Tag: ವಿಧವೆ

  • ಬೆಂಗಳೂರು: ವಿಧವೆ ಮದುವೆಯಾಗಿದ್ದ ಪೊಲೀಸಪ್ಪನ ವಿರುದ್ಧವೇ ವರದಕ್ಷಿಣೆ ಕಿರುಕುಳ ಕೇಸ್

    ಬೆಂಗಳೂರು: ವಿಧವೆ ಮದುವೆಯಾಗಿದ್ದ ಪೊಲೀಸಪ್ಪನ ವಿರುದ್ಧವೇ ವರದಕ್ಷಿಣೆ ಕಿರುಕುಳ ಕೇಸ್

    – ಗಂಡನ ಕೊಲೆ ಕೇಸ್‌ನಲ್ಲಿ ಠಾಣೆ ಮೆಟ್ಟಿಲೇರಿದ್ದ ಮಹಿಳೆ ಜೊತೆ ಸಲುಗೆ; ನವೆಂಬರ್‌ನಲ್ಲಿ ವಿವಾಹವಾಗಿದ್ದ ಪೊಲೀಸ್

    ಬೆಂಗಳೂರು: ವಿಧವೆ ಮದುವೆಯಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧವೇ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.

    ಶೇಷಾದ್ರಿಪುರಂ ಠಾಣೆ ಕಾನ್‌ಸ್ಟೇಬಲ್ ಮನೋಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

    ಪ್ರಕರಣ ಏನು?
    ಕೊಲೆ ಪ್ರಕರಣವೊಂದರಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಹಿಳೆಯನ್ನು ಕಾನ್‌ಸ್ಟೇಬಲ್ ಮನೋಜ್ ಬುಟ್ಟಿಗೆ ಹಾಕಿಕೊಂಡಿದ್ದ. 2016 ರಲ್ಲಿ ಮಹಿಳೆಯ ಪತಿ ಕೊಲೆಯಾಗಿದ್ದ. ಈ ಸಂಬAಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಆರೋಪಿ ಮನೋಜ್ ಶೇಷಾದ್ರಿಪುರಂ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ.

    ಪತಿಯ ಕೇಸ್ ಸಲುವಾಗಿ ಆರೋಪಿಗಳಿಗೆ ಸಮನ್ಸ್ ಜಾರಿಯಾಗಿತ್ತು. 2019 ರಲ್ಲಿ ಸಮನ್ಸ್ ಕಾಪಿ ಕೊಡಲು ಶೇಷಾದ್ರಿಪುರಂ ಠಾಣೆಗೆ ಮಹಿಳೆ ತೆರಳಿದ್ದರು. ಆಗ ಕಾನ್ಸ್ಟೇಬಲ್ ಮನೋಜ್ ಆಕೆಯ ನಂಬರ್ ಕೇಳಿ ಪಡೆದಿದ್ದ. 2024 ರವರೆಗೂ ಸುಮ್ಮನಿದ್ದ ಪೊಲೀಸ್, ಕೆಲ ತಿಂಗಳ ಹಿಂದೆ ಫೋಟೊ ಕಳುಹಿಸುವಂತೆ ಮಹಿಳೆಗೆ ಮೆಸೇಜ್ ಮಾಡಿದ್ದ. ಫೋಟೊ ಕಳಿಸುತ್ತಿದ್ದಂತೆ ಐ ಲವ್ ಯೂ ಎಂದು ಮೆಸೇಜ್ ಹಾಕಿದ್ದ.

    ನಾನು ನಿಮ್ಮನ್ನು ಮದುವೆಯಾಗುತ್ತೇನೆ. ಚೆನ್ನಾಗಿ ನೋಡ್ಕೋತಿನಿ ಎಂದು ಮಹಿಳೆಗೆ ಪೊಲೀಸ್ ಪೇದೆ ನಂಬಿಸಿದ್ದ. ಒಳ್ಳೆಯವನು ಎಂದುಕೊಂಡು ಮದುವೆಗೆ ಸಂತ್ರಸ್ತೆ ಒಪ್ಪಿಕೊಂಡಿದ್ದರು. 2024ರ ನ.28 ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯಾಗಿ ತನ್ನ ಕ್ವಾಟ್ರಸ್‌ಗೆ ಮಹಿಳೆಯನ್ನ ಮನೋಜ್ ಕರೆತಂದಿದ್ದ. ಆಗ ಕುಟುಂಬಸ್ಥರಿAದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಲಾಗಿದೆ.

    ಬೇರೆಯವರನ್ನ ಮದುವೆಯಾಗಿದ್ದರೆ ವರದಕ್ಷಿಣೆ ಸಿಗುತ್ತಿತ್ತು. ನೀನು ಎರಡು ಮಕ್ಕಳ ತಾಯಿ ಎಂದು ಮನೋಜ್ ಕುಟುಂಬದವರು ಗಲಾಟೆ ಮಾಡಿದ್ದಾರೆ. ಕೆಲ ದಿನದ ನಂತರ ಯಾವಾಗಲೂ ಮೊಬೈಲ್‌ನಲ್ಲಿ ಪತಿ ಮನೋಜ್ ಬ್ಯುಸಿಯಾಗಿರ್ತಿದ್ದ. ಕೇಳಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ. ಗಂಡನ ವರ್ತನೆ ನೋಡಿ ಮನೋಜ್ ಮೊಬೈಲ್ ಚೆಕ್ ಮಾಡಿದಾಗ, ಗೊತ್ತಾಗಿದ್ದು ಕಾನ್ಸ್ಟೇಬಲ್‌ನ ಅಸಲಿಯತ್ತು. ಬೇರೆ ಮಹಿಳೆಯರ ಜೊತೆಗಿದ್ದ ವೀಡಿಯೋ, ಫೋಟೊಗಳು ಮೊಬೈಲ್‌ನಲ್ಲಿ ಪತ್ತೆಯಾಗಿವೆ.

    ಅದನ್ನ ಕೇಳಿದ್ದಕ್ಕೆ ಮತ್ತೆ ಹಲ್ಲೆ ಮಾಡಿ ಪತ್ನಿ ಕೈ ಮುರಿದಿದ್ದಾನೆ. ಸದ್ಯ ಪತಿ ಮನೋಜ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

  • ಲಿವ್-ಇನ್- ಪಾರ್ಟ್ನರ್ ವಿಧವೆಯ ಹಣೆ, ಎದೆಗೆ ಗುಂಡಿಟ್ಟು ಕೊಂದು ಶರಣಾದ!

    ಲಿವ್-ಇನ್- ಪಾರ್ಟ್ನರ್ ವಿಧವೆಯ ಹಣೆ, ಎದೆಗೆ ಗುಂಡಿಟ್ಟು ಕೊಂದು ಶರಣಾದ!

    ಲಕ್ನೊ: ಯುವಕನೊಬ್ಬ ಲಿವ್- ಇನ್- ಪಾರ್ಟ್ನರ್ ಲ್ಲಿದ್ದ (Live-In-Partner) ವಿಧವೆಯ ಹಣೆ ಹಾಗೂ ಎದೆಗೆ ಗುಂಡಿಟ್ಟು ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರಪ್ರದೇಶಲ್ಲಿ ನಡೆದಿದೆ.

    ಆರೋಪಿ ಯುವಕನನ್ನು ರಿಷಭ್ ಸಿಂಗ್ ಬಹದೂರಿಯಾ ಹಾಗೂ ಮೃತಳನ್ನು ರಿಯಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಡ್ಯಾಂನಲ್ಲಿ ತುಂಬಿ ಹಿಡಿದುಟ್ಟುಕೊಳ್ಳಲು ಆಗದೇ ಇದ್ದಾಗ ತಮಿಳುನಾಡಿಗೆ ನೀರು ಬಿಟ್ಟಿದ್ವಿ: ಹೆಚ್‍ಡಿಕೆ

    ಈ ಜೋಡಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾರಡೈಸ್ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನಲ್ಲಿ ಬಾಡಿಗೆ ಫ್ಲ್ಯಾಟ್‍ನಲ್ಲಿ ವಾಸವಾಗಿದ್ದರು. ಆದರೆ ಗುರುವಾರ ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ರಿಯಾಳನ್ನು ರಿಷಭ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸರಿಗೆ ಶರಣಾಗಿದ್ದಾನೆ.

    ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

    ಆಗಸ್ಟ್ 17ರಂದು ರಾತ್ರಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಗೆ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ಅಪಾರ್ಟ್‍ಮೆಂಟ್‍ನಲ್ಲಿ ಲಿವ್ ಇನ್ ಪಾರ್ಟ್ನರ್ ಕೊಲೆಯಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಡಿಸಿಪಿ ವಿನೀತ್ ಜೈಸ್ವಾಲ್ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ 12 ಲಕ್ಷ ವಂಚಿಸಿದ 56ರ ವ್ಯಕ್ತಿ!

    ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ 12 ಲಕ್ಷ ವಂಚಿಸಿದ 56ರ ವ್ಯಕ್ತಿ!

    ಗಾಂಧಿನಗರ: ಮದುವೆಯಾಗುವುದಾಗಿ ನಂಬಿಸಿ 56 ವರ್ಷದ ವ್ಯಕ್ತಿಯೊಬ್ಬ ವಿಧವೆಗೆ 12 ಲಕ್ಷ ವಂಚಿಸಿದ ಘಟನೆ ಗುಜರಾತ್‍ (Gujrat) ನ ಮೊರ್ಬಿ (Morbi) ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು ಮಹೇಶ್ ಗೋಸಾಯಿ ಎಂದು ಗುರುತಿಸಲಾಗಿದೆ. ಈತ ಮೊರ್ಬಿಯ ಅಮ್ರಾನ್ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾನೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಇನ್‍ಸ್ಟಾಗ್ರಾಂ ಮೂಲಕ ಮಹಿಳೆಗೆ ಗೋಸಾಯಿಯ ಪರಿಚಯವಾಗಿದೆ. ಈ ವೇಳೆ ಆರೋಪಿ ತಾನು ಲಂಡನ್‍ಗೆ ಶಿಫ್ಟ್ ಆಗುವುದಾಗಿ ಹೇಳಿದ್ದಾನೆ. ಅಲ್ಲದೆ ಇದೇ ವೇಳೆ ಮದುವೆಯಾಗುತ್ತೇನೆ. ಮುಂದೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆಯನ್ನೂ ನೀಡಿದ್ದಾನೆ.

    ವೀಸಾ ಶುಲ್ಕ ಮತ್ತು ಇತರ ಔಪಚಾರಿಕತೆಗಳ ನೆಪದಲ್ಲಿ ಹಣ ಕೊಡುವಂತೆ ಆರೋಪಿ ಕೇಳಿದ್ದಾನೆ. ಮಹಿಳೆ ಕೂಡ ಆರೋಪಿ ಮಾತು ನಂಬಿ ಮೊದಲು 5 ಲಕ್ಷ ರೂ. ಹಣ ಕಳುಹಿಸಿದ್ದಾಳೆ. ಗೋಸಾಯಿ ಅವರು ಮೊದಲು ಕೆನಡಾಕ್ಕೆ ಹೋಗಿ ನಂತರ ಲಂಡನ್‍ಗೆ ಹೋಗುವುದಾಗಿ ಸಂತ್ರಸ್ತೆಗೆ ತಿಳಿಸಿದ್ದಾರೆ ಎಂದು ವರಿಯಾಗಿದೆ. ಇದನ್ನೂ ಓದಿ: HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ

    ಇಷ್ಟು ಮಾತ್ರವಲ್ಲದೇ ವಿದೇಶಕ್ಕೆ ಹೋಗುವಾಗ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲ್ಲ. ಹೀಗಾಗಿ ನಿನ್ನ ಆಭರಣಗಳನ್ನು ನನಗೆ ಕಳುಹಿಸು, ಅವುಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಆದರೆ ಸದ್ಯ ಮಹಿಳೆ ತಾನು ಮೋಸ ಹೋಗಿರುವುದು ಅರಿವಾದ ನಂತರ ಆಕೆ ಪೊಲೀಸರ್ನು ಸಂಪರ್ಕಿಸಿದ್ದಾಳೆ.

    ಮಹಿಳೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

  • ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ

    ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ

    ಮುಂಬೈ: ಸಮಾಜದ ಕಟ್ಟುಪಾಡುಗಳಿಗೆ ಶೆಡ್ಡು ಹೊಡೆದು ವ್ಯಕ್ತಿಯೊಬ್ಬ ತಾನೇ ಮುಂದೆ ನಿಂತು ತನ್ನ ವಿಧವೆ ತಾಯಿ (Widowed Mother) ಮರುಮದುವೆ (Remarriage) ಮಾಡಿಸಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

    ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಯುವರಾಜ್‌ ಶೆಲೆ ಎಂಬಾತ 5 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದ. ಈತನ ತಾಯಿ ಪತಿ ಸಾವಿನಿಂದ ನೊಂದುಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 45 ವಯಸ್ಸಿನ ತಾಯಿಗೆ ಸಂಗಾತಿಯ ಅಗತ್ಯವನ್ನು ಅರಿತ ಯುವರಾಜ್‌, ವರನನ್ನು ಹುಡುಕಿ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಹುದ್ದೆ ಉಳಿಸಿಕೊಳ್ಳಲು ಹೆಣ್ಣು ಮಗುವನ್ನು ಕಾಲುವೆಗೆ ಎಸೆದ ದಂಪತಿ!

    ನಾನು ಕೇವಲ 18 ವರ್ಷದವನಾಗಿದ್ದಾಗ ನನ್ನ ತಂದೆಯನ್ನು ಕಳೆದುಕೊಂಡೆ. ತಂದೆಯ ಸಾವು ನನಗೆ ಮತ್ತು ತಾಯಿಗೆ ದೊಡ್ಡ ಆಘಾತ ನೀಡಿತು. ನನ್ನ ತಾಯಿ ಒಂಟಿತನ ಎದುರಿಸಬೇಕಾಯಿತು. ಆಕೆ ಮಾನಸಿಕವಾಗಿ ತುಂಬಾ ಕುಗ್ಗಿದ್ದರು.

    ನನ್ನ ತಾಯಿ ನನ್ನ ತಂದೆಯೊಂದಿಗೆ ಮದುವೆಯಾಗಿ ಸುಮಾರು 25 ವರ್ಷಗಳಾಗಿವೆ. ಒಬ್ಬ ಗಂಡಸು ತನ್ನ ಹೆಂಡತಿಯನ್ನು ಕಳೆದುಕೊಂಡರೆ, ಅವನು ಮರುಮದುವೆಯಾಗುವುದು ಸಹಜ ಎಂದು ಸಮಾಜ ಭಾವಿಸುತ್ತದೆ. ಅದೇ ನಂಬಿಕೆಯು ಮಹಿಳೆಗೆ ಏಕೆ ಅನ್ವಯಿಸುವುದಿಲ್ಲ ಎಂಬುದು ನನ್ನ ಪ್ರಶ್ನೆಯಾಗಿತ್ತು. ನಾನು ತಾಯಿಯನ್ನು ಮರುಮದುವೆಯಾಗುವಂತೆ ಮನವೊಲಿಸಿದೆ ಎಂದು ಯುವರಾಜ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಂಪಿಸಿದ ಭೂಮಿ – ಮನೆಯಿಂದ ಹೊರ ಬಂದ ಜನತೆ

    ಕೆಲವು ಸ್ನೇಹಿತರು ಮತ್ತು ಸಂಬಂಧಿಕರ ಸಹಾಯದಿಂದ ಯುವರಾಜ್‌ ತನ್ನ ತಾಯಿಗಾಗಿ ವರನನ್ನು ಹುಡುಕುವ ಕಾರ್ಯ ಮಾಡಿದ್ದ. ತನಗೆ ಪರಿಚಯವಿದ್ದ ಒಂಟಿಯಾಗಿ ಜೀವನ ನಡೆಸುತ್ತಿದ್ದ ಮಾರುತಿ ಘನವತ್‌ ಎಂಬಾತನೊಂದಿಗೆ ತನ್ನ ತಾಯಿಯನ್ನು ಮದುವೆಯಾಗುವ ಬಗ್ಗೆ ಪ್ರಸ್ತಾಪಿಸಿದರು. ಅವರು ಸಹ ಮದುವೆಗೆ ಒಪ್ಪಿಕೊಂಡರು. ಬಳಿಕ ಯುವರಾಜ್‌ ತಾಯಿ ಮತ್ತು ಮಾರುತಿ ಘನವತ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಧವೆಯ ಹಿಂದೆ ಬಿದ್ದು ಮಸಣ ಸೇರಿದ ವಿಚ್ಚೇದಿತ – ಅವಳು ನನ್ನ ಮಾತು ಕೇಳ್ತಿಲ್ಲ ಅಂತ ಆತ್ಮಹತ್ಯೆಗೆ ಶರಣಾದ

    ವಿಧವೆಯ ಹಿಂದೆ ಬಿದ್ದು ಮಸಣ ಸೇರಿದ ವಿಚ್ಚೇದಿತ – ಅವಳು ನನ್ನ ಮಾತು ಕೇಳ್ತಿಲ್ಲ ಅಂತ ಆತ್ಮಹತ್ಯೆಗೆ ಶರಣಾದ

    ಚಿಕ್ಕಬಳ್ಳಾಪುರ: ವಿಧವೆಗೆ (Widow) ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದ ಗಂಡನ (Husband) ಸ್ನೇಹಿತನೊರ್ವ(Friend), ಆಕೆಗೆ ಬಾಳು ನೀಡುತ್ತೇನೆ ಅಂತ ಆಕೆಯನ್ನು ಪ್ರೀತಿಸಿ ಕೊನೆಗೆ ಆಕೆಯನ್ನು ಕಟ್ರೋಲ್ ಮಾಡಲು ನೋಡಿದ, ಆದರೆ ಆಕೆ ಆತ ಹೇಳಿದ ಹಾಗೆ ಕೇಳಲಿಲ್ಲ ಅಂತ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ನಗರದ 15 ನೇ ವಾರ್ಡ್ ಬಡಾವಣೆಯಲ್ಲಿ ನಡೆದಿದೆ.

    ಮಹಿಳೆಯನ್ನು ಸುಮಾ ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಸುಮಾ ಪತಿ ಕಳೆದ ವರ್ಷ ಕೊರೊನಾ ಸೋಂಕಿಗೆ (Corona Virus) ಬಲಿಯಾಗಿದ್ದರು. ನಂತರ ಗಂಡ ಸತ್ತ ಮೇಲೆ ಸುಮಾಗೆ ಸಹಾಯ ಮಾಡಲು ಮನೆಗೆ ಬಂದ ಆಕೆಯ ಗಂಡನ ಸ್ನೇಹಿತ ಎಸ್.ಎನ್.ಪ್ರಶಾಂತ್ ಕ್ರಮೇಣವಾಗಿ ಸುಮಾಳಿಗೆ ಬಾಳು ನೀಡುವುದಾಗಿ ಹೇಳಿ ಆಕೆಯನ್ನು ಪ್ರೀತಿ (Love) ಮಾಡುತ್ತಿದ್ದನು. ಆದರೆ ಆಕೆ ತನ್ನನ್ನು ಬಿಟ್ಟು ಇನ್ಯಾರೊ ಜೊತೆ ಸಲುಗೆಯಿಂದ ಇದ್ದಾಳೆ ಅಂತ ಮನನೊಂದು ಭಾನುವಾರ ತಡರಾತ್ರಿ ಸುಮಾ ಒಡೆತನದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಾಯುವುದಕ್ಕೂ ಮುನ್ನ ಸ್ಥಳಿಯ ನಗರಸಭಾ ಸದಸ್ಯ ಅಂಬರೀಶನೇ ತನ್ನ ಸಾವಿಗೆ ಕಾರಣ ಅಂತ ವೀಡಿಯೋ ರೆಕಾರ್ಡ್ ಮಾಡಿ ಸತ್ತಿದ್ದಾನೆ. ಇದರಿಂದ ಮೃತನ ಸಂಬಂಧಿಗಳು ಸುಮಾ ಹಾಗೂ ಅಂಬರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮದ್ಯ ಸೇವಿಸಲು 2 ವರ್ಷದಿಂದ ಆಫೀಸ್‍ನಲ್ಲಿದ್ದ ಪೀಠೋಪಕರಣ, ಆಸ್ತಿಯನ್ನೆಲ್ಲಾ ಮಾರಾಟ ಮಾಡ್ದ

    ಸ್ಥಳೀಯ ನಗರಸಭಾ ಸದಸ್ಯ ಅಂಬರೀಶ್, ಸುಮಾ ಗಂಡನ ಬಡ್ಡಿ ವ್ಯವಹಾರ ನೋಡಿಕೊಂಡರೆ, ಇತ್ತ ಮೃತ ಪ್ರಶಾಂತ್, ಸುಮಾಳ ಬೇಕಾದ ಕಡೆ ಕರೆದುಕೊಂಡು ಹೋಗಿ ಬರುತ್ತಿದ್ದ. ಇತ್ತೀಚೆಗೆ ಸುಮಾಳನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಬಂಧಿ ಮಾಡಿ, ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದ. ಆದರೆ ತಮ್ಮಿಬ್ಬರ ಪ್ರೀತಿಗೆ ಅಂಬರೀಶ್ ಅಡ್ಡಿ ಬಂದಿದ್ದು, ಸುಮಾ ತನ್ನ ಬದಲು ಅಂಬರೀಶ್ ಜೊತೆ ಸಲುಗೆಯಿಂದ ಇದ್ದಾಳೆ ಅಂತ ಸುಮಾಳಿಗೆ ಟಾರ್ಚರ್ ಮಾಡುತ್ತಿದ್ದ ಎನ್ನಲಾಗಿದೆ.

    ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ವಿಧವೆಯ ಮೇಲೆ ಕಣ್ಣು ಹಾಕಿದ, ಗಂಡನ ಸ್ನೇಹಿತ. ಸಹಾಯ ಮಾಡುವ ನೆಪದಲ್ಲಿ, ಆಕೆಯನ್ನು ಪ್ರೀತಿಸಿ ಇನ್ನೇನು ಮಾಡಲು ಹೊರಟಿದ್ದನೋ, ಗೊತ್ತಿಲ್ಲ. ಆದರೆ ವಿವಾಹಿತರ ಪ್ರೇಮ ಪ್ರಕರಣ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ಇದನ್ನೂ ಓದಿ: ಕೆಜಿ ಹಳ್ಳಿ ಗಲಭೆಯಲ್ಲಿ ಅಶ್ರಫ್ ಕೈವಾಡ..?- ಐಸ್ ರೀಡರ್ ಅಪ್ಲಿಕೇಷನ್‍ನಿಂದ ಡೇಟಾ ಇರೇಸ್

    Live Tv
    [brid partner=56869869 player=32851 video=960834 autoplay=true]

  • ಅನೈತಿಕ ಸಂಬಂಧ ಶಂಕೆ – ತಲೆಗೆ ಸುತ್ತಿಗೆಯಿಂದ ಹೊಡೆದು ವಿಧವೆಯ ಹತ್ಯೆ

    ಅನೈತಿಕ ಸಂಬಂಧ ಶಂಕೆ – ತಲೆಗೆ ಸುತ್ತಿಗೆಯಿಂದ ಹೊಡೆದು ವಿಧವೆಯ ಹತ್ಯೆ

    ಲಕ್ನೋ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ವಿಧವೆಯಾಗಿದ್ದ ಅತ್ತಿಗೆಯ ತಲೆಗೆ ವ್ಯಕ್ತಿಯೋರ್ವ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.

    ಟ್ವಿಂಕಲ್(25) ಮೃತ ಮಹಿಳೆಯಾಗಿದ್ದು, ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಟ್ವಿಂಕಲ್‍ಗೆ ಮೂವರು ಮಕ್ಕಳಿದ್ದಾರೆ. ಟ್ವಿಂಕಲ್, ಮೀರತ್ ಜಿಲ್ಲೆಯ ಜಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ಪುರ್ ಗ್ರಾಮದ ಗೌರವ್ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಆದರೆ ಅವರ ಪತಿ 2021ರ ಟ್ರಕ್ ಅಪಘಾತದಲ್ಲಿ ನಿಧನರಾದರು. ಇದನ್ನೂ ಓದಿ: ನಾನು ಇನ್ನೆರಡು ತಿಂಗಳು ಇರೋದಿಲ್ಲ, ನಾನು ಎಲ್ಲದಕ್ಕೂ ರೆಡಿ ಇದ್ದೀನಿ: ಶಂಕಿತ ಉಗ್ರ

    ಅತ್ತಿಗೆ ಪದೇ, ಪದೇ ಫೋನ್‍ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಆರೋಪಿ ಅಭಿಷೇಕ್‍ಗೆ ಆಕೆಯ ನಡವಳಿಕೆಯ ಮೇಲೆ ಅನುಮಾನ ಮೂಡಿತ್ತು. ಭಾನುವಾರ ರಾತ್ರಿ ಮೊದಲ ಮಹಡಿಯಲ್ಲಿರುವ ಆಕೆಯ ಕೋಣೆಯನ್ನು ತಲುಪಿದ ಅಭಿಷೇಕ್ ಮನಬಂದಂತೆ ಸುತ್ತಿಗೆಯಿಂದ ಟ್ವಿಂಕಲ್ ತಲೆಗೆ ಹೊಡೆದು ದೇಹವನ್ನು ಸೀಳಿಹಾಕಿದ್ದಾನೆ ಎಂದು ಸರ್ಕಲ್ ಆಫೀಸರ್ ರಜನೀಶ್ ಉಪಾಧ್ಯಾಯ ಹೇಳಿದ್ದಾರೆ.

    ಇದೀಗ ಅಭಿಷೇಕ್ ಅನ್ನು ಬಂಧಿಸಲಾಗಿದ್ದು, ಕೃತ್ಯವೆಸಗಲು ಆರೋಪಿ ಬಳಸಿದ್ದ ಸುತ್ತಿಗೆಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಟ್ವಿಂಕಲ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

    ವೃದ್ಧೆಯ ಹತ್ಯೆ ಮಾಡಿ ಮೃತದೇಹದೊಂದಿಗೆ ಯುವಕ ಸೆಕ್ಸ್!

    ಜೈಪುರ್: 19 ವರ್ಷದ ಯುವಕನೊಬ್ಬ 60 ವರ್ಷದ ಮಹಿಳೆಯನ್ನು ಹತ್ಯೆಗೈದಿದ್ದಾನೆ. ಅಲ್ಲದೆ ಆಕೆಯ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಭಯಾನಕ ಘಟನೆ ನಡೆ ರಾಜಸ್ಥಾನದ ಹನುಮಾನ್‍ಗಢ್‍ನಲ್ಲಿ ನಡೆದಿದೆ.

    ಆರೋಪಿಯನ್ನು ಸುರೇಂದ್ರ (ಮಾಂಡಿಯಾ) ಎಂದು ಗುರುತಿಸಲಾಗಿದ್ದು, ಮಹಿಳೆ ವಿಧವೆಯಾಗಿದ್ದು, ದುಲ್ಮಾನಾ ಗ್ರಾಮದ ನಿವಾಸಿಯಾಗಿದ್ದರು. ಆರೋಪಿಯನ್ನು ಪಿಲಿಬಂಗಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಹತ್ಯೆ ಪ್ರಕರಣ ಮಾತ್ರವಲ್ಲದೆ, ನೆಕ್ರೋಫಿಲಿಯಾ ಕಾಯ್ದೆ (ಮೃತದೇಹದೊಂದಿಗೆ ಸೆಕ್ಸ್ ಮಾಡುವ ಅಪರಾಧ)ಯಡಿ ಕೇಸ್ ದಾಖಲಾಗಿದೆ. ಇದನ್ನೂ ಓದಿ:  ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರಿಡುವುದು ಸೂಕ್ತ: ಶೋಭಾ

    ಸುರೇಂದ್ರ ರಾತ್ರಿ ಮಹಿಳೆಯ ಮನೆಗೆ ಹೋಗಿದ್ದ. ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನ ಪಟ್ಟ. ಆದರೆ ಮಹಿಳೆ ಅದನ್ನು ಪ್ರತಿರೋಧಿಸಿದಾಗ ಹತ್ಯೆ ಮಾಡಿದ್ದಾನೆ. ನಂತರ ತನ್ನ ಬಯಕೆ ಪೂರೈಸಿಕೊಂಡಿದ್ದಾನೆ. ನಂತರ ಮಹಿಳೆಯ ಸಂಬಂಧಿ ಬಳಿ ಹೋಗಿ ತಾನು ಮಾಡಿದ ಕೃತ್ಯ ಹೇಳಿದ್ದಾನೆ. ನಾವು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗಲೂ ಸತ್ಯವನ್ನಷ್ಟೂ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

     

  • ನೀರು ಕೊಡಲು ನಿರಾಕರಣೆ – ವಿಧವೆಯ ಗುಪ್ತಾಂಗಕ್ಕೆ ರಾಡ್ ತುರುಕಿದ್ರು!

    ನೀರು ಕೊಡಲು ನಿರಾಕರಣೆ – ವಿಧವೆಯ ಗುಪ್ತಾಂಗಕ್ಕೆ ರಾಡ್ ತುರುಕಿದ್ರು!

    – ಶಸ್ತ್ರ ಚಿಕಿತ್ಸೆಯ ಮೂಲಕ ರಾಡ್ ತೆಗೆದ ವೈದ್ಯರು
    – ಮಹಿಳೆಯ ಸ್ಥಿತಿ ಗಂಭೀರ

    ಭೋಪಾಲ್: ನೀರು ಕೊಡಲು ನಿರಾಕರಿಸಿದ ವಿಧವೆಯನ್ನು ಮನೆಯಿಂದ ಹೊರಗೆಳೆದು ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವಿಕೃತಿ ಮೆರೆದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.

    ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಗಂಭೀರ ಗಾಯಗೊಂಡಿದ್ದು, ರೇವಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಹಿಳೆ ತನ್ನ ಇಬ್ಬರು ಪುತ್ರರೊಂದಿಗೆ ಶಾಂತಿ ನಗರದಲ್ಲಿ ವಾಸವಾಗಿದ್ದಾರೆ. ಅಲ್ಲದೆ ಅಮಾಲಿಯಾ ಪ್ರದೇಶಲ್ಲಿ ಟೀ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಏಕಾಏಕಿ ಬಂದ ಮೂವರು ನೀರು ಕೊಡುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆ ನೀರು ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮೂವರು, ಮಹಿಳೆಯನ್ನು ಮನೆಯಿಂದ ಹೊರಗೆಳೆದು ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವಿಕೃತಿ ಮೆರೆದಿದ್ದಾರೆ.

    ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಕೂಡಲೇ ರೇವಾ ಜಿಲ್ಲೆಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಮೂಲಕ ವೈದ್ಯರು ಮಹಿಳೆಯ ಖಾಸಗಿ ಅಂಗದಿಂದ ರಾಡ್ ತೆಗೆದಿದ್ದಾರೆ.

    ಪ್ರಕರಣ ಸಂಬಂಧ ಗೃಹ ಸಚಿವ ನರೋಟ್ಟಂ ಮಿಶ್ರಾ ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

  • ಒಂದೇ ಮಂಟಪದಲ್ಲಿ ಮದ್ವೆಯಾದ ತಾಯಿ- ಮಗಳು

    ಒಂದೇ ಮಂಟಪದಲ್ಲಿ ಮದ್ವೆಯಾದ ತಾಯಿ- ಮಗಳು

    – ಕನ್ಯಾದಾನದ ಬಳಿಕ ಹಸೆಮಣೆ ಏರಿದ ಅಮ್ಮ
    – ಅತ್ತಿಗೆಯನ್ನ ಮದ್ವೆಯಾದ ಮೈದುನ

    ಲಕ್ನೋ: ಒಂದೇ ಮಂಟಪದಲ್ಲಿ ತಾಯಿ- ಮಗಳು ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯಲ್ಲಿ ನಡೆದಿದೆ. ಕನ್ಯಾದಾನದ ಬಳಿಕ ವಧುವಾಗಿ ಬಂದ ಅಮ್ಮ ಮೈದುನ ಜೊತೆ ಮದುವೆಯಾಗಿದ್ದಾರೆ.

    ಗೋರಖ್‍ಪುರನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ 63 ಜೋಡಿಗಳ ಮದುವೆ ಆಯೋಜಿಸಲಾಗಿತ್ತು. 63ರ ಜೋಡಿಗಳಲ್ಲಿ ತಾಯಿ -ಮಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಪಿಪರೌಲಿಯ ಬೇಲಾ ದೇವಿ ಮೊದಲಿಗೆ ತಮ್ಮ ಕಿರಿಯ ಮಗಳ ಮದುವೆ ಮಾಡಿದ್ದಾರೆ. ನಂತರ ಅದೇ ಮಂಟಪದಲ್ಲಿ 55 ವರ್ಷದ ಮೈದುನ ಜಗದೀಶ್ ಜೊತೆ ಹಸೆಮಣೆ ಏರಿದ್ದಾರೆ.

    ಕುಟುಂಬಸ್ಥರಿಂದ ಮದ್ವೆಗೆ ಸಮ್ಮತಿ: ಬೇಲಾದೇವಿ ಅವರಿಗೆ ಒಟ್ಟು 5 ಮಕ್ಕಳಿದ್ದು, ಅದರಲ್ಲಿ ನಾಲ್ವರ ಮದುವೆ ಮಾಡಿದ್ದರು. ಇದೀಗ ಕೊನೆಯ ಮಗಳ ಮದುವೆಯನ್ನ ರಾಹುಲ್ ಎಂಬ ಯುವಕನ ಜೊತೆ ನೆರೆವೇರಿಸಿದ್ದಾರೆ. ಈಗಾಗಲೇ ಮದುವೆಯಾಗಿರುವ ಗಂಡು ಮಕ್ಕಳು ತಾಯಿಯಿಂದ ಪ್ರತ್ಯೇಕರಾಗಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಕೊನೆಯ ಮಗಳ ಮದುವೆ ಬಳಿಕ ಬೇಲಾದೇವಿ ಒಂಟಿಯಾಗಿದ್ದರು. ಕುಟುಂಬಸ್ಥರ ಸಮ್ಮತಿಯ ಮೇರೆಗೆ ಈ ಮದುವೆ ಆಗಿದ್ದಾರೆ.  ಇದನ್ನೂ ಓದಿ: ಅಣ್ಣನಿಲ್ಲದ ರಾತ್ರಿ ಬೆಡ್ ರೂಮಿಗೆ ಬಂದು ಅತ್ತಿಗೆಗೆ I Love You ಅಂದ ಮೈದುನ

    25 ವರ್ಷಗಳ ನಂತ್ರ ಸಿಂಧೂರವಿಟ್ಟ ತಾಯಿ: 25 ವರ್ಷಗಳ ಹಿಂದೆ ಬೇಲಾದೇವಿ ಪತಿ ಮರಣ ಹೊಂದಿದ್ದರು. ಎರಡು ಗಂಡು ಮತ್ತು ಮೂರು ಹೆಣ್ಣು ಮಕ್ಕಳ ಜೊತೆ 25 ವರ್ಷ ಜೀವನ ನಡೆಸಿದ್ದರು. ಇದೀಗ ಕುಟುಂಬಸ್ಥರು ಒಂಟಿಯಾದ ಬೇಲಾದೇವಿಗೆ ಮದುವೆ ಮಾಡಿಸಿದ್ದಾರೆ. 25 ವರ್ಷದ ಬಳಿಕ ಬೇಲಾದೇವಿ ಮತ್ತೊಮ್ಮೆ ಸಿಂಧೂರವಿಟ್ಟ ಸಂಭ್ರಮದಲ್ಲಿದ್ದಾರೆ. ಇದನ್ನೂ ಓದಿ: ಅತ್ತಿಗೆ ಜೊತೆ ಮದುವೆ- ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

  • ಬಾಡಿಗೆ ನೀಡದ್ದಕ್ಕೆ ವಿಧವೆಯನ್ನ ಮರಕ್ಕೆ ಕಟ್ಟಿದ ಮಾಲೀಕ

    ಬಾಡಿಗೆ ನೀಡದ್ದಕ್ಕೆ ವಿಧವೆಯನ್ನ ಮರಕ್ಕೆ ಕಟ್ಟಿದ ಮಾಲೀಕ

    – ಮನೆಯ ವಸ್ತುಗಳನ್ನ ಹೊರಗೆ ಎಸೆದ
    – ಲಾಕ್‍ಡೌನ್‍ನಲ್ಲಿ ಕೆಲಸ ಕಳೆದುಕೊಂಡಿದ್ದ ಮಹಿಳೆ

    ಲಕ್ನೋ: ಮನೆಯ ಬಾಡಿಗೆ ನೀಡದಕ್ಕೆ ಮಾಲೀಕನೋರ್ವ ಮಹಿಳೆ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮರೀಪುರ ಜಿಲ್ಲೆಯ ತಲಾಬ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶೋಭಾ ದೇವಿ ಹಲ್ಲೆಗೊಳಗಾದ ಮಹಿಳೆ. ತಲಾಬ್ ಇಲಾಖೆಯಲ್ಲಿರುವ ಭಗೀರಥ್ ಪ್ರಜಾಪತಿ ಎಂಬಾತನ ಬಾಡಿಗೆ ಮನೆಯಲ್ಲಿ ಶೋಭಾ ವಾಸವಾಗಿದ್ದರು. ಶೋಭಾ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಶೋಭಾ ಕೆಲ ತಿಂಗಳ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು.

    ಮಾನವೀಯತೆ ಮರೆತ ಭಗೀರಥ್ ಕೆಲ ಮಹಿಳೆಯರೊಂದಿಗೆ ಶೋಭಾ ಮನೆಗೆ ಆಗಮಿಸಿದ್ದಾನೆ. ಮಹಿಳೆಯರ ಸಹಾಯದಿಂದ ಶೋಭಾ ಅವರನ್ನ ಮರಕ್ಕೆ ಕಟ್ಟಿ ಹಾಕಿ, ಮನೆಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿ ಬೀಗ ಹಾಕಿ ಬಾಡಿಗೆ ನೀಡುವಂತೆ ಕಿರುಕುಳ ನೀಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನ ರಕ್ಷಿಸಿ, ಭಗೀರಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.