Tag: ವಿಡಿಯೋ ಕಾಲ್

  • ಪ್ರಭಾಸ್- ಅನುಷ್ಕಾ ಶೆಟ್ಟಿ ಪ್ರೀತಿಯಲ್ಲಿದ್ದಾರೆ- ಇಲ್ಲಿದೆ ಸಾಕ್ಷಿ

    ಪ್ರಭಾಸ್- ಅನುಷ್ಕಾ ಶೆಟ್ಟಿ ಪ್ರೀತಿಯಲ್ಲಿದ್ದಾರೆ- ಇಲ್ಲಿದೆ ಸಾಕ್ಷಿ

    ಹೈದರಾಬಾದ್: ಟಾಲಿವುಡ್‍ನ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹಾರಿದಾಡುತ್ತಿತ್ತು. ಆದರೆ ಈ ಜೋಡಿ ಇದೆಲ್ಲಾ ಸುಳ್ಳು ಎಂದು ಹೇಳುತ್ತಾ ತಿರುಗುತ್ತಿದ್ದರು. ಈಗ ಈ ಜೋಡಿ ಪ್ರೀತಿಯಲ್ಲಿದ್ದಾರೆ ಎಂಬುದು ಸಾಬೀತಾಗಿದೆ.

    ಅನುಷ್ಕಾ ಮತ್ತು ಪ್ರಭಾಸ್ ಅವರ ಪ್ರೀತಿ ರಿವೀಲ್ ಆಗುತ್ತಿಲ್ಲ. ಈ ನಡುವೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಈ ಜೋಡಿ ದಿನೇ ದಿನೇ ಪರಸ್ಪರ ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವುದು ಈಗ ರಿವೀಲ್ ಆಗಿದೆ.

    ಸಾಹೋ ಚಿತ್ರದಲ್ಲೂ ಪ್ರಭಾಸ್‍ಗೆ ಅನುಷ್ಕಾ ಜೋಡಿಯಾಗಬೇಕಿತ್ತು ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಾಹೋ ಚಿತ್ರದಲ್ಲಿ ಅನುಷ್ಕಾ ಬದಲು ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆ. ಈ ನಡುವೆ ಅನುಷ್ಕಾ ಮತ್ತು ಪ್ರಭಾಸ್ ಪರಸ್ಪರ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾದ್ದರು. ಈ ನಡುವೆ ಇಬ್ಬರು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ರಿವಿಲ್ ಆಗಿದೆ.

    ಇಬ್ಬರ ನಡುವೆ ಇರೋದು ಸ್ನೇಹಾನಾ ಪ್ರೀತಿನಾ ಎನ್ನುವುದು ರಹಸ್ಯವಾಗಿದೆ. ಇಬ್ಬರೂ ಅನುಭವಿಸುತ್ತಿರುವ ವಿರಹ ವೇದನೆ ಈಗಂತೂ ಜಗತ್ತಿನ ಮುಂದೆ ಬಂದಿದೆ. ಪರಸ್ಪರ ಶೂಟಿಂಗ್ ಗಾಗಿ ಬೇರೆ ಬೇರೆ ಸ್ಥಳದಲ್ಲಿರುವಾಗ ಈ ಜೋಡಿ ಬರೀ ಕಾಲ್ ಅಲ್ಲ, ವೀಡಿಯೋ ಕಾಲ್ ಮೂಲಕ ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತಾರೆ. ಪ್ರತಿ ದಿನ ಬಿಡುವಿದ್ದರೆ ಸಾಕು ಇಬ್ಬರ ಮೊಬೈಲ್‍ಗಳೂ ವೇಟಿಂಗ್ ನಲ್ಲಿಯೇ ಇರುತ್ತದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  • ಲೈವ್ ವಿಡಿಯೋ ಕರೆ ಮಾಡಿ ಪ್ರೇಮಿ ಆತ್ಮಹತ್ಯೆ- ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರೂ ನಗುತ್ತಿದ್ದ ಯುವತಿ!

    ಲೈವ್ ವಿಡಿಯೋ ಕರೆ ಮಾಡಿ ಪ್ರೇಮಿ ಆತ್ಮಹತ್ಯೆ- ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರೂ ನಗುತ್ತಿದ್ದ ಯುವತಿ!

    ಹೈದರಾಬಾದ್: ಪ್ರೀತಿ ವಿಫಲವಾಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಹೈದರಾಬಾದ್ ನ ಮುಲ್ಕಾಜ್‍ಗಿರಿ ವಿನಾಯಕ್ ನಗರದಲ್ಲಿ ನಡೆದಿದೆ.

    ಸಾಗರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಸಾಗರ್ ಕೆಲ ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ತನ್ನ ಪ್ರೀತಿಯ ವಿಚಾರವನ್ನು ಆಕೆಗೆ ತಿಳಿಸಿದ್ದ. ಆದರೆ ಆ ಯುವತಿ ಸಾಗರ್ ಪ್ರೀತಿಯನ್ನು ನಿರಾಕರಿಸಿದ್ದಳು. ಅಲ್ಲದೇ ಈ ವಿಷಯ ಯುವತಿ ಕುಟುಂಬಸ್ಥರಿಗೂ ತಿಳಿದು ಸಾಗರ್‍ಗೆ ಎಚ್ಚರಿಕೆ ನೀಡಿದ್ದರು.

    ಇತ್ತ ಮಗನ ಪ್ರೀತಿಯ ವಿಷಯವನ್ನು ತಿಳಿದ ಸಾಗರ್ ಪೋಷಕರು ಆತನಿಗೆ ಮದುವೆ ಮಾಡಲು ತಯಾರಿ ನಡೆಸಿದ್ದರು. ಇದರಿಂದ ತೀವ್ರವಾಗಿ ಮನನೊಂದ ಸಾಗರ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

    ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಪ್ರೇಯಸಿಗೆ ಮೆಸೇಜ್ ಕಳುಹಿಸಿ, ಇದನ್ನು ನೋಡಬೇಕಾದರೆ ವಿಡಿಯೋ ಕಾಲ್ ಮಾಡಲು ತಿಳಿಸಿದ್ದ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಯುವತಿ ಸಾಗರ್ ತಮಾಷೆ ಮಾಡುತ್ತಿದ್ದಾನೆ ಎಂದು ತಿಳಿದು ತನ್ನ ಇತರೇ ಸ್ನೇಹಿತರಿಗೆ ಮೇಸೆಜ್ ತೋರಿಸಿ ವಿಡಿಯೋ ಕಾಲ್ ಮಾಡಿದ್ದಾಳೆ.

    ಪ್ರೇಯಸಿ ವಿಡಿಯೋ ಕಾಲ್ ಮಾಡಿದ ಬಳಿಕ ಸಾಗರ್ ತನ್ನ ರೂಮಿನ ಸಿಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈ ವೇಳೆ ಸಾಗರ್ ತಮಾಷೆ ಮಾಡುತ್ತಿದ್ದಾನೆ ಎಂದು ತಿಳಿದು ಬಿದ್ದು ಬಿದ್ದು ನಗಲು ಆರಂಭಿಸಿದ್ದಾಳೆ. ಆದರೆ ಸ್ವಲ್ಪ ಸಮಯದ ಬಳಿಕ ಸಾಗರ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

  • ಪ್ರೀತಿಯ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ದಚ್ಚು

    ಪ್ರೀತಿಯ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿದ ದಚ್ಚು

    ಬೆಂಗಳೂರು: ಕ್ಯಾನ್ಸರ್ ನಿಂದ ಜೀವನದ ಕೊನೆಯ ಅಂಚಿನಲ್ಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಗೆ ದರ್ಶನ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

    ಶಿವಮೊಗ್ಗದ ರೇವಂತ್ ಅವರಿಗೆ ದರ್ಶನ್ ಅಂದ್ರೆ ಅಚ್ಚುಮೆಚ್ಚು. ನೆಚ್ಚಿನ ನಟನ ಎಲ್ಲಾ ಸಿನಿಮಾ ನೋಡಿರುವ ಅವರು, ಪ್ರತಿ ಹುಟ್ಟುಹಬ್ಬದ ದಿನ ಬೆಂಗಳೂರಿಗೆ ಹೋಗಿ ಶುಭ ಕೋರಿ ಬರುತ್ತಾರೆ. ದರ್ಶನ್ ಅವರನ್ನು ಭೇಟಿಯಾಗಬೇಕು, ಮಾತನಾಡಬೇಕೆಂಬ ಬಯಕೆ ಅವರಿಗೆ ಜಾಸ್ತಿಯಾಗಿತ್ತು. ಆದ್ದರಿಂದ ದರ್ಶನ್ ತಮ್ಮ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ, ನಾನು ಬ್ಯುಸಿಯಾಗಿದ್ದೇನೆ. ಆದಷ್ಟು ಬೇಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ್ದಾರೆ.

    ಮೂಲತಃ ಶಿವಮೊಗ್ಗದವರಾದ ರೇವಂತ್, ತನ್ನ 20ನೇ ವಯಸ್ಸಿಗೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ತಮ್ಮ, ಅಕ್ಕ ಹಾಗೂ ಅಪ್ಪ-ಅಮ್ಮ ಇದ್ದಾರೆ. ಶಿವಮೊಗ್ಗದಲ್ಲಿ ವಾಸವಿರುವ ರೇವಂತ್ ಸಾಕಷ್ಟು ದಿನಗಳಿಂದ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಚಿಕಿತ್ಸೆಯನ್ನು ಪಡೆದು ಹೋಗಿದ್ದರು. ಆದರೆ ಕ್ಯಾನ್ಸರ್ ಮತ್ತೆ ಕಾಣಿಸಿದ್ದು ಉಲ್ಭಣಿಸಿದೆ.

    ಪ್ರತಿ ವರ್ಷ ಫೆ.16ಕ್ಕೆ ರೇವಂತ್ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸುತ್ತಿದ್ದರು. ಆದರೆ ಈ ವರ್ಷ ದರ್ಶನ್ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ದುಖಃದಲ್ಲಿದ್ದರು. ವೈದ್ಯರು ಇನ್ನು ಮುಂದೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ರೇವಂತ್ ಅವರ ಕಡೆಯ ಆಸೆಯಾಗಿ ದರ್ಶನ್ ಅವರನ್ನು ನೋಡಬೇಕು ಎಂದು ಹೇಳಿದ್ದರು. ಇದನ್ನು ಓದಿ: ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ನೆರೆವೇರಿಸುತ್ತಾರಾ ದಚ್ಚು!?

  • ತಾಯಿಗೆ ವಿಡಿಯೋ ಕಾಲ್ ಮಾಡಿ ಗೃಹಿಣಿ ನಾಪತ್ತೆ ಪ್ರಕರಣ: ಸಹಾಯ ಮಾಡಿದ್ದ ಫೇಸ್ ಬುಕ್ ಗೆಳೆಯನಿಗೆ ಸಂಕಷ್ಟ

    ತಾಯಿಗೆ ವಿಡಿಯೋ ಕಾಲ್ ಮಾಡಿ ಗೃಹಿಣಿ ನಾಪತ್ತೆ ಪ್ರಕರಣ: ಸಹಾಯ ಮಾಡಿದ್ದ ಫೇಸ್ ಬುಕ್ ಗೆಳೆಯನಿಗೆ ಸಂಕಷ್ಟ

    ರಾಯಚೂರು: ತಾಯಿಗೆ ವಿಡಿಯೋ ಕಾಲ್ ಮಾಡಿ ಮೈಸೂರಿನಿಂದ ಮಗುವಿನೊಂದಿಗೆ ಪರಾರಿಯಾಗಿದ್ದ ಗೃಹಿಣಿಯ ಫೇಸ್ ಬುಕ್ ಗೆಳೆಯನಿಗೆ ಇದೀಗ ಕಾನೂನು ಭಯ ಶುರುವಾಗಿದೆ.

    ಹೌದು. ತನ್ನ ಪತಿ ಹಾಗೂ ಪತಿ ಮನೆಯವ ಕಿರುಕುಳ ತಾಳಲಾರದೆ ಹೊರಬಂದ ಮೈಸೂರು ಮೂಲದ ನಿಖಿತಾ ತನ್ನ ಫೆಸ್ ಬುಕ್ ಗೆಳೆಯನ ಮೂಲಕ ಆಶ್ರಮ ಸೇರಲು ರಾಯಚೂರಿಗೆ ಬಂದಿದ್ದರು. ಅಂತೆಯೇ ಸಹಾಯ ಮಾಡಿದ್ದ ಗೆಳೆಯ ಶಶಿಕಾಂತ್ ಇದೀಗ ಆತಂಕದಲ್ಲಿದ್ದಾರೆ.

    ಇದನ್ನೂ ಓದಿ: ತಾಯಿಗೆ ವಿಡಿಯೋ ಕಾಲ್ ಮಾಡಿ ನಾಪತ್ತೆಯಾಗಿದ್ದ ಗೃಹಿಣಿ ರಾಯಚೂರಿನಲ್ಲಿ ಪತ್ತೆ- ಪ್ರಕರಣಕ್ಕೆ ರೋಚಕ ಟ್ವಿಸ್ಟ್ 

    ರಾಯಚೂರಿನಿಂದ ನಿಖಿತಾಳ ಜೊತೆ ಶಶಿಕಾಂತ್ ಅವರನ್ನು ಕರೆದೊಯ್ದ ಮೈಸೂರಿನ ವಿಜಯನಗರ ಠಾಣೆ ಪೊಲೀಸರು, ಎರಡು ದಿನ ವಿಚಾರಣೆಗೊಳಪಡಿಸಿ ಬಿಟ್ಟಿದ್ದಾರೆ. ಇನ್ನು ನಿಖಿತಾಳನ್ನ ಆಕೆಯ ತಾಯಿ ಮನೆಗೆ ಬಿಟ್ಟಿದ್ದಾರೆ. ಆದ್ರೆ ತಂದೆಯ ಕಿರುಕುಳ ಇರುವುದರಿಂದ ತಾಯಿ ಹತ್ತಿರ ಬಿಟ್ಟರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಖಿತಾ ಅವರು ಶಶಿಕಾಂತ್ ಬಳಿ ಹೇಳಿದ್ದರು.

    ಈಗ ನಿಖಿತಾ ಹೆಚ್ಚು ಕಡಿಮೆ ಮಾಡಿಕೊಂಡರೆ ನಾನು ಜವಾಬ್ದಾರನಲ್ಲ ನನ್ನದೇನು ತಪ್ಪಿಲ್ಲ. ಕಷ್ಟದಲ್ಲಿದ್ದಾಳೆ ಅಂತ ಸ್ನೇಹಿತೆ ಗೆ ಸಹಾಯ ಮಾಡಲು ಮುಂದಾಗಿರುವುದು ತಪ್ಪಾಗಿದೆ ಅಂತ ಶಶಿಕಾಂತ ಅಲವತ್ತುಕೊಳ್ಳುತ್ತಿದ್ದಾರೆ. ಈ ಕುರಿತು ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ನೀಡಲು ಮುಂದಾಗಿದ್ದಾರೆ.

    ಇದನ್ನೂ ಓದಿ: `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    https://www.youtube.com/watch?v=-CQL0kx4Nlc

     

  • ತಾಯಿಗೆ ವಿಡಿಯೋ ಕಾಲ್ ಮಾಡಿ ನಾಪತ್ತೆಯಾಗಿದ್ದ ಗೃಹಿಣಿ ರಾಯಚೂರಿನಲ್ಲಿ ಪತ್ತೆ- ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ತಾಯಿಗೆ ವಿಡಿಯೋ ಕಾಲ್ ಮಾಡಿ ನಾಪತ್ತೆಯಾಗಿದ್ದ ಗೃಹಿಣಿ ರಾಯಚೂರಿನಲ್ಲಿ ಪತ್ತೆ- ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ರಾಯಚೂರು: ಪತಿ ಹಾಗೂ ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ನಾಪತ್ತೆಯಾಗಿದ್ದ ಮೈಸೂರು ಮೂಲದ ಮಹಿಳೆ ರಾಯಚೂರಿನಲ್ಲಿ ಪತ್ತೆಯಾಗಿದ್ದಾರೆ.

    ಮನೆಯಿಂದ ಹೊರಬರುವ ಮೊದಲು ತಾಯಿಗೆ ವಿಡಿಯೋ ಕಾಲ್ ಮಾಡಿ ಗಂಡ ಮಂಜುನಾಥ್‍ನ ಕಿರುಕುಳದ ಬಗ್ಗೆ ಹೇಳಿದ್ದ ನಿಖಿತಾ, ರಾಯಚೂರಿನಲ್ಲಿ ಆಶ್ರಮ ಸೇರಲು ಬಂದಿದ್ದರು. ಒಂದು ಕಡೆ ಗಂಡ ಹಾಗೂ ಆತನ ಮನೆಯವರಿಂದ ಚಿತ್ರ ಹಿಂಸೆ, ಇನ್ನೊಂದೆಡೆ ಹೆತ್ತ ತಂದೆಯಿಂದಲೇ ಲೈಂಗಿಕ ಕಿರುಕುಳ ಯತ್ನ ನಡೆಯುತ್ತಿದ್ದರಿಂದ ಬೇಸತ್ತು ಹೊರ ಬಂದಿರುವುದಾಗಿ ನಿಖಿತಾ ಹೇಳಿದ್ದಾರೆ.

    ಇದನ್ನೂ ಓದಿ: `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    ಸಾಯುವ ನಿರ್ಧಾರದೊಂದಿಗೆ ಮಗುವಿನೊಂದಿಗೆ ಮನೆಯಿಂದ ಹೊರಬಂದ ನಿಖಿತಾ, ರಾಯಚೂರಿನ ಫೇಸ್‍ಬುಕ್ ಸ್ನೇಹಿತ ಶಶಿಕಾಂತ್ ಸಹಾಯದಿಂದ ಆಶ್ರಮ ಸೇರಲು ಮುಂದಾಗಿದ್ದಾರೆ. ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ಹಾಗೂ ಪದೇ ಪದೇ ಅನುಮಾನಿಸುತ್ತಿದ್ದ ಗಂಡ ಕುಡಿದು ಬಂದು ಸಿಗರೇಟ್ ನಿಂದ ಮೈಯಲ್ಲಾ ಸುಡುತ್ತಿದ್ದರು. ಊಟದಲ್ಲಿ ಫಿನಾಯಿಲ್ ಹಾಕಿ ತಿನ್ನಲು ಒತ್ತಾಯಿಸುತ್ತಿದ್ದರು ಅಂತ ನಿಖಿತಾ ಆರೋಪಿಸಿದ್ದಾರೆ.

    ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ನಿಖಿತಾರನ್ನ ಹುಡುಕುತ್ತಿದ್ದು, ಇದೀಗ ರಾಯಚೂರಿನಲ್ಲಿ ಬೀಡುಬಿಟ್ಟಿದ್ದಾರೆ. ಒಂದು ವೇಳೆ ಪೊಲೀಸರು ಮರಳಿ ಕರೆದೊಯ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಖಿತಾ ಹೇಳಿದ್ದಾರೆ.

    https://www.youtube.com/watch?v=-CQL0kx4Nlc

  • `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    ಮೈಸೂರು: ಗಂಡನ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಮಗನ ಜೊತೆ ನಾಪತ್ತೆಯಾಗಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಟಗಳ್ಳಿಯಲ್ಲಿ ಈ ಘಟನೆ ನಡೆದಿದೆ. ಗೃಹಿಣಿ ಲಿಖಿತ (24) ಮಗ ಧ್ರುವ (2) ನಾಪತ್ತೆಯಾದವರು.

    ನಾಪತ್ತೆಯಾಗೋದಕ್ಕೂ ಮೊದಲು ಲಿಖಿತ ತನ್ನ ತಾಯಿ ಪಂಕಜಾ ಅವರಿಗೆ ವೀಡಿಯೋ ಕಾಲ್ ಮಾಡಿ ಅದರಲ್ಲಿ, ತಾನು ನಾಪತ್ತೆ ಆಗುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ಗಂಡ ಕಿರುಕುಳ ನೀಡುತ್ತಿರುವುದಾಗಿ ಕೂಡ ದೂರಿದ್ದಾರೆ.

    ಆ ಬಳಿಕ ಹೂಟಗಳ್ಳಿಯಲ್ಲಿರುವ ಗಂಡ ಮಂಜುನಾಥ್ ಮನೆಯಿಂದ ಲಿಖಿತ ಮಗುವಿನ ಸಮೇತ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=-CQL0kx4Nlc&feature=youtu.be

  • ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತ ಫಸ್ಟ್

    ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತ ಫಸ್ಟ್

    ನವದೆಹಲಿ: ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ.

    ಕಳೆದ ನವೆಂಬರ್ ನಲ್ಲಿ ಗ್ರಾಹಕರಿಗೆ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ಸೇರಿಸಿದ್ದು, 6 ತಿಂಗಳಿನಲ್ಲಿ ಭಾರತದ ಬಳಕೆದಾರರು ಅತಿ ಹೆಚ್ಚು ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ತಿಳಿಸಿದೆ.

    120 ಕೋಟಿ ಸಕ್ರಿಯ ಬಳಕೆದಾರರ ಪೈಕಿ 20 ಕೋಟಿ ಸಕ್ರಿಯ ಬಳಕೆದಾರರು ಭಾರತದಲ್ಲಿದ್ದಾರೆ. ವಿಡಿಯೋ ಕಾಲಿಂಗ್ ವಿಶೇಷತೆ ಯಶಸ್ವಿಯಾಗಿದ್ದು, ಪ್ರತಿ ದಿನ ಒಟ್ಟು 34 ಕೋಟಿ ವಿಡಿಯೋ ಕಾಲಿಂಗ್ ಆಗುತ್ತಿದೆ. ವಿಶ್ವದಲ್ಲಿ 34 ಕೋಟಿ ವಿಡಿಯೋ ಕಾಲ್‍ಗಳ ಪೈಕಿ ಭಾರತದಲ್ಲೇ ಪ್ರತಿ 5 ಕೋಟಿ ವಿಡಿಯೋ ಕಾಲ್‍ಗಳು ಆಗುತ್ತಿದೆ ಎಂದು ವಾಟ್ಸಪ್ ತಿಳಿಸಿದೆ.

    ವಿಶ್ವದಲ್ಲಿರುವ ಹಲವಾರು ಪ್ರಖ್ಯಾತ ಮೆಸೇಜಿಂಗ್ ಅಪ್ಲಿಕೇಶನ್‍ಗಳು ಮೊದಲೇ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ಸೇರಿಸಿತ್ತು. ಇವುಗಳಲ್ಲಿ ಈ ವಿಶೇಷತೆ ಬಂದ ಬಳಿಕ ವಾಟ್ಸಪ್ ತನ್ನ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ನವೆಂಬರ್‍ನಲ್ಲಿ ನೀಡಿತ್ತು.

    ಕನ್ನಡ ಸೇರಿದಂತೆ ಭಾರತದ 10 ಭಾಷೆ ವಿಶ್ವದ ಒಟ್ಟು 50 ಭಾಷೆಗಳಲ್ಲಿ ವಾಟ್ಸಪ್ ಲಭ್ಯವಿದೆ. ವಾಟ್ಸಪ್ ಕರೆಗಳು ಯಶಸ್ವಿಯಾಗಬೇಕಾದರೆ ಸ್ಮಾರ್ಟ್ ಫೋನಲ್ಲಿ 4ಜಿ ವೇಗದ ಇಂಟರ್‍ನೆಟ್ ಬೇಕಾಗುತ್ತದೆ. ಇಂಟರ್ ನೆಟ್ ವೇಗ ಕಡಿಮೆ ಇದ್ದಲ್ಲಿ ತಡವಾಗಿ ಸಂವಹನ ಆಗುತ್ತದೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್