Tag: ವಿದಾಯ

  • ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ರಾಸ್ ಟೇಲರ್

    ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ರಾಸ್ ಟೇಲರ್

    ವೆಲ್ಲಿಂಗ್ಟನ್: 16 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ನ್ಯೂಜಿಲೆಂಡ್ ತಂಡದ ಖ್ಯಾತ ಆಟಗಾರ ರಾಸ್ ಟೇಲರ್ ವಿದಾಯ ಹೇಳಿದ್ದಾರೆ.

    ಸೋಮವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಟೇಲರ್ ವಿದಾಯ ಹೇಳಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯಸ್ಥ ಮಾರ್ಟಿನ್ ಸ್ನೇಡನ್ ಅವರು ಟೇಲರ್‌ಗೆ ಬೀಳ್ಕೊಡುಗೆ ನೀಡಿ, ಸನ್ಮಾನಿಸಿದರು. ಇದನ್ನೂ ಓದಿ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ಸೇಡಾನ್ ಪಾರ್ಕ್‍ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 115 ರನ್‍ಗಳಿಂದ ಜಯಗಳಿಸಿತು. ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದ ಅವರು ಕೇವಲ 14 ರನಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಹಿಂದೆ ಜನವರಿಯಲ್ಲಿ ಅವರು ಬಾಂಗ್ಲಾ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಇದನ್ನೂ ಓದಿ: ರಂಜಾನ್ ಸಮಯದಲ್ಲಿ ಮಧುಮೇಹ ನಿರ್ವಹಣೆ ಹೇಗೆ?

    2006ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದ ಅವರು, ನಂತರದಲ್ಲಿ ನ್ಯೂಜಿಲೆಂಡ್ ತಂಡದ ಬೆಸ್ಟ್ ಬ್ಯಾಟರ್ ಆಗಿ ಹೊರಹೊಮ್ಮಿದರು. ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‍ನಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. 2015 ರಲ್ಲಿ ಪರ್ತ್‍ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 290 ವೈಯಕ್ತಿಕ ರನ್‍ಗಳನ್ನು ಗಳಿಸಿದ್ದು, ಅದು ಅವರ ಜೀವನಶ್ರೇಷ್ಠ ಪಂದ್ಯವಾಗಿದೆ.

    ಈ ಕುರಿತು ಮಾತನಾಡಿದ ಅವರು, ನನ್ನ ಈ 16 ವರ್ಷಗಳಲ್ಲಿ ಅದ್ಭುತವಾದ ಹಲವಾರು ಕ್ಷಣಗಳನ್ನು ಅನುಭವಿಸಿದ್ದೇನೆ. ಅದರಲ್ಲಿ ಕೆಲ ಸುಂದರ ನೆನಪುಗಳು ಇವೆ. ಕ್ರಿಕೆಟ್ ಆಟವೀಗ ಜಾಗತಿಕ ಮಟ್ಟದಲ್ಲಿ ಉತ್ತಮ ಕ್ರೀಡೆಯಾಗಿ ಮಿಂಚುತ್ತಿದೆ. ಇಂದಿನ ಎಲ್ಲ ನವ ಆಟಗಾರರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ನನ್ನ ಸಹ ಆಟಗಾರರು ಮತ್ತು ನ್ಯೂಜಿಲೆಂಡ್ ತಂಡದ ಕ್ರಿಕೆಟ್ ಬೋರ್ಡ್‍ಗೆ ನಾನು ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ. ನ್ಯೂಜಿಲೆಂಡ್ ತಂಡದ ಅಭಿಮಾನಿಗಳಿಗೆ ನಾನು ಸದಾ ಚಿರಋಣಿ ಆಗಿ ಇರುತ್ತೇನೆ ಎಂದರು. ಈ ಹಿಂದೆ ರಾಸ್ ಟೇಲರ್ ಅವರು ಐಪಿಎಲ್‍ನಲ್ಲಿ ನಮ್ಮ ಆರ್‍ಸಿಬಿ ತಂಡದ ಪರವಾಗಿ ಆಡಿದ್ದರು.

  • ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ಬೀಳ್ಕೊಡುಗೆ

    ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ಬೀಳ್ಕೊಡುಗೆ

    ಚಿಕ್ಕಮಗಳೂರು: ಜೀವ ಉಳಿಸಿದ ವೀರ ಯೋಧರಿಗೆ ಗ್ರಾಮಸ್ಥರು ರಾಖಿ ಕಟ್ಟುವ ಮೂಲಕ ಬೀಳ್ಕೊಡುಗೆ ಕೊಟ್ಟಿದ್ದಾರೆ.

    ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು, ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿದ್ದಾರೆ. ಈ ವೇಳೆ ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದ್ದಾರೆ.

    ಯೋಧರ ರಕ್ಷಣಾ ಕಾರ್ಯಾಚರಣೆ ನೋಡಿ ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಇಂಡಿಯನ್ ಆರ್ಮಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಮಿಲಿಟರಿ ಪಡೆ ಕಾರ್ಯಾಚರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಗ್ರಾಮಸ್ಥರು ಕಣ್ಣೀರು ಹಾಕುತ್ತಲೇ ಯೋಧರಿಗೆ ಬೀಳ್ಕೊಡುಗೆ ಕೊಟ್ಟಿದ್ದಾರೆ.

    ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ಸೋಮವಾರ ರಕ್ಷಣೆ ಮಾಡಿದೆ. ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆಯೇ ಹೊತ್ತು ಸಾಗಿಸುವ ಮೂಲಕ ತಂಡ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ.

  • ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ, ಲವ್ ಯೂ ಸಹೋದರ- ರೋಹಿತ್ ಶರ್ಮಾ

    ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ, ಲವ್ ಯೂ ಸಹೋದರ- ರೋಹಿತ್ ಶರ್ಮಾ

    ಬೆಂಗಳೂರು: ಸಿಕ್ಸರ್ ಕಿಂಗ್, ಟಿ-20 ಕ್ರಿಕೆಟ್‍ನಲ್ಲಿ ಕೇವಲ 12 ಎಸೆತದಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ. ಯುವರಾಜ್ ಸಿಂಗ್ ಅವರ ವಿದಾಯಕ್ಕೆ ಟೀಂ ಇಂಡಿಯದ ಉಪನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ

    ಇಂಗ್ಲೆಂಡಿನಲ್ಲಿ ವಿಶ್ವಕಪ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ 2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಸೋಮವಾರ ಮುಂಬೈ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಸಹೋದರನ ವಿದಾಯಕ್ಕೆ ಮನನೊಂದ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದು ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ ಎಂದು ಹೇಳಿದ್ದಾರೆ.

    ಯುವಿ ವಿದಾಯದ ಕುರಿತು ಟ್ವೀಟ್ ಮಾಡಿರುವ ರೋಹಿತ್ ಶರ್ಮಾ “ನಿನಗೆ ಗೊತ್ತಿಲ್ಲ ನಿನಗೆ ಏನ್ ಸಿಕ್ಕಿತ್ತು ಆದು ಕಳೆದು ಹೋಗಿದೆ. ಲವ್ ಯೂ ಸಹೋದರ, ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ” ಎಂದು ಟ್ವೀಟ್ ಮಾಡಿದ್ದಾರೆ.

    17 ವರ್ಷಗಳ ಕಾಲ ಭಾರತದ ಕ್ರಿಕೆಟ್ ತಂಡಕ್ಕೆ ತನ್ನದೇ ಆದ ಉತ್ತಮ ಸೇವೆ ಸಲ್ಲಿಸಿದ್ದಾರೆ. ಈ ರೀತಿಯ ಒಳ್ಳೆಯ ಆಟಗಾರನ್ನು ವಿದಾಯ ಪಂದ್ಯ ನೀಡದೆ ಅವರಿಗೆ ವಿದಾಯ ಹೇಳುವ ಸಮಯ ಬಂದಿದೆ ಅವರು ಉತ್ತಮ ವಿದಾಯ ಪಂದ್ಯಕ್ಕೆ ಅರ್ಹರು ಎಂದು ಹೇಳಿದ್ದಾರೆ.

    2019 ರ ವಿಶ್ವಕಪ್‍ನಲ್ಲಿ ಅಡಬೇಕು ಎಂದು ಆಸೆ ಇದ್ದ ಯುವರಾಜ್ ಸಿಂಗ್ ಅವರು, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್ ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಅವರ ರೀತಿಯಲ್ಲೇ ವಿದಾಯ ಪಂದ್ಯವನ್ನು ಆಡದೇ ತನ್ನ 17 ವರ್ಷದ ಕ್ರಿಕೆಟ್ ಜೀವನಕ್ಕೆ ಸೋಮವಾರ ವಿದಾಯ ಹೇಳಿದರು.

     

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದರು. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

  • ವಿಶ್ವಕಪ್ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅಲ್‍ರೌಂಡರ್ ಬ್ರಾವೋ ವಿದಾಯ

    ವಿಶ್ವಕಪ್ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅಲ್‍ರೌಂಡರ್ ಬ್ರಾವೋ ವಿದಾಯ

    ಮುಂಬೈ: ವೆಸ್ಟ್ ಇಂಡೀಸ್ ತಂಡದ ಅಲ್‍ರೌಂಡರ್ ಬ್ರಾವೋ ತಮ್ಮ 14 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದು, ಕೇವಲ ಫ್ರಾಂಚೈಸಿ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.

    2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಬ್ರಾವೋ ಇದುವರೆಗೂ 40 ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬ್ರಾವೋ, ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸುತ್ತಿದ್ದೇನೆ. ಆದರೆ ಇಂದಿಗೂ ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಡೆದ ಟೆಸ್ಟ್ ಕ್ಯಾಪ್ ಘಟನೆ ಈಗಲೂ ನೆನಪಿದೆ. ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಆಟದ ಮೇಲಿನ ಫ್ಯಾಷನ್ ಹಾಗೂ ಉತ್ಸಾಹವನ್ನು ಉಳಿಸಿಕೊಂಡು ಬಂದಿದ್ದು, ಸದ್ಯ ನಾನು ವಿದಾಯ ಘೋಷಣೆ ಮಾಡುತ್ತಿರುವುದಾಗಿ ತಿಳಿಸಿದರು.

    ನನ್ನ ಜೀವನದ ಯಶಸ್ವಿಗೆ ಹಲವು ಮಂದಿ ಸಹಕಾರ ನೀಡಿದ್ದಾರೆ. ಅದರಲ್ಲೂ ನನ್ನ ಕುಟುಂಬ, ಕ್ರಿಕೆಟ್ ತರಬೇತಿ ನೀಡಿದ ಕ್ಯೂಪಿಸಿಸಿ ಸಂಸ್ಥೆ, ಅಲ್ಲದೇ ಅಭಿಮಾನಿಗಳು ಕೂಡ ನನ್ನ ಯಶಸ್ಸಿಗೆ ಕಾರಣರಾಗಿದ್ದಾರೆ. ಹಲವು ಲೆಜೆಂಡ್ ಆಟಗಾರರೊಂದಿಗೆ ಕ್ರಿಕೆಟ್ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಅನುಭವ ಸ್ಮರಣಿಯ. ಅದ್ದರಿಂದ ವಿಶ್ವಾದ್ಯಂತ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸುವ ಮೂಲಕ ನನ್ನ ಕ್ರಿಕೆಟ್ ಅನ್ನು ಮುಂದುವರಿಸುತ್ತೇನೆ ಎಂದರು.

    https://twitter.com/DHONIism/status/1048786997085491200

    ಕಳೆದ ಎರಡು ವರ್ಷಗಳ ಹಿಂದೆ ದುಬೈನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಟಿ20 ಪಂದ್ಯದಲ್ಲಿ ಕೊನೆಯ ಬಾರಿ ಬ್ರಾವೋ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಉಳಿದಂತೆ 2014ರ ಅಕ್ಟೋಬರ್ ನಲ್ಲಿ ನಡೆದ ಏಕದಿನ ಹಾಗೂ 2010 ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಕೇವಲ ಅಲ್‍ರೌಂಡರ್ ಮಾತ್ರವಲ್ಲದೇ ಬ್ರಾವೋ ಭಾರತದ ಪ್ರವಾಸದಲ್ಲಿ ವಿಂಡೀಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಈ ಸರಣಿಯಲ್ಲಿ ವಿಂಡೀಸ್ ಕ್ರಿಕೆಟ್ ಸಂಸ್ಥೆಯೊಂದಿಗೆ ಉಂಟಾದ ಮನಸ್ತಾಪದಿಂದ ಟೂರ್ನಿಯಿಂದ ಅರ್ಧದಲ್ಲೇ ವಾಪಸ್ ತೆರಳಿದ್ದನ್ನು ನೆನೆಯಬಹುದಾಗಿದೆ. ಇದನ್ನು ಓದಿ: ಗೆಲುವಿನ ಸಂಭ್ರಮಾಚರಣೆ ಮುಂದುವರಿಸಿದ ಸಿಎಸ್‍ಕೆ – ಬ್ರಾವೋ ಹೊಸ ಹಾಡು ವೈರಲ್

    ಬ್ರಾವೋ ತಮ್ಮ ವೃತ್ತಿ ಜೀವನದ ಟೆಸ್ಟ್ ಕ್ರಿಕೆಟ್‍ನಲ್ಲಿ 2,200 ರನ್, 86 ವಿಕೆಟ್, ಏಕದಿನ ಮಾದರಿಯಲ್ಲಿ 2,968 ರನ್, 199 ವಿಕೆಟ್ ಮತ್ತು ಟಿ20ಯಲ್ಲಿ 1,142 ರನ್ 52 ವಿಕೆಟ್ ಪಡೆದು ಆಲ್‍ರೌಂಡರ್ ಆಗಿ ಮಿಂಚಿದ್ದಾರೆ. ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾಗವಹಿಸಿದ್ದು, 2008 ರಿಂದ ಸತತವಾಗಿ ಚೆನ್ನೈ ತಂಡದ ಪರ ಆಡಿದ್ದರು. ಇದೂವರೆಗೂ ಐಪಿಎಲ್ ನಲ್ಲಿ 122 ಪಂದ್ಯಗಳನ್ನಾಡಿರುವ ಬ್ರಾವೋ 1,379 ರನ್ 136 ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೇ ಬ್ರಾವೋ ಅದ್ಭುತ ಸಿಂಗರ್ ಕೂಡ ಆಗಿದ್ದು, ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ ಸಿಎಸ್‍ಕೆ ಪ್ರಚಾರಕ್ಕಾಗಿ ತಮ್ಮದೇ ಬ್ಯಾಂಡ್ ಮೂಲಕ ಹಾಡನ್ನು ಬಿಡುಗಡೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv