Tag: ವಿದ್ಯುತ್ ಖರೀದಿ

  • ಅಂದು ಡಿಕೆಶಿಗೆ ಐಟಿ ಶಾಕ್-ಇಂದು ಶೋಭಾ ಕರಂದ್ಲಾಜೆಗೆ ಪವರ್ ಶಾಕ್..?

    ಅಂದು ಡಿಕೆಶಿಗೆ ಐಟಿ ಶಾಕ್-ಇಂದು ಶೋಭಾ ಕರಂದ್ಲಾಜೆಗೆ ಪವರ್ ಶಾಕ್..?

    ಬೆಂಗಳೂರು: ಇಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕರೆಂಟ್ ಶಾಕ್ ನೀಡಿರುವ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದ ಸದನ ಸಮಿತಿ ವರದಿ ಇಂದು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.

    ಬಿ.ಎಸ್ ಯಡಿಯೂರಪ್ಪ ಆಡಳಿತಾವಧಿಯಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ವಿದ್ಯುತ್ ಖರೀದಿ ವೇಳೆ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 2014ರಲ್ಲಿ ಡಿಕೆಶಿ ನೇತೃತ್ವದಲ್ಲಿ ಸದನ ಸಮಿತಿ ರಚನೆಯಾಗಿ ವರದಿ ಸಿದ್ಧಪಡಿಸಲಾಗಿತ್ತು. ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ 28 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಆರೋಪವಿದೆ.

    ಈ ವರದಿವನ್ನು ಸಚಿವ ಡಿ.ಕೆ ಶಿವಕುಮಾರ್ ಇಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಸೋಮವಾರ ಸಂಜೆ ಈ ಬಗ್ಗೆ ಸ್ಪೀಕರ್ ಕೆ.ಬಿ.ಕೊಳಿವಾಡರನ್ನು ಭೇಟಿ ಮಾಡಿ ಮಾತುಕತೆಯನ್ನು ಸಹ ನಡೆಸಿದ್ದಾರೆ. ಈ ವರದಿ ಮಂಡನೆಯಾದರೆ ಸದನದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಇದೆ.

    ಡಿ.ಕೆ.ಶಿವಕುಮಾರ್ ಸದನ ಸಮಿತಿ ವರದಿಯಲ್ಲಿ ಏನಿದೆ?:
    * 2010-2014ರವರೆಗೆ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರದ ಆರೋಪ.
    * ಸರ್ಕಾರದ ಬೊಕ್ಕಸಕ್ಕೆ 28 ಸಾವಿರ ಕೋಟಿ ರೂಪಾಯಿ ನಷ್ಟ..!
    * ಶೋಭಾ ಕರಂದ್ಲಾಜೆ ಸಚಿವೆ ಆಗಿದ್ದಾಗ ನಡೆದಿದೆ ಎಂದು ಆರೋಪ.
    * ಜಿಂದಾಲ್ ಸಂಸ್ಥೆಯಿಂದ ಪ್ರತಿ ಯುನಿಟ್‍ಗೆ 3.50 ರೂ. ನೀಡಲು ಒಪ್ಪಿಗೆ ಆಗಿತ್ತು.
    * ಆದರೆ ಜಿಂದಾಲ್‍ನಿಂದ 6.20 ರೂ.ಗೆ ಪ್ರತಿ ಯುನಿಟ್ ವಿದ್ಯುತ್ ಖರೀದಿ.
    * ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಸರ್ಕಾರದಿಂದ ಈ ತೀರ್ಮಾನ.
    * ಈ ಹಗರಣದ ತನಿಖೆಗೆ 2014ರಲ್ಲಿ 8 ಜನ ಸದಸ್ಯರ ಸದನ ಸಮಿತಿ ರಚನೆ.