Tag: ವಿದೇಶಾಂಗ ಸಚಿವೆ

  • ಫಸ್ಟ್ ಟೈಂ – ಉತ್ತರ ಕೊರಿಯಾದಲ್ಲಿ ವಿದೇಶಾಂಗ ಸಚಿವೆಯಾದ ಮಹಿಳೆ

    ಫಸ್ಟ್ ಟೈಂ – ಉತ್ತರ ಕೊರಿಯಾದಲ್ಲಿ ವಿದೇಶಾಂಗ ಸಚಿವೆಯಾದ ಮಹಿಳೆ

    ಸಿಯೋಲ್: ಉತ್ತರ ಕೊರಿಯಾ ತನ್ನ ಹಿರಿಯ ರಾಜತಾಂತ್ರಿಕ ಚೋ ಸೋನ್-ಹುಯಿ ಅವರನ್ನು ದೇಶದ ಮೊದಲ ಮಹಿಳಾ ವಿದೇಶಾಂಗ ಸಚಿವೆಯಾಗಿ ನೇಮಿಸಿದೆ.

    ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಆಗಾಗ ಬೆದರಿಕೆ ಒಡ್ಡುತ್ತಲೇ ಇರುವ ಹಾಗೂ ಅಮೆರಿಕದೊಂದಿಗಿನ ಮಾತುಕತೆಗೆ ನಿರ್ಲಕ್ಷ್ಯ ತೋರುತ್ತಿರುವ ಉತ್ತರ ಕೊರಿಯಾ ಈ ನಡುವೆಯೇ ಹೊಸ ಮಹಿಳಾ ವಿದೇಶಾಂಗ ಸಚಿವೆಯನ್ನು ನೇಮಕ ಮಾಡಿದೆ.

    ಈ ಹಿಂದೆ ಉತ್ತರ ಕೊರಿಯಾದ ಉಪ ವಿದೇಶಾಂಗ ಸಚಿವೆಯಾಗಿದ್ದ ಚೋ, ಮಾಜಿ ಮಿಲಿಟರಿ ಅಧಿಕಾರಿ ರಿ ಸನ್ ಗ್ವಾನ್ ಅವರ ಸ್ಥಾನವನ್ನು ತುಂಬಲಿದ್ದಾರೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲ ಚೋ ವಿದೇಶೀ ನಾಯಕರೊಂದಿಗೆ ಸಂವಹನ ನಡೆಸುವ ಮೂಲಕ ಕಿಮ್ ಜಾಂಗ್ ಉನ್ ಆಡಳಿತಕ್ಕೆ ಬಲ ನೀಡಲಿದ್ದಾರೆ. ಇದನ್ನೂ ಓದಿ: ಎಸ್‍ಡಿಪಿಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು

    ಚೋ ಈ ಹಿಂದೆಯೂ ಅಮೆರಿಕದೊಂದಿಗೆ ಪರಮಾಣು ಮಾತುಕತೆ ಸಂದರ್ಭ ಹಾಗೂ ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶೃಂಗಸಭೆಯಲ್ಲೂ ಭಾಗವಹಿಸಿದ್ದರು. ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಎನ್‍ಕೌಂಟರ್ – ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಓರ್ವ ಹತ್ಯೆ

    ಉತ್ತರ ಕೊರಿಯಾ ಶಸ್ತ್ರಾಸ್ತ್ರ ನಿರ್ಭಂಧಗಳನ್ನು ತಳ್ಳಿಹಾಕಿ, ಪರೀಕ್ಷೆಗಳನ್ನು ನಡೆಸುತ್ತಿದೆ. ಅದರಲ್ಲೂ 2017ರಲ್ಲಿ ಮೊದಲ ಬಾರಿಗೆ ಖಂಡಾಂತರ ಕ್ಷಿಪಣಿಯನ್ನೂ ಹಾರಿಸಿದೆ. ಕೆಲವು ದಿನಗಳ ಹಿಂದೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಅಧಿಕಾರಿಗಳು ಉತ್ತರ ಕೊರಿಯಾ ತನ್ನ 7ನೇ ಪರಮಾಣು ಪರೀಕ್ಷೆಯನ್ನು ನಡೆಸಲು ತಯಾರಿ ನಡೆಸುತ್ತಿದೆ ಎಂದು ಎಚ್ಚರಿಸಿದ್ದಾರೆ.

  • ರಹಸ್ಯ ಸಂಖ್ಯೆ ಟ್ವೀಟ್ ಮಾಡಿ ಟ್ವಿಟ್ಟಿಗರ ತಲೆ ಕೆಡಿಸಿದ ಸುಷ್ಮಾ ಸ್ವರಾಜ್?

    ರಹಸ್ಯ ಸಂಖ್ಯೆ ಟ್ವೀಟ್ ಮಾಡಿ ಟ್ವಿಟ್ಟಿಗರ ತಲೆ ಕೆಡಿಸಿದ ಸುಷ್ಮಾ ಸ್ವರಾಜ್?

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಹಸ್ಯ ಸಂಖ್ಯೆಯೊಂದನ್ನು ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಇಂದು ಮಧ್ಯಾಹ್ನ ವೇಳೆಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ತಮ್ಮ ಟ್ವೀಟ್‍ನಲ್ಲಿ ಕೇವಲ 638781 ಎಂಬ ಸಂಖ್ಯೆಯನ್ನು ಬರೆದುಕೊಂಡಿದ್ದರು. ಆದರೆ ಬಳಿಕ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಆದರೆ ಸುಷ್ಮಾ ಸ್ವರಾಜ್ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಟ್ವಿಟ್ಟಿಗರು ನಂಬರ್ ರಹಸ್ಯವನ್ನು ಡಿ ಕೋಡ್ ಮಾಡಲು ಮುಂದಾಗಿದ್ದಾರೆ.

    https://twitter.com/BeVoterNotFan/status/1076437708053069824?

    ಕೆಲ ಟ್ವಿಟ್ಟಿಗರು ಸಂಖ್ಯೆಯ ಅರ್ಥವೇನು ಎಂದು ಪ್ರಶ್ನೆ ಮಾಡಿದ್ದರೆ, ಮತ್ತು ಕೆಲವರು ಇದು ಸಿಂಗಪೂರ್ ಪೋಸ್ಟಲ್ ಕೋಡ್, ಸುಷ್ಮಾ ಮೇಡಮ್ ಅವರು ಈ ಮೂಲಕ ನಮಗೇ ರಹಸ್ಯ ಸಂಕೇತವನ್ನು ರವಾನಿಸಿದ್ದಾರೆ ಎಂದು ಮರು ಟ್ವೀಟ್ ಮಾಡಿದ್ದಾರೆ.

    ಕೇಂದ್ರ ಸರ್ಕಾರದ ಸಚಿವರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಸುಷ್ಮಾ ಸ್ವರಾಜ್ ಅವರು ಇರುತ್ತಾರೆ. ಈ ಮೂಲಕ ಹಲವು ಬಾರಿ ಜನರ ಮಸ್ಯೆ ಬಗೆ ಹರಿಸಲು ಕಾರ್ಯನಿರ್ವಹಿಸಿದ್ದಾರೆ. 2010 ರಲ್ಲಿ ಟ್ವಿಟ್ಟರ್ ಗೆ ಸೇರ್ಪಡೆ ಆಗಿರುವ ಸುಷ್ಮಾ ಸ್ವರಾಜ್ ಅವರು 12 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

    https://twitter.com/YousufHussaini5/status/1076438686349197313

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ನವದೆಹಲಿ: ಬಲವಂತವಾಗಿ ಪಾಕ್ ಪ್ರಜೆಯನ್ನು ಮದುವೆಯಾಗಿದ್ದ ಭಾರತೀಯ ಯುವತಿಯೊಬ್ಬರು ಇದೀಗ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಉಜ್ಮಾ ಎಂಬವರೇ ಇಂದು ವಾಘಾ ಗಡಿಯ ಮೂಲಕ ಭದ್ರತೆಯೊಂದಿಗೆ ತವರಿಗೆ ಕಾಲಿಟ್ಟ ಯುವತಿಯಾಗಿದ್ದಾರೆ.

    ಏನಿದು ಪ್ರಕರಣ?: 20 ವರ್ಷದ ಉಜ್ಮಾ ಎಂಬವರು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಸಂದರ್ಭದಲ್ಲಿ ಪಾಕ್ ಪ್ರಜೆ ತಹೀರ್ ಆಲಿ ಎಂಬಾತ ಕಿರುಕುಳ ನೀಡಿ, ಗನ್ ತೋರಿಸಿ ಬಲವಂತವಾಗಿ ಮದುವೆಯಾಗಿದ್ದನು. ಈ ಸಂಬಂಧ ಪತಿಯ ವಿರುದ್ಧ ಉಜ್ಮಾ ಇಸ್ಲಾಮಾಬಾದ್ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಪತಿ ತಾಹೀರ್ ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾನೆ. ಅಲ್ಲದೇ ದಾಖಲೆಗಳನ್ನು ಆತ ಕಸಿದುಕೊಂಡಿದ್ದಾನೆ. ಹೀಗಾಗಿ ನನಗೆ ಭಾರತಕ್ಕೆ ತೆರಳಲು ರಕ್ಷಣೆ ಕೊಡಬೇಕು ಹಾಗೂ ತಾಯ್ನಡಿಗೆ ಹಿಂದಿರುಗಲು ನಕಲು ಪ್ರತಿಗಳನ್ನು ಒದಗಿಸಿಕೊಡಬೇಕೆಂದು ಮೇ 12ಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿ ಸ್ವೀಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಾಧೀಶ ಮೋಶಿನ್ ಅಕ್ತಾರ್ ಕಯಾನಿ ಅವರಿದ್ದ ಪೀಠ, ಪ್ರಕರಣವನ್ನು ಕೈಗೆತ್ತಿಕೊಂಡು ಬುಧವಾರ ಉಜ್ಮಾ ಅವರಿಗೆ ಭಾರತಕ್ಕೆ ಮರಳಲು ಅವಕಾಶ ನೀಡಿತ್ತು. ಅಲ್ಲದೇ ಪೊಲೀಸರು ಕೂಡ ವಾಘಾ ಗಡಿಯವರೆಗೆ ಆಕೆಯ ಜೊತೆಗಿದ್ದು ರಕ್ಷಣೆ ಕೊಡಬೇಕೆಂದು ಕೋರ್ಟ್ ಆದೇಶ ಮಾಡಿತ್ತು. ನ್ಯಾಯಾಲಯದ ಅನುಮತಿಯಂತೆ ಉಜ್ಮಾ ಇಂದು ಬಿಗಿ ಭದ್ರತೆಯೊಂದಿಗೆ ವಾಘಾ ಗಡಿ ದಾಟಿ ಭಾರತದ ಮಣ್ಣಿಗೆ ಕೈ ಮುಗಿದು ತಾಯ್ನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಉಜ್ಮಾ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಅಲ್ಲದೆ, ಭಾರತದ ಮಗಳು ಎಂದು ಕರೆದಿದ್ದಾರೆ. ಪಾಕಿಸ್ತಾನದಲ್ಲಿ ಇಷ್ಟೆಲ್ಲಾ ಸಂಕಷ್ಟಗಳನ್ನು ಅನುಭವಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆಂದು ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

    ಈ ಕುರಿತು ಉಜ್ಮಾ ಸಹೋದರ ವಾಸಿಮ್ ಅಹಮದ್ ಮಾಧ್ಯಮಗಳೊಂದಿಗೆ ಮಾತನಾಡಿ, `ಸಹೋದರಿ ಸೇಫ್ ಆಗಿ ತಾಯ್ನಾಡಿಗೆ ಮರಳುತ್ತಿರುವುದು ಸಂತಸ ತಂದಿದೆ. ಆದ್ರೆ ವಿಮಾನ ವಿಳಂಬಗೊಂಡಿರುವುದರಿಂದ ಆಕೆ ದೆಹಲಿಗೆ ಯಾವಾಗ ಬರುತ್ತಾಳೆ ಅಂತಾ ಗೊತ್ತಿಲ್ಲ. ಇನ್ನು ಆಕೆಯ ಹಿಂದಿರುಗುವಿಕೆಗೆ ಸಹಕರಿಸಿದ ಭಾರತ ಸರ್ಕಾರ ಹಾಗೂ ಆಕೆ ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿ ಆಕೆಯೊಂದಿಗೆ ಫೋನ್ ಮೂಲಕ ನಿರಂತರ ಸಂಪರ್ಕ ಹೊಂದಿದ್ದ ವಿದೇಶಾಂಗ ಸಚಿವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

     

     

  • ಪಾಕ್‍ನಲ್ಲಿ ಅತ್ತೆ ಮನೆಯವರ ಕಿರುಕುಳಕ್ಕೊಳಗಾದ ಭಾರತೀಯ ಮಹಿಳೆಗೆ ಸುಷ್ಮಾ ಸ್ವರಾಜ್ ನೆರವು

    ಪಾಕ್‍ನಲ್ಲಿ ಅತ್ತೆ ಮನೆಯವರ ಕಿರುಕುಳಕ್ಕೊಳಗಾದ ಭಾರತೀಯ ಮಹಿಳೆಗೆ ಸುಷ್ಮಾ ಸ್ವರಾಜ್ ನೆರವು

    ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ಅತ್ತೆ ಮನೆಯವರ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ವಿಷಯ ತಿಳಿದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಹಿಳೆಯ ನೆರವಿಗೆ ನಿಂತಿದ್ದಾರೆ.

    ಮಹಿಳೆಯ ತಂದೆ ಯೂಟ್ಯೂಬ್ ವೀಡಿಯೋ ಮೂಲಕ ಪಾಕಿಸ್ತಾನದಲ್ಲಿರವ ತಮ್ಮ ಮಗಳಿಗೆ ಆಕೆಯ ಅತ್ತೆ ಮನೆಯವರು ಕಿರುಕುಳ ನೀಡುತ್ತಿರುವ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸುಷ್ಮಾ ಸ್ವರಾಜ್, ಪಾಕಿಸ್ತಾನದಲ್ಲಿರುವ ಮಹಿಳೆಯನ್ನು ಭಾರತೀಯ ರಾಯಭಾರ ಕಚೇರಿ ಭೇಟಿ ಮಾಡಿದೆ ಎಂದು ಹೇಳಿ ಅವರ ಸುರಕ್ಷತೆ ಮತ್ತು ಭಾರತಕ್ಕೆ ಹಿಂದಿರುಗುವ ಬಗ್ಗೆ ಭರವಸೆ ನೀಡಿದ್ದಾರೆ.

    ಮೊಹಮದಿ ಬೇಗಂ ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಆಕೆಯ ತಂದೆ ಮೊಹಮದ್ ಅಕ್ಬರ್ ಅವರಿಂದ ಯೂಟ್ಯೂಬ್ ವೀಡಿಯೋ ಬಂದಿರುವ ಬಗ್ಗೆ ಸುಷ್ಮಾ ಸ್ವರಾಜ್ ಟ್ವಿಟ್ಟರ್‍ನಲ್ಲಿ ತಿಳಿಸಿದ್ದಾರೆ. ಮೂಲತಃ ಹೈದರಾಬಾದ್‍ನವರಾದ ಮೊಹಮದಿ ಬೇಗಂ ಅವರ ಪಾಸ್‍ಪೋರ್ಟ್ ಅವಧಿ ಕಳೆದ ವರ್ಷವೇ ಮುಗಿದಿದ್ದು, ಭಾರತೀಯ ರಾಯಭಾರ ಕಚೇರಿಯವರಿಗೆ ಬೇಗಂ ಅವರ ಪಾಸ್‍ಪೋರ್ಟ್ ನವೀಕರಿಸಿ ಭಾರತಕ್ಕೆ ಮರಳಲು ನೆರವಾಗುವಂತೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ.

    ಈ ನಡುವೆ ಭಾರತೀಯ ರಾಯಭಾರ ಕಚೇರಿಯವರು ಭೇಟಿಯಾದ ಬಳಿಕ ತನ್ನ ಗಂಡ ಮೊಹಮ್ಮದ್ ಯೂನಿಸ್ ತನ್ನನ್ನು ಹೊಡೆದು ಕೋಣೆಯಲ್ಲಿ ಕೂಡಿಹಾಕಿದ್ದಾರೆಂದು ಮೊಹಮದಿ ಬೇಗಂ ತನ್ನ ತಾಯಿ ಹಜಾರಾ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಹಜಾರಾ, ನನ್ನ ಮಗಳು ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಕುಗ್ಗಿ ಹೋಗಿದ್ದಾಳೆ. ಆಕೆಗೆ ಕೂಡಲೇ ವೈದ್ಯಕೀಯ ನೆರವಿನ ಅಗತ್ಯವಿದೆ. ಯೂನಿಸ್ ಹಾಗೂ ಬೇಗಂಗೆ 3 ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳೂ ಕೂಡ ಬೇಗಂ ಜೊತೆಗೆ ಬಂದರೆ ಒಳ್ಳೆಯದು. ಆಕೆಯನ್ನು ಆದಷ್ಟು ಬೇಗ ಮನೆಗೆ ಕರೆದುಕೊಂಡು ಬರಬೇಕೆಂದು ಮನವಿ ಮಾಡಿದ್ದಾರೆ.

    ಮೊಹಮದಿ ಬೇಗಂ ಅವರ ತಂದೆ ಅಕ್ಬರ್ ಸೈಕಲ್ ಮೆಕಾನಿಕ್ ಆಗಿದ್ದು, ಜನವರಿಯಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಇ-ಮೇಲ್ ಮಾಡುವ ಮೂಲಕ ಮಗಳನ್ನು ಭಾರತಕ್ಕೆ ಕರೆತರಲು ಸಹಾಯ ಕೋರಿದ್ದರು.

    ಸುಳ್ಳು ಹೇಳಿ ಮದುವೆಯಾಗಿದ್ದ: ಮೊಹಮ್ಮದ್ ಯೂನಿಸ್ ತನ್ನ ರಾಷ್ಟ್ರೀಯತೆಯ ಬಗ್ಗೆ ಮುಚ್ಚಿಟ್ಟು, ತಾನು ಓಮನ್‍ನವನು ಎಂದು ಹೇಳಿ 1996ರಲ್ಲಿ ಮಗಳನ್ನ ಮದುವೆಯಾಗಿದ್ದ. ಏಜೆಂಟ್‍ವೊಬ್ಬರ ಮುಖಾಂತರ ಫೋನಿನಲ್ಲೇ ನಿಖಾ ಮಾಡಲಾಗಿತ್ತು. ನಂತರ ಬೇಗಂ ಮೆಕಾನಿಕ್ ಆಗಿದ್ದ ಯೂನಿಸ್‍ನನ್ನು ಮಸ್ಕಟ್‍ನಲ್ಲಿ ಹೋಗಿ ಸೇರಿದಳು. ಆದ್ರೆ 12 ವರ್ಷಗಳ ನಂತರ ಕೆಲಸ ಕಳೆದುಕೊಂಡ ಯೂನಿಸ್ ತಾನು ಪಾಕಿಸ್ತಾನದವನೆಂದು ಬಾಯ್ಬಿಟ್ಟಾಗ ಮಹಮದಿ ಬೇಗಂಗೆ ಶಾಕ್ ಆಗಿತ್ತು ಎಂದು ಅಕ್ಬರ್ ಹೇಳಿದ್ದಾರೆ.

    2012ರಲ್ಲಿ ಬೇಗಂ ಹೈದರಾಬಾದ್‍ಗೆ ಬಂದಿದ್ದಳು. ಮದುವೆಯಾದ 21 ವರ್ಷಗಳಲ್ಲಿ ಆಕೆ ಭಾರತಕ್ಕೆ ಭೇಟಿ ನೀಡಿದ್ದು ಇದೊಂದೇ ಸಲ ಎಂದು ಅಕ್ಬರ್ ಹೇಳಿದ್ದಾರೆ.