Tag: ವಿದ್ಯತ್

  • ವಿದ್ಯುತ್ ಪ್ರವಹಿಸಿ ಜಾನುವಾರು ಸಾವು – ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

    ವಿದ್ಯುತ್ ಪ್ರವಹಿಸಿ ಜಾನುವಾರು ಸಾವು – ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

    ಮಡಿಕೇರಿ: ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಪ್ರವಹಿಸಿ ಜಾನುವಾರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಗಂಧದಕೋಟಿಯಲ್ಲಿ ನಡೆದಿದೆ.


    ಗಂಧದಕೋಟಿಯಿಂದ ಗೊಂದಿಬಸವನಹಳ್ಳಿಗೆ ತೆರಳುವ ಮಾರ್ಗದ ಕೆಎಂಟಿ ವಿದ್ಯಾಸಂಸ್ಥೆ ಬಳಿ ಈ ದುರ್ಘಟನೆ ನಡೆದಿದೆ. ಮುಖ್ಯರಸ್ತೆ ಬದಿಯಲ್ಲಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್ ಬಳಿ ಮೂರು ಜಾನುವಾರುಗಳು ಮೇಯುತ್ತಿದ್ದವು. ಈ ಸಂದರ್ಭ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಪ್ರವಹಿಸಿದೊಡನೆ ಎರಡು ಜಾನುವಾರುಗಳು ಪಾರಾಗಿದೆ. ಆದರೆ ಗೊಂದಿಬವನಹಳ್ಳಿಯ ಮಂಜುನಾಥ್ ಎಂಬವರಿಗೆ ಸೇರಿದ 2 ವರ್ಷ ಪ್ರಾಯದ ಸಿಂಧಿ ಹಸು ಸ್ಥಳದಲ್ಲೇ ಮೃತಪಟ್ಟಿದೆ.

    ಘಟನೆಯನ್ನು ಕಂಡ ಸ್ಥಳೀಯರು ಸೆಸ್ಕಾಂಗೆ ಕರೆಮಾಡಿ ವಿದ್ಯುತ್ ಕಡಿತಗೊಳಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಜನನಿಬಿಡ ಪ್ರದೇಶದಲ್ಲಿ ತೆರೆದ ಸ್ಥಿತಿಯಲ್ಲಿ ಟ್ರಾನ್ಸ್ ಫಾರ್ಮರ್ ಇರುವುದು ಅಪಾಯಕಾರಿ ಬೆಳವಣಿಗೆ. ಕೂಡಲೇ ಟ್ರಾನ್ಸ್ ಫಾರ್ಮರ್ ಸುತ್ತಲು ತಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿ ಪರಿಹಾರ ಕೊಡುವಂತೆ ಸೆಸ್ಕಾಂಗೆ ಮನವಿ ಮಾಡಿದ್ದಾರೆ. 40 ಸಾವಿರ ಮೌಲ್ಯದ ಜಾನುವಾರು ಕಳೆದುಕೊಂಡ ಮಾಲೀಕರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಮಾಜಿ ಗ್ರಾಪಂ ಸದಸ್ಯ ಡಿ.ಎಸ್.ಹರೀಶ್, ಲೋಕೇಶ್, ಪುಟ್ಟಸ್ವಾಮಿ ಮತ್ತಿತರರು ಆಗ್ರಹಿಸಿದ್ದಾರೆ.

  • ಬಸ್ಸಿಗೆ ವಿದ್ಯುತ್ ತಂತಿ ತಗುಲಿ ಐವರು ದಾರುಣ ಸಾವು

    ಬಸ್ಸಿಗೆ ವಿದ್ಯುತ್ ತಂತಿ ತಗುಲಿ ಐವರು ದಾರುಣ ಸಾವು

    ಚೆನ್ನೈ: ಖಾಸಗಿ ಬಸ್ಸಿಗೆ ವಿದ್ಯುತ್ ತಂತಿ ತಗುಲಿ ಅದರಲ್ಲಿದ್ದ ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಂಜಾವೂರ್ ನಲ್ಲಿ ನಡೆದಿದೆ.

    ತಿರವೈಯ್ಯೂರು ಕಡೆಗೆ ಚಲಿಸುತ್ತಿರುವ ಬಸ್ಸಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

    ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ರಸ್ತೆ ಮಾರ್ಗದಲ್ಲಿ ಚಲಿಸುತ್ತಿರುವ ಬಸ್ಸಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಅದರಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ, ಹಲವರು ಅಸ್ವಸ್ಥಗೊಂಡಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಕನಿಷ್ಠ ನಾಲ್ಕು ಪ್ರಯಾಣಿಕರು ವಿದ್ಯುತ್ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸುಮಾರು 50 ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಖಾಸಗಿ ಬಸ್ ಲಾರಿಯನ್ನು ಹಿಂದಿಕ್ಕಿ ಹಳ್ಳಕ್ಕೆ ಬಿದ್ದಿದೆ. ಆಗ ಪವರ್ ಕೇಬಲ್ ತಗುಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.