Tag: ವಿದ್ಯುತ್ ಬಿಲ್

  • ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಬಾಗಲಕೋಟೆ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರ ಕತ್ತಲೆ ಭಾಗ್ಯವನ್ನೂ ನೀಡಿದೆ ಎಂದು ಬಾಗಲಕೋಟೆಯ (Bagalkote) ಜನರು ಆಕ್ರೋಶ ಹೊರಹಾಕ್ತಿದ್ದಾರೆ.

    ಹೌದು ಜನಪ್ರತಿನಿಧಿಗಳು, ವಿಐಪಿ ಗಣ್ಯರಿಗೆ ಅಂತ ಇರುವ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಪ್ರವಾಸಿ ಮಂದಿರ(IB) ವಿದ್ಯುತ್ ಇಲ್ಲದೇ ಕತ್ತಲು ಆವರಿಸಿದೆ. ನಿರೀಕ್ಷಣಾ ಮಂದಿರಗಳ ಬಿಲ್‌ (Electricity Bill) ಕಟ್ಟದ ಹಿನ್ನೆಲೆಯಲ್ಲಿ ಐಬಿಗಳಿಗೆ ಕತ್ತಲೆ ಭಾಗ್ಯ ಪ್ರಾಪ್ತಿಯಾಗಿದೆ. ‌

    ಲೋಕೋಪಯೋಗಿ ಇಲಾಖೆ (PWD) ಹಲವು ತಿಂಗಳಿನಿಂದ ಪ್ರವಾಸಿಮಂದಿರಗಳ ವಿದ್ಯುತ್‌ ಬಿಲ್‌ ಪಾವತಿಸಿಲ್ಲ. ಹೀಗಾಗಿ ಬಾಗಲಕೋಟೆ ಪ್ರವಾಸಿಮಂದಿದಲ್ಲಿ ಕರೆಂಟ್ ಇಲ್ಲದಂತಾಗಿ ಬರಿ ಕತ್ತಲು ಆವರಿಸಿದೆ. ಇದನ್ನೂ ಓದಿ:  ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

    ಅದರಲ್ಲೂ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರು. ರಾತ್ರಿ ಐಬಿಯಲ್ಲಿದ್ದು ಬೆಳಗ್ಗೆ ಕಾರ್ಯಕ್ರಮ ಮುಗಿಸಿ ಹೊರಡಬೇಕಿತ್ತು. ಆದರೆ ಐಬಿಯಲ್ಲಿ ಕರೆಂಟ್ ಇಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಬೇರೊಬ್ಬರ ಆಪ್ತರ ಮನೆಯಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ತೆರಳಿದ್ದಾರೆ.

    ಸರ್ಕಾರ ನಿಯಂತ್ರಣದಲ್ಲಿರುವ ಐಬಿಗಳಿಗೆ ಈ ಗತಿಯಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ

    ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ

    ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (Caste Survey) ಮನೆಗಳನ್ನು ಗುರುತಿಸಿ ಪಟ್ಟಿ ಮಾಡುವ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳು ನಿಯೋಜನೆಗೊಂಡಿದ್ದರಿಂದ ಕೆಲ ಗೃಹ ಜ್ಯೋತಿ(Gruha Jyothi) ಗ್ರಾಹಕರ ಬಿಲ್‌ನಲ್ಲಿ ಆಗಿದ್ದ ವ್ಯತ್ಯಯವನ್ನು ಸರಿಪಡಿಸಿ ಪರಿಷ್ಕೃತ ಬಿಲ್ ವಿತರಿಸಲಾಗುವುದು ಎಂದು ಬೆಸ್ಕಾಂ (BESCOM)  ಸ್ಪಷ್ಟಪಡಿಸಿದೆ.

    ಸೆಪ್ಟೆಂಬರ್ ತಿಂಗಳಲ್ಲಿ ಮೀಟರ್ ರೀಡರ್‌ಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಭಾಗವಾಗಿ ಮನೆಗಳನ್ನು ಪಟ್ಟಿ ಮಾಡುವ ಕಾರ್ಯ ಹಾಗೂ ಮೀಟರ್‌ ರೀಡಿಂಗ್‌ಅನ್ನು ಪ್ರೋಬ್‌ಗಳ ಮೂಲಕ ಮೊದಲ ಬಾರಿಗೆ ನಡೆಸುತ್ತಿರುವುದರಿಂದ ವಿದ್ಯುತ್‌ ಬಿಲ್‌ ವಿತರಣೆಯ ದಿನಾಂಕವನ್ನು ಸೆ.15ನೇ ತಾರಿಕಿನಿಂದ 25ನೇ ತಾರೀಕಿನವರೆಗೆ ವಿಸ್ತರಿಸಲಾಗಿತ್ತು.

     
    ಈ ಪ್ರಕ್ರಿಯೆಯಿಂದ ಕೆಲ ಪ್ರಕರಣಗಳಲ್ಲಿ ಗೃಹಜ್ಯೋತಿ ಗ್ರಾಹಕರಿಗೆ ಭಾಗಶಃ ಬಿಲ್‌ ಬಂದಿರುವುದು ಬೆಸ್ಕಾಂ ಗಮನಕ್ಕೆ ಬಂದಿದೆ. ಅವುಗಳನ್ನು ಕಳೆದ ತಿಂಗಳುಗಳ ಸರಾಸರಿಯಂತೆ ಲೆಕ್ಕ ಹಾಕಿ, ಪರಿಷ್ಕೃತ ಬಿಲ್‌ ನೀಡಲಾಗುತ್ತದೆ. ಈ ಮೂಲಕ ಗೃಹಜ್ಯೋತಿ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

  • ಜನ ಸಾಮಾನ್ಯರ ಬಳಿ ಫಟಾಫಟ್ ವಸೂಲಿ – ಸರ್ಕಾರಿ ಇಲಾಖೆಗಳಿಂದಲೇ 8,000 ಕೋಟಿ ವಿದ್ಯುತ್‌ ಬಿಲ್‌ ಬಾಕಿ!

    ಜನ ಸಾಮಾನ್ಯರ ಬಳಿ ಫಟಾಫಟ್ ವಸೂಲಿ – ಸರ್ಕಾರಿ ಇಲಾಖೆಗಳಿಂದಲೇ 8,000 ಕೋಟಿ ವಿದ್ಯುತ್‌ ಬಿಲ್‌ ಬಾಕಿ!

    ಬೆಂಗಳೂರು: ರಾಜ್ಯದ ಜನ ವಿದ್ಯುತ್ ಬಿಲ್ (Electricity Bill) ಕಟ್ಟದೇ ಇದ್ರೆ ಪವರ್ ಕಟ್ ಅಥವಾ ಫಟಾಫಟ್ ಅಂತಾ ವಸೂಲಿ ಮಾಡುವ ಇಂಧನ ಇಲಾಖೆ ಸರ್ಕಾರಿ ಕಚೇರಿಗಳಿಗೆ ಮಾತ್ರ ಭರ್ಜರಿ ವಿನಾಯಿತಿ ನೀಡಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

    ಒಂದು ತಿಂಗಳು ಜನಸಾಮಾನ್ಯರು ವಿದ್ಯುತ್ ಬಿಲ್ ಕಟ್ಟೋದು ಹೆಚ್ಚು ಕಮ್ಮಿ ಆದ್ರೂ ಪವರ್‌ಕಟ್ (Power Cut) ಮಾಡ್ತಾರೆ.. ಇಲ್ಲ ದಂಡ ಹಾಕಿ ಕರೆಂಟ್ ಬಿಲ್ ವಸೂಲಿ ಮಾಡ್ತಾರೆ. ಆದ್ರಿಲ್ಲಿ ಸರ್ಕಾರಿ ಇಲಾಖೆ & ಕಚೇರಿಗಳಿಗೆ ಇಂಧನ ಇಲಾಖೆ ಭಾರೀ ವಿನಾಯ್ತಿ ಕೊಟ್ಟಂತೆ ಕಾಣ್ತಿದೆ. ಯಾಕಂದ್ರೆ ಬಹುತೇಕ ಸರ್ಕಾರಿ ಇಲಾಖೆಗಳು (Government Departments) ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿವೆ. ಅದು ಒಂದಲ್ಲ.. ಎರಡಲ್ಲ, ಬರೋಬ್ಬರಿ 8 ಸಾವಿರ ಕೋಟಿಯಷ್ಟು ವಿದ್ಯುಲ್ ಬಿಲ್ ಬಾಕಿ ಉಳಿಸಿಕೊಂಡಿವೆ.

    ಹೌದು, ಸರ್ಕಾರಿ ಇಲಾಖೆಗಳು ಬರೋಬ್ಬರಿ 8 ಸಾವಿರ ಕೋಟಿಯಷ್ಟು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡಿದೆ. ಅಚ್ಚರಿಯಾದ್ರೂ ಇದು ಸತ್ಯ. ಇಂಧನ ಇಲಾಖೆಯೇ ಈ ಡೇಟಾವನ್ನು ನೀಡಿದೆ. ಹಾಗಿದ್ರೇ ಯಾವ್ಯಾವ ಸರ್ಕಾರಿ ಇಲಾಖೆ ಎಷ್ಟೆಷ್ಟು ಬಾಕಿ ಬಿಲ್ ಉಳಿಸಿಕೊಂಡಿದೆ ಅಂತ ನೋಡೋದಾದ್ರೆ…

    ಯಾವ್ಯಾವ ಇಲಾಖೆಯಿಂದ ಎಷ್ಟೆಷ್ಟು ಬಾಕಿ?
    * ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ – 4,106 ಕೋಟಿ ರೂ.
    * ನಗರಾಭಿವೃದ್ಧಿ ಇಲಾಖೆ – 2,313 ಕೋಟಿ ರೂ.
    * ನೀರಾವರಿ ಇಲಾಖೆ – 1,085 ಕೋಟಿ ರೂ.
    * ವಾಣಿಜ್ಯ & ಕೈಗಾರಿಕಾ ಇಲಾಖೆ – 353 ಕೋಟಿ ರೂ.
    * ಸಣ್ಣ ನೀರಾವರಿ ಇಲಾಖೆ – 126 ಕೋಟಿ ರೂ.
    * ಆರೋಗ್ಯ ಇಲಾಖೆ – 33 ಕೋಟಿ ರೂ.
    * ಇತರೆ 30 ಸರ್ಕಾರಿ ಇಲಾಖೆಗಳು – 90 ಕೋಟಿ ರೂ.
    * ಒಟ್ಟು ಹಣ ಬಾಕಿ – 8,169 ಕೋಟಿ ರೂ.

    ಹಣದ ಕೊರತೆ ನೆಪವೊಡ್ಡಿ ಬಿಲ್ ಪಾವತಿಸದ ಇಲಾಖೆಗಳು:
    ಇನ್ನೂ ಸರ್ಕಾರಿ ಇಲಾಖೆಗಳಿಗೆ ಕರೆಂಟ್ ಬಿಲ್ ಕಟ್ಟುವಂತೆ ಇಂಧನ ಇಲಾಖೆ ಸೂಚಿಸಿದೆ. ಆದ್ರೆ ಕೆಲ ಇಲಾಖೆಗಳು ದುಡ್ಡಿನ ಕೊರತೆ ನೆಪವೊಡ್ಡಿ ಕಟ್ಟಿಲ್ಲ. ಹೀಗಾಗಿ ಇಂಧನ ಇಲಾಖೆಗೆ 8 ಸಾವಿರ ಕೋಟಿಯಷ್ಟು ಬೊಕ್ಕಸಕ್ಕೆ ನಷ್ಟವಾಗಿದೆ. ಪ್ರತಿ ವರ್ಷವೂ ನಷ್ಟದ ನೆಪವೊಡ್ಡಿ ಜನರಿಗೆ ದರ ಏರಿಕೆಯ ಬಿಸಿಯನ್ನು ಇಲಾಖೆ ನೀಡುತ್ತೆ. ಆದ್ರೆ ಬಿಲ್ ಪಾವತಿ ಮಾಡದ ಸರ್ಕಾರಿ ಇಲಾಖೆಗಳ ಬಳಿ ಮಾತ್ರ ಬಿಲ್ ಕಲೆಕ್ಟ್ ಮಾಡೋಕೆ ಇನ್ನೂ ಮೀನಮೇಷ ಎಣಿಸುತ್ತಿದೆ.

    ರಾಜ್ಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಆಗಲ್ಲ. ಲೋಡ್ ಶೆಡ್ಡಿಂಗ್ ಇಲ್ಲ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಅಲ್ಲದೇ, ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸ್ತೇವೆ. ಕೆಲ ಜಿಲ್ಲೆಗಳಲ್ಲಿ ಟ್ರಾನ್ಸ್ಮಿಷನ್ ಕೆಪಾಸಿಟಿ ಓವರ್ ಲೋಡ್‌ನಿಂದ ಸಮಸ್ಯೆ ಆಗುತ್ತಿದೆ. ಇದು ಪವರ್ ಕಟ್ ಅಲ್ಲ ಎಂದಿದ್ದಾರೆ. ಪ್ರಸ್ತುತ 18,500 ಮೆಗಾವ್ಯಾಟ್ ವಿದ್ಯುತ್‌ಗೆ ಡಿಮ್ಯಾಂಡ್ ಇದೆ. ಯುಪಿ, ಪಂಜಾಬ್ ಸೇರಿದಂತೆ ಬೇರೆ ರಾಜ್ಯಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ವಿದ್ಯುತ್ ಖರೀದಿ ಮಾಡುತ್ತೇವೆ ಎಂದು ಜಾರ್ಜ್ ಹೇಳಿದ್ದಾರೆ.

  • ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟಿಲ್ಲ – 8.17 ಲಕ್ಷ ಬಿಲ್ ಬಾಕಿ ಉಳಿಸಿಕೊಂಡ ಮಂಕಾಳ ವೈದ್ಯ

    ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟಿಲ್ಲ – 8.17 ಲಕ್ಷ ಬಿಲ್ ಬಾಕಿ ಉಳಿಸಿಕೊಂಡ ಮಂಕಾಳ ವೈದ್ಯ

    ಕಾರವಾರ: ರಾಜ್ಯ ಸರ್ಕಾರದ ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಘಟನೆ ಕಾರವಾರದಲ್ಲಿ (Karwar) ನಡೆದಿದೆ.

    ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು (Mankal Vaidya) ಹೆಸ್ಕಾಂಗೆಗೆ ಒಂದು ವರ್ಷದಿಂದ ವಿದ್ಯುತ್ ಬಿಲ್ ತುಂಬದೇ ಬಾಕಿದಾರರ ಪಟ್ಟಿ ಸೇರಿದ್ದಾರೆ. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

    ಸಚಿವರು ಭಟ್ಕಳದ ತಮ್ಮ ಸ್ವಾಮ್ಯದ ಮನೆ, ಶಾಲೆ ಕಟ್ಟಡಗಳು, ಮಗಳ ಹೆಸರಿನಲ್ಲಿ ಇರುವ ಕಟ್ಟಡಗಳು ಸೇರಿದಂತೆ ಬರೋಬ್ಬರಿ 8,17,415 ರೂ.ಗಳಷ್ಟು ವಿದ್ಯುತ್ ಬಿಲ್ ಭರಣ ಮಾಡುವುದನ್ನು ಬಾಕಿ ಇರಿಸಿಕೊಂಡಿದ್ದಾರೆ.

    ಭಟ್ಕಳದ ನಾಗೇಶ್ ನಾಯ್ಕ ಎಂಬವರು ಈ ಕುರಿತು ಮಾಹಿತಿ ಹಕ್ಕಿನಲ್ಲಿ ಹೆಸ್ಕಾಂ ನಿಂದ ಮಾಹಿತಿ ಪಡೆದಿದ್ದು, ಕಳೆದ ನವಂಬರ್‌ನಿಂದ ಒಂದು ವರ್ಷದ ಮಾಹಿತಿ ಕೇಳಿದ್ದರು. ಭಟ್ಕಳದ ಹೆಸ್ಕಾಂ ಇಲಾಖೆ ಈ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿದಾರರಿಗೆ ಮಾಹಿತಿ ನೀಡಿದ್ದು, ಇದರಲ್ಲಿ ಒಂದು ವರ್ಷದಲ್ಲಿ 8,17,415 ರೂ.ಗಳಷ್ಟು ಹೆಸ್ಕಾಂಗೆ ವಿದ್ಯುತ್ ಬಿಲ್ ಬಾಕಿ ಇದೆ. ಅದರಲ್ಲಿ ಸಚಿವ ಮಂಕಾಳು ವೈದ್ಯ ಹಾಗೂ ಅವರ ಪುತ್ರಿ ಬೀನಾ ಮಂಕಾಳು ವೈದ್ಯರ ಸ್ವಾಮ್ಯದ ಕಟ್ಟಡ, ಕಚೇರಿ, ಮನೆಗಳು ಸೇರಿವೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪುಸ್ತಕ ಮೇಳ, ಸಾಹಿತ್ಯ ಹಬ್ಬ – ಸಾರ್ವಜನಿಕರಿಗೆ ಎಂಟ್ರಿ: ಯು‌.ಟಿ ಖಾದರ್

  • ವಿದ್ಯುತ್ ಬಿಲ್ ವಾಪಸ್ ತೆಗೆದುಕೊಂಡಿರುವುದು ಸಂತೋಷ: ಸಿದ್ದಗಂಗಾ ಶ್ರೀ

    ವಿದ್ಯುತ್ ಬಿಲ್ ವಾಪಸ್ ತೆಗೆದುಕೊಂಡಿರುವುದು ಸಂತೋಷ: ಸಿದ್ದಗಂಗಾ ಶ್ರೀ

    ಚಾಮರಾಜನಗರ: ಮಠಕ್ಕೆ ಕಳುಹಿಸಿದ್ದ ವಿದ್ಯುತ್ ಬಿಲ್‌ನ್ನು ವಾಪಸ್ ತೆಗೆದುಕೊಂಡಿರುವುದು ಸಂತೋಷ ಎಂದು ತುಮಕೂರಿನ ಸಿದ್ದಗಂಗಾ ಶ್ರೀಗಳು (Siddaganga Mutt Seer) ಹೇಳಿದರು.

    ಚಾಮರಾಜನಗರದಲ್ಲಿ (Chamarajanagara) ಹರವೆ ವಿರಕ್ತ ಮಠದ ಶಾಖಾ ಮಠ ಉದ್ಘಾಟನೆಗೆ ಬಂದಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೆಐಎಡಿಬಿ ಇಂದ ಕೆರೆಗೆ ನೀರು ತುಂಬಿಸಿದ್ದರು. ಅವರು ಕೆರೆಯಿಂದ ನೀರನ್ನು ಎಲ್ಲಿಗೂ ಬಿಟ್ಟಿಲ್ಲ. ಆದರೆ, ವಿದ್ಯುತ್ ಬಿಲ್‌ನ್ನು ಮಠಕ್ಕೆ ಕೊಟ್ಟಿದ್ದರು. ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸಮಸ್ಯೆ ಪರಿಹರಿಸಿರುವುದು ಸಂತೋಷ ಎಂದು 70 ಲಕ್ಷ ರೂ. ವಿದ್ಯುತ್ ಬಿಲ್ ಮನ್ನಾಗೆ ಸಿದ್ದಗಂಗಾ ಶ್ರೀ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ

    ನಾಡಿನ ಅಗ್ರಮಾನ್ಯ ಮಠಗಳಲ್ಲಿ ಒಂದಾಗಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್ ಬಿಲ್ ಕಳುಹಿಸಲಾಗಿತ್ತು. ಕೆಐಎಡಿಬಿಯು ಸಿದ್ದಗಂಗಾ ಮಠಕ್ಕೆ ಬರೋಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವಂತೆ ಪತ್ರ ಬರೆದಿರುವುದು ಅಚ್ಚರಿ ಹುಟ್ಟು ಹಾಕಿತ್ತು.

    ಹೊನ್ನೆನಹಳ್ಳಿಯಿಂದ ದೇವರಾಯ ಪಟ್ಟಣ ಕೆರೆಗೆ ಪೈಪ್‌ಲೈನ್ ಮೂಲಕ ಕೆಐಡಿಬಿಯು ನೀರು ಹರಿಸಿತ್ತು. ಈ ಯೋಜನೆಯಿಂದ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಿದೆ‌‌‌. ಇದನ್ನೂ ಓದಿ: PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ

    ಈಗ ಪ್ರಾಯೋಗಿಕವಾಗಿ ಅಷ್ಟೇ ನೀರು ತುಂಬಿಸಲಾಗಿದೆ. ಇನ್ನು ಮಠಕ್ಕೆ, ಅಕ್ಕಪಕ್ಕದ ಹಳ್ಳಿಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಆದರೂ, ಕೆರೆಗೆ ಪ್ರಾಯೋಗಿಕವಾಗಿ ನೀರು ತುಂಬಿಸಿದ ವಿದ್ಯುತ್ ಬಿಲ್‌ನ್ನು ಭರಿಸುವಂತೆ ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ಪತ್ರ ಬರೆದಿತ್ತು. ಇದು ಚರ್ಚೆಗೆ ಕಾರಣವಾಗಿತ್ತು. ಮಾಹಿತಿ ಅರಿತ ಸಚಿವ ಎಂ.ಬಿ‌.ಪಾಟೀಲ್, ಬಿಲ್ ಮನ್ನಾ ಮಾಡಲಾಗುವುದು. ಮಠಕ್ಕೆ ಪತ್ರ ಬರೆದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ‌.

  • PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ

    PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ

    – 70 ಲಕ್ಷ ರೂ. ಬಿಲ್ ಮನ್ನಾ

    ಬೆಳಗಾವಿ: ಸರ್ಕಾರಿ ನೀರಾವರಿ ಯೋಜನೆಗೆ ಬಳಸಿದ ಬರೊಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ (Siddaganga Mutt) ಕೆಐಎಡಿಬಿ (KIADB) ನೀಡಿದ್ದ ನೋಟಿಸ್ ಅನ್ನು ಸರ್ಕಾರ ವಾಪಸ್ ಪಡೆದಿದೆ.

    ಕರೆಂಟ್ ಬಿಲ್ (Electricity Bill) ಕಟ್ಟುವಂತೆ ಕೆಐಎಡಿಬಿ ಸಿದ್ದಗಂಗಾ ಮಠಕ್ಕೆ ನೋಟಿಸ್ ನೀಡಿದ್ದ ಕುರಿತು ನಿಮ್ಮ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿ ಬಿತ್ತರಿಸಿತ್ತು. ಈ ಕುರಿತು ಸಚಿವ ಎಂ.ಬಿ.ಪಾಟೀಲ್ (MB Patil) ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಇದು ಏಪ್ರಿಲ್‌ನಲ್ಲಿ ಕೊಟ್ಟ ನೋಟಿಸ್. ಕೆಐಡಿಬಿಯ ಒಂದು ಕೆರೆ ಇದೆ. ಆ ಕೆರೆಯಿಂದ ನೀರು ತೆಗೆದುಕೊಂಡಿದ್ದಾರೆ. ನೀರು ಬಳಸಿದ್ದರೂ ಅದು ತಪ್ಪಲ್ಲ. ನೀರೇ ಬಳಸದೆ ನೋಟಿಸ್ ಕೊಟ್ಟಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ

    ಕೆರೆಯಿಂದ ನೀರು ಬಳಕೆ ಮಾಡಿರುವುದಕ್ಕೆ ಈ ನೋಟಿಸ್ ಕೊಡಲಾಗಿದೆ. ಆದರೆ ಅದನ್ನು ವಾಪಸ್ ಪಡೆದುಕೊಳ್ಳುತ್ತೇವೆ. ಸಿದ್ದಗಂಗಾ ಮಠ ವಿಶ್ವಕ್ಕೆ ಮಾದರಿಯಾದ ಮಠವಾಗಿದೆ. ಮಕ್ಕಳಿಗೆ ಶಿಕ್ಷಣ, ದಾಸೋಹ ಕೊಡುತ್ತಿರುವ ಮಠವಾಗಿದೆ. ಈ ಬಗ್ಗೆ ಮುಖ್ಯ ಎಂಜಿನಿಯರ್ ಸ್ವಾಮೀಜಿ ಜೊತೆ ಮಾತನಾಡಿದ್ದಾರೆ. ಸಿದ್ದಗಂಗಾ ಮಠ ನೀರನ್ನು ಬಳಸಿಕೊಂಡರೂ ತಪ್ಪಲ್ಲ. ಈ ಕುರಿತಾಗಿ ಸ್ವಾಮೀಜಿ ಜೊತೆಗೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಅಸಮಾಧಾನ – ಉಸ್ತುವಾರಿ ಮಲ್ಲಿಕಾರ್ಜುನ್‌ ಬದಲಾಯಿಸುವಂತೆ ಶಿವಗಂಗಾ ಬಸವರಾಜ್ ಪತ್ರ

    ಒಂದು ವೇಳೆ ನೀರು ಬಳಸದೇ ನೋಟಿಸ್ ಕೊಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದೆಯೂ ಮಠ ನೀರನ್ನು ಬಳಸಬಹುದು. ಸಿಎಸ್‌ಆರ್ ಲೆಕ್ಕದಲ್ಲಿ ನಾವು ಉಚಿತವಾಗಿಯೇ ನೀರು ಕೊಡುತ್ತೇವೆ. ಮಠ ಯಾವಾಗ ಬೇಕಾದರೂ ನೀರನ್ನು ಬಳಸಿಕೊಳ್ಳಬಹುದು. ಈಗ ಬಳಸಿಕೊಂಡಿದ್ದರೂ ತಪ್ಪಲ್ಲ, ಮುಂದೆಯು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Bengaluru | ಐಐಎಸ್‌ಸಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ನಾಪತ್ತೆ

  • ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ

    ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ

    – ಒಂದು ಹನಿ ನೀರು ಉಪಯೋಗಿಸಿಲ್ಲ, ಬಿಲ್‌ ಪಾವತಿಸಲು ಸಾಧ್ಯವಿಲ್ಲ ಎಂದ ಸಿದ್ದಗಂಗಾ ಶ್ರೀ


    ತುಮಕೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ರಾಜ್ಯ ಸರ್ಕಾರ ಸಿದ್ದಗಂಗಾ ಮಠಕ್ಕೆ (Siddagangaa Mutt) ಶಾಕ್ ಕೊಟ್ಟಿದೆ. ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ. ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಎಡಿಬಿ (KIADB) ಪತ್ರ ಬರೆದಿದೆ. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ವಿದ್ಯುತ್ ಬಿಲ್ (Electricity Bill) ಅನ್ನು ಭರಿಸುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ಒಕ್ಕಣೆ ಬರೆಯಲಾಗಿದೆ.

    ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್‌ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಕೆ ವೆಚ್ಚವಾದ ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಬರೆದಿರುವ ಪತ್ರ ಈಗ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್‌

    ಪತ್ರದಲ್ಲೇನಿದೆ?
    ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ತುಮಕೂರು ತಾಲೂಕು ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಯವರೆಗೆ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಸಕ್ತ 2024ನೇ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಸದರಿ ಕೆರೆಯಿಂದ ನೀರನ್ನು ಸಿದ್ದಗಂಗಾ ಮಠದ ದೈನಂದಿನ ಕೆಲಸ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿರುತ್ತದೆ. ಇದನ್ನೂ ಓದಿ: ಯುಐ ಚಿತ್ರಕ್ಕೆ ಬಾಲಿವುಡ್‌ನಲ್ಲೂ ಬಹುಪರಾಕ್

    2023ರ ಅ.31ರಿಂದ ಹಾಗೂ 2024ರ ಮಾ.02ರವರೆಗೆ ಒಟ್ಟು 70,31,438 ರೂ. ವಿದ್ಯುತ್ ಬಿಲ್‌ಗಳನ್ವಯ ಬೆಸ್ಕಾಂಗೆ ಹಣ ಪಾವತಿಸಬೇಕಾಗಿರುತ್ತದೆ. ಪ್ರಸ್ತುತ ಮಂಡಳಿಯು ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ನೀರು ಸರಬರಾಜಿನ ವಿದ್ಯುತ್ ಬಳಕೆಯ ವೆಚ್ಚವನ್ನು ಸಿದ್ಧಗಂಗಾ ಮಠದ ವತಿಯಿಂದ ಭರಿಸುವಂತೆ ತಿಳಿಸಲು ಕೆಐಎಡಿಬಿ ನಿರ್ದೇಶಿಸಿದೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಮೂತ್ರ ವಿಸರ್ಜನೆಗೆ ಹೋದ ವಿದ್ಯಾರ್ಥಿ ತೆರೆದ ಬಾವಿಗೆ ಬಿದ್ದು ಸಾವು

    ಏ.6ರಂದು ಕೆಐಎಡಿಬಿಯಿಂದ ಸಿದ್ದಗಂಗಾ ಮಠಕ್ಕೆ ಪತ್ರ ಬಂದಿದೆ. ಏ.15ರಂದು ಕೆಐಎಡಿಬಿಗೆ ಸಿದ್ದಗಂಗಾ ಮಠದಿಂದ ಮರು ಪತ್ರ ರವಾನೆಯಾಗಿದೆ. ಇದೊಂದು ಸರ್ಕಾರಿ ಯೋಜನೆಯಾಗಿದ್ದರಿಂದ ಮಠದಿಂದ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಿಲ್ಲ ಎಂದು ಸಿದ್ದಗಂಗಾ ಮಠದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಿದ್ದಗಂಗಾ ಮಠದಿಂದ ಪತ್ರ ತಲುಪಿ 8 ತಿಂಗಳಾದರೂ ಕೆಐಡಿಬಿ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೆ ಅಧಿಕಾರಿಗಳು ಮೌಖಿಕವಾಗಿ ಬಿಲ್ ಕಟ್ಟುವಂತೆ ಮಠದ ಆಡಳಿತ ಮಂಡಳಿಯವರಿಗೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ. ನೀರಿನ ಕರ ವಿಧಿಸೋದು ಸಹಜ. ಅದರ ಬದಲಾಗಿ ಇಡೀ ಕೆರೆಗೆ ನೀರು ತುಂಬಿಸಿದ್ದರ ವಿದ್ಯುತ್ ಬಿಲ್ ನಾವೇ ಕಟ್ಟಬೇಕು ಎಂದು ಪತ್ರ ಬರೆದಿರೋದು ನಮಗೆ ಆಶ್ಚರ್ಯತಂದಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ಹೇಳಿದ್ದಾರೆ. ಇದನ್ನೂ ಓದಿ: ಮುಡಾ ರದ್ದಾಗಿ ಹೊಸದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

    ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಕೆಐಎಡಿಬಿ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀಶ್ ಹಿಂದೇಟು ಹಾಕಿದ್ದಾರೆ. ಇದು ಸರ್ಕಾರ ಹಾಗೂ ಮಂಡಳಿಯ ರಾಜ್ಯ ಘಟಕದ ನಿರ್ದೇಶನ ಎಂದು ನುಣುಚಿಕೊಂಡಿದ್ದಾರೆ. ಸಿದ್ದಗಂಗಾ ಮಠದ ಮನವಿಯನ್ನೂ ಮಂಡಳಿಯ ಗಮನಕ್ಕೆ ತಂದಿದ್ದು, ಮಂಡಳಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ: ʼಒಂದು ದೇಶ, ಒಂದು ಚುನಾವಣೆʼ ಪರಿಶೀಲನೆಗೆ JPC ರಚನೆ – ಸಮಿತಿಯಲ್ಲಿ ಪ್ರಿಯಾಂಕಾ ಗಾಂಧಿ

  • ಬೆಸ್ಕಾಂ ಎಡವಟ್ಟು; 1 ತಿಂಗಳಿಗೆ ಬರೋಬ್ಬರಿ 5.86 ಲಕ್ಷ ರೂ. ವಿದ್ಯುತ್‌ ಬಿಲ್‌ – ಹೌಹಾರಿದ ಮನೆ ಮಾಲೀಕ

    ಬೆಸ್ಕಾಂ ಎಡವಟ್ಟು; 1 ತಿಂಗಳಿಗೆ ಬರೋಬ್ಬರಿ 5.86 ಲಕ್ಷ ರೂ. ವಿದ್ಯುತ್‌ ಬಿಲ್‌ – ಹೌಹಾರಿದ ಮನೆ ಮಾಲೀಕ

    ಬೆಂಗಳೂರು: ಸಾಮಾನ್ಯವಾಗಿ 1 ಮನೆಗೆ ತಿಂಗಳಿಗೆ ಹೆಚ್ಚೆಂದರೆ 1,000 ರೂ. ವಿದ್ಯುತ್ ಬಿಲ್ (Electricity Bill) ಬರೋದನ್ನ ನೋಡಿರ್ತೀವಿ. ಅದ್ರಲ್ಲೂ ಗೃಹಜ್ಯೋತಿ ಯೋಜನೆ (Gruhajyothi Scheme) ಜಾರಿಯಾದಾಗಿನಿಂದ ಬಹುತೇಕ ಮನೆಗಳಿಗೆ ಉಚಿತ ವಿದ್ಯುತ್‌ ಪೂರೈಕೆಯಾಗುತ್ತಿದೆ. ಆದ್ರೆ, ಬೆಂಗಳೂರಿನ ನಿವಾಸಿಯೊಬ್ಬರ ಮನೆಗೆ 1 ತಿಂಗಳಿಗೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಮೌಲ್ಯದ ಬಿಲ್ ಬಂದಿದೆ. ಬಿಲ್‌ ರಶೀದಿ ನೋಡಿ ಮನೆ ಮಾಲೀಕ ಹೌಹಾರಿದ್ದಾರೆ.

    ಬೆಂಗಳೂರಿನ (Bengaluru) ಬ್ಯಾಟರಾಯನಪುರದ ಎಸ್.ಎಂ ವಿಶ್ವೇಶ್ವರಯ್ಯ ಬಡಾವಣೆಯ ಮನೆಯ ಜುಲೈ ತಿಂಗಳ ವಿದ್ಯುತ್‌ ಬಿಲ್‌ ಬರೋಬ್ಬರಿ 5,86,736 ರೂ. ಬಂದಿದೆ. ಈ ಬಿಲ್ ಕಂಡು ಮನೆ ಮಾಲೀಕ ಪ್ರಸನ್ನ ಕುಮಾರ್‌ ಅಯ್ಯಂಗಾರ್ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ನಾಗಸಂದ್ರ-ಮಾದವರ ನಡುವೆ ಸಿಗ್ನಲಿಂಗ್ ಕಾರ್ಯ; ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    ಜುಲೈ ತಿಂಗಳ ವಿದ್ಯುತ್‌ ಬಿಲ್‌ ಆಗಸ್ಟ್‌ನಲ್ಲಿ ಬಂದಿದ್ದು, ಗೂಗಲ್ ಪೇನಲ್ಲಿ ಬಿಲ್ ಮೊತ್ತ ನೋಡಿ ದಂಗಾಗಿದ್ದಾರೆ. ಪ್ರಸನ್ನಕುಮಾರ್‌ ಅವರಿಗೆ 2ನೇ ಬಾರಿಗೆ ಹೀಗೆ ಎಡವಟ್ಟಾಗಿದೆ. ಈ ಹಿಂದೆ ಮೇ ತಿಂಗಳ ಬಿಲ್ ಜೂನ್ ತಿಂಗಳಲ್ಲಿ 5,91,087 ರೂ. ಬಿಲ್ ಬಂದಿತ್ತು. ಆಗ 1 ತಿಂಗಳು ಸರಿಪಡಿಸಿ, ಜುಲೈ ತಿಂಗಳಲ್ಲಿ ಕೇವಲ 214 ರೂ. ಮಾತ್ರ ಬಿಲ್ ಪಾವತಿಸಿದ್ದರು. ಆದ್ರೇ ಆಗಸ್ಟ್​ನಲ್ಲಿ 5,86,736 ರೂ. ಬಿಲ್ ಬಂದಿದೆ. ಇದರಿಂದಾಗಿ 100, 200 ರೂ. ರೂ. ಬರುತ್ತಿದ್ದ ಬಿಲ್ ಏಕಾಏಕಿ ಲಕ್ಷಾಂತರ ರೂ.ಗೆ ಬಂದಿರೋದು ಮನೆ ಮಾಲೀಕರು ಹೌಹಾರಿದ್ದಾರೆ.

    ಈ ಕುರಿತು ಮಾತನಾಡಿರುವ ಪ್ರಸನ್ನಕುಮಾರ್ ಅಯ್ಯಂಗಾರ್, 5 ಲಕ್ಷದಷ್ಟು ಬಿಲ್ ಬರಬೇಕಾದ್ರೇ ಸುಮಾರು 80,000 ವಿದ್ಯುತ್ ಬಳಸಿರಬೇಕು. ಆದ್ರೆ ನಾನು 2020ರ ಸೆಪ್ಟೆಂಬರ್‌ನಿಂದ ಮನೆಯ ಟೆರಸ್ ಮೇಲೆ 3 ಕೆ.ಬಿ ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಿಕೊಂಡಿದ್ದೇನೆ. ಜೊತೆಗೆ 5 ಕೆಬಿ ಬ್ಯಾಟರಿ ಬ್ಯಾಕ್ ಅಪ್ ಇದೆ. ಹೀಗಾಗಿ ಬೆಸ್ಕಾಂ ಪವರ್‌ ಅನ್ನು ಹೆಚ್ಚಾಗಿ ಬಳಸುತ್ತಿಲ್ಲ. ನಾವೇನು ಫ್ಯಾಕ್ಟರಿ ಇಟ್ಟಿಲ್ಲ, ಆದ್ರೂ ಇಷ್ಟು ಬಿಲ್ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ

    ಅಲ್ಲದೇ ಬೆಸ್ಕಾಂ ಮುಖ್ಯ ಕಚೇರಿಗೆ ದೂರು ನೀಡಲು ಮುಂದಾಗಿದ್ದೇನೆ. ಇಂತಹ ಟೆಕ್ನಿಕಲ್ ಸಮಸ್ಯೆಯಾದ್ರೂ ಬೆಸ್ಕಾಂ ಬಿಲ್ ಕೊಡುವಾಗ ಚೆಕ್ ಮಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ.. ನ್ಯಾಯಾಲಯದಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ: ಸಿದ್ದರಾಮಯ್ಯ

  • ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಕಂಡು ವ್ಯಕ್ತಿ ಕಂಗಾಲು

    ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಕಂಡು ವ್ಯಕ್ತಿ ಕಂಗಾಲು

    ಬೆಂಗಳೂರು: ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ (Electricity Bill) ಕಂಡು ವ್ಯಕ್ತಿಯೊಬ್ಬರು ಶಾಕ್ ಆದ ಘಟನೆ ಬೆಂಗಳೂರಿನ (Bengaluru) ಜೆಬಿ ಕಾವಲ್‌ನಲ್ಲಿ ನಡೆದಿದೆ.

    ಜೆಬಿ ಕಾವಲ್‌ನ (JB Kaval) ಕೃಷ್ಣಾನಂದ ನಗರ ಪೊಲೀಸ್ ಕ್ವಾಟ್ರಸ್ ಮನೆಯೊಂದಕ್ಕೆ ಬರೋಬ್ಬರಿ 7 ಕೋಟಿ ರೂ. ಕರೆಂಟ್ ಬಿಲ್ ಬಂದಿದ್ದು, ಬಿಲ್ ಕಂಡು ನಿವಾಸಿಗಳು ದಂಗಾಗಿದ್ದಾರೆ. 17 ಕೋಟಿ ಬಿಲ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಇಷ್ಟೊಂದು ವಿದ್ಯುತ್ ಬಿಲ್ ಬರೋಕೆ ಹೇಗೆ ಸಾಧ್ಯ? ಅಷ್ಟು ಬಳಸಿಲ್ಲ ಎಂದು ನಿವಾಸಿಗಳು ವಾದಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌: ಜಾರ್ಖಂಡ್‌ನ ಕಾಂಗ್ರೆಸ್‌ ಸಚಿವ ಅಲಂಗೀರ್ ಆಲಂ ಬಂಧನ!

    ಮೇ 5 ರಂದು ಕರೆಂಟ್ ಬಿಲ್ ವಿತರಣೆ ಆಗಿದೆ. ಒಟ್ಟು 17,15,75596 ಕರೆಂಟ್ ಬಿಲ್ ಬಂದಿದೆ. ಇದು ಬೆಸ್ಕಾಂ (BESCOM) ಮೀಟರ್ ತಾಂತ್ರಿಕ ಸಮಸ್ಯೆಯಿಂದ ಆಗಿರುವ ತಪ್ಪಾ ಅಥವಾ ಸರಿನಾ ಎಂದು ಬೆಸ್ಕಾಂ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಸದ್ಯ ಈ ವಿದ್ಯುತ್ ಬಿಲ್ ಭಾರೀ ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ. ಇದನ್ನೂ ಓದಿ: ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

  • ಈ ಮೂರು ದಿನ ಕರೆಂಟ್ ಬಿಲ್ ಕಟ್ಟೋಕೆ ಆಗಲ್ಲ – ನವೆಂಬರ್ ಅಂತ್ಯಕ್ಕೆ ವಿದ್ಯುತ್ ದರ ಏರಿಕೆ ಸಾಧ್ಯತೆ?

    ಈ ಮೂರು ದಿನ ಕರೆಂಟ್ ಬಿಲ್ ಕಟ್ಟೋಕೆ ಆಗಲ್ಲ – ನವೆಂಬರ್ ಅಂತ್ಯಕ್ಕೆ ವಿದ್ಯುತ್ ದರ ಏರಿಕೆ ಸಾಧ್ಯತೆ?

    ಬೆಂಗಳೂರು: ನವೆಂಬರ್ ತಿಂಗಳ ಅಂತ್ಯದಲ್ಲಿ ಮೂರು ದಿನಗಳ ಕಾಲ ಕರೆಂಟ್ ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ. ಆನ್‌ಲೈನ್ ಮತ್ತು ಆಫ್‌ಲೈನ್ ಸೇವೆಗಳು ಕೂಡಾ ಸ್ಥಗಿತಗೊಳ್ಳಲಿದೆ ಎಂದು ಇಂಧನ ಇಲಾಖೆ ಪ್ರಧಾನ ವ್ಯವಸ್ಥಾಪಕ ಐಟಿ ವೆಂಕಟೇಶ್ (IT Venkatesh) ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೆಂಬರ್ 24, 25 ಹಾಗೂ 26ರಂದು ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಹೊಸ ಕನೆಕ್ಷನ್ ಪಡೆದುಕೊಳ್ಳಲು ದುಡ್ಡು ಪಾವತಿ ಹೀಗೆ ಯಾವ ಪ್ರಕ್ರಿಯೆಯೂ ನಡೆಯುವುದಿಲ್ಲ. ಹೊಸ ಹಾರ್ಡ್‌ವೇರ್ ಅಳವಡಿಕೆ ಮಾಡಿ ಐಟಿ ಸೇವೆಗಳನ್ನು ಉನ್ನತೀಕರಣಗೊಳಿಸುತ್ತಿರುವುದರಿಂದ ಸಾಫ್ಟ್ವೇರ್‌ನಲ್ಲಿ ಬದಲಾವಣೆ ಆಗಲಿದೆ. ಹೀಗಾಗಿ ಐದು ಎಸ್ಕಾಂಗಳ ಕರೆಂಟ್ ಬಿಲ್ ಕಟ್ಟಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಮಾಂಸಪ್ರಿಯರಿಗೆ ಗುಡ್‍ನ್ಯೂಸ್- KMF ಮಾದರಿಯಲ್ಲೇ ಮಾರಾಟಕ್ಕೆ ಪ್ಲಾನ್

    ಇನ್ನು ನವೆಂಬರ್ ಅಂತ್ಯಕ್ಕೆ ಬೆಸ್ಕಾಂ ಸೇರಿದಂತೆ ಎಸ್ಕಾಂಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಕೆಇಆರ್‌ಸಿಗೆ ಮನವಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ದರ ಏರಿಕೆಗೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಲಿದೆ. ರಾಜ್ಯಾದ್ಯಂತ ಗೃಹಜ್ಯೋತಿ ಜಾರಿ ಬೆನ್ನಲ್ಲೇ ಈ ಬಾರಿ ಎಷ್ಟು ದರ ಏರಿಕೆಗೆ ಮನವಿ ಮಾಡಬೇಕು ಎನ್ನುವುದರ ಬಗ್ಗೆ ಆಯಾಯ ಎಸ್ಕಾಂಗಳ ಹಿರಿಯ ಅಧಿಕಾರಿಗಳು ಚರ್ಚೆ ನಡೆಸುತ್ತಾರೆ. ಸಾರ್ವಜನಿಕ ಅಹವಾಲು, ಆಕ್ಷೇಪಣೆ ಬಳಿಕ ದರ ಏರಿಕೆಯ ಬಗ್ಗೆ ಕೆಇಆರ್‌ಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಬೆಸ್ಕಾಂ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದರು. ಇದನ್ನೂ ಓದಿ: ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ