Tag: ವಿದ್ಯುತ್ ಸಂಪರ್ಕ

  • ದಂಡ ಹಾಕಿದ್ದಕ್ಕೆ ಟ್ರಾಫಿಕ್ ಸಿಗ್ನಲ್, ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡ್ದ

    ದಂಡ ಹಾಕಿದ್ದಕ್ಕೆ ಟ್ರಾಫಿಕ್ ಸಿಗ್ನಲ್, ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡ್ದ

    ಹೈದರಾಬಾದ್: ದಂಡ ಹಾಕಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಟ್ರಾಫಿಕ್ ಸಿಗ್ನಲ್ ಮತ್ತು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದಾನೆ. ಆರೋಪಿ ವಿದ್ಯುತ್ ಇಲಾಖೆಯ ನೌಕರನಾಗಿದ್ದು, ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಎ.ರಮೇಶ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ವ್ಯಕ್ತಿ. ಮಲಕಾಜಗಿರಿಯ ಇಲಾಖೆಯಲ್ಲಿ ಈ ಘಟನೆ ನಡೆದಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಪೊಲೀಸರು ದಂಡ ಹಾಕಿದ್ದರು. ಕೆಲ ದಿನಗಳ ಹಿಂದೆ ರಮೇಶ್ ಬೈಕ್ ನ್ನು ಓರ್ವ ಅಪ್ರಾಪ್ತ ಓಡಿಸುತ್ತಿದ್ದನು. ಹಾಗಾಗಿ ಬೈಕ್ ಹಿಡಿದ ಪೊಲೀಸರು ರಮೇಶ್ ಮನವಿ ಮಾಡಿಕೊಂಡರು ನಿಯಮದ ಪ್ರಕಾರ ದಂಡ ವಿಧಿಸಿದ್ದರು.

    ದಂಡ ಹಾಕಿದ್ದಕ್ಕೆ ಕೋಪಗೊಂಡ ರಮೇಶ್ ಮೊದಲಿಗೆ ಟ್ರಾಫಿಕ್ ಸಿಗ್ನಲ್ ಸಂಪರ್ಕ, ಜಿಡಿಮೆಟಲಾ ಸ್ಟೇಶನ್ ಮತ್ತು ಎಲ್ ಆ್ಯಂಡ್ ಓ ಪೊಲೀಸ್ ಸ್ಟೇಶನ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದ ಎರಡು ಗಂಟೆ ಮೂರು ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  • ಮುಂಬೈ ನಗರದಲ್ಲಿ ವಿದ್ಯುತ್ ವ್ಯತ್ಯಯ- ಅರ್ಧದಲ್ಲೇ ನಿಂತ ಲೋಕಲ್ ಟ್ರೈನ್‍ಗಳು

    ಮುಂಬೈ ನಗರದಲ್ಲಿ ವಿದ್ಯುತ್ ವ್ಯತ್ಯಯ- ಅರ್ಧದಲ್ಲೇ ನಿಂತ ಲೋಕಲ್ ಟ್ರೈನ್‍ಗಳು

    ಮುಂಬೈ: ಮಹಾರಾಷ್ಟ್ರ ರಾಜಧಾನಿ, ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಲೋಕಲ್ ಟ್ರೈನ್ ಗಳು ಸ್ಥಗಿತಗೊಂಡಿವೆ. ಜನರು ರೈಲಿನಿಂದ ಹೊರ ಬಂದು ಟ್ರ್ಯಾಕ್ ನಲ್ಲಿ ನಡೆದುಕೊಂಡು ಹೋಗಿ ಮುಂದಿನ ನಿಲ್ದಾಣ ತಲುಪಿದ್ದಾರೆ.

    ನಗರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗ್ರಿಡ್ ಫೇಲ್ ಆಗಿದ್ದರಿಂದ ಈ ಸಮಸ್ಯೆಯುಂಟಾಗಿದೆ. ದಕ್ಷಿಣ, ಕೇಂದ್ರ ಮತ್ತು ಉತ್ತರ ಮುಂಬೈನಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿರುವ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಬಿಎಂಸಿ(ಬೃಹನ್ ಮುಂಬೈ ಕಾರ್ಪೋರೇಷನ್) ಮತ್ತು ಬೆಸ್ಟ್ (ಬೃಹನ್ ಮುಂಬೈ ಎಲೆಕ್ಟ್ರಾನಿಕ್ ಸಪ್ಲೈ ಆ್ಯಂಡ್ ಟ್ರಾನ್ಸಪೋರ್ಟ್)ಗೆ ಟ್ಯಾಗ್ ಮಾಡುವ ಮೂಲಕ ದೂರು ಸಲ್ಲಿಸುತ್ತಿದ್ದಾರೆ. ಮುಂಬೈ ಹೊರವಲಯ ಥಾಣೆಯವರೆಗೂ ವಿದ್ಯುತ್ ಸಮಸ್ಯೆಯುಂಟಾಗಿರುವ ಬಗ್ಗೆ ವರದಿಯಾಗಿದೆ.

    ವಿದ್ಯುತ್ ಸಂಪರ್ಕ ಕಡಿತ ಹಿನ್ನೆಲೆ ಪ್ರತಿಕ್ರಿಯಿಸಿರುವ ಬೆಸ್ಟ್, ಟಾಟಾ ಇನ್‍ಕಮ್ಮಿಂಗ್ ಎಲೆಕ್ಟ್ರಿಕ್ ಸರಬರಾಜಿನಲ್ಲಿ ಅಡಚಣೆಯುಂಟಾಗಿದೆ. ಈ ಹಿನ್ನೆಲೆ ನಗರದ ಬಹುತೇಕ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಸೇವೆಯಲ್ಲಿ ಉಂಟಾದ ತೊಂದರೆಗೆ ವಿಷಾದಿಸುತ್ತೇವೆ ಎಂದು ಟ್ವೀಟ್ ಮಾಡಿದೆ. ಆದ್ರೆ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಯಾವಾಗ ಸರಿಯಾಗುತ್ತೆ ಎಂಬುದರ ಬಗ್ಗೆ ಬೆಸ್ಟ್ ಸ್ಪಷ್ಟನೆ ನೀಡಿಲ್ಲ.

    ಪವರ್ ಗ್ರಿಡ್ ಫೇಲ್ ಹಿನ್ನೆಲೆ ಪಶ್ಚಿಮ ಭಾಗದ ಲೋಕಲ್ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಚರ್ಚ್ ಗೇಟ್ ನಿಂದ ವಸೈವರೆಗೂ ರೈಲು ಸೇವೆ ಸ್ಥಗಿತವಾಗಿದೆ. ಇತ್ತ ವಸೈನಿಂದ ಬೋರಿವಲಿ ನಡುವೆ ರೈಲು ಸಂಚಾರವಿದೆ.

  • ಅರ್ಜಿ ಸಲ್ಲಿಸಿದ 30 ದಿನದ ಒಳಗಡೆ ವಿದ್ಯುತ್‌ ಸಂಪರ್ಕ – ಕರಡು ನಿಯಮದಲ್ಲಿ ಏನಿದೆ?

    ಅರ್ಜಿ ಸಲ್ಲಿಸಿದ 30 ದಿನದ ಒಳಗಡೆ ವಿದ್ಯುತ್‌ ಸಂಪರ್ಕ – ಕರಡು ನಿಯಮದಲ್ಲಿ ಏನಿದೆ?

    ನವದೆಹಲಿ: ಇನ್ನು ಮುಂದೆ ಗ್ರಾಹಕರು ರಾಜಕೀಯ, ಪ್ರಭಾವಿ ವ್ಯಕ್ತಿಗಳ ಸಹಾಯವಿಲ್ಲದೇ ಸುಲಭವಾಗಿ ವಿದ್ಯುತ್‌ ಸಂಪರ್ಕ ಪಡೆಯಬಹುದು. ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ತನ್ನು ಗ್ರಾಹಕರ ಹಕ್ಕು ಎಂದು ಪರಿಗಣಿಸಲು ಕೇಂದ್ರ ಸರ್ಕಾರ ನಿಯಮ ತರಲು ಮುಂದಾಗಿದೆ.

    ಕೇಂದ್ರ ಸರ್ಕಾರ ವಿದ್ಯುತ್‌ (ಗ್ರಾಹಕರ ಹಕ್ಕು) ನಿಯಮಾವಳಿ-2020 ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಸಂಬಂಧ ಕರಡು ನಿಯಮಗಳನ್ನು ಸರ್ಕಾರ ರೂಪಿಸಿದ್ದು,  ಸೆ.30ರೊಳಗೆ ಜನರು ಪ್ರತಿಕ್ರಿಯೆ ನೀಡಬೇಕು ಎಂದು ಕೇಳಿಕೊಂಡಿದೆ.

    ಒಂದು ವೇಳೆ ಇದು ಜಾರಿಯಾದರೆ ವಿದ್ಯುತ್‌ ಪಡೆಯುವುದು ಈ ದೇಶದಲ್ಲಿರುವ ಎಲ್ಲ ಜನರ ಹಕ್ಕಾಗಲಿದೆ. ಅರ್ಜಿ ಸಲ್ಲಿಸಿದ ನಿರ್ದಿಷ್ಟಸಮಯದೊಳಗೆ ಇಂಧನ ಇಲಾಖೆ ವಿದ್ಯುತ್‌ ಸಂಪರ್ಕ ನೀಡಲೇಬೇಕಾಗುತ್ತದೆ.

    ನಿಯಮಗಳಲ್ಲಿ ಏನಿದೆ?
    – ಮೆಟ್ರೋ ನಗರಗಳಲ್ಲಿ ಗ್ರಾಹಕರು ಅರ್ಜಿ ಸಲ್ಲಿಸಿದ 7 ದಿನ, ಮುನ್ಸಿಪಲ್‌ ಪಟ್ಟಣಗಳಲ್ಲಿ 15 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ದಿನದೊಳಗೆ ವಿದ್ಯುತ್‌ ಸಂಪರ್ಕ ನೀಡಬೇಕು ಅಥವಾ ಈಗಾಗಲೇ ನೀಡಿರುವ ಸಂಪರ್ಕವನ್ನು ನವೀಕರಿಸಿಕೊಡಬೇಕು.

    – 10 ಕಿಲೋ ವ್ಯಾಟ್‌ ವಿದ್ಯುತ್‌ ಸಂರ್ಪಕ್ಕೆ ಕೇವಲ 2 ದಾಖಲೆ ಸಲ್ಲಿಸಿ ವಿದ್ಯುತ್‌ ಸಂಪರ್ಕ ಪಡೆಯಲು ಸರಳ ವ್ಯವಸ್ಥೆ ಜಾರಿಯಾಗಬೇಕು.

    – ಸದ್ಯ ಇರುವ ಎಲ್‌ಪಿಜಿ ಮಾದರಿಯಲ್ಲಿ ಗ್ರಾಹಕರ ಬ್ಯಾಂಕ್‌ ಖಾತೆಗೆ ನೇರ ಸಬ್ಸಿಡಿ ಹಣ ಜಮೆ

    – 1 ಸಾವಿರ ರೂ. ವರೆಗೆಗಿನ ಬಿಲ್‌ ಗಳನ್ನು ಹಣ, ಚೆಕ್‌, ಡೆಬಿಟ್‌, ನೆಟ್‌ ಬ್ಯಾಕಿಂಗ್‌ ಮೂಲಕ ಪಾವತಿಸಲು ಅವಕಾಶ, 1 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಆನ್‌ಲೈನ್‌ನಲ್ಲಿ ಪಾವತಿಸಬೇಕು.

    – 24*7 ಗಂಟೆ ಟೋಲ್‌ ಫ್ರೀ ನಂಬರ್‌, ಹೊಸ ಸಂಪರ್ಕ, ಸಂಪರ್ಕ ಕಡಿತ, ಮರುಸಂಪರ್ಕ, ಸಂಪರ್ಕವನ್ನು ಬದಲಾಯಿಸುವುದು, ಹೆಸರು ಮತ್ತು ವಿವರಗಳಲ್ಲಿ ಬದಲಾವಣೆ, ಲೋಡ್ ಬದಲಾವಣೆ, ಮೀಟರ್ ಬದಲಾವಣೆಗಳಿಗೆ ವೆಬ್‌ ಆಧಾರಿತ ಅಪ್ಲಿಕೇಶನ್‌ ವ್ಯವಸ್ಥೆ ತರಬೇಕು. ಎಸ್‌ಎಂಎಸ್ / ಇಮೇಲ್ ಎಚ್ಚರಿಕೆಗಳು, ಆನ್‌ಲೈನ್ ಮೂಲಕ ಸ್ಟೇಟಸ್‌ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ.

    ಕರಡು ನಿಯಮಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಬಹುದು – Drafts Electricity (Rights of Consumers) Rules, 2020

  • ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್

    ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್

    ಹಾಸನ: ಎದೆ ಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ಸಂಪರ್ಕವನ್ನು ಪವರ್ ಮ್ಯಾನ್ ಸರಿಪಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಗ್ರಾಮಸ್ಥರಿಗೆ ಸಹಾಯವಾಗಲಿ ಎಂದು ಪವರ್ ಮ್ಯಾನ್ ಅಮಿತ್ ಎದೆಮಟ್ಟದವರೆಗೆ ನಿಂತಿದ್ದ ನೀರಿನಲ್ಲೇ ಸುಮಾರು 500 ಮೀಟರ್ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಕಳೆದ 3 ದಿನದಿಂದ ಸತತವಾಗಿ ಮಳೆ ಆರ್ಭಟ ಜೋರಾಗಿದ್ದು, ರಾಮನಾಥಪುರ ವ್ಯಾಪ್ತಿಯ ತೋಟವೊಂದರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

    ಇದರಿಂದಾಗಿ ಗ್ರಾಮಸ್ಥರಿಗೆ ವಿದ್ಯುತ್ ಸಮಸ್ಯೆ ತಲೆದೋರಿದ್ದು ಪವರ್ ಮ್ಯಾನ್ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ರಾಮನಾಥಪುರ ಹೋಬಳಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತ ದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಅಮಿತ್ ಅವರು ಸುತ್ತಲೂ ಎದೆವರೆಗೂ ನೀರು ನಿಂತಿದ್ದ ತೋಟದಲ್ಲಿ ಸುಮಾರು 500 ಮೀಟರ್ ದೂರದವರೆಗೂ ತೆರಳಿ ವಿದ್ಯುತ್ ಸಂಪರ್ಕ ಸರಿಪಡಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • 3 ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ- ವೃದ್ಧ ದಂಪತಿ ಮನೆಗೆ ಬೆಳಕಾದ ಕಿಚ್ಚ

    3 ವರ್ಷಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ- ವೃದ್ಧ ದಂಪತಿ ಮನೆಗೆ ಬೆಳಕಾದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿಚ್ಚ ಸುದೀಪ್ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಕೆಲ ವರ್ಷಗಳಿಂದ ಬೆಳಕಿಲ್ಲದ ಮನೆಗೆ ಸುದೀಪ್ ಬೆಳಕಾಗುವ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. ಇದನ್ನೂ ಓದಿ: ನಾಲ್ಕು ಸರ್ಕಾರಿ ಶಾಲೆಗಳನ್ನ ದತ್ತು ಪಡೆದ ಕಿಚ್ಚ ಸುದೀಪ್

    ಸುದೀಪ್ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಟ್ರಸ್ಟ್ ಕೂಡ ಕೆಲವು ತಿಂಗಳಿನಿಂದ ಸಮಾಜ ಸೇವೆಯಲ್ಲಿ ನಿರತವಾಗಿದೆ. ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವೃದ್ಧ ದಂಪತಿಗೆ ಸಹಾಯ ಮಾಡಿದ್ದಾರೆ.

    ವೃದ್ಧ ದಂಪತಿ ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿಕೊಂಡಿದ್ದರು. ಆದರೆ ಅದಕ್ಕೆ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗದೆ ಅಂದಿನಿಂದ ಅಂದರೆ ಸುಮಾರು ಮೂರು ವರ್ಷದಿಂದ ಕತ್ತಲಲ್ಲಿಯೇ ಜೀವನ ಸಾಗಿಸುತ್ತಿದ್ದರು. ಈ ವಿಷಯ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗಮನಕ್ಕೆ ಬಂದಿದೆ.

    ಟ್ರಸ್ಟ್ ನ ಯುವಕರು ತಕ್ಷಣ ವೃದ್ಧ ದಂಪತಿಯಾದ ರಾಧಮ್ಮ ಹಾಗೂ ನಾಗರಾಜು ಅವರ ಮನೆಗೆ ಭೇಟಿ ನೀಡಿದ್ದಾರೆ. ನಂತರ ಅವರ ಸಮಸ್ಯೆಯನ್ನು ಆಲಿಸಿ, ತಾವೇ ತಮ್ಮ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಹಾಕಿಸಿಕೊಟ್ಟಿದ್ದಾರೆ. ಅಲ್ಲದೇ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅನುಮತಿಗಳನ್ನೂ ಸಹ ಅವರೇ ತೆಗೆದುಕೊಂಡಿದ್ದಾರೆ.

    ವೃದ್ಧ ದಂಪತಿ ತಮ್ಮ ವಿಕಲಾಂಗ ಮೊಮ್ಮಗನೊಂದಿಗೆ ವಾಸಿಸುತ್ತಿದ್ದಾರೆ. ಟ್ರಸ್ಟ್ ಮೂಲಕ ಸುದೀಪ್ ಸಹಾಯ ಮಾಡಿದ್ದಕ್ಕೆ ಕಿಚ್ಚನಿಗೆ ಮತ್ತು ಟ್ರಸ್ಟ್ ಯುವಕರಿಗೆ ವೃದ್ಧ ದಂಪತಿ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ವೃದ್ಧ ದಂಪತಿಗೆ ಸಹಾಯ ಮಾಡಿರುವ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಸುದೀಪ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ

    ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ

    – ಮಾಜಿ ಡಿಸಿಎಂ ಕ್ಷೇತ್ರದಲ್ಲೇ ದೌರ್ಜನ್ಯ

    ತುಮಕೂರು: ದಾಯಾದಿಗಳ ಮತ್ಸರಕ್ಕೆ ಇಡೀ ಗ್ರಾಮ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದರೂ ಒಂದು ಮನೆಗೆ ಮಾತ್ರ ವಿದ್ಯುತ್ ಸಂಪರ್ಕ, ಶೌಚಾಲಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಘಟನೆ ಜಿಲ್ಲೆ ಕೊರಟಗೆರೆ ಕ್ಷೇತ್ರದ ಚಿಕ್ಕತೊಟ್ಟುಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಗ್ರಾಮದ ರಾಮಸ್ವಾಮಿ ಎಂಬವರ ಮನೆಗೆ ಕಳೆದ 18 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲ. ಊರಿಗೆಲ್ಲಾ ವಿದ್ಯುತ್ ಸೌಕರ್ಯ ಇದ್ದರೂ ರಾಮಸ್ವಾಮಿ ಮನೆಗೆ ಮಾತ್ರ ಅಧಿಕಾರಿಗಳು ವಿದ್ಯುತ್ ಹಾಗೂ ಶೌಚಾಲಯದ ಸೌಕರ್ಯ ಒದಗಿಸುತ್ತಿಲ್ಲ. ಪರಿಣಾಮ ರಾಮಸ್ವಾಮಿಯ ಮಕ್ಕಳು ಮನೆ ಮುಂದಿರುವ ಬೀದಿ ದೀಪದಲ್ಲೇ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಚಿಮಣಿ ದೀಪದ ಬೆಳಕಲ್ಲಿ ಓದೋಣ ಎಂದರು ಸೀಮೆ ಎಣ್ಣೆನೂ ರೇಷನಲ್ಲಿ ಕೊಡುತ್ತಿಲ್ಲ.

    ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ಕ್ಷೇತ್ರದಲ್ಲೇ ಇಂತಹ ದೌರ್ಜನ್ಯ ನಡೆಯುತ್ತಿದ್ದು, ರಾಮಸ್ವಾಮಿ ಹಾಗೂ ಅವರ ದಾಯಾದಿಯೊಬ್ಬರ ನಡುವೆ ಜಮೀನು ವಿವಾದ ಇದಕ್ಕೆಲ್ಲ ಕಾರಣವಾಗಿದೆ. ಕೋರ್ಟಿನಲ್ಲಿ ರಾಮಸ್ವಾಮಿ ಪರ ತೀರ್ಪು ಬಂದರೂ ಮನೆ ಕಟ್ಟಿಕೊಂಡು ಮೂಲ ಸೌಲಭ್ಯ ಒದಗಿಸಿಕೊಳ್ಳಲು ದಾಯಾದಿಗಳು ಅಡ್ಡಿಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪ್ರಭಾವಿಗಳಾಗಿದ್ದ ದಾಯಾದಿಗಳು ಅಧಿಕಾರಿಗಳ ಜೊತೆ ಪಿತೂರಿ ನಡೆಸಿ ದೌರ್ಜನ್ಯ ನಡೆಸುತ್ತಿದ್ದಾರೆ. ಒಮ್ಮೆ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಕೆಲವೇ ದಿನದಲ್ಲಿ ಕಡಿತಗೊಳಿಸಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡುತಿದ್ದರೂ ನನ್ನ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಆಗಿಲ್ಲ. ಪರಿಣಾಮ ವಯಸ್ಸಿಗೆ ಬಂದ ನನ್ನ ಹೆಣ್ಣುಮಕ್ಕಳು ರಾತ್ರಿ ವೇಳೆ ಬಯಲಿಗೆ ಹೋಗಬೇಕಾಗಿದೆ ಎಂದು ರಾಮಸ್ವಾಮಿ ಅವರು ಸಂಕಟ ತೋಡಿಕೊಂಡಿದ್ದಾರೆ.

    ಕನಿಷ್ಟ ಪಕ್ಷ ಶೌಚಾಲಯ, ವಿದ್ಯುತ್ ಸಂಪರ್ಕವನ್ನಾದರೂ ಕೊಡಿ ಎಂದು ಅಧಿಕಾರಗಳ ಬಳಿ ರಾಮಸ್ವಾಮಿ ಮಕ್ಕಳು ಅಂಗಲಾಚಿ ಬೇಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವಹಿಸಿದ್ದಾರೆ.

  • ಅಕ್ರಮವಾಗಿ ವಿದ್ಯುತ್ ಸಂಪರ್ಕದ ಬಗ್ಗೆ ಪ್ರಶ್ನಿಸಿದ ಲೈನ್‍ಮ್ಯಾನ್ ಮೇಲೆ ಹಲ್ಲೆ

    ಅಕ್ರಮವಾಗಿ ವಿದ್ಯುತ್ ಸಂಪರ್ಕದ ಬಗ್ಗೆ ಪ್ರಶ್ನಿಸಿದ ಲೈನ್‍ಮ್ಯಾನ್ ಮೇಲೆ ಹಲ್ಲೆ

    ಮಂಡ್ಯ: ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಲೈನ್‍ಮ್ಯಾನ್ ಮೇಲೆ ಹಲ್ಲೆ ಮಾಡಿರುವ ಘಟನೆ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ನಡೆದಿದೆ.

    ಹೊಸಗಾವಿ ಗ್ರಾಮದ ನಿವಾಸಿಗಳಾದ ನಿಂಗಯ್ಯ, ರಾಮನಿಂಗಯ್ಯ ಸೇರಿದಂತೆ ಇತರರು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಲೈನ್‍ಮ್ಯಾನ್ ನಾಗರಾಜ್ ಗಾಯಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ನಾಗರಾಜ್ ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    ಲೈನ್‍ಮ್ಯಾನ್ ನಾಗರಾಜ್ ಅವರು ಶುಕ್ರವಾರ ಹೊಸಗಾವಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದನ್ನು ನಾಗರಾಜ್ ಗಮನಿಸಿ, ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದರು. ಇದನ್ನು ಖಂಡಿಸಿದ ನಿಂಗಯ್ಯ, ರಾಮನಿಂಗಯ್ಯ ಮತ್ತು ಇತರರು ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯ ಸಂಬಂಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಐತಿಹಾಸಿಕ ಸಾಧನೆ: ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ

    ಐತಿಹಾಸಿಕ ಸಾಧನೆ: ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ

    ನವದೆಹಲಿ: ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ತಲುಪುವ ಮೂಲಕ ಭಾರತ ಐತಿಹಾಸಿಕ ಸಾಧನೆ ನಿರ್ಮಿಸಿದೆ. ಮಣಿಪುರದ ಸೇನಾಪತಿ ಜಿಲ್ಲೆಯ ಗ್ರಾಮವೊಂದಕ್ಕೆ ಶನಿವಾರ ಸಂಜೆ 5.30ಕ್ಕೆ ವಿದ್ಯುತ್ ತಲುಪುವ ಮೂಲಕ ಈ ಸಾಧನೆ ನಿರ್ಮಾಣವಾಗಿದೆ.

    2014ರಲ್ಲಿ ಮೋದಿ ಸರ್ಕಾರ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ 2018ರ ಏಪ್ರಿಲ್ 28 ಐತಿಹಾಸಿಕ ದಿನ. ಶನಿವಾರ ನಾವು ನೀಡಿದ್ಧ ಭರವಸೆ ಪೂರ್ಣವಾಗಿದೆ. ಭಾರತದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಪ್ರಧಾನಿ ಮೋದಿ 2015ರ ಸ್ವಾತಂತ್ರ್ಯ ದಿನಾಚಣೆಯ ಭಾಷಣದಲ್ಲಿ, 1 ಸಾವಿರ ದಿನದ ಒಳಗಡೆ ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ ಈ ಗುರಿಯನ್ನು 987 ದಿನದಲ್ಲೇ ಪೂರ್ಣಗೊಳಿಸಿದ್ದೇವೆ ಎಂದು ಪೀಯುಷ್ ಗೋಯಲ್ ರೀಟ್ವೀಟ್ ಮಾಡಿದ್ದಾರೆ.

    ಈ ಗುರಿಯನ್ನು ತಲುಪಲು ಸಹಕರಿಸಿದ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಎಲ್ಲ ಕೆಲಸಗಾರರಿಗೆ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    https://twitter.com/India_Policy/status/990479994362122240