ಬೆಳಗಾವಿ: ರಾಜ್ಯದ ಎರಡನೇ ಶಕ್ತಿಸೌಧದ ವಿದ್ಯುತ್ ಶುಲ್ಕವನ್ನೇ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ. ಬೆಳಗಾವಿಯ ಸುವರ್ಣಸೌಧದ (Belagavi Suvarna Soudha) ವಿದ್ಯುತ್ ಬಿಲ್ 1.20 ಲಕ್ಷ ರೂಪಾಯಿಯನ್ನು ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳು ಹೆಸ್ಕಾಂ ಇಲಾಖೆಗೆ ಇನ್ನೂ ಪಾವತಿಸಿಲ್ಲ.
ಈ ತಿಂಗಳು ಬಾಕಿ ಬಿಲ್ ಪಾವತಿಸದಿದ್ದರೆ ಸುವರ್ಣಸೌಧದ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಲೋಕಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹೆಸ್ಕಾಂ ಅಧಿಕಾರಿಗಳು ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂಓದಿ: ಕಿಚ್ಚನ ಅಭಿಮಾನಿಯಿಂದ ಬಡ ಮಹಿಳೆಗೆ ಸೂರು ಉಡುಗೊರೆ!
ಸುವರ್ಣ ಸೌಧಕ್ಕೆ ಬಣ್ಣ ಬಳಿಯಲೂ ಸಹ ಸರ್ಕಾರದ ಬಳಿ ದುಡ್ಡಿಲ್ವಾ ಎನ್ನುವ ಅನುಮಾನಗಳು ಕಾಡುತ್ತಿವೆ. 2012 ರಲ್ಲಿ ನಿರ್ಮಾಣವಾದ ಸುವರ್ಣಸೌಧಕ್ಕೆ ಸುಣ್ಣ ಬಣ್ಣ ಬಳಿದಿಲ್ಲ. ಸುಣ್ಣ ಬಣ್ಣ ಬಳಿಯಲು ಲೋಕೋಪಯೋಗಿ ಇಲಾಖೆ ಸಲ್ಲಿಸಿದ್ದ 9 ಕೋಟಿ ರೂ. ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ.
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ?
ಹುಡಿ ವಿಲೇಜ್, ತಿಗಳರಪಾಳ್ಯ, ಸೀತಾರಾಮಪಾಳ್ಯ, ಬಸವನಗರ, ಸೊನ್ನೆಹಳ್ಳಿ, ಎನ್‌ಜಿಎಫ್ ಕೈಗಾರಿಕಾ ಪ್ರದೇಶ, ಶಿವರಾಜ್ ಫ್ಯಾಕ್ಟರಿ, ಇಎಸ್ಐ ರಸ್ತೆ, ವಿಎಸ್ಎನ್ಎಲ್ ಡೇಟಾ ಸೆಂಟರ್, ಪುರವ ಪಾರ್ಕ್ ವಿಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್ ರಸ್ತೆ, ರಾಮಕೃಷ್ಣ ರೆಡ್ಡಿ ಲೇಔಟ್, ಗರುಡಾಚಾರ್ ಪಾಳ್ಯ, ಲಕ್ಷ್ಮೀ ಸಾಗರ, ಮಹೇಶ್ವರಮ್ಮ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಪೀಣ್ಯ ವ್ಯಾಪ್ತಿಯಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನೂಓದಿ: ಮಹೇಶ್ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ: ಡಿಕೆಶಿ
ಎಲ್ಲೆಲ್ಲಿ ವ್ಯತ್ಯಯ?
ಹೆಚ್. ಎಮ್.ಟಿ ರಸ್ತೆ, ಆಆರ್‌ಎನ್‌ಎಸ್ ಅಪಾರ್ಟ್‌ಮೆಂಟ್, ಸಿಎಂಟಿಐ, ಬರ‍್ಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ.ಇದನ್ನೂಓದಿ: ಡಾ. ವಿಷ್ಣು ಅಭಿಮಾನ ಸ್ಮಾರಕ –ಪುತ್ಥಳಿ ನಿರ್ಮಾಣಕ್ಕೆ ಚಾಲನೆ
ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್‌ಬಿ ಲೇಔಟ್, ರಾಜೇಶ್ವರಿನಗರ, ಆಕಾಶ್ ಥೀಟರ್ ರಸ್ತೆ, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭಿರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿ 5ನೇ ಮುಖ್ಯ ರಸ್ತೆ, ಯುಕೊ ಬ್ಯಾಂಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಇಎಸ್ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶ
ನೆಲಗೆದರನಹಳ್ಳಿ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕೆಂಪಯ್ಯ ಗಾರ್ಡನ್, ತಿಗಳರಪಾಳ್ಯ ಮುಖ್ಯ ರಸ್ತೆ, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನೆಲಿಕಾಗಡರನಹಳ್ಳಿ, ಹೆಚ್ ಎಂ ಟಿ ಲೇಔಟ್, ಶಿವಪುರ, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಳ್ಮಾರ್ ಲೇಔಟ್, ವಿನಾಯಕನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಕೆ.ಎಲ್.ಎ.ಪಿ.ಎಲ್. ಆಂಟಿಬಯೋಟಿಕ್ಸ್ ಪ್ರೈವೇಟ್ ಲಿಮಿಟೆಡ್, ರುಕ್ಮಿಣಿನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಸಹಕಾರನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಇದೇ ಜುಲೈ 21 (ಸೋಮವಾರ), ಜು.22 (ಮಂಗಳವಾರ) ಬೆಂಗಳೂರು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ (Power Outage) ಆಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಬೆಂಗಳೂರು ನಗರದ ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ-ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್ ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್‌ಎಸ್ ಲೇಔಟ್, ಸೂರ್ಯೋನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರಜಕ್ಕೂರು, ವಿಆರ್‌ಎಲ್ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ರಾಜ್ಯ ಸರ್ಕಾರ ಅನ್ಯಾಯ: ಸುರೇಶ್ ಬಾಬು
– ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಬೆಸ್ಕಾಂ ಅಧಿಕಾರಿಗಳಿಂದ ವಿದ್ಯುತ್ ಸಂಪರ್ಕ ಕಡಿತ
ಬೆಂಗಳೂರು: ಕೆಆರ್ ಪುರಂ (KR Puram) ಸಬ್ ಡಿವಿಷನ್‌ನ ಮುನೇಶ್ವರ ಬಡವಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಕ್ರಮ ವಿದ್ಯುತ್ (Electricity) ಸಂಪರ್ಕ ಪಡೆಯಲಾಗಿದೆ. ಒಂದೇ ಮೀಟರ್‌ನಿಂದ 16 ಮನೆಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದು ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟು ಮಾಡುತ್ತಿದ್ದಾರೆ. ಈ ವಿಷಯ ಬೆಸ್ಕಾಂ (BESCOM) ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ.
ಒಂದೇ ಮೀಟರ್ ಅಳವಡಿಸಿ, ಅದಕ್ಕೆ ಹೆಚ್ಚುವರಿ ಕೇಬಲ್‌ನಿಂದ ಉಳಿದ ಶೀಟ್ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಥೆರೆಸಾ ಅನ್ನೋ ಮನೆ ಮಾಲಕಿಗೆ ಈ ಹಿಂದೆ ಬೆಸ್ಕಾಂ ಅಧಿಕಾರಿಗಳು ವಾರ್ನ್ ಮಾಡಿ, ಎರಡು ಬಾರಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ರೂ ಮತ್ತೆ ಸಂಪರ್ಕ ಪಡೆದಿದ್ದಾರೆ. ಟಿವಿ, ಫ್ಯಾನ್, ಫ್ರಿಡ್ಜ್, ಲೈಟ್ ಉರಿಯುತ್ತಿದ್ದು, ಬೆಸ್ಕಾಂಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಕೆ.ಪುರಂನಲ್ಲಿ ಹೈಟೆನ್ಶನ್ ವೈಯರ್ ತಗುಲಿ ನೇಪಾಳ ಮೂಲದ ಬಾಲಕ ಮೃತಪಟ್ಟಿದ್ದ. ಅದೇ ಮನೆ ಮಾಲೀಕನ ಸಹೋದರಿಯಿಂದಲೇ ವಿದ್ಯುತ್ ಕಳ್ಳತನ ಆಗಿದೆ. ಇದನ್ನೂ ಓದಿ: Kalaburagi | ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರಿಂದ ಕಂಡಕ್ಟರ್ ಮೇಲೆ ಹಲ್ಲೆ
ಇನ್ನು ಈ ವಿಚಾರವಾಗಿ ನಿಮ್ಮ ಪಬ್ಲಿಕ್ ಟಿವಿ ವಿಸ್ತೃತ ವರದಿ ಬಿತ್ತರಿಸಿತ್ತು. ಈ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅಲ್ಲದೇ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಮನೆ ಮಾಲೀಕರ ಮೇಲೆ ಎಫ್‌ಐಆರ್ ದಾಖಲು ಮಾಡಲು ಮುಂದಾಗಿದ್ದಾರೆ. ಬೆಸ್ಕಾಂ ವಿಜಿಲೆನ್ಸ್ ವಿಭಾಗ ಹಾಗೂ ಕೆಆರ್ ಪುರಂ ಸಬ್ ಡಿವಿಷನ್ ಅಧಿಕಾರಿಗಳು ಎಫ್‌ಐಆರ್ ಮಾಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಸಾವು – ಒಂದು ತಿಂಗಳ ಅಂತರದಲ್ಲಿ 17 ಮಂದಿ ಬಲಿ
– ಪವನ ವಿದ್ಯುತ್ ವಲಯಕ್ಕೆ ವರ್ಷದಲ್ಲಿ 1331.48 ಮೆ.ವ್ಯಾ. ಸಾಮರ್ಥ್ಯದ ಸೇರ್ಪಡೆ
– ಹನುಮನ ನಾಡಿನಲ್ಲಿ ಪವನ ಶಕ್ತಿಯ ಸಾಧನೆ: ಜೋಶಿ ಶ್ಲಾಘನೆ
ಬೆಂಗಳೂರು: ಕರ್ನಾಟಕ (Karnatraka) 2024-25ನೇ ಸಾಲಿನಲ್ಲಿ ಪವನ ವಿದ್ಯುತ್ ಕ್ಷೇತ್ರಕ್ಕೆ (Wind Power Capacity) 1331.48 ಮೆ.ವ್ಯಾ. ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ʼಗ್ಲೋಬಲ್ ವಿಂಡ್ ಡೇ 2025 ಪವನ್-ಉರ್ಜಾ ಪವರಿಂಗ್ ದಿ ಫ್ಯೂಚರ್ ಆಫ್ ಇಂಡಿಯಾ” ಸಮಾರಂಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರಿಂದ ಇಂಧನ ಸಚಿವ ಕೆ.ಜೆ.ಜಾರ್ಜ್ (KJ George) ಅವರು ಪ್ರಶಸ್ತಿ ಸ್ವೀಕರಿಸಿದರು.
2024-25ನೇ ಸಾಲಿನಲ್ಲಿ ಪವನ ವಿದ್ಯುತ್ ವಲಯಕ್ಕೆ 1331.48 ಮೆ.ವ್ಯಾ. ಸಾಮರ್ಥ್ಯ ಸೇಪರ್ಡೆಗೊಳಿಸಿರುವ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ, 1136.37 ಮೆ.ವ್ಯಾ. ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. 954.74 ಮೆ.ವ್ಯಾ ಸೇರ್ಪಡೆಗೊಳಿಸಿರುವ ಗುಜರಾತ್ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಸಿಲುಕಿದ್ದಾರೆ ಕರ್ನಾಟಕದ 9 ವಿದ್ಯಾರ್ಥಿಗಳು – ಭಾರತಕ್ಕೆ ಕರೆತರುವಂತೆ ಮನವಿ
ಕಳೆದ ಸಾಲಿನಲ್ಲಿ ಗುಜರಾತ್ ಮೊದಲ ಸ್ಥಾನ, ಕರ್ನಾಟಕ ಎರಡನೇ ಸ್ಥಾನ ಹಾಗೂ ತಮಿಳುನಾಡು ಮೂರನೇ ಸ್ಥಾನದಲ್ಲಿತ್ತು. ಪ್ರಸಕ್ತ ಸಾಲಿನಲ್ಲಿ ಈ ಎರಡೂ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.
ವಿಶ್ವ ಪವನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್,”2025ರ ಮೇ ವೇಳೆಗೆ ಪವನ ವಿದ್ಯುತ್ತಿನ ಸ್ಥಾಪಿತ ಸಾಮರ್ಥ್ಯ 7,351 ಮೆಗಾವ್ಯಾಟ್‌ನಷ್ಟಿತ್ತು. ಕಳೆದ ಆರ್ಥಿಕ ಸಾಲಿನಲ್ಲಿ 1,331 ಮೆಗಾವ್ಯಾಟ್‌ಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದೇವೆ,” ಎಂದು ತಿಳಿಸಿದರು.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಹೆಜ್ಜೆಗಳು ಹೊಸತೇನಲ್ಲ. 2009ರಲ್ಲಿ ನವೀಕರಿಸಬಹುದಾದ ಇಂಧನ ನೀತಿಯನ್ನು ಪ್ರಕಟಿಸಿದ ದೇಶದ ಮೊದಲ ರಾಜ್ಯ ನಮ್ಮದು. ನಾವು ಇಂದು ಈ ಎತ್ತರಕ್ಕೆ ಏರಲು ಅಂದೇ ಅಡಿಪಾಯ ಹಾಕಲಾಗಿತ್ತು. ನವೀಕರಿಸಬಹುದಾದ ಇಂಧನ ನೀತಿ 2022–2027 ನಮ್ಮ ದೂರದೃಷ್ಟಿಯ ಪ್ರತೀಕ. ಕೇವಲ ಸಾಮರ್ಥ್ಯ ಸೇರ್ಪಡೆ ಮಾತ್ರವಲ್ಲದೇ, ನಾವೀನ್ಯತೆ, ಹೂಡಿಕೆ ಮತ್ತು ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೂಪಿಸಲಾದ ನೀತಿ ಇದು. ಐಎಸ್‌ಟಿಎಸ್ ಮತ್ತು ಐಎನ್‌ಎಸ್‌ಟಿಎಸ್ ಯೋಜನೆಗಳು, ಹೈಬ್ರಿಡ್ ಮಾದರಿಗಳು, ಹಳೆಯ ಟರ್ಬೈನ್‌ಗಳಿಗೆ ಮರುಶಕ್ತಿ ತುಂಬುವುದು ಸೇರಿದಂತೆ ಡಿಜಿಟಲೀಕರಣ ಮತ್ತು ಜಿಯೋ-ಟ್ಯಾಗಿಂಗ್ ಮೂಲಕ ಸುಲಲಿತ ವ್ಯವಹಾರವನ್ನು ಬೆಂಬಲಿಸುತ್ತಿದೆ ಎಂದು ವಿವರಿಸಿದರು.
ಪ್ರಹ್ಲಾದ್ ಜೋಶಿ ಮಾತನಾಡಿ,ಕರ್ನಾಟಕದವನಾಗಿ ರಾಜ್ಯ ಪವನ ವಿದ್ಯುತ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಇದು ಹನುಮನ ಜನ್ಮ ಭೂಮಿ. ಇಲ್ಲಿ ವಿಶ್ವ ಪವನ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
“ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತ ಜಾಗತಿಕವಾಗಿ 4ನೇ ಸ್ಥಾನದಲ್ಲಿದ್ದು, 51.5 ಗಿಗಾವ್ಯಾಟ್ ಸಾಮರ್ಥ್ಯವನ್ನು ಈಗಾಗಲೇ ಸ್ಥಾಪಿಸಲಾಗಿದೆ. 2030ರ ವೇಳೆಗೆ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಶೇ. 50ಕ್ಕೆ ಏರಿಸುವ ಜತೆಗೆ 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆ ನಿವ್ವಳ ಶೂನ್ಯದ ಗುರಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂಧು ತಿಳಿಸಿದರು.
ಭಾರತದಲ್ಲಿ ಶುದ್ಧ ಇಂಧನದ ಮೂಲಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನಗಳನ್ನು ಮುಂದುವರೆಸುತ್ತಾ ಜಾಗತಿಕ ಪವನ ದಿನ 2025 ಅನ್ನು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆಯ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ನನ್ನೊಂದಿಗೆ ಕೇಂದ್ರದ ಮಾನ್ಯ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ ಜೋಶಿ, ಕೇಂದ್ರದ ಮಾನ್ಯ ವಿದ್ಯುತ್ ಮತ್ತು ಹೊಸ… pic.twitter.com/QXDb8cuYKM
2030ರ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದು. ಈ ಪೈಕಿ 30 ಗಿಗಾವ್ಯಾಟ್ ಕಡಲಾಚೆಯ ಪವನ ಶಕ್ತಿಯೂ ಸೇರಿ ಒಟ್ಟು 100 ಗಿಗಾವ್ಯಾಟ್ ಪವನ ವಿದ್ಯುತ್ ಕ್ಷೇತ್ರದ್ದಾಗಿರಲಿದೆ. ದೇಶೀಯ ನಿಯೋಜನೆ ಮಾತ್ರವಲ್ಲದೇ ಜಾಗತಿಕ ಶುದ್ಧ ಇಂಧನ ಪೂರೈಕೆ ಸರಪಳಿಗಳ ಭಾಗವಾಗಿಯೂ ದೇಶ ದೃಢ ಹೆಜ್ಜೆ ಇರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು 3.5 ರಿಂದ 4 ಗಿ.ವ್ಯಾ. ಪವನ ಟರ್ಬೈನ್‌ಗಳು ಮತ್ತು ಘಟಕಗಳನ್ನು ರಫ್ತು ಮಾಡಿದೆ ಎಂದು ಹೇಳಿದರು.
ಬೆಂಗಳೂರು: ವಿದ್ಯುತ್ ಸಂಗ್ರಹ ರಾಜ್ಯದಲ್ಲಿ ಚೆನ್ನಾಗಿ ಇದೆ. ರೈತರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಜನಕ್ಕೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಂಡಿದ್ದೇವೆ ಎಂಬುದಾಗಿ ಕೆಪಿಟಿಸಿಎಲ್ (KPTCL) ಎಂಡಿ ಪಂಕಜ್ ಕುಮಾರ್ ಪಾಂಡೆ (Pankaj Kumar Pandey) ಹೇಳಿದ್ದಾರೆ.
ಬೆಸ್ಕಾಂನ (BESCOM) ಬೆಳಕು ಭವನದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯದ ಪ್ರಸ್ತುತ ವಿದ್ಯುತ್ ಪರಿಸ್ಥಿತಿ ಮತ್ತು ಇಂಧನ ಇಲಾಖೆಯ ಕಾರ್ಯ ಪ್ರಗತಿ, ಗ್ರ‍್ಯಾಚುಟಿ, ಪಿಂಚಣಿ ಹಣಕ್ಕಾಗಿ ವಿದ್ಯುತ್ ದರ ಏರಿಕೆ ಕುರಿತು ಚರ್ಚಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಕೆಪಿಟಿಸಿಎಲ್ ಎಂಡಿ ಪಂಕಜ್‌ಕುಮಾರ್ ಪಾಂಡೆ, ಬೆಸ್ಕಾಂ ಎಂಡಿ ಶಿವಶಂಕರ್ ಭಾಗಿಯಾಗಿದ್ದರು.ಇದನ್ನೂ ಓದಿ:’ಸಿಕಂದರ್’ ಚಿತ್ರದ ಟ್ರೈಲರ್‌ನಲ್ಲಿ ಮಿಂಚಿದ ಕನ್ನಡಿಗ ಕಿಶೋರ್
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 6 ತಿಂಗಳಿಂದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದೆ, ಗೃಹಬಳಕೆ ಹಾಗೂ ಕೈಗಾರಿಕೆಗಳಲ್ಲಿ ಎಸಿ ಬಳಕೆ ಹೆಚ್ಚಳವಾಗಿದೆ. ಇನ್ನೂ ಏಪ್ರಿಲ್ ತಿಂಗಳಲ್ಲಿ 18,500 ಮೆಗಾ ವ್ಯಾಟ್ ಬಳಕೆ ಹೆಚ್ಚಳವಾಗಲಿದ್ದು, ಪಂಜಾಬ್, ಯುಪಿಯಿಂದ ವಿದ್ಯುತ್ ಪಡೆಯುತ್ತಿದ್ದೇವೆ ಎಂದರು.
ಈ ಮೊದಲು ವಿದ್ಯುತ್ ಬೇಡಿಕೆ 17,220 ಮೆಗಾವ್ಯಾಟ್‌ನಷ್ಟಿತ್ತು. ಆದರೆ ಈ ವರ್ಷ 18,500 ಮೆಗಾವ್ಯಾಟ್‌ಗೆ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಈ ಬಾರಿ 15% ರಷ್ಟು ವಿದ್ಯುತ್ ಬೇಡಿಕೆ ಹೆಚ್ಚಿದೆ. ಕಳೆದ ನವಂಬರ್‌ನಲ್ಲಿ 14,856 ಮೆಗಾವ್ಯಾಟ್ ಇತ್ತು. ಇದೀಗ ಮಾರ್ಚ್ನಲ್ಲಿ ವಿದ್ಯುತ್ ಬೇಡಿಕೆ 18,395 ಮೆಗಾವ್ಯಾಟ್ ಇದೆ. ಏಪ್ರಿಲ್ – ಮೇನಲ್ಲಿ ವಿದ್ಯುತ್ ಬೇಡಿಕೆ ಇನ್ನೂ ಹೆಚ್ಚಾಗುತ್ತದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ರಾಜ್ಯದಲ್ಲಿ ವಿದ್ಯುತ್ ಸಂಗ್ರಹ ಚೆನ್ನಾಗಿ ಇದೆ. ಕೈಗಾರಿಕಾ ವಲಯದಲ್ಲಿ ಶೇ15% ರಷ್ಟು ವಿದ್ಯುತ್ ಬೇಡಿಕೆ ಇದೆ. ಮಳೆ ಚೆನ್ನಾಗಿ ಆಗಿರುವ ಕಾರಣಕ್ಕೆ ಕೃಷಿ ಚಟುವಟಿಕೆಗಳೂ ಜೋರಾಗಿದೆ. ಹೀಗಾಗಿ 20% ಹೆಚ್ಚಿನ ವಿದ್ಯುತ್ ಕೃಷಿ ಚಟುವಟಿಕೆಗಳಿಗೆ ನೀಡಬೇಕಾಗಬಹುದು. ಒಟ್ಟಾರೆ ಈ ಬೇಸಿಗೆಯಲ್ಲಿ ಕರೆಂಟ್ ಬಳಕೆ ಹೆಚ್ಚಾಗಲಿದ್ದು, ಅದಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅದರ ಜೊತೆಗೆ ರೈತರಿಗೆ ತೊಂದರೆ ಆಗದಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ಕಡಿತಗೊಳಿಸದಂತೆ ಹಾಗೂ ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ವಿದ್ಯುತ್ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಮಾತನಾಡಿ, ಈ ವರ್ಷದಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ ನೋಡುತ್ತಿದ್ದೇವೆ. ಕೆಲ ಜಿಲ್ಲೆಗಳಲ್ಲಿ ಅತಿ ಹೆಚ್ಚು ವಿದ್ಯುತ್ ಬೇಡಿಕೆ ಇದೆ. ಜನವರಿಯಿಂದ ವಿದ್ಯುತ್ ಬೇಡಿಕೆ ಬಂದಿದ್ದು, ಈ ವರ್ಷ ಹಲವು ಪೂರ್ವ ಸಿದ್ಧತೆ ಮಾಡಿದ್ದೇವೆ. ತಾಪಮಾನ ಹೆಚ್ಚಿದ ಕಾರಣ ವಿದ್ಯುತ್ ಬೇಡಿಕೆ ಹೆಚ್ಚಾದ ಕಾರಣಕ್ಕೆ ಸೋಲಾರ್ ಬಳಕೆ ರಾಜ್ಯದಲ್ಲಿ ಜಾಸ್ತಿಯಾಗುತ್ತಿದೆ, ಹೀಗಾಗಿ ವಿದ್ಯುತ್ ಮಿತವಾಗಿ ಬಳಕೆ ಮಾಡಿ ಎಂದು ಮನವಿ ಮಾಡಿಕೊಂಡರು.ಇದನ್ನೂ ಓದಿ:ಹನಿಟ್ರ್ಯಾಪ್ ಪ್ರಕರಣ; FIR ಆಗದೇ ತನಿಖೆಗೆ ಕೊಡಲು ಆಗಲ್ಲ: ಪರಮೇಶ್ವರ್
ನವದೆಹಲಿ: ಬಾಕಿ ಹಣವನ್ನು ನ.7ರ ಒಳಗಡೆ ಪಾವತಿಸದೇ ಇದ್ದರೆ ಸಂಪೂರ್ಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗುವುದು ಎಂದು ಅದಾನಿ ಪವರ್ (Adani Power) ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಿದೆ.
ಬಾಂಗ್ಲಾದೇಶ 850 ಡಾಲರ್ (ಅಂದಾಜು 7,200 ಕೋಟಿ ರೂ.) ಹಣವನ್ನು ಅದಾನಿ ಕಂಪನಿಗೆ ಪಾವತಿಸಬೇಕಿದೆ. ಈ ಮೊದಲು ಅ.31ರ ಒಳಗಡೆ ಪಾವತಿಸಲು ಅದಾನಿ ಕಂಪನಿ ಗಡುವು ನೀಡಿತ್ತು. ಈ ಗಡುವಿನ ಒಳಗಡೆ ಪಾವತಿಸದ್ದಕ್ಕೆ ಈಗ ಅದಾನಿ ಪವರ್‌ನ ಅಂಗ ಸಂಸ್ಥೆಯಾದ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ (APJL) ಬಾಂಗ್ಲಾದೇಶಕ್ಕೆ (Bangladesh) ತನ್ನ ವಿದ್ಯುತ್ ಸರಬರಾಜನ್ನು ಅರ್ಧದಷ್ಟು ಕಡಿಮೆ ಮಾಡಿದೆ.
ಗುರುವಾರ ರಾತ್ರಿಯಿಂದ ವಿದ್ಯುತ್ ಕಡಿತದಿಂದಾಗಿ ಬಾಂಗ್ಲಾದೇಶಲ್ಲಿ 1,600 ಮೆಗಾವ್ಯಾಟ್‌ಗಳನ್ನು (MW) ವಿದ್ಯುತ್ ಕೊರತೆಯಾಗಿದೆ. 1,496 MW ಅದಾನಿ ಸ್ಥಾವರವು ಈಗ ಅರ್ಧ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೇವಲ 700 MW ವಿದ್ಯುತ್ ಮಾತ್ರ ಉತ್ಪಾದಿಸುತ್ತದೆ. ಇದನ್ನೂ ಓದಿ: ದೆಹಲಿಗೆ ಕಲುಷಿತ ನೀರು ಪೂರೈಕೆ – ಸಿಎಂ ಮನೆ ಮುಂದೆ ಕೊಳಕು ನೀರು ಸುರಿದ ಸ್ವಾತಿ ಮಲಿವಾಲ್
ಬಾಂಗ್ಲಾದೇಶದ ಪವರ್ ಡೆವಲಪ್‌ಮೆಂಟ್ ಬೋರ್ಡ್ (BPDB) ತನ್ನ ಬಾಕಿಗಳನ್ನು ಪಾವತಿಸಲು ಕೆಲಸ ಮಾಡುತ್ತಿದೆ. ಪಾವತಿಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು 170 ಮಿಲಿಯನ್ ಡಾಲರ್ (ಸುಮಾರು ರೂ 1,500 ಕೋಟಿ) ಸಾಲದ ಪತ್ರವನ್ನು (Letter of Credit) ಒದಗಿಸಿದೆ. ಬಿಪಿಡಿಪಿ ಕೃಷಿ ಬ್ಯಾಂಕ್ ಮೂಲಕ LC ನೀಡಲು ಪ್ರಯತ್ನಿಸಿದೆ. ಈ ಕ್ರಮವು ವಿದ್ಯುತ್ ಖರೀದಿ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಮೂಲವೊಂದು ಮಾಧ್ಯಮಕ್ಕೆ ತಿಳಿಸಿದೆ.
ಅದಾನಿ ಪವರ್ ತನ್ನ ಪೂರೈಕೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದರಿಂದ ಕೈಗಾರಿಕೆ, ವ್ಯವಹಾರಗಳು ಮತ್ತು ಗೃಹ ಬಳಕೆಯ ಮನೆಗಳಿಗೂ ಸಮಸ್ಯೆಯಾಗುತ್ತಿದೆ.
ಶೇಖ್ ಹಸೀನಾ ಸರ್ಕಾರವನ್ನು ಇಳಿಸಿದ ಬಳಿಕ ಬಾಂಗ್ಲಾದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಾಂಗ್ಲಾದೇಶ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಗ್ರಾಹಕ ಹಣದುಬ್ಬರ 12 ವರ್ಷಕ್ಕಿಂತ ಹೆಚ್ಚಾಗಿದ್ದು, 11.6%ಕ್ಕೆ ತಲುಪಿದೆ. ಅದರಲ್ಲೂ ಆಹಾರ ಹಣದುಬ್ಬರವು ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 14 ಪ್ರತಿಶತವನ್ನು ಮೀರಿದೆ. ಹಣದುಬ್ಬರ ನಿಯಂತ್ರಿಸಲು ಬಾಂಗ್ಲಾ ಕೇಂದ್ರ ಬ್ಯಾಂಕ್ ರೆಪೋ ದರವನ್ನು 10% ಏರಿಕೆ ಮಾಡಿದೆ.
ನವದೆಹಲಿ: ಅದಾನಿ ಪವರ್‌ನ (Adani Power) ಅಂಗ ಸಂಸ್ಥೆಯಾದ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ (APJL) ಬಾಂಗ್ಲಾದೇಶಕ್ಕೆ (Bangladesh) ತನ್ನ ವಿದ್ಯುತ್ ಸರಬರಾಜನ್ನು ಅರ್ಧದಷ್ಟು ಕಡಿಮೆ ಮಾಡಿದೆ.
846 ದಶಲಕ್ಷ ಡಾಲರ್ ಹಣವನ್ನು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಅದಾನಿ ಕಂಪನಿ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದೆ.
ಗುರುವಾರ ರಾತ್ರಿಯಿಂದ ವಿದ್ಯುತ್ ಕಡಿತದಿಂದಾಗಿ ಬಾಂಗ್ಲಾದೇಶಲ್ಲಿ 1,600 ಮೆಗಾವ್ಯಾಟ್‌ಗಳನ್ನು (MW) ವಿದ್ಯುತ್ ಕೊರತೆಯಾಗಿದೆ. 1,496 MW ಅದಾನಿ ಸ್ಥಾವರವು ಈಗ ಅರ್ಧ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೇವಲ 700 MW ವಿದ್ಯುತ್ ಮಾತ್ರ ಉತ್ಪಾದಿಸುತ್ತದೆ.
ಅದಾನಿ ಪವರ್ ತನ್ನ ಪೂರೈಕೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದರಿಂದ ಕೈಗಾರಿಕೆ, ವ್ಯವಹಾರಗಳು ಮತ್ತು ಗೃಹ ಬಳಕೆಯ ಮನೆಗಳಿಗೂ ಸಮಸ್ಯೆಯಾಗುತ್ತಿದೆ. ಇದನ್ನೂ ಓದಿ: ವಕ್ಫ್ ಆಸ್ತಿಯನ್ನು ಅಲ್ಲಾನ ಆಸ್ತಿ ಅಂತೀವಿ – ಜಮೀರ್
ಬಾಂಗ್ಲಾದೇಶದ ಪವರ್ ಡೆವಲಪ್‌ಮೆಂಟ್ ಬೋರ್ಡ್ (PDB) ತನ್ನ ಬಾಕಿಗಳನ್ನು ಪಾವತಿಸಲು ಕೆಲಸ ಮಾಡುತ್ತಿದೆ. ಬಾಂಗ್ಲಾದೇಶ ಕೃಷಿ ಬ್ಯಾಂಕ್ ಅದಾನಿ ಪವರ್‌ಗೆ 170.03 ಮಿಲಿಯನ್ ಡಾಲರ್ ಸಾಲದ ಪತ್ರವನ್ನು ನೀಡಲು ಒಪ್ಪಿಕೊಂಡಿದ್ದರೂ, ಸೀಮಿತ ಡಾಲರ್ ಲಭ್ಯತೆಯಿಂದಾಗಿ ಅದನ್ನು ಪಾವತಿಸಲು ಸಾಧ್ಯವಾಗಲಿಲ್ಲ.
ದಂಗೆಯ ಬಳಿಕ ಬಾಂಗ್ಲಾದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಾಂಗ್ಲಾದೇಶ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಗ್ರಾಹಕ ಹಣದುಬ್ಬರ 12 ವರ್ಷಕ್ಕಿಂತ ಹೆಚ್ಚಾಗಿದ್ದು, ಶೇ. 11.6ಕ್ಕೆ ತಲುಪಿದೆ. ಅದರಲ್ಲೂ ಆಹಾರ ಹಣದುಬ್ಬರವು ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 14 ಪ್ರತಿಶತವನ್ನು ಮೀರಿದೆ. ಹಣದುಬ್ಬರ ನಿಯಂತ್ರಿಸಲು ಬಾಂಗ್ಲಾ ಕೇಂದ್ರ ಬ್ಯಾಂಕ್ ರೆಪೋ ದರವನ್ನು 10% ಏರಿಕೆ ಮಾಡಿದೆ.
ಚಾಮರಾಜನಗರ: ಜೋತುಬಿದ್ದ ವಿದ್ಯುತ್ ವೈರ್‌ಗೆ (Electric Wire) ಇಬ್ಬರು ರೈತರು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಸ್ಕ್ (CESC) ಜೂನಿಯರ್ ಎಂಜಿನಿಯರ್ ಹಾಗೂ ಲೈನ್‌ಮ್ಯಾನ್ ಅನ್ನು ಅಮಾನತು (Suspend) ಮಾಡಲಾಗಿದೆ.
ಚಾಮರಾಜನಗರದ (Chamarajanagar) ಅಯ್ಯನಪುರದಲ್ಲಿ ರೈತರಿಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಜೋತು ಬಿದ್ದಿದ್ದ ವಿದ್ಯುತ್ ವೈರ್ ಕುತ್ತಿಗೆಗೆ ಸಿಲುಕಿ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹಿನ್ನೆಲೆ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ಆರೋಪದಡಿ ಎಂಜಿಯರ್ ಮರಿಸ್ವಾಮಿ ಹಾಗೂ ಲೈನ್‌ಮ್ಯಾನ್ ಆನಂದ್ ಎಂಬವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಚಾಮರಾಜನಗರ ಸೆಸ್ಕ್ ಇಇ ಪ್ರದೀಪ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Nvidia ದಲ್ಲಿ ವಿದ್ಯೆ ಇದೆ, ಇದರರ್ಥ ಭಾರತದಲ್ಲಿ ಜ್ಞಾನ: ಅಂಬಾನಿಯ ಮಾತಿಗೆ ಜೆನ್ಸನ್ ಹುವಾಂಗ್ ಚಪ್ಪಾಳೆ
ಪ್ರಕರಣ ಏನು?
ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದ ನಾಗೇಂದ್ರ ಹಾಗೂ ಮಲ್ಲೇಶ್ ಮೃತ ದುರ್ದೈವಿಗಳು. ಬುಧವಾರ ರಾತ್ರಿ ಊಟ ಮಾಡಿ ಬೈಕ್‌ನಲ್ಲಿ ಜಮೀನಿಗೆ ತೆರಳಿದ್ದರು. ಜಮೀನಿನಿಂದ ಬೈಕ್‌ನಲ್ಲಿ ವಾಪಸ್ ಬರುವಾಗ ರಸ್ತೆ ಮಧ್ಯೆ ಜೋತು ಬಿದ್ದಿದ್ದ ಹೈಟೆನ್ಷನ್ ವೈರ್‌ಗೆ ಕುತ್ತಿಗೆ ಸಿಲುಕಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿಯೇ ಈ ಘಟನೆ ನಡೆದಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಎಂದಿನಂತೆ ಬೆಳ್ಳಂಬೆಳಗ್ಗೆ ಹೊಲಗದ್ದೆಗಳಿಗೆ ತೆರಳಲು ಬಂದ ಗ್ರಾಮದ ರೈತರಿಗೆ ರಸ್ತೆ ಮಧ್ಯೆ ವಿದ್ಯುತ್ ತಂತಿಗೆ ಇವರಿಬ್ಬರು ಸಿಲುಕಿ ಮೃತಪಟ್ಟಿರುವುದು ಗೊತ್ತಾಗಿದೆ. ಇದನ್ನೂ ಓದಿ: ಶಿವಮೊಗ್ಗ| ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ದ ಕಾರು
ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಸಿತ ಹಿನ್ನೆಲೆ ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್ (Raichur Thermal Power Station) ವಿದ್ಯುತ್ ಕೇಂದ್ರಕ್ಕೆ ತಾತ್ಕಾಲಿಕ ವಿಶ್ರಾಂತಿ ನೀಡಲಾಗಿದೆ. ವಿದ್ಯುತ್ ಕೇಂದ್ರದ ಐದು ಘಟಕಗಳನ್ನು ಬಂದ್ ಮಾಡಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.ಇದನ್ನೂ ಓದಿ: ನಾಗಶೇಖರ್ ಚಿತ್ರಕ್ಕೆ ಬಾಲಿವುಡ್ ನಟಿ ಆವಂತಿಕಾ ದಸ್ಸಾನಿ ನಾಯಕಿ
ರಾಜ್ಯದ ಅರ್ಧದಷ್ಟು ಭಾಗಕ್ಕೆ ವಿದ್ಯುತ್ ಕೊಡುವ ರಾಯಚೂರು (Raichur) ವಿದ್ಯುತ್ ಉತ್ಪಾದನಾ ಕೇಂದ್ರದ ಒಟ್ಟು ಎಂಟು ಘಟಕಗಳಲ್ಲಿ 2, 3, 4, 6 ಮತ್ತು 7ನೇ ವಿದ್ಯುತ್ ಘಟಕಗಳ ಉತ್ಪಾದನೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. 1ನೇ ಘಟಕ ತಾಂತ್ರಿಕ ಸಮಸ್ಯೆಯಿಂದ ಈ ಮೊದಲೇ ಬಂದ್ ಆಗಿದೆ. ಸದ್ಯ 5 ಮತ್ತು 8 ನೇ ಘಟಕಗಳಿಂದ ಕೇವಲ 310 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಸುರಿದ ಉತ್ತಮ ಮಳೆಯಿಂದ ಜಲಾಶಯಗಳು ಭರ್ತಿಯಾಗಿದ್ದು, ಜಲ ವಿದ್ಯುತ್ ಉತ್ಪಾದನೆ ಹೆಚ್ಚಳ ಹಿನ್ನೆಲೆ ಆರ್‌ಟಿಪಿಎಸ್ ಘಟಕಗಳಿಗೆ ರೆಸ್ಟ್ ನೀಡಲಾಗಿದೆ. ವಿದ್ಯುತ್ ಬೇಡಿಕೆ ಗಣನೀಯ ಕುಸಿದ ಹಿನ್ನೆಲೆ ಘಟಕಗಳಿಗೆ ವಿಶ್ರಾಂತಿ ನೀಡಿ ನಿರ್ವಹಣೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಇದನ್ನೂ ಓದಿ: ‘ಹಲೋ ಸರ್’ ಚಿತ್ರಕ್ಕೆ ಮುಹೂರ್ತ : ಕೆ.ಶಂಕರ್ ನಿರ್ದೇಶನದ ಸಿನಿಮಾ