Tag: ವಿದ್ಯಾಮಂದಿರ

  • ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

    ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಇಂದು ಚಾಲನೆ – ಡಿಗ್ರಿ ನಂತರದ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಬನ್ನಿ

    – ಇಂದು, ನಾಳೆ ಶೈಕ್ಷಣಿಕ ಮೇಳ
    – ಪಿಜಿ ಕಾಲೇಜ್‌, ಕೋರ್ಸ್‌ಗಳ ಬಗ್ಗೆ ಮಾಹಿತಿ
    – ವಿದ್ಯಾರ್ಥಿಗಳು, ಪೋಷಕರಿಗೆ ಉಚಿತ ಪ್ರವೇಶ

    ಬೆಂಗಳೂರು: ಡಿಗ್ರಿ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಮೂಡುತ್ತೆ. ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡ್ಕೋಬೇಕು ಎಂಬ ಗೊಂದಲವೂ ಕಾಡುತ್ತೆ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ, ಗೊಂದಲಗಳಿಗೆ ನಿಮ್ಮ ಪಬ್ಲಿಕ್ ಟಿವಿಯ ವಿದ್ಯಾಮಂದಿರದಲ್ಲಿ ಉತ್ತರ ಸಿಗಲಿದೆ. ಇಂದು & ನಾಳೆ (ಅ.7 ಮತ್ತು 8) ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ Ad6 ಸಂಸ್ಥೆ ಸಹಯೋಗದಲ್ಲಿ ನಿಮ್ಮ ಪಬ್ಲಿಕ್ ಟಿವಿಯ ವಿದ್ಯಾಮಂದಿರ ಶೈಕ್ಷಣಿಕ ಮೇಳ ನಡೆಯಲಿದೆ.

    Ad6 ಸಹಯೋಗದಲ್ಲಿ ಪಬ್ಲಿಕ್‌ ಟಿವಿ ಪ್ರಸ್ತುತ ಪಡಿಸುವ ಎರಡನೇ ಅವೃತ್ತಿಯ ʼವಿದ್ಯಾಮಂದಿರʼಶೈಕ್ಷಣಿಕ ಮೇಳ ಮಲ್ಲೇಶ್ವರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ. ಇಂದು ಬೆಳಗ್ಗೆ 9:30 ಕ್ಕೆ ಶೈಕ್ಷಣಿಕ ಮೇಳಕ್ಕೆ ಚಾಲನೆ ಸಿಗಲಿದೆ. ಮೇಳವು ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    35ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ. ಸ್ನಾತಕೋತ್ತರ ಪದವಿ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳು, ದಾಖಲಾತಿ, ವಿದ್ಯಾರ್ಥಿವೇತನದ ಬಗ್ಗೆ ನಿಮಗೆ ಸಮಗ್ರ ಮಾಹಿತಿ ಒದಗಿಸಲಿವೆ. ಸಂವಾದ ಕಾರ್ಯಕ್ರಮಗಳು ಇರಲಿವೆ. ಪೋಷಕರು, ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಇರಲಿದೆ.

    ಲ್ಯಾಪ್‌ಟಾಪ್‌, ಮೊಬೈಲ್‌ ಬಹುಮಾನ ಗೆಲ್ಲಿ:
    ಈ ಮೇಳದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಸರ್‌ಪ್ರೈಸ್‌ ಗಿಫ್ಟ್‌ ಸಹ ಸಿಗಲಿದೆ.

    ವಿದ್ಯಾಮಂದಿರದ ಪ್ಲಾಟಿನಂ ಪ್ರಾಯೋಜಕರು
    ರೇವಾ ಯುನಿವರ್ಸಿಟಿ, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ರಾಮಯ್ಯ ಯುನಿವರ್ಸಿಟಿ, ನಾಗಾರ್ಜುನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಬನ್ನಿ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್ ಗ್ರೂಪ್ ಆಫ್ ಪಾಯಿಂಟ್ ಇನ್‌ಸ್ಟಿಟ್ಯೂಷನ್ಸ್‌, ಸಿಎಂಆರ್‌ ಯುನಿವರ್ಸಿಟಿ, ಆರ್‌ವಿ ಯುನಿವರ್ಸಿಟಿ, ಏಮ್ಸ್ ಇನ್‌ಸ್ಟಿಟ್ಯೂಷನ್ಸ್‌, ಚಾಣಕ್ಯ ವಿಶ್ವವಿದ್ಯಾಲಯ, ಪಾರುಲ್ ಯುನಿವರ್ಸಿಟಿ, SEA ಸಮೂಹ ಸಂಸ್ಥೆಗಳು.

    ಸಿಲ್ವರ್ ಪ್ರಾಯೋಜಕರು
    ರಾಮಯ್ಯ ಆಫೀಸರ್ಸ್‌ ಐಎಎಸ್‌ ಅಕಾಡೆಮಿ, ಆಕ್ಸ್‌ಫರ್ಡ್‌ ಎಜುಕೇಶನ್‌ ಇನ್‌ಸ್ಟಿಟ್ಯೂಷನ್ಸ್‌, ಪಿಇಎಸ್‌ ವಿಶ್ವವಿದ್ಯಾಲಯ, ರಾಜರಾಜೇಶ್ವರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌, ಶ್ರೀನಿವಾಸ ವಿಶ್ವವಿದ್ಯಾನಿಲಯ, ಯೂನಿವರ್ಸಿಟಿ ಹಬ್, ಹರ್ಷಾ ಇನ್‌ಸ್ಟಿಟ್ಯೂಷನ್ಸ್‌, ಸೌಂದರ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌, ಪ್ರೆಸಿಡೆನ್ಸಿ ಯೂನಿವರ್ಸಿಟಿ

    ವಿಶೇಷ ಪೆವಿಲಿಯನ್: ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್,
    ಕ್ರಿಯೇಟಿವ್‌ ಸ್ಟಾಲ್‌ : ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌,
    ಗಿಫ್ಟ್‌ ಪ್ರಾಯೋಜಕರು : ಜೀನಿ ಮಿಲ್ಲೆಟ್‌
    ಪಾನೀಯ ಪ್ರಾಯೋಜಕರು: ನಂದಿನಿ, ಬಾಯರ್ಸ್‌ ಕಾಫಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಅದ್ಧೂರಿ ತೆರೆ

    ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ಅದ್ಧೂರಿ ತೆರೆ

    ಬೆಂಗಳೂರು: ಪಬ್ಲಿಕ್ ಟಿವಿ ಪ್ರಸುತ್ತ ಪಡಿಸಿದ್ದ 2 ದಿನಗಳ ವಿದ್ಯಾಮಂದಿರಕ್ಕೆ ಅದ್ದೂರಿ ತೆರೆಬಿದ್ದಿದೆ. ಮಲ್ಲೇಶ್ವರಂ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಪಿಜಿ ಎಜ್ಯುಕೇಶನ್ ಎಕ್ಸ್‌ಪೋಗೆ(PG Education Expo) 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಯೋಜನ ಪಡೆದಿದ್ದಾರೆ.

    ಸೆಮಿನಾರ್‌ನಲ್ಲಿ ಪೀಣ್ಯ ಮೂಲದ ರಂಜಿತ್ ಸಂಶೋಧನೆ ವಿಷಯ ಕುರಿತು ಮಾತನಾಡಿ ಎಲೆಕ್ಟ್ರಿಕ್ ಬೈಕ್ ಗೆದ್ದರು.


    ಸಮಾರೋಪ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ ಮತ್ತು ಗಾರ್ಡನ್ ಸಿಟಿ ಕಾಲೇಜಿನ ಮುಖ್ಯಸ್ಥ ವಿ ಜಿ ಜೋಸಫ್ ಭಾಗಿಯಾಗಿ ಕ್ವಿಜ್‌ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ಭಾಗಿಯಾಗಿದ್ದ ಶಿಕ್ಷಣ ಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವ ಸಲ್ಲಿಸಿದರು.

    ಮುಂದಿನ ದಿನಗಳಲ್ಲಿ ಪಬ್ಲಿಕ್‌ ಟಿವಿ ವತಿಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮತ್ತಷ್ಟು ಎಜ್ಯುಕೇಶನ್ ಎಕ್ಸ್‌ಪೋ ನಡೆಯಲಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿಯಾಗಲಿ ಎಂಬುದೇ ನಮ್ಮ ಅಶಯ.

    Live Tv
    [brid partner=56869869 player=32851 video=960834 autoplay=true]

  • ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್

    ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್

    ಬೆಂಗಳೂರು: ನಾನು ಸ್ನಾತಕೋತ್ತರ ಪದವಿ ಪಡೆದಿಲ್ಲ. ಅಂದಿನ ಸ್ಥಿತಿಯಲ್ಲಿ ನನಗೆ ಪಿಜಿ ಮಾಡಲು ಆಗಲೇ ಇಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್. ಆರ್ ರಂಗನಾಥ್ ಹೇಳಿದರು.

    ಇಂದು ಪಬ್ಲಿಕ್ ಟಿವಿ ಪ್ರಸ್ತುತ ಪಡೆಸುತ್ತಿರುವ ವಿದ್ಯಾಮಂದಿರ ಎಜುಕೇಶನ್ ಎಕ್ಸ್ ಪೋ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕಾಲದ ಶಿಕ್ಷಣಕ್ಕೂ ಈಗನ ಶಿಕ್ಷಣಕ್ಕೂ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ನಾನು ಡಿಗ್ರಿಯಲ್ಲಿ ಫೈನಲ್ ಇಯರ್ ಪರೀಕ್ಷೆ ಬರೆಯುವ ಮೊದಲೇ ನನಗೆ ಕೆಲಸ ಕೊಟ್ಟರು. ಬಮದು ಕೆಲಸ ಮಾಡಿ ಪರೀಕ್ಷೆಗೆ ರಜೆ ತೆಗೆದುಕೊಂಡು ಹೋಗಿ ಡಿಗ್ರಿ ಪರೀಕ್ಷೆ ಬರೆದು ಬಂದೆ. ಹೀಗಾಗಿ ಆಗ ನಾನು ಸ್ನಾತಕೋತ್ತರ ಪದವಿ ಪಡೆದಿದ್ದರೆ ಚೆನ್ನಾಗಿತ್ತು ಅಂತ ಅನಿಸಿತ್ತು. ಆದರೆ ಈಗ ಕಾಲ ಮುಗಿದಿದೆ. ಈವಾಗಲೂ ನಾನು ಅದನ್ನು ಮಾಡಬಲ್ಲೆ. ಪತ್ರಿಕೋದ್ಯಮದಲ್ಲಿಯೇ ಯಾವುದಾದರೂ ಒಂದು ಒಳ್ಳೆಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಅನಿಸ್ತಿದೆ. ಆದರೆ ಅಲ್ಲಿ ನಾನು ಅಲ್ಲಿ ತುಂಬಾ ತಂದರೆ ಕೊಡುವ ವಿದ್ಯಾರ್ಥಿ ಆಗಬಹುದು. ಇದು ತುಂಬಾ ಕಷ್ಟವಾಗಬಹುದೆಂದು ನಕ್ಕರು.

    ಬಹಳ ಹಿಂದೆ ಪೊಲೀಸ್ ಆಗೋಕೆ 8ನೇ ಕ್ಲಾಸ್ ಆದವರು ಸಾಕು ಎಂಬ ಜಾಹೀರಾತು ಬರುತ್ತಿತ್ತು. ಆದರೆ ಇಂದು ಪೊಲೀಸ್ ಕಾನ್ಸ್ ಟೇಬಲ್‍ಗೆ 60 ಪರ್ಸೆಂಟ್ ಪದವಿ ಪಡೆದವರು, 20-21 ಪರ್ಸೆಂಟ್ ಪಿಜಿ ಮಾಡಿವರು ಅಪ್ಲೈ ಮಾಡುತ್ತಿದ್ದಾರೆ. ಈ ಮೂಲಕ ಉದ್ಯೋಗಕ್ಕೆ ಬೇಕಾದ ತಯಾರಿ ಇಲ್ಲದ ಶಿಕ್ಷಣ ಸಿಗುತ್ತಿದೆ ಅಂತ ಉದ್ಯೋಗ ಬೇಕು ಅಂದ್ರೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕೆಲವೊಂದು ಉದ್ಯೋಗಗಳಿಗೆ ಪಿಜಿ ಮುಗಿಸಿರಲೇಬೇಕು ಎಂಬಂತಾಗಿದೆ. ಹೀಗಾಗಿ ಡಿಗ್ರಿ ಮಾಡದವರಿಗೆ ಮುಂದೊಂದು ದಿನ ಕೆಲಸ ಸಿಗುವುದು ಕೂಡ ಕಷ್ಟವಾಗಬಹುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

     ಪಿಜಿ ಹಾಗೂ ರಿಸರ್ಚ್ ಶಿಕ್ಷಣದಲ್ಲಿ ಕರ್ನಾಟಕ ಈಗ ಒಂದು ಹೆಜ್ಜೆ ಮುಂದೆಯೇ ಇದೆ ಎಂದನಿಸುತ್ತದೆ. ನಮ್ಮ ಶಿಕ್ಷಣ ಸಂಸ್ಥೆಗಳು ಕೂಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿವೆ. ಹೀಗಾಗಿ ಮುಂದೆ ಈ ಶಿಕ್ಷಣಕ್ಕೆ ಸಹಾಯ ಆಗಬಹುದೆಂಬ ನಿಟ್ಟಿನಲ್ಲಿ ಎರಡು ದಿನಗಳ ಈ ಎಕ್ಸ್ ಪೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶಿಕ್ಷಣ ಸಚಿವರಾಗಿರುವ ಅಶ್ವಥ್ ನಾರಾಯಣ್ ಕೂಡ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಮೂಲಕ ಹೆಚ್ಚಿನ ಕೊಡುಗೆಗಳನ್ನು ಕೊಡುತ್ತಿದ್ದಾರೆ.

    ಎರಡು ದಿನವಿರಲಿದೆ ವಿದ್ಯಮಂದಿರ: ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು.. ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ. ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೇ, ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.. ಬಹುಮಾನ ಗೆಲ್ಲಿ.. ವಿದ್ಯಾಮಂದಿರವನ್ನ ಸದುಪಯೋಗಪಡಿಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

  • ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

    ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

    ಬೆಂಗಳೂರು: ನೈಜ ಸುದ್ದಿಗಾಗಿ ಸಾಕಷ್ಟು ಕಾಯುತ್ತೇವೆ. ಹಲವು ವಿಚಾರಗಳನ್ನ ಅದ್ಭುತವಾಗಿ ವಿವರ ನೀಡುವವರು ರಂಗನಾಥ್ (H.R Ranganath) ಸರ್ ಅವರು. ಶಿಕ್ಷಣದ ಬಗ್ಗೆ ಅವರಿಗೆ ಬಹಳ ಅರಿವು, ಕಾಳಜಿ ಇದೆ. ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರು ಹೇಳಿದರು.

    ಪಬ್ಲಿಕ್ ಟಿವಿ (Public TV) ಪ್ರಸ್ತುತ ಪಡಿಸುತ್ತಿರುವ 2 ದಿನಗಳ ವಿದ್ಯಾಮಂದಿರ ಎಜುಕೇಶನ್ ಎಕ್ಸ್ ಪೋ (VidyaMandira Education Expo)ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಡಿಗ್ರಿ ಬಳಿಕ ಡಾಕ್ಟರೇಟ್ (Doctorate) ಕೋರ್ಸ್ ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು. ನನಗೂ ಬೆಂಗಳೂರಿನ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಐಟಿಬಿಟಿ ಸಚಿವನಾದ ಮೇಲೆ ಬೆಂಗಳೂರಿನ ಶಕ್ತಿ ತಿಳಿದಿದೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ ಪಿಜಿ ಎಜುಕೇಶನ್ ಎಕ್ಸ್‌ಪೋಗೆ ಚಾಲನೆ

    ನಮ್ಮಲ್ಲಿ ಐಐಟಿ (IIT) ಇಲ್ಲ, ಆದರೆ ಇಡೀ ದೇಶದ ಐಐಟಿ ಪಾಸ್ ಆದವರು ಬೆಂಗಳೂರಿನಲ್ಲಿದ್ದಾರೆ. ಕಾರಣ ಅವರಿಗೆ ಬೇಕಾದ ಎಲ್ಲಾ ಸಂಸ್ಥೆಗಳು ಇಲ್ಲಿವೆ. ಅಮೇರಿಕಾದಲ್ಲೂ ಸಿಗದ ಸ್ಯಾಲರಿ ಬೆಂಗಳೂರಿನಲ್ಲಿ ಸಿಗುತ್ತಿದೆ. ಡಾಕ್ಟರೇಟ್ ಪ್ರೋಗ್ರಾಂಗಳಲ್ಲಿ ಭಾಗವಹಿಸುವವರಿಗೆ ಸರ್ಕಾರ ಕೂಡ ಸಹಕಾರ ನೀಡುತ್ತಿದೆ ಎಂದರು.

    2000 ಮಕ್ಕಳಿಗೆ ಡಾಕ್ಟರೇಟ್ ಗೆ ಹಣ ನೀಡುತ್ತೀದ್ದೇವೆ. ಆಮೆರಿಕಾದ ಮಟ್ಟದ ವಿದ್ಯಾಸಂಸ್ಥೆಗಳಿಗೆ ಸರಿಸಮಾನಾಗಿ ನಮ್ಮಲ್ಲೂ ಸಂಸ್ಥೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ವಿದ್ಯಾಮಂದಿರ ಪಿಜಿ ಎಜುಕೇಶನ್ ಎಕ್ಸ್‌ಪೋಗೆ ಚಾಲನೆ

    ಪಬ್ಲಿಕ್ ಟಿವಿ ವಿದ್ಯಾಮಂದಿರ ಪಿಜಿ ಎಜುಕೇಶನ್ ಎಕ್ಸ್‌ಪೋಗೆ ಚಾಲನೆ

    ಬೆಂಗಳೂರು: ಪಬ್ಲಿಕ್ ಟಿವಿ (Public TV) ಪ್ರಸ್ತುತಪಡಿಸುವ ವಿದ್ಯಾಮಂದಿರ (Vidhya Mandira) 2022 ಮೆಗಾ ಪಿಜಿ ಎಜುಕೇಶನ್ ಎಕ್ಸ್‌ಪೋಗೆ (Education Expo) ಇಂದು ಬೆಂಗಳೂರಿನ (Bengaluru) ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚಾಲನೆ ಸಿಕ್ಕಿದೆ.

    ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Dr. Ashwathnarayan) ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್, ಜಿಎಸ್ ಸಂಸ್ಥೆ ಎಂಡಿ ಪ್ರಕಾಶನಾಥ ಸ್ವಾಮೀಜಿ, ಪ್ರೋ ವಿಸಿ ವಿದ್ಯಾಶಂಕರ ಶೆಟ್ಟಿ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಿಕೆ ಮೋಹನ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಮೋದಿ ಎಲೆಕ್ಷನ್ ಗೇಮ್- ಪ್ರಬಲ ಸಮುದಾಯದ ಮೇಲೂ ಹೈಕಮಾಂಡ್ ಕಣ್ಣು

    ಇಂದಿನಿಂದ ಎರಡು ದಿನಗಳ ಕಾಲ ವಿದ್ಯಾಮಂದಿರ 2022 ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವ ನಡೆಯಲಿದೆ. ಈ ಹಿಂದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಮೇಳ ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಂದು ಮತ್ತು ನಾಳೆ ವಿದ್ಯಾ ಮಂದಿರ ನಡೆಯಲಿದೆ. ಇದನ್ನೂ ಓದಿ: ಇಂದಿನಿಂದ 2 ದಿನ `ಪಬ್ಲಿಕ್ ಎಜುಕೇಷನ್ ಎಕ್ಸ್‌ಪೋ’- ಸ್ನಾತಕೋತ್ತರ ಪದವಿ ಶೈಕ್ಷಣಿಕ ಮೇಳಕ್ಕೆ ಬನ್ನಿ, ಭಾಗವಹಿಸಿ

    ಶನಿವಾರ ಮತ್ತು ಭಾನುವಾರ ನಡೆಯಲಿರುವ ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ. ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೆಯೇ ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ. ಬಹುಮಾನ ಗೆಲ್ಲಿ. ವಿದ್ಯಾಮಂದಿರವನ್ನು ಸದುಪಯೋಗಪಡಿಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ 2 ದಿನ `ಪಬ್ಲಿಕ್ ಎಜುಕೇಷನ್ ಎಕ್ಸ್‌ಪೋ’- ಸ್ನಾತಕೋತ್ತರ ಪದವಿ ಶೈಕ್ಷಣಿಕ ಮೇಳಕ್ಕೆ ಬನ್ನಿ, ಭಾಗವಹಿಸಿ

    ಇಂದಿನಿಂದ 2 ದಿನ `ಪಬ್ಲಿಕ್ ಎಜುಕೇಷನ್ ಎಕ್ಸ್‌ಪೋ’- ಸ್ನಾತಕೋತ್ತರ ಪದವಿ ಶೈಕ್ಷಣಿಕ ಮೇಳಕ್ಕೆ ಬನ್ನಿ, ಭಾಗವಹಿಸಿ

    ಬೆಂಗಳೂರು: ಪದವಿ ಮುಗಿದ ನಂತರ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್ ಇದೆ..? ಈ ಕೋರ್ಸ್‍ಗಳಿಗೆ ಎಷ್ಟು ಖರ್ಚಾಗುತ್ತೆ ..? ಈ ಕಾಲೇಜುಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಇದ್ಯಾ..? ಈ ರೀತಿಯ ಪ್ರಶ್ನೆಗಳು ಪೋಷಕರಿಗೆ, ವಿದ್ಯಾರ್ಥಿಗಳಿಗೆ ಬರುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಪಬ್ಲಿಕ್ ಟಿವಿ ಪ್ರಸ್ತುತಿ ವಿದ್ಯಾಮಂದಿರದಲ್ಲಿ ಉತ್ತರ ಕಂಡುಕೊಳ್ಳಿ.

    ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ (Public Tv) ಪ್ರಸ್ತುತ ಪಡಿಸುತ್ತಿರುವ ವಿದ್ಯಾಮಂದಿರ (VidyaMandira) ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ವಿದ್ಯಾಮಂದಿರ 2022 ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವ ನಡೆಯಲಿದೆ.

    ಈ ಹಿಂದೆ ಎಸ್‍ಎಸ್‍ಎಲ್‍ಸಿ (SSLC), ಪಿಯುಸಿ (PUC) ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ವಿದ್ಯಾಪೀಠ’ಕ್ಕೆ ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳಿಂದ ಭಾರೀ ಸ್ಪಂದನೆ ಸಿಕ್ಕಿತ್ತು. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಮೇಳ (Education Expo) ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಂದು ಮತ್ತು ನಾಳೆ ವಿದ್ಯಾ ಮಂದಿರ ನಡೆಯುಲಿದೆ.

    ಶನಿವಾರ ಮತ್ತು ಭಾನುವಾರ ನಡೆಯಲಿರುವ ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ.

    ವಿದ್ಯಾಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‍ಆರ್ ರಂಗನಾಥ್, ಸಚಿವ ಅಶ್ವಥ್‍ನಾರಾಯಣ್, ಬಿಜಿಎಸ್ ಸಂಸ್ಥೆ ಎಂಡಿ ಪ್ರಕಾಶನಾಥ ಸ್ವಾಮೀಜಿ, ರೇವಾ ವಿವಿ ಪ್ರೋ-ಚಾನ್ಸಲರ್ ಉಮೇಶ್ ಎಸ್ ರಾಜು, ಪ್ರೋ ವಿಸಿ ವಿದ್ಯಾಶಂಕರ ಶೆಟ್ಟಿ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಿಕೆ ಮೋಹನ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

    ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೆಯೇ ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.. ಬಹುಮಾನ ಗೆಲ್ಲಿ.. ವಿದ್ಯಾಮಂದಿರವನ್ನ ಸದುಪಯೋಗಪಡಿಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

  • ಶನಿವಾರ ವಿದ್ಯಾಮಂದಿರಕ್ಕೆ ಚಾಲನೆ – ಸ್ನಾತಕೋತ್ತರ ಪದವಿ ಮೆಗಾ ಎಜ್ಯುಕೇಶನ್‌ ಎಕ್ಸ್‌ಪೋ

    ಶನಿವಾರ ವಿದ್ಯಾಮಂದಿರಕ್ಕೆ ಚಾಲನೆ – ಸ್ನಾತಕೋತ್ತರ ಪದವಿ ಮೆಗಾ ಎಜ್ಯುಕೇಶನ್‌ ಎಕ್ಸ್‌ಪೋ

    ಬೆಂಗಳೂರು:  ಪಬ್ಲಿಕ್‌ ಟಿವಿ ಆಯೋಜಿಸುತ್ತಿರುವ ವಿದ್ಯಾಮಂದಿರ-2022(Vidhya Mandira) ಸ್ನಾತಕೋತ್ತರ ಪದವಿ ಮೆಗಾ ಎಜ್ಯುಕೇಷನ್ ಎಕ್ಸ್‌ಪೋಗೆ(PG Education Expo) ಶನಿವಾರ ಚಾಲನೆ ಸಿಗಲಿದೆ.

    ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ʼವಿದ್ಯಾಮಂದಿರʼ ಶೈಕ್ಷಣಿಕ ಮೇಳಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‍ಆರ್ ರಂಗನಾಥ್, ಸಚಿವ ಅಶ್ವಥ್‍ನಾರಾಯಣ್, ಬಿಜಿಎಸ್ ಸಂಸ್ಥೆ ಎಂಡಿ ಪ್ರಕಾಶನಾಥ ಸ್ವಾಮೀಜಿ, ರೇವಾ ವಿವಿ ಪ್ರೋ-ಚಾನ್ಸಲರ್ ಉಮೇಶ್ ಎಸ್ ರಾಜು, ಪ್ರೋ ವಿಸಿ ವಿದ್ಯಾಶಂಕರ ಶೆಟ್ಟಿ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಡಿಕೆ ಮೋಹನ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

    ಶನಿವಾರ ಮತ್ತು ಭಾನುವಾರ ನಡೆಯಲಿರುವ ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನುಮಾಡಬೇಕು? ಯಾವ ಕೋರ್ಸ್? ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು? ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ.

    ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತದೆ. ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆ್ಯಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ.

    ದಿನಾಂಕ: ನವೆಂಬರ್ 12 ಮತ್ತು 13
    ಸ್ಥಳ: ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ, ಮಲ್ಲೇಶ್ವರಂ, ಬೆಂಗಳೂರು
    ಸಮಯ: ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ

    ಯಾರೆಲ್ಲ ಆಗಮಿಸಬಹುದು?:
    ಶಿಕ್ಷಣ ತಜ್ಞರು, ಹಣಕಾಸು ಸಲಹೆಗಾರರು, ಪೋಷಕರು, ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ಉದ್ಯೋಗಿಗಳು

    ಪ್ಲಾಟಿನಂ ಪ್ರಾಯೋಜಕರು:
    ರೇವಾ ಯುನಿವರ್ಸಿಟಿ, ಬಿಜಿಎಸ್ & ಎಸ್‍ಜೆಬಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಗಾರ್ಡನ್ ಸಿಟಿ ಯುನಿವರ್ಸಿಟಿ, ರಾಮಯ್ಯ ಯುನಿವರ್ಸಿಟಿ

    ಗೋಲ್ಡ್ ಪ್ರಾಯೋಜಕರು:
    ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಈಸ್ಟ್‌ ವೆಸ್ಟ್‌ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌, ಎಮ್ಸ್ ಇನ್‍ಸ್ಟಿಟ್ಯೂಷನ್, ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ಸಿ ಗ್ರೂಪ್ ಇನ್‍ಸ್ಟಿಟ್ಯೂಷನ್

    ಸಿಲ್ವರ್ ಪ್ರಾಯೋಜಕರು:
    ಕೆಎಲ್‍ಇ ಟೆಕ್ನಾಲಜಿಕಲ್ ಯುನಿವರ್ಸಿಟಿ, ಆರ್ ಆರ್ ಇನ್‍ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ, ರಾಮಯ್ಯ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಇಂಡಿಯನ್ ಅಕಾಡಮಿ ಆಫ್ ಇನ್‍ಸ್ಟಿಟ್ಯೂಷನ್, ರಾಮಯ್ಯ ಇನ್‍ಸ್ಟಿಟ್ಯೂಷನ್ ಆಫ್ ಮೆನೆಜ್‍ಮೆಂಟ್, ಸಿಎಂಆರ್ ಯುನಿವರ್ಸಿಟಿ, ಆಚಾರ್ಯ ಬೆಂಗಳೂರು ಬ್ಯುಸಿನೆಸ್ ಯುನಿವರ್ಸಿಟಿ

    ಸ್ಪೆಷಲ್‌ ಪೆವಿಲಿಯನ್‌:
    ರಾಮಯ್ಯ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌

    ಕ್ರಿಯೇಟಿವ್‌ ಸ್ಟಾಲ್‌:
    ಆರ್‌ ಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ

    Live Tv
    [brid partner=56869869 player=32851 video=960834 autoplay=true]