Tag: ವಿದ್ಯುತ್ ಬಿಲ್

  • ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ – ಬಿಲ್ ಕಟ್ಟೋಕೆ ಹೋದ್ರೆ ಅಕೌಂಟ್‌ನಲ್ಲಿದ್ದ ಹಣ ಮಾಯ

    ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ – ಬಿಲ್ ಕಟ್ಟೋಕೆ ಹೋದ್ರೆ ಅಕೌಂಟ್‌ನಲ್ಲಿದ್ದ ಹಣ ಮಾಯ

    ಬೆಂಗಳೂರು: ವಿದ್ಯುತ್ ಬಿಲ್ (Electricity Bill)  ಹೆಸರಲ್ಲಿ ಜನರನ್ನು ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ವಿದ್ಯುತ್ ಬಿಲ್ ಬಾಕಿ ಇದ್ದರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತೀವಿ ಎಂದು ಹೆದರಿಸಿ ಹಣ ದೋಚುವ ಜಾಲವೊಂದು ಬೀಡುಬಿಟ್ಟಿದೆ.

    ಆಧುನಿಕತೆ ಬೆಳದಂತೆ ವಂಚನೆ ಜಾಲ ಹೆಚ್ಚಾಗುತ್ತಿದೆ. ಓಟಿಪಿ ಹ್ಯಾಕ್, ಆಧಾರ್ ಹ್ಯಾಕ್, ಲೋನ್ ಆಪ್ ಹ್ಯಾಕ್ ಮಾಡಿ ಹಣ ದೋಚುವ ಪ್ರಕರಣ, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ದೋಚುವ ಪ್ರಕರಣ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈಗ ಕೆಇಬಿ (KEB) ಹೆಸರಲ್ಲಿ ಹಣ ದೋಚುವ ಜಾಲ ಬೀಡು ಬಿಟ್ಟಿದೆ. ಬೆಂಗಳೂರಿಗರು ಇಂತಹ ಪ್ರಕರಣಗಳಿಂದ ಎಚ್ಚರಿಕೆ ವಹಿಸಬೇಕಿದೆ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ

    ಬೆಂಗಳೂರಿನ ಜಯನಗರ (Jayanagar) ನಿವಾಸಿ ಕೇಶವ್ ಕುಮಾರ್ ಈ ಜಾಲಕ್ಕೆ ಸಿಲುಕಿ ಪರದಾಡುತ್ತಾ ಇದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲ. ಕರೆಂಟ್ ಕಟ್ ಮಾಡುತ್ತೇವೆ ಎಂದು ಮೆಸೇಜ್ ಬಂದಿದೆ. ಕರೆಂಟ್ ಕಟ್ ಆಗುತ್ತದೆ ಎನ್ನುವ ಭಯಕ್ಕೆ ಮೆಸೇಜ್‌ನಲ್ಲಿದ್ದ ನಂಬರ್‌ಗೆ ಪೇಟಿಎಂ ಮಾಡಿದ ತಕ್ಷಣ ಫೋನ್ ಹ್ಯಾಕ್ ಮಾಡಿದ್ದಾರೆ. ಪಾಸ್‌ವರ್ಡ್ ತಿಳಿದುಕೊಂಡು ಖಾತೆಯಿಂದ 15,000 ಹಣ ಎಗರಿಸಿದ್ದಾರೆ. ಇದನ್ನೂ ಓದಿ: ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

    ಇನ್ನೂ ಹಣ ಎಗರಿಸುತ್ತಿದ್ದಂತೆ ಎಚ್ಚೆತ್ತ ಕೇಶವ್ ಕುಮಾರ್ ಯಾರು ನೀವು? ಐಡಿ ಕಾರ್ಡ್ ಕಳುಹಿಸಿ ಎಂದು ಮೆಸೇಜ್ ಮಾಡಿದರೇ, ನಗ್ನ ಫೋಟೊ ಕಳುಹಿಸಿ ಭಯ ಪಡಿಸಿದ್ದಾರೆ. ಇವರು ಸೈಬರ್ ಖದೀಮರು ಅಂತಾ ಗೊತ್ತಾಗುತ್ತಿದ್ದಂತೆ ಕೇಶವ್ ಕುಮಾರ್ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಅಕೌಂಟ್ ಅನ್ನು ಬ್ಲಾಕ್ ಮಾಡಿಸಿದ್ದಾರೆ. ಇದನ್ನೂ ಓದಿ: ಐಸಿಸ್ ಸೇರಲು ಯುವಕರಿಗೆ ಪ್ರಚೋದನೆ – ಇಬ್ಬರು ಉಗ್ರರ ಅರೆಸ್ಟ್

    ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ಕೊಟ್ಟರೆ ಇದು ಕಾಮನ್ ಆಗಿದೆ, ಎಚ್ಚರಿಕೆ ವಹಿಸಿ ಎನ್ನುತ್ತಾರೆ. ಇಂತಹ ಸಮಸ್ಯೆಯನ್ನು ಬೆಂಗಳೂರಿಗರು ತುಂಬಾ ಜನ ಅನುಭವಿಸುತ್ತಾ ಇದ್ದಾರೆ. ಎಚ್ಚರಿಕೆ ಬಹುಮುಖ್ಯ ಅಂತಿದ್ದಾರೆ ಎಂದು ಕೇಶವ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ

    ಒಟ್ಟಾರೆ ವಿದ್ಯುತ್ ಬಿಲ್ ನೆಪದಲ್ಲಿ ವಂಚನೆ ಹೆಚ್ಚಾಗಿದ್ದು, ವಿದ್ಯುತ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಕಟ್ಟುವ ಹಾಗಿದ್ದರೆ ಬೆಸ್ಕಾಂ (BESCOM) ಅಧಿಕಾರಿಗಳನ್ನು ಸಂಪರ್ಕ ಮಾಡಿಯೇ ಕಟ್ಟಬೇಕಿದೆ. ಇಂಧನ ಇಲಾಖೆ ಇಂತಹ ಜಾಲದ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊಡಗಿನ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮರುಸ್ಥಾಪನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊಡಗಿನ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮರುಸ್ಥಾಪನೆ

    ಮಡಿಕೇರಿ: ವಿದ್ಯುತ್ ಬಿಲ್ (Electricity Bill) ಬಾಕಿ ಉಳಿಸಿಕೊಂಡಿರುವ ಅಂಗನವಾಡಿಗಳ (Anganwadi) ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ಜಿಲ್ಲೆಯ ಅಧಿಕಾರಿಗಳಿಗೆ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾದ ಎನ್‌ಎಸ್ ಬೋಸರಾಜು (NS Boseraju) ಅವರು ಸೂಚನೆ ನೀಡಿದ್ದಾರೆ.

    ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಅಂಗನವಾಡಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ ಎನ್ನುವ ಪಬ್ಲಿಕ್ ಟಿವಿ (Public Tv) ವರದಿಯ ನಂತರ ಸಚಿವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಒಲವು ಕಂಡು ಮೋದಿಗೆ ನೋವಾಗಿದೆ: ಚಲುವರಾಯ ಸ್ವಾಮಿ

    ವಿದ್ಯುತ್ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಸಚಿವರ ಕಾರ್ಯಾಲಯಕ್ಕೂ ಸೂಚನೆ ನೀಡಿದ್ದರು. ಸೂಚನೆಯ ಹಿನ್ನೆಲೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರಪ್ಪ ಹಂಚಿನಾಳ ಅವರು ಜಿಲ್ಲೆಯ ಅಧಿಕಾರಿಗಳು, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಮಾತನಾಡಿ ಅಂಗನವಾಡಿಗಳ ವಿದ್ಯುತ್ ಸಂಪರ್ಕವನ್ನು ಮರು ಸ್ಥಾಪಿಸಲು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಉಚಿತ ಭಾಗ್ಯದಿಂದ ಪರಿಶಿಷ್ಟರ ಅಂತ್ಯಕ್ರಿಯೆಗೂ ಸರ್ಕಾರದ ಬಳಿ ದುಡ್ಡಿಲ್ಲ: ಬಿಎಸ್‌ವೈ

  • 1 ತಿಂಗಳ ಕರೆಂಟ್ ಬಿಲ್ 10 ಲಕ್ಷ! – ಗ್ರಾಹಕ ಶಾಕ್

    1 ತಿಂಗಳ ಕರೆಂಟ್ ಬಿಲ್ 10 ಲಕ್ಷ! – ಗ್ರಾಹಕ ಶಾಕ್

    ಚಿಕ್ಕಮಗಳೂರು: ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಒಂದು ತಿಂಗಳ ಕರೆಂಟ್ ಬಿಲ್ (Electricity Bill) 10 ಲಕ್ಷ ರೂ. ಬಂದಿದ್ದು ಅಂಗಡಿ ಮಾಲೀಕ ಶಾಕ್ ಆಗಿರುವ ಘಟನೆ ಜಿಲ್ಲೆಯ ಕಡೂರು (Kadur) ಪಟ್ಟಣದಲ್ಲಿ ನಡೆದಿದೆ.

    ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ 10,26,054 ರೂ. ಬಂದಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000 ದಿಂದ 4,500 ರೂ. ಮಾತ್ರ ಬರುತ್ತಿತ್ತು. ಆದರೆ ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ರೂ. ಬಂದಿದೆ. ಬಿಲ್ ಅವಧಿ 1/8/2023 ರಿಂದ 1/9/2023 ರವರೆಗೆ ಎಂದು ನಮೂದಿಸಲಾಗಿದೆ.

    ಈ ಹಿಂದೆ ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡಾ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ ಈ ತಿಂಗಳು 10 ಲಕ್ಷ ರೂ. ಬಿಲ್ ನೋಡಿ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅವರು ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಮೆಸ್ಕಾಂ ಸಿಬ್ಬಂದಿಗೆ ಹೇಳಿ 4 ದಿನವಾದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಂಗಡಿ ಮಾಲೀಕ ಕಮಲ್ ಚಂದ್ ಡಾಗಾ ಹಾಗೂ ಮೊಹಿತ್ ಡಾಗಾ ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ- ಸೋಮವಾರ ಆಟೋ, ಟ್ಯಾಕ್ಸಿ ಸಿಗೋದು ಅನುಮಾನ

    500 ರೂ. ಬರುವ ಜಾಗದಲ್ಲಿ 15 ಸಾವಿರ ರೂ. ಬಂದಿದೆ. ಇದು ಸಾಫ್ಟ್‌ವೇರ್ ಪ್ರಾಬ್ಲಂ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಕುರಿಬಲಿ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರಿಬ್ಬರ ಮೇಲೆ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ಬಾರಿಯೂ ದುಬಾರಿ ವಿದ್ಯುತ್‌ ಬಿಲ್‌ – ಹೆಸ್ಕಾಂ ಕಳ್ಳಾಟ ಬಿಚ್ಚಿಟ್ಟ ಪಬ್ಲಿಕ್‌ ಟಿವಿ

    ಈ ಬಾರಿಯೂ ದುಬಾರಿ ವಿದ್ಯುತ್‌ ಬಿಲ್‌ – ಹೆಸ್ಕಾಂ ಕಳ್ಳಾಟ ಬಿಚ್ಚಿಟ್ಟ ಪಬ್ಲಿಕ್‌ ಟಿವಿ

    ಹುಬ್ಬಳ್ಳಿ: ಕಳೆದ ತಿಂಗಳಿನಂತೆ ಈ ಬಾರಿಯೂ ದುಬಾರಿ ವಿದ್ಯುತ್‌ ಬಿಲ್‌ (Electricity Bill) ಬಂದಿದ್ದು ಗ್ರಾಹಕರಿಂದ ಹಗಲು ದರೋಡೆಗೆ ಹೆಸ್ಕಾಂ (HESCOM) ಇಳಿದಿದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ಹೌದು. ರಾಜ್ಯಾದ್ಯಂತ ಕಳೆದ ತಿಂಗಳು ಎಲ್ಲಾ ಮನೆಗಳಿಗೆ ದುಬಾರಿ ವಿದ್ಯುತ್‌ ಬಿಲ್‌ ಬಂದಿತ್ತು. ದುಬಾರಿ ಬಿಲ್‌ ಬಂದಿದ್ದು ಯಾಕೆ ಎಂದು ಪ್ರಶ್ನಿಸಿದ್ದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್‌ ದರ ಏರಿಸಿದ್ದರಿಂದ ಜೂನ್‌ ತಿಂಗಳಿನಲ್ಲಿ ದುಬಾರಿ ಬಿಲ್‌ ಬಂದಿದೆ. ಮುಂದಿನ ತಿಂಗಳಿನಿಂದ ದುಬಾರಿ ವಿದ್ಯುತ್‌ ಬಿಲ್‌ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಆದರೆ ಈ ಬಾರಿಯೂ ಗ್ರಾಹಕರಿಗೆ ದುಬಾರಿ ಬಿಲ್‌ ಬಂದಿದ್ದು, ದುಬಾರಿ ಬಿಲ್‌ ಯಾಕೆ ಬಂದಿದೆ ಎಂದು ಕೇಳಿದ್ದಕ್ಕೆ ಹೆಸ್ಕಾಂ ಅಧಿಕಾರಿಗಳು ನೀಡುತ್ತಿರುವ ಉತ್ತರದಿಂದ ಹಗಲು ದರೋಡೆ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ.

     

    ಅಧಿಕಾರಿಗಳು ಹೇಳಿದ್ದು ಏನು?
    ದುಬಾರಿ ವಿದ್ಯುತ್‌ ಬಿಲ್‌ ಯಾಕೆ ಬಂದಿದೆ ಎಂದು ಹಲವು ಗ್ರಾಹಕರು ಹೆಸ್ಕಾಂ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾಫ್ಟ್‌ವೇರ್ ಸಮಸ್ಯೆ (Software Problem), ಫಿಕ್ಸೆಡ್‌ ಚಾರ್ಜ್‌ ಪ್ರತಿ ತಿಂಗಳು ಬದಲಾವಣೆ ಆಗುತ್ತದೆ, ಕೆಇಆರ್‌ಸಿ ಪ್ರತಿ ತಿಂಗಳು ದರ ಬದಲಾವಣೆ ಮಾಡುತ್ತದೆ ಎಂಬ ಉತ್ತರಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರ ಕೊಡುವ ಅಕ್ಕಿಯಲ್ಲೂ ಕಡಿತ; ಅನ್ನಭಾಗ್ಯವಲ್ಲ ಇದು ಕನ್ನ ಭಾಗ್ಯ – ಬೊಮ್ಮಾಯಿ

    ಅಧಿಕಾರಿಗಳು ನಿಜವಾಗಿಯೂ ಗ್ರಾಹಕರಿಗೆ ಈ ರೀತಿ ಉತ್ತರ ನೀಡುತ್ತಿದ್ದಾರಾ ಎಂಬುದರ ರಿಯಾಟಲಿಟಿ ಚೆಕ್‌ ಮಾಡಲು ಪಬ್ಲಿಕ್‌ ಟಿವಿ ತಂಡ ಗ್ರಾಹಕರ ಸೋಗಿನಲ್ಲಿ ವಿದ್ಯುತ್‌ ಬಿಲ್‌ ಪಾವತಿಸಲು ಹೆಸ್ಕಾಂ ಶಿವಗಂಗಾ ನಗರದ ಕಚೇರಿಗೆ ತೆರಳಿತ್ತು.

     

    ರಿಯಾಲಿಟಿ ಚೆಕ್‌ ಹೇಗೆ?
    ಹುಬ್ಬಳ್ಳಿಯ ಕೇಶ್ವಾಪುರದ ಗ್ರಾಹಕರಿಗೆ ಈ ಬಾರಿ 688 ರೂ. ವಿದ್ಯುತ್ ಬಿಲ್ ಬಂದಿತ್ತು. ಗ್ರಾಹಕರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದರೂ ಈ ತಿಂಗಳ ಬಿಲ್ ನಲ್ಲಿ 25 ರೂ. ಹಿಂಬಾಕಿ ಅಂತ ಬಂದಿತ್ತು. ಈ ಬಿಲ್‌ ಹಿಡಿದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಪರಿಶೀಲಿಸುವುದಾಗಿ ತಿಳಿಸಿದರು. ಸ್ವಲ್ಪ ಹೊತ್ತಿನ ಬಳಿಕ ಸಾಫ್ಟ್‌ವೇರ್ ಸಮಸ್ಯೆಯಿಂದ 25 ರೂ.‌ ಹೆಚ್ಚುವರಿ ಬಂದಿದೆ ಎಂದು ಹೇಳಿ 25 ರೂ. ಕಳೆದು 664 ರೂ. ನೀಡಿದ್ದಾರೆ.

     

    ಪ್ರಶ್ನೆ ಮಾಡಿದ ಪರಿಣಾಮ ಒಬ್ಬ ಗ್ರಾಹಕರ ಬಿಲ್‌ ಮೊತ್ತ ಕಡಿಮೆಯಾಗಿದೆ. ಕೆಲ ಗ್ರಾಹಕರು ಬಿಲ್‌ ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿದ್ದರೂ 300 ರಿಂದ 500 ರೂ. ಹಿಂಬಾಕಿ ಬಂದಿದೆ. ಬಹುತೇಕ ಗ್ರಾಹಕರು ಎಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಮಾಡಬಹುದು ಎಂಬ ಭಯಕ್ಕೆ ಬಿದ್ದು ಈಗಾಗಲೇ ಬಿಲ್‌ ಕಟ್ಟಿದ್ದಾರೆ. ಇದು ಸಾಫ್ಟ್‌ವೇರ್‌ ದೋಷದಿಂದ ಬಂದಿರುವ ದುಬಾರಿ ಮೊತ್ತವೇ ಅಥವಾ ಹೆಸ್ಕಾಂ ಸಿಬ್ಬಂದಿ ಮಾಡುತ್ತಿರುವ ಹಗಲು ದರೋಡೆಯೇ ಎಂಬುದರ ಅನುಮಾನ ಎದ್ದಿದ್ದು ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕಿದೆ.

  • ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್ ಕಟ್ಟುವ ಮುನ್ನ ಎಚ್ಚರ – 53 ಸಾವಿರ ಎಗರಿಸಿದ ಸೈಬರ್ ಕಳ್ಳರು!

    ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್ ಕಟ್ಟುವ ಮುನ್ನ ಎಚ್ಚರ – 53 ಸಾವಿರ ಎಗರಿಸಿದ ಸೈಬರ್ ಕಳ್ಳರು!

    ಬೆಂಗಳೂರು: ತಾಂತ್ರಿಕತೆ ಬೆಳೆದಷ್ಟೂ ಸೈಬರ್ ಕಳ್ಳರ (Cyber Thieves) ಹಾವಳಿ ಹೆಚ್ಚಾಗ್ತಿದೆ. ಇಷ್ಟು ದಿನ ಬ್ಯಾಂಕ್ ಖಾತೆಗಳಿಗೆ (Bank Account) ಕನ್ನ ಹಾಕ್ತಿದ್ದ ಸೈಬರ್ ಕಳ್ಳರು ಇದೀಗ ವಿದ್ಯುತ್ ಬಿಲ್‌ನಲ್ಲೂ (Electricity Online Bill) ಕೈಚಳಕ ತೋರಿಸಿದ್ದಾರೆ.

    ಹೌದು. ಬೆಸ್ಕಾಂ (BESCOM) ಅಧಿಕಾರಿಗಳು ಅಂತಾ ಹೇಳಿಕೊಂಡು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವ ನೆಪದಲ್ಲಿ ಸೈಬರ್ ಕಳ್ಳರು ವ್ಯಕ್ತಿಯೊಬ್ಬರಿಂದ 53 ಸಾವಿರ ರೂ. ಎಗರಿಸಿದ್ದಾರೆ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಅವರನ್ನ ವಂಚಿಸಿ 53 ಸಾವಿರ ರೂ. ಎಗಿರಿಸಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್‌ – ಪ್ರಸಕ್ತ ವರ್ಷದಲ್ಲಿ KRSಗೆ ದಾಖಲೆ ಒಳ ಹರಿವು

    ಬೆಸ್ಕಾಂ ಅಧಿಕಾರಿಗಳು ಅಂತಾ ಹೇಳಿಕೊಂಡು ನಾರಾಯಣ್ ಪ್ರಸಾದ್ ಅವ್ರಿಗೆ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಕರೆಂಟ್ ಬಿಲ್ ಕಟ್ಟದೇ ಇದ್ರೆ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದಾಗ ನಾರಾಯಣ್ ಬಿಲ್ ಪಾವತಿಸಲು ಒಪ್ಪಿಕೊಂಡಿದ್ದಾರೆ. ನಂತರ ಒಂದು ಲಿಂಕ್ ಕಳಿಸಿ ಅದನ್ನು ಕ್ಲಿಕ್ ಮಾಡಿ ಫಾಲೋ ಮಾಡಿ ಅಂತಾ ಹೇಳಿದ್ದಾರೆ, ಅವರು ಹೇಳಿದಂತೆ ನಾರಾಯಣ್ ಲಿಂಕ್ ಕ್ಲಿಕ್ ಮಾಡಿ 1 ರೂ. ಕಳುಹಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವರ ತವರಿನಲ್ಲಿ ಛತ್ರಿ ಹಿಡಿದು ಪಾಠ ಕೇಳುತ್ತಿದ್ದಾರೆ ಮಕ್ಕಳು!

    ನಂತರ ತಮ್ಮ ಕೈಚಳಕ ತೋರಿಸಿದ ಸೈಬರ್ ಕಳ್ಳರು ಹಂತ ಹಂತವಾಗಿ ಅಕೌಂಟ್‌ನಿಂದ 53 ಸಾವಿರ ಕಟ್ ಆಗಿದೆ. ಸಂಬಂಧಪಟ್ಟ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾರಾಯಣ್ ಪ್ರಸಾದ್ ದೂರು ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರೆಂಟ್ ಶಾಕ್ – ಬರೋಬ್ಬರಿ 40 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಮೈಶುಗರ್ ಕಾರ್ಖಾನೆ

    ಕರೆಂಟ್ ಶಾಕ್ – ಬರೋಬ್ಬರಿ 40 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಮೈಶುಗರ್ ಕಾರ್ಖಾನೆ

    ಮಂಡ್ಯ: ವಿದ್ಯುತ್ ದರ ಏರಿಕೆಯಾಗಿದ್ದು ರಾಜ್ಯಾದ್ಯಂತ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇತ್ತೀಚೆಗಷ್ಟೇ ಪುನರಾರಂಭಗೊಂಡ ಮಂಡ್ಯದ ಮೈಶುಗರ್ ಕಾರ್ಖಾನೆ (Mysugar Sugar Factory) ಕೋಟಿ ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿದೆ.

    ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿರುವ ಮೈಶುಗರ್ 2000 ಇಸವಿಯಿಂದಲೂ ಕರೆಂಟ್ ಬಿಲ್ (Electricity Bill) ಕಟ್ಟದೇ ಬರೋಬ್ಬರಿ 40 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: ಸ್ತ್ರೀ ಶಕ್ತಿ ಎಫೆಕ್ಟ್ – ಒಂದೇ ತಿಂಗಳಲ್ಲಿ ಹುಲಿಗೆಮ್ಮನ ಹುಂಡಿಯಲ್ಲಿ 1 ಕೋಟಿ ರೂ. ಕಾಣಿಕೆ ಸಂಗ್ರಹ

    ರೋಗಗ್ರಸ್ಥ ಕಾರ್ಖಾನೆ ಎಂದೇ ಬಿಂಬಿಸಿಕೊಂಡಿದ್ದ ಕಾರ್ಖಾನೆಯ ಪುನರಾರಂಭಕ್ಕೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ 50 ಕೋಟಿ ಬಿಡುಗಡೆ ಮಾಡಿತ್ತು. ಸಂಸದೆ ಸುಮಲತಾ (Sumalatha Ambareesh) ಕಾರ್ಖಾನೆ ಪುನರಾರಂಭಕ್ಕೆ ಚಾಲನೆ ನೀಡಿದ್ದರು. ಕಾರ್ಯಾರಂಭಕ್ಕೆ ಸಿದ್ಧವಾಗಿರುವ ಕಾರ್ಖಾನೆ ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್ ಕಬ್ಬು ನುರಿಯುವ ಗುರಿ ಹೊಂದಿದೆ. ಇದಕ್ಕೆ ವಿದ್ಯುತ್ ಪೂರೈಕೆಯ ಅವಶ್ಯಕತೆಯಿದೆ. ಆದರೆ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರೋದು ಆರಂಭದಲ್ಲೇ ವಿಘ್ನ ಉಂಟಾಗಿದೆ.

    ವಿದ್ಯುತ್ ಪೂರೈಕೆಗೆ ಮನವಿ:
    ಮೈಶುಗರ್ ಕಾರ್ಖಾನೆಗೆ ವಿದ್ಯುತ್ ಪೂರೈಕೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ (Dinesh Guligowda) ಮನವಿ ಮಾಡಿ ಇಂಧನ ಸಚಿವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಚಾಲಕ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ

    ಮೈಶುಗರ್ ಹಲವು ವರ್ಷಗಳಿಂದ ನಷ್ಟಕ್ಕೆ ಸಿಲುಕಿದ್ದು, 40.86 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಪ್ರಸಕ್ತ ಹಂಗಾಮಿನಲ್ಲಿ ಕಬ್ಬನ್ನು ನುರಿಯುವ ಅವಶ್ಯಕತೆ ಇರುವುದರಿಂದ ವಿದ್ಯುತ್ ಪೂರೈಕೆ ಮಾಡಿದರೆ, ಹಂತ ಹಂತವಾಗಿ ಬಾಕಿ ಮೊತ್ತ ಪಾವತಿಸಲಾಗುತ್ತದೆ. ಆದ್ದರಿಂದ ಚೆಸ್ಕಾಂ ನಿರ್ದೇಶಕರಿಗೆ ವಿದ್ಯುತ್ ಪೂರೈಸಲು ಆದೇಶಿಸುವಂತೆ ಪತ್ರದಲ್ಲಿ ಕೋರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಕರೆಂಟ್ ಕಟ್ – ಬೆಸ್ಕಾಂನಿಂದಲೇ ದಂಡ ವಸೂಲಿ ಮಾಡಿದ ಯುವಕ

    ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಕರೆಂಟ್ ಕಟ್ – ಬೆಸ್ಕಾಂನಿಂದಲೇ ದಂಡ ವಸೂಲಿ ಮಾಡಿದ ಯುವಕ

    ದಾವಣಗೆರೆ: ಕರೆಂಟ್ ಬಿಲ್ (Electricity Bill) ಹೆಚ್ಚಳ ಮಾಡಿ ಜನರಿಗೆಲ್ಲ ಶಾಕ್ ನೀಡಿದ್ದ ಬೆಸ್ಕಾಂಗೆ ಇಲ್ಲೊಬ್ಬ ಯುವಕ ಡಬಲ್ ಶಾಕ್ ನೀಡಿದ್ದಾನೆ. ಬಿಲ್ ಕಟ್ಟಿದ್ದರೂ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಕ್ಕೆ, ಬೆಸ್ಕಾಂಗೆ (BESCOM) ಬುದ್ದಿ ಕಲಿಸಿದ್ದಾನೆ.

    ದಾವಣಗೆರೆಯ (Davanagere) ಎಂಸಿಸಿಬಿ ಬ್ಲಾಕ್‌ನ ನಿವಾಸಿ ಪವನ್ ಉಲ್ಲಾಸ್ ಎಂಬವರ ಮನೆಗೆ 2022ರ ಆಗಸ್ಟ್‌ನಲ್ಲಿ 1,454 ರೂಪಾಯಿ ಕರೆಂಟ್ ಬಿಲ್ ಬಾಕಿ ಇದ್ದ ಹಿನ್ನಲೆ ಲೈನ್‌ಮೆನ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರು. ಅಲ್ಲದೆ ಮುಂಜಾಗ್ರತೆಯ ನೋಟಿಸ್ ನೀಡದೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಕ್ಕೆ, ಕೆಇಆರ್‌ಸಿ ಕೋಡ್ 2004ರ ಸೆಕ್ಷನ್ 9ನೇ ನಿಯಮದಡಿ ಅದೇಶ ಉಲ್ಲಂಘನೆಯಾಗಿದೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗಕ್ಕೆ ದಾವೇ ಹೂಡಿದ್ದರು. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್

    ಬೆಸ್ಕಾಂ ನಿಯಮ ಉಲ್ಲಂಘನೆ ಸಾಭೀತಾದ ಹಿನ್ನಲೆ ಆಯೋಗದಿಂದ ಬೆಸ್ಕಾಂಗೆ 20 ಸಾವಿರ ರೂಪಾಯಿ ದಂಡ ಹಾಗೂ ದೂರುದಾರನಿಗೆ ಪ್ರಕರಣದ ವೆಚ್ಚದ 5 ಸಾವಿರ ಒಟ್ಟು 25 ಸಾವಿರ ನೀಡುವಂತೆ ಅದೇಶ ಮಾಡಿದ್ದು, ಅದೇಶವಾದ 30 ದಿನದೊಳಗೆ ಪರಿಹಾರ ನೀಡದಿದ್ದರೆ 6%ನಷ್ಟು ಬಡ್ಡಿ ಸೇರಿಸಿ ನೀಡಬೇಕು ಎಂದು ತೀರ್ಪು ನೀಡಿದೆ.

    ಯಾವುದೇ ಒಬ್ಬ ಗ್ರಾಹಕನ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಬೇಕು ಎಂದರೆ ಏಕಾಏಕಿ ಬಂದು ಲೈನ್‌ಮೆನ್ ಫ್ಯೂಜ್ ತೆಗೆದು ಹೋಗುತ್ತಾರೆ, ಇದು ತಪ್ಪು. ಇದು ಕೆಇಆರ್‌ಸಿ ಸೆಕ್ಷನ್ 9ರ ಅನ್ವಯ ಅವರು ಮೊದಲು 15 ದಿನದ ನೋಟಿಸ್ ನೀಡಬೇಕು. ನಂತರ ಕ್ರಮ ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೆ ಬೆಸ್ಕಾಂ ಸಿಬ್ಬಂದಿ ಗ್ರಾಹಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅಲ್ಲದೆ ಪ್ರತಿ ತಿಂಗಳು 2ರಂದು ಬಿಲ್ ಬರುತ್ತಿತ್ತು. ಆದರೆ ಈ ತಿಂಗಳ ಕರೆಂಟ್ ಬಿಲ್ 8, 10ರಂದು ಬಂದಿದೆ. ಏಕೆಂದರೆ ಪ್ರತಿಯೊಬ್ಬರ ಮನೆಯ ವಿದ್ಯುತ್ ಬಳಕೆ 100 ಯುನಿಟ್ ದಾಟಿಸಿ ಪ್ರತಿ ಯುನಿಟ್‌ಗೆ 7 ರೂಪಾಯಿ ಬಿಲ್ ಬರುವಂತೆ ಮಾಡಿ ದುಪ್ಪಟ್ಟು ಹಣ ಪಡೆದಿದ್ದಾರೆ. ಇದರಿಂದ ಬೆಸ್ಕಾಂ ವಿರುದ್ಧ ದಾವೆ ಹೂಡಿ ಎಂದು ಪವನ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯ ಜೊತೆ ಅಕ್ರಮ ಸಂಬಂಧ – ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಗಂಡ

    ಕರೆAಟ್ ಬಿಲ್ ಜಾಸ್ತಿ ಮಾಡಿದ ಬೆಸ್ಕಾಂ ಗೆ ಡಬಲ್ ಶಾಕ್ ನೀಡಿದ ಯುವಕನ ಕೆಲಸಕ್ಕೆ ಸಾರ್ವಜನಿಕ ವಲಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

    ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

    ಕೊಪ್ಪಳ: 2 ಬಲ್ಬ್ ಇರುವ ಮನೆಗೆ 1 ಲಕ್ಷ ಬಿಲ್ (Electricity Bill) ಬಂದಿದ್ದ ಕೊಪ್ಪಳದ (Koppala) ವೃದ್ಧೆಯ ಮನೆಗೆ ಜೆಸ್ಕಾಂ (GESCOM) ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಮೀಟರ್ ಪರಿಶೀಲನೆ ಮಾಡಿದ ಇಂಜಿನಿಯರ್ ಮೀಟರ್ ರೀಡಿಂಗ್ ತೊಂದರೆಯಿಂದ ತಪ್ಪಾಗಿ ಬಿಲ್ ಬಂದಿದೆ. ಅದನ್ನು ಸರಿಪಡಿಸುತ್ತೇವೆ ಎಂದು ವೃದ್ಧೆಗೆ ಧೈರ್ಯ ಹೇಳಿ ತೆರಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಸ್ಕಾಂನ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಜೇಶ್, 2021 ರಿಂದ ಮೀಟರ್ ರೀಡಿಂಗ್ ತೊಂದರೆಯಾಗಿದೆ. ಇದರಿಂದ ಹೆಚ್ಚಿನ ಬಿಲ್ ಬಂದಿದೆ. ಇದು ಈಗ ಬಂದಿರುವ ಬಿಲ್ ಅಲ್ಲ. ಒಂದೇ ಬಾರಿಗೆ 70 ಸಾವಿರ ರೂ. ಬಿಲ್ ಬಂದಿದೆ. ನಂತರ ಹೆಚ್ಚಿಗೆ ಆಗುತ್ತಾ ಹೋಗಿದೆ. ಬಳಿಕ ಅಜ್ಜಿಗೆ ಧೈರ್ಯ ಹೇಳಿ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಸರಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    ನಮ್ಮ ಸಿಬ್ಬಂದಿಗಳ ಹಾಗೂ ಬಿಲ್ ಕಲೆಕ್ಟರ್ ತಪ್ಪಿನಿಂದಾಗಿ ಈ ಸಮಸ್ಯೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಯಾವುದೇ ಪ್ರಕರಣಗಳಿದ್ದರೂ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ. ಇನ್ನೂ ಬಿಲ್ ಕಟ್ಟುವಂತಿಲ್ಲ ಎನ್ನುತ್ತಿದ್ದಂತೆ ಅಜ್ಜಿ ಫುಲ್ ಖುಷಿಯಾಗಿದ್ದಾರೆ.

    ವೃದ್ಧೆ ಗಿರಿಜಮ್ಮ ಅವರ ಮನೆಗೆ 1,03,315 ರೂ. ಬಿಲ್ ನೀಡಲಾಗಿತ್ತು. ಇದರಿಂದ ಆತಂಕಕ್ಕೊಳಗಾದ ವೃದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ ಕಟ್ಟಲು ಸಾಧ್ಯವಿಲ್ಲ. ನಾವು ಇರುವುದು ಇಬ್ಬರೇ. ಎರಡೇ ಬಲ್ಬ್ ಇರುವುದು. ಹೇಗೆ ಇಷ್ಟೆಲ್ಲ ಬಿಲ್ ಬಂತು ಎಂದು ಗೋಳಾಡಿದ್ದರು. ಇದನ್ನು ‘ಪಬ್ಲಿಕ್ ಟಿವಿ’ ಗುರುವಾರ ಬೆಳಗ್ಗೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಈಗ ವೃದ್ಧೆಯ ಮನೆಗೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದೇ ಮಹಿಳೆ ಜೊತೆ ಅನುಚಿತ ವರ್ತನೆ – ನಿರ್ವಾಹಕನ ಮೇಲೆ ಸಂಬಂಧಿಕರಿಂದ ಹಲ್ಲೆ

  • 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ – ಕಂಗಲಾದ ವೃದ್ಧೆ

    ಕೊಪ್ಪಳ: 2 ಬಲ್ಬ್ ಇರುವ ತಗಡಿನ ಶೆಡ್‍ನಲ್ಲಿ ವಾಸಿಸುವ ವೃದ್ಧೆಯೊಬ್ಬರ ಮನೆಗೆ ಜೆಸ್ಕಾಂ ಸಿಬ್ಬಂದಿ 1,03,315 ರೂ. ಬಿಲ್ ನೀಡಿದ ಘಟನೆ ಕೊಪ್ಪಳದಲ್ಲಿ (Koppala) ನಡೆದಿದೆ. ಇದರಿಂದ ಆತಂಕಕ್ಕೊಳಗಾದ ವೃದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ.

    ವೃದ್ಧೆ ಗಿರಿಜಮ್ಮ ಎಂಬುವರ ಮನೆಗೆ ಈ ಬಿಲ್ ಬಂದಿದ್ದು, ಕಳೆದ ಆರು ತಿಂಗಳಿಂದ ಜೆಸ್ಕಾಂ (Gescom) ಸಿಬ್ಬಂದಿ ಇಷ್ಟೆಲ್ಲ ಬಿಲ್ ನೀಡುತ್ತಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದು, ಮೊದಲು ಪ್ರತಿ ತಿಂಗಳು 70 ರೂ. ನಿಂದ 80 ರೂ. ಬಿಲ್ ಬರುತ್ತಿತ್ತು. ಅದರಲ್ಲೂ ನಾವಿರುವುದು ಇಬ್ಬರೇ ನಾವೆಷ್ಟು ಕರೆಂಟ್ ಬಳಸುತ್ತೇವೆ? ಈಗ ಇದ್ದಕ್ಕಿದ್ದಂತೆ ಇಷ್ಟೆಲ್ಲ ಜಾಸ್ತಿಯಾಗಿದೆ ಎಂದು ವೃದ್ಧೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದೇ ಮಹಿಳೆ ಜೊತೆ ಅನುಚಿತ ವರ್ತನೆ – ನಿರ್ವಾಹಕನ ಮೇಲೆ ಸಂಬಧಿಕರಿಂದ ಹಲ್ಲೆ

    ಭಾಗ್ಯ ಜ್ಯೋತಿ (Bhagya Jyothi) ಯೋಜನೆಯ ಪ್ರಕಾರ 18 ಯೂನಿಟ್ ಸರ್ಕಾರವೇ ಪಾವತಿ ಮಾಡುತ್ತಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ. ಮೀಟರ್ ಹಾಕಿದಾಗಿಂದ ಹತ್ತರಿಂದ ಇಪ್ಪತ್ತು ಸಾವಿರ ರೂ. ಬಿಲ್ ಬರುತ್ತಿದೆ. ಆದರೆ ಬಿಲ್ ಕೊಟ್ಟು ಹೋಗುವ ಸಿಬ್ಬಂದಿ ಹಣ ಕೇಳಲು ಮಾತ್ರ ಬರುತ್ತಿಲ್ಲ. ಒಂದು ವೇಳೆ ಬಂದರೆ ಎಂಬ ಭಯದಲ್ಲಿ ವೃದ್ಧೆ ಈ ಸಮಸ್ಯೆ ಬಗೆಹರಿಸುವಂತೆ ಸಿಕ್ಕ ಸಿಕ್ಕವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜೆಸ್ಕಾಂ ಸಿಬ್ಬಂದಿಗಳ ಯಡವಟ್ಟಿನಿಂದ ಈ ಬಡ ಜೀವ ಪರದಾಡುವಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಈ ಸಮಸ್ಯೆಗೊಂದು ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ದರ ಭಾರೀ ಏರಿಕೆ – ಉತ್ತರ, ಮಧ್ಯ ಕರ್ನಾಟಕದಲ್ಲಿ ಇಂದು ಉದ್ಯಮ ಬಂದ್‌

  • ಸತೀಶ್ ಜಾರಕಿಹೊಳಿಗೆ ಬಾಯಿ ಚಪಲ, ಅವರೆಲ್ಲ ಮಂತ್ರಿಗಳಾ?: ಕುಮಾರಸ್ವಾಮಿ ಕಿಡಿ

    ಸತೀಶ್ ಜಾರಕಿಹೊಳಿಗೆ ಬಾಯಿ ಚಪಲ, ಅವರೆಲ್ಲ ಮಂತ್ರಿಗಳಾ?: ಕುಮಾರಸ್ವಾಮಿ ಕಿಡಿ

    ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿಗೆ (Satish Jarkiholi) ಬಾಯಿ ಚಪಲ ಹೀಗಾಗಿ ಏನೇನೋ ಮಾತಾಡ್ತಾರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ (H DKumaraswamy) ವಾಗ್ದಾಳಿ ನಡೆಸಿದ್ದಾರೆ.

    ಗೃಹಲಕ್ಷ್ಮಿ (Gurhalkashmi) ಯೋಜನೆ ಆಪ್ ಅನ್ನ ಕೇಂದ್ರ ಸರ್ಕಾರ ಹ್ಯಾಕ್ (Hack) ಮಾಡಿದೆ ಎಂದ ಸತೀಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ ಬಗ್ಗೆ ಯಾಕೆ ಚರ್ಚೆ ಮಾಡ್ತೀರಾ? ಅವರಿಗೆ ಏನು ಗೊತ್ತಿಲ್ಲ. ಬಾಯಿ ಚಪಲಕ್ಕೆ ಅವರು ಮಾತಾಡ್ತಾರೆ ಅಷ್ಟೇ ಅಂತ ಲೇವಡಿ ಮಾಡಿದ್ರು.

    ಅವರೆಲ್ಲ ಮಂತ್ರಿಗಳಾ? ಏನ್ ಹ್ಯಾಕ್ ಮಾಡ್ತಾರೆ? ನಿಮ್ಮ ಯೋಗ್ಯತೆಗೆ ಸರ್ವರ್‌ ಅನ್ನು ಶಕ್ತಿಯುತವಾಗಿ ಮಾಡಿಕೊಳ್ಳಬೇಕು ಅಲ್ಲವಾ? ಸರ್ವರ್ ಸರಿ ಮಾಡಬೇಕಾಗಿರೋದು ನಿಮ್ಮ ಜವಾಬ್ದಾರಿ. ಅವರು ಹ್ಯಾಕ್ ಮಾಡಿದ್ರು, ಇವರು ಹ್ಯಾಕ್ ಮಾಡಿದ್ರು ಅಂತ ಸಬೂಬು ಕೊಡಬೇಡಿ ಅಂತ ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರ ಅಕ್ಕಿ ಯಾಕೆ ಕೊಡ್ಬೇಕು – ಅವ್ರನ್ನ ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ರಾ?: ಕುಮಾರಸ್ವಾಮಿ

    ಇದು ರಾಜ್ಯ ಸರ್ಕಾರ ಮಾಡಿರೋ ತಪ್ಪುಗಳು. ಜನತೆ ಮುಂದೆ ಸುಳ್ಳು ಘೋಷಣೆ, ಸುಳ್ಳು ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರಿಸುವುದರಲ್ಲಿ ಮುಂದಿ‌ನ ದಿನಗಳಲ್ಲಿ ಯಾವ ಪರಿಸ್ಥಿತಿ ಆಗುತ್ತೆ ಅಂತ ಈಗ ಅವರಿಗೆ ಅರಿವಾಗುತ್ತದೆ. ಚುನಾವಣೆಯಲ್ಲಿ ಮತ ಪಡೆಯೋಕೆ ಹೇಳಿದರು. ಈಗ ಅದರ ಅರಿವು ಕಾಂಗ್ರೆಸ್ ಅವರಿಗೆ ಆಗುತ್ತಿದೆ ಎಂದು ವಾಗ್ದಾಳಿ ತಿಳಿಸಿದರು.

     
    ವಿದ್ಯುತ್ ಬಿಲ್ (Electricity Bill) ಏರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಉಪ ಕುಲಪತಿ ಬಾಯಿ ಬಡಿದುಕೊಳ್ತಿದ್ದಾರೆ. ವಿಟಿಯು ಕುಲಪತಿ 35 ಲಕ್ಷ ರೂ. ಬಿಲ್ ಕಟ್ಟಬೇಕು ಅಂತ ಬಾಯಿ ಬಡಿದುಕೊಳ್ಳುತ್ತಾರೆ ಯಾರು ಇದಕ್ಕೆ ಹೊಣೆ ಹೊರುವವರು. ಅನೇಕ ಕುಟುಂಬಗಳಿಗೆ ಇನ್ನು ಬಿಲ್ ಬಂದಿಲ್ಲ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಬಿಲ್ ಬರುತ್ತಿತ್ತು.  ಈ ತಿಂಗಳು ಬಿಲ್ ಬಂದಿಲ್ಲ ಅಂತಿದ್ದಾರೆ. ಜನರು ಆತಂಕದಿಂದ ವಿದ್ಯುತ್ ಬಗ್ಗೆ ಮಾತಾಡ್ತಿದ್ದಾರೆ. ಇದನ್ನು ರಾಜ್ಯದಲ್ಲಿ ಆಡಳಿತ ಇದೆ ಅಂತ ಕರಿಯಬೇಕಾ? ಒಂದು ತಿಂಗಳಿಂದ ಕಾಂಗ್ರೆಸ್‌ನವರು ಡ್ರಾಮಾ ಮಾಡುತ್ತಿದ್ದಾರೆ. ನೋಡೋಣ ಇನ್ನು ಏನೇನು ನಾಟಕ ಆಡ್ತಾರೆ ಅಂತ ಕಿಡಿಕಾರಿದರು.