Tag: ವಿಡಿಯೋ ಗೇಮ್

  • ವೀಡಿಯೋ ಗೇಮ್ ಕಸಿದುಕೊಂಡಿದ್ದಕ್ಕೆ ಮಾರಣಾಂತಿಕ ಹಲ್ಲೆ- ವಿದ್ಯಾರ್ಥಿ ಅರೆಸ್ಟ್

    ವೀಡಿಯೋ ಗೇಮ್ ಕಸಿದುಕೊಂಡಿದ್ದಕ್ಕೆ ಮಾರಣಾಂತಿಕ ಹಲ್ಲೆ- ವಿದ್ಯಾರ್ಥಿ ಅರೆಸ್ಟ್

    ಫ್ಲೋರಿಡಾ: ಶಾಲೆಗೆ ತಂದಿದ್ದ ವೀಡಿಯೋಗೇಮ್‍ನ್ನು ಕಸಿದುಕೊಂಡಿದ್ದಕ್ಕಾಗಿ 17 ವರ್ಷದ ಹುಡುಗನೊಬ್ಬ ಶಾಲೆಯ ಶಿಕ್ಷಕರೊಬ್ಬರ ಸಹಾಯಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಫ್ಲೋರಿಡಾದ ಮತಾನ್ಜಾಸ್‍ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿದ್ಯಾರ್ಥಿ ಹಲ್ಲೆ ನಡೆಸುತ್ತಿರುವ ವೀಡಿಯೋವನ್ನು ಫ್ಲಾಗರ್ ಕೌಂಟಿ ಶೆರಿಫ್ ಕಛೇರಿಯು ಬಿಡುಗಡೆ ಮಾಡಿದೆ. ಅದರಲ್ಲಿ ವಿದ್ಯಾರ್ಥಿಯು ಸಹಾಯಕಿಯನ್ನು ನೆಲಕ್ಕೆ ತಳ್ಳಿ ಒದೆಯುವುದು ಮತ್ತು ಗುದ್ದುತ್ತಿರುವುದು ಸೆರೆಯಾಗಿದೆ. ಇದನ್ನೂ ಓದಿ: ನಿಲ್ಲಿಸಿದ್ದ ಬಸ್‍ಗಳಿಗೆ ಟ್ರಕ್ ಡಿಕ್ಕಿ- 8 ಮಂದಿ ಸಾವು, 50 ಮಂದಿಗೆ ಗಾಯ

    ಶಿಕ್ಷಕ ಹಾಗೂ ಜನರು ಆತನನ್ನು ತಡೆಯುವ ತನಕ ನಿರಂತರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾಗಿದ್ದ ಸಹಾಯಕಿ ಸುಧಾರಿಸಿಕೊಳ್ಳಲು ಹಲವು ನಿಮಿಷಗಳನ್ನು ತೆಗೆದುಕೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಹಲ್ಲೆಯಿಂದ ಪಕ್ಕೆಲುಬು ಹಾಗೂ ಮೂಳೆಗಳಿಗೆ ತೀವ್ರವಾಗಿ ಪೆಟ್ಟಾಗಿದ್ದ ಸಹಾಯಕಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ನಮ್ಮ ಸೊಸೈಟಿ ಬಗ್ಗೆ ಮಾತಾಡಲು ನೀನ್ಯಾರು?- ಎನ್.ಆರ್ ಸಂತೋಷ್‍ಗೆ ಗ್ರಾಮಸ್ಥರಿಂದ ತರಾಟೆ

  • 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    ಟೋಕಿಯೋ: ಗೇಮರ್ ಅಜ್ಜಿ ಖ್ಯಾತಿಯ ಜಪಾನ್‍ನ ಹಮಕೋ ಮರಿ 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿನ ಆಟಕ್ಕಿಂತ ಹೆಚ್ಚಾಗಿ ಆನ್‍ಲೈನ್ ಗೇಮ್, ಮೊಬೈಲ್ ಗೇಮ್‍ಗಳಲ್ಲೇ ಯುವಕರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಪಬ್ ಜಿ, ಸಿಒಡಿ ಆನ್‍ಲೈನ್ ಗೇಮ್‍ಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಅನೇಕ ಪೋಷಕರು ಆರೋಪಿಸಿದ್ದಾರೆ. ಆದರೆ 90 ವರ್ಷದ ಅಜ್ಜಿ ಆನ್‍ಲೈನ್ ಗೇಮಿಂಗ್‍ನಲ್ಲಿ ಗಿನ್ನಿಸ್ ದಾಖಲೆ ಬೆರೆದು ಹುಬ್ಬೇರಿಸುವಂತೆ ಮಾಡಿದ್ದಾರೆ.

    1981ರಿಂದ ಗೇಮಿಂಗ್ ಜಗತ್ತಿನಲ್ಲಿ ಸ್ಟೆಲ್ಲರ್ ಆಗಿರುವ ಜಪಾನ್‍ನ 90 ವರ್ಷದ ಅಜ್ಜಿ ಹಮಕೋ ಮಾರಿ ಅವರು 1981 ರಿಂದ ಗೇಮಿಂಗ್ ಕೌಶಲ್ಯವನ್ನು ಮೆರುಗುಗೊಳಿಸಿದ್ದಾರೆ. ಅವರು 1981ರಿಂದ ಗೇಮಿಂಗ್ ಜಗತ್ತಿನಲ್ಲಿ ನಾಕ್ಷತ್ರಿಕರಾಗಿದ್ದಾರೆ. ವಿಡಿಯೋ ಗೇಮ್‍ಗಳ ಬಗ್ಗೆ ಉತ್ಸಾಹ ಮತ್ತು ಪ್ರೀತಿ, “ಗೇಮರ್ ಅಜ್ಜಿ”, ಅವರು ಜನಪ್ರಿಯವಾಗಿ ತಿಳಿದಿರುವಂತೆ, ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    1930ರ ಫೆಬ್ರವರಿ 18ರಂದು ಜನಿಸಿದ ಹಮಕೋ ಮರಿ ತಮ್ಮ 39ನೇ ವಯಸ್ಸಿನಲ್ಲಿ ಗೇಮಿಂಗ್ ಜಗತ್ತಿಗೆ ಕಾಲಿಟ್ಟರು. ಬಳಿಕ 2014ರ ಡಿಸೆಂಬರ್ 19ರಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್‍ನೊಂದಿಗೆ ಆನ್‍ಲೈನ್‍ನಲ್ಲಿ ತೊಡಗಿದರು. ಪ್ರತಿ ತಿಂಗಳು ನಾಲ್ಕು ವಿಡಿಯೋಗಳನ್ನು ಅಪ್‍ಲೋಡ್ ಮಾಡುವ ಅಜ್ಜಿ ಕಾಲ್ ಆಫ್ ಸೇರಿದಂತೆ ಅನೇಕ ಆನ್‍ಲೈನ್ ಆಟಗಳನ್ನು ಚೆನ್ನಾಗಿ ತಿಳಿದಿದ್ದಾರೆ.

    ಡ್ಯೂಟಿ, ಡಾಂಟ್‍ಲೆಸ್, ನೀರ್ ಅಂಡ್ ಆಟೊಮ್ಯಾಟಾ, ಗ್ರ್ಯಾಂಡ್ ಥೆಫ್ಟ್ ಆಟೋ ವಿ ಹಮಕೋ ಮರಿ ಅವರ ನೆಚ್ಚಿನ ಆಟವಾಗಿವೆ. ಅಷ್ಟೇ ಅಲ್ಲದೆ ಅವರು ಹಲವಾರು ಆನ್‍ಲೈನ್ ಆಟಗಳನ್ನು ಆಡಿ ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ನಲ್ಲಿ ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಜಪಾನಿನ ಅಜ್ಜಿ ಪ್ರತಿದಿನ ಏಳು ರಿಂದ ಎಂಟು ಗಂಟೆಗಳ ಕಾಲ ಗೇಮಿಂಗ್‍ನಲ್ಲೇ ಕಳೆಯುತ್ತಾರೆ. ಜೊತೆಗೆ ಹಮಕೋ ಮಾರಿ ಅವರ ಯೂಟ್ಯೂಬ್ ಚಾನೆಲ್‍ಗೆ 2.78 ಲಕ್ಷ ಚಂದಾದಾರರಿದ್ದಾರೆ.

  • ವಿಡಿಯೋ ಗೇಮ್ ಆಡಿ 1.4 ಕೋಟಿ ರೂ. ಸಂಪಾದಿಸಿದ ಬಾಲಕ

    ವಿಡಿಯೋ ಗೇಮ್ ಆಡಿ 1.4 ಕೋಟಿ ರೂ. ಸಂಪಾದಿಸಿದ ಬಾಲಕ

    ವಾಷಿಂಗ್‍ಟನ್: 14 ವರ್ಷದ ನ್ಯೂಯಾರ್ಕ್ ಬಾಲಕನೊಬ್ಬ ಪ್ರತಿದಿನ 18 ಗಂಟೆ ವಿಡಿಯೋ ಗೇಮ್ ಆಡಿ ಒಂದು ವರ್ಷಕ್ಕೆ 1.4 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.

    ಗ್ರಿಫಿನ್ ಸ್ಪಿಕೋಸಕಿಗೆ ವಿಡಿಯೋ ಗೇಮ್ ಆಡುವುದೆಂದರೆ ತುಂಬಾನೇ ಇಷ್ಟ. ಆತ ದಿನಕ್ಕೆ 18 ಗಂಟೆ ಫೋರ್ಟ್‍ನೈಟ್ ವಿಡಿಯೋ ಗೇಮ್ ಆಡುತ್ತಿದ್ದನು. ವಿಡಿಯೋ ಗೇಮ್ ಆಡುವುದರ ಜೊತೆಗೆ ಗ್ರಿಫಿನ್ ಆ ವಿಡಿಯೋಗಳನ್ನು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡುತ್ತಾನೆ.

    ಗ್ರಿಫಿನ್ ಅಪ್ಲೋಡ್ ಮಾಡುವ ವಿಡಿಯೋಗಳಿಂದ ಯೂಟ್ಯೂಬ್‍ನಲ್ಲಿ ಹೆಚ್ಚು ಹಣವನ್ನು ಸಂಪಾದಿಸುತ್ತಾನೆ. ಗ್ರಿಫಿನ್‍ನ ಯೂಟ್ಯೂಬ್ ಚಾನೆಲ್‍ನಲ್ಲಿ ಸುಮಾರು 12 ಲಕ್ಷ ಸಬಸ್ಕ್ರೈಬರ್ ಇದ್ದಾರೆ. ಅಲ್ಲದೆ ಗ್ರಿಫಿನ್‍ನ ವಿಡಿಯೋಗಳಿಗೆ 7.1 ಕೋಟಿ ವ್ಯೂ ಸಿಕ್ಕಿದೆ.

    ಗ್ರಿಫಿನ್ ಧ್ಯಾನ ಯಾವಾಗಲೂ ವಿಡಿಯೋ ಗೇಮ್ ಆಡುವುದರಲ್ಲಿ ಇತ್ತು. ವಿಡಿಯೋ ಗೇಮ್‍ನಿಂದ ಆತನಿಗೆ ಇಷ್ಟೊಂದು ಯಶಸ್ಸು ಸಿಕ್ಕಿದೆ ಎಂದು ನಮಗೆ ನಂಬುವುದಕ್ಕೆ ಆಗುತ್ತಿಲ್ಲ. ಅಲ್ಲದೆ ನಮ್ಮ ಮಗನ ಸಂಪಾದನೆ ನೋಡಿ ನಾವು ಆತನಿಗಾಗಿ ಫೈನಾನಿಶಿಯರ್ ಅಡ್ವೈಸರ್ ಹಾಗೂ ಅಕೌಂಟೆಂಟ್ ಕೂಡ ಇಟ್ಟಿದ್ದೇವೆ ಎಂದು ಗ್ರಿಫಿನ್ ಪೋಷಕರು ತಿಳಿಸಿದ್ದಾರೆ.

    ಗ್ರಿಫಿನ್ ಮೂರು ವರ್ಷ ಇದ್ದಾಗಲೇ ವಿಡಿಯೋ ಗೇಮ್ ಆಡಲು ಶುರು ಮಾಡಿದ್ದಾನೆ. ವಿಡಿಯೋ ಗೇಮ್ ಮೇಲಿರುವ ಪ್ರೀತಿಯನ್ನು ನೋಡಿ ನಾವು ಆತನನ್ನು ಶಾಲೆಯಿಂದ ಬಿಡಿಸಿದ್ದೇವೆ. ಗ್ರಿಫಿನ್ ಈಗ ಮನೆಯಲ್ಲೇ ಆನ್‍ಲೈನ್ ಮೂಲಕ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಜೊತೆಗೆ ವಿಡಿಯೋ ಗೇಮ್ ಆಡಿ ಕೋಟಿ ರೂ. ಸಂಪಾದಿಸುತ್ತಿದ್ದಾನೆ.

    2018ರಲ್ಲಿ ಗ್ರಿಫಿನ್ ಫೋರ್ಟ್‍ನೈಟ್ ವಿಡಿಯೋ ಗೇಮ್‍ನ ಪ್ರಮುಖ ಆಟಗಾರನನ್ನು ಸೋಲಿಸಿ ಆ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಆ ವಿಡಿಯೋ ಸುಮಾರು 75 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿತ್ತು. ಈ ವಿಡಿಯೋದಿಂದ ಗ್ರಿಫಿನ್ 100 ಡಾಲರ್ ಅಂದರೆ ಸುಮಾರು 7,000 ರೂ. ಸಿಕ್ಕಿತ್ತು. ಇದು ಆತನ ಮೊದಲ ಸಂಪಾದನೆ.

  • ವಿಡಿಯೋಗೇಮ್ ಹುಚ್ಚು ಕಡಿಮೆ ಮಾಡಲು ಮಲೇಷ್ಯಾದಲ್ಲಿ ಮಕ್ಕಳಿಗೆ ಇಂಟರ್​ನೆಟ್ ಬ್ಯಾನ್!

    ವಿಡಿಯೋಗೇಮ್ ಹುಚ್ಚು ಕಡಿಮೆ ಮಾಡಲು ಮಲೇಷ್ಯಾದಲ್ಲಿ ಮಕ್ಕಳಿಗೆ ಇಂಟರ್​ನೆಟ್ ಬ್ಯಾನ್!

    ಕೌಲಾಲಂಪುರ: ದಿನದಲ್ಲಿ ಹೆಚ್ಚು ಸಮಯವನ್ನು ವಿಡಿಯೋ ಗೇಮ್ ಆಡುವುದರಲ್ಲಿ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಕ್ಕಳ ಇಂಟರ್​ನೆಟ್ ಬಳಕೆಗೆ ನಿಷೇಧ ಹೇರಲು ಮಲೇಷ್ಯಾ ಸರ್ಕಾರ ಸಿದ್ಧತೆ ನಡೆಸಿದೆ.

    ಉತ್ತರ ಕೊರಿಯಾ ಹಾಗೂ ಜಪಾನ್ ಮಾದರಿಯನ್ನು ಅಳವಡಿಸಿಕೊಳ್ಳಲು ಮಲೇಷ್ಯಾ ಸರ್ಕಾರ ಮುಂದಾಗಿದೆ. ಈ ಕುರಿತು ಸೋಮವಾರ ಸಂಸತ್ ಕಲಾಪದಲ್ಲಿ ಉಪ ಆರೋಗ್ಯ ಸಚಿವ ಡಾ.ಲೀ ಬೂನ್ ಚೈ ಇಂಟರ್ ನೆಟ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

    ಹೆಚ್ಚು ಇಂಟರ್ ನೆಟ್ ಬಳಕೆ ಮಕ್ಕಳ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿದ್ದು, ಯುವಜನರ ಆರೋಗ್ಯದ ದೃಷ್ಟಿಯಿಂದ ಇಂಟರ್​ನೆಟ್ ನಿಷೇಧಕ್ಕೆ ಮುಂದಾಗಿರುವುದಾಗಿ ತಿಳಿಸಿದರು.

    ಆರೋಗ್ಯ ಮತ್ತು ಅಸ್ವಸ್ಥತೆ ಅಧ್ಯಯನದ ಪ್ರಕಾರ, ಕಳೆದ ವರ್ಷ ಮಲೇಷ್ಯಾದ 13 ರಿಂದ 17 ವರ್ಷದ ಮಕ್ಕಳಲ್ಲಿ ಶೇಕಡಾ 34.9 ರಷ್ಟು ಮಕ್ಕಳು ಇಂಟರ್ ನೆಂಟ್ ಬಳಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ಒಂದು ದಿನದಲ್ಲಿ 4 ಗಂಟೆಗಳ ಕಾಲವನ್ನು ಅದಕ್ಕಾಗಿಯೇ ಮೀಸಲಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಅಧ್ಯಯನವೊಂದರ ಪ್ರಕಾರ ಮಲೇಶಿಯಾದ ಶೇಕಡಾ 80 ರಷ್ಟು ಜನ ಇಂಟರ್​ನೆಟ್ ಬಳಕೆ ಮಾಡುತ್ತಿದ್ದು, ಸರಾಸರಿ ದಿನದ 4 ಗಂಟೆಯನ್ನು ಅದಕ್ಕಾಗಿಯೇ ಕಳೆಯುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಡಾ.ಲೀ ಬೂನ್ ಚೈ ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಜಗಳ- ಅಕ್ಕನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ತಮ್ಮ

    ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಜಗಳ- ಅಕ್ಕನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ತಮ್ಮ

    ಜಾಕ್ಸನ್: ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಅಕ್ಕ- ತಮ್ಮ ಜಗಳವಾಡಿಕೊಂಡಿದ್ದು, ಕೊನೆಗೆ ತಮ್ಮ ಅಕ್ಕನ ತಲೆಗೆ ಗುಂಡು ಹಾರಿಸಿರೋ ಆಘಾತಕಾರಿ ಘಟನೆ ಶನಿವಾರದಂದು ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ನಡೆದಿದೆ.

    ಗುಂಡೇಟು ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆಂದು ಇಲ್ಲಿನ ಮನ್ರೋ ಕೌಂಟಿಯ ಅಧಿಕಾರಿ ಸೆಸಿಲ್ ಕಂಟ್ರೆಲ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ. ವಿಡಿಯೋ ಗೇಮ್ ಕಂಟ್ರೋಲರ್ ತನ್ನ ಕೈಗೆ ಕೊಡಲಿಲ್ಲವೆಂದು 9 ವರ್ಷದ ಬಾಲಕ ತನ್ನ 13 ವರ್ಷದ ಅಕ್ಕ ಡಿಜೋನೇಗೆ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದ. ಕೂಡಲೇ ಆಕೆಯನ್ನ ಮೆಂಫಿಸ್ ಟೆನ್ನೀಸೀಯ ಲೀ ಬೋನ್‍ಹರ್ಸ್ ಮಕ್ಕಳ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಬಾಲಕಿ ಬದುಕುಳಿಯಲಿಲ್ಲ ಎಂದು ಅವರು ತಿಳಿಸಿದ್ದಾರೆ.

    ಘಟನೆ ನಡೆದ ವೇಳೆ ಮಕ್ಕಳ ತಾಯಿ ಮತ್ತೊಂದು ರೂಮಿನಲ್ಲಿ ಇತರೆ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು. ಬಾಲಕನಿಗೆ ಗನ್ ಸಿಕ್ಕಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

  • ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

    ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

    ಬೀಜಿಂಗ್: ಚೀನಾದ ಯುವಕನೊಬ್ಬ ಸೈಬರ್ ಕೆಫೆಯಲ್ಲಿ ನಿರಂತರವಾಗಿ 20 ಗಂಟೆ ಕಾಲ ವಿಡಿಯೋ ಗೇಮ್ ಆಡಿದ ಪರಿಣಾಮ ಆತನ ಸೊಂಟದಿಂದ ಕೆಳಭಾಗ ಸಂಪೂರ್ಣ ಸ್ವಾಧೀನವೇ ಕಳೆದುಕೊಂಡಿದ್ದಾನೆ.

    ಯುವಕ ವಿಡಿಯೋ ಗೇಮ್ ಆಡಲು ಜನವರಿ 27ರಂದು ಸಂಜೆ ಸೈಬರ್ ಕೆಫೆಗೆ ಹೋಗಿದ್ದು, ಜನವರಿ 28 ರ ಮಧ್ಯಾಹ್ನದ ವರೆಗೂ ಗೇಮ್ ಆಡಿದ್ದಾನೆ. ನಂತರ ಆತ ಶೌಚಾಲಯಕ್ಕೆ ಹೋಗಬೇಕೆಂದು ಮೇಲೇಳಲು ಪ್ರಯತ್ನಿಸಿದ್ದಾನೆ. ಆದರೆ ಅವನಿಗೆ ಏಳಲು ಸಾಧ್ಯವಾಗಲಿಲ್ಲ. ಆಗ ಅವನಿಗೆ ತಾನು ಯಾವ ಕಡೆಯೂ ಅಲುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಗಿದೆ. ಅದೇ ಕೆಫೆಯಲ್ಲಿ ಇದ್ದ ಆತನ ಸ್ನೇಹಿತನಲ್ಲಿ ತನ್ನ ಸೊಂಟದಿಂದ ಕೆಳಭಾಗದ ಅಂಗಗಳು ಸ್ವಾಧೀನ ಇಲ್ಲದಂತೆ ಆಗಿದೆ ಎಂಬುದನ್ನ ಹೇಳಿದ್ದು, ಅವರು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಯುವಕನನ್ನು ಸ್ಟ್ರೆಚ್ಚರ್ ನಲ್ಲಿ ಇರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಗೇಮ್ ಕಂಪ್ಲೀಟ್ ಮಾಡಲು ಗೆಳೆಯನಿಗೆ ಹೇಳ್ದ: ಆಶ್ಚರ್ಯವೆಂದರೆ ಆ ರೀತಿಯ ಪರಿಸ್ಥಿತಿ ಇದ್ದರೂ ಯುವಕ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದ. ತನ್ನ ಬದಲಿಗೆ ತನ್ನ ಆಟವನ್ನು ಪೂರ್ಣಗೊಳಿಸಲು ಸ್ನೇಹಿತನಿಗೆ ಮನವಿ ಮಾಡಿಕೊಂಡಿದ್ದ.

    ಯುವಕ ಯಾವ ಆಟವನ್ನು ಆಡುತ್ತಿದ್ದನು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಸದ್ಯಕ್ಕೆ ಆ ಯುವಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನಾ ಇಲ್ಲವಾ ಎಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ.

    ಗೇಮ್‍ಗೆ ಅಡಿಕ್ಷನ್ ಯುವಕ ಜನಾಂಗಕ್ಕೆ ಮಾರಕವಾದ ಅನೇಕ ಉದಾಹರಣೆಗಳಿವೆ. ಈ ಹಿಂದೆ ಚೀನಾದಲ್ಲಿ ನಿರಂತರ 24 ಗಂಟೆಗಳ ಕಾಲ ತನ್ನ ಮೊಬೈಲ್ ಫೋನ್‍ನಲ್ಲಿ ಗೇಮ್ ಆಡಿ ಮಹಿಳೆಯೊಬ್ಬಳು ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಳು ಎಂದು ವರದಿಯಾಗಿತ್ತು. ಇದನ್ನೂ ಓದಿ: ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

  • ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

    ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

    ಬೀಜಿಂಗ್: 21 ವರ್ಷದ ಯುವತಿಯೊಬ್ಬಳು ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಒಂದು ಕಣ್ಣು ಕಳೆದುಕೊಂಡಿರುವ ಘಟನೆ ಭಾನುವಾರದಂದು ಚೀನಾದಲ್ಲಿ ನಡೆದಿದೆ.

    ಇಲ್ಲಿನ ಗಾಂಗ್‍ಡಾಂಗ್ ಪ್ರಾಂತ್ಯದ ಡಾಂಗ್ಯೂನ್ ನಲ್ಲಿರುವ ತನ್ನ ಮನೆಯಲ್ಲಿ ಯುವತಿ ಇಡೀ ದಿನ ಹಾನರ್ ಆಫ್ ಕಿಂಗ್ಸ್ ಎಂಬ ವಿಡಿಯೋ ಗೇಮ್ ಆಡಿ ತನ್ನ ಬಲಗಣ್ಣು ಕಳೆದುಕೊಂಡಿದ್ದಾಳೆ. ನಾನ್‍ಚಾಂಗ್‍ನ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆಯನ್ನು ನೀಡಲು ಕರೆದುಕೊಂಡು ಹೋಗಿದ್ದು, ಆಕೆಗೆ ರೆಟಿನಲ್ ಆರ್ಟರಿ ಅಕ್ಲೂಷನ್ ಸಮಸ್ಯೆ ಉಂಟಾಗಿದೆ ಎಂದು ಬುಧವಾರದಂದು ವೈದ್ಯರು ಹೇಳಿದ್ದಾರೆ. ಇದಕ್ಕೂ ಮೊದಲು ನಗರದ ಹಲವಾರು ಆಸ್ಪತ್ರೆಯಲ್ಲಿ ಯುವತಿಯನ್ನು ಚಿಕಿತ್ಸೆ ಕೊಡಿಸಲು ಕರೆದೂಯ್ಯಲಾಗಿತ್ತು. ಆದರೆ ಆಕೆಗೆ ಉಂಟಾಗಿದ್ದ ಸಮಸ್ಯೆ ಬಗ್ಗೆ ಎಲ್ಲೂ ತಿಳಿದುಬಂದಿರಲಿಲ್ಲ.

    ರೆಟಿನಲ್ ಆರ್ಟರಿ ಅಕ್ಲೂಷನ್ ಸಾಮಾನ್ಯವಾಗಿ ಹಿರಿಯರಿಗೆ ಬರುತ್ತೆ. ಯುವಕರಲ್ಲಿ ಈ ಸಮಸ್ಯೆ ಕಾಣುವುದು ತುಂಬಾನೇ ಅಪರೂಪ. ಕಣ್ಣಿಗೆ ಸಾಕಷ್ಟು ಒತ್ತಡ ಬಿದಿದ್ದರಿಂದ ಯುವತಿ ತನ್ನ ಕಣ್ಣು ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗೇಮ್‍ಗೆ ಅಡಿಕ್ಟ್ ಆಗಿದ್ದೆ: ಕಣ್ಣು ಕಳೆದುಕೊಂಡಿದ್ದಕ್ಕೆ ಏನು ಕಾರಣ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಬಿಡುವಿಲ್ಲದೆ ಒಂದೇ ಸಮನೆ ಗೇಮ್ ಆಡುತ್ತಿದ್ದೆ. ಹಾಗಾಗಿ ನಾನು ನನ್ನ ಕಣ್ಣು ಕಳೆದುಕೊಂಡಿದ್ದೇನೆ ಎಂದು ಯುವತಿ ಉತ್ತರಿಸಿದ್ದಾಳೆ.

    ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರೋ ಯುವತಿ, ಗೇಮ್‍ಗೆ ತುಂಬಾ ಅಡಿಕ್ಟ್ ಆಗಿದ್ದು, ಕೆಲಸದಿಂದ ಬಂದ ಕೂಡಲೇ ಮತ್ತು ವೀಕೆಂಡ್‍ಗಳಲ್ಲಿ ಇಡೀ ದಿನ ವಿಡಿಯೋ ಗೇಮ್ ಆಡುತ್ತಿದ್ದೆ ಎಂದು ಹೇಳಿದ್ದಾಳೆ. ನನಗೆ ಕೆಲಸ ಇಲ್ಲದ ಸಮಯದಲ್ಲಿ ಬೆಳಗ್ಗೆ 6 ಗಂಟೆಗೆ ಎದ್ದು ತಿಂಡಿ ತಿಂದು ಸಂಜೆ 4 ಗಂಟೆ ತನಕ ಆಡುತ್ತಿದ್ದೆ. ನಂತರ ಸ್ಯ್ನಾಕ್ಸ್ ತಿಂದು ಮತ್ತೆ ರಾತ್ರಿ 1 ಗಂಟೆ ತನಕ ಆಡುತ್ತಿದ್ದೆ. ಕೆಲವು ಬಾರಿ ಗೇಮ್ ನಲ್ಲಿ ಮುಳುಗಿ ಊಟ ಮಾಡುವುದನ್ನೂ ಮರೆತು ಹೋಗುತ್ತಿದ್ದೆ. ನನ್ನನ್ನು ರಾತ್ರಿ ಊಟಕ್ಕೆ ಕರೆದರೂ ಕಿವಿಗೊಡುತ್ತಿರಲಿಲ್ಲ. ಕೆಲವೊಮ್ಮೆ ಸತತ 7-8 ಗಂಟೆ ತನಕ ಸೋಫಾದಿಂದ ಮೇಲೇಳದೆ ಗೇಮ್ ಆಡುತ್ತಿದ್ದೆ ಎಂದು ಯುವತಿ ಹೇಳಿದ್ದಾಳೆ.

    ನನ್ನ ಪೋಷಕರು ಗೇಮ್ ಆಡುವುದನ್ನು ಕಡಿಮೆ ಮಾಡು ಎಂದು ಹೇಳುತ್ತಿದ್ದರು. ಆದರೆ ನಾನು ಅವರ ಮತನ್ನು ಕಡೆಗಣಿಸುತ್ತಿದ್ದೆ ಎಂದು ಯುವತಿ ಪಶ್ಚಾತ್ತಾಪ ಪಟ್ಟಿದ್ದಾಳೆ. ಯುವತಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲೇ ಇದ್ದು, ವೈದ್ಯರು ಯುವತಿಯ ಕಣ್ಣು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯೊಂದರಿಂದ ತಿಳಿದುಬಂದಿದೆ.

    ಯಾಕೆ ಈ ಗೇಮ್ ಇಷ್ಟೊಂದು ಫೇಮಸ್?: ಹಾನರ್ ಆಫ್ ಕಿಂಗ್ಸ್ ಒಂದು ಐತಿಹಾಸಿಕ ಯುದ್ಧದ ಗೇಮ್ ಆಗಿದ್ದು, ಚೀನಾದ ಇಂಟರ್‍ನೆಟ್ ಜೇಂಟ್ ಟೆನ್ಸೆಂಟ್ ಮಾಲೀಕತ್ವದಲ್ಲಿದೆ. ಚೀನಾದ ಮೇನ್‍ಲ್ಯಾಡ್‍ವೊಂದರಲ್ಲೇ 20 ಕೋಟಿಯಷ್ಟು ರೆಜಿಸ್ಟರ್ಡ್ ಆಟಗಾರರಿದ್ದಾರೆ. ಈ ಗೇಮ್ ತುಂಬಾ ಅಡಿಕ್ಟೀವ್ ಆಗಿರೋದ್ರಿಂದ ಇದನ್ನ ವಿಷ ಎಂದು ಇಲ್ಲಿನ ಪತ್ರಿಕೆಗಳು ಟೀಕಿಸಿದ್ದವು. ಈ ಗೇಮ್‍ಗೆ ಸೈನಿಕರು ಕೂಡ ಅಡಿಕ್ಟ್ ಆಗುತ್ತಿದ್ದಾರೆ. ಇದರಿಂದ ಅವರ ಹೋರಾಟ ಸಾಮಥ್ರ್ಯ ಕ್ಷೀಣಿಸೋ ಸಾಧ್ಯತೆಯಿದೆ ಎಂದು ಇಲ್ಲಿನ ಸೇನಾ ಮುಖವಾಣಿ ಪಿಎಲ್‍ಎ ಡೈಲಿ ಎಚ್ಚರಿಕೆ ನೀಡಿತ್ತು.

    ಜುಲೈ ತಿಂಗಳಲ್ಲಿ ಟೆನ್ಸೆಟ್ ಈ ಗೇಮ್‍ಗೆ ಕೆಲವು ನಿರ್ಬಂಧಗಳನ್ನ ಪರಿಚಯಿಸಿದೆ. 12 ರಿಂದ 18 ವರ್ಷದವರು ದಿನಕ್ಕೆ 2 ಗಂಟೆಗಳ ಕಾಲ ಮಾತ್ರ ಈ ಗೇಮ್ ಆಡಲು ಅವಕಾಶ ನೀಡಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ದಿನಕ್ಕೆ 1 ಗಂಟೆ ಅದ್ರಲ್ಲೂ ರಾತ್ರಿ 9 ಗಂಟೆಯೊಳಗೆ ಮಾತ್ರ ಈ ಗೇಮ್ ಆಡಬಹುದು.

    ಆನ್‍ಲೈನ್ ಗೇಮ್ ಆಡುವಾಗ ಕಣ್ಣುಗಳ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ. ಅದಕ್ಕೆ 30 ನಿಮಿಷ ಬ್ರೇಕ್ ತೆಗೆದುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.