Tag: ವಿತರಣೆ

  • ಸಂಸದರಿಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟ ಸಮ್ಮಿಶ್ರ ಸರ್ಕಾರ- ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರವೇ ಕೊಡಲಿಲ್ಲ

    ಸಂಸದರಿಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟ ಸಮ್ಮಿಶ್ರ ಸರ್ಕಾರ- ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರವೇ ಕೊಡಲಿಲ್ಲ

    ಚಿಕ್ಕಬಳ್ಳಾಪುರ: ಒಂದು ಕಡೆ ರಾಜ್ಯದ ಸಂಸದರಿಗೆ ದುಬಾರಿ ಐಪೋನ್ ಕೊಟ್ಟಿರೋ ಸಮ್ಮಿಶ್ರ ಸರ್ಕಾರ ಹಾಗೂ ಸಚಿವರ ನಡೆ ಎಲ್ಲರ ಟೀಕೆಗೆ ಗುರಿಯಾಗಿದೆ. ಆದ್ರೆ ಇತ್ತ ಶಾಲೆಗಳು ಆರಂಭವಾಗಿ ಎರಡು ತಿಂಗಳುಗಳೆ ಕಳೆದರೂ ಪಾಪ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ್ತ್ರವೇ ಕೊಟ್ಟಿಲ್ಲ. ಹೈಸ್ಕೂಲ್ ಗೆ ಬರುತ್ತಿದ್ದಂತೆ ಚೂಡಿದಾರ ತೊಡಬೇಕಿದ್ದ ಹೆಣ್ಣು ಮಕ್ಕಳು ಇನ್ನೂ ಹಳೆಯ ಲಂಗ-ಸ್ಕರ್ಟ್ ಧರಿಸಿಯೇ ಶಾಲೆಗೆ ಬರುವಂತೆ ಜಿಲ್ಲೆಯ ವಿದ್ಯಾರ್ಥಿನಿಯರ ಸ್ಥಿತಿ

    ಚಿಕ್ಕಬಳ್ಳಾಪುರ ಇದುವರೆಗೂ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸಿಲ್ಲ. 7ನೇ ತರಗತಿ ವರೆಗೂ ಲಂಗ ತೊಡುತ್ತಿದ್ದ ವಿದ್ಯಾರ್ಥಿನಿಯರು ಹೈ ಸ್ಕೂಲ್ ಮೆಟ್ಟಿಲೇರಿದ ಬಳಿಕ ಚೂಡಿದಾರ ತೊಡಬೇಕು. ಇಡೀ ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಸೇರಿ ಒಟ್ಟು 43,329 ಹೈಸ್ಕೂಲ್ ವಿದ್ಯಾರ್ಥಿಗಳಿದ್ದಾರೆ. ಕೆಲವರು ಯೂನಿಫಾರಂ ಇಲ್ಲದ ಕಾರಣ ಕಲರ್ ಬಟ್ಟೆ ತೊಟ್ಟು ಶಾಲೆಗಳಿಗೆ ಬರುತ್ತಿದ್ದರೆ, ಇನ್ನೂ ಕೆಲವರು ಹಳೆಯ ಯೂನಿಫಾರಂನ್ನೇ ಧರಿಸಿ ಶಾಲೆಗಳಿಗೆ ಬರುತ್ತಿದ್ದಾರೆ.

    ಇದರಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 8,388 ವಿದ್ಯಾರ್ಥಿನಿಯರಿದ್ದು, ಇವರಿಗೆಲ್ಲರಿಗೂ ಸಮವಸ್ತ್ರ ಭಾಗ್ಯ ಲಭಿಸಿಲ್ಲ. ಇದರಲ್ಲಿ 8ನೇ ತರಗತಿಯೇ ಒಟ್ಟು 5,205 ವಿದ್ಯಾರ್ಥಿನಿಯರಿದ್ದು, 7 ನೇ ತರಗತಿಯ ಲಂಗವನ್ನೇ ತೊಟ್ಟು ಹೈಸ್ಕೂಲ್‍ಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲ ಶಾಲೆಗಳಲ್ಲಿನ 8ನೇ ತರಗತಿ ವಿದ್ಯಾರ್ಥಿನಿಯರು ಕಲರ್ ಡ್ರಸ್‍ಗಳಲ್ಲಿ ಶಾಲೆಗೆ ಬರ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನ ಕೇಳಿದ್ರೇ ರಾಜ್ಯ ಮಟ್ಟದಲ್ಲಿ ಟೆಂಡರ್ ಸಮಸ್ಯೆ ಆಗಿದೆ ಅದಷ್ಟು ಬೇಗ ಕೊಡುತ್ತೇವ ಅಂತಿದ್ದಾರೆ.

    ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಬೇಕಾದ ಸರ್ಕಾರ ಇದುವರೆಗೂ ಒಂದು ಜೊತೆ ಸಮವಸ್ತ್ರವನ್ನೂ ಸಹ ವಿತರಿಸಿಲ್ಲ, ಹೀಗಾಗಿ ಸರ್ಕಾರಿ ಶಾಲೆಗೆ ಬರೋ ಮಕ್ಕಳು ಸ್ವಂತ ಹಣದಿಂದ ಸಮವಸ್ತ್ರ ಖರಿದಿಸೋ ಶಕ್ತಿ ಕೂಡ ಇರಲ್ಲ. ಒಂದು ಕಡೆ ಸಂಸದರಿಗೆ ಬೇಡದ ಇರೋ ಐಫೋನ್ ಕೊಡೋ ಸರ್ಕಾರ, ಇಲ್ಲಿ ಪಾಪ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡೋಕೆ ಮೀನಾಮೇಷ ಎಣಿಸ್ತಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

  • ದರ್ಶನ್ ಮ್ಯಾನೇಜರ್ ದೋಖಾ ಕಥೆ ಬಯಲಾಗಲು ನಟ ಅರ್ಜುನ್ ಸರ್ಜಾ ಕಾರಣ?

    ದರ್ಶನ್ ಮ್ಯಾನೇಜರ್ ದೋಖಾ ಕಥೆ ಬಯಲಾಗಲು ನಟ ಅರ್ಜುನ್ ಸರ್ಜಾ ಕಾರಣ?

    ಬೆಂಗಳೂರು: ದರ್ಶನ್ ಮ್ಯಾನೇಜರ್ ದೋಖಾ ಕಥೆ ಬಯಲಾಗಲು ಬಹುಭಾಷಾ ನಟ ಅರ್ಜುನ್ ಸರ್ಜಾ ಕಾರಣವೇ ಎನ್ನುವ ಅನುಮಾನ ಶುರುವಾಗಿದೆ.

    ಅರ್ಜುನ್ ಸರ್ಜಾ ನಿರ್ದೇಶಿಸಿ, ನಿರ್ಮಿಸಿದ ‘ಪ್ರೇಮಬರಹ’ ಸಿನಿಮಾವನ್ನು ತೂಗುದೀಪ್ ಪ್ರೊಡಕ್ಷನ್ ವಿತರಣೆ ಮಾಡಿತ್ತು. ಇದರ ಉಸ್ತುವಾರಿಯನ್ನ ಮಲ್ಲಿಕಾರ್ಜುನ್ ನೋಡಿಕೊಳ್ಳುತ್ತಿದ್ದ. ಮೊದಲ ವಾರದ ಸಿನಿಮಾದ ಶೇರ್ 10 ಲಕ್ಷ ಎಂದು ಮಲ್ಲಿ, ಅರ್ಜುನ್ ಸರ್ಜಾಗೆ ಲೆಕ್ಕ ಕೊಟ್ಟಿದ್ದಾನೆ.

    ಅನುಮಾನಗೊಂಡ ಅರ್ಜುನ್ ಸರ್ಜಾ ಕ್ರಾಸ್‍ಚೆಕ್ ಮಾಡಿದ್ದಾರೆ. ಎಲ್ಲ ಚಿತ್ರಮಂದಿರಕ್ಕೆ ಕರೆ ಮಾಡಿ ಎಷ್ಟು ಟಿಕೆಟ್ ಸೇಲ್ ಆಗಿದೆ, ಎಷ್ಟು ಶೋ ನಡೆದಿದೆ ಎಂಬುದನ್ನು ಮರು ಪರಿಶೀಲಿಸಿದ್ದಾರೆ. ಈ ವೇಳೆ ಮೊದಲ ವಾರ 10 ಲಕ್ಷ ಅಲ್ಲ 40 ಲಕ್ಷ ಅನ್ನೊದು ಕನ್ಫರ್ಮ್ ಆಗಿದೆ. ಮಲ್ಲಿಯನ್ನು ಕೂರಿಸಿ ತಮ್ಮ ಸ್ಟೈಲ್‍ನಲ್ಲಿ ವಿಚಾರಿಸಿದ ಸರ್ಜಾ ಅಸಲಿ ಕಥೆ ಬಾಯಿ ಬಿಡಿಸಿದ್ದಾರೆ. ತಪ್ಪು ಒಪ್ಪಿಕೊಂಡ ಮಲ್ಲಿ ಒಂದು ಕೋಟಿಯ ಚೆಕ್ ಕೊಟ್ಟು ದರ್ಶನ್ ಅವರಿಗೆ ಈ ವಿಚಾರವನ್ನು ತಿಳಿಸದಂತೆ ಕೈ ಮುಗಿದಿದ್ದಾನೆ ಎಂದು ತಿಳಿದುಬಂದಿದೆ. ಆ ಒಂದು ಕೋಟಿಯ ಚೆಕ್ ಬೌನ್ಸ್ ಆಗ್ತಿದಂತೆ ಮಲ್ಲಿ ಗಾಯಬ್ ಆಗ್ತಿದ್ದಾನೆ.

    ಪ್ರೇಮಬರಹ ಚಿತ್ರದ ವಿತರಣೆಯನ್ನು ಮಲ್ಲಿ ಮಾಡಿದ್ದನು. ಮಲ್ಲಿ ಸಿನಿಮಾ ವಿತರಣೆ ಮಾಡಿ ಈಗ ಆಗ ಎಂದು ಹೇಳಿ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ. ಅದು ತುಂಬಾ ಬೇಸರದ ವಿಷಯ. ಇದ್ದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಿಲ್ಲ. ಮಲ್ಲಿ 10 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಮೋಸ ಮಾಡಿದ್ದಾನೆ. ಎಲ್ಲರಿಗೂ ಮೋಸ ಮಾಡಿ ಹೋಗಿದ್ದಾನೆ. ಹಣಕ್ಕಿಂತ ಹೆಚ್ಚು ಆತ ನಂಬಿಕೆ ದ್ರೋಹ ಮಾಡಿದ್ದಾನೆ. ನಾವು ಮೋಸ ಹೋಗಿದ್ದೇವೆಂದು ತಿಳಿದು ಮನಸಿಗೆ ಬೇಸರವಾಗುತ್ತದೆ ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

    ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಮಲ್ಲಿಕಾರ್ಜುನ್ ಕಳೆದ 15-20 ದಿನದಿಂದ ಕಾಣೆಯಾಗಿದ್ದಾನೆ.

    ಮಲ್ಲಿ ಈ ಹಿಂದೆ ನಮ್ಮ ಡಿಸ್ಟ್ರಿಬ್ಯೂಶನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಮಲ್ಲಿಕಾರ್ಜುನ್‍ನನ್ನು ನಂಬಿ ಸಾಕಷ್ಟು ಜನ ಕೋಟಿ ಕೋಟಿ ಹಣ ಹೇಗೆ ನೀಡಿದ್ದರು ಎಂಬುದು ಗೊತ್ತಾಗುತ್ತಿಲ್ಲ. ಮಲ್ಲಿ ಕಾಣೆಯಾದ ಮೇಲೆ ಎಲ್ಲರೂ ನಮಗೆ ಕರೆ ಮಾಡಿ ಹಣವನ್ನು ಕೇಳುತ್ತಿದ್ದಾರೆ. ಮಲ್ಲಿ ನಮ್ಮ ಸಂಸ್ಥೆಯಲ್ಲಿ 15 ವರ್ಷದಿಂದ ಕೆಲಸ ಮಾಡುತ್ತಿದ್ದು, ತುಂಬ ನಂಬಿಕಸ್ಥ ವ್ಯಕ್ತಿ ಎಂದು ಅವನನ್ನು ಜೊತೆಯಲ್ಲೇ ಇರಿಸಿಕೊಳ್ಳುತ್ತಿದ್ದೇವು ಎಂದು ದರ್ಶನ್ ಸಹೋದರ ದಿನಕರ್ ಪ್ರತಿಕ್ರಿಯಿಸಿದ್ದಾರೆ.

  • ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    ಹೈದರಾಬಾದ್: ಎಸ್‍ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ -2 ಚಿತ್ರ ಟ್ರೇಲರ್ ಮೂಲಕವೇ ಈಗಾಗಲೇ ದಾಖಲೆ ನಿರ್ಮಿಸಿದೆ. ಇದೀಗ ಈ ಚಿತ್ರ ಮತ್ತೊಂದು ದಾಖಲೆ ಮುರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    250 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾದ ಬಾಹುಬಲಿ- 1 ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಂಡು 600 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ವಿಶೇಷ ಅಂದ್ರೆ ಇದರಲ್ಲಿ ಚಿತ್ರದ ನಿರ್ಮಾಪಕರಿಗಿಂತ ವಿತರಕರೇ ಹೆಚ್ಚಿನ ದುಡ್ಡು ಮಾಡಿದ್ರು. ನಾರ್ತ್ ಅಮೆರಿಕದಲ್ಲಿ ಬಾಹುಬಲಿ-1 ಚಿತ್ರದ ವಿತರಕರು 4 ಮಿಲಿಯನ್ ಡಾಲರ್( ಅಂದಾಜು 26 ಕೋಟಿ ರೂ.)ಗೆ ಚಿತ್ರದ ರೈಟ್ಸ್ ಖರೀದಿಸಿದ್ದರು. ಆದ್ರೆ ಇದರಿಂದ ಅವರು ಗಳಿಸಿದ್ದು ಬರೋಬ್ಬರಿ 9 ಮಿಲಿಯನ್ ಡಾಲರ್(ಅಂದಾಜು 58 ಕೋಟಿ ರೂ.)

    ಇದೀಗ ಬಾಹುಬಲಿ-2 ಚಿತ್ರದ ನಾರ್ತ್ ಅಮೆರಿಕದ ರೈಟ್ಸ್ ಬೇರೊಬ್ಬ ವಿತರಕರ ಪಾಲಾಗಿದೆ. ಗ್ರೇಟ್ ಇಂಡಿಯನ್ ಫಿಲ್ಮ್ಸ್‍ನವರು 7 ಮಿಲಿಯನ್ ಡಾಲರ್(45 ಕೋಟಿ ರೂ.) ಕೊಟ್ಟು ಬಾಹುಬಲಿ-2 ಸಿನಿಮಾದ ರೈಟ್ಸ್ ಖರೀದಿಸಿದ್ದಾರೆ. ಇದರಿಂದ ಬರೋಬ್ಬರಿ 15 ಮಿಲಿಯನ್‍ಡಾಲರ್ (98 ಕೋಟಿ ರೂ.) ಗಳಿಸೋ ನಿರೀಕ್ಷೆಯಲ್ಲಿದ್ದು, ಹಿಂದಿನ ದಾಖಲೆಗಳನ್ನ ಮುರಿಯುವ ಎಲ್ಲಾ ಲಕ್ಷಣಗಳಿವೆ.

    ಈ ಹಿಂದೆ ಅಮೆರಿಕದಲ್ಲಿ ದಾಖಲೆಯ ಹಣ ಗಳಿಸಿದ ಭಾರತೀಯ ಚಿತ್ರವೆಂದರೆ ಆಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ. ದಂದಲ್ ಚಿತ್ರ ಬರೋಬ್ಬರಿ 80.4 ಕೋಟಿ ರೂ. (12.3 ಮಿಲಿಯನ್ ಡಾಲರ್) ಗಳಿಸಿತ್ತು.

    ಅರ್ಕಾ ಮೀಡಿಯಾ ವಕ್ರ್ಸ್‍ನ ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಬೇರೆ ಬೇರೆ ಪ್ರದೇಶಗಳಿಗೆ ಹೊಸ ವಿತರಕರ ವ್ಯವಸ್ಥೆ ಮಾಡಿದ್ದಾರೆ. ಬಾಹುಬಲಿ-2ರ ಹಿಂದಿ ಆವೃತ್ತಿಯನ್ನ ಕರಣ್ ಜೋಹಾರ್ ಅವರ ಧರ್ಮ ಪ್ರೊಡಕ್ಷನ್ಸ್ ಹಾಗೂ ಅನಿಲ್ ಥಡಾನಿ ಅವರ ಎಎ ಫಿಲ್ಮ್ಸ್ ವಿರತಣೆ ಮಾಡಲಿದೆ. ರಾಜಮೌಳಿ ಹಾಗೂ ಬಾಹುಬಲಿ ಚಿತ್ರತಂಡ ಕಟ್ಟಪ್ಪನ ಖಡ್ಗವನ್ನ ಕರಣ್ ಜೋಹಾರ್‍ಗೆ ಗಿಫ್ಟ್ ಕೂಡ ಮಾಡಿದ್ದಾರೆ.

    ಇನ್ನು ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ವಿತರಕರು ಈಗಾಗಲೇ ದಾಖಲೆ ಮೊತ್ತದ ಹಣ ನೀಡಿ ರೈಟ್ಸ್ ಪಡೆದಿದ್ದಾರೆ. ಕೇರಳ ವಿತರಕರಾದ ಗ್ಲೋಬಲ್ ಯುನೈಟೆಡ್ ಮೀಡಿಯಾ ಬಾಹುಬಲಿ- 1 ಚಿತ್ರಕ್ಕೆ ನೀಡಿದ ಹಣಕ್ಕಿಂತ ಡಬಲ್ ಹಣ ಪಾವತಿಸಿದ್ದಾರೆ ಎನ್ನಲಾಗಿದೆ. ಬಾಹುಬಲಿ -2 ಚಿತ್ರದ ಮೇಲೆ ನಮಗೆ ಬಹಳ ನಂಬಿಕೆಯಿದೆ. ಚಿತ್ರತಂಡದೊಂದಿಗೂ ನಮಗೆ ಒಳ್ಳೇ ಬಾಂಧವ್ಯವಿದೆ. ಹೌದು, ನಾವು ದಾಖಲೆ ಮೊತ್ತದ ಹಣ ಕೊಟ್ಟಿದ್ದೇವೆ. ಆದ್ರೆ ಭಾಗ-1 ರಂತೆ ಬಾಹುಬಲಿ-2 ಚಿತ್ರ ಕೂಡ ಬಾಕ್ಸ್ ಆಫೀಸ್ ಧೂಳೆಬ್ಬಿಸಲಿದೆ ಅನ್ನೋ ನಂಬಿಕೆಯಿದೆ ಅಂತ ಗ್ಲೋಬಲ್ ಯುನೈಟೆಡ್ ಮೀಡಿಯಾದ ಪ್ರೇಮ್ ಮೆನನ್ ಹೇಳಿದ್ದಾರೆ.

    ಇನ್ನು ಬಾಹುಬಲಿ-2 ಚಿತ್ರದ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 78 ಕೋಟಿ ರೂ.ಗೆ ಮಾರಾಟವಾಗಿದೆ. ಹಿಂದಿ ಆವೃತ್ತಿ ಸೋನಿ ವಾಹಿನಿಗೆ(50 ಕೋಟಿ ರೂ.) ಹಾಗೂ ತೆಲುಗು, ತಮಿಳು, ಮಲಯಾಳಂ ಆವೃತ್ತಿ ಸನ್ ನೆಟವರ್ಕ್ ವಾಹಿನಿಗೆ (28 ಕೋಟಿ ರೂ.) ಮಾರಾಟವಾಗಿದೆ. ಇನ್ನು ಚಿತ್ರದ ಡಿಜಿಟಲ್ ರೈಟ್ಸ್ ನಿರ್ಮಾಪಕರ ಬಳಿ ಇದ್ದು ಅಮೇಜಾನ್ ಹಾಗೂ ನೆಟ್‍ಫ್ಲಿಕ್ಸ್ ಜೊತೆಗೆ ಮಾತುಕತೆ ನಡೆಯುತ್ತಿದೆ.

    ಬಾಹುಬಲಿ 1 ಹಾಗೂ ಭಾಗ-2 ಚಿತ್ರಗಳಿಗೂ 450 ಕೋಟಿ ರೂ. ಬಜೆಟ್. ಬಾಹುಬಲಿ-2 ಚಿತ್ರಕ್ಕೆ ನಿರ್ಮಾಪಕರಿಗೆ 400 ರಿಂದ 500 ಕೋಟಿ ರೂ. ಬರೋ ನಿರೀಕ್ಷೆಯಿದೆ. ಬಾಹುಬಲಿ-2 ಚಿತ್ರದ ಬಿಡುಗಡೆಗೂ ಮೊದಲೇ ನಾವು ಲಾಭ ಗಳಿಸಿದ್ದೇವೆ. ಈ ಚಿತ್ರ ಮತ್ತೊಂದು ಬ್ಲಾಕ್‍ಬಸ್ಟರ್ ಆಗುತ್ತದೆ ಹಾಗೂ ರೈಟ್ಸ್ ಪಡೆದವರೂ ಕೂಡ ಲಾಭ ಮಾಡಲಿದ್ದಾರೆ ಅನ್ನೋ ಎಲ್ಲಾ ನಂಬಿಕೆಯಿದೆ ಅಂತಾರೆ ಚಿತ್ರದ ನಿರ್ಮಾಪಕ ಯರ್ಲಗಡ್ಡ.

    ಬಾಹುಬಲಿ-2 ಚಿತ್ರ ಏಪ್ರಿಲ್ 28ರಂದು ಭಾರತದಲ್ಲಿ 6500 ಸ್ಕ್ರೀನ್‍ಗಳಲ್ಲಿ ಹಾಗೂ ನಾರ್ತ್ ಅಮೆರಿಕದಲ್ಲಿ 750 ಸ್ಕ್ರೀನ್‍ಗಳಲ್ಲಿ, ಜೊತೆಗೆ ಇನ್ನುಳಿದ 1000 ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಲಿದೆ.

    ತೆಲುಗು ಟ್ರೇಲರ್

    ಹಿಂದಿ ಟ್ರೇಲರ್

    ಮಲೆಯಾಳಂ ಟ್ರೇಲರ್

    ತಮಿಳು ಟ್ರೇಲರ್

    ಪ್ರೋಮೋ ಟ್ರೇಲರ್ ವಿಡಿಯೋ