Tag: ವಿಡಿಯೋ ಕಾಲ್

  • ಪತ್ನಿ ಜೊತೆ ಜಗಳ – ವಾಟ್ಸಪ್ ವಿಡಿಯೋ ಕಾಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತಿ

    ಪತ್ನಿ ಜೊತೆ ಜಗಳ – ವಾಟ್ಸಪ್ ವಿಡಿಯೋ ಕಾಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತಿ

    ಭೋಪಾಲ್: ಜಗಳವಾಡಿ ಕೋಪಗೊಂಡ ಪತಿಯೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಪತ್ನಿಯ ಮುಂದೆಯೇ ನೇಣಿಗೆ ಶರಣಾದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು 35 ವರ್ಷದ ಜೆಹಂಗೀರಾಬಾದ್ ನಿವಾಸಿ ಉಮೇಶ್ ಎಂದು ತಿಳಿದು ಬಂದಿದ್ದು, ತನ್ನ ಪತ್ನಿ ಆರತಿ ಕೃಷ್ಣಾ ಜನ್ಮಾಷ್ಟಮಿಯನ್ನು ನಮ್ಮ ತವರು ಮನೆಯಲ್ಲಿ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಉಮೇಶ್ ಒಪ್ಪಿರಲಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.

    ಪತ್ನಿ ಆರತಿ ನಾನು ರಾಖಿ ಹಬ್ಬಕ್ಕೆ ನಮ್ಮ ತವರು ಮನೆಗೆ ಹೋಗಿಲ್ಲ. ಕೃಷ್ಣಾ ಜನ್ಮಾಷ್ಟಮಿಗೆ ಹೋಗಲೇ ಬೇಕು ಎಂದು ಹಠ ಹಿಡಿದಿದ್ದಾಳೆ. ಆರಂಭದಲ್ಲಿ ಈಕೆಯ ಮಾತಿಗೆ ಒಪ್ಪದ ಉಮೇಶ್ ಒಲ್ಲದ ಮನಸ್ಸಿನಿಂದಲೇ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಬೆರೇಶಿಯಾದಲ್ಲಿರುವ ತನ್ನ ಅತ್ತೆಯ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ನಂತರ ಉಮೇಶ್ ತನ್ನ ಏಳು ವರ್ಷದ ಮಗನನ್ನು ಕರೆದುಕೊಂಡು ವಾಪಸ್ ಮನೆಗೆ ಬಂದಿದ್ದಾನೆ.

    ಪತ್ನಿ ಜೊತೆ ಜಗಳವಾಡಿಕೊಂಡು ಮನೆಗೆ ವಾಪಸ್ ಬಂದ ಉಮೇಶ್ ಮಧ್ಯರಾತ್ರಿ ಪತ್ನಿ ಆರತಿಗೆ ವಿಡಿಯೋ ಕಾಲ್ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ನಂತರ ಪತ್ನಿ ಮಾತನಾಡಿದರೂ ಕೇಳಿಸಿಕೊಳ್ಳದ ಉಮೇಶ್ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ವಿಷಯ ತಿಳಿದ ತಕ್ಷಣ ಆರತಿ ಮನೆಯ ಪಕ್ಕದಲ್ಲೇ ವಾಸವಿದ್ದ ಉಮೇಶ್‍ನ ಸಹೋದರ ರಾಜುಗೆ ಕಾಲ್ ಮಾಡಿದ್ದಾಳೆ. ಆದರೆ ರಾಜು ಬಂದು ನೋಡುವುದರಲ್ಲಿ ಉಮೇಶ್ ನೇಣು ಹಾಕಿಕೊಂಡಿದ್ದನು. ಉಮೇಶ್ ರೋಶ್‍ಪುರದಲ್ಲಿ ಚಾಟ್ ಅಂಗಡಿ ಇಟ್ಟಿಕೊಂಡಿದ್ದು ನಷ್ಟ ಅನುಭವಿಸಿದ್ದನು. ಹಣದ ಸಮಸ್ಯೆ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಯಾವಾಗಲು ಜಗಳ ನಡೆಯುತಿತ್ತು ಎಂದು ಪೊಲೀಸರು ಹೇಳಿದ್ದಾರೆ.

  • ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿದ ವ್ಯಕ್ತಿ

    ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿದ ವ್ಯಕ್ತಿ

    ಮುಂಬೈ: ವ್ಯಕ್ತಿಯೊಬ್ಬ ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ರವಿಕಾಂತ್ ತಿವಾರಿ(36) ಬಂಧನಕ್ಕೊಳಗಾದ ಆರೋಪಿ. ರವಿಕಾಂತ್ ಮೊದಲು ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದನ್ನು ನೋಡಿ ಮಹಿಳೆ ಗಾಬರಿಗೊಂಡು ತನ್ನ ಪತಿಗೆ ವಿಷಯವನ್ನು ತಿಳಿಸಿದ್ದಾರೆ.

    ಮಹಿಳೆ ಹಾಗೂ ಅವರ ಪತಿ ಆರೋಪಿ ರವಿಕಾಂತ್ ವಿರುದ್ಧ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಮಹಿಳೆ, ಆರೋಪಿ ಎರಡು ಬಾರಿ ನನಗೆ ಕರೆ ಮಾಡಿ ಈ ರೀತಿ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಮತ್ತು ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆರೋಪಿ ರವಿಕಾಂತ್‍ನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ರವಿಕಾಂತ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಆರೋಪಿ ರವಿಕಾಂತ್ ಬಳಿ ಇದ್ದ ಎರಡು ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸರ ಈ ಮೊಬೈಲ್ ಪರಿಶೀಲಿಸಿದಾಗ ಅಶ್ಲೀಲ ವಿಡಿಯೋ ಇರುವುದು ಪತ್ತೆ ಆಗಿದೆ. ಆರೋಪಿ ರವಿಕಾಂತ್ ಮಹಿಳೆಗೆ ಕರೆ ಮಾಡುತ್ತಿರುವ ನಂಬರ್ ರಾಧಾ ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿದೆ.

  • ಕ್ಷೇತ್ರದ ಜನತೆಗೆ ಎಚ್. ವಿಶ್ವನಾಥ್ ಸಂದೇಶ

    ಕ್ಷೇತ್ರದ ಜನತೆಗೆ ಎಚ್. ವಿಶ್ವನಾಥ್ ಸಂದೇಶ

    ಮುಂಬೈ: ಹುಣಸೂರು ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರು ವಿಡಿಯೋ ಕಾಲ್ ಮಾಡುವ ಮೂಲಕ ಸಂದೇಶ ಕಳುಹಿಸಿದ್ದಾರೆ.

    ವಿಡಿಯೋದಲ್ಲಿ ವಿಶ್ವನಾಥ್ ಅವರು, ನಾನು ನನ್ನನ್ನು ದುಡ್ಡಿಗಾಗಿ ಮಾರಿಕೊಂಡವಲ್ಲ. ಇದು ನನ್ನ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರವಾಗಿದೆ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ಕೊಟ್ಟಂತಹ ಮತಗಳಿಗೆ ಅಪಚಾರ ಮಾಡುವನು ನಾನಲ್ಲ ಎಂದಿದ್ದಾರೆ.

    ನೀವು ಮತಕೊಟ್ಟು ಹರಿಸಿದ ನಿಮ್ಮ ಶಾಸಕ ಪದೇ ಪದೇ ಆದ ಅವಮಾನ, ತಾರತಮ್ಯಗಳನ್ನು ನುಂಗಲಾರದೆ ತನ್ನ ಆತ್ಮಗೌರವಕ್ಕಾಗಿ, ಕ್ಷೇತ್ರದ ಜನರ ಸ್ವಾಭಿಮಾನ ಮತ್ತು ಒಳಿತಿಗಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನ್ನ ಮೇಲಿನ ಅನರ್ಹತೆ ತೀರ್ಪು ಅನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ. ಸದ್ಯದಲ್ಲೇ ಹುಣಸೂರಿಗೆ ಭೇಟಿ ನೀಡಿ ನಿಮ್ಮ ಮುಂದೆ ವಾಸ್ತವ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

    ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ತುರ್ತು ಸುದ್ದಿಗೋಷ್ಠಿ ಕರೆದು 14 ಮಂದಿ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಹೀಗಾಗಿ ಇದರಿಂದ ಅತೃಪ್ತ ಶಾಸಕರು ತಮ್ಮ ಅನರ್ಹತೆಯ ಬಗ್ಗೆ ಪ್ರಶ್ನಿಸಿ ಇಂದು ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇತ್ತ ಅನರ್ಹ ಬೆನ್ನಲ್ಲಿಯೇ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂಟಿಬಿ ನಾಗರಾಜ್ ಈ ಐವರು ಶಾಸಕರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಭಾನುವಾರ ಮಧ್ಯರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್ ಪೋರ್ಟಿಗೆ ಆಗಮಿಸಿದ್ದಾರೆ.

  • ಮಹಿಳೆಗೆ ವಿಡಿಯೋ ಕಾಲ್ ಮಾಡಿ ಹಸ್ತಮೈಥುನ

    ಮಹಿಳೆಗೆ ವಿಡಿಯೋ ಕಾಲ್ ಮಾಡಿ ಹಸ್ತಮೈಥುನ

    ಮುಂಬೈ: ವ್ಯಕ್ತಿಯೊಬ್ಬ ಮಹಿಳಾ ಸ್ಕ್ರಿಪ್ಟ್ ಬರಹಗಾರರೊಬ್ಬರಿಗೆ ವಿಡಿಯೋ ಕಾಲ್ ಮಾಡಿ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ವಿಡಿಯೋ ಕಾಲ್ ಮಾಡಿದ್ದ ಆರೋಪಿಯ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ತಕ್ಷಣ ಮಹಿಳೆ ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿ ಆನ್‍ಲೈನ್‍ನಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಎಫ್‍ಐಆರ್ ದಾಖಲಿಸಲು ಖಾರ್ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದಾರೆ. ಅದರಂತೆಯೇ ಈ ಸಂಬಂಧ ಶನಿವಾರ ಬೆಳಗ್ಗೆ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ನಾನು ಮನೆಯಲ್ಲಿದ್ದಾಗ ಸಂಜೆ 4.21ಕ್ಕೆ ಸ್ಕೈಪ್ ಕರೆ ಬಂದಿತ್ತು. ನಾನು ರಿಸೀವ್ ಮಾಡಿದೆ. ಆಗ ಆತ ನನಗೆ ತನ್ನ ಖಾಸಗಿ ಅಂಗ ತೋರಿಸಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದನು. ಆತನ ಮುಖ ನೋಡಲು ಪ್ರಯತ್ನಿಸಿದೆ. ಆದರೆ ಆ ವ್ಯಕ್ತಿಯ ಮುಖವನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಕೊನೆಗೆ ಈ ಬಗ್ಗೆ ದೂರು ನೀಡಲು ನಾನು ಸ್ಕ್ರೀನ್‍ಶಾಟ್‍ಗಳನ್ನು ತೆಗೆದುಕೊಂಡು ಕರೆಯ ಸಂಪರ್ಕ ಕಡಿತಗೊಳಿಸಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

    ಈ ರೀತಿಯ ಘಟನೆ ಇದೇ ಮೊದಲನೆಯದು. ಆನ್‍ಲೈನ್‍ನಲ್ಲಿ ಹಸ್ತಮೈಥುನ ಮಾಡಿದ ವ್ಯಕ್ತಿಯ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಸಾಮಾನ್ಯವಾಗಿ ರಸ್ತೆಯಲ್ಲಿ ಇಂತಹ ಘಟನೆ ಸಂಭವಿಸುತ್ತವೆ. ಈ ಬಗ್ಗೆ ನಮಗೆ ದೂರುಗಳು ಬರುತ್ತವೆ. ಸದ್ಯಕ್ಕೆ ಆರೋಪಿಯ ನಂಬರ್ ಪತ್ತೆ ಮಾಡಲು ನಾವು ಸೈಬರ್ ಪೊಲೀಸರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಅಪರಿಚಿತ ಆರೋಪಿಯ ಮೇಲೆ ಐಪಿಸಿ ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಕುರಿತು ಖಾರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಮಂಜುನಾಥ್ ಸಿಂಗೇ ಹೇಳಿದ್ದಾರೆ.

  • ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ

    ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ

    ಚಿತ್ರದುರ್ಗ: ಯುವಕನೊಬ್ಬ ವಿಡಿಯೋ ಕಾಲ್ ಮಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ.

    ಚಿತ್ರದುರ್ಗ ನಗರದ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪಾವಗಡ ಮೂಲದ ಆರೋಪಿ ಹನುಮಂತಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಒಂದು ವಾರದ ಹಿಂದೆ ಯುವತಿ ಫೇಸ್‍ಬುಕ್ ಮೂಲಕ ನಂಬರ್ ತೆಗೆದುಕೊಂಡಿದ್ದು, ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಯುವತಿ ಮೆಸೇಜ್‍ಗೆ ಪ್ರತಿಕ್ರಿಯಿಸಲಿಲ್ಲ ಎಂದು ವಿಡಿಯೋ ಕರೆ ಮಾಡಲು ಶುರು ಮಾಡಿದ್ದಾನೆ.

    ವಿಡಿಯೋ ಕಾಲ್ ಮೂಲಕ ಅಸಭ್ಯವಾಗಿ ವರ್ತಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಕೊನೆಗೆ ಯುವತಿ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ. ತಕ್ಷಣ ಪೋಷಕರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿ ಪೋಷಕರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ, ಬಳಿಕ ವಾಪಸ್ ಕಳುಹಿಸಿದ್ದಾರೆ.

  • ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯದ ಸೈನಿಕನ ಜೊತೆ ಸಾರಥಿ ವೀಡಿಯೋ ಕಾಲ್!

    ಮಂಡ್ಯ: ಪ್ರಚಾರದ ಅಬ್ಬರ ನಡುವೆಯೇ ಯೋಧರೊಬ್ಬರ ಜೊತೆ ವಿಡಿಯೋ ಕಾಲ್ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತುಕತೆ ನಡೆಸಿದ್ದಾರೆ.

    ಶ್ರೀರಂಗಪಟ್ಟಣದ ಮೂಳೆಕೊಪ್ಪಲು ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಯೋಧ ತನ್ನ ನೆಚ್ಚಿನ ನಟನಿಗೆ ವಿಡಿಯೋ ಕಾಲ್ ಮಾಡಿ ಶುಭ ಹಾರೈಸಿದ್ದಾರೆ.

    ಮಧ್ಯಾಹ್ನದ ಊಟ ಮುಗಿಸಿ ಸೈನಿಕನ ಜೊತೆ ವೀಡಿಯೋ ಕಾಲ್ ಮೂಲಕ ಮಾತನಾಡಿದ ದರ್ಶನ್, ನಿಮ್ಮ ಮಾತಿನಿಂದ ನಮಗೆ ಮತ್ತಷ್ಟು ಧೈರ್ಯ ಸಿಕ್ಕಿದೆ ಎಂದು ಹೇಳಿದರು. ಅಭಿಮಾನಿ ಯೋಧ ಜಮ್ಮು ಗಡಿ ಸೇನಾ ಕ್ಯಾಂಪ್ ನಿಂದ ದರ್ಶನ್ ಅವರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಅಲ್ಲದೆ ಪೋಸ್ಟಲ್ ಬ್ಯಾಲಟ್ ಮೂಲಕ ಮತ ಹಾಕುವುದಾಗಿ ಹೇಳಿದ್ದಾರೆ. ಯೋಧನ ಮಾತಿಗೆ ದರ್ಶನ್ ಥ್ಯಾಂಕ್ಯೂ.. ಥ್ಯಾಂಕ್ಯೂ.. ಎಂದು ಹೇಳಿದ್ದಾರೆ.

  • ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ನೇಣಿಗೆ ಶರಣು

    ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಮಹಿಳೆ ನೇಣಿಗೆ ಶರಣು

    ಜೈಪುರ: ದೆಹಲಿ ಮೂಲದ 28 ವರ್ಷದ ಮಹಿಳೆಯೊಬ್ಬರು ಹೋಟೆಲ್ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಮಿರ್ಜಾ ಖತೂನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಮಿರ್ಜಾ ಗುರುವಾರ ರಾತ್ರಿ ಜೈಪುರಕ್ಕೆ ಬಂದಿದ್ದು, ನಾಲ್ಕು ದಿನಗಳ ಕಾಲ ಮಿರ್ಜಾ ಹೋಟೆಲ್ ಬುಕ್ ಮಾಡಿದ್ದರು. ಆದರೆ ಎರಡು ದಿನದಿಂದ ಆಕೆ ರೂಮಿನಿಂದ ಹೊರಗೆ ಬಂದಿರಲಿಲ್ಲ. ರೂಮಿಗೆ ಊಟ ಮತ್ತು ಟೀ ಯನ್ನು ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ರೂಮಿನಲ್ಲಿಯೇ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮಿರ್ಜಾ ಮೂರು ವರ್ಷಗಳಿಂದ ರಣಧೀರ್ ವಿಶ್ವಕರ್ಮ ಎಂಬಾತನ ಜೊತೆ ಲಿವ್‍ಇನ್ ರಿಲೆಷನ್‍ಶಿಪ್‍ನಲ್ಲಿ ಇದ್ದರು. ಇವರಿಗೆ 4 ವರ್ಷದ ಮಗನೂ ಕೂಡ ಇದ್ದಾನೆ. ಆದರೆ ಕೆಲವು ತಿಂಗಳ ಹಿಂದೆ ಇಬ್ಬರ ಸಂಬಂಧವೂ ಮುರಿದು ಬಿದ್ದಿತ್ತು ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

    ಮೃತ ಮಿರ್ಜಾ ರೂಮಿನಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ನೋಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ರೂಮಿಗೆ ಬಾಗಿಲು ಹೊಡೆದು ಒಳ ಹೋಗಿದ್ದಾರೆ. ಆಗ ಮಿರ್ಜಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು 24 ಗಂಟೆಗಳ ಮುಂಚೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ತೀವ್ರ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಡಿಸಿಪಿ ಧರ್ಮೇಂದ್ರ ಸಾಗರ್ ಶಂಕಿಸಿದ್ದಾರೆ.

    ಮಿರ್ಜಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ತನ್ನ ಲವ್ವರ್ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಇಬ್ಬರು ಫೋನಿನಲ್ಲಿ ಸಂಭಾಷಣೆ ಮಾಡುವಾಗಲೇ ಮಿರ್ಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

  • ಹೆಂಡ್ತಿ ಕೊಂದು ವಿಡಿಯೋ ಕಾಲ್ ಮಾಡಿ ಶವ ತೋರಿಸಿದ..!

    ಹೆಂಡ್ತಿ ಕೊಂದು ವಿಡಿಯೋ ಕಾಲ್ ಮಾಡಿ ಶವ ತೋರಿಸಿದ..!

    ವಿಜಯಪುರ: ಪತ್ನಿಯನ್ನು ಕೊಲೆಗೈದು ಬಳಿಕ ವಿಡಿಯೋ ಕಾಲ್ ಮೂಲಕ ಆಕೆಯ ಶವವನ್ನು ಮನೆಯವರಿಗೆ ತೋರಿಸಿದ ಆಘಾತಕಾರಿ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ನಗರದ ಕಾಸಗೇರಿ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಸೋನಾಬಾಯಿ ಮಲ್ಲಿಕಾರ್ಜುನ್ ಪವಾರ (28) ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಆರೋಪಿ ಪತಿಯನ್ನು ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದೆ.

    ಸುತ್ತಿಗೆಯಿಂದ ಪತ್ನಿ ತಲೆಗೆ ಹೊಡೆದು ಮಲ್ಲಿಕಾರ್ಜುನ್ ಕೊಲೆ ಮಾಡಿದ್ದಾನೆ. ಅಲ್ಲದೆ ನಂತರ ಆಕೆಯ ಮನೆಗೆ ವಿಡಿಯೋ ಕಾಲ್ ಮಾಡಿ ಸೋನಾಬಾಯಿ ಶವವನ್ನು ತೋರಿಸುವ ಮೂಲಕ ವಿಕೃತಿ ಮೆರೆದಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

    ಪತ್ನಿ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ಗಂಟೆಗೆ 15 ಬಾರಿ ವಿಡಿಯೋ ಕಾಲ್ ಮಾಡಿದ್ದಕ್ಕೆ ಕೇಸ್ ಬುಕ್

    ಒಂದು ಗಂಟೆಗೆ 15 ಬಾರಿ ವಿಡಿಯೋ ಕಾಲ್ ಮಾಡಿದ್ದಕ್ಕೆ ಕೇಸ್ ಬುಕ್

    ಮುಂಬೈ: ವ್ಯಕ್ತಿಯೊಬ್ಬ 36 ವರ್ಷದ ಮಹಿಳೆಗೆ ಒಂದು ಗಂಟೆಯಲ್ಲಿ 15 ಬಾರಿ ವಿಡಿಯೋ ಕರೆ ಮಾಡಿದ್ದರಿಂದ ಆತನ ವಿರುದ್ಧ ಓಶಿವಾರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಂಧೇರಿಯ ಲೋಖಂಡ್ವಾಲಾ ನಿವಾಸಿ ಮಹಿಳೆಗೆ ವಿಡಿಯೋ ಕಾಲ್ ಬಂದಿದ್ದು, ವ್ಯಕ್ತಿಯೊಬ್ಬ ಒಂದು ಗಂಟೆಗೆ 15 ಬಾರಿ ಅಶ್ಲೀಲವಾಗಿ ವಿಡಿಯೋ ಕರೆಗಳನ್ನು ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಏನಿದು ಪ್ರಕರಣ?
    ಜನವರಿ 26ರಂದು ಮಹಿಳೆ ಮಲಾಡ್ ನಲ್ಲಿರುವ ಮಾಲ್ ನಲ್ಲಿ ಶಾಪಿಂಗ್ ಮಾಡುತ್ತಿದ್ದರು. ವ್ಯಕ್ತಿಯೊಬ್ಬ ಮೊದಲ ಬಾರಿಗೆ ಮಹಿಳೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ಆಗ ಫೋನಿನಲ್ಲಿ ಮಹಿಳೆಯ ಪತಿ ಸೋದರ ಸಂಬಂಧಿ ಹೆಸರು ಬಂದಿದೆ. ಆದ್ದರಿಂದ ಮಹಿಳೆ ಫೋನ್ ರಿಸೀವ್ ಮಾಡಿದ್ದಾರೆ. ಆದರೆ ಫೋನಿನ ಸ್ಕ್ರೀನ್ ಮೇಲೆ ಏನು ಕಾಣಿಸಲಿಲ್ಲ. ಬಳಿಕ ಮಹಿಳೆ ಕರೆಯನ್ನು ಕಟ್ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಮತ್ತೆ ಮಹಿಳೆಗೆ ಕರೆ ಬಂದಿದೆ. ಆಗ ಒಬ್ಬ ವ್ಯಕ್ತಿಯು ಅಶ್ಲೀಲವಾಗಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಮನೆಗೆ ಸಂಜೆ ಸುಮಾರು 7.30ಕ್ಕೆ ಹೋಗಿದ್ದಾರೆ. ಅಷ್ಟರಲ್ಲಿಯೇ ಆರೋಪಿ ಅದೇ ನಂಬರಿಂದ 13 ಬಾರಿ ವಿಡಿಯೋ ಕಾಲ ಮಾಡಿದ್ದಾನೆ. ಕೊನೆಗೆ ಮಹಿಳೆ ನಂಬರ್ ನ್ನು ಬ್ಲಾಕ್ ಮಾಡಿದ್ದಾರೆ. ಬಳಿಕ ಈ ಬಗ್ಗೆ ಪತಿಗೆ ತಿಳಿಸಿ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಜನವರಿ 28 ರಂದು ಓಶಿವಾರ ಪೊಲೀಸ್ ಠಾಣೆಯಲ್ಲಿ ಹಿರಿಯ ಇನ್ಸ್ ಪೆಕ್ಟರ್ ಶೈಲೇಶ್ ಪಾಸಲ್ವಾರನ್ನು ಭೇಟಿಯಾಗಿ ಪತಿ ದೂರು ದಾಖಲಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ವ್ಯಕ್ತಿಯ ಫೋನ್ ನಂಬರ್ ತೆಗೆದುಕೊಂಡಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಿದ್ರೆ ಮಾಡ್ತಿದ್ದ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶಿಸಿದ ಕಾಮುಕ

    ನಿದ್ರೆ ಮಾಡ್ತಿದ್ದ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶಿಸಿದ ಕಾಮುಕ

    ಬೆಂಗಳೂರು: ಮಹಿಳೆಯರೇ ಅನಾಮಿಕ ನಂಬರ್ ನಿಂದ ಕರೆ ಬಂದರೆ ಪಿಕ್ ಮಾಡುವ ಮುನ್ನ ಹುಷಾರಾಗಿರಿ. ಏಕೆಂದರೆ ಕಾಮುಕರು ತಡರಾತ್ರಿ ವಿಡಿಯೋ ಕಾಲ್ ಮಾಡಿ ನಿಮ್ಮ ಮುಂದೆ ಬೆತ್ತಲೆ ನಿಲ್ಲುತ್ತಾರೆ.

    ಖಾಸಗಿ ಕಂಪನಿಯ ಮಹಿಳಾ ಮ್ಯಾನೇಜರ್‍ಗೆ ಅಪರಿಚಿತನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ತಡರಾತ್ರಿ ವಿಡಿಯೋ ಕಾಲ್ ಮಾಡಿ ಮಹಿಳೆ ಮುಂದೆ ಬೆತ್ತಲಾಗಿ ನಿಂತಿದ್ದಾನೆ. ಕಳೆದ 12ರಂದು ನಸುಕಿನ ಜಾವ ಸುಮಾರು 2:47ಕ್ಕೆ ಕಾಮುಕ ಮಹಿಳೆಗೆ ಎರಡು ಬಾರಿ ವಿಡಿಯೋ ಕಾಲ್ ಮಾಡಿದ್ದಾನೆ.

    ಈ ವೇಳೆ ನಿದ್ರೆಯಲ್ಲಿದ್ದ ಮಹಿಳೆ ಒಮ್ಮೆ ಕಾಲ್ ಪಿಕ್ ಮಾಡಿ ಕಟ್ ಮಾಡಿದ್ದಾರೆ. ನಂತರ ಕಾಮುಕ ಮತ್ತೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ಪ್ರದರ್ಶನ ಮಾಡಿ ವಿಕೃತಿ ಮರೆದಿದ್ದಾನೆ. ಕಾಮುಕ ವಿಡಿಯೋ ಕಾಲ್ ನಲ್ಲಿ ವಿಕೃತಿ ಮೆರೆದಿದ್ದಲ್ಲದೇ, ಮಹಿಳೆಗೆ ಅಸಭ್ಯವಾಗಿ ನಿಂದಿಸಿದ್ದಾನೆ.

    ಮಹಿಳೆ ತನ್ನ ಮೇಲಾದ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾಳೆ. ಅಲ್ಲದೇ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಬೆಂಗಳೂರು ಸಿಟಿ ಪೊಲೀಸ್ ಪೇಜ್ ನಲ್ಲಿ ಮಹಿಳೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಅಳಲು ತೋಡಿಕೊಂಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv