Tag: ವಿದೇಶಿ ಹಣ

  • ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

    ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

    ಬೆಂಗಳೂರು/ಮಂಗಳೂರು: ಧರ್ಮಸ್ಥಳ ವಿಷಯದಲ್ಲಿ (Dharmasthala Case) ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳಿಗೆ (YouTubers) ವಿದೇಶದಿಂದ ಹಣ (Foreign Fund) ಹರಿದುಬಂದಿದೆ ಅನ್ನೋ ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿರೋ ಬೆನ್ನಲ್ಲೇ ದಾಖಲೆಗಳ ಪರಿಶೀಲನೆ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ಅಮಿತ್ ಶಾ (Amit Shah) ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಬೆಂಗಳೂರಿನ ಇ.ಡಿ (ED) ಅಧಿಕಾರಿಗಳು ಈಗ ಯೂಟ್ಯೂಬರ್‌ಗಳ ಆದಾಯದ ಮೂಲ ಕೆದಕುತ್ತಿದ್ದಾರೆ.

    ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ದೇವಸ್ಥಾನದ ಪಾವಿತ್ರ್ಯತೆ ಉಳಿಸುವ ಸಲುವಾಗಿ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವುದೇ ವ್ಯಕ್ತಿಗತವಾಗಿ ನಾನು ಪತ್ರ ಬರೆದಿಲ್ಲ ಅಂದಿದ್ದಾರೆ. ಇನ್ನು, ಶಾಸಕ ಭರತ್ ಶೆಟ್ಟಿ ಮಾತಾಡಿ, ಎನ್‌ಐಎ ಅಥವಾ ಇಡಿ ತನಿಖೆಯಾದ್ರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಮಗಳು ಅನನ್ಯಾ ಭಟ್ ಇದ್ದಿದ್ದು ಸತ್ಯ: ಸುಜಾತಾ ಭಟ್

    ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ಯೂಟ್ಯೂಬರ್ ಸಮೀರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್‌ಪಿಗೆ ದೂರು ಕೊಟ್ಟಿದ್ದಾರೆ. ಇನ್ನೊಂದೆಡೆ ಭಜರಂಗದಳ ಕಾರ್ಯಕರ್ತ ತೇಜಸ್ ಗೌಡ ಕೂಡ ಡಿಜಿ ಕಚೇರಿಯಲ್ಲಿ ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಣ ಹಂಚಿಕೆ ಆರೋಪ – ಕಾಂಗ್ರೆಸ್ ನಾಯಕರ ವಿರುದ್ಧ ಆಯೋಗಕ್ಕೆ ದೇವರಾಜೇಗೌಡ ದೂರು

  • ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್‌ – ಭರತ್ ಶೆಟ್ಟಿ ಬಾಂಬ್‌

    ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶದಿಂದ ಫಂಡಿಂಗ್‌ – ಭರತ್ ಶೆಟ್ಟಿ ಬಾಂಬ್‌

    – ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ ಎಂದ ಬಿಜೆಪಿ ಶಾಸಕ

    ಬೆಂಗಳೂರು: ಧರ್ಮಸ್ಥಳ (Dharmasthala) ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ ಬಳಕೆ ಆಗಿದೆ ಅನ್ನೋದು ನಮ್ಮ ಗುಮಾನಿ ಎಂದು ಶಾಸಕ ಡಾ.ಭರತ್ ಶೆಟ್ಟಿ (Bharath Shetty) ಹೇಳಿದ್ದಾರೆ.

    ವಿಧಾನಸೌಧ ಆವರಣದಲ್ಲಿ ʻಪಬ್ಲಿಕ್‌ ಟಿವಿʼ (Public TV- ಜೊತೆಗೆ ಮಾತನಾಡಿದ ಅವರು, ಇಡಿ ಅಥವಾ ಎನ್‌ಐಎ ತನಿಖೆಗೆ ಸಾಕಷ್ಟು ಒತ್ತಾಯ ಕೇಳಿಬರ್ತಿದೆ. ನಮ್ಮ ಕೋಟಾ ಶ್ರೀನಿವಾಸ ಪೂಜಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ವಿದೇಶಿ ಹಣ (Foreign Fund) ಬಳಕೆ ಆಗಿದೆ ಅನ್ನೋದು ನಮ್ಮ ಗುಮಾನಿ. ಕೆಲವು ನಂಬಲರ್ಹ ಮೂಲಗಳಿಂದ ಫಾರಿನ್ ಫಂಡ್ ಬಂದಿದೆ ಅಂತ ನಮಗೆ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

    ಎನ್ಐಎ (NIA) ಅಥವಾ ಇಡಿ ತನಿಖೆಯಾದ್ರೆ ಯಾರೆಲ್ಲರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಅನ್ನೋದು ಗೊತ್ತಾಗುತ್ತೆ. ಈಗಾಗಲೇ ಷಡ್ಯಂತ್ರ ಇದೆ ಅಂತ ನಾವೂ ಹೇಳ್ತಿದೀವಿ, ಕಾಂಗ್ರೆಸ್‌ನವ್ರೂ ಹೇಳ್ತಿದ್ದಾರೆ. ಆದ್ದರಿಂದ ಇಡಿ ಅಥವಾ ಎನ್‌ಐಎ ತನಿಖೆಗೆ ಕೊಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್ಸು ಹತ್ತುವ ವೇಳೆ ಬಾಗಿಲು ಬಂದ್‌- ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು

    ಇನ್ನೂ ಸೌಜನ್ಯ ಪ್ರಕರಣದಲ್ಲೂ ನ್ಯಾಯ ಸಿಗಬೇಕು. ಕೆಲವರು ಸೌಜನ್ಯ ಹತ್ಯೆ ಬಗ್ಗೆ ದಾಖಲೆ ಇದೆ, ಅಂತಾರಲ್ಲ ಅವರು ಎಸ್ಐಟಿಗೆ ಅದನ್ನು ಕೊಡಲಿ. ಎಸ್ಐಟಿ ಅವರಿಗೆ ಸೌಜನ್ಯ ಕೇಸ್ ತನಿಖೆ ಮಾಡಲು ಅವಕಾಶ ಇದ್ರೆ ತನಿಖೆ ಮಾಡಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೇ ತಿಮರೋಡಿ ಬಂಧನವಾಗದೇ ತನಿಖೆ ನಡೆಯಬಾರದು: ಮಾಜಿ ಸಚಿವ ಅಭಯಚಂದ್ರ ಜೈನ್

    ನ್ನೂ ಧರ್ಮಸ್ಥಳ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಹೆಸರೂ ಇದರಲ್ಲಿ ಕೇಳಿಬರ್ತಿದೆ. ಸೆಂಥಿಲ್, ಸ್ಟಾಲಿನ್ ಅವರಿಗೆ ಮೆಸೇಂಜರ್ ಆಗಿದ್ದಾರೆ. ಅವರು ಹಿಂದೂ ಧರ್ಮದ ವಿರುದ್ಧ ಹಲವು ಕಡೆ ಭಾಷಣ ಮಾಡಿದ್ದಾರೆ. ಧರ್ಮಸ್ಥಳ ವಿಚಾರದಲ್ಲೂ ಅವರ ಪಾತ್ರ ಇರುವ ಅನುಮಾನ ಇದೆ. ಎನ್ಐಎ ತನಿಖೆ ನಡೆದರೆ ಈ ವಿಚಾರವನ್ನೂ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.