Tag: ವಿದ್ಯುತ್ ದೀಪಾಲಂಕಾರ

  • Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ವಿದ್ಯುತ್ ದೀಪಾಲಂಕಾರ ಅದುವೇ ಬೆಳಕಿನ ಚಿತ್ತಾರ. ನಾನಾ ಬಗೆಯಲ್ಲಿ ಬೆಳಕು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡುತ್ತದೆ. ಈ ಬಾರಿ ವಿಭ್ನಿನವಾಗಿ ಹಾಗೂ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

    ದಸರಾ ವೇಳೆ ಮೈಸೂರು ಅರಮನೆ ಮಾತ್ರವಲ್ಲದೆ, ಇಡೀ ನಗರ ಕತ್ತಲಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳ ಅಲಂಕಾರ, ಬೆಳಕಿನ ವೈಯ್ಯಾರ ಕಣ್ಣಿಗೆ ಕಟ್ಟುತ್ತಿದೆ. ನಗರದ ಎಲ್ಲಾ ರಸ್ತೆಗಳು ಹಾಗೂ ವೃತ್ತಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ.

    ಈ ಬಾರಿ ವಿಶೇಷವಾಗಿ ನಗರದ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಅನೇಕ ಗಣ್ಯರ ಹಾಗೂ ಪಾರಂಪರಿಕ ಕಟ್ಟಡಗಳನ್ನು ಬಿದಿರಿನಿಂದ ತಯಾರು ಮಾಡಿ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಜೀ, ನಾಲ್ವಡಿ, ವಿಶ್ವೇಶ್ವರಯ್ಯ, ಕೃಷ್ಣರಾಜ ಒಡೆಯರ್, ಜಂಜೂ ಸವಾರಿ ಸೇರಿದಂತೆ ಅನೇಕ ಮಹನೀಯರ ಪ್ರತಿಕೃತಿಗಳನ್ನು ನಗರದಲ್ಲಿ ನಿರ್ಮಿಸಲಾಗಿದೆ.

    ಮೈಸೂರು ಅರಮನೆ, ಸಂಸತ್ ಭವನ, ವಿಧಾನಸೌಧ, ಕೆಆರ್‍ಎಸ್ ಇಂಡಿಯಾ ಗೇಟ್, ಹಂಪಿಯ ರಥ ಸೇರಿದಂತೆ ಹಲವು ಪ್ರತಿಕೃತಿಗಳು ಲೈಟ್ ಗಳಲ್ಲಿ ಜಗಮಗಿಸುತ್ತೀವೆ. ಪ್ರವಾಸಿಗರಿಗೆ ಇಂತಹ ಕಟ್ಟಡಗಳ ಮಹತ್ವವನ್ನು ಸಾರುವ ದೃಷ್ಟಿಯಿಂದ ಮಾಡಲಾಗಿದೆ.

    https://www.youtube.com/watch?v=KhpVKpi1lno

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದಾಳೆ ಕಾವೇರಿ: ವಿಡಿಯೋ ನೋಡಿ

    ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದಾಳೆ ಕಾವೇರಿ: ವಿಡಿಯೋ ನೋಡಿ

    ಮಂಡ್ಯ: ಕೆಆರ್‍ಎಸ್ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಕಾವೇರಿ ಕಂಗೊಳಿಸುತ್ತಿದ್ದಾಳೆ. ರಭಸದಿಂದ ಹರಿಯುತ್ತಿರುವ ಕಾವೇರಿಗೆ ವಿದ್ಯುತ್ ದೀಪಾಲಂಕಾರ ಮತ್ತಷ್ಟು ಮೆರಗು ತಂದಿದೆ.

    ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯ ಅಣೆಕಟ್ಟೆಯ ಹೊರ ಭಾಗದಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಮನಮೋಹಕ ದೃಶ್ಯ ಕಂಡು ಪ್ರವಾಸಿಗರು ಮನಸೋತಿದ್ದಾರೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಭಾರೀ ಪ್ರಮಾಣದಲ್ಲಿ ಅಣೆಕಟ್ಟೆಗೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ 42 ಗೇಟ್ ಮೂಲಕ ನದಿಗೆ 80 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.