Tag: ವಿದ್ಯಾರ್ಥಿನಿಗಳು

  • ಓದಿನಲ್ಲಿ ನಾನು ಸಾಮಾನ್ಯ ವಿದ್ಯಾರ್ಥಿ, ಆದ್ರೆ ಜೀವನದಲ್ಲಿ ಒಳ್ಳೆಯ ವಿದ್ಯಾರ್ಥಿ: ರಾಕಿಭಾಯ್

    ಓದಿನಲ್ಲಿ ನಾನು ಸಾಮಾನ್ಯ ವಿದ್ಯಾರ್ಥಿ, ಆದ್ರೆ ಜೀವನದಲ್ಲಿ ಒಳ್ಳೆಯ ವಿದ್ಯಾರ್ಥಿ: ರಾಕಿಭಾಯ್

    ಚೆನ್ನೈ: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದ ಸಮಾರಂಭಕ್ಕೆ ಹೋಗಿದ್ದರು. ಅಲ್ಲಿ ಯಶ್ ತಮಿಳಿನಲ್ಲಿ ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದಾರೆ. ತಕ್ಷಣ ವಿದ್ಯಾರ್ಥಿಗಳು ರಾಕಿಭಾಯ್ ರಾಕಿಭಾಯ್ ಎಂದು ಘೋಷಣೆ ಕೂಗಿ ಅಭಿಮಾನದ ಹೊಳೆ ಹರಿಸಿದ್ದಾರೆ. ಇದನ್ನೂ ಓದಿ: ‘ಪ್ರಧಾನ ಮಂತ್ರಿ’ಯನ್ನ ಊರಿಗೆ ಬರಮಾಡಿಕೊಂಡ ರಾಕಿ ಭಾಯ್

    ಸಮಾರಂಭದಲ್ಲಿ ಮಾತನಾಡಿದ ಯಶ್, ತಮಿಳಿನಲ್ಲಿ ಹೇಗಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ವಿದ್ಯಾರ್ಥಿಗಳು ದಿಲ್ ಖುಷ್ ಆಗಿದ್ದಾರೆ. ಆಗ ಒಬ್ಬ ನಟನಿಗೆ ಇದಕ್ಕಿಂತ  ಬೇರೆ ಏನು ಬೇಕು ಎಂದು ಯಶ್ ತಮಿಳಿನಲ್ಲಿ ಮಾತನಾಡಿದ್ದಾರೆ.

    ನೀವು ‘ಕೆಜಿಎಫ್ ಚಾಪ್ಟರ್ 1’ ನೋಡಿ ತುಂಬಾ ಇಷ್ಟ ಪಟ್ಟಿದ್ದೀರಿ. ‘ಚಾಪ್ಟರ್ 2’ ಬೇರೆ ಲೆವೆಲ್‍ನಲ್ಲಿ ಇರುತ್ತದೆ ನೋಡಿ. ವಿದ್ಯಾರ್ಥಿಗಳು ನಿಮ್ಮ ಕನಸನ್ನು ಹಿಂಬಾಲಿಸಬೇಕು. ನಿಮಗೆ ನನ್ನ ಬಾಲ್ಯ, ಶಿಕ್ಷಣ ಗೊತ್ತಿಲ್ಲ. ನಾನು ಸಾಮಾನ್ಯ ವಿದ್ಯಾರ್ಥಿ. ಆದರೆ ಜೀವನದಲ್ಲಿ ನಾನು ಒಳ್ಳೆಯ ವಿದ್ಯಾರ್ಥಿ ಎಂದು ಹೇಳಿದರು.

    ತಮಿಳಿನ ಮಕ್ಕಳು ಯಾರನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಆದ್ರೆ ಒಮ್ಮೆ ಅವರಿಗೆ ಇಷ್ಟವಾದರೆ ಅದು ಬೇರೆ ಲೆವೆಲಿನಲ್ಲಿ ಇರುತ್ತದೆ ಎಂದು ಯಾರೋ ಹೇಳಿದರು. ನಿಮ್ಮ ಸಂಸ್ಕೃತಿ, ಊಟ ತುಂಬಾ ಚೆನ್ನಾಗಿದೆ ಎಂದು ಮಾತನಾಡಿದರು.

    ಸಮಾರಂಭಕ್ಕೆ ರಾಕಿಭಾಯ್ ನೋಡಲು ಸಾವಿರಾರು ವಿದ್ಯಾರ್ಥಿಗಳು ಬಂದಿದ್ದರು. ಅದರಲ್ಲೂ ಯಶ್ ತಮಿಳಿನಲ್ಲಿ ವಿದ್ಯಾರ್ಥಿಗಳನ್ನ ಮಾತನಾಡಿಸಿದ್ದಕ್ಕೆ ವಿದ್ಯಾರ್ಥಿಗಳು ತುಂಬಾ ಸಂತಸಪಟ್ಟಿದ್ದಾರೆ.

  • ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ – 33 ಸೆಕೆಂಡ್‍ನಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ 22 ಏಟು

    ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ – 33 ಸೆಕೆಂಡ್‍ನಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ 22 ಏಟು

    – ಮಹಿಳಾ ಪೇದೆಗೆ ಭಾರೀ ಮೆಚ್ಚುಗೆ

    ಲಕ್ನೋ: ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮಹಿಳಾ ಪೇದೆಯೊಬ್ಬರು ವ್ಯಕ್ತಿಗೆ 33 ಸೆಕೆಂಡ್‍ನಲ್ಲಿ ಚಪ್ಪಲಿಯಿಂದ 22 ಬಾರಿ ಹೊಡೆದ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

    ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ರಸ್ತೆಯಲ್ಲಿಯೇ ಮಹಿಳಾ ಪೇದೆ ತನ್ನ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಬಳಿಕ ವಶಕ್ಕೆ ಪಡೆದು ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೇದೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಕ್ಷೇತ್ರದಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರನ್ನು ನಿರಂತರವಾಗಿ ಪೊಲೀಸರು ಸ್ವೀಕರಿಸುತ್ತಿದ್ದರು. ಹಾಗಾಗಿ ಮಹಿಳಾ ಪೇದೆ ಇಂದು ಬೆಳಗ್ಗೆಯಿಂದ ಶಾಲೆಯ ಹೊರಗೆ ಓಡಾಡುತ್ತಿದ್ದರು. ಈ ವೇಳೆ ಪೇದೆ ಕಿರುಕುಳ ನೀಡುತ್ತಿದ್ದ ಯುವಕನನ್ನು ರೆಡ್‍ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಪೇದೆ ಯುವಕನಿಗೆ ಬುದ್ಧಿ ಕಲಿಸಿದ್ದಾರೆ.

    ರಸ್ತೆಯಲ್ಲಿಯೇ ಪೇದೆ ತನ್ನ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಅದರಿಂದ ಯುವಕನಿಗೆ ಥಳಿಸಿದ್ದಾರೆ. ಬಳಿಕ ಬಿಥೂರ್ ಠಾಣಾ ಪೊಲೀಸರು ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಐಪಿಸಿ ಸೆಕ್ಷನ್ 294 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಅನಿಲ್ ಕುಮಾರ್, ಮಹಿಳೆಗೆ ಸಂಬಂಧಿಸಿದ ಪ್ರಕರಣಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಯುವತಿಯರು ಕೂಡ ದೂರು ನೀಡಲು ಮುಂದಾಗಬೇಕು. ಪೊಲೀಸರು ದೂರುಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.