅಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಒಂದು ಸೆಟ್ ನಾಮಪತ್ರ ಪತ್ನಿ ಜೊತೆ ಹಾಗೂ ಮತ್ತೊಂದು ಸೆಟ್ ನಾಮಪತ್ರ ತಮ್ಮ ಆಪ್ತರ ಜೊತೆಯಲ್ಲಿ ಸಲ್ಲಿಸಿದರು. ಈ ವೇಳೆ ಪತ್ನಿ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ ಬಗ್ಗೆ ಕೇಳಿದ್ದಕ್ಕೆ ಭಾವುಕರಾದ ಅವರ ಕಣ್ಣಿನಲ್ಲಿ ನೀರು ತುಂಬಿ ಬಂತು.

    ಈ ವೇಳೆ ಮಾತನಾಡಿದ ಅವರು, ಎರಡು ಸೆಟ್‍ನಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಎರಡೂ ಸೆಟ್ ನಾಮಪತ್ರ ಸ್ವೀಕಾರ ಆಗಿವೆ. ಇನ್ನು ಮೇ 26ಕ್ಕೆ ಸಿಎಂ, ಪ್ರಹ್ಲಾದ ಜೋಶಿ ಸೇರಿ ಅನೇಕ ನಾಯಕರು ಬರುತ್ತಾರೆ. ಆಗ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ

    ದೇಶದಲ್ಲಿ ಯಾರೂ ಏಳು ಬಾರಿ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿಲ್ಲ. ಆದರೆ ನಾನು 8ನೇ ಗೆಲುವು ಸಾಧಿಸಿದರೆ ದಾಖಲೆ ಆಗುತ್ತದೆ. ಆ ದಾಖಲೆ ಆಗಬೇಕು ಎಂದೇ ಎಲ್ಲರೂ ನಮ್ಮ ಕಡೆ ಒಲವು ತೋರಿಸಿದ್ದಾರೆ ಎಂದರು.

    ಅಂಬಾಸಿಡರ್‌ ಅಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ ಬಗ್ಗೆ ಮಾತನಾಡಿದ ಅವರು, ಅದೆನೋ ಒಂದು ಭಾವನಾತ್ಮಕ ಸಂಬಂಧ, ನನಗೆ ಈ ಕಾರ್ ಮೇಲೆ ಬಹಳ ಪ್ರೀತಿ, ಆ ಪ್ರೀತಿಗಾಗಿ ತೆಗೆದುಕೊಂಡು ಬಂದಿದ್ದೇನೆ. ಈಗಾಗಲೇ ಅದು 8 ಲಕ್ಷ ಕಿ.ಮೀ ಓಡಿದೆ, ಎಲ್ಲರಿಗೂ CNB 5757 ಅಂದರೆ ಪರಿಚಯ ಎಂದ ಅವರು, ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಿದ್ದರು. ಕುಟುಂಬಕ್ಕೆ ಅದನ್ನ ಉಪಯೋಗ ಮಾಡುತ್ತೇವೆ. ಶುಭ ಕಾರ್ಯಕ್ಕೆ ಈ ಕಾರ್ ಒಳ್ಳೆಯದು ಎಂದು ತಲೆಯಲ್ಲಿದ್ದು, ಹೀಗಾಗಿ ಆ ಕಾರು ಬಳಸುತ್ತೇವೆ ಎಂದರು. ಇದನ್ನೂ ಓದಿ: ಆದಷ್ಟು ಬೇಗ ಮಂಗಳಮುಖಿ ಸರ್ಕಾರ ತೆಗೆಯಬೇಕು: ಸಿಎಂ ಇಬ್ರಾಹಿಂ

  • ವಿಧಾನಪರಿಷತ್ ಚುನಾವಣೆ- ಕೊಪ್ಪಳದ ಬಿಜೆಪಿ ನಾಯಕಿಗೆ ಬಂಪರ್‌

    ವಿಧಾನಪರಿಷತ್ ಚುನಾವಣೆ- ಕೊಪ್ಪಳದ ಬಿಜೆಪಿ ನಾಯಕಿಗೆ ಬಂಪರ್‌

    ಕೊಪ್ಪಳ: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಕೊಪ್ಪಳದ ಬಿಜೆಪಿ ನಾಯಕಿಗೆ ಅಚ್ಚರಿಯ ಅವಕಾಶ ದೊರಕಿದೆ.

    ಕೊಪ್ಪಳದ ಹೇಮಲತಾ ಅವರಿಗೆ ಟಿಕೆಟ್ ಫೈನಲ್ ಮಾಡಿದ್ದು, ಬಿಜೆಪಿ ಅಚ್ಚರಿ ನೀಡಿದೆ. ಸಂಸದ ಸಂಗಣ್ಣ ಕರಡಿ ಅವರ ಕಟ್ಟಾ ಬೆಂಬಲಿಗರಾಗಿರುವ ಹೇಮಲತಾ ನಾಯಕ ಅವರು ಸಂಗಣ್ಣ ಕರಡಿ ಅವರು ಬಿಜೆಪಿಗೆ ಬಂದಾಗ ಹೇಮಲತಾ ನಾಯಕ ಸಹ ಬಿಜೆಪಿಗೆ ಬಂದಿದ್ದರು. ಪ್ರಸ್ತುತ ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿರುವ ಹೇಮಲತಾ ನಾಯಕ ಅವರು, ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆಯೂ ಆಗಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಪರಿಷತ್‌ ಪಟ್ಟಿ ಪ್ರಕಟ – ಲಕ್ಷ್ಮಣ ಸವದಿಗೆ ಟಿಕೆಟ್

    ಸದ್ಯ ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯೆ ಆಗಿರುವ ಹೇಮಲತಾ ಈ ಹಿಂದೆ ಕೊಪ್ಪಳ ನಗರಸಭೆಗೆ ಸ್ಪರ್ಧೆಗೆ ಟಿಕೆಟ್ ಕೇಳಿದ್ದರು. ಆಗ ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ. ಈ ಹಿಂದೆ ನಗರಸಭೆಯ 18ನೇ ವಾರ್ಡಿಗೆ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಮೂಲದ ಹೇಮಲತಾ ನಾಯಕ್ ಅವರು ಕೊಪ್ಪಳದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರ ಪತಿ ಪರೀಕ್ಷಿತರಾಜ್ ಅವರು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗುವ ಸುಳಿವು ನೀಡಿದ ಕಟೀಲ್

  • ವಿಧಾನಪರಿಷತ್‍ಗೆ ಕಾಂಗ್ರೆಸ್‍ನಿಂದ ಅಚ್ಚರಿಯ ಆಯ್ಕೆ – ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಕಣಕ್ಕೆ

    ವಿಧಾನಪರಿಷತ್‍ಗೆ ಕಾಂಗ್ರೆಸ್‍ನಿಂದ ಅಚ್ಚರಿಯ ಆಯ್ಕೆ – ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಕಣಕ್ಕೆ

    ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

    ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗಾರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಮೂಲಕ ನಾಳೆ ನಡೆಯಲಿರುವ ನಾಮಪತ್ರ ಸಲ್ಲಿಕೆ ಕುತೂಹಲಕ್ಕೆ ತೆರೆ ಎಳೆದಿದೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?

    ಹಲವು ದಿನಗಳಿಂದ ಕಾಂಗ್ರೆಸ್‍ನ ಹಿರಿಯ ನಾಯಕರು ಟಿಕೆಟ್‍ಗಾಗಿ ಹೈಕಮಾಂಡ್ ಕದತಟ್ಟಿದ್ದರು. ಆದರೆ ಹೈಕಮಾಂಡ್ ಪಕ್ಷ ನಿಷ್ಠರನ್ನು ಹುಡುಕಿ ಮಣೆ ಹಾಕಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಹೈಕಮಾಂಡ್ ಯಾರ ಪ್ರಯತ್ನಕ್ಕೂ ಕೇರ್ ಮಾಡದೇ ತನ್ನದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

    ಜಾತಿ ಸಮೀಕರಣದಲ್ಲಿ ಯಾದವ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ನಾಗರಾಜ್ ಯಾದವ್‍ಗೆ ಅವಕಾಶ ನೀಡಿದೆ. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಮೇಶ್ ಜಾರಕಿಹೊಳಿ ಬೆಂಬಲಿಗ ಸಹಾ ಆಗಿರುವ ನಾಗರಾಜ್ ಯಾದವ್‍ಗೆ ಅವಕಾಶ ಸಿಕ್ಕಿದೆ. ಅಲ್ಲದೇ ಯಾದವ್ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ

    ಈ ಹಿಂದೆ ಒಂದು ಬಾರಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಪರಿಷತ್‍ಗೆ ನಾಮನಿರ್ದೇಶನಗೊಂಡಿದ್ದ ಅಬ್ದುಲ್ ಜಬ್ಬಾರ್‌ಗೆ ಹೈಕಮಾಂಡ್ ಮಣೆ ಹಾಕಿದೆ. ಪ್ರಸ್ತುತ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜಾಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

  • ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

    ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

    ಬೆಂಗಳೂರು: ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

    ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲನುಭವಿಸಿದರ ಕುರಿತು ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಿದೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಾಟ ನಡೆಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಿಂದೆ ಹೇಳಿರುವ ಹಾಗೆ 2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ. ಈಗಲೂ ನಾನು ಅದನ್ನೇ ಹೇಳುತ್ತೇನೆ. ಜೊತೆಗೆ ಈ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ. ಆದರೂ ಈ ಚುನಾವಣೆಯಲ್ಲಿ ಪ್ರಯತ್ನ ಮಾಡಿದ್ದೇವೆ. ದೊಡ್ಡ ಪಕ್ಷಗಳ ಹಣ ಹಂಚಿಕೆ ನಡುವೆ ನಾವು ಹಿಂದೆ ಬಿದ್ದಿದ್ದೇವೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಆರೋಪಿಸಿದರು.

    ಚುನಾವಣೆ ಎಂದರೆ ಸೋಲು-ಗೆಲುವು ಸಹಜ. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಇನ್ನೂ ಮುಂದೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಹಣಬಲದಿಂದ ಎದುರಾಗುವ ಇಂಥ ಸೋಲುಗಳಿಗೆ ಜೆಡಿಎಸ್ ಎಂದಿಗೂ ಧೃತಿಗೆಡುವುದಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು

    ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತದಾರರಾಗಿದ್ದರು. ಆದ್ದರಿಂದ ಜೆಡಿಎಸ್ ಸೋಲು ಅನುಭವಿಸಿದೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರೇ ನೇರವಾಗಿ ಹಕ್ಕು ಚಲಾಯಿಸುವುದರಿಂದ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು ಎಂದ ಅವರು ಜಯ ಗಳಿಸಿದ ಎಲ್ಲ ಪಕ್ಷದ ಅಭ್ಯರ್ಥಿಗಳಿಗೂ ಶುಭ ಕೋರಿದರು. ಇದನ್ನೂ ಓದಿ: ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

     

  • ವಿಧಾನಪರಿಷತ್ ಚುನಾವಣೆ ಯಶಸ್ವಿ – ಡಿಸೆಂಬರ್ 14ರಂದು ಫಲಿತಾಂಶ

    ವಿಧಾನಪರಿಷತ್ ಚುನಾವಣೆ ಯಶಸ್ವಿ – ಡಿಸೆಂಬರ್ 14ರಂದು ಫಲಿತಾಂಶ

    ಬೆಂಗಳೂರು: ವಿಧಾನಸಭೆ ಚುನಾವಣೆಯಷ್ಟೇ ಹೈಪ್ ಕ್ರಿಯೇಟ್ ಮಾಡಿದ್ದ 20 ಜಿಲ್ಲೆಗಳ 25 ಸ್ಥಾನಗಳ ವಿಧಾನಪರಿಷತ್ ಚುನಾವಣೆ ಮುಕ್ತಾಯವಾಗಿದೆ. ಮತಪೆಟ್ಟಿಗೆಯಲ್ಲಿ 90 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಈಗ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದ್ದು, ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.

    ಸುಗಮ ಚುನಾವಣೆಗಾಗಿ 20 ಜಿಲ್ಲೆಗಳಲ್ಲಿ 6,073 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಸಣ್ಣ ಪುಟ್ಟ ಘಟನೆ ಹೊರತುಪಡಿಸಿದರೆ ಉಳಿದಂತೆ ಶಾಂತಿಯುತ ಮತದಾನ ನಡಿಯಿತು. ಹಾವೇರಿಯ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ, ಶಿಕಾರಿಪುರದಲ್ಲಿ ಯಡಿಯೂರಪ್ಪ, ಬಾದಾಮಿಯಲ್ಲಿ ಸಿದ್ದರಾಮಯ್ಯ, ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಇತರೆ ನಾಯಕರು ಅವರವರ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್

    ಕಲಬುರಗಿ ಸಂಸದ ಉಮೇಶ್ ಜಾಧವ್ ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿ ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ವಿವಾದ ಆಗುತ್ತಲೇ, ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಚಿತ್ರದುರ್ಗದ ಕೆಲ ಗ್ರಾಮ ಪಂಚಾಯತ್ ಸದಸ್ಯರು ನನ್ನ ಮತ ಮಾರಾಟಕ್ಕಿಲ್ಲ, ಬಿಜೆಪಿಗೆ ಮತ ನೀಡಿದ್ದೇವೆ ಎಂದು ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಎಂ.ಬಿ ಪಾಟೀಲ್ ಕಾಲೇಜಿನ ಉಪನ್ಯಾಸಕರನ್ನು ಮತಗಟ್ಟೆ ಏಜೆಂಟ್ ಮಾಡಲಾಗಿದೆ ಎಂದು ಬಾಗಲಕೋಟೆಯ ಚಿಕ್ಕಪಡಸಲಗಿಯಲ್ಲಿ ಪಕ್ಷೇತರ ಅಭ್ಯರ್ಥಿ ಆರೋಪಿಸಿದ್ದಾರೆ. ಇದನ್ನೂ ಓದಿ:  ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದವರಿಗೆ ಹೊಸ ಗೈಡ್‌ಲೈನ್ಸ್‌

    ಕೋಲಾರ ಮತಕೇಂದ್ರದ ಒಳಕ್ಕೆ ಮೊಬೈಲ್ ಬಿಟ್ಟಿದ್ದಕ್ಕೆ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಬೀದರ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗ ಎನ್ನಲಾದ ವ್ಯಕ್ತಿಯ ಕಾರಿನಲ್ಲಿ ಮದ್ಯದ ಬಾಟಲ್‍ಗಳು ಪತ್ತೆಯಾಯಿತು ಇದು ವಾಕ್ಸಮರಕ್ಕೆ ಕಾರಣವಾಯಿತು. ಇದನ್ನೂ ಓದಿ: 2 ಡೋಸ್ ಲಸಿಕೆ ಪಡೆದ 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಲು ICMR ಅನುಮತಿ?

  • ವಿರೋಧಿಗಳ ಒತ್ತಡ, ಧಮ್ಕಿಗೆ ಹೆದರದೇ ಮತ ಚಲಾಯಿಸಿ: ಲಕ್ಷ್ಮೀ ಹೆಬ್ಬಾಳ್ಕರ್

    ವಿರೋಧಿಗಳ ಒತ್ತಡ, ಧಮ್ಕಿಗೆ ಹೆದರದೇ ಮತ ಚಲಾಯಿಸಿ: ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ಯಾರನ್ನೂ ಟೂರ್‌ಗೆ ಕಳಿಸುತ್ತಿಲ್ಲ, ವಿರೋಧಿಗಳ ಒತ್ತಡ, ಧಮ್ಕಿಗೆ ಹೆದರದೇ ಮತ ಚಲಾಯಿಸಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

     

    ವಿಧಾನಪರಿಷತ್ ಚುನಾವಣೆ ಡಿಸೆಂಬರ್ 10 ರಂದು ನಡೆಯುತ್ತಿದೆ. ಕೆಲವು ಜನರು ಲಕ್ಷ್ಮೀ ಹೆಬ್ಬಾಳ್ಕರ್ ಟೂರ್‌ಗೆ ಕರೆದಿದ್ದಾರೆ ಎಂದು ಹೇಳಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನು ಯಾವ ಜನರನ್ನು ಟೂರ್‌ಗೆ ಕಳಿಸುತ್ತಿಲ್ಲ. ತಾವು ಕೂಡ ಯಾಮಾರಬೇಡಿ. ಇಲ್ಲಿಯೇ ಇದ್ದು, ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟಿರುವ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

    ಮಾಧ್ಯಮಗಳಿಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಾವುದೇ ಒತ್ತಡಕ್ಕೆ, ಧಮ್ಕಿಗೆ ತಾವು ಹೆದರುವ ಅವಶ್ಯಕತೆ ಇಲ್ಲ. ನ್ಯಾಯಯುತವಾದ ಚುನಾವಣೆಯನ್ನು ನಾವು ಮಾಡೋಣ. ಎಲ್ಲರೂ ನನಗೆ ಸಹಾಯ, ಸಹಕಾರ, ಆಶೀರ್ವಾದ ಮಾಡಿ. ನಿಮ್ಮ ಜೊತೆಗೆ ಮನೆ ಮಗಳಾಗಿ ಯಾವತ್ತೂ ಇರುತ್ತೇನೆ. ನನ್ನ ತಮ್ಮ, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮುಖಂಡರು ತಮ್ಮ ಜೊತೆಗೆ ಯಾವಾಗಲೂ ಇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: UAEಯಲ್ಲಿ ನಾಲ್ಕೂವರೆ ದಿನ ಮಾತ್ರ ಕೆಲಸ – ಶನಿವಾರ, ಭಾನುವಾರ ವೀಕೆಂಡ್

  • ಬಿಜೆಪಿ ಅಭ್ಯರ್ಥಿ ಪರ ಕಾಣಿಸಿಕೊಳ್ಳದ ಅನಂತ್‌ಕುಮಾರ್ ಹೆಗಡೆ – ಕಾರಣ ರಿವೀಲ್

    ಬಿಜೆಪಿ ಅಭ್ಯರ್ಥಿ ಪರ ಕಾಣಿಸಿಕೊಳ್ಳದ ಅನಂತ್‌ಕುಮಾರ್ ಹೆಗಡೆ – ಕಾರಣ ರಿವೀಲ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‌ಕುಮಾರ್ ಹೆಗಡೆ ಪರಿಷತ್ ಚುನಾವಣೆ ಸಂಬಂಧ ಜಿಲ್ಲೆಯ ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರಕ್ಕೂ ಸಹ ಗೈರಾಗಿದ್ದು ಪಕ್ಷದಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹಲವು ಊಹಪೋಹಗಳು ಹರಿದಾಡುತ್ತಿದ್ದಂತೆ ಸ್ವತಃ ಅನಂತಕುಮಾರ್ ಹೆಗಡೆ ಸ್ಪಷ್ಟನೆ ನೀಡಿದ್ದಾರೆ.

    ಸ್ಪಷ್ಟನೆಯಲ್ಲಿ ಏನಿದೆ?
    ವಿಧಾನ ಪರಿಷತ್ ಚುನಾವಣೆ ಘೋಷಣೆಯಾದಾಗಿನಿಂದ ಪೂರ್ವ ನಿಗದಿತ ಕಾರ್ಯಕ್ರಮಗಳಾದ ಬೆಂಗಳೂರು, ಮೈಸೂರು ಹಾಗೂ ತಮಿಳುನಾಡು ಪ್ರವಾಸದಲ್ಲಿದ್ದು, ಅದರಂತೆ ನವೆಂಬರ್ 29 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ. ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುತ್ತಿರುವುದರಿಂದ ಅನಿವಾರ್ಯವಾಗಿ ಉತ್ತರ ಕನ್ನಡ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಪರವಾಗಿ ಮತ ಪ್ರಚಾರಕ್ಕೆ ಬರಲು ಸಾಧ್ಯವಾಗಿರುವುದಿಲ್ಲ. ಈಗಾಗಲೇ ಈ ವಿಷಯವನ್ನು ಜಿಲ್ಲೆಯ ಎಲ್ಲಾ ಮುಖಂಡರಿಗೂ ತಿಳಿಸಿದ್ದು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷದ ಮುಖಂಡರು ಸಾಮೂಹಿಕ ಜವಾಬ್ದಾರಿಯನ್ನು ಸ್ವೀಕರಿಸಲು ಸೂಚಿಸಿದ್ದೇನೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ

    ವಿಧಾನ ಪರಿಷತ್ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ನಿಶ್ಚಿತ. ಈಗಾಗಲೇ ಜಿಲ್ಲೆಯ ಶಾಸಕರು, ಉಸ್ತುವಾರಿ ಮಂತ್ರಿಗಳು ಹಾಗೂ ಇನ್ನೀತರ ಮುಖಂಡರುಗಳು ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿವೆ. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತದಾರರಾಗಿದ್ದು, ಅವರೆಲ್ಲರೂ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವರಾಗಿದ್ದಾರೆ. ಅವರೆಲ್ಲರೂ ಬಿಜೆಪಿ ಪಕ್ಷದ ಅಭ್ಯರ್ಥಿಯ ಪರವಾಗಿ ಮತವನ್ನು ಚಲಾಯಿಸಲಿದ್ದು, ಈ ಬಾರಿ ಗಣಪತಿ ಉಳ್ವೇಕರ್ ಮೇಲ್ಮನೆಯನ್ನು ಪ್ರವೇಶಿಸುವುದು ನಿಶ್ಚಿತ ಎಂದು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

  • ನಿರಾಣಿ ಸಿಎಂ ಆಗುವ ಅವಕಾಶವಿದೆ ಅನ್ನೋ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ವಿಜಯೇಂದ್ರ

    ನಿರಾಣಿ ಸಿಎಂ ಆಗುವ ಅವಕಾಶವಿದೆ ಅನ್ನೋ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ವಿಜಯೇಂದ್ರ

    ಚಾಮರಾಜನಗರ: ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗುವ ಅವಕಾಶ ಇದೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

    ಈಶ್ವರಪ್ಪ ಅವರ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರುವಂತ ದಿನಗಳಲ್ಲಿ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆಯೇ ಹೊರತು ಈ ಅವಧಿಯಲ್ಲಿ ಅಲ್ಲ. ಆದರೆ ವಿರೋಧ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ಸಿಎಂ ಬೊಮ್ಮಾಯಿ ಸರ್ಕಾರ ಸುಭದ್ರವಾಗಿದೆ. ಬೊಮ್ಮಾಯಿ ಅವರು ತಮ್ಮ ಅವಧಿ ಪೂರೈಸಲಿದ್ದಾರೆ ಎಂದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಭಾರತದ ಅಂತರರಾಷ್ಟ್ರೀಯ ವಿಮಾನ ಪುನರಾರಂಭ ಮುಂದೂಡಿಕೆ

    ವಿಧಾನಪರಿಷತ್ ಚುನಾವಣೆಯ 25 ಕ್ಷೇತ್ರಗಳ ಪೈಕಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಾವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಭಿವೃದ್ಧಿಯ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇವೆ. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಈಗಿನ ಸಿಎಂ ಬೊಮ್ಮಾಯಿ ಸರ್ಕಾರದ ಸಾಧನೆ, ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ಗೆ ಮತ ಕೇಳಲು ಯಾವ ಸಾಧನೆಯು ಇಲ್ಲ ಎಂದು ಟೀಕಿಸಿದರು.

    ಯಾವುದೇ ಉಪಚುನಾವಣೆ ಬಂದಾಗ ನಾನು ಸ್ಪರ್ಧೆ ಮಾಡುತ್ತೇನೆ ಎಂಬ ಮಾತು ಸಾಮಾನ್ಯವಾಗಿಬಿಟ್ಟಿದೆ. ಪಕ್ಷ ನನಗೆ ಎಲ್ಲಿ ಟಿಕೇಟ್ ನೀಡಿದರೂ ಸ್ಪರ್ಧಿಸುತ್ತೇನೆ. ಎಲ್ಲಿ ಟಿಕೆಟ್ ಕೊಟ್ಟರೂ ಸ್ಪರ್ಧಿಸುವ ಆಸೆ ಇದೆ. ಆದರೆ ನಾನು ಎಲ್ಲಿ ಸ್ಪರ್ಧೆಗೆ ನಿಲ್ಲಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 9ನೇ ತರಗತಿ ವಿದ್ಯಾರ್ಥಿಗೆ ಕೊರೊನಾ ದೃಢ – ಶಾಲೆಗೆ ರಜೆ