Tag: ವಿದೇಶಿ ಪ್ರವಾಸ

  • ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    ನವದೆಹಲಿ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಘಾನಾ ದೇಶದ ರಾಷ್ಟ್ರೀಯ ಗೌರವ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ (Officer Of The Order Of The Star) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    5 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲು ಘಾನಾ (Ghana) ದೇಶಕ್ಕೆ ಭೇಟಿ ನೀಡಿದ್ದಾರೆ. 30 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ. ಈ ಸಂದರ್ಭದಲ್ಲಿ ಪ್ರಭಾವಶಾಲಿ ಜಾಗತಿಕ ನಾಯಕ ಎಂದು ಗುರುತಿಸಿ ಘಾನಾದ ಅಧ್ಯಕ್ಷ ಜಾನ್ ಡ್ರಾಮಣಿ ಮಹಾಮ (John Dramani Mahama) ಅವರು ಮೋದಿಗೆ ರಾಷ್ಟ್ರೀಯ ಗೌರವ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ಇದನ್ನೂ ಓದಿ: ಕೈಕೊಟ್ಟು ಬೇರೆ ಮದುವೆಯಾಗಲು ನಿರ್ಧರಿಸಿದ ಪ್ರೇಯಸಿ – ಲಾಡ್ಜ್‌ಗೆ ಕರೆಸಿ 20 ಬಾರಿ ಇರಿದು ಕೊಂದ ಪಾಗಲ್‌ ಪ್ರೇಮಿ

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಈ ಗೌರವ ಕೇವಲ ವೈಯಕ್ತಿಕ ಶ್ರಮದಿಂದಲ್ಲ, ಇದು 140 ಕೋಟಿ ಭಾರತೀಯರ ಸಾಧನೆ. ಅವರ ಪರವಾಗಿ ನಾನು ಇದನ್ನು ಸ್ವೀಕರಿಸಿದ್ದೇನೆ. ಈ ಪ್ರಶಸ್ತಿಯನ್ನು ರಾಷ್ಟ್ರದ ಯುವಜನತೆಗೆ ಅರ್ಪಿಸುತ್ತೇನೆ ಹಾಗೂ ಇದು ಭಾರತದ ಶ್ರೀಮಂತ ಪರಂಪರೆಯನ್ನು ಎತ್ತಿತೋರಿಸುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತು ಮೋದಿಯವರು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಘಾನಾದ ರಾಷ್ಟ್ರೀಯ ಪ್ರಶಸ್ತಿ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್’ ನೀಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

    ಈ ಪ್ರಶಸ್ತಿಯು ಭಾರತ ಮತ್ತು ಘಾನಾ ನಡುವಿನ ಸ್ನೇಹವನ್ನು ಗಟ್ಟಿಯಾಗಿರಿಸುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಒತ್ತು ನೀಡುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಈಡೇರದ ಸರ್ಕಾರದ ಭರವಸೆ | ಮತ್ತೆ ಸಾರಿಗೆ ನೌಕರರಿಂದ ಮುಷ್ಕರಕ್ಕೆ ಪ್ಲ್ಯಾನ್‌ – ಇಂದು ಮಹತ್ವದ ಸಭೆ

  • ಪ್ರಧಾನಿ ಮೋದಿ 38 ವಿದೇಶಿ ಪ್ರವಾಸ – 258 ಕೋಟಿ ರೂ. ಖರ್ಚು

    ಪ್ರಧಾನಿ ಮೋದಿ 38 ವಿದೇಶಿ ಪ್ರವಾಸ – 258 ಕೋಟಿ ರೂ. ಖರ್ಚು

    – ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ
    – ಅಮೆರಿಕದ ಒಂದೇ ಪ್ರವಾಸಕ್ಕೆ 22 ಕೋಟಿ ರೂ. ವೆಚ್ಚ

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು 2022ರ ಮೇ ತಿಂಗಳಿನಿಂದ 2024ರ ಡಿಸೆಂಬರ್‌ವರೆಗೆ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದು, ಈ ಪ್ರವಾಸಗಳಿಗೆ ಸುಮಾರು 258 ಕೋಟಿ ರೂ. ಖರ್ಚಾಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ. ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ (Pabitra Margherita) ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಈ ಉತ್ತರವನ್ನು ನೀಡಿದ್ದಾರೆ.

    ಕೇಂದ್ರ ಸರ್ಕಾರವು ಒದಗಿಸಿದ ದತ್ತಾಂಶದಲ್ಲಿ ಪ್ರಧಾನಮಂತ್ರಿ ಮೋದಿ ಅವರ ವಿದೇಶಿ ಪ್ರವಾಸಗಳ (Foreign visits) ಖರ್ಚು ವೆಚ್ಚವನ್ನು ದೇಶವಾರು ವಿಂಗಡಿಸಿದೆ. ಈ ಪ್ರವಾಸಗಳಲ್ಲಿ ಅಧಿಕೃತ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಇತರರ ಖರ್ಚು ಸೇರಿದೆ. ಇದನ್ನೂ ಓದಿ: ‘ಘಜಿನಿ 2’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ‘ಸಿಕಂದರ್’ ಡೈರೆಕ್ಟರ್

    ಈ 38 ಪ್ರವಾಸಗಳಲ್ಲಿ 2023ರ ಜೂನ್‌ನಲ್ಲಿ ಅಮೆರಿಕಕ್ಕೆ (America) ನೀಡಿದ ಭೇಟಿಯು ಅತ್ಯಂತ ದುಬಾರಿ ಪ್ರವಾಸವಾಗಿದೆ. ಈ ಪ್ರವಾಸಕ್ಕೆ ಒಟ್ಟು 22.89 ಕೋಟಿ ರೂ. ಖರ್ಚಾಗಿವೆ ಎಂದು ಸರ್ಕಾರ ತಿಳಿಸಿದೆ. 2024ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಮತ್ತೊಮ್ಮೆ ಭೇಟಿ ನೀಡಿದಾಗ 15.33 ಕೋಟಿ ರೂ. ಖರ್ಚಾಗಿತ್ತು ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಸಿಬಿಐ ಮೂಲಕವೇ ಹನಿಟ್ರ‍್ಯಾಪ್ ತನಿಖೆಯಾಗಲಿ – ಗೃಹ ಸಚಿವರಿಗೆ ಯತ್ನಾಳ್ ಪತ್ರ

    ಪ್ರವಾಸಗಳ ಪಟ್ಟಿಯು 2022ರ ಮೇ ತಿಂಗಳ ಜರ್ಮನಿ ಭೇಟಿಯಿಂದ ಆರಂಭವಾಗಿ 2024ರ ಡಿಸೆಂಬರ್‌ನಲ್ಲಿ ಕುವೈತ್ ಭೇಟಿಯವರೆಗೆ ವಿಸ್ತರಿಸಿದೆ. ಇತರ ಪ್ರಮುಖ ಪ್ರವಾಸಗಳಲ್ಲಿ ಜಪಾನ್(17 ಕೋಟಿ ರೂ.), ಇಟಲಿ(14.36 ಕೋಟಿ ರೂ.), ಪೋಲೆಂಡ್(10.10 ಕೋಟಿ ರೂ.), ರಷ್ಯಾ(5.34 ಕೋಟಿ ರೂ.) ಮತ್ತು ನೇಪಾಳ(80 ಲಕ್ಷ ರೂ.) ವೆಚ್ಚವಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್‌ ಆಗಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ: ಡಿಕೆಶಿ

    ಪ್ರಧಾನಮಂತ್ರಿ ಮೋದಿ ಅವರ ಪ್ರವಾಸಗಳ ಖರ್ಚನ್ನು ಹೋಲಿಕೆ ಮಾಡುವ ಸಲುವಾಗಿ, ಸರ್ಕಾರವು 2014ರ ಮೊದಲಿನ ಕೆಲವು ಪ್ರವಾಸಗಳ ದತ್ತಾಂಶವನ್ನು ಸಹ ಒದಗಿಸಿದೆ. 2011ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ (Manmohan Singh) ಅಮೆರಿಕಕ್ಕೆ ಭೇಟಿ ನೀಡಿದಾಗ 10.74 ಕೋಟಿ ರೂ. ಖರ್ಚಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ, ವ್ಯಕ್ತಿ ವಶಕ್ಕೆ

    2013ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದಾಗ 9.95 ಕೋಟಿ ರೂ., ಫ್ರಾನ್ಸ್‌ಗೆ 8.33 ಕೋಟಿ ರೂ. ಮತ್ತು ಜರ್ಮನಿಗೆ 6.02 ಕೋಟಿ ರೂ. ಖರ್ಚಾಗಿತ್ತು. ಈ ದತ್ತಾಂಶಗಳನ್ನು ಹಣದುಬ್ಬರ ಅಥವಾ ಕರೆನ್ಸಿ ಮೌಲ್ಯದ ಏರಿಳಿತಕ್ಕೆ ಹೊಂದಿಸದೇ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    ಈ ಮಾಹಿತಿ ಸಂಸತ್ತಿನಲ್ಲಿ ಬಹಿರಂಗಗೊಂಡ ನಂತರ, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿವೆ. ಈ ಪ್ರವಾಸಗಳಿಂದ ಆಗಿರುವ ಪ್ರಯೋಜನಗಳಾದರೂ ಏನು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

  • ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

    ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಮೊದಲ ಈಜಿಪ್ಟ್ ಪ್ರವಾಸದಲ್ಲಿ 11ನೇ ಶತಮಾನದಲ್ಲಿ ನಿರ್ಮಾಣವಾದ ಅಲ್-ಹಕೀಮ್ ಮಸೀದಿಗೆ (Al-Hakim Mosque) ಭೇಟಿ ನೀಡಲಿದ್ದಾರೆ. ಮತ್ತು ಮೊದಲ ವಿಶ್ವ ಯುದ್ಧದ ಅವಧಿಯಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಮಡಿದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ಸೋಮವಾರ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಈಜಿಪ್ಟ್ ಪ್ರವಾಸ (USA, Egypt Tour) ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜೂನ್ 24 ಮತ್ತು 25 ರಂದು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಇದು ಈಜಿಪ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದ್ದು, 1997ರ ಬಳಿಕ ಈಜಿಪ್ಟ್‌ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿಯೂ ಆಗಿದ್ದಾರೆ ಎಂದರು.

    ಈ ವರ್ಷದ ಗಣರಾಜೋತ್ಸವದಲ್ಲಿ ಈಜಿಪ್ಟ್ ಪ್ರಧಾನಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು, ಆನಂತರ ಎರಡು ದೇಶಗಳ ನಡುವಿನ ಒಡನಾಟ ಹೆಚ್ಚಿದೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಜಿಪ್ಟ್‌ಗೆ ಭೇಟಿ ನೀಡಿದ್ದರು. ಈಜಿಪ್ಟ್‌ನ ಮೂರ್ನಾಲ್ಕು ಮಂದಿ ಸಚಿವರು ತಮ್ಮ ನಿಯೋಗದೊಂದಿಗೆ ಭಾರತಕ್ಕೆ ಬಂದಿದ್ದರು. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

    ಕೈರೋ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಭಾರತದ ಘಟಕದೊಂದಿಗೆ ಸಂವಾದ ನಡೆಸಲಿದ್ದಾರೆ, ನಂತರ ಈಜಿಪ್ಟ್‌ನಲ್ಲಿರುವ ಸಣ್ಣ ಭಾರತೀಯ ಸಮುದಾಯದೊಂದಿಗೆ ಸಭೆ ನಡೆಸಲಿದ್ದಾರೆ. ಈಜಿಪ್ಟ್‌ನ ಕೆಲವು ಪ್ರಮುಖ ಗಣ್ಯರನ್ನ ಭೇಟಿ ಮಾಡಿದ ಬಳಿಕ ಅವರು ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ.

    ಅಲ್-ಹಕೀಮ್ ಮಸೀದಿ (Al-Hakim Mosque) 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಸದ್ಯ ಮತ್ತು ಬೊಹ್ರಾ ಸಮುದಾಯದಿಂದ ನವೀಕರಿಸಲಾಗಿದೆ. ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದ ಬಳಿಕ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮಹಾಯುದ್ಧದಲ್ಲಿ (World War) ಈಜಿಪ್ಟ್‌ಗಾಗಿ ಹೋರಾಡಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ

    ಬಳಿಕ ಪ್ರಧಾನಿ ಮೋದಿ ಈಜಿಪ್ಟ್ ಅಧ್ಯಕ್ಷರನ್ನ ಭೇಟಿ ಮಾಡಲಿದ್ದಾರೆ. ಇಲ್ಲಿ ಈಜಿಪ್ಟ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು, ವಿವಿಧ ಎಂಒಯುಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಈ ಒಪ್ಪಂದ ಎರಡು ದೇಶಗಳ‌ ನಡುವಿನ ವ್ಯಾಪಾರ, ಆರ್ಥಿಕತೆಗೆ ಶಕ್ತಿ ತುಂಬಲಿದೆ ಎಂದು ಕ್ವಾತ್ರಾ ಹೇಳಿದರು.

  • ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ

    ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ

    ಚೆನ್ನೈ: ವಿದೇಶ ಪ್ರವಾಸದಲ್ಲಿದ್ದ (Foreign Trip) ತಮಿಳಿನ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಾಲು ಮುರಿದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ.

    ಇತ್ತೀಚೆಗಷ್ಟೇ ವಿದೇಶಕ್ಕೆ ತೆರಳಿದ್ದ ದಕ್ಷಿಣ ಭಾರತದ ಹೆಸರಾಂತ ಸಿನಿಮಾ ತಾರೆ ತ್ರಿಶಾ ಅಪಘಾತದಲ್ಲಿ (Accident) ಕಾಲು ಮುರಿದಿದ್ದು, ಸದ್ಯ ಮನೆಗೆ ಮರಳಿದ್ದಾರೆ. ಇದನ್ನೂ ಓದಿ: ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ನಟಿ ತಮ್ಮ ಕಾಲಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಅಪಘಾತವಾದ ಕಾರಣ ವೆಕೇಶನ್‌ನಿಂದ ವಾಪಸ್ ಬರಬೇಕಾಯಿತು ಎಂದಿದ್ದಾರೆ. ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ, ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಟಿಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಎರಡು ದಶಕಗಳಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ತ್ರಿಶಾ, ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ವಯಸ್ಸು 40 ಸಮೀಪಿಸುತ್ತಿದ್ದರೂ ಯುವ ನಟಿಯರಿಗೂ ಕಮ್ಮಿಯಿಲ್ಲದ ನಟಿ, ಸ್ಟಾರ್ ಹೀರೋಯಿನ್ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿರುವ `ಪೊನ್ನಿಯನ್ ಸೆಲ್ವನ್’ (Ponniyin Selvan) ಭಾಗ-1 ಚಿತ್ರವು ಭರ್ಜರಿ ಪ್ರದರ್ಶನ ಕಾಣ್ತಿದ್ದು, ಈಗಾಗಲೇ ಸುಮಾರು 500 ಕೋಟಿ ಬಾಚಿಕೊಂಡಿದೆ.

    ಮಲಯಾಳಂ ಸ್ಟಾರ್ ಮೋಹನ್ ಲಾಲ್ (Mohan Lal) ಅವರೊಂದಿಗೆ ನಟಿಸಿರುವ `ರಾಮ್’ ಮಲಯಾಳಂ (Malayalam) ಸಿನಿಮಾದ (Cinema) ಶೂಟಿಂಗ್ ಮುಗಿಸಿದ ತ್ರಿಶಾ ಯುರೋಪಿಯನ್ ದೇಶಗಳಿಗೆ ಪ್ರವಾಸ ಹೋಗಿದ್ದರು. ಈ ವೇಳೆ ಕಾಲಿಗೆ ಪೆಟ್ಟಾಗಿದ್ದು, ಮನೆಗೆ ವಾಪಸ್ಸಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ಮೋದಿ ವಿದೇಶಿ ಪ್ರವಾಸಕ್ಕೆ 517 ಕೋಟಿ ಖರ್ಚು, 5 ವರ್ಷದಲ್ಲಿ 58 ದೇಶಗಳಿಗೆ ಭೇಟಿ

    ಪ್ರಧಾನಿ ಮೋದಿ ವಿದೇಶಿ ಪ್ರವಾಸಕ್ಕೆ 517 ಕೋಟಿ ಖರ್ಚು, 5 ವರ್ಷದಲ್ಲಿ 58 ದೇಶಗಳಿಗೆ ಭೇಟಿ

    – ರಾಜ್ಯ ಸಭೆಗೆ ವಿದೇಶಾಂಗ ಸಚಿವಾಲಯದ ಮಾಹಿತಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದು, ವಿದೇಶಿ ಪ್ರವಾಸಗಳಿಗೆ ಪ್ರಧಾನಿ ಮೋದಿಯವರ ಖರ್ಚು, ವೆಚ್ಚದ ಕುರಿತು ತಿಳಿಸಿದೆ.

    ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರುಳೀಧರನ್ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. 2015ರಿಂದ ಪ್ರಧಾನಿ ನರೇಂದ್ರ ಮೋದಿಯವರು 58 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು 517.82 ಕೋಟಿ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ದೇಶಗಳ ಹೆಸರುಗಳನ್ನೂ ಸಹ ಪಟ್ಟಿ ಮಾಡಲಾಗಿದ್ದು, ಮಾರ್ಚ್ 2015ರಿಂದ ನವೆಂಬರ್ 2019ರ ವರೆಗೆ ಭೇಟಿ ನೀಡಿದ ದೇಶಗಳು, ಒಪ್ಪಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಸಹಿ ಹಾಕಲಾಗಿರುವ ಒಪ್ಪಂದಗಳ ಕುರಿತು ಮಾಹಿತಿ ನೀಡಲಾಗಿದೆ.

    ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸದ ಕುರಿತು ಸಚಿವರು ವಿವರವಾದ ಉತ್ತರ ನೀಡಿದ್ದು, ವಿವಿಧ ದೇಶಗಳಿಗೆ ಅವರು ನೀಡಿದ ಭೇಟಿನಿಂದಾಗಿ ಭಾರತದ ವಿದೇಶಿ ಸಂಬಂಧ ವೃದ್ಧಿಸಿದೆ. ವಾಣಿಜ್ಯ, ಹೂಡಿಕೆ, ತಂತ್ರಜ್ಞಾನ, ಕಡಲತೀರ, ಬಾಹ್ಯಾಕಾಶ ಹಾಗೂ ರಕ್ಷಣಾ ವಲಯ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸಂಬಂಧ ಸುಧಾರಿಸಿದೆ ಎಂದು ವಿವರಿಸಿದರು.

    ಪ್ರಧಾನಿಗಳ ವಿದೇಶ ಪ್ರವಾಸದ ಸಮಯದಲ್ಲಿ ಪರಸ್ಪರ ಚರ್ಚೆ, ಇತರ ದೇಶಗಳೊಂದಿಗಿನ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಭಾರತದ ದೃಷ್ಟಿಕೋನವನ್ನು ಹೆಚ್ಚಿಸಿದೆ. ಈ ಮೂಲಕ ನಮ್ಮ ಜನರ ಆರ್ಥಿಕ ಬೆಳವಣಿಗೆ ಹಾಗೂ ಯೋಗಕ್ಷೇಮವನ್ನು ಉತ್ತೇಜಿಸಲು ಭಾರತದ ಅಭಿವೃದ್ಧಿ ಕಾರ್ಯಸೂಚಿಗೆ ಕೊಡುಗೆ ನೀಡಿವೆ ಎಂದು ಮಾಹಿತಿ ನೀಡಿದರು.

    ಹವಾಮಾನ ಬದಲಾವಣೆ, ದೇಶೀಯ ಅಪರಾಧ ಮತ್ತು ಭಯೋತ್ಪಾದನೆ, ಸೈಬರ್ ಸುರಕ್ಷತೆ ಹಾಗೂ ಪರಮಾಣು ಪ್ರಸರಣ ಸೇರಿದಂತೆ ಬಹುಪಕ್ಷೀಯ ಮಟ್ಟದಲ್ಲಿ ಜಾಗತಿಕ ಕಾರ್ಯಸೂಚಿ ರೂಪಿಸುವಲ್ಲಿ ಭಾರತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಅಲ್ಲದೆ ಅಂತರಾಷ್ಟ್ರೀಯ ಸೌರ ಒಕ್ಕೂಟದಂತಹ ಜಾಗತಿಕ ಸಮಸ್ಯೆಗಳಿಗೆ ತನ್ನದೇಯಾದ ವಿಶಿಷ್ಟ ಕಾರ್ಯಕ್ರಮಗಳನ್ನು ಜಗತ್ತಿಗೆ ನೀಡುತ್ತಿದೆ. ವಿಪತ್ತು ಸ್ಥಿತಿಸ್ಥಾಪಕ ಮೂಲ ಸೌಕರ್ಯಕ್ಕಾಗಿ ಒಕ್ಕೂಟವನ್ನು ರಚಿಸಿದೆ ಎಂದು ಅವರು ತಿಳಿಸಿದರು.

  • ಸೋಂಕಿತನ ಹೆಸರು ಬಹಿರಂಗ- ಅಧಿಕಾರಿಗಳ ವಿರುದ್ಧ ದೂರು

    ಸೋಂಕಿತನ ಹೆಸರು ಬಹಿರಂಗ- ಅಧಿಕಾರಿಗಳ ವಿರುದ್ಧ ದೂರು

    ಮಡಿಕೇರಿ: ಕೊರೊನಾ ಮಹಾಮಾರಿ ಹೆಸರು ಕೇಳಿದರೆ ಸಾಕು ಜನರು ಬೆಚ್ಚಿ ಬೀಳುತ್ತಿದ್ದು, ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಕೊರೊನಾ ಸೋಂಕಿತ ವ್ಯಕ್ತಿ ನೋಡುವ ಭಾವನೆ ಭಿನ್ನವಾಗುತ್ತಿಲ್ಲ. ಈ ಕಾರಣದಿಂದಲೇ ಸರ್ಕಾರ ಕೂಡ ಸೋಂಕಿತನ ಹೆಸರು ಬಹಿರಂಗ ಮಾಡುವುದಿಲ್ಲ. ಆದರೆ ಹೊರದೇಶದಿಂದ ಕೊಡಗಿಗೆ ಬಂದ ಸೋಂಕಿತರ ಹೆಸರನ್ನು ಅಧಿಕಾರಿಗಳೇ ಬಹಿರಂಗಗೊಳಿಸುವ ಮೂಲಕ ಎಡವಟ್ಟು ಮಾಡಿದ್ದಾರೆ.

    ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ವಿಸ್ತಾರ ಮಾಡುತ್ತಲೇ ಇದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಪಾಲಿಗಂತೂ ಭಯಾನಕವಾಗಿ ಪರಿಣಮಿಸುತ್ತಿದೆ. ಈಗಾಗಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಜನರು ಕಳಂಕಿತನಾಗಿ ನೋಡುತ್ತಿದ್ದಾರೆ. ಆದ್ದರಿಂದಲೇ ಸರ್ಕಾರ ಸೋಂಕಿತನ ಹೆಸರನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದೆ. ಆದರೆ ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಮಡಿಕೇರಿ ತಾಲೂಕಿನ ನಾಪೋಕ್ಲಿಗೆ ಬಂದಿದ್ದರು. ನಾಪೋಕ್ಲಿನ ತಮ್ಮ ಮನೆಯಲ್ಲಿರಬೇಕಾದ ವ್ಯಕ್ತಿ ವಿರಾಜಪೇಟೆ ಪಟ್ಟಣದ ಮೀನುಪೇಟೆಯಲ್ಲಿದಿದ್ದರು. ವಿಷಯ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ವ್ಯಕ್ತಿಗೆ ಪಾಸಿಟಿವ್ ಇರುವುದು ದೃಢವಾಗಿತ್ತು. ಇದರಿಂದ ವಿರಾಜಪೇಟೆ ಪಟ್ಟಣದ ಮೀನುಪೇಟೆಯನ್ನು ನಿಷೇಧಿತ ಪ್ರದೇಶವೆಂದು ಮಾಡಿದ್ದಾರೆ.

    ಅಲ್ಲದೇ ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಅಡಿ ಅಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡುವಾಗ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಇದರಿಂದ ಸೋಂಕಿತ ವ್ಯಕ್ತಿಯ ಸ್ನೇಹಿತರು, ಸಂಬಂಧಿಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ವಿರಾಜಪೇಟೆ ತಾಲೂಕು ಅಧಿಕಾರಿ, ಹೌದು ಹೆಸರು ಬಹಿರಂಗಪಡಿಸಬಾರದಿತ್ತು. ಇದು ಸ್ಥಳೀಯ ಆಡಳಿತದಿಂದ ತಪ್ಪಾಗಿದ್ದು, ಇನ್ಮುಂದೆ ಇಂತಹ ತಪ್ಪಾಗದಂತೆ ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವುದಕ್ಕೆ ಶಿಕ್ಷೆಯೂ ಆಗಲಿದೆ ಎಂದು ತಿಳಿಸಿದರು.

    ಸೋಂಕಿತ ವ್ಯಕ್ತಿ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ಮಡಿಕೇರಿ ತಾಲೂಕಿನ ನಾಪೋಕ್ಲಿನ ವಿಳಾಸ ನೀಡಿದ್ದು, ಬಳಿಕ ವಿರಾಜಪೇಟೆ ಪಟ್ಟಣಕ್ಕೆ ಬಂದು ನೆಲೆಸಿ ತಪ್ಪು ಮಾಡಿದ್ದಾನೆ. ಅಲ್ಲದೇ ವಿದೇಶದಿಂದ ಆಗಮಿಸಿದ್ದ ಆತ ಕೇರಳದಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ. ಇಂಥವರಿಂದಾಗಿ ಬೇರೆ ವ್ಯಕ್ತಿಗಳಿಗೆ ಹರಡಿದರೆ ಯಾರು ಜವಾಬ್ದಾರಿ. ಇದರಿಂದ ಬೇರೆಯವರಿಗೂ ತಕ್ಕ ಪಾಠವಾಗಬೇಕು ಎನ್ನುವ ಉದ್ದೇಶದಿಂದ ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ವಿರಾಜಪೇಟೆ ತಹಶೀಲ್ದಾರ್ ಹೇಳಿದ್ದಾರೆ.

  • ಚಳಿಯ ಭಯವಿದ್ದರೂ ವಿದೇಶ ಪ್ರಯಾಣಕ್ಕೆ ಓಕೆ ಎಂದ ಬಿಎಸ್‍ವೈ

    ಚಳಿಯ ಭಯವಿದ್ದರೂ ವಿದೇಶ ಪ್ರಯಾಣಕ್ಕೆ ಓಕೆ ಎಂದ ಬಿಎಸ್‍ವೈ

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿದೇಶ ಪ್ರಯಾಣಕ್ಕೆ ಕೊನೆಗೂ ಒಪ್ಪಿಗೆ ಸಿಕ್ಕಿದೆ. ಚಳಿಯ ಭಯದಿಂದ ಪ್ರವಾಸಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ಬಿಎಸ್‍ವೈ ಅವರೇ ಸ್ವತಃ ಪ್ರಯಾಣಕ್ಕೆ ನಿನ್ನೆ ಒಪ್ಪಿಗೆ ಸೂಚಿಸಿದ್ದಾರೆ.

    ಸ್ವಿಜರ್ಲ್ಯಾಂಡ್ ದಾವೋಸ್‍ನಲ್ಲಿ ಜನವರಿ 21ರಿಂದ 24ರ ತನಕ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಸಿಎಂ ಯಡಿಯೂರಪ್ಪ ರಾಜ್ಯದ ಪರವಾಗಿ ಭಾಗವಹಿಸಲಿದ್ದಾರೆ. ಸಿಎಂ ಬಿಎಸ್‍ವೈರೊಂದಿಗೆ ತೆರಳಿರುವ 13 ಮಂದಿ ತಂಡ ಕೂಡ ಸದ್ಯ ಅಂತಿಮವಾಗಿದೆ.

    ಬಿಎಸ್‍ವೈ ವಿದೇಶ ಪ್ರವಾಸಕ್ಕೆ 13 ಜನ ತಂಡ ಫಿಕ್ಸ್ ಆಗಿದ್ದು, ಅಧಿಕೃತ ಅಧಿಕಾರಿಗಳಲ್ಲದ ಗುಂಪಿನಲ್ಲಿ ಮೂವರು ಪ್ರಯಾಣ ಬೆಳಸಲಿದ್ದಾರೆ. ಸಿಎಂ ಬಿಎಸ್‍ವೈ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಿಎಂ ರಾಜಕೀಯ ಸಲಹೆಗಾರ ಕೂಡ ವಿದೇಶಕ್ಕೆ ತೆರಳಲಿದ್ದಾರೆ. ಉಳಿದಂತೆ ಅಧಿಕೃತ ಗ್ರೂಪ್‍ನಲ್ಲಿ ಮೂವರು ಐಎಎಸ್ ಅಧಿಕಾರಿಗಳು ಸೇರಿ ಆಪ್ತ ಕಾರ್ಯದರ್ಶಿಗಳು, ವಿವಿಧ ಅಧಿಕಾರಿಗಳು ಸೇರಿದಂತೆ 10 ಮಂದಿ ವಿದೇಶ ಪ್ರಯಾಣ ಮಾಡಲಿದ್ದಾರೆ. ಜ.19ರಂದು ಮಧ್ಯರಾತ್ರಿ ಸ್ವಿಜರ್ಲ್ಯಾಂಡ್‍ಗೆ ಬಿಎಸ್‍ವೈ ನೇತೃತ್ವದ 13 ಜನರ ತಂಡ ಪ್ರಯಾಣ ಬೆಳಸಲಿದ್ದು, ಜ.26ರ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

    ವಿಶ್ವ ಆರ್ಥಿಕ ಸಮ್ಮೇಳನಕ್ಕೆ ದೇಶದ ಮೂವರು ಮುಖ್ಯಮಂತ್ರಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಧ್ಯಪ್ರದೇಶದ ಸಿಎಂ ಕಮಲನಾಥ್ ಮತ್ತು ಕರ್ನಾಟಕದ ಸಿಎಂ ಯಡಿಯೂರಪ್ಪಗೆ ಆಹ್ವಾನವಿದೆ. ಆದರೆ ಚಳಿಯ ಕಾರಣ ನೀಡಿ ಯಡಿಯೂರಪ್ಪ ವಿದೇಶಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿತ್ತು. ಬಿಜೆಪಿ ಅಧಿಕಾರ ಇರುವ ರಾಜ್ಯಯೊಂದಕ್ಕೆ ಮಾತ್ರ ಆಹ್ವಾನ ನೀಡಲಾಗಿದ್ದು, ಇಂತಹ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಿಗೆ ಗೈರು ಹಾಜರಾದರೆ ಬೇರೆ ಅರ್ಥ ಬರುತ್ತದೆ ಎಂದು ದಾವೋಸ್‍ಗೆ ತೆರಳಲು ಸಿಎಮ ತೀರ್ಮಾನಿಸಿದ್ದಾರೆ ಎಂಂದು ಆಪ್ತ ಮೂಲಗಳು ತಿಳಿಸಿವೆ.

  • ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳುವ ಬಿಜೆಪಿ ಡಬಲ್ ಗೇಮ್ ತಂತ್ರವನ್ನು ಅನುಸರಿಸುತ್ತಿದೆ. ಮಾಜಿ ಸಿಎಂ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ತಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೆ ಸರ್ಕಾರದ ಹಣದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸಕ್ಕೆ ಸಚಿವರು ಹಾಗೂ ಅಧಿಕಾರಿಗಳು ಪತ್ನಿ ಸಮೇತ ಹೋಗುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ರಾಜ್ಯದಲ್ಲಿ ಉಂಟಾದ ನೆರೆಯಿಂದ ಜನರು ಸುಧಾರಿಸಿಕೊಂಡಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಪ್ರವಾಹದ ಹಾನಿಯಿಂದ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅವರ ಪತ್ನಿ, ಅಧಿಕಾರಿಗಳು ಹಾಗೂ ಆಪ್ತರ ವಲಯದ ಜೊತೆಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

    ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅವರ ಪತ್ನಿಯನ್ನು ಒಳಗೊಂಡಂತೆ ಒಟ್ಟು 9 ಜನರ ತಂಡಕ್ಕೆ ವಿದೇಶಿ ಪ್ರವಾಸದ ಪ್ಲ್ಯಾನ್ ಸಿದ್ಧವಾಗಿದೆ. ಒಟ್ಟು 10 ದಿನದ ಪ್ರವಾಸಕ್ಕೆ ಸರ್ಕಾರಿ ಹಣವನ್ನೆ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್ 6ರಿಂದ 17ರ ವರೆಗೆ ಚೀನಾದಲ್ಲಿ 6 ದಿನ, 4 ದಿನ ಲಂಡನ್ ಸುತ್ತಾಡಲಿದ್ದಾರೆ. ಈಗಾಗಲೇ ಫ್ಲೈಟ್ ಬುಕ್ ಆಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸೆಮಿನಾರ್ ನೆಪದಲ್ಲಿ ಎರಡು ದೇಶಗಳ ಪ್ರವಾಸಕ್ಕೆ ಸರ್ಕಾರದ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಸಚಿವರು, ಅಧಿಕಾರಿಗಳಿಗೆ ಸರ್ಕಾರಿ ಹಣವನ್ನು ಬಳಸಲಾಗುತ್ತಿದೆ. ಅವರೊಟ್ಟಿಗೆ ಬರುವ ಪತ್ನಿಯರಿಗೆ ವೈಯಕ್ತಿಯ ಹಣವನ್ನು ಭರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಯಾರೆಲ್ಲ ಹೋಗ್ತಾರೆ?
    ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅವರ ಪತ್ನಿ ಶೀಲ್ಪಾ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶಿ ಗೌರವ ಗುಪ್ತಾ, ಅವರ ಪತ್ನಿ ರೀನಾ ಗುಪ್ತಾ, ಜಗದೀಶ್ ಶೆಟ್ಟರ್ ಆಪ್ತ ಕಾರ್ಯದರ್ಶಿ ಧವಳೇಶ್ವರ್, ಎಂಎಸ್‍ಐಎಲ್ ಎಂಡಿ ಪ್ರಕಾಶ್, ಅವರ ಪತ್ನಿ, ಎಂಎಸ್‍ಐಎಲ್ ಅಧಿಕಾರಿ ಚಂದ್ರಪ್ಪ, ಹಾಗೂ ಪತ್ನಿ ವಿದೇಶ ಪ್ರವಾಸದ ಲಿಸ್ಟ್ ನಲ್ಲಿ ಇದ್ದಾರೆ.

    ಶೆಟ್ಟರ್‌ಗೆ ‘ಪಬ್ಲಿಕ್’ ಪ್ರಶ್ನೆ:
    *ಪ್ರಶ್ನೆ 1- ನೆರೆಯಿಂದ ಬೆಳಗಾವಿ ತತ್ತರಿಸಿ ಹೋಗಿದೆ. ಉಸ್ತುವಾರಿ ಸಚಿವರು ಹೇಗೆ ಹೋಗ್ತೀರಾ..?
    *ಪ್ರಶ್ನೆ 2 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಪತ್ನಿಯನ್ನು ಏಕೆ ಕರೆದುಕೊಂಡು ಹೋಗ್ತೀರಾ..?
    *ಪ್ರಶ್ನೆ 3 – ಪತ್ನಿಯ ಪ್ರವಾಸ ವೆಚ್ಚ ಸರ್ಕಾರ ಭರಿಸದಿದ್ದರೂ ಪತ್ನಿ ಜೊತೆಗೆ ಹೋಗುವುದು ಏಕೆ..?
    *ಪ್ರಶ್ನೆ 4 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಅಧಿಕಾರಿಗಳ ಪತ್ನಿಯರಿಗೆ ಏನು ಕೆಲಸ..?
    *ಪ್ರಶ್ನೆ 5 – ರಾಹುಲ್ ಗಾಂಧಿ ಇಂಡೋನೇಷ್ಯಾ ಖಾಸಗಿ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ..?
    *ಪ್ರಶ್ನೆ 6 – ಜೆಡಿಎಸ್ ಶಾಸಕರ ಮಲೇಷ್ಯಾ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ…?

  • ವಿದೇಶದಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಜೇಟ್ಲಿ ಮನೆಗೆ ತೆರಳಿದ ಮೋದಿ

    ವಿದೇಶದಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಜೇಟ್ಲಿ ಮನೆಗೆ ತೆರಳಿದ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದಿಂದ ವಾಪಸಾಗಿದ್ದು, ಇಂದು ಬೆಳಗ್ಗೆ ಮಾಜಿ ಹಣಕಾಸು ಸಚಿವ ದಿ.ಅರುಣ್ ಜೇಟ್ಲಿ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

    ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅರುಣ್ ಜೇಟ್ಲಿ ಅವರು ಮೃತಪಟ್ಟ ಮೂರು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅವರ ಮನೆಗೆ ತೆರಳಿದ್ದಾರೆ. ಪ್ರಧಾನಿ ಮೋದಿ ಫ್ರಾನ್ಸ್, ಯುಎಇ, ಬಹ್ರೇನ್ ಮೂರು ದೇಶಗಳ ಪ್ರವಾಸದಲ್ಲಿದ್ದಾಗ ಈ ಸುದ್ದಿ ತಿಳಿದಿತ್ತು. ಈ ವೇಳೆ ಅರುಣ್ ಜೇಟ್ಲಿ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಆಗ ಅವರ ಕುಟುಂಬಸ್ಥರು ಯಾವುದೇ ಕಾರಣಕ್ಕೂ ನಿಮ್ಮ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಬೇಡಿ ಎಂದು ತಿಳಿಸಿದ್ದರು.

    ಜೇಟ್ಲಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ನಡೆಸಲಾಗಿದ್ದು, ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ದೆಹಲಿಯಲ್ಲಿರುವ ಅರುಣ್ ಜೇಟ್ಲಿ ಅವರ ಮನೆಗೆ ತೆರಳಿ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾದರು.

    ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್‍ಗಳ ಮೂಲಕ ಅವರ ದೀರ್ಘ ಕಾಲಿನ ಸ್ನೇಹವನ್ನು ಸ್ಮರಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಒಟ್ಟೊಟ್ಟೊಗೆ ಬಂದಿದ್ದೆವು. ಉಗ್ರ ವಿದ್ಯಾರ್ಥಿ ನಾಯಕ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಕ್ಷಿಸುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದ್ದರು.

    ಅರುಣ್ ಜೇಟ್ಲಿ ಬಿಜೆಪಿಯೊಂದಿಗೆ ಬಿಡಿಸಲಾಗದ ನಂಟು ಹೊಂದಿದ್ದರು. ಅಲ್ಲದೆ, ನಮ್ಮ ಪಕ್ಷದಲ್ಲಿ ಹೆಚ್ಚು ಇಷ್ಟ ಪಡುವ ನಾಯಕರಾಗಿದ್ದರು. ಪಕ್ಷದ ಕಾರ್ಯಕ್ರಮಗಳನ್ನು ಮತ್ತು ಸಿದ್ಧಾಂತವನ್ನು ಸಮಾಜದ ವಿಶಾಲ ವ್ಯಾಪ್ತಿಗೆ ನಿರೂಪಿಸಬಲ್ಲವರಾಗಿದ್ದರು ಎಂದು ಟ್ವೀಟ್ ಮಾಡಿದ್ದರು.

    ಪ್ರಧಾನಿ ನರೇಂದ್ರ ಮೋದಿ ಬಹ್ರೇನ್‍ನಲ್ಲಿ ಭಾಷಣ ಮಾಡುವಾಗಲೂ ಸಹ ಭಾವುಕರಾಗಿದ್ದರು. ವಿದ್ಯಾರ್ಥಿ ಜೀವನದಿಂದಲೂ ನಾವಿಬ್ಬರೂ ಒಟ್ಟಿಗೆ ಬಂದಿದ್ದೇವೆ. ರಾಜಕೀಯದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಸಾವನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಭಾವುಕ ಭಾಷಣ ಮಾಡಿದ್ದರು.

    ಬಹ್ರೇನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ 15 ಸಾವಿರಕ್ಕೂ ಅಧಿಕ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ನಾನು ಕರ್ತವ್ಯಕ್ಕೆ ಬದ್ಧನಾಗಿರುವ ಮನುಷ್ಯ, ಬಹ್ರೇನ್‍ನಲ್ಲಿ ಉತ್ಸಾಹದ ವಾತಾವರಣವಿರುವಾಗ, ನಮ್ಮ ದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡ ನನ್ನ ಹೃದಯ ತೀವ್ರ ದುಃಖತಪ್ತವಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಸ್ನೇಹಿತರಿದ್ದೆವು. ಸಾರ್ವಜನಿಕ ಜೀವನದಲ್ಲಿ ನನ್ನೊಂದಿಗೆ ಒಟ್ಟಿಗೆ ಹೆಜ್ಜೆ ಹಾಕಿದ ಸ್ನೇಹಿತ, ಇಬ್ಬರೂ ಒಟ್ಟಿಗೆ ರಾಜಕೀಯ ಪಯಣ ಆರಂಭಿಸಿದ್ದೆವು. ನಾನು ಎಲ್ಲ ಸಮಯದಲ್ಲೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರೊಂದಿಗೆ ನಾನು ಹೋರಾಟಗಳನ್ನು ಎದುರಿಸಿದ್ದೇನೆ, ನಾನು ಕಂಡಿದ್ದ ಕನಸುಗಳನ್ನು ಈಡೇರಿಸಿದ್ದ ಆ ನನ್ನ ಸ್ನೇಹಿತ ಅರುಣ್ ಜೇಟ್ಲಿ, ದೇಶದ ಮಾಜಿ ಹಣಕಾಸು ಸಚಿವರು ನಿಧನರಾಗಿದ್ದಾರೆ ಎಂದು ಭಾಷಣವನ್ನು ಮಾಡಿದ್ದರು.

    ಇದನ್ನು ನಾನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನಾನು ಇಲ್ಲಿದ್ದೇನೆ. ಆದರೆ, ನನ್ನ ಸ್ನೇಹಿತ ನಮ್ಮನ್ನು ಬಿಟ್ಟು ಅಗಲಿದ್ದಾನೆ. ಆಗಸ್ಟ್ ತಿಂಗಳಲ್ಲಿ ನನ್ನ ಸಹೋದರಿ ಸುಷ್ಮಾ ಸ್ವರಾಜ್ ಅವರನ್ನು ಕಳೆದುಕೊಂಡಿದ್ದೇವೆ. ಇದೀಗ ನನ್ನ ಸ್ನೇಹಿತ ಅರುಣ್ ಜೇಟ್ಲಿಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದರು.

  • ಮೋದಿ ವಿದೇಶಿ ಪ್ರವಾಸ – ಮಾಲ್ಡೀವ್ಸ್, ಶ್ರೀಲಂಕಾಗೆ ಭೇಟಿ

    ಮೋದಿ ವಿದೇಶಿ ಪ್ರವಾಸ – ಮಾಲ್ಡೀವ್ಸ್, ಶ್ರೀಲಂಕಾಗೆ ಭೇಟಿ

    ನವದೆಹಲಿ: ಸತತ 2ನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಶನಿವಾರ ತಮ್ಮ ಮೊದಲ ವಿದೇಶ ಪ್ರವಾಸ ಆರಂಭಿಸಲಿದ್ದಾರೆ.

    2ನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದು, ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ಮೊದಲು ಭೇಟಿ ನೀಡಲಿದ್ದಾರೆ. ಆ ಬಳಿಕ ಚರ್ಚ್ ಮೇಲಿನ ಉಗ್ರರ ದಾಳಿಗೆ ನಲುಗಿದ ಶ್ರೀಲಂಕಾಗೆ ಮೋದಿ ಭಾನುವಾರ ಭೇಟಿ ನೀಡಲಿದ್ದಾರೆ. ತಮ್ಮ ವಿದೇಶಿ ಪ್ರವಾಸ ಬಗ್ಗೆ ಮಾತನಾಡಿರುವ ಮೋದಿ ಅವರು ಈ ಭೇಟಿಯಿಂದ ನೆರೆ ರಾಷ್ಟ್ರಗಳೊಂದಿಗೆ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.

    ವಿದೇಶಿ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಕೇರಳದ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಇತ್ತ ಭಾನುವಾರ ಬೆಳಗ್ಗೆ ಶ್ರೀಲಂಕಾಗೆ ತೆರಳಿರುವ ಮೋದಿ ಅವರು ಸಂಜೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ.

    ಮೇ 30ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ಮೋದಿ ಅವರು ಅಂದು ಬಿಮ್ ಸ್ಟೆಕ್ ರಾಷ್ಟ್ರಗಳಿಗೆ ಆಹ್ವಾನ ನೀಡಿದ್ದರು. ಈ ಬಿಮ್ಸ್ ಸ್ಟೆಕ್ಸ್ ದೇಶಗಳಲ್ಲಿ ಮಾಲ್ಡೀವ್ಸ್ ಇಲ್ಲದ ಕಾರಣ ಮೋದಿ ಮೊದಲ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ. ಉಳಿದಂತೆ ಮೇ 30 ರಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಸೇನಾ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.