Tag: ವಿದ್ಯಾರ್ಥಿ ನಿಲಯ

  • ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು

    ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು

    ಮಂಡ್ಯ: ವಿದ್ಯಾರ್ಥಿ ನಿಲಯದಲ್ಲಿ (Hostel) ಲೈಂಗಿಕ ಕಿರುಕುಳ (Sexual Harassment) ನೀಡುತ್ತಿದ್ದ ಮುಖ್ಯ ಶಿಕ್ಷಕನೋರ್ವನಿಗೆ (Teacher) ವಿದ್ಯಾರ್ಥಿನಿಯರೆಲ್ಲ ಸೇರಿ ಧರ್ಮದೇಟು ನೀಡಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯರಿಗೆ ಪ್ರತಿದಿನ ಲೈಗಿಂಕ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತು ವಿದ್ಯಾರ್ಥಿನಿಯರೆಲ್ಲ ಸೇರಿ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನೇಪಾಳಿಗಳನ್ನ ಮನೆ ಕೆಲಸಕ್ಕೆ ಸೇರಿಸಿಕೊಳ್ಳೊ ಮುನ್ನ ಎಚ್ಚರ – ಪೊಲೀಸರ ಸಲಹೆ

    ಪ್ರೌಢ ಶಾಲೆಯೊಂದರ ಮುಖ್ಯಶಿಕ್ಷಕನಾಗಿದ್ದ ಚಿನ್ಮಯಮೂರ್ತಿಗೆ ಅಲ್ಲಿದ್ದ ವಿದ್ಯಾರ್ಥಿನಿಯರ ವಸತಿ ನಿಲಯದ ಉಸ್ತುವಾರಿ ನೀಡಲಾಗಿತ್ತು. ನಿತ್ಯ ಸಂಜೆ ಸಮಯದಲ್ಲಿ ಹಾಸ್ಟೆಲ್‍ಗೆ ಬರುತ್ತಿದ್ದ ಕಾಮುಕ ಚಿನ್ಮಯಮೂರ್ತಿ, ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಸಭ್ಯ ವರ್ತನೆ ಮಾಡುತ್ತಿದ್ದ. ಅಶ್ಲೀಲ ವೀಡಿಯೋ ತೋರಿಸುವ ಜೊತೆಗೆ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಜೊತೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಯಾರಿಗಾದ್ರೂ ಹೇಳಿದ್ರೆ ಟಿಸಿಯಲ್ಲಿ ಬ್ಯಾಡ್ ಕ್ಯಾರೆಕ್ಟರ್ ಎಂದು ನಮೂದಿಸುವುದಾಗಿ ಬೆದರಿಕೆ ಹಾಕಿದ್ದ. ಇಷ್ಟು ವರ್ಷ ಆತನ ದೌರ್ಜನ್ಯ ಸಹಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಸಿಡಿದೆದ್ದಿದ್ದಾರೆ. ನಿನ್ನೆ ರಾತ್ರಿ ವಿದ್ಯಾರ್ಥಿನಿ ಒಬ್ಬಾಕೆಯನ್ನು ಕೊಠಡಿಗೆ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಭಯದಿಂದ ವಿದ್ಯಾರ್ಥಿನಿ ಕೂಗಿಕೊಂಡಾಗ ಉಳಿದ ವಿದ್ಯಾರ್ಥಿನಿಯರು ನೆರವಿಗೆ ಬಂದಿದ್ದಾರೆ. ಕಾಮುಕ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಧರ್ಮದೇಟು ನೀಡಿದ್ದಾರೆ. ಇದನ್ನೂ ಓದಿ: ಕೇರಳ ಕುಟ್ಟಿ ಫೋಟೋಗೆ ಮನಸೋತ ಶಿಕ್ಷಕ – ಮ್ಯಾಟ್ರಿಮೊನಿ ಹೆಸರಲ್ಲಿ ಲಕ್ಷ ಲಕ್ಷ ಪೀಕಿದ ಯುವತಿ

    ಈ ಘಟನೆಯ ವಿಚಾರ ತಿಳಿದು ಗ್ರಾಮಸ್ಥರು ಹಾಸ್ಟೆಲ್ ಬಳಿಗೆ ಬಂದು ಆಕ್ರೋಶ ಹೊರಹಾಕಿದರು. ಬಳಿಕ ಚಿನ್ಮಯಮೂರ್ತಿಯನ್ನು ಕೆಆರ್‌ಎಸ್‌ ಠಾಣೆ ಪೊಲೀಸರು ವಶಕ್ಕೆ ಪಡೆದರು. ನಿಲಯ ಪಾಲಕಿ ನೀಡಿದ ದೂರು ಆಧರಿಸಿ ಎಫ್‍ಐಆರ್ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ

    ಮುಂಬೈ: ಚಂಡೀಗಢ ವಿಶ್ವವಿದ್ಯಾಲಯದ (Chandigarh University) ವಿದ್ಯಾರ್ಥಿನಿಯರ ಬಾತ್‌ರೂಮ್ ವೀಡಿಯೋ (Bathroom Video) ಲೀಕ್ ಪ್ರಕರಣ ಮಾಸುವುದಕ್ಕೂ ಮೊದಲೇ ಇಂತಹುದೇ ಮತ್ತೊಂದು ಆಘಾತಕಾರಿ ಘಟನೆ ಐಐಟಿ ಬಾಂಬೆಯಲ್ಲಿ (IIT Bombay) ನಡೆದಿದೆ. ವಿದ್ಯಾರ್ಥಿನಿಯರ ವಸತಿ ನಿಲಯದ (Hostel) ಸ್ನಾನಗೃಹದಲ್ಲಿ ಕ್ಯಾಂಟೀನ್ ಕೆಲಸಗಾರನೊಬ್ಬ (Canteen Staff) ಇಣುಕಿ ನೋಡಿರುವ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ವರದಿಗಳ ಪ್ರಕಾರ, ವಿದ್ಯಾರ್ಥಿನಿಯೊಬ್ಬಳು ಸ್ನಾನಗೃಹದಲ್ಲಿದ್ದಾಗ ಆರೋಪಿ ಕಿಟಕಿಯ ಸೀಳುಗಳ ಮೂಲಕ ಇಣುಕಿ ನೋಡಿದ್ದಾನೆ. ವಿದ್ಯಾರ್ಥಿನಿಗೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಕಿರುಚಿಕೊಂಡಿದ್ದಾಳೆ. ಬಳಿಕ ಹಾಸ್ಟೆಲ್‌ನ ಕ್ಯಾಂಟೀನ್ ಉದ್ಯೋಗಿ ವಿದ್ಯಾರ್ಥಿನಿಯರ ಸ್ನಾನ ಗೃಹದಲ್ಲಿ ಇಣುಕಿ ನೋಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    ಇದೀಗ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಆರೊಪಿ ತನ್ನ ಫೋನ್‌ನಿಂದ ವಿದ್ಯಾರ್ಥಿನಿಯರ ಯಾವುದೇ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿಲ್ಲ. ನಾವು ವಿದ್ಯಾರ್ಥಿಗಳ ಪರವಾಗಿದ್ದೇವೆ, ನಮ್ಮ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎಂದು ಐಐಟಿ ಬಾಂಬೆ ತಿಳಿಸಿದೆ. ಇದನ್ನೂ ಓದಿ: ನೀರು ಕೇಳಿ ಮನೆಗೆ ನುಗ್ಗಿ ಬಲವಂತವಾಗಿ ಚುಂಬಿಸಿದ – ಫುಡ್ ಡೆಲಿವರಿ ಏಜೆಂಟ್ ಅರೆಸ್ಟ್

    ಇದೀಗ ವಿದ್ಯಾರ್ಥಿನಿಲಯದ ಕ್ಯಾಂಟೀನ್ ಅನ್ನು ಮುಚ್ಚಲಾಗಿದ್ದು, ಮಹಿಳಾ ಸಿಬ್ಬಂದಿಯನ್ನು ಮಾತ್ರವೇ ನೇಮಿಸಿ. ಬಳಿಕ ಮತ್ತೆ ಕ್ಯಾಂಟೀನ್ ಅನ್ನು ತೆರೆಯುತ್ತೇವೆ ಎಂದು ಸಂಸ್ಥೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾಕಾಶಿ ಧಾರವಾಡದಲ್ಲಿ ಮೊದ್ಲ ವಸತಿ ನಿಲಯ ಸ್ಥಾಪಿಸಿದ್ದ ಪೇಜಾವರ ಶ್ರೀಗಳು

    ವಿದ್ಯಾಕಾಶಿ ಧಾರವಾಡದಲ್ಲಿ ಮೊದ್ಲ ವಸತಿ ನಿಲಯ ಸ್ಥಾಪಿಸಿದ್ದ ಪೇಜಾವರ ಶ್ರೀಗಳು

    ಧಾರವಾಡ: ಪೇಜಾವರ ಶ್ರೀಗಳು ರಾಜ್ಯದಲ್ಲೇ ಮೊದಲ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ್ದು ವಿದ್ಯಾನಗರಿ ಧಾರವಾಡದಲ್ಲಿ.

    1955 ರಲ್ಲಿ ನಗರದ ರಾಯರಮಠದ ಬಳಿ ಇರುವ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ್ದ ಶ್ರೀಗಳು, ಅದಕ್ಕೆ ಪ್ರಹ್ಲಾದ ವಿದ್ಯಾರ್ಥಿ ನಿಲಯ ಎಂದು ಹೆಸರು ಕೊಟ್ಟಿದ್ದರು. ಇನ್ನು ಅವರು ಧಾರವಾಡಕ್ಕೆ ಬಂದಾಗ ಇದೇ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಆತ್ಮೀಯರಾದವರು ಎಲ್ಲರೂ ಅವರನ್ನು ವಸತಿ ನಿಲಯದಲ್ಲೇ ಬಂದು ಭೇಟಿ ಮಾಡುತ್ತಿದ್ದರು.

    ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಈ ವಸತಿ ನಿಲಯ ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಸಂಧ್ಯಾವಂದನೆ, ಪ್ರವಚನ, ಸಂಸ್ಕಾರಗಳನ್ನು ಬೋಧನೆ ಮಾಡಲಾಗುತ್ತೆ. ಈ ವ್ಯವಸ್ಥೆ ಮಾಡಿದ್ದಕ್ಕಾಗಿಯೇ ಇಲ್ಲಿ ಹಲವು ವಿದ್ಯಾರ್ಥಿಗಳು ಸಮಾಜದ ಎಲ್ಲ ರೀತಿಯ ನಿಯಮಗಳನ್ನು ಹಾಗೂ ಧಾರ್ಮಿಕವಾಗಿ ಒಳ್ಳೆಯ ಸಂಸ್ಕಾರಗಳನ್ನು ಕಲಿತಿದ್ದಾರೆ ಎಂದು ಅಲ್ಲಿಯೇ ಅಭ್ಯಾಸ ಮಾಡುವ ವಿದ್ಯಾರ್ಥಿ ಅಕ್ಷಯ ಭಟ್ಟ ಹೇಳಿದ್ದಾರೆ.

    ಇನ್ನು ಈ ವಸತಿ ನಿಲಯದ ಅಧ್ಯಕ್ಷರಾಗಿರುವ ಡಾ. ಕವಲಗುಡ್ಡ ಅವರು, ಪೇಜಾವರ ಶ್ರೀಗಳಿಗೆ ಈ ವಸತಿ ನಿಲಯ ಸ್ಥಾಪನೆ ಮಾಡಲು ಜಮೀನನ್ನು ಕೊಡಲಾಗಿತ್ತು. ಆದರೆ ಕಳೆದ 2002 ರಲ್ಲಿ ಹಳೆಯ ಕಟ್ಟಡ ಕೆಡವಿ, ಹೊಸ ಕಟ್ಟಡ ಕಟ್ಟಲು 39 ಲಕ್ಷ ರೂ. ಹಣವನ್ನು ನೀಡಿದ್ದರು ಎಂದು ತಿಳಿಸಿದ್ದರು. ಇದೇ ವೇಳೆ ವಸತಿ ನಿಲಯದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪ್ರಹ್ಲಾದ ಅವರು ಮಾತನಾಡಿ, ಶ್ರೀಗಳನ್ನು ನಾವು ಕಳೆದುಕೊಂಡಿದ್ದು ದೊಡ್ಡ ದುರಂತ ಎಂದು ಹೇಳಿದರು. ಇನ್ನು ಅವರು ಧಾರವಾಡಕ್ಕೆ ಬಂದಾಗ ಸದಾ ಈ ವಸತಿ ನಿಲಯಕ್ಕೆ ಬಂದು ವಿದ್ಯಾರ್ಥಿಗಳಿಗೆ ಕೆಲ ವಿಷಯಗಳ ಆಚಾರ ವಿಚಾರ ತಿಳಿಸುತ್ತಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದರು.

  • ಹಳಸಿದ ಆಹಾರ ಸೇವಿಸಿ 110 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ- ಡಿಎಚ್‍ಓ ಸ್ಪಷ್ಟನೆ

    ಹಳಸಿದ ಆಹಾರ ಸೇವಿಸಿ 110 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ- ಡಿಎಚ್‍ಓ ಸ್ಪಷ್ಟನೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಿಜಿಎಸ್ ವಿದ್ಯಾರ್ಥಿನಿಲಯದಲ್ಲಿ ಹಳಸಿದ ಆಹಾರ ಸೇವನೆ ಮಾಡಿದ ಪರಿಣಾಮ 110 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಅಂತ ಚಿಕ್ಕಬಳ್ಳಾಪುರ ಡಿಎಚ್‍ಓ ರವಿಶಂಕರ್ ಸ್ಪಷ್ಟಪಡಿಸಿದ್ದಾರೆ.

    ಎರಡು ದಿನಗಳಿಂದ ಪದೇ ಪದೇ ಅಗಲಗುರ್ಕಿ ಗ್ರಾಮದ ಬಳಿಯ ಬಿಜಿಎಸ್ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ವಾಂತಿ-ಭೇದಿಯಿಂದ ಚಿಕ್ಕಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈ ಬಗ್ಗೆ ಆಡಳಿತ ಮಂಡಳಿ ವೈರಲ್ ಫೀವರ್ ಅಂತ ಹೇಳಿ ಏನೂ ಆಗಿಲ್ಲ ಅನ್ನೋ ರೀತಿ ವರ್ತನೆ ಮಾಡಿತ್ತು. ಆದ್ರೆ ಸದ್ಯ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಇಲಾಖಾಧಿಕಾರಿಗಳು ಘಟನೆಯ ಮಾಹಿತಿ ಪಡೆದಿದ್ದು ಹಳಸಿದ ಆಹಾರ ಸೇವನೆಯೇ ವಿದ್ಯಾರ್ಥಿಗಳ ಅಸ್ವಸ್ಥತೆಗೆ ಕಾರಣ ಅಂತ ತಿಳಿದುಬಂದಿದೆ. ಇದನ್ನೂ ಓದಿ: ಬಿಜಿಎಸ್ ವಿದ್ಯಾರ್ಥಿನಿಲಯದಲ್ಲಿ ಫುಡ್ ಪಾಯಿಸನ್ ಶಂಕೆ – 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    110 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಪರಿಸ್ಥಿತಿ ಇಲ್ಲ. ಇನ್ನೂ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕೆಲ ವಿದ್ಯಾರ್ಥಿಗಳನ್ನ ಈಗಾಗಲೇ ಮನೆಗೆ ಕಳುಹಿಸಿದ್ದು, ಕೆಲ ವಿದ್ಯಾರ್ಥಿಗಳಿಗೆ ಪೋಷಕರೇ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಅಂತ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಾರಾಣಿ ಕಾಲೇಜು ಹಾಸ್ಟೆಲ್‍ನಲ್ಲಿ ಬೆತ್ತಲೆಯಾಗಿ ಓಡಾಡಿ ಬೆಚ್ಚಿಬೀಳಿಸಿದ್ದ ಸೈಕೋ ಬಂಧನ

    ಮಹಾರಾಣಿ ಕಾಲೇಜು ಹಾಸ್ಟೆಲ್‍ನಲ್ಲಿ ಬೆತ್ತಲೆಯಾಗಿ ಓಡಾಡಿ ಬೆಚ್ಚಿಬೀಳಿಸಿದ್ದ ಸೈಕೋ ಬಂಧನ

    – ಮಹಿಳೆಯರ ಒಳ ಉಡುಪು ಕದ್ದು ಈತ ಏನು ಮಾಡ್ತಿದ್ದ ಅಂತ ಕೇಳಿದ್ರೆ ಶಾಕ್ ಆಗ್ತೀರ

    ಬೆಂಗಳೂರು: ಮಹಾರಾಣಿ ಕಾಲೇಜು ಹಾಸ್ಟೆಲ್ ಸುತ್ತಮುತ್ತ ಹುಡುಗಿಯರ ಒಳಉಡುಪು ಧರಿಸಿ ಓಡಾಡಿ ಬೆಚ್ಚಿಬೀಳಿಸಿದ್ದ ವ್ಯಕ್ತಿಯನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಬು ತಾಲೀಮ್ ಎಂದು ಗುರುತಿಸಲಾಗಿದೆ. ಈತ ರೇಸ್ ಕೋರ್ಸ್‍ನಲ್ಲಿ ಕುದುರೆ ನೋಡಿಕೊಳ್ಳುವ ಕಾರ್ಮಿಕನಾಗಿದ್ದಾನೆ.

    ಅಬು ತಾಲೀಮ್ ಮೂಲತಃ ಬಿಹಾರ್ ರಾಜ್ಯದವನು. 13 ವರ್ಷಗಳಿಂದ ಬಿಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ಈತ ತನ್ನ ಅಣ್ಣನೊಟ್ಟಿಗೆ 1991ರಿಂದಲೂ ಬೆಂಗಳೂರಿನಲ್ಲಿ ನಲೆಸಿದ್ದಾನೆ. ಸಹೋದರರಿಬ್ಬರೂ ರೇಸ್‍ಕೋರ್ಸ್‍ನಲ್ಲಿ ಕುದುರೆ ತೊಳೆದು, ಅವುಗಳಿಗೆ ಹಲ್ಲು ಹಾಕಿ ಸಾಕುವ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳ ತಂದೆಯಾಗಿರುವ ಆರೋಪಿ ಅಬು ತಾಲೀಮ್ ಬಿಹಾರದಲ್ಲಿದ್ದಾಗಲೂ ರಾತ್ರಿ ವೇಳೆ ಹುಡುಗಿಯರ ಒಳ ಉಡುಪು ಕದಿಯುತ್ತಿದ್ದ ಎನ್ನಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಈ ರೀತಿ ವರ್ತಿಸುತ್ತಿದ್ದ. ನಿದ್ದೆಯಲ್ಲಿ ನಡೆದಾಡುವ ಕಾಯಿಲೆಯಿದೆ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

    ಒಳ ಉಡುಪು ಕದ್ದು ಏನು ಮಾಡ್ತಿದ್ದ?: ಮಂಗಳಮುಖಿಯರ ಸಹವಾಸ ಜಾಸ್ತಿಯಿದ್ದ ಅಬು ತಾಲೀಮ್ ವಾರಕ್ಕೊಮ್ಮೆ ಹಾಸ್ಟೆಲ್ ಗೆ ನುಗ್ಗಿ ಹೆಣ್ಣು ಮಕ್ಕಳ ಒಳ ಉಡುಪು ಕಳ್ಳತನ ಮಾಡುತ್ತಿದ್ದ. ಬಳಿಕ ಅದನ್ನ ಅವನು ವಾಸವಿರೋ ಜಾಗಕ್ಕೆ ತೆಗೆದುಕೊಂಡು ಹೋಗ್ತಿದ್ದ. ಒಂದು ವಾರ ಆದ್ಮೇಲೆ ಎಲ್ಲಾ ಉಡುಪುಗಳನ್ನು ರಸ್ತೆಯಲ್ಲಿ ಬಿಸಾಡಿ ಹೋಗ್ತಿದ್ದ. ಮಾತ್ರವಲ್ಲದೆ ಕಳವು ಮಾಡಿದ ಬಟ್ಟೆಯಲ್ಲಿ ಹುಡುಗಿ ರೀತಿ ಬೊಂಬೆ ಮಾಡ್ತಿದ್ದ. ಎರಡೆರಡು ದಿನ ಹುಡುಗಿಯರ ಒಳುಡುಪನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದ. ಅಲ್ಲದೆ ತನ್ನ ಹೆಂಡತಿಯ ಒಳ ಉಡುಪು ಹಾಕಿಕೊಂಡು ಬರುತ್ತಿದ್ದ ಎನ್ನಲಾಗಿದೆ.

    ಆರೋಪಿಯ ಹೋಲಿಕೆಗಳನ್ನಿಟ್ಟುಕೊಂಡು ಮಂಗಳವಾರ ಇಡೀ ರಾತ್ರಿ ಹೈಗ್ರೌಂಡ್ ಪೊಲೀಸರು 500ಕ್ಕೂ ಹೆಚ್ಚು ರೇಸ್ ಕೋರ್ಸ್ ಸಿಬ್ಬಂದಿಯ ವಿಚಾರಣೆ ನಡೆಸಿದ್ದರು. ಆರೋಪಿ ಅಬುತಾಲೀಮ್ ಚಂದನ್ ಷಾ ಎಂಬವರ ಕುದುರೆ ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಗೆ ಎರಡು ಸುಳಿ ಇದ್ದಿದ್ದರಿಂದ ಆರೋಪಿ ಪತ್ತೆ ಸುಲಭವಾಯಿತು ಎಂದು ಪೊಲೀಸರು ಹೇಳಿದ್ದಾರೆ.

    ಅಬು ತಾಲೀಮ್ ಎರಡು ದಿನಗಳ ಹಿಂದೆ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದು ಪರಾರಿಯಾಗುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಾತ್ರವಲ್ಲದೇ ಈತ ಕಿಟಕಿಯಿಂದ ಹುಡುಗಿಯರ ರೂಮಿನೊಳಗೆ ಇಣುಕಿ ನೋಡುತ್ತಿದ್ದು, ಈ ಬಗ್ಗೆ ಹಾಸ್ಟೆಲ್ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು.

    ಇದನ್ನೂ ಓದಿ: ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಸೈಕೋ ಪ್ರತ್ಯಕ್ಷ: ವಿಡಿಯೋ ನೋಡಿ

    https://www.youtube.com/watch?v=_yf0IfLtJFE

  • ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಸೈಕೋ ಪ್ರತ್ಯಕ್ಷ: ವಿಡಿಯೋ ನೋಡಿ

    ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಸೈಕೋ ಪ್ರತ್ಯಕ್ಷ: ವಿಡಿಯೋ ನೋಡಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬ ವಿಕೃತ ಕಾಮಿ ಪ್ರತ್ಯಕ್ಷನಾಗಿದ್ದಾನೆ. ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಸೈಕೋ ಕಾಣಿಸಿಕೊಂಡಿದ್ದಾನೆ.

    ಹುಡುಗಿಯರ ಒಳ ಉಡುಪುಗಳನ್ನ ಧರಿಸಿ ಅರೆ ನಗ್ನವಾಗಿ ಹಾಸ್ಟೆಲ್‍ನಲ್ಲಿ ಓಡುತ್ತಿರುವ ಸೈಕೋ ಹುಡುಗನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಡುಗಿಯರ ರೂಂಗಳನ್ನು ಕಿಟಕಿಯಿಂದ ಈತ ಇಣುಕಿ ನೋಡುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.

    ಮಹಾರಾಣಿ ಕಾಲೇಜಿಗೆ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಭೇಟಿ ನೀಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

     ಇದನ್ನೂ ಓದಿ: ಬೆಂಗಳೂರಲ್ಲಿ ಸೈಕೋ ಕಾಟ- ಮಧ್ಯರಾತ್ರಿ ಕಿಟಕಿ ಇಣುಕಿ ನೋಡ್ತಾನೆ ಕಿರಾತಕ

    https://www.youtube.com/watch?v=_yf0IfLtJFE