ಧಾರವಾಡ: ಲಾಕ್‍ಡೌನ್‍ನಿಂದ ಈಗಾಗಲೇ ಅನೇಕ ಮದುವೆ ಸಮಾರಂಭಗಳು ಕ್ಯಾನ್ಸಲ್ ಆಗಿವೆ. ಕೆಲವರು ಸರಳವಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸದೆ ಮದುವೆಯಾಗಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ವಿಡಿಯೋ ಕಾಲ್ ಮೂಲಕ ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದಾರೆ.
ಜಿಲ್ಲೆಯ ಆದರ್ಶ ನಗರದ ವರ ಇಮ್ರಾನ್ ಜೊತೆ ಕೊಪ್ಪಳ ಜಿಲ್ಲೆಯ ವಧು ತಾಜಮಾ ಬೇಗಂ ಮದುವೆ ಆನ್‍ಲೈನ್‍ನಲ್ಲಿ ವಿಡಿಯೋ ಕಾಲ್‍ನಲ್ಲಿ ನಡೆದಿದೆ. ಇವರಿಬ್ಬರ ಮದುವೆಯನ್ನು ಏಪ್ರಿಲ್‍ನಲ್ಲಿ ಮಾಡಬೇಕೆಂದು ನಿಶ್ಚಯ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಹೀಗಾಗಿ ಕುಟುಂಬದವರು ಮದುವೆ ಮಾಡಬೇಕೋ ಅಥವಾ ಬೇಡವೋ ಎಂದು ಗೊಂದಲದಲ್ಲಿದ್ದರು.
ಜಿಲ್ಲಾಧಿಕಾರಿಗಳು ಮದುವೆಗೆ ಕೇವಲ ನಾಲ್ವರು ಮಾತ್ರ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಮದುವೆ ಮಾಡಿಕೊಂಡು ಕೊಪ್ಪಳದಿಂದ ವಾಪಸ್ ಬರಲು ಕೂಡ ಲಾಕ್‍ಡೌನ್‍ನಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವರ ಮತ್ತು ವಧು ಕುಟುಂಬದವರು ವಿಡಿಯೋ ಕಾಲ್‍ನಲ್ಲಿ ಮದುವೆ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.
ಎರಡು ಕುಟುಂಬಗಳು ಮದುವೆ ಕಾರ್ಡ್ ಕೂಡ ಮಾಡಿಸಿದ್ದರು. ಆದರೆ ಲಾಕ್‍ಡೌನ್ ಇರುವುದರಿಂದ ಇಬ್ಬರ ಕುಟುಂಬದವರು ಒಂದು ನಿರ್ಧಾರ ಕೈಗೊಂಡು ವಿಡಿಯೋ ಕಾಲ್‍ನಲ್ಲಿ ಮದುವೆ ಮಾಡಿಸಿದ್ದಾರೆ. ಇನ್ನೂ ಲಾಕ್‍ಡೌನ್ ಮುಗಿದ ಮೇಲೆ ಆರತಕ್ಷತೆ ಮಾಡಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ.
ಸದ್ಯ ಮದುವೆ ಆಗಿದ್ದರೂ ಮದುಮಗಳು ಕೊಪ್ಪಳದಲ್ಲಿ ಇರಲಿದ್ದು, ಕೊರೊನಾ ಲಾಕ್‍ಡೌನ್ ಮುಗಿದ ಮೇಲೆ ಪತಿಯ ಮನೆಗೆ ಬರಲಿದ್ದಾಳೆ. ಮದುವೆಯ ಎಲ್ಲ ಪದ್ಧತಿಗಳನ್ನ ಮುಗಿಸಲು ಒಂದು ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಾಗಿದೆ.
ತುಮಕೂರು: ಕಿಲ್ಲರ್ ಕೊರೊನಾ ಕಾಲಿಟ್ಟಾಗಿನಿಂದ ಪೊಲೀಸರು ಕೂಡ ಕಾಲಿಗೆ ಚಕ್ರಕಟ್ಟಿಕೊಂಡು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತಿದ್ದಾರೆ. ಆದರೆ ಅವರನ್ನೇ ನಂಬಿಕೊಂಡಿರುವ ಅವರ ಕುಟುಂಬದವರು ದಿನ ನಿತ್ಯ ಆತಂಕದಲ್ಲೇ ದಿನ ದೂಡುತಿದ್ದಾರೆ.
ಈ ನಡುವೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ಅವರ ಕುಟುಂಬದವ ಆತ್ಮಸ್ಥೈರ್ಯ ತುಂಬವ ಕೆಲಸಕ್ಕೆ ಮಾಡಿದ್ದಾರೆ. ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಹಾಗೂ ವಿವಿಧಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕುಟುಂಬದವರಿಗೆ ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.
ತುಮಕೂರು ಎಸ್ಪಿಯ ನೂತನ ಪ್ರಯೋಗಕ್ಕೆ ಕುಟುಂಬದವರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಸ್ವತಃ ಎಸ್ಪಿ ವಿಡಿಯೋ ಕಾಲ್ ಮಾಡಿ ತಮ್ಮ ತಮ್ಮ ಕುಟುಂಬದ ಪೊಲೀಸ್ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವು ಕುಟುಂಬದ ಸದಸ್ಯರು ಮನೆಯಲ್ಲೇ ಉಳಿದು ತಮ್ಮವರಿಗೆ ಬೆಂಬಲ ಸೂಚಿಸಿ ಎಂದು ಮನವಿ ಮಾಡಿದ್ದಾರೆ.
ತುಮಕೂರು: ಲಾಕ್‍ಡೌನ್‍ನಿಂದಾಗಿ ಸಂಬಂಧಿಕರು ಮೃತಪಟ್ಟರೂ ಅಂತ್ಯಸಂಸ್ಕಾರ ಮಾಡಲು ಹೋಗದ ಪರಿಸ್ಥಿತಿ ಇದೆ. ಈ ರೀತಿ ಇರುವಾಗ ದೂರದ ಊರಿನಲ್ಲಿದ್ದ ಸಂಬಂಧಿಕರು ಮೃತಪಟ್ಟ ತಮ್ಮ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ಮೂಲಕ ನೋಡಿ ದೂರದಿಂದಲೇ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಅಂದಹಾಗೆ ಈ ಘಟನೆ ನಡೆದದ್ದು ತುಮಕೂರು ನಗರದಲ್ಲಿ. ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಕನೈದಾಸ್ ಮೃತಪಟ್ಟಿದ್ದ. ತುಮಕೂರಿನ ಎಂ.ಜಿ ರಸ್ತೆಯಲ್ಲಿ ಕರವಸ್ತ್ರ ಮಾರಿಕೊಂಡು ಜೀವನ ನಡೆಸುತ್ತಿದ್ದ ಕನೈದಾಸ್‍ಗೆ ಏಪ್ರಿಲ್ 2ರಂದು ಹೃದಯಾಘಾತ ಸಂಭವಿಸಿತ್ತು. ಕನೈದಾಸ್ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಸದ್ಯ ಲಾಕ್‍ಡೌನ್ ಇರುವ ಕಾರಣ ಮೃತ ಶರೀರವನ್ನು ಪಶ್ಚಿಮ ಬಂಗಾಳಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಕುಟುಂಬಸ್ಥರ ಮನವಿ ಮೇರೆಗೆ ಇಲ್ಲಿಯೇ ಅಂತ್ಯಸಂಸ್ಕಾರ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ಆತನ ಸಂಬಂಧಿಕರು ಬಂದಿರಲಿಲ್ಲ. ಹಾಗಾಗಿ ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಸಂಬಂಧಿಕರು ಮೃತದೇಹವನ್ನು ವೀಕ್ಷಣೆ ಮಾಡಿದ್ದಾರೆ.
ಚೆನ್ನೈ: ತಮಿಳು ನಟಿಯೊಬ್ಬಳು ತನ್ನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪಿ.ಪದ್ಮಜಾ (23) ಆತ್ಮಹತ್ಯೆ ಮಾಡಿಕೊಂಡ ನಟಿ. ಈಕೆ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಳು. ಆದರೆ ಭಾನುವಾರ ತಿರುವೊಟ್ಟಿಯೂರ್ ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಪದ್ಮಜಾ ಕಲಾದಿಪೇಟೆಯ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಈಕೆಗೆ ಪವನ್ (25) ಎಂಬವರ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆದರೆ ಪತಿಯ ಜೊತೆ ಜಗಳ ಮಾಡಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಮಗನನ್ನು ಸಂಬಂಧಿಕರ ಮನೆಯಲ್ಲಿ ಬೆಳೆಸಲಾಗುತ್ತಿದೆ. ದಂಪತಿ ವಾರಾಂತ್ಯದಲ್ಲಿ ಮಗನನ್ನು ಭೇಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪದ್ಮಜಾ ಕಳೆದ ತಿಂಗಳು ಪತಿಯಿಂದ ದೂರವಾಗಿದ್ದಳು. ಪತಿ ಪವನ್ ಆಂಧ್ರ ಪ್ರದೇಶಕ್ಕೆ ಶಿಫ್ಟ್ ಆಗಿದ್ದರು. ಸಾಲದ ಕಾರಣದಿಂದಾಗಿ ಪದ್ಮಜಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಂದರೆ ಶನಿವಾರ ತನ್ನ ಸಹೋದರಿಗೆ ವಿಡಿಯೋ ಕಾಲ್ ಮಾಡಿದ್ದಳು. ಈ ವೇಳೆ ಪದ್ಮಜಾ ಆರ್ಥಿಕ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಳು. ಅಲ್ಲದೇ ಸಿನಿಮಾ ಮತ್ತು ಸೀರಿಯಲ್‍ನಲ್ಲಿ ಮುಖ್ಯವಾದ ಪಾತ್ರ ಸಿಗುತ್ತಿಲ್ಲ ಎಂದು ಮಾತನಾಡಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ದಿನಗಳಿಂದ ಮನೆ ಲಾಕ್ ಆಗಿರುವುದನ್ನು ನೋಡಿದ ಮನೆಯ ಮಾಲೀಕ ಎಸ್.ಕಾಶಿನಾಥನ್ ಅನುಮಾನಗೊಂಡು ತಿರುವೊಟ್ಟಿಯೂರ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಪದ್ಮಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸದ್ಯಕ್ಕೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜೊತೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ಉತ್ತರ ಭಾರತದ ಜೋಡಿಯೊಂದು ಆನ್‍ಲೈನ್‍ನಲ್ಲಿ ನಿಶ್ಚಿತಾರ್ಥ ಮಾಡಿಸಿಕೊಂಡಿದೆ.
ಆನ್‍ಲೈನ್‍ನಲ್ಲಿ ಇಂದು ಎಲ್ಲಾ ರೀತಿಯ ವ್ಯಾಪಾರ, ಶಾಪಿಂಗ್, ಊಟ, ಅನೇಕ ಸೇವೆಗಳು ಹಾಗೂ ಹತ್ತು ಹಲವು ವಿಚಾರಗಳು ನಮ್ಮ ಕೈಬೆರಳಿನ ತುದಿಯಲ್ಲಿ ಇಂಟರ್‌ನೆಟ್ ಮೂಲಕ ಮೊಬೈಲ್‍ನಲ್ಲಿ ದೊರೆಯುತ್ತಿದೆ. ಇದಕ್ಕೆ ಈಗ ನಿಶ್ಚಿತಾರ್ಥವೂ ಸೇರ್ಪಡೆಗೊಂಡಿದೆ.
ವಧು-ವರರು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆ ಮಂದಿಯೆಲ್ಲ ಸೇರಿಕೊಂಡು ಮೊಬೈಲ್‍ನಲ್ಲಿ ವಿಡಿಯೋ ಕಾಲ್‍ನಲ್ಲಿದ್ದ ವಧು-ವರರಿಗೆ ನಿಶ್ಚಿತಾರ್ಥದ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಆನ್‍ಲೈನ್ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಇದು ಹೊಸ ಟ್ರೆಂಡ್ ಕೂಡ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಬೆಂಗಳೂರು: ವಾಟ್ಸಪ್ ವಿಡಿಯೋ ಕಾಲ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ನಾಗವಾರ ನಿವಾಸಿ ಮಹಮ್ಮದ್ ಫೈಸಲ್ ಬಂಧಿತ ಕಳ್ಳ. ಲೈವ್ ಬ್ಯಾಂಡ್ ಶೋಕಿಗೆ ಬಿದ್ದಿದ್ದ ಫೈಸಲ್, ಮೊದಲಿಗೆ ತಡರಾತ್ರಿ ಕಳ್ಳತನ ಮಾಡುವ ಜಾಗಕ್ಕೆ ಹೋಗಿ ಸ್ನೇಹಿತ ವಿಕ್ರಮ್ ಗೆ ವಿಡಿಯೋ ಕಾಲ್ ಮಾಡುತ್ತಿದ್ದನು.
ಅಂಗಡಿ ಮುಂಭಾಗದಲ್ಲಿ ಯಾವ ರೀತಿಯ ಬೀಗ ಇದೆ. ಅಂಗಡಿಯಲ್ಲಿ ಹೇಗೆ ಕಳ್ಳತನ ಮಾಡಬೇಕು, ಎಲ್ಲಿ ಏನೇನು ಇರುತ್ತೆ ಅನ್ನೋದನ್ನು ವಿಡಿಯೋ ಕಾಲ್ ಮೂಲಕ ಸ್ನೇಹಿತ ವಿಕ್ರಮ್‍ಗೆ ತೋರಿಸುತ್ತಿದ್ದನು. ನಂತರ ವಿಕ್ರಮ್ ನೀಡುವ ಸೂಚನೆಯಂತೆ ಬೀಗ ಹೊಡೆದು, ಅಂಗಡಿಗೆ ನುಗ್ಗಿ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದನು.
ಆರೋಪಿ ಫೈಸಲ್‍ನ ಬಂಧನದಿಂದ 9 ಪ್ರಕರಣಗಳು ಪತ್ತೆಯಾಗಿದ್ದು, ಒಂದು ಲಕ್ಷ ಮೌಲ್ಯದ ವಾಚ್‍ಗಳು ಪತ್ತೆಯಾಗಿವೆ. ಈ ಇಬ್ಬರು ಆರೋಪಿಗಳು ಮತ್ತಷ್ಟು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು ತನಿಖೆ ಮುಂದುವರಿದಿದೆ. ಇಬ್ಬರ ವಿಡಿಯೋ ಕಾಲ್ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಅಶೋಕನಗರ ಪೊಲೀಸರು ಆರೋಪಿ ಫೈಸಲ್‍ನನ್ನು ಬಂಧಿಸಿ ಮತ್ತೊಬ್ಬ ಆರೋಪಿ ವಿಕ್ರಮ್‍ಗಾಗಿ ಹುಡುಕಾಟ ನಡೆಸಿದ್ದಾರೆ.
ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ರಾನ್ಸ್ ಮೂಲದ ಮಹಿಳಾ ಟೆಕ್ಕಿಗೆ ವಿಡಿಯೋ ಕರೆ ಮಾಡಿ ತನ್ನ ಮರ್ಮಾಂಗವನ್ನು ತೋರಿಸಿ ವ್ಯಕ್ತಿಯೊಬ್ಬ ವಿಲಕ್ಷಣ ವರ್ತನೆ ತೋರಿದ್ದಾನೆ
ಈ ಕುರಿತು ಫ್ರಂಚ್ ಮೂಲದ 28 ವರ್ಷದ ಟೆಕ್ಕಿ ಮಹಿಳೆ ಬೆಳ್ಳಂದೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಜುಲೈನಲ್ಲಿ ನಗರಕ್ಕೆ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ಆರೋಪಿ ವಾಟ್ಸಪ್ ಮೂಲಕ ಮಹಿಳೆಗೆ ಸಂದೇಶಗಳನ್ನು ಕಳುಹಿಸುತ್ತಿದ್ದ. ಆಗಸ್ಟ್ 28ರಂದು ವ್ಯಕ್ತಿ ಮಹಿಳೆಗೆ ನಿಂದನೀಯ ಸಂದೇಶವನ್ನು ಕಳಹಿಸಿದ್ದ. ಅಲ್ಲದೆ ಅಕ್ಟೋಬರ್ 19ರ ಮಧ್ಯರಾತ್ರಿ ಸಹ ಈತ ವಿಡಿಯೋ ಕಾಲ್ ಮಾಡಿದ್ದ ಆದರೆ ಟೆಕ್ಕಿ ಕರೆ ಸ್ವೀಕರಿಸಿರಲಿಲ್ಲ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 11ರಂದು ಬೇರೊಂದು ನಂಬರ್ ನಿಂದ ಮತ್ತೆ ನಿಂದನೀಯ ಸಂದೇಶಗಳು ಮಹಿಳೆಗೆ ಕಳುಹಿಸಿದ್ದ. ಅಲ್ಲದೆ ನವೆಂಬರ್ 23ರಂದು ಮಧ್ಯರಾತ್ರಿ 12:50ರ ಸುಮಾರಿಗೆ ವಿಡಿಯೋ ಕಾಲ್ ಮಾಡಿದ್ದು, ಈ ವೇಳೆ ವ್ಯಕ್ತಿ ತನ್ನ ಮರ್ಮಾಂಗವನ್ನು ಪ್ರದರ್ಶಿಸಿದ್ದಾನೆ. 1 ಗಂಟೆಗೆ ಮಹಿಳೆ ಕರೆ ಕಟ್ ಮಾಡಿದ್ದಾರೆ.
ವ್ಯಕ್ತಿಯ ಕಾಟದಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ನಮಗೆ ದೂರು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಎರಡೂ ಮೊಬೈಲ್ ಸಂಖ್ಯೆಗಳು ಆಂಧ್ರಪ್ರದೇಶದ ಒಬ್ಬನಿಗೆ ಸೇರಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಗರದಲ್ಲಿ ವರದಿಯಾಗಿದ್ದ ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿ ವಿರುದ್ಧ ಪೊಲೀಸರು ಹಲವು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದರು. ತಾನು ನಗರದ ‘ಎರಡನೇ ಶ್ರೀಮಂತ ವ್ಯಕ್ತಿ’ ಎಂದು ಮಹಿಳೆಯರನ್ನು ನಂಬಿಸಿ ಮೋಸ ಮಾಡುತ್ತಿದ್ದನು. ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಪರಾರಿಯಾಗುತ್ತಿದ್ದ.
30 ವರ್ಷದ ಎಂಬಿಎ ಪದವೀಧರನನ್ನು ಹಲಸೂರು ಪೊಲೀಸರು ಬಂಧಿಸಿದ್ದರು. ಮೂಲತಃ ತಮಿಳುನಾಡಿನವನಾಗಿದ್ದ ಆರೋಪಿ ವಿರುದ್ಧ 376(ಅತ್ಯಾಚಾರ), 420(ಮೋಸ), ಪ್ರಕರಣ ದಾಖಲಿಸಲಾಗಿತ್ತು. ತಮಿಳುನಾಡು ನೋಂದಣಿಯ ಹಲವು ಮೊಬೈಲ್ ಫೋನ್ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುಂಬೈ: ನನ್ನ ವಾಟ್ಸಪ್ ನಂಬರನ್ನು ಯಾರೋ ಹ್ಯಾಕ್ ಮಾಡಿ ನನ್ನ ಸ್ನೇಹಿತೆಯರಿಗೆ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಮುಂಬೈನ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ವಾಟ್ಸಪ್ ಹ್ಯಾಕ್ ಮಾಡಿರುವ ಆತ ನನ್ನ ಸಂಪರ್ಕದಲ್ಲಿರುವ ಎಲ್ಲರಿಗೂ ಮೆಸೇಜ್ ಮಾಡುತ್ತಿದ್ದಾನೆ. ಮೊದಲಿಗೆ ನಯವಾಗಿ ಮೆಸೇಜ್ ಮಾಡುವ ಆತ ನಂತರ ಅಶ್ಲೀಲ ಲಿಂಕ್ ಕಳುಹಿಸುತ್ತಾನೆ. ಬಳಿಕ ಈ ಲಿಂಕ್‌ನಿಂದ ಬರುವ ಕೋಡ್ ಕಳುಹಿಸಿ ಎಂದು ಕೇಳುತ್ತಾನೆ. ಕೋಡ್ ಕಳುಹಿಸಿದ ನಂತರ ವಿಡಿಯೋ ಕಾಲ್ ಬರುತ್ತದೆ. ಕರೆ ಸ್ವೀಕರಿಸಿದ ನಂತರ ಓರ್ವ ನಗ್ನವಾಗಿ ಅಸಹ್ಯಕರ ಕೃತ್ಯ ಮಾಡುತ್ತಾನೆ ಎಂದು ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ನಟಿ ತೇಜಸ್ವಿ, ಭಾನುವಾರ ನಾನು ನನ್ನ ಧಾರವಾಹಿಯ ವಿಶೇಷ ಸಂಚಿಕೆಯನ್ನು ಚಿತ್ರೀಕರಣ ಮಾಡುತ್ತಿದ್ದೆ. ಈ ವೇಳೆ ನನ್ನ ಮೊಬೈಲ್‌ಗೆ ಒಂದು ವಿಡಿಯೋ ಕರೆ ಬಂತು ನಾನು ಅದನ್ನು ಸ್ವೀಕರಿಸಿದಾಗ ಅದರಲ್ಲಿ ಒಬ್ಬ ನಗ್ನ ಮನುಷ್ಯ ನಿಂತುಕೊಂಡು ಅಸಹ್ಯವಾಗಿ ಏನೋ ಮಾಡುತ್ತಿದ್ದ. ಇದನ್ನು ನೋಡಿದ ನಾನು ಭಯಪಟ್ಟು ಕರೆಯನ್ನು ಕಟ್ ಮಾಡಿದೆ ಎಂದು ವಿವರಿಸಿದ್ದಾರೆ.
ನನಗೆ ಮಾಡಿದ ರೀತಿಯಲ್ಲೇ ನನ್ನ ನಂಬರ್‌ನಿಂದ ನನ್ನ ಸಹೋದ್ಯೋಗಿಗಳಿಗೆ ಮತ್ತು ಸ್ನೇಹಿತರಿಗೆ ಸೇರಿದಂತೆ ಹಲವರಿಗೆ ಈ ರೀತಿ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡಲಾಗಿದೆ. ನಟಿಯರಾದ ಕರಿಷ್ಮಾ ತನ್ನಾ, ತಾನ್ಯಾ ಶರ್ಮಾ ಇನ್ನೂ ಅನೇಕರಿಗೆ ಈ ರೀತಿ ಕರೆ ಹೋಗಿದೆ. ಅವರು ನನಗೆ ಕರೆ ಮಾಡಿ ಈ ವಿಚಾರ ತಿಳಿಸಿದರು. ನಾನು ಒಬ್ಬಳು ಹುಡುಗಿಯಾಗಿ, ನಟಿಯಾಗಿ ಈ ವಿಚಾರದಲ್ಲಿ ತುಂಬಾ ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ತೇಜಸ್ವಿ ಅಸಮಾಧಾನ ಹೊರಹಾಕಿದ್ದಾರೆ.
ನಾನು ಈ ವಿಚಾರದ ಬಗ್ಗೆ ನನ್ನ ನಿವಾಸದ ಹತ್ತಿರದಲ್ಲಿರುವ ಗೋರೆಗಾಂವ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಅವರು ನನ್ನನ್ನು ಠಾಣೆಗೆ ಬರಲು ಹೇಳಿದ್ದರು. ಆದರೆ ನಾನು ಸತತವಾಗಿ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ. ನಾನು ಶೀಘ್ರದಲ್ಲೇ ಪೊಲೀಸ್ ಠಾಣೆಗೆ ಹೋಗಿ ಬೇಕಾದ ಮಾಹಿತಿ ನೀಡಿ ಬರುತ್ತೇನೆ ಎಂದು ತೇಜಸ್ವಿ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
ಮುಂಬೈ: ಯುವತಿಯೊಬ್ಬಳು ತನ್ನ ವಿವಾಹಿತ ಪ್ರಿಯಕರನಿಗಾಗಿ ತಂಗಿ ಸ್ನಾನ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
25 ವರ್ಷದ ಯುವತಿ ಆರೋಪಿ ದಿನೇಶ್ ಮೌರ್ಯನ ಜೊತೆ ನಾಲ್ಕು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದಳು. ದಿನೇಶ್‍ಗೆ ಈಗಾಗಲೇ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ದಿನೇಶ್ ಹಾಗೂ ಯುವತಿ ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು.
ದಿನೇಶ್, ಯುವತಿ ಬಳಿ ಆಕೆಯ ತಂಗಿಯ ನಗ್ನ ಫೋಟೋವನ್ನು ಕೇಳಿದ್ದಾನೆ. ಆಗ ಯುವತಿ ತನ್ನ ತಂಗಿ ಶವರ್ ನಲ್ಲಿ ಸ್ನಾನ ಮಾಡುವಾಗ ಕದ್ದು ಮುಚ್ಚಿ ವಿಡಿಯೋ ಕಾಲ್ ಮಾಡಿ ತನ್ನ ಪ್ರಿಯಕರನಿಗೆ ತೋರಿಸಿದ್ದಾಳೆ. ವಿಡಿಯೋ ಕಾಲ್ ಮಾಡಿದ ಸಂದರ್ಭದಲ್ಲಿ ದಿನೇಶ್ ತನ್ನ ಮೊಬೈಲಿನಲ್ಲಿ ಸ್ಕ್ರೀನ್ ಶಾಟ್ ತೆಗೆದು ಸೇವ್ ಮಾಡಿಕೊಂಡಿದ್ದನು.
ಬುಧವಾರ ಮೊಬೈಲಿನಲ್ಲಿ ಸೇವ್ ಆಗಿದ್ದ ಫೋಟೋಗಳನ್ನು ದಿನೇಶ್ ಪತ್ನಿ ನೋಡಿದ್ದಾಳೆ. ಫೋಟೋ ನೋಡಿದ ಬಳಿಕ ಪತ್ನಿ, ಯುವತಿಯ ಪೋಷಕರಿಗೆ ತಿಳಿಸಿದ್ದಾಳೆ. ಫೋಟೋ ನೋಡಿದ ನಂತರ ವಿಡಿಯೋ ಕಾಲ್ ವೇಳೆ ಸ್ಕ್ರೀನ್‍ಶಾಟ್ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ದಿನೇಶ್ ಯುವತಿ ಬಳಿ ಆಕೆಯ ತಂಗಿಯ ನಗ್ನ ಫೋಟೋಗಳನ್ನು ಕಳುಹಿಸಿದರೆ, ಮದುವೆಯಾಗುವುದಾಗಿ ಮಾತು ನೀಡಿದ್ದನು. ದಿನೇಶ್ ಮಾತನ್ನು ನಂಬಿದ ಯುವತಿ ತನ್ನ ತಂಗಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಸದ್ಯ ಸಂತ್ರಸ್ತ ಯುವತಿ ತನ್ನ ಸಹೋದರಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.
ಯಾದಗಿರಿ: ಜಿಲ್ಲೆಯ ಕಣ್ವಮಠ ಕಾಮಿಸ್ವಾಮಿಯ ಕಾಮಪುರಾಣ ಆಡಿಯೋ ಸ್ಥಳೀಯ ಮಟ್ಟದಲ್ಲಿ ಬಾರಿ ಸುದ್ದಿಯಲ್ಲಿದೆ. ಆದರೆ ಇದರಲ್ಲಿ ನಂದೇನು ತಪ್ಪಿಲ್ಲ, ಇದೆಲ್ಲಾ ಷಡ್ಯಂತ್ರ ಎಂದು ಕಣ್ವಮಠದ ವಿದ್ಯಾವಾರೀಧಿತೀರ್ಥ ಸ್ವಾಮೀಜಿ ಪೀಠತ್ಯಾಗ ಮಾಡಲು ಮುಂದಾಗಿದ್ದಾರೆ.
ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ, ಪೀಠಾಧಿಪತಿ ಶ್ರೀ 1008 ವಿದ್ಯಾವಾರೀಧಿತೀರ್ಥ ಸ್ವಾಮಿಯ ಅಕ್ರಮ ಸಂಬಂಧ ಬಟಾ ಬಯಲಾಗಿದೆ. ಸಾಕ್ಷಿಗಳು ಸ್ವಾಮಿಯ ವಿರುದ್ಧವೇ ಇದ್ದರೂ ಇದರಲ್ಲಿ ನಂದೇನು ತಪ್ಪಿಲ್ಲ ಎಂದು ಸ್ವಾಮೀಜಿ ಹೇಳುತ್ತಿದ್ದಾರೆ. ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್‍ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ. ಇದನ್ನೂ ಓದಿ:ಈಗ ಬರ್ತಿಯಾ, ನಾನು ಬೇಡ್ವಾ- ಕಾಮಿಸ್ವಾಮಿಯ ಆಡಿಯೋ ಔಟ್
ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸ್ವಾಮಿ ಮೇಲಿದೆ. ಎಷ್ಟೇಲ್ಲಾ ಸಾಕ್ಷಿಗಳು ಸ್ವಾಮೀಜಿಯ ವಿರುದ್ಧವಿದ್ದರೂ ನಾನೇನು ಮಾಡಿಲ್ಲ, ನನ್ನ ಹೆಸರನ್ನು ಹಾಳು ಮಾಡಲು ಮಠವನ್ನು ಕಂಡರೆ ಆಗದವರು ಈ ರೀತಿ ಮಾಡುತ್ತಿದ್ದಾರೆ. ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ನನಗೆ ಗೊತ್ತಿರದ ಮಹಿಳೆಯರು ಈ ರೀತಿ ಮೆಸೆಜ್ ಮಾಡಿದ್ದಾರೆ. ಆದರೆ ನಾನು ಅವರ ಬಳಿ ಅಸಭ್ಯವಾಗಿ ವರ್ತಿಸಿಲ್ಲ. ಅವರೇ ನನಗೆ ಮೊದಲು ಫೋಟೋ, ವಿಡಿಯೋ ಕಾಲ್ ಮಾಡಿದ್ದು ಎಂದು ಹೇಳಿದರು. ಪೀಠದಲ್ಲಿ ಇದ್ದುಕೊಂಡು ಈ ಆರೋಪವನ್ನು ನಾನು ಎದುರಿಸುವುದು ಸರಿಯಲ್ಲ. ಆದ್ದರಿಂದ ಪೀಠತ್ಯಾಗ ಮಾಡಿ ಆರೋಪವನ್ನು ಎದುರಿಸಿ, ಹೋರಾಡುತ್ತೇನೆ. ನಾನು ಯಾವ ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.
ಅಲ್ಲದೆ ನನ್ನ ಮೊಬೈಲ್‍ಗೆ ಲಾಕ್ ಇಟ್ಟಿಲ್ಲ. ಆದ್ದರಿಂದ ನನ್ನ ಫೋನ್ ತೆಗೆದುಕೊಂಡು ಯಾರೋ ನನ್ನ ವಿರುದ್ಧ ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ನನ್ನ ಧ್ವನಿಯಲ್ಲಿ ಕಾಲ್ ಮಾಡಿದ್ದಾರೆ, ನನ್ನ ಹೆಸರಿನಲ್ಲಿ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾರೆ. ನಾನು ಚಾಚುರ್ಮಾಸದ ಕಾರ್ಯಕ್ರಮಗಳಲ್ಲಿ ಇದ್ದಾಗ ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಬೇಕಾದ ವ್ಯಕ್ತಿಗಳಿಗೆ ಕರೆ ಮಾಡಲು ಬಳಸುತ್ತಿದ್ದೆ. ಆದರೆ ನಾನು ಯಾರಿಗೂ ಚಾಟ್, ವಿಡಿಯೋ ಕಾಲ್ ಮಾಡಿಲ್ಲ ಎಂದರು.
ಆಡಿಯೋ ಹೊರಬಂದಿರುವ ಬಗ್ಗೆ ಮಾತನಾಡಿ, ನನ್ನ ಧ್ವನಿಯಲ್ಲಿ ಯಾರೋ ಮಾತನಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಾನು ಮಾತನಾಡಿರುವುದು ಅಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ. ನಿಮಗೆ ಕೇವಲ ಒಂದೆರಡು ನಂಬರ್‍ಗಳ ಚಾಟ್ ಮಾತ್ರ ಸಿಕ್ಕಿದೆ. ಆದ್ರೆ ಮೊದಲು ಮೂರ್ನಾಲ್ಕು ನಂಬರ್‍ಗಳಿಂದ ಏನು ಚಾಟ್ ಮಾಡಿದ್ದರು, ಏನೆಲ್ಲಾ ಫೋಟೋ ವಿಡಿಯೋ ಕಳುಹಿಸಿದ್ದರು ಎಂದು ನಿಮಗೆ ಗೊತ್ತಿಲ್ಲ. ಸಂಚು ರೂಪಿಸಿದ್ದಾರೆ ಅದ್ಯಾವುದನ್ನು ನಿಮಗೆ ತಲುಪಿಸಿಲ್ಲ. ಇದೆಲ್ಲಾ ಒಂದು ಸಂಚು, ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ 4-5 ವರ್ಷಗಳಿಂದಲೂ ಈ ರೀತಿ ಸಂಚುಗಳು ನನ್ನ ವಿರುದ್ಧ ನಡೆಯುತ್ತಲೇ ಬಂದಿದೆ. ನಾನು ಈ ಪೀಠವನ್ನು ಆರೋಹಣ ಮಾಡುತ್ತಿದ್ದಾಗ ಗಲಾಟೆ ಮಾಡಿದ ವ್ಯಕ್ತಿಗಳೇ ಇದರ ರುವಾರಿಗಳಾಗಿದ್ದಾರೆ. ಅವರೇ ನನ್ನ ವಿರುದ್ಧ ಸಂಚು ಹೂಡಿದ್ದಾರೆ. ಮಠದ ಟ್ರಸ್ಟ್ ಮುಖಾಂತರ, ಭಕ್ತರ ಸಹಾಯ ಪಡೆದು ಇದರ ತನಿಖೆ ನಡೆಸುತ್ತೇವೆ ಎಂದರು.