Tag: ವಿಡಿಯೋ ಪಬ್ಲಿಕ್ ಟಿವಿ

  • ಮಗನಿಗೆ ಹಸುಹಾಲು ಕರೆಯೋ ಟ್ರೈನಿಂಗ್  ಕೊಡೋದ್ರಲ್ಲಿ ಡಿ ಬಾಸ್ ಬ್ಯುಸಿ!

    ಮಗನಿಗೆ ಹಸುಹಾಲು ಕರೆಯೋ ಟ್ರೈನಿಂಗ್ ಕೊಡೋದ್ರಲ್ಲಿ ಡಿ ಬಾಸ್ ಬ್ಯುಸಿ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮಗ ವಿನೀಶ್‍ಗೆ ಹಸುಹಾಲು ಕರೆಯುವ ಟ್ರೈನಿಂಗ್  ಕೊಡುವುದರಲ್ಲಿ ಫುಲ್ ಬ್ಯುಸಿಯಗಿದ್ದಾರೆ. ಮೈಸೂರಿನ ಫಾರ್ಮ್‍ಹೌಸ್‍ನಲ್ಲಿ ದರ್ಶನ್ ಮತ್ತು ವಿನೀಷ್ ಹಸುಹಾಲು ಕರೆಯುತ್ತಿರುವ ವಿಡಿಯೋವನ್ನು ಅವರ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

    ಮಂಡ್ಯ ಎಲೆಕ್ಷನ್ ಪ್ರಚಾರದಲ್ಲಿ ಸಿಕ್ಕಪಟ್ಟೆ ಬ್ಯುಸಿಯಾಗಿದ್ದ ದಚ್ಚು ಈಗ ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಡಿ ಬಾಸ್‍ನ ಹೊಸ ಸಿನಿಮಾ ರಾಬರ್ಟ್ ಸದ್ಯದಲ್ಲೇ ಸೆಟ್ಟೇರಲಿದ್ದು, ಈ ಗ್ಯಾಪ್‍ನಲ್ಲಿ ಮಗನ ಜೊತೆ ದಚ್ಚು ತಮ್ಮ ಸಮಯ ಕಳೆಯುತ್ತಿದ್ದಾರೆ. ಅಪ್ಪನ ರೀತಿಯೇ ಮಗ ವಿನೀಶ್ ಕೂಡ ಪ್ರಾಣಿ ಪ್ರೇಮಿ. ಆದ್ದರಿಂದ ಮಗನಿಗೆ ದರ್ಶನ್ ಹಸುವಿನ ಹಾಲು ಹೇಗೆ ಕರೆಯಬೇಕು ಎನ್ನುವುದನ್ನು ಕಲಿಸುತ್ತಿದ್ದರೆ, ಇತ್ತ ಮಗ ಕೂಡ ಆಸಕ್ತಿಯೊಂದಿಗೆ ತಂದೆಯ ಜೊತೆ ಟ್ರೈನಿಂಗ್ ಪಡೆಯುತ್ತಿದ್ದಾರೆ.

    ಲೋಕಸಭಾ ಚುನಾವಣೆ ಹಿನ್ನೆಲೆ ಮಂಡ್ಯ ಪ್ರಚಾರದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ದರ್ಶನ್ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ದಚ್ಚು ಸ್ವಲ್ಪವು ಮುಜುಗರ ಮಾಡಿಕೊಳ್ಳದೇ ಜನರ ನಡುವೆ ಖುಷಿಯಿಂದ ಹಸುವಿನ ಹಾಲು ಕರೆದು ನಾನು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದರು. ಈ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.

    ಈ ಹಿಂದೆ ವಿನೀಶ್ ಅವರು ಸಾಕುತ್ತಿರುವ ಕುದುರೆ ಮೇಲೆ ಸವಾರಿ ಮಾಡಿದ ಫೋಟೋ ಸಖತ್ ವೈರಲ್ ಆಗಿತ್ತು. ವಿನೀಶ್ ಕುದುರೆ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು.

  • ಮಲ್ಲಿಕಾರ್ಜುನ ಖರ್ಗೆ ದೇಶದ ಅತಿದೊಡ್ಡ ಶ್ರೀಮಂತ ದಲಿತ- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ

    ಮಲ್ಲಿಕಾರ್ಜುನ ಖರ್ಗೆ ದೇಶದ ಅತಿದೊಡ್ಡ ಶ್ರೀಮಂತ ದಲಿತ- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ

    ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಟ್ವಿಟ್ಟರ್ ವಾರ್ ಜೋರಾಗಿಯೇ ನಡೆಯುತ್ತಿದ್ದು, ಇದೀಗ ಬಿಜೆಪಿಯವರು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಟೆಂಪಲ್ ರನ್ ಮುಗಿಸಿ ಹೋದ ನಂತರ ಟೀಕೆಗಳು ಆರಂಭವಾಗಿವೆ. ಬಿಜೆಪಿಯವರು ಇದೀಗ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.

    ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ದೇಶದ ಅತಿದೊಡ್ಡ ಶ್ರೀಮಂತ ದಲಿತ ವ್ಯಕ್ತಿಯಾಗಿದ್ದು, ಇವರಲ್ಲಿ 50 ಸಾವಿರ ಕೋಟಿ ಆಸ್ತಿಯಿದೆ. ಚಿಕ್ಕಮಗಳೂರಿನಲ್ಲಿ 1000 ಕೋಟಿ ಮೌಲ್ಯದ 300 ಎಕರೆ ಕಾಫಿ ಎಸ್ಟೇಟ್ ಇದೆ ಎಂದು ಆರೋಪ ಮಾಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೇಶದ 6ನೇ ಶ್ರೀಮಂತ ಸಿಎಂ: ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

    1427 ಎಂಜಿನಿಯರ್ ಹುದ್ದೆಗಳ ಅಕ್ರಮ ನೇಮಕಾತಿಯ ಆರೋಪ ಮಾಡಲಾಗಿದ್ದು, ಬನ್ನೇರುಘಟ್ಟದಲ್ಲಿ 500 ಕೋಟಿ ಮೌಲ್ಯದ ಕಾಂಪ್ಲೆಕ್ಸ್, ರಾಮಯ್ಯ ಮೆಡಿಕಲ್ ಕಾಲೇಜು ಸಮೀಪ 25 ಕೋಟಿ ವೆಚ್ಚ ಕಟ್ಟಡ, ಕೆಂಗೇರಿ ಬಳಿ ಸರ್ಕಾರಿ ಜಾಗದಲ್ಲಿ 40 ಎಕರೆ ಫಾರ್ಮ್ ಹೌಸ್, ಮಗಳ ಹೆಸರಿನಲ್ಲಿ 50 ಕೋಟಿ ವೆಚ್ಚದ ಮನೆ, 13 ಎಕರೆ ಬಳ್ಳಾರಿ ರಸ್ತೆಯಲ್ಲಿ ಜಮೀನು, ಇಂದಿರಾನಗರದಲ್ಲಿ 3 ಬಿಲ್ಡಿಂಗ್, ಸದಾಶಿವನಗರದಲ್ಲಿ ಎರಡು ಮನೆ ಇದೆ. ಇವುಗಳ ಬಗ್ಗೆ ಯಾಕೆ ತನಿಖೆ ಆಗ್ತಿಲ್ಲ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನು ದೇಶದ 6ನೇ ಶ್ರೀಮಂತ ಸಿಎಂ ಆಗಿದ್ದು ಹೇಗೆ: ಸಿದ್ದರಾಮಯ್ಯ ಹೇಳ್ತಾರೆ ಓದಿ

    ನಿಮಗೆ ಬೇರೆ ಯಾರು ವಿರೋಧ ಪಕ್ಷದ ನಾಯಕನ ನೇಮಕ ಮಾಡಲು ಆಗಲಿಲ್ಲವಾ? ಲೋಕಾಯುಕ್ತ ಅಧಿಕಾರವನ್ನು ಕಿತ್ತು ಹಾಕಿದ್ದು ಇದಕ್ಕೇನಾ ಸಿದ್ದರಾಮಯ್ಯ ಅವರೇ? ಚಾರ್ಜ್ ಮಾಡುವ ಕಾಲ ಬಂದಿದೆ. ಹೀಗಾಗಿ ಉತ್ತರ ಕೊಡಿ ಅಂತ ಬಿಜೆಪಿಯವರು ರಾಹುಲ್ ಹಾಗೂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

  • ತಾಯಿ ಸಾವಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ

    ತಾಯಿ ಸಾವಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ

    ಮೈಸೂರು: ತಾಯಿಯ ಸಾವಿನಿಂದ ಮನನೊಂದು ಮಗ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಾಜಮಂಗಲದಲ್ಲಿ ನಡೆದಿದೆ.

    ವಾಜಮಂಗಲದ ರತ್ನಮ್ಮ(55) ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ತಾಯಿ ಮೃತಪಡುವುದು ಸ್ಪಷ್ಟವಾಗುತ್ತಿದ್ದಂತೆ ಮಗ ಸತೀಶ್ ಆತ್ಮಹತ್ಯೆ ನಿರ್ಧಾರ ಮಾಡಿ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಇನ್ನೂ ಕೆಲವೇ ಕ್ಷಣಗಳಲ್ಲಿ ನನ್ನ ತಾಯಿ ಸಾಯುತ್ತಾರೆ. ಹೀಗಾಗಿ ನಾನು ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ತಾಯಿಯ ಸಾವಿನ ಸುದ್ದಿ ಅಧಿಕೃತವಾಗುತ್ತಿದ್ದಂತೆ ಸತೀಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ವಿಡಿಯೋದಲ್ಲೇನಿದೆ?: ಎಲ್ಲಾ ನನ್ನ ಸ್ನೇಹಿತರಿಗೆ ನನ್ನ ಕಡೆಯ ನಮಸ್ಕಾರಗಳು. ನಮ್ಮ ತಾಯಿ ಬೆಳಗ್ಗೆ ತೀರಿಕೊಳ್ಳುತ್ತಿದ್ದಾರೆ. ಅದಕ್ಕೆ ನನಗೆ ನನ್ನ ತಾಯಿಯನ್ನು ಬಿಟ್ಟು ಬದುಕಲು ಆಗಲ್ಲ. ಹಾಗಾಗಿ ನಾನು ನನ್ನ ತಾಯಿ ಜೊತೆ ಹೋಗಬೇಕು ಎಂದು ನಿರ್ಧರಿಸಿದ್ದೇನೆ. ನಾನು ಏಕೆ ಈ ವಿಡಿಯೋ ಮಾಡುತ್ತಿದ್ದೀನಿ ಎಂದರೆ ನನ್ನ ಸ್ನೇಹಿತರು ಹಾಗೂ ನನ್ನ ಸಂಬಂಧಿಕರು ಎಲ್ಲರನ್ನೂ ನಾನು ಪ್ರೀತಿಯಿಂದ ಮೋಸ ಮಾಡುತ್ತಿದ್ದೀನಿ. ಏಕೆಂದರೆ ನನ್ನ ತಾಯಿ ತೀರಿಕೊಳ್ಳತ್ತಿದ್ದಾರೆ. ನನ್ನ ಪ್ರೀತಿಸೋ ಎಲ್ಲ ಸ್ನೇಹಿತರಿಗೂ ನನ್ನ ಕಡೆಯ ನಮಸ್ಕಾರಗಳು ಹಾಗೂ ನನ್ನ ಪ್ರೀತಿಯ ಕುಮಾರಣ್ಣನಿಗೆ, ಸತೀಶ್ ಅಣ್ಣ, ವೀರೂ, ಜಿದ್ದು, ವಿನೋದ್, ಯೋಗೇಶ್ ಹಾಗೂ ನನ್ನ ಇತರ ಆತ್ಮೀಯ ಸ್ನೇಹಿತರಿಗೆ ನನ್ನ ಕಡೆಯ ನಮಸ್ಕಾರ. ದಯವಿಟ್ಟು ನನ್ನ ಕ್ಷಮಿಸಿ. ನಾನು ಕೆಲವರಿಗೆ ಮೋಸ ಮಾಡಿ ಹೋಗುತ್ತಿದ್ದೀನಿ. ಯಾಕೆ ಎಂದು ಹೇಳೋಕೆ ಆಗಲ್ಲ. ನನ್ನ ತಾಯಿ ಚೆನ್ನಾಗಿ ಇದಿದ್ದರೆ ನಾನು ಯಾರಿಗೂ ಮೋಸ ಮಾಡುತ್ತಿರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸತೀಶ್ ತನ್ನ ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ. ಹೀಗಾಗಿ ತಾಯಿಯ ಸಾವಿನ ಬೆನ್ನಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ವರ್ಷಗಳ ಹಿಂದಷ್ಟೇ ಸತೀಶ್ ತಂದೆಯೂ ತೀರಿಕೊಂಡಿದ್ದರು. ನಾಲ್ಕು ಜನರ ಕುಟುಂಬದಲ್ಲಿ ಈಗ ಒಬ್ಬ ಮಗಳಷ್ಟೇ ಬದುಕುಳಿದಿದ್ದಾಳೆ. ಕುಟುಂಬದ ಮೂವರನ್ನ ಕಳೆದುಕೊಂಡ ಮನೆ ಮಗಳ ಗೋಳು ಮುಗಿಲು ಮುಟ್ಟಿದೆ.

    ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

  • ಭಕ್ತರ ತಲೆಯಲ್ಲಿ ಹೇನು ಹುಡುಕ್ತಿರೋ ಕೋತಿ ವಿಡಿಯೊ ವೈರಲ್

    ಭಕ್ತರ ತಲೆಯಲ್ಲಿ ಹೇನು ಹುಡುಕ್ತಿರೋ ಕೋತಿ ವಿಡಿಯೊ ವೈರಲ್

    ಕೊಪ್ಪಳ: ಕೋತಿಯೊಂದು ಮಹಿಳೆಯರ ತಲೆಯಲ್ಲಿ ಹೇನು ಹುಡುಕುತ್ತಿರೋ ದ್ರಶ್ಯವೊಂದು ಮೊಬೈಲ್ ನಲ್ಲಿ ಸೆರೆಯಾಗಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಕನಕಗಿರಿ ದ್ಯಾಮವ್ವ ದೇವಸ್ಥಾನದಲ್ಲಿ ಕೋತಿಯೊಂದು ಮಹಿಳೆಯರ ತಲೆ ಕ್ಲೀನ್ ಮಾಡುತ್ತಿದೆ. ದ್ಯಾಮವ್ವ ದೇವಸ್ಥಾನಕ್ಕೆ ಬಂದು ಹೋಗುವ ಭಕ್ತರ ತಲೆಯನ್ನು ಕೋತಿ ಕ್ಲೀನ್ ಮಾಡುತ್ತಿದೆ.

    ಕನಕಗಿರಿ ಹೊರವಲಯದಲ್ಲಿರೋ ದ್ಯಾಮವ್ವ ದೇವಸ್ಥಾನದಲ್ಲಿ ಬೀಡು ಬಿಟ್ಟಿರೋ ಈ ಕೋತಿ ದೇವಸ್ಥಾನಕ್ಕೆ ಬಂದ ಎಲ್ಲಾ ಭಕ್ತರ ತಲೆ ಮೇಲೆ ಕುಳಿತು ಹೇನು ಹುಡುಕುತ್ತದೆ. ಯಾವುದೇ ಮುಲಾಜಿಲ್ಲದೆ ಕೋತಿ ಮಹಿಳೆಯರ ಬೆನ್ನೇರಿ ತಲೆಯಲ್ಲಿ ಹೇನು ಹುಡುಕುತ್ತಾ ಇರುತ್ತದೆ.

    ಹೆಣ್ಣು ಮಕ್ಕಳು ಕೂಡಾ ನಾ ಮುಂದು ತಾ ಮುಂದು ಎಂದು ಕೋತಿಗೆ ತಲೆ ಕೊಡುತ್ತಿದ್ದಾರೆ. ವೃದ್ಧೆಯರು, ಯುವತಿಯರು ಹೆದರದೆ ಕೋತಿಗೆ ತಲೆಕೊಟ್ಟು ಕ್ಲೀನ್ ಮಾಡಿಸಿಕೊಳ್ಳುತ್ತಿರೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಯಾರಿಗೂ ತೊಂದರೆ ಕೊಡದ ಕೋತಿ ತನ್ನ ಪಾಡಿಗೆ ತಾನು ತಲೆಯಲ್ಲಿನ ಹೇನು ನೋಡುತ್ತಿರೋದನ್ನ ಕಂಡು ಜನ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    https://www.youtube.com/watch?v=cRWKEeSAvmg&feature=youtu.be