Tag: ವಿದ್ಯುತ್‌ ಸಹಾಯವಾಣಿ

  • ನಿಮ್ಮೂರಲ್ಲಿ ಮಳೆಯಿಂದ ಸಮಸ್ಯೆ ಆಗಿದೆಯೇ? – 8 ಜಿಲ್ಲೆಗೆ ವಾಟ್ಸಪ್ ಸಹಾಯವಾಣಿ ಸಂಖ್ಯೆ ಬಿಡುಗಡೆ

    ನಿಮ್ಮೂರಲ್ಲಿ ಮಳೆಯಿಂದ ಸಮಸ್ಯೆ ಆಗಿದೆಯೇ? – 8 ಜಿಲ್ಲೆಗೆ ವಾಟ್ಸಪ್ ಸಹಾಯವಾಣಿ ಸಂಖ್ಯೆ ಬಿಡುಗಡೆ

    ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆ ಬೆಸ್ಕಾಂ (BESCOM) ಅಲರ್ಟ್ ಆಗಿದ್ದು, ವಿದ್ಯುತ್ ಸಂಬಂಧಿತ ದೂರು ನೀಡುವಂತೆ ತಿಳಿಸಿ ವಾಟ್ಸಪ್ ಸಹಾಯವಾಣಿಯನ್ನು (Whatsapp Helpline) ಬಿಡುಗಡೆ ಮಾಡಿದೆ.

    ಇತ್ತೀಚಿಗೆ ವಿದ್ಯುತ್ ಸಂಬಂಧಿತ ದೂರುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದ್ದು, ಪೂರ್ವ ಮುಂಗಾರು ಬೆನ್ನಲ್ಲೇ 1912 ಸಹಾಯವಾಣಿ ಸಂಖ್ಯೆಗೆ ಕರೆಗಳ ಒತ್ತಡ ಹೆಚ್ಚಾಗಿತ್ತು. ಕರೆಗಳ ಒತ್ತಡದಿಂದಾಗಿ 1912 ಸಂಖ್ಯೆಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳಿಗೆ ಪ್ರತ್ಯೇಕ 11 ವಾಟ್ಸಪ್ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.ಇದನ್ನೂ ಓದಿ:ಕೆಂಪೇಗೌಡ ವಿಮಾನ ನಿಲ್ದಾಣದ ಅಂತರ್ಜಾಲದಲ್ಲಿ ಇನ್ಮುಂದೆ `ಕನ್ನಡ’ ಆಯ್ಕೆಗೆ ಅವಕಾಶ

    ಗ್ರಾಹಕರು ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಸಂದೇಶದ ಜೊತೆ ವಿಡಿಯೋ ಕಳಿಸಬಹುದು ಹಾಗೂ ವಿದ್ಯುತ್ ಸಂಬಂಧಿತ ದೂರು ನೀಡಲು ಸಹಾಯವಾಣಿ ಬಳಸುವಂತೆ ಗ್ರಾಹಕರಿಗೆ ಬೆಸ್ಕಾಂ ಮನವಿ ಮಾಡಿಕೊಂಡಿದೆ.

    ವಾಟ್ಸಪ್ ಸಹಾಯವಾಣಿ ಸಂಖ್ಯೆಗಳ ವಿವರ:
    ಬೆಂಗಳೂರು ನಗರ ಜಿಲ್ಲೆ:
    ದಕ್ಷಿಣ ವೃತ್ತ: 8277884011
    ಪಶ್ಚಿಮ ವೃತ್ತ: 8277884012
    ಪೂರ್ವ ವೃತ್ತ:8277884013
    ಉತ್ತರ ವೃತ್ತ:8277884014
    ಕೋಲಾರ ಜಿಲ್ಲೆ: 8277884015
    ಚಿಕ್ಕಬಳ್ಳಾಪುರ ಜಿಲ್ಲೆ: 8277884016
    ಬೆಂಗಳೂರು ಗ್ರಾಮಾಂತರ ಜಿಲ್ಲೆ: 8277884017
    ರಾಮನಗರ ಜಿಲ್ಲೆ : 8277884018
    ತುಮಕೂರು ಜಿಲ್ಲೆ : 8277884019
    ಚಿತ್ರದುರ್ಗ ಜಿಲ್ಲೆ : 8277884020
    ದಾವಣಗೆರೆ ಜಿಲ್ಲೆ : 8277884021.ಇದನ್ನೂ ಓದಿ:ಒಂದೇ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ – ಎಲ್ಲೆಲ್ಲಿ ಎಷ್ಟು ಮಳೆ?