Tag: ವಿಧಾನಪರಿಷತ್

  • ಸೋಮವಾರ ಪರಿಷತ್‍ನ ಆರು ಸ್ಥಾನಗಳಿಗೆ ಎಲೆಕ್ಷನ್

    ಸೋಮವಾರ ಪರಿಷತ್‍ನ ಆರು ಸ್ಥಾನಗಳಿಗೆ ಎಲೆಕ್ಷನ್

    ಬೆಂಗಳೂರು: ವಿಧಾನ ಪರಿಷತ್ ನ ಶಿಕ್ಷಕರು ಮತ್ತು ಪದವೀಧರ 6 ಕ್ಷೇತ್ರಗಳಿಗೆ ಸೋಮವಾರ ಚುನಾವಣೆ ನಡೆಯಲಿದೆ.  ಚುನಾವಣೆಗೆ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ.

    ಲೋಕಸಭಾ ಚುನಾವಣೆಯಂತೆ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಆಡಳಿತ ಪಕ್ಷ ಕಾಂಗ್ರೆಸ್ ಅನ್ನ ಎದುರಿಸುತ್ತಿದೆ. 6 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡ್ತಿದ್ದು, ಬಿಜೆಪಿ 4 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಆಡಳಿತ ಪಕ್ಷಕ್ಕೆ ಸವಾಲ್ ಹಾಕಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಮತದಾನ ಮಾಡುವವರು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ ಪೋರ್ಟ್ ಸೇರಿ ಸರ್ಕಾರದ ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದಾಗಿದೆ.

    ವಿಧಾನ ಪರಿಷತ್ ಚುನಾವಣೆ ವಿವರ ಹೀಗಿದೆ:
    ಪದವೀಧರ ಕ್ಷೇತ್ರದಲ್ಲಿ ಒಟ್ಟು 3,63,573 ಮತಗಳಿವೆ. 461 ಒಟ್ಟು ಮತ ಕೇಂದ್ರಗಳಿವೆ. ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 70260 ಮತಗಳಿದ್ದು, 170 ಮತ ಕೇಂದ್ರಗಳಿವೆ. ಒಟ್ಟಾರೆ 78 ಅಭ್ಯರ್ಥಿಗಳಿದ್ದಾರೆ.

    * ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿದ್ದಾರೆ. ಇನ್ನು 1,56,623 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಡಾ. ಚಂದ್ರಶೇಖರ ಪಾಟೀಲ್ ಹಾಗೂ ಬಿಜೆಪಿಯಿಂದ ಅಮರನಾಥ ಪಾಟೀಲ್ ಕಣದಲ್ಲಿದ್ದಾರೆ.
    * ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 10 ಮಂದಿ ಅಭ್ಯರ್ಥಿಗಳಿದ್ದಾರೆ. 85090 ಒಟ್ಟು ಮತದಾರರಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಆಯನೂರು ಮಂಜುನಾಥ್ ಹಾಗೂ ಬಿಜೆಪಿಯಿಂದ ಧನಂಜಯ ಸರ್ಜಿ ಸ್ಪರ್ಧಿಸುತ್ತಿದ್ದಾರೆ.
    * ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 15 ಮಂದಿ ಅಭ್ಯರ್ಥಿಗಳಿದ್ದಾರೆ. 1,21,860 ಒಟ್ಟು ಮತದಾರರಿದ್ದು, ಕಾಂಗ್ರೆಸ್ ನಿಂದ ರಾಮೋಜಿ ಗೌಡ ಹಾಗೂ ಬಿಜೆಪಿಯಿಂದ ಅ. ದೇವೇಗೌಡ ಚುಣವಣಾ ಅಖಾಡದಲ್ಲಿದ್ದಾರೆ.

    * ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 15 ಮಂದಿ ಅಭ್ಯರ್ಥಿಗಳಿದ್ದಾರೆ. 25,309 ಒಟ್ಟು ಮತದಾರರು ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಡಿ.ಟಿ. ಶ್ರೀನಿವಾಸ್ ಹಾಗೂ ಬಿಜೆಪಿಯಿಂದ ವೈ.ಎ. ನಾರಾಯಣಸ್ವಾಮಿ ಕಣದಲ್ಲಿದ್ದಾರೆ.
    * ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಮಂದಿ ಅಭ್ಯರ್ಥಿಗಳಿದ್ದು, 23,402 ಮಂದಿ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಕೆ.ಕೆ. ಮಂಜುನಾಥ್ ಸ್ಪರ್ಧಿಸಿದರೆ, ಜೆಡಿಎಸ್‍ನಿಂದ ಭೋಜೇಗೌಡ ಸ್ಪರ್ಧಿಸುತ್ತಿದ್ದಾರೆ.
    * ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳಿದ್ದಾರೆ. 21549 ಮಂದಿ ಒಟ್ಟು ಮತದಾರರಿದ್ದಾರೆ. ಕಾಂಗ್ರೆಸ್‍ನಿಂದ ಮರಿತಿಬ್ಬೇಗೌಡ ಹಾಗೂ ಜೆಡಿಎಸ್‍ನಿಂದ ವಿವೇಕಾನಂದ ಚುನಾವಣಾ ಕಣದಲ್ಲಿದ್ದಾರೆ.

  • ಉಮಾಶ್ರೀ ಸೇರಿದಂತೆ ಮೂವರು ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

    ಉಮಾಶ್ರೀ ಸೇರಿದಂತೆ ಮೂವರು ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

    ಬೆಂಗಳೂರು: ನಟಿ, ಮಾಜಿ ಸಚಿವೆ ಉಮಾಶ್ರೀ (Umashree) ಸೇರಿದಂತೆ ಮೂವರು ವಿಧಾನಪರಿಷತ್ (Vidhanaparishad) ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ.

    ಮಾಜಿ ಸಚಿವೆ ಉಮಾಶ್ರೀ, ಎಂ.ಆರ್.ಸೀತಾರಾಂ (MR Seetharam) ಹಾಗೂ ಸುಧಾಮ್‍ದಾಸ್ (Sudhamdas) ಪರಿಷತ್ ಅವರನ್ನು ಕಾಂಗ್ರೆಸ್ (Congress) ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಿದೆ. ಈ ಕುರಿತು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಮೂಲಕ ಕಾಂಗ್ರೆಸ್‍ನಿಂದ ಮೂವರು ಮೇಲ್ಮನೆಗೆ ಪ್ರವೇಶ ಪಡೆದಿದ್ದಾರೆ.

    ಮೂವರ ನಾಮನಿರ್ದೇಶನದ ಬೆನ್ನಲ್ಲೇ ಅಸಮಾಧಾನದ ಹೊಗೆ ಎದ್ದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತ ಸುಧಾಮ್ ದಾಸ್ ನೇಮಕಕ್ಕೆ ಹಿರಿಯ ಸಚಿವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

    ವಿಧಾನ ಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನಕ್ಕೆ ಆಕ್ಷೇಪಿಸಿ ರಾಜ್ಯಪಾಲರಿಗೆ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್ ಶಾಸ್ತ್ರಿ ದೂರು ನೀಡಿದ್ದರು. ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚನೆ ನೀಡಿದ್ದರು. ಈ ಎಲ್ಲದರ ನಡುವೆ ಇಂದು ರಾಜ್ಯಪಾಲರು ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪರಿಷತ್‍ನಲ್ಲಿ ಕೆ.ಟಿ ಶ್ರೀಕಂಠೇಗೌಡ ಅತ್ಯುತ್ತಮ ಶಾಸಕ

    ಪರಿಷತ್‍ನಲ್ಲಿ ಕೆ.ಟಿ ಶ್ರೀಕಂಠೇಗೌಡ ಅತ್ಯುತ್ತಮ ಶಾಸಕ

    ಬೆಂಗಳೂರು: ವಿಧಾನಪರಿಷತ್‍ನ (Vidhanaparishad) 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಮಾಜಿ ಶಾಸಕ ಕೆಟಿ ಶ್ರೀಕಂಠೇಗೌಡ (KT Srikantegowda) ಆಯ್ಕೆಯಾಗಿದ್ದಾರೆ.

    ಮೂರು ಬಾರಿ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಗೌಡರ ಪರಿಷತ್ ನ ಸದಸ್ಯ ಅವಧಿ ಇತ್ತೀಚೆಗೆ ಅಂತ್ಯಗೊಂಡಿತ್ತು. ಉತ್ತಮ ಸಂಸದೀಯಪಟುವಾಗಿದ್ದ ಅವರು, ದಕ್ಷಿಣ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಜಾತ್ಯಾತೀತ ಜನಾತದಳದ ಹಿರಿಯ ನಾಯಕಾಗಿದ್ದ ಗೌಡರು ವಾಗ್ಮಿಯಾಗಿದ್ದರು.

    ಪರಿಷತ್‍ನಲ್ಲಿ ಪ್ರತಿಪಕ್ಷದ ಉಪನಾಯಕ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪರಿಷತ್‍ನಲ್ಲಿ ಅವರ ನಡವಳಿಕೆ, ಸಾಧನೆ, ಭಾಗವಹಿಸುವಿಕೆ, ಜನಪರಕಾಳಜಿಯನ್ನು ಪರಿಗಣಿಸಿ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಂಗಳವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶ್ರೀಕಂಠೇಗೌಡರಿಗೆ 2022 ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನ ಪರಿಷತ್ ಮಾಜಿ ಸಭಾಪತಿ ಕಾರಿನ ಮೇಲೆ ಕಲ್ಲು ತೂರಾಟದ ಆರೋಪ- ಪ್ರಕರಣ ದಾಖಲು

    ವಿಧಾನ ಪರಿಷತ್ ಮಾಜಿ ಸಭಾಪತಿ ಕಾರಿನ ಮೇಲೆ ಕಲ್ಲು ತೂರಾಟದ ಆರೋಪ- ಪ್ರಕರಣ ದಾಖಲು

    ಯಾದಗಿರಿ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆಂದು ಹೋಗಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ಒಬ್ಬರ ಮೇಲೆ ಬಿಜೆಪಿ ಕಾರ್ಯಕರ್ತ (BJP Activists) ರಿಂದ ದಾಳಿಯಾಗಿರುವ ಆರೋಪ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕೇಳಿ ಬಂದಿದೆ.

    ವಿಧಾನ ಪರಿಷತ್ ಮಾಜಿ ಸಭಾಪತಿ ಡೆವಿಡ್ ಸಿಮನ್ (David Simeon) ವಾಹನ ಮೇಲೆ ದಾಳಿ ನಡೆದಿದ್ದು, ಕಾರಿನ ಗಾಜು ಪುಡಿ ಪುಡಿಯಾಗಿದೆ. ಸುರಪುರದ ಡೊಣ್ಣಿಗೇರೆ ಬಡಾವಣೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ (Congress Candidate) ರಾಜಾ ವೆಂಕಟಪ್ಪ ನಾಯಕ ಪರ ಡೆವಿಡ್ ಸಿಮನ್ ಪ್ರಚಾರಕ್ಕೆ ತೆರಳಿದ್ರು. ಈ ವೇಳೆ ಎಂಟತ್ತು ಜನರಿದ್ದ ಬಿಜೆಪಿ ಕಾರ್ಯಕರ್ತರ ಗುಂಪಿನಿಂದ ಏಕಾಏಕೀ ದಾಳಿ ಮಾಡಿ ಹಲ್ಲೆ ಮಾಡಿದೆ ಎನ್ನಲಾಗಿದ್ದು, ಈ ಸಂಬಂಧ ಸುರಪುರ ಪೊಲೀಸ್ ಠಾಣೆ (Surapura Police Station) ಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಹಿಂದೆಯೂ ಇದೇ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟದಿಂದಾಗಿ 15ಕ್ಕೂ ಹೆಚ್ಚು ವಾಹನಗಳು ಜಖಂ ಆಗಿ, ನಾಲ್ಕೈದು ಕಾರ್ಯಕರ್ತರಿಗೆ ಗಾಯಗಳಾಗಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಕಲ್ಲು ತೂರಾಟದ ದಾಳಿ ನಡಿದಿರೋದ್ರಿಂದ ಸುರಪುರ ಕ್ಷೇತ್ರದ ಜನ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಕೆ.ಆರ್.ನಗರದಲ್ಲಿ ಸಾ.ರಾ.ಮಹೇಶ್ ಪುತ್ರನ ಕಾರಿಗೆ ಕಲ್ಲೇಟು- ಬೆಂಗ್ಳೂರಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

     

  • ಇದುವರೆಗೂ 38 ಮಂದಿ ಮೆಟ್ರೋ ಅವಘಡಕ್ಕೆ ಬಲಿಯಾಗಿದ್ದಾರೆ: ಸಿಎಂ

    ಇದುವರೆಗೂ 38 ಮಂದಿ ಮೆಟ್ರೋ ಅವಘಡಕ್ಕೆ ಬಲಿಯಾಗಿದ್ದಾರೆ: ಸಿಎಂ

    ಬೆಂಗಳೂರು: ಮೆಟ್ರೋ (Metro)ಕಾಮಗಾರಿಗೆ ಸಂಬಂಧಿಸಿದಂತೆ ಇದುವರೆಗೂ 50 ಜನ ಅಪಘಾತಕ್ಕೊಳಗಾಗಿದ್ದಾರೆ. ಅದರಲ್ಲಿ 38 ಜನರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಧಾನಪರಿಷತ್‍ನಲ್ಲಿ (State Legislative Council) ತಿಳಿಸಿದ್ದಾರೆ.

    ವಿಧಾನಪರಿಷತ್ ಸದಸ್ಯರೊಬ್ಬರ ಪ್ರಶ್ನೆಗೆ ಅವರು ಉತ್ತರಿಸುವಾಗ, ಇದುವರೆಗೂ ಆದ ಮೆಟ್ರೋ ಕಾಮಗಾರಿ ವೇಳೆ ಸಂಭವಿಸಿದ ವಿವಿಧ ಅನಾಹುತಗಳಿಂದ ಆದ ಸಾವು ನೋವುಗಳು, ನೀಡಲಾದ ಪರಿಹಾರ ಹಾಗೂ ಜರುಗಿಸಲಾದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

    ಕಾಮಗಾರಿ ನಡೆಯುವಾಗ ಆದ ಅವಘಡಗಳಿಂದ ಮೃತಪಟ್ಟವರ ಕುಟುಂಬಗಳಿಗೆ 3.15 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲಾಗಿದೆ. ಅವಘಡಕ್ಕೆ ಕಾರಣರಾದ ಮೂರು ಎಂಜಿನಿಯರ್‌ಗಳನ್ನು (Engineer) ಅಮಾನತು ಮಾಡಲಾಗಿದೆ. ಗುತ್ತಿಗೆದಾರರಿಗೆ 1.17 ಕೋಟಿ ರೂ.ಗಳನ್ನು ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೀನೂಟ ಸವಿದು ದೇವರ ದರ್ಶನ ಮಾಡಿದ ಸಿ.ಟಿ ರವಿ ಫೋಟೋ ವೈರಲ್

    ಅವಘಡಗಳನ್ನು ತಪ್ಪಿಸಲು ಹೆಣ್ಣೂರು ಮೆಟ್ರೋ ಪಿಲ್ಲರ್ ದುರಂತದ ಬಳಿಕ ತೆಗೆದುಕೊಂಡ ಕ್ರಮಗಳು ಮತ್ತು ಕೈಪಿಡಿ ಪ್ರಕಾರವೇ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

    ಗುತ್ತಿಗೆದಾರರ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ಕೈಪಿಡಿ ಯೋಜನೆಗೆ ಅನುಗುಣವಾಗಿ ಎಲ್ಲಾ ಸಿಬ್ಬಂದಿಯನ್ನು ಆಯ್ಕೆ ಮಾಡಬೇಕು. ಯೋಜನೆಯ ನಿಯಮದಂತೆ ತಪಾಸಣೆ ಮತ್ತು ಪರಿಶೋಧನೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬೇಕು, ಶೀಘ್ರವೇ ಪ್ರಕರಣದ ವಿಚಾರಣೆ ನಡೆಸಿ- ಸುಪ್ರೀಂಗೆ ವಕೀಲರ ಮನವಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೂನ್ ಅಂತ್ಯಕ್ಕೆ ರಾಜ್ಯದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಭೈರತಿ ಬಸವರಾಜ್

    ಜೂನ್ ಅಂತ್ಯಕ್ಕೆ ರಾಜ್ಯದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಭೈರತಿ ಬಸವರಾಜ್

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ (Smart City) ಯೋಜನೆ ಕಾಮಗಾರಿಗಳು ಜೂನ್ ಒಳಗೆ ಮುಕ್ತಾಯ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ (Byrati Basavaraj) ತಿಳಿಸಿದ್ದಾರೆ.

    ವಿಧಾನಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ಪ್ರಾರಂಭವಾಗಿ 7 ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಯೋಜನೆ ಯಾವಾಗ ಮುಗಿಯಲಿದೆ? ಯಾಕೆ ತಡವಾಯ್ತು ಎಂದು ಪ್ರಶ್ನೆ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಭೈರತಿ ಬಸವರಾಜ್, ರಾಜ್ಯದಲ್ಲಿ 7 ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಜೂನ್ 2023 ಒಳಗೆ ಎಲ್ಲಾ ಕಾಮಗಾರಿ ಮುಗಿಸಲು ಕೇಂದ್ರ ಸೂಚನೆ ನೀಡಿದೆ. ಅದರಂತೆ ಜೂನ್ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದರು. ಇದನ್ನೂ ಓದಿ: ಬಿಜೆಪಿಯದ್ದು ತ್ರಿಬಲ್ ಎಂಜಿನ್ ಸರ್ಕಾರ.. ಇವ್ರು ಕರ್ನಾಟಕ ಉಳಿಸ್ತಾರಾ: ಹೆಚ್‌ಡಿಕೆ ಪ್ರಶ್ನೆ

    ಒಟ್ಟು 651 ಕಾಮಗಾರಿ ನಡೆಯುತ್ತಿದೆ. ಈವರೆಗೆ 522 ಕಾಮಗಾರಿ ಪೂರ್ಣಗೊಂಡಿದೆ. 127 ಕಾಮಗಾರಿ ನಡೆಯುತ್ತಿದೆ. ಕರ್ನಾಟಕದಲ್ಲಿ ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೇಶದಲ್ಲಿ 3 ಸ್ಥಾನದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಾವು ಇದ್ದೇವೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರ 3,400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 3,500 ಕೋಟಿ ರೂ. ಬಿಡುಗಡೆ ಮಾಡಿದೆ. ಜೂನ್ 2023ರ ಒಳಗೆ ಕಾಮಗಾರಿ ಮುಗಿಸುತ್ತೇವೆ. 2-3 ಕಾಮಗಾರಿಗಳಿಗೆ ಹೆಚ್ಚುವರಿ ಸಮಯ ಕೇಳಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆ ಕಾಮಗಾರಿಗಳನ್ನು 2024ಕ್ಕೆ ಮುಕ್ತಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: DCC Bankನಲ್ಲಿ ಅಕ್ರಮ ಮಾಡಿರುವವರ ಮೇಲೆ ಕ್ರಮ ಗ್ಯಾರಂಟಿ: ಎಸ್.ಟಿ ಸೋಮಶೇಖರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ

    ವಿಧಾನ ಪರಿಷತ್‍ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆ

    ಬೆಂಗಳೂರು: ವಿಧಾನ ಪರಿಷತ್‍ನಲ್ಲಿಂದು (Vidhana Parishad) ಮತಾಂತರ ನಿಷೇಧ ವಿಧೇಯಕ (Anti Conversion Bill) ಮಂಡನೆ ಆಗಲಿದೆ. ವಿಧಾನಸಭೆಯಿಂದ ಅಂಗೀಕಾರವಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2022ನ್ನು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಂಡನೆ ಮಾಡಲಿದ್ದಾರೆ.

    ವಿಪಕ್ಷ ಕಾಂಗ್ರೆಸ್ (Congress) ಈ ಬಿಲ್‍ಗೆ ವಿಧಾನಸಭೆಯಲ್ಲಿ ವಿರೋಧಿಸಿತ್ತು. ಇದೀಗ ವಿಧಾನ ಪರಿಷತ್‍ನಲ್ಲೂ ವಿರೋಧಿಸುವ ಸಾಧ್ಯತೆ ಇದೆ. ಸದ್ಯ ಪರಿಷತ್‍ನಲ್ಲಿ ಬಿಜೆಪಿಗೆ (BJP) ಬಹುಮತ ಇದ್ದು, ಬಹುತೇಕ ವಿಧೇಯಕ ಪಾಸ್ ಆಗಲಿದೆ. ಜೆಡಿಎಸ್ (JDS) ಕೂಡಾ ಬಿಲ್‍ಗೆ ವಿರೋಧಿಸುವ ಸಾಧ್ಯತೆ ಇದೆ. ಆಡಳಿತ-ವಿಪಕ್ಷಗಳ ನಡುವೆ ಗದ್ದಲ ಗಲಾಟೆ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರದ ಡಬಲ್ ಗೇಮ್ ಬಯಲು – ಕೈ ಪ್ರಭಾವಿ ನಾಯಕ ಜಾರ್ಜ್ ಒತ್ತುವರಿ ಕಾಟಾಚಾರಕ್ಕೆ ತೆರವು

    ಇತ್ತ ಆರ್‌ಎಸ್‌ಎಸ್‌ (RSS) ಮುಖಂಡರ ಜೊತೆ ಬಿಜೆಪಿಯ ಆಯ್ದ ಪರಿಷತ್ ಸದಸ್ಯರು ರಾತ್ರಿ ಚಾಮರಾಜಪೇಟೆಯ ಕೇಶವಾಕೃಪಾದಲ್ಲಿ ಸಭೆ ನಡೆಸಿದ್ರು. ಮತಾಂತರ ತಡೆ ವಿಧೇಯಕ ಬಗ್ಗೆ ಪರಿಷತ್‍ನಲ್ಲಿ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಿಧಾನ ಪರಿಷತ್‍ನಲ್ಲಿ ಈವರೆಗೆ ಮಸೂದೆಯನ್ನು ಸರ್ಕಾರ ಮಂಡಿಸಿರಲಿಲ್ಲ. ಮಸೂದೆ ಮಂಡಿಸುವ ತಡವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಪ್ರಸ್ತುತ ವಿಧಾನ ಪರಿಷತ್‍ನಲ್ಲಿ ಬಿಜೆಪಿಯ 41 ಸದಸ್ಯರಿದ್ದಾರೆ. ಕಾಂಗ್ರೆಸ್‍ನ 26 ಮತ್ತು ಜೆಡಿಎಸ್‍ನ 8 ಸದಸ್ಯರಿದ್ದಾರೆ. ಹಾಗಾಗಿ ಸಂಖ್ಯಾಬಲದಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವುದರಿಂದ ಮಸೂದೆ ಅಂಗೀಕಾರವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ಜಗಳ- ತಾಯಿ, ಮಗಳು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಪರಿಷತ್‌ಗೆ BJPಯ ಚಿಂಚನಸೂರ್‌ ಅವಿರೋಧ ಆಯ್ಕೆ

    ಪರಿಷತ್‌ಗೆ BJPಯ ಚಿಂಚನಸೂರ್‌ ಅವಿರೋಧ ಆಯ್ಕೆ

    ಬೆಂಗಳೂರು: ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಬೇಕಿದ್ದ ಉಪಚುನಾವಣೆಗೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ಘೋಷಿಸಲಾಗಿತ್ತು. ಆ.11ಕ್ಕೆ ಮತದಾನ ಹಾಗೂ ಅದೇ ದಿನ ಸಂಜೆ ಮತ ಎಣಿಕೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಇದನ್ನೂ ಓದಿ: ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಕಾಲು ಮುರಿದುಕೊಂಡ ಶಾಸಕ ಎಂ.ವೈ ಪಾಟೀಲ್

    ಪರಿಷತ್‌ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ನಾಮಪತ್ರ ಸಲ್ಲಿಸಿದ್ದರು. ಆದರೆ ಬೇರೆ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿ ಎಂ‌.ಕೆ.ವಿಶಾಲಾಕ್ಷಿಯವರಿಂದ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

    ಕಾಂಗ್ರೆಸ್‍ನಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಸಿ.ಎಂ.ಇಬ್ರಾಹಿಂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಿಲ್ಲ ಎಂದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಜೆಡಿಎಸ್ ಸೇರಿದರು. ಇದನ್ನೂ ಓದಿ: ಅಮಿತ್ ಶಾಗೆ ರಾಜಾಹುಲಿ ನೀಡಿದ ಫಸ್ಟ್ ರಿಪೋರ್ಟ್ ರಿವೀಲ್ – ಸಿದ್ದರಾಮೋತ್ಸವ ಎಫೆಕ್ಟ್!

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರು, ಪದವೀಧರ ಕ್ಷೇತ್ರಕ್ಕೆ ಯಶಸ್ವಿ ಮತದಾನ – ಜೂನ್ 15ಕ್ಕೆ ಫಲಿತಾಂಶ

    ಶಿಕ್ಷಕರು, ಪದವೀಧರ ಕ್ಷೇತ್ರಕ್ಕೆ ಯಶಸ್ವಿ ಮತದಾನ – ಜೂನ್ 15ಕ್ಕೆ ಫಲಿತಾಂಶ

    ಬೆಂಗಳೂರು: ವಿಧಾನಪರಿಷತ್‍ನ ಶಿಕ್ಷಕರು, ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿದೆ. ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರು, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದೆ.

    ನಾಲ್ಕು ಸ್ಥಾನಗಳಿಗೂ ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ವಾಯುವ್ಯ ಪದವೀಧರ ಕ್ಷೇತ್ರ ಬಿಟ್ಟು ಮೂರು ಕಡೆ ಜೆಡಿಎಸ್ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದೆ. ಎಂಟನೇ ಬಾರಿ ಸ್ಪರ್ಧೆ ಮಾಡಿರುವ ಹೊರಟ್ಟಿ ಸೇರಿ 49 ಅಭ್ಯರ್ಥಿಗಳ ಭವಿಷ್ಯ ನಾಡಿದ್ದು ಜೂನ್ 15ರಂದು ಗೊತ್ತಾಗಲಿದೆ. ಇದನ್ನೂ ಓದಿ: ಇಂದು ಶಿಕ್ಷಕ, ಪದವೀಧರ ಕ್ಷೇತ್ರಕ್ಕೆ ಮತದಾನ: 1 ಮತಕ್ಕೆ 10 ಸಾವಿರ ರೂ.?

    ಮತಕೇಂದ್ರದಿಂದ 200 ಮೀಟರ್ ದೂರ ಇರಬೇಕು ಇದು ಡಿಸಿ ಆದೇಶ ಎಂದ ಹುಬ್ಬಳ್ಳಿಯ ಮಹಿಳಾ ಪಿಎಸ್‍ಐಗೆ ಬಸವರಾಜ ಹೊರಟ್ಟಿ, ಯಾರವನು ಡಿಸಿ ಎಂದು ಕೇಳಿದ್ದಾರೆ. ಇನ್ನು, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಒಂದು ವೋಟ್‍ಗೆ 10 ಸಾವಿರ ಹಂಚಿದ್ದಾರೆ. 17 ಲಕ್ಷ ಸೀಜ್ ಆಗಿದೆ. ಕೂಡ್ಲೇ ಅವರ ವಿರುದ್ಧ ಕ್ರಮ ಆಗ್ಬೇಕು ಎಂದು ಬಿಜೆಪಿ ಶಾಸಕ ಅನಿಲ್ ಬೆನಕೆ ಒತ್ತಾಯಿಸಿದ್ರು. ನಾವು ಬೆಳ್ಳಿ ತಟ್ಟೆ, ಸ್ಮಾರ್ಟ್ ವಾಚ್ ನೀಡುತ್ತಿದ್ದೇವೆ ಅನ್ನೋದು ಸುಳ್ಳು ಅಂದ್ರು. ಆದ್ರೆ, ಮತಗಟ್ಟೆಯಲ್ಲಿ ಮೊಬೈಲ್ ಬಳಸಿ ತಾವೇ ನೀತಿ ಸಂಹಿತೆ ಉಲ್ಲಂಘಿಸಿದ್ರು. ಈ ಸಂಬಂಧ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗೆಲ್ಲೋದು ಪಕ್ಕಾ ಎಂದು ಜೆಡಿಎಸ್ ಎಂಎಲ್‍ಸಿ ಮರಿತಿಬ್ಬೇಗೌಡ ಹೇಳಿದ್ದಾರೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.

  • ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಬೆಂಗಳೂರು: ವಿಧಾನಪರಿಷತ್ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಡ್ರಾಮವೇ ನಡೆದಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಬೆಳಗ್ಗೆ 11 ರವರೆಗೂ ಅಭ್ಯರ್ಥಿಗಳ ಲಿಸ್ಟ್ ಪ್ರಕಟ ಆಗಿರಲೇ ಇಲ್ಲ. ಕೊನೆಗೆ ಲಿಸ್ಟ್ ಪ್ರಕಟವಾದಾಗ ನಡೆದಿದ್ದು, ಮತ್ತೊಂದು ಹೈಡ್ರಾಮಾ.

    ಅಳೆದು ತೂಗಿ ಸಾಕಷ್ಟು ಲೆಕ್ಕಾಚಾರಗಳೊಂದಿಗೆ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಮಾಜಿ ಸಚಿವ ಲಕ್ಷ್ಮಣ ಸವದಿ, ಎಸ್‍ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ್ ಸ್ವಾಮಿ, ರಾಜ್ಯ ಕಾರ್ಯದರ್ಶಿ ಎಸ್.ಕೇಶವ್ ಪ್ರಸಾದ್ ಹಾಗೂ ಕೊಪ್ಪಳದ ಬಿಜೆಪಿ ಮುಖಂಡೆ ಹೇಮಲತಾ ನಾಯಕ್‍ಗೆ ಬಿಜೆಪಿ ಪರಿಷತ್ ಟಿಕೆಟ್ ನೀಡಿದೆ. ಈ ನಾಲ್ವರ ಪೈಕಿ ಲಕ್ಷ್ಮಣ ಸವದಿ ಮತ್ತು ಹೇಮಲತಾ ನಾಯಕ್‍ಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡಲಾಯ್ತು. ಇದನ್ನೂ ಓದಿ: ಜಿಲ್ಲಾಧಿಕಾರಿ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿಗಳು ಅಮಾನತು

    ಬೆಳಗ್ಗೆ 11ಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಆಯ್ತು. ಬಳಿಕ ಹೇಮಲತಾ ನಾಯಕ್ ಹೊರತುಪಡಿಸಿ ಉಳಿದ ಮೂವರು ಅಭ್ಯರ್ಥಿಗಳು ಬಿಜೆಪಿ ಕಚೇರಿಗೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷರಿಂದ ಬಿ ಫಾರಂ ಪಡೆದುಕೊಂಡ್ರು. ಹೇಮಲತಾ ನಾಯಕ್ ಆಯ್ಕೆ ಕೊನೆಯ ಕ್ಷಣದಲ್ಲಿ ಆದ ಹಿನ್ನೆಲೆಯಲ್ಲಿ ಅವರು ಕೊಪ್ಪಳದಿಂದ ಬೆಂಗಳೂರಿಗೆ ಬರುವಲ್ಲಿ ತಡವಾಯ್ತು. ಅಷ್ಟರಲ್ಲಾಗಲೇ ಉಳಿದ ಮೂವರು ಅಭ್ಯರ್ಥಿಗಳು ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ರು.

    ಕೊಪ್ಪಳದಿಂದ ತುಮಕೂರಿಗೆ ಬಂದಿದ್ದ ಹೇಮಲತಾ ನಾಯಕ್‍ಗೆ ಬೆಂಗಳೂರಿಗೆ ಬರಲು ಬಿಜೆಪಿ ಕಚೇರಿಯಿಂದ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ನಾಮಪತ್ರಕ್ಕೆ ಮುಕ್ಕಾಲು ಗಂಟೆ ಇದೆ ಅನ್ನುವಾಗ ನಗರದ ಜಕ್ಕೂರಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಹೇಮಲತಾ ನಾಯಕ್, ಅಲ್ಲಿಂದ ಎಸ್ಕಾರ್ಟ್ ವಾಹನದ ಸೌಕರ್ಯದೊಂದಿಗೆ ವಿಧಾನಸೌಧಕ್ಕೆ ವೇಗವಾಗಿ ಬಂದು ನಾಮಪತ್ರ ಸಲ್ಲಿಸಬೇಕಾಯ್ತು. ಹೇಮಲತಾ ನಾಯಕ್‍ಗೆ ಹೆಲಿಕಾಪ್ಟರ್ ಮತ್ತು ಎಸ್ಕಾರ್ಟ್ ವ್ಯವಸ್ಥೆ ಒದಗಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    HEMALATHA

    ಆದರೆ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಈ ಬಾರಿ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಗೊಂದಲಕಾರಿ ಸನ್ನಿವೇಶಗಳು ನಡೆದವು. ಜೂನ್ 3 ರಂದು ನಡೆಯಲಿರುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ಸ್ಥಾನ ಗೆಲ್ಲುವ ಅವಕಾಶ ಇದೆ. ಆದ್ರೆ ಈ ನಾಲ್ಕು ಸ್ಥಾನಗಳಿಗೆ ಟಿಕೆಟ್ ಪಟ್ಟಿ ಘೋಷಣೆ ಮಾಡಲು ಈ ಸಲ ಬಿಜೆಪಿಯಲ್ಲಿ ಸಾಕಷ್ಟು ವಿಳಂಬ ಆಯ್ತು. ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನ ಆಗಿದ್ರೂ ಇಂದು ಬೆಳಗ್ಗೆ 11 ಗಂಟೆವರೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಆಗಿರ್ಲಿಲ್ಲ. ಕೊನೆಗೆ ಬೆಳಗ್ಗೆ 11 ಗಂಟೆಗೆ ಅಂತೂ ಪಟ್ಟಿ ಪ್ರಕಟ ಆದಾಗ ಹಲವರಿಗೆ ಶಾಕ್ ಕಾದಿತ್ತು.

    ಬಿಜೆಪಿಯ ಅಧಿಕೃತ ಪಟ್ಟಿ ಪ್ರಕಟಕ್ಕೂ ಮುನ್ನವೇ ಮೂವರಿಗೆ ಬಿಜೆಪಿಯ ಪ್ರಮುಖ ನಾಯಕರೊಬ್ಬರಿಂದ ಹಿಂದಿನ ರಾತ್ರಿಯೇ ಕರೆ ಹೋಗಿತ್ತು. ದಾಖಲೆ ರೆಡಿ ಮಾಡ್ಕೊಂಡು ಬೆಜೆಪಿ ಕಚೇರಿಗೆ ಬರುವಂತೆ ಲಿಂಗರಾಜ್ ಪಾಟೀಲ್, ಚಲವಾದಿ ನಾರಾಯಣ ಸ್ವಾಮಿ, ಕೇಶವ ಪ್ರಸಾದ್‍ಗೆ ಆ ನಾಯಕರು ಕರೆ ಮಾಡಿ ತಿಳಿಸಿದ್ರು. ಸಿ.ಮಂಜುಳ ಅವರಿಗೆ ಪಕ್ಷದ ಕಚೇರಿಗೆ ಬರುವಂತೆಯೂ ಸೂಚಿಸಲಾಗಿತ್ತು.

    ಈ ನಾಲ್ವರೂ ತಮಗೆ ಟಿಕೆಟ್ ಫಿಕ್ಸ್ ಎಂದು ಖುಷಿಯಿಂದ ಪಕ್ಷದ ಕಚೇರಿಗೆ ಆಗಮಿಸಿದ್ರು. ಆದ್ರೆ ಅಧಿಕೃತವಾಗಿ ಟಿಕೆಟ್ ಪಟ್ಟಿ ಘೋಷಣೆ ಆದಾಗ, ಲಿಂಗರಾಜ್ ಪಾಟೀಲ್ ಮತ್ತು ಸಿ ಮಂಜುಳಾಗೆ ಶಾಕ್ ಕಾದಿತ್ತು. ಇವರಿಬ್ಬರ ಬದಲಾಗಿ ಹಾಲಿ ಎಮ್ಮೆಲ್ಸಿ ಲಕ್ಷ್ಮಣ ಸವದಿ ಮತ್ತು ಎಸ್ಟಿ ನಾಯಕಿ ಹೇಮಲತಾ ನಾಯಕ್‍ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಬಿ ವೈ ವಿಜಯೇಂದ್ರಗೆ ಟಿಕೆಟ್ ಕೊಡಲ್ಲ ಎಂದು ಮೊನ್ನೆ ರಾತ್ರಿಯೇ ರಾಜ್ಯ ಬಿಜೆಪಿ ಘಟಕಕ್ಕೆ ಸಂದೇಶ ರವಾನಿಸಲಾಗಿತ್ತು. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ 

    ಒಟ್ಟಿನಲ್ಲಿ ಬಿಜೆಪಿಯಲ್ಲಿ ಪರಿಷತ್ ಟಿಕೆಟ್ ಘೋಷಣೆಯಲ್ಲಿ ನಡೆದ ಹೈಡ್ರಾಮಾ ಎಲ್ಲರ ಗಮನ ಸೆಳೆಯಿತು. ಈ ಸಲ ಹೈಕಮಾಂಡ್‍ನಿಂದಲೂ ನಿಶ್ಚಿತ ನಿರ್ಧಾರ ಹೊರಹೊಮ್ಮದೇ ಗೊಂದಲ ಸೃಷ್ಟಿಯಾಗಿದ್ದು ಚರ್ಚೆ ಹುಟ್ಟಿಸಿದೆ.