Tag: ವಿದೇಶಾಂಗ ವ್ಯವಹಾರಗಳ ಸಚಿವಾಲಯ

  • ಇಂದಿನಿಂದ 5 ದಿನಗಳ ಕಾಲ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತ

    ಇಂದಿನಿಂದ 5 ದಿನಗಳ ಕಾಲ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತ

    ನವದೆಹಲಿ: ಪಾಸ್‌ಪೋರ್ಟ್ ಅರ್ಜಿಗಳ ನಿರ್ವಹಣೆ ಮಾಡುವ ಆನ್‌ಲೈನ್ ಪೋರ್ಟಲ್ (Online Portal) ತಾಂತ್ರಿಕ ನಿರ್ವಹಣೆ (Technical Maintenance) ಕಾರಣ 5 ದಿನಗಳ ಕಾಲ ಸ್ಥಗಿತಗೊಳ್ಳಲಿದೆ ಎಂದು ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನ (Passport Seva Portal) ಅಡ್ವೈಸರಿ (Advisory) ಎಕ್ಸ್ (X) ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.

    ಆ.29 ಗುರುವಾರ ರಾತ್ರಿ 8 ಗಂಟೆಯಿಂದ ಸೆ.2 ಸೋಮವಾರ ಬೆಳಗ್ಗೆ 6 ಗಂಟಯವರೆಗೆ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಅಪಾಯಿಂಟ್‌ಮೆಂಟ್‌ಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಮೊದಲು ಕಾಯ್ದಿರಿಸಿದ ಎಲ್ಲಾ ಅಪಾಯಿಂಟ್‌ಮೆಂಟ್‌ಗಳನ್ನು ಮರು ನಿಗದಿಪಡಿಸಲಾಗುವುದು ಎಂದು ತಿಳಿಸಿದೆ.ಇದನ್ನೂ ಓದಿ: 10 ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ನಿರ್ಧಾರ: ಡಿಕೆಶಿ

    ಈ ಅವಧಿಯಲ್ಲಿ ನಾಗರಿಕರಿಗೂ ಹಾಗೂ ಎಲ್ಲಾ ಎಂಇಎ, ಆರ್‌ಪಿಓ, ಬಿಓಐ, ಐಎಸ್‌ಪಿ, ಡಿಓಪಿ, ಪೊಲೀಸ್ ಅಧಿಕಾರಿಗಳಿಗೆ ಸಿಸ್ಟಮ್‌ಗಳು ಲಭ್ಯವಿರುವುದಿಲ್ಲ. ಆ.30 ರವರೆಗೆ ಬುಕ್ಕಿಂಗ್ ಆಗಿರುವ ಎಲ್ಲಾ ಅಪಾಯಿಂಟ್‌ಮೆಂಟ್‌ಗಳನ್ನು ಮರು ನಿಗದಿಪಡಿಸಲಾಗುವುದು ಎಂದು ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತಿಳಿಸಿದೆ.

    ಇದಕ್ಕೆ ಸಂಬಂಧಿಸಿದಂತೆ ಇದೊಂದು ದೈನಂದಿನ ಪ್ರಕ್ರಿಯೆಯಾಗಿದೆ. ಸಾರ್ವಜನಿಕರ ಸೇವೆಗಾಗಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಮುಂಚಿತವಾಗಿ ಯೋಜಿಸಿಲಾಗಿದೆ ಮತ್ತು ಈ ನಿರ್ವಹಣಾ ಚಟುವಟಿಕೆಯೂ ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆಯನ್ನು ಉಂಟು ಮಾಡುವುದಿಲ್ಲ. ಆದ್ದರಿಂದ ಅಪಾಯಿಂಟ್‌ಗಳ ಮರುನಿಗದಿ ಕಾರ್ಯವು ಯಾವುದೇ ಸವಾಲನ್ನು ಉಂಟು ಮಾಡುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry Of Extrenal Affairs) ತಿಳಿಸಿದೆ.ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಮೂವರು ಭಯೋತ್ಪಾದಕರ ಹತ್ಯೆ

    ಪಾಸ್‌ಪೋರ್ಟ್ ಸೇವಾ ಪೋರ್ಟಲ್ ದೇಶಾದ್ಯಂತ ಹೊಸ ಪಾಸ್‌ಪೋರ್ಟ್ಗೆ ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು ಅಪಾಯಿಂಟ್‌ಮೆಂಟ್‌ಗಳ ನಿಗದಿಗಾಗಿ ಕಾರ್ಯನಿರ್ವಹಿಸುತ್ತದೆ. ಅಪಾಯಿಂಟ್‌ಮೆಂಟ್ ದಿನದಂದು ಅರ್ಜಿದಾರರು ಪಾಸ್‌ಪೋರ್ಟ್ ಕೇಂದ್ರಗಳಿಗೆ ಹೋಗಿ, ದಾಖಲೆಗಳನ್ನು ಒದಗಿಸಬೇಕು ನಂತರ ಪೊಲೀಸ್ ಪರಿಶೀಲನೆಯ ನಂತರ 30 ರಿಂದ 45 ದಿನಗಳಲ್ಲಿ ಪಾಸ್‌ಪೋರ್ಟ್ ಅರ್ಜಿದಾರರರ ವಿಳಾಸಕ್ಕೆ ತಲುಪುತ್ತದೆ ಎಂದು ತಿಳಿಸಿದೆ.

  • ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು

    ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು

    ನವದೆಹಲಿ: ಭಾರತ (India) ಮತ್ತು ಚೀನಾ (China) ನಡುವಿನ ಗಡಿಯಲ್ಲಿ ಶಾಂತಿ ಸ್ಥಾಪನೆಗಾಗಿ ಎರಡೂ ದೇಶಗಳು ಮಾತುಕತೆ ನಡೆಸಿವೆ. ಅಲ್ಲದೆ ಮಿಲಿಟರಿ ಹಾಗೂ ರಾಜತಾಂತ್ರಿಕ ಚರ್ಚೆಗಳನ್ನು ಮುಂದುವರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.

    ಪೂರ್ವ ಲಡಾಖ್‍ನ (Ladakh) ಗಡಿ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಎದ್ದಿರುವ ವಿವಾದಗಳನ್ನು ಮುಕ್ತವಾಗಿ ಚರ್ಚಿಸಿ ಸ್ಪಷ್ಟತೆ ಕಂಡುಕೊಳ್ಳಲು ಎರಡು ದೇಶಗಳು ತಿರ್ಮಾನಿಸಿವೆ. ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆ ಈ ಮಾತುಕತೆಯ ಉದ್ದೇಶವಾಗಿದೆ. ಈ ಬಗ್ಗೆ ಮುಂದಿನ ಸುತ್ತಿನ ಮಿಲಿಟರಿ ಮಾತುಕತೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ತಿಳಿಸಿದೆ. ಇದನ್ನೂ ಓದಿ: 100 ಯೂನಿಟ್ ವಿದ್ಯುತ್ ಫ್ರೀ – ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಘೋಷಣೆ

    ಚರ್ಚೆಯ ವೇಳೆ ಭಾರತ-ಚೀನಾ ಗಡಿಯ ಪಶ್ಚಿಮ ವಲಯದ ಎಲ್‍ಎಸಿಯ ಉದ್ದಕ್ಕೂ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಉಳಿದ ಪ್ರದೇಶಗಳ ಪರಿಸ್ಥಿತಿಯನ್ನು ಶೀಘ್ರದಲ್ಲೇ ಪರಿಶೀಲಿಸಿ ಸೂಕ್ತ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ತಿರ್ಮಾನಿಸಲಾಯಿತು. ಮುಂದಿನ ಚರ್ಚೆ ಎರಡೂ ದೇಶಗಳ ಸಂಬಂಧದಲ್ಲಿ ವಿಶ್ವಾಸ ಮೂಡಿಸುವ ಭರವಸೆಯನ್ನು ಎರಡೂ ರಾಷ್ಟ್ರಗಳು ವ್ಯಕ್ತಪಡಿಸಿವೆ.

    ಈಗಾಗಲೇ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗೆ ಅನುಗುಣವಾಗಿ ಮುಂದಿನ (19 ನೇ) ಸುತ್ತಿನ ಹಿರಿಯ ಕಮಾಂಡರ್ ಸಭೆಯನ್ನು ನಡೆಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನ ಗ್ಯಾರಂಟಿಗಳು ದೇಶವನ್ನು ದಿವಾಳಿಗೆ ತಳ್ಳಬಹುದು: ಮೋದಿ ಎಚ್ಚರಿಕೆ

  • ಆಪರೇಷನ್ ಕಾವೇರಿ- 229 ಭಾರತೀಯರನ್ನು ಹೊತ್ತ 7ನೇ ವಿಮಾನ ಜೆಡ್ಡಾದಿಂದ ಬೆಂಗಳೂರಿನತ್ತ

    ಆಪರೇಷನ್ ಕಾವೇರಿ- 229 ಭಾರತೀಯರನ್ನು ಹೊತ್ತ 7ನೇ ವಿಮಾನ ಜೆಡ್ಡಾದಿಂದ ಬೆಂಗಳೂರಿನತ್ತ

    ರಿಯಾದ್: ಆಪರೇಷನ್ ಕಾವೇರಿಯಡಿಯಲ್ಲಿ (Operation Kaveri) ಸುಡಾನ್‌ನಿಂದ (Sudan) ಭಾರತೀಯರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, 229 ಭಾರತೀಯರು ಭಾನುವಾರ ಜೆಡ್ಡಾದಿಂದ (Jeddah) ಬೆಂಗಳೂರಿಗೆ (Bengaluru) ತೆರಳುವ ವಿಮಾನದಲ್ಲಿ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry Of External Affairs) ತಿಳಿಸಿದೆ.

    ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi)  ತಮ್ಮ ಟ್ವಿಟ್ಟರ್‌ (Twitter) ಖಾತೆಯಲ್ಲಿ ಟ್ವೀಟ್ (Tweet) ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಪರೇಷನ್ ಕಾವೇರಿ ನಾಗರಿಕರನ್ನು ಮರಳಿ ಮನೆಗೆ ಕರೆತರುತ್ತಿದೆ. 229 ಪ್ರಯಾಣಿಕರನ್ನು ಹೊತ್ತ 7ನೇ ವಿಮಾನವು ಇದಾಗಿದ್ದು, ಜೆಡ್ಡಾದಿಂದ ಬೆಂಗಳೂರಿಗೆ ತೆರಳಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರೇಪ್‍ನಿಂದ ರಕ್ಷಿಸಲು ಮೃತ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕಿದ ಪಾಕ್‌ ಪಾಲಕರು

    ಸುಡಾನ್‌ನಲ್ಲಿ ಕದನ ವಿರಾಮವನ್ನು ಘೋಷಿಸಿರುವುದರಿಂದ, ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಸಂಘರ್ಷ-ಪೀಡಿತ ರಾಷ್ಟ್ರದಿಂದ ಸ್ಥಳಾಂತಿರಸಲು ಪ್ರಯತ್ನಿಸುತ್ತಿವೆ. ಇದಕ್ಕೂ ಮೊದಲು, ಭಾರತೀಯ ನೌಕಾಪಡೆಯ ಹಡಗು, ಐಎನ್‌ಎಸ್ ಟೆಗ್ (INS Teg), ಶನಿವಾರ ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 288 ಭಾರತೀಯರನ್ನು ಆಪರೇಷನ್ ಕಾವೇರಿ ಮೂಲಕ ಯಶಸ್ವಿಯಾಗಿ ಸ್ಥಳಾಂತರಿಸಿತು. ಸುಡಾನ್ ಸಂಘರ್ಷಣೆಯಲ್ಲಿ ಸಿಲುಕಿಕೊಂಡಿದ್ದ 14ನೇ ತಂಡ ಇದಾಗಿದ್ದು, ಭಾರತಕ್ಕೆ ಮರಳಲು ಜೆಡ್ಡಾಕ್ಕೆ ತೆರಳಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – 5 ಮಕ್ಕಳು ಸೇರಿ 26 ಜನ ಸಾವು

    ಈ ಹಿಂದೆ ಪೋರ್ಟ್ ಸುಡಾನ್‌ನಲ್ಲಿ ನೆಲೆಗೊಂಡಿದ್ದ ಐಎನ್‌ಎಸ್ ಸುಮೇಧಾ (INS Sumedha) ಬಿಕ್ಕಟ್ಟಿನಿಂದಾಗಿ 300 ಪ್ರಯಾಣಿಕರೊಂದಿಗೆ ಜೆಡ್ಡಾಕ್ಕೆ ಹೊರಟಿತ್ತು. ಆಪರೇಷನ್ ಕಾವೇರಿಯಡಿಯಲ್ಲಿ ಭಾರತ ಸರ್ಕಾರವು ಸುಮಾರು 3,000 ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸುಡಾನ್‌ನಲ್ಲಿ ಸಂಘರ್ಷ – ಜೆಡ್ಡಾದಿಂದ 362 ಭಾರತೀಯರು ಬೆಂಗಳೂರು ಕಡೆ ಪ್ರಯಾಣ


    ಸೇನಾಪಡೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಸುಡಾನ್ ದೇಶವು ರಕ್ತಪಾತವನ್ನು ಅನುಭವಿಸುತ್ತಿದೆ. ಇಲ್ಲಿಯವರೆಗೆ 2,400ಕ್ಕೂ ಹೆಚ್ಚು ಭಾರತೀಯರನ್ನು ಸುಡಾನ್‌ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಭಾರತೀಯ ವಲಸೆಗಾರರು “ಭಾರತ್ ಮಾತಾ ಕೀ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳನ್ನು ಕೂಗಿದರು. ಅಲ್ಲದೇ ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ನಿಂದ ರಕ್ಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ (S.Jaishankar) ಅವರನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಾವೇರಿ- 135 ಮಂದಿ ಭಾರತೀಯರಿದ್ದ 3ನೇ ತಂಡ ಸೌದಿಗೆ ರೀಚ್

  • ಭಾರತದ ಗೋಧಿ ಚೆನ್ನಾಗಿದೆ, ನಿಮ್ಮದು ಕಳಪೆಯಾಗಿದೆ: ಪಾಕಿಸ್ತಾನ ವಿರುದ್ಧ ತಾಲಿಬಾನ್ ಕಿಡಿ

    ಭಾರತದ ಗೋಧಿ ಚೆನ್ನಾಗಿದೆ, ನಿಮ್ಮದು ಕಳಪೆಯಾಗಿದೆ: ಪಾಕಿಸ್ತಾನ ವಿರುದ್ಧ ತಾಲಿಬಾನ್ ಕಿಡಿ

    ಕಾಬೂಲ್‌: ತಿನ್ನಲಾಗದ ಕಳಪೆ ಗುಣಮಟ್ಟದ ಗೋಧಿಯನ್ನು ನೀಡಿದ ಪಾಕಿಸ್ತಾನದ ವಿರುದ್ಧ ತಾಲಿಬಾನ್ ಅಧಿಕಾರಿಯೊಬ್ಬರು ಕಿಡಿಕಾರಿದ್ದಾರೆ.

    ಕಳಪೆ ಗುಣಮಟ್ಟದ ಗೋಧಿಯನ್ನು ಪಾಕಿಸ್ತಾನ ನೀಡಿದೆ. ಇದು ಸೇವಿಸಲು ಯೋಗ್ಯವಾಗಿಲ್ಲ. ಆದರೆ ಭಾರತೀಯ ಸರ್ಕಾರ ಕಳುಹಿಸಿದ 50,000 ಮೆಟ್ರಿಕ್ ಟನ್ ಗೋಧಿ ತುಂಬ ಚೆನ್ನಾಗಿದೆ ಎಂದು ಬರೆದು, ಗೋಧಿಯ ಗುಣಮಟ್ಟದ ಬಗ್ಗೆ ದೂರು ನೀಡುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಲಾಗಿದೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಉತ್ತಮ ಗುಣಮಟ್ಟದ ಗೋಧಿ ಕಳುಹಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಲಾಗಿದೆ. ಆಫ್ಘಾನ್ ಜನರಿಗೆ ನಿರಂತರ ಬೆಂಬಲ ನೀಡುತ್ತಿರುವುದಕ್ಕಾಗಿ ಭಾರತಕ್ಕೆ ಧನ್ಯವಾದಗಳು. ನಮ್ಮ ಸಾರ್ವಜನಿಕ ಮತ್ತು ಸಾರ್ವಜನಿಕ ಸ್ನೇಹಿ ಸಂಬಂಧ ಶಾಶ್ವತವಾಗಿರುತ್ತದೆ. `ಜೈ ಹಿಂದ್’ ಎಂದು ಹಮ್ದುಲ್ಲಾ ಅರ್ಬಾಬ್ ಟ್ವೀಟ್ ಮಾಡಿದ್ದಾರೆ. ವೈರಲ್ ವೀಡಿಯೋ ಪಾಕಿಸ್ತಾನದ ಪರವಾದ ಆಫ್ಘಾನ್ ಸರ್ಕಾರವನ್ನು ಕೆರಳಿಸಿದೆ. ಈ ಹೇಳಿಕೆ ನೀಡಿದ ತಾಲಿಬಾನ್ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

    ಕಳೆದ ತಿಂಗಳು, ಭಾರತವು ಆಫ್ಘಾನ್ ಜನರ ಸಹಾಯಕ್ಕಾಗಿ ಗೋಧಿಯನ್ನು ರವಾನಿಸಿತ್ತು. 2000 ಮೆಟ್ರಿಕ್ ಟನ್ ಗೋಧಿಯನ್ನು ಹೊತ್ತ ವಾಹನಗಳು ಅಮೃತಸರದ ಅಟ್ಟಾರಿಯಿಂದ ಜಲಾಲಾಬಾದ್, ಅಫ್ಘಾನಿಸ್ತಾನಕ್ಕೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

    ಭಾರತವು ಅಫ್ಘಾನಿಸ್ತಾನದ ಜನರೊಂದಿಗೆ ತನ್ನ ವಿಶೇಷ ಸಂಬಂಧಕ್ಕೆ ಬದ್ಧವಾಗಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಭಾರತವು 50,000 ಮೆಟ್ರಿಕ್ ಟನ್ ಗೋಧಿಯನ್ನು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ಕಳುಹಿಸುವುದಾಗಿ ಘೋಷಿಸಿತ್ತು.

  • ಪ್ರಧಾನಿ ಮೋದಿ ವಿದೇಶಿ ಪ್ರವಾಸಕ್ಕೆ 517 ಕೋಟಿ ಖರ್ಚು, 5 ವರ್ಷದಲ್ಲಿ 58 ದೇಶಗಳಿಗೆ ಭೇಟಿ

    ಪ್ರಧಾನಿ ಮೋದಿ ವಿದೇಶಿ ಪ್ರವಾಸಕ್ಕೆ 517 ಕೋಟಿ ಖರ್ಚು, 5 ವರ್ಷದಲ್ಲಿ 58 ದೇಶಗಳಿಗೆ ಭೇಟಿ

    – ರಾಜ್ಯ ಸಭೆಗೆ ವಿದೇಶಾಂಗ ಸಚಿವಾಲಯದ ಮಾಹಿತಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದು, ವಿದೇಶಿ ಪ್ರವಾಸಗಳಿಗೆ ಪ್ರಧಾನಿ ಮೋದಿಯವರ ಖರ್ಚು, ವೆಚ್ಚದ ಕುರಿತು ತಿಳಿಸಿದೆ.

    ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರುಳೀಧರನ್ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. 2015ರಿಂದ ಪ್ರಧಾನಿ ನರೇಂದ್ರ ಮೋದಿಯವರು 58 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು 517.82 ಕೋಟಿ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ದೇಶಗಳ ಹೆಸರುಗಳನ್ನೂ ಸಹ ಪಟ್ಟಿ ಮಾಡಲಾಗಿದ್ದು, ಮಾರ್ಚ್ 2015ರಿಂದ ನವೆಂಬರ್ 2019ರ ವರೆಗೆ ಭೇಟಿ ನೀಡಿದ ದೇಶಗಳು, ಒಪ್ಪಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಸಹಿ ಹಾಕಲಾಗಿರುವ ಒಪ್ಪಂದಗಳ ಕುರಿತು ಮಾಹಿತಿ ನೀಡಲಾಗಿದೆ.

    ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸದ ಕುರಿತು ಸಚಿವರು ವಿವರವಾದ ಉತ್ತರ ನೀಡಿದ್ದು, ವಿವಿಧ ದೇಶಗಳಿಗೆ ಅವರು ನೀಡಿದ ಭೇಟಿನಿಂದಾಗಿ ಭಾರತದ ವಿದೇಶಿ ಸಂಬಂಧ ವೃದ್ಧಿಸಿದೆ. ವಾಣಿಜ್ಯ, ಹೂಡಿಕೆ, ತಂತ್ರಜ್ಞಾನ, ಕಡಲತೀರ, ಬಾಹ್ಯಾಕಾಶ ಹಾಗೂ ರಕ್ಷಣಾ ವಲಯ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸಂಬಂಧ ಸುಧಾರಿಸಿದೆ ಎಂದು ವಿವರಿಸಿದರು.

    ಪ್ರಧಾನಿಗಳ ವಿದೇಶ ಪ್ರವಾಸದ ಸಮಯದಲ್ಲಿ ಪರಸ್ಪರ ಚರ್ಚೆ, ಇತರ ದೇಶಗಳೊಂದಿಗಿನ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಭಾರತದ ದೃಷ್ಟಿಕೋನವನ್ನು ಹೆಚ್ಚಿಸಿದೆ. ಈ ಮೂಲಕ ನಮ್ಮ ಜನರ ಆರ್ಥಿಕ ಬೆಳವಣಿಗೆ ಹಾಗೂ ಯೋಗಕ್ಷೇಮವನ್ನು ಉತ್ತೇಜಿಸಲು ಭಾರತದ ಅಭಿವೃದ್ಧಿ ಕಾರ್ಯಸೂಚಿಗೆ ಕೊಡುಗೆ ನೀಡಿವೆ ಎಂದು ಮಾಹಿತಿ ನೀಡಿದರು.

    ಹವಾಮಾನ ಬದಲಾವಣೆ, ದೇಶೀಯ ಅಪರಾಧ ಮತ್ತು ಭಯೋತ್ಪಾದನೆ, ಸೈಬರ್ ಸುರಕ್ಷತೆ ಹಾಗೂ ಪರಮಾಣು ಪ್ರಸರಣ ಸೇರಿದಂತೆ ಬಹುಪಕ್ಷೀಯ ಮಟ್ಟದಲ್ಲಿ ಜಾಗತಿಕ ಕಾರ್ಯಸೂಚಿ ರೂಪಿಸುವಲ್ಲಿ ಭಾರತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಅಲ್ಲದೆ ಅಂತರಾಷ್ಟ್ರೀಯ ಸೌರ ಒಕ್ಕೂಟದಂತಹ ಜಾಗತಿಕ ಸಮಸ್ಯೆಗಳಿಗೆ ತನ್ನದೇಯಾದ ವಿಶಿಷ್ಟ ಕಾರ್ಯಕ್ರಮಗಳನ್ನು ಜಗತ್ತಿಗೆ ನೀಡುತ್ತಿದೆ. ವಿಪತ್ತು ಸ್ಥಿತಿಸ್ಥಾಪಕ ಮೂಲ ಸೌಕರ್ಯಕ್ಕಾಗಿ ಒಕ್ಕೂಟವನ್ನು ರಚಿಸಿದೆ ಎಂದು ಅವರು ತಿಳಿಸಿದರು.