Tag: ವಿಡಿಯೋ ಕಾಲ್

  • ಮದುವೆಗೆ ರಜೆ ಕೊಡದ ಬಾಸ್ – ವಿಡಿಯೋ ಕಾಲ್‌ನಲ್ಲಿ ಮದುವೆ

    ಮದುವೆಗೆ ರಜೆ ಕೊಡದ ಬಾಸ್ – ವಿಡಿಯೋ ಕಾಲ್‌ನಲ್ಲಿ ಮದುವೆ

    ಶಿಮ್ಲಾ: ಮದುವೆಗೆ ಬಾಸ್ ರಜೆ ಕೊಡದ ಕಾರಣ ವರ ಹಾಗೂ ವಧು ವಿಡಿಯೋ ಕಾಲ್‌ನಲ್ಲಿ ವಿವಾಹವಾಗಿರುವ ಸಂಗತಿಯೊಂದು ನಡೆದಿದೆ.

    ಭಾರತೀಯ ಮೂಲದ ವ್ಯಕ್ತಿ ಟರ್ಕಿಯಲ್ಲಿದ್ದರು (Turkey). ಆತನ ಮದುವೆಗಾಗಿ ಬಾಸ್ ರಜೆ ಕೊಡದ ಕಾರಣ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ (Mandi) ವಧುವಿನೊಂದಿಗೆ ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದಾರೆ.

    ವಧುವಿನ ಅಜ್ಜನಿಗೆ ಅನಾರೋಗ್ಯದ ಹಿನ್ನೆಲೆ ವರನನ್ನು ಬೇಗ ಮದುವೆಯಾಗು ಎಂದು ವಧುವಿನ ಕುಟುಂಬಸ್ಥರು ಒತ್ತಾಯಿಸಿದ್ದರು. ಈ ಕಾರಣದಿಂದ ವರ ಮದುವೆಗಾಗಿ ಬಾಸ್ ಬಳಿ ರಜೆ ಕೋರಿದ್ದರು. ಆದರೆ ಬಾಸ್ ರಜೆಯನ್ನು ನಿರಾಕರಿಸಿದ್ದರು. ಇದರಿಂದ ಈ ವಿಷಯವನ್ನು ತಿಳಿದ ಕುಟುಂಬಸ್ಥರು ವರ್ಚುವಲ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಬಿಷ್ಣೋಯ್‌ ಗ್ಯಾಂಗ್‌ನಿಂದ 5 ಕೋಟಿಗೆ ಬೇಡಿಕೆ

    ಬಿಲಾಸ್‌ಪುರದ ನಿವಾಸಿಯಾಗಿರುವ ವರ ಅದ್ನಾನ್ ಮುಹಮ್ಮದ್ ಅವರ ಕುಟುಂಬವು ಭಾನುವಾರ ಮಂಡಿಗೆ ತಲುಪಿದರು. ಬಳಿಕ ಸೋಮವಾರ ವಿಡಿಯೋ ಕರೆಯ ಮೂಲಕ ವಿವಾಹವಾಗಿದ್ದು, ಖಾಜಿಯೊಬ್ಬರು ಕುಬೂಲ್ ಹೈ ಎಂದಾಗ ಮೂರು ಬಾರಿ ಹೇಳುವ ಮೂಲಕ ಧಾರ್ಮಿಕ ಕ್ರಿಯೆಗಳು ನೆರವೇರಿದವು.

    ಈ ಕುರಿತು ಮಾತನಾಡಿದ ವಧುವಿನ ಚಿಕ್ಕಪ್ಪ ಅಕ್ರಂ ಮೊಹಮ್ಮದ್, ಅತ್ಯಾಧುನಿಕ ತಂತ್ರಜ್ಞಾನದಿAದ ಮದುವೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ, ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಭೂಕುಸಿತ ಮತ್ತು ಪ್ರವಾಹದಿಂದಾಗಿ ವರನ ಮನೆಯವರು ವಧುವಿನ ಮನೆಗೆ ತಲುಪದ ಕಾರಣ ಶಿಮ್ಲಾದ ಕೋಟ್‌ಗಢ್‌ನ ಆಶಿಶ್ ಸಿಂಘಾ ಹಾಗೂ ಕುಲುವಿನ ಭುಂತರ್‌ನಲ್ಲಿದ್ದ ಶಿವಾನಿ ಠಾಕೂರ್ ಅವರನ್ನು ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದರು.ಇದನ್ನೂ ಓದಿ: ಕೊತ್ವಾಲ್‌ ಬಳಿ 100 ರೂ.ಗೆ ಕೆಲಸ ಮಾಡ್ತಿದ್ದ ಡಿಕೆ ಕಣ್ಣೀರು ಹಾಕಿರೋದು ನೋಡಿದ್ದೀರಾ? – ಹೆಚ್‌ಡಿಡಿ

  • ಬಿಗ್ ಆಫರ್ ನೀಡಿದ ಕಿರಣ್ ರಾಥೋಡ್ : ಫೋಟೋ, ವಿಡಿಯೋಗೆ ಇಂತಿಷ್ಟು ರೇಟು

    ಬಿಗ್ ಆಫರ್ ನೀಡಿದ ಕಿರಣ್ ರಾಥೋಡ್ : ಫೋಟೋ, ವಿಡಿಯೋಗೆ ಇಂತಿಷ್ಟು ರೇಟು

    ನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಕಿರಣ್ ರಾಥೋಡ್ (kiran rathod), ಅವರ ಅಭಿಮಾನಿಗಳಿಗೆ ಬಿಗ್ ಆಫರ್ (Big Offer)  ನೀಡಿದ್ದಾರೆ. ಕೈಯಲ್ಲಿ ಸಿನಿಮಾ ಇಲ್ಲದ ಕಾರಣದಿಂದಾಗಿ ತಮ್ಮದೇ ಆಪ್ ವೊಂದನ್ನು ಸಿದ್ಧಪಡಿಸಿರುವ ಕಿರಣ್, ಆ ಮೂಲಕ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ಅವರು ಹಾಕಿದ್ದಾರೆ.

    ಕಿರಣ್ ರಾಥೋಡ್ ಸಿದ್ಧಪಡಿಸಿರುವ ಆಪ್ ಉಚಿತವಲ್ಲ. 49 ರೂಪಾಯಿ ಪಾವತಿಸಿ ಡೌನ್ ಲೋಡ್ ಮಾಡಬೇಕು. ಅಲ್ಲಿಂದಲೇ ಅವರನ್ನು ಸಂಪರ್ಕಿಸಬೇಕು. ಹಾಗಂತ ಅದು ಕೂಡ ಉಚಿತವಲ್ಲ, ಅವರೊಂದಿಗೆ ಮಾತನಾಡುವುದಕ್ಕೆ ಹತ್ತು ಸಾವಿರ ರೂಪಾಯಿಯನ್ನು ಫಿಕ್ಸ್ ಮಾಡಿದ್ದಾರೆ. ಹತ್ತು ಸಾವಿರ ರೂಪಾಯಿ ಪಾವತಿಸಿದರೆ ಅವರ ಜೊತೆ ಐದು ನಿಮಿಷ ಮಾತನಾಡಬಹುದಂತೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಇಷ್ಟೇ ಅಲ್ಲ ಒಂದು ಸಾವಿರ ರೂಪಾಯಿ ಪಾವತಿ ಮಾಡಿದರೆ ಅವರು ಎರಡು ಹಾಟ್ ಫೋಟೋಗಳನ್ನು ಕಳುಹಿಸುತ್ತಾರಂತೆ. ಅಷ್ಟೇ ಅಲ್ಲದೇ ಅವರೊಂದಿಗೆ ಡಿನ್ನರ್ ಕೂಡ ಮಾಡಬಹುದಂತೆ. ಅವರೊಂದಿಗೆ ಊಟ ಮಾಡಲು ಕೂಡ ಇಂತಿಷ್ಟು ಹಣವನ್ನು ಪಾವತಿಸಬೇಕು. ಅವರೊಂದಿಗೆ ಡಿನ್ನರ್ ಗೆ ಹೋಗಲು ಒಂದೂವರೆ ಲಕ್ಷ ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.

    ವಿಡಿಯೋ ಕಾಲ್ (Video Call) ಕೂಡ ಮಾಡಬಹುದಾಗಿದ್ದು, ಇಂತಿಷ್ಟು ಸಮಯಕ್ಕೆ ಇಂತಿಷ್ಟು ರೂಪಾಯಿಯನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಹನ್ನೆರಡು ಸಾವಿರದಿಂದ ಶುರುವಾಗುವ ಈ ರೇಟು ಐವತ್ತು ಸಾವಿರ ರೂಪಾಯಿವರೆಗೂ ಇದೆ. ಈ ನಡೆಯು ಅನೇಕರಿಗೆ ಅಚ್ಚರಿ ಮೂಡಿಸಿದೆ. ಕಿರಣ್ ರಾಥೋಡ್ ಏನು ಮಾಡಲು ಹೊರಟಿದ್ದಾರೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

  • ನಟನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿ ಅರೆಸ್ಟ್

    ನಟನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿ ಅರೆಸ್ಟ್

    ಮುಂಬೈ: ನಟನರೊಬ್ಬರ ಹೆಂಡತಿಗೆ ವೀಡಿಯೋ ಕರೆ ಮಾಡಿ ಅಶ್ಲೀಲತೆ ಪ್ರದರ್ಶನ ಮಾಡಿದ್ದಕ್ಕಾಗಿ ಜೈಪುರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಆರೋಪಿ ಪೂಜಾ ಜೈನ್ (32) ಜೈಪುರ ಮೂಲದವ ಎಂದು ತಿಳಿದುಬಂದಿದೆ. ನಟರೊಬ್ಬರ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

    ಮಹಿಳೆಗೆ ಕೆಲವು ದಿನಗಳ ಹಿಂದೆ ಆರೋಪಿ ಪೂಜಾ ಜೈನ್‍ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಮಹಿಳೆ ಯಾರೋ ಸಂಬಂಧಿ ಎಂದು ತಿಳಿದು ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ನಂತರ ಆರೋಪಿಯಿಂದ ಸಂದೇಶಗಳು ಬರಲು ಪ್ರಾರಂಭಿಸಿದವು. ನವೆಂಬರ್ 25 ರಂದು ಮಹಿಳೆಗೆ ಪೂಜಾ ಜೈನ್ ನಿಂದ ವಿಡಿಯೋ ಕರೆ ಒಂದು ಬಂದಿದೆ. ಅಲ್ಲಿ ಆರೋಪಿಗಳು ಅಶ್ಲೀಲ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವುದು ಕಂಡಿದೆ.

    ಮಹಿಳೆ ಈ ವಿಚಾರವನ್ನು ತನ್ನ ಪತಿಗೆ ಹೇಳಿದ್ದಾಳೆ. ಆರೋಪಿಯಿಂದ ಮತ್ತೆ ಕರೆ ಬರುವವರೆಗೂ ಈ ದಂಪತಿ ಕಾದಿದ್ದಾರೆ. ಒಂದು ದಿನ ಮತ್ತೆ ಅದೇ ವ್ಯಕ್ತಿಯಿಂದ ಕೆರೆ ಬಂದಿದೆ. ಆಗ ಅದನ್ನು ಯುವತಿಯ ಪತಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಈ ವಿಚಾರವಾಗಿ ಯುವತಿಯ ಪತಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.

    ಡಿ ಬಿ ಮಾರ್ಗ್ ಪೊಲೀಸರು ಜೈಪುರಕ್ಕೆ ಐಪಿ ಅಡ್ರೆಸ್‍ನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಗುರುತಿಸಿದೆವು. ಆರೋಪಿ ರಾಹುಲ್ ಜೈನ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಾನೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಅವರು ನಿರುದ್ಯೋಗಿಗಳಾಗಿದ್ದರು. ಆಗ ಇಂತಹ ಕೆಲಸವನ್ನು ಮಾಡಿದ್ದಾರೆ. ಈ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕರೆ ಮಾಡಿದವರು ಅಪ್ಲಿಕೇಶನ್ ಬಳಸಿ ವೀಡಿಯೋ ಕರೆ ಮಾಡಿದ ಕಾರಣ ಮೊಬೈಲ್ ಸಂಖ್ಯೆ ಇರಲಿಲ್ಲ. ನಾವು ಅಪ್ಲಿಕೇಶನ್‍ನ ಕಚೇರಿಯನ್ನು ಸಂಪರ್ಕಿಸಿ ಐಪಿ ವಿಳಾಸವನ್ನು ತೆಗೆದುಕೊಂಡೆವು. ನಂತರ ಇಂಟರ್ನೆಟ್ ಸೇವೆ ಒದಗಿಸುವವರನ್ನು ಸಂಪರ್ಕಿಸಿ ಜೈಪುರದ ವ್ಯಕ್ತಿಯ ವಿಳಾಸವನ್ನು ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿದೆವು ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾಲ್ ರಿಸೀವ್ ಮಾಡ್ತಿದ್ದಂತೆ ಬೇರೆಯವರ ಪತ್ನಿಗೆ ಖಾಸಗಿ ಅಂಗ ತೋರಿಸಿದ

    ಕಾಲ್ ರಿಸೀವ್ ಮಾಡ್ತಿದ್ದಂತೆ ಬೇರೆಯವರ ಪತ್ನಿಗೆ ಖಾಸಗಿ ಅಂಗ ತೋರಿಸಿದ

    – ವಿಡಿಯೋದಲ್ಲಿ ಲೈಂಗಿಕ ಕ್ರಿಯೆಗೆ ಬಲವಂತ

    ಮುಂಬೈ: ಅಪರಿಚಿತ ವ್ಯಕ್ತಿಯೊಬ್ಬ ಬೇರೆಯವರ ಪತ್ನಿಗೆ ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗವನ್ನು ತೋರಿಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ವಾಲುಜ್ ಗ್ರಾಮದ ನಿವಾಸಿ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಪತ್ನಿಗೆ ವಿಡಿಯೋ ಮಾಡಿ ತನ್ನ ಖಾಸಗಿ ಅಂಗವನ್ನು ತೋರಿಸಿದ್ದಾನೆ. ಅಷ್ಟೇ ಅಲ್ಲದೇ ನನ್ನ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

    ಮಹಿಳೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಎಂಐಡಿಸಿ ವಾಲುಜ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

    ದೂರುದಾರರ ಪತ್ನಿಗೆ ಅಪರಿಚಿತ ವ್ಯಕ್ತಿ ಹಲವಾರು ಬಾರಿ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಮಹಿಳೆ ಈ ಬಗ್ಗೆ ನಿರ್ಲಕ್ಷಿಸಿದ್ದಾರೆ. ಆದರೆ ಫೋನ್ ಕರೆಗಳು ಹೆಚ್ಚಾಗಿ ಬರುತ್ತಿದ್ದವು. ಒಂದು ದಿನ ವಿಡಿಯೋ ಕಾಲ್ ಮಾಡಿದ್ದಾನೆ. ಮಹಿಳೆ ಕಾಲ್ ರಿಸೀವ್ ಮಾಡುತ್ತಿದ್ದಂತೆ ತನ್ನ ಖಾಸಗಿ ಅಂಗವನ್ನು ತೋರಿಸಿದ್ದಾನೆ ಎಂದು ಸಬ್ ಇನ್ಸ್ ಪೆಕ್ಟರ್ ಸತೀಶ್ ಪಂಡಿತ್ ಹೇಳಿದ್ದಾರೆ.

    ಅಪರಿಚಿತ ವ್ಯಕ್ತಿಯ ನಡತೆಯಿಂದ ಗಾಬರಿಯಾದ ಮಹಿಳೆ ಈ ಬಗ್ಗೆ ಪತಿಗೆ ತಿಳಿಸಿದ್ದಾರೆ. ನಂತರ ಪತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ಪೊಲೀಸರು ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರನ್ನ ಸಂಗ್ರಹಿಸಿದ್ದು, ಶಂಕಿತನನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪಂಡಿತ್ ಹೇಳಿದ್ದಾರೆ.

  • ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್- ಬರೋಬ್ಬರಿ 500 ಮಂದಿಗೆ ಕರೆ

    ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್- ಬರೋಬ್ಬರಿ 500 ಮಂದಿಗೆ ಕರೆ

    – ಕೇವಲ 5 ತರಗತಿವರೆಗೆ ಓದಿದ್ದ ಆರೋಪಿ
    – ಪ್ರತ್ಯೇಕ ಸಾಫ್ಟ್‌ವೇರ್ ಬಳಸಿ ವಿಡಿಯೋ ಕಾಲ್

    ನವದೆಹಲಿ: ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದ ಆರೋಪದಲ್ಲಿ ದೆಹಲಿಯ ಎನ್‍ಸಿಆರ್ ನಿವಾಸಿಯಾಗಿರುವ 22 ವರ್ಷದ ಯುವಕನನ್ನು ಪೊಲೀಶರು ಬಂಧಿಸಿದ್ದಾರೆ.

    ದೀಪಕ್ ಬಂಧಿತ ಆರೋಪಿಯಾಗಿದ್ದು, ವಿಡಿಯೋ ಕಾಲ್ ಮಾಡಲು ಪ್ರತ್ಯೇಕ ಸಾಫ್ಟ್‌ವೇರ್ ಬಳಿಕೆ ಮಾಡಿ ಮಹಿಳೆಯರು, ಯುವತಿಯರೊಂದಿಗೆ ನಗ್ನವಾಗಿ ನಿಂತು ಅಸಭ್ಯವಾಗಿ ಮಾತನಾಡುತ್ತಿದ್ದ. ಅಲ್ಲದೇ ಆತನ ಮೊಬೈಲ್‍ನಲ್ಲಿ ಬರೋಬ್ಬರು 500 ಮಂದಿ ಮಹಿಳೆಯರ ಫೋನ್ ನಂಬರ್ ಪತ್ತೆಯಾಗಿದ್ದು, ಆತ ಕೇವಲ 5ನೇ ತರಗತಿವರೆಗೆ ಮಾತ್ರ ಓದಿದ್ದಾನೆ ಎಂದು ಘಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ.

    ದೇಶದ ವಿವಿಧ ರಾಜ್ಯಗಳಿಗೆ ಸೇರಿದ ಮಹಿಳೆಯರು, ಯುವತಿಯರಿಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದ. ಮಹಿಳಾ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂದಿದ್ದಾರೆ. ಆರೋಪಿ ತನಗೆ ತೋಚಿದ್ದ ನಂಬರ್ ಟೈಪ್ ಮಾಡಿ ಮೊದಲು ಫೋನ್ ಮಾಡುತ್ತಿದ್ದ. ಫೋನ್ ಮಹಿಳೆಯರು ರಿಸೀವ್ ಮಾಡಿದರೆ ಅಂತಹ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದ. ಆ ಬಳಿಕ ಅವರ ವಾಟ್ಸಾಪ್‍ಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ. ಒಂದೊಮ್ಮೆ ಅವರು ಆರೋಪಿ ನಂಬರ್ ಬ್ಲಾಕ್ ಮಾಡಿದರೆ ಪ್ರತ್ಯೇಕ ಸಾಫ್ಟ್‌ವೇರ್ ಬಳಸಿ ವಿಡಿಯೋ ಕಾಲ್ ಮಾಡುತ್ತಿದ್ದ.

    ಪ್ರತ್ಯೇಕ ಸಾಫ್ಟ್‌ವೇರ್ ಬಳಕೆ ಮಾಡುತ್ತಿದ್ದ ಕಾರಣ ಪೊಲೀಸರಿಗೆ ಆತನ ಐಪಿ ವಿಳಾಸ ಪತ್ತೆ ಮಾಡುವುದು ಕಷ್ಟಸಾಧ್ಯವಾಗುತ್ತಿತ್ತು. ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ ಹಲವು ಮಹಿಳೆರಿಗೆ ಈತ ಇದೇ ಕಿರುಕುಳ ನೀಡಿದ್ದ.

    ಯುವತಿ ದೂರು ನೀಡಿದ ಬಳಿಕ ಆರೋಪಿಯ ನಂಬರ್ ಮೇಲೆ ನಿಗಾ ವಹಿಸಿದ್ದ ಪೊಲೀಸರು, ವಾಟ್ಸಾಪ್ ಕಾಲ್ ಆಧರಿಸಿ ಇಂಟರ್ ನೆಟ್ ಸರ್ವಿಸ್ ಪ್ರೋವೈಡರ್ ಐಪಿ ಅರ್ಡಸ್‍ಅನ್ನು ಪತ್ತೆ ಮಾಡಿದ್ದರು. ಸೈಬರ್ ಕ್ರೈಂ ಆಯೋಪದ ಅಡಿ ದೂರು ದಾಖಲಿಸಿ ಯುವಕನನ್ನು ಬಂಧಿಸಿದ್ದರು. ಸದ್ಯ ಘಟನೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

    ಪ್ರಕರಣದ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಸೈಬರ್ ಸೆಲ್ ಪೊಲೀಸ್ ಅಧಿಕಾರಿ ಅಭಯ್, ಯುವತಿಯೊಬ್ಬಳಿಗೆ ವಾಟ್ಸಾಪ್ ಕಾಲ್ ಮಾಡಿದ್ದ ಆಧಾರದ ಮೇಲೆ ಆತನನ್ನು ಬಂಧಿಸಲು ಸಾಧ್ಯವಾಗಿತ್ತು. ಎಷ್ಟೇ ಫೇಕ್ ವಾಟ್ಸಾಪ್ ಖಾತೆಗಳನ್ನು ಆರೋಪಿ ತೆರೆದಿದ್ದ ಆರೋಪಿ ಮಹಿಳೆರಿಗೆ ಕಿರುಕುಳ ನೀಡುತ್ತಿದ್ದ. ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ವಾಟ್ಸಾಪ್ ಸಂಸ್ಥೆಗೂ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

  • ವಿಡಿಯೋ ಕಾಲ್‍ನಲ್ಲಿ ಬೆತ್ತಲಾಗು ಅಂದ್ಳು- ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದ ಯುವಕ

    ವಿಡಿಯೋ ಕಾಲ್‍ನಲ್ಲಿ ಬೆತ್ತಲಾಗು ಅಂದ್ಳು- ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದ ಯುವಕ

    – ಯುವಕ ಕೇಳಿದಷ್ಟು ಹಣ ನೀಡಿದರೂ, ಹೆಚ್ಚಿನ ಹಣಕ್ಕೆ ಬೇಡಿಕೆ
    – ಸಿಬಿಐ ಏಜೆಂಟ್ ಸಹಾಯದಿಂದ ಯುವತಿ ಬ್ಲಾಕ್‍ಮೇಲ್

    ಮುಂಬೈ: ಮಹಿಳೆಯೊಬ್ಬಳು ಯುವಕನಿಗೆ ವಿಡಿಯೋ ಕಾಲ್ ಮಾಡಿ ಬೆತ್ತಲೆ ಚಿತ್ರ ರೆಕಾರ್ಡ್ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.

    25 ವರ್ಷದ ವ್ಯಕ್ತಿ ಮುಂಬೈನ ಭಯಾಂದರ್ ಪ್ರದೇಶದವರಾಗಿದ್ದು, ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಾರೆ. ವಾಟ್ಸಪ್ ವಿಡಿಯೋ ಕಾಲ್ ಮಾಡಿದ ವೇಳೆ ಬೆತ್ತಲೆಯಾಗುವಂತೆ ತಿಳಿಸಿದ್ದು, ಅವಳ ಮಾತನ್ನು ನಂಬಿದ್ದಕ್ಕೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ನಂತರ ಬೆದರಿಕೆ ಹಾಕಿದ್ದಾಳೆ. ಮಾತ್ರವಲ್ಲದೆ ನನ್ನಿಂದ 37 ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದಾಳೆ ಎಂದು ದೂರಿನಲ್ಲಿ ಸಂತ್ರಸ್ತ ತಿಳಿಸಿದ್ದಾರೆ.

    ಜುಲೈನಲ್ಲಿ ಅಪರಿಚಿತ ಮಹಿಳೆ ನನಗೆ ಕರೆ ಮಾಡಿದಳು, ನಂತರ ಪರಿಚಯವಾಗಿ ಚಾಟ್ ಮಾಡಲು ಆರಂಭಿಸಿದೆವು. ಇದೇ ವೇಳೆ ಸಂಬಂಧ ಬೆಳೆಯಿತು. ನಂತರ ಪ್ರತಿನಿತ್ಯ ಚಾಟ್ ಮಾಡಲು ಆರಂಭಿಸಿದೆವು ಎಂದು ಸಂತ್ರಸ್ತ ದೂರಿನಲ್ಲಿ ವಿವರಿಸಿದ್ದಾನೆ.

    ಬೆತ್ತಲಾಗು ಅಂದ್ಳು: ಸಾಮಾನ್ಯವಾಗಿ ಆಗಾಗ ಮಾಡುತ್ತಿದ್ದಂತೆ ವಾಟ್ಸಪ್ ವಿಡಿಯೋ ಕಾಲ್ ಮಾಡಿದ್ದಳು. ನಂತರ ಸ್ವಲ್ಪ ಹೊತ್ತು ಮಾತನಾಡಿ, ಬಟ್ಟೆ ಎಲ್ಲ ಬಿಚ್ಚಿ ಬೆತ್ತಲಾಗು ಎಂದಳು. ಅವಳನ್ನು ನಂಬಿ ನಾನು ಬಟ್ಟೆಗಳನ್ನೆಲ್ಲ ಬಿಚ್ಚಿದ್ದೆ. ಈ ವೇಳೆ ಅವಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ.

    ನಂತರ 50 ಸಾವಿರ ನೀಡುವಂತೆ ಒತ್ತಾಯಿಸಿದಳು, ದುಡ್ಡು ಕೊಡದಿದ್ದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದಳು. ಮಹಿಳೆ ಮಾತ್ರವಲ್ಲದೆ ಸಿಬಿಐ ಏಜೆಂಟ್ ಎಂದು ಹೇಳಿಕೊಂಡು ವ್ಯಕ್ತಿ ಸಹ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ. ಈ ವೇಳೆ ಮಾತುಕತೆ ನಡೆಸಿದ ಬಳಿಕ 37 ಸಾವಿರ ರೂ. ಕೊಡುವುದಾಗಿ ಹೇಳಿದೆ, ಆರೋಪಿಗಳು ಒಪ್ಪಿದರು. ನಂತರ ಮಹಿಳೆ ಕಳುಹಿಸಿದ ನಂಬರ್ ಗೆ ಇ-ವ್ಯಾಲೆಟ್ ಮೂಲಕ ಹಣ ವರ್ಗಾಯಿಸಿದೆ ಎಂದು ಸಂತ್ರಸ್ತ ಮಾಹಿತಿ ನೀಡಿದ್ದಾರೆ.

    ನಾನು 37 ಸಾವಿರ ರೂ.ಕಳುಹಿಸಿದ ನಂತರವೂ ಆರೋಪಿಗಳು ಮತ್ತೆ ಹಣ ಕಳುಹಿಸುವಂತೆ ಬೇಡಿಕೆ ಇಟ್ಟರು. ಹೀಗಾಗಿ ಉತನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ. ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಮೋಸ, ಸುಲಿಗೆ ಹಾಗೂ ಕ್ರಿಮಿನಲ್ ಬೆದರಿಕೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • 3 ಸೆಕೆಂಡ್ ನಗ್ನವಾಗಿ ಮಾತಾಡಿದ್ಲು – ನಂತ್ರ ಯುವಕನ ಬೆತ್ತಲೆ ವಿಡಿಯೋ ರೆಕಾರ್ಡ್

    3 ಸೆಕೆಂಡ್ ನಗ್ನವಾಗಿ ಮಾತಾಡಿದ್ಲು – ನಂತ್ರ ಯುವಕನ ಬೆತ್ತಲೆ ವಿಡಿಯೋ ರೆಕಾರ್ಡ್

    – ಮಹಿಳೆ ಕೇಳಿದ ತಕ್ಷಣ ನಗ್ನ ವಿಡಿಯೋ ಕಾಲ್ ಮಾಡಿದ
    – ಯುವಕನ ಗೆಳತಿಗೆ ವಿಡಿಯೋ ಕ್ಲಿಪ್ ಸೆಂಡ್

    ಮುಂಬೈ: ನಗ್ನ ವಿಡಿಯೋ ಇಟ್ಟುಕೊಂಡು ಮಹಿಳೆಯೊಬ್ಬಳು ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾಳೆ ಎಂದು ಯುವಕ ಪೊಲೀಸರಿಗೆ ದೂರು ನೀಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

    21 ವರ್ಷದ ಯುವಕ ದೂರು ನೀಡಿದ್ದಾನೆ. ಈತ ಮುಂಬೈನ ಗೋರೆಗಾಂವ್‍ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಸರು ಪ್ರಜ್ಞಾ ಎಂದು ಹೇಳಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

    ಏನಿದು ಪ್ರಕರಣ?
    ಮೇ ತಿಂಗಳಲ್ಲಿ ಯುವಕನಿಗೆ ಸೋಶಿಯಲ್ ಮೀಡಿಯಾದ ಮೂಲಕ ಮಹಿಳೆಯ ಪರಿಚಯವಾಗಿದೆ. ನಂತರ ಇಬ್ಬರು ಪರಸ್ಪರ ಚಾಟಿಂಗ್ ಮಾಡುತ್ತಿದ್ದರು. ಒಂದು ದಿನ ಮಹಿಳೆ ಯುವಕನನ್ನು ವಿಡಿಯೋ ಕಾಲ್‍ನಲ್ಲಿ ಮಾತನಾಡಲು ಇಷ್ಟಪಡುತ್ತೀಯ ಎಂದು ಕೇಳಿದ್ದಾಳೆ. ಅದಕ್ಕೆ ಯುವಕ ಒಪ್ಪಿಗೆ ಸೂಚಿಸಿದ್ದು, ನಂತರ ಇಬ್ಬರು ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದಾರೆ. ಆದರೆ ಮಹಿಳೆ ಕೊನೆಯ 3 ಸೆಕೆಂಡುಗಳ ಕಾಲ ನಗ್ನವಾಗಿ ಮಾತನಾಡಿದ್ದಾಳೆ.

    ವಿಡಿಯೋ ಕಾಲ್ ಮುಗಿದ ನಂತರ ಮಹಿಳೆ ಮತ್ತೆ ಯುವಕನೊಂದಿಗೆ ಚಾಟಿಂಗ್ ಮಾಡಲು ಶುರು ಮಾಡಿದ್ದಾಳೆ. ಆಗ ವಿಡಿಯೋ ಕಾಲ್‍ನಲ್ಲಿ ನಗ್ನವಾಗಿ ಮಾತನಾಡುವಂತೆ ಯುವಕನ ಬಳಿ ಕೇಳಿಕೊಂಡಿದ್ದಾಳೆ. ಅದಕ್ಕೆ ಯುವಕ ಕೂಡ ಒಪ್ಪಿ ನಗ್ನವಾಗಿ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದಾನೆ. ಈ ವೇಳೆ ಮಹಿಳೆ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಳು.

    ಕಾಲ್ ಕಟ್ ಆದ ತಕ್ಷಣ ಮಹಿಳೆ 20 ಸಾವಿರ ಹಣವನ್ನು ಕೇಳಿದ್ದಾಳೆ. ಒಂದು ವೇಳೆ ಹಣ ಕೊಟ್ಟಿಲ್ಲ ಎಂದರೆ ನಿನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಿಡಿಯೋ ಕ್ಲಿಪ್ ಶೇರ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಇದರಿಂದ ಭಯಗೊಂಡು ಯುವಕ 2,000 ರೂ.ಗಳನ್ನು ಮಹಿಳೆಯ ಖಾತೆಗೆ ವರ್ಗಾಯಿಸಿದ್ದಾನೆ. ಆದರೆ ಮಹಿಳೆ ಆ ವಿಡಿಯೋವನ್ನು ಯುವಕನ ಗೆಳತಿಗೆ ಕಳುಹಿಸಿದ್ದಾಳೆ. ನಂತರ ಯುವಕ ಉಳಿದ ಹಣವನ್ನು ಕಳುಹಿಸಿದ್ದಾನೆ. ಹಣ ತನ್ನ ಖಾತೆಗೆ ಬರುತ್ತಿದ್ದಂತೆ ಯುವಕನ ಜೊತೆ ಮಾತನಾಡುವುದನ್ನು ಮಹಿಳೆ ನಿಲ್ಲಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮತ್ತೆ ಇದೀಗ ಮಹಿಳೆ ಹೆಚ್ಚಿನ ಹಣ ನೀಡುವಂತೆ ಯುವಕನಿಗೆ ಮೆಸೇಜ್ ಮಾಡಿದ್ದಾಳೆ. ಕೊನೆಗೆ ಯುವಕನ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ. ಹಣ ವರ್ಗಾವಣೆಯ ಸಂದರ್ಭದಲ್ಲಿ ಆರೋಪಿ ಮಹಿಳೆ ಲಾಲು ಪ್ರಸಾದ್ ಪ್ರಜ್ಞಾ ಜೈನ್ ಎಂಬ ಹೆಸರನ್ನು ಬಳಸಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ವಿಡಿಯೋ ಕಾಲ್ ಮೂಲಕ ವೈದ್ಯರ ಮಾರ್ಗದರ್ಶನ ಪಡೆದು ಹೆರಿಗೆ ಮಾಡಿಸಿದ ಮಹಿಳೆಯರು

    ವಿಡಿಯೋ ಕಾಲ್ ಮೂಲಕ ವೈದ್ಯರ ಮಾರ್ಗದರ್ಶನ ಪಡೆದು ಹೆರಿಗೆ ಮಾಡಿಸಿದ ಮಹಿಳೆಯರು

    ಹಾವೇರಿ: ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ ಪಡೆದು ಮಹಿಳೆಯರು ಹೆರಿಗೆ ಮಾಡಿಸಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.

    ಹಾನಗಲ್ ಪಟ್ಟಣದ ನಿವಾಸಿಯಾಗಿರುವ ವಾಸವಿ ಪತ್ತೇಪೂರ ಅವರಿಗೆ ಭಾನುವಾರ ಮಧ್ಯಾಹ್ನ ಎರಡೂವರೆ ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ವೇಳೆ ವಾಸವಿ ಪತ್ತೇಪೂರ ಅವರಿಗೆ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಮಹಿಳೆಯರು ನೆರವಿಗೆ ಆಗಮಿಸಿದ್ದರು.

    ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಕಾರಣ ಮಹಿಳೆಯರು ತಮಗೆ ಪರಿಚಯವಿದ್ದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ.ಪ್ರಿಯಾಂಕಾ ಮಂತಗಿ ಅವರಿಗೆ ವಿಡಿಯೋ ಕಾಲ್ ಮಾಡಿ ಸಲಹೆ, ಸೂಚನೆ ಪಡೆದುಕೊಂಡಿದ್ದಾರೆ. ವೈದ್ಯರಿಂದ ಸಲಹೆ ಪಡೆದ ಮಹಿಳಾ ತಂಡ ಸುರಕ್ಷಿತವಾಗಿ ಹೆರಿಗೆ ಮಾಡಿಸಲು ಯಶಸ್ವಿಯಾಗಿತ್ತು.

    ವಾಸವಿ ಪತ್ತೇಪೂರ ಅವರಿಗೆ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಹೆರಿಗೆ ಬಳಿಕ ತಾಯಿ ಮತ್ತು ಮಗು ಇಬ್ಬರನ್ನು ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದ ಮಧುಲಿಕಾ ದೇಸಾಯಿ, ಅಂಕಿತಾ, ಜ್ಯೋತಿ, ವಿಜಯಲಕ್ಷ್ಮಿ, ಮಾಧುರಿ, ಮುಕ್ತಾ ಹಾಗೂ ಶಿವಲೀಲಾ ಪತ್ತಾರ ಅವರ ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.

  • ಪಬ್‍ಜಿಯಿಂದ ಪರಿಚಯ ನಂತ್ರ ಫೇಸ್‍ಬುಕ್ ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಒತ್ತಾಯ

    ಪಬ್‍ಜಿಯಿಂದ ಪರಿಚಯ ನಂತ್ರ ಫೇಸ್‍ಬುಕ್ ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಒತ್ತಾಯ

    – ಪಾಗಲ್ ಸ್ನೇಹಿತನ ಕ್ರಿಮಿನಲ್ ಬುದ್ಧಿಗೆ ಬೆಚ್ಚಿಬಿದ್ದ ಯುವತಿ

    ಗಾಂಧಿನಗರ: ಪಬ್‍ಜಿ ಗೇಮ್ ಆಟದಿಂದ ಪರಿಚಯವಾದ ಸ್ನೇಹಿತನೊಬ್ಬ ನಂತರ ಸ್ನೇಹಿತೆಯ ಫೇಸ್‍ಬುಕ್ ಮತ್ತು ಮೇಲ್ ಐಡಿಯನ್ನು ಹ್ಯಾಕ್ ಮಾಡಿ ನಗ್ನ ವಿಡಿಯೋಗೆ ಬೇಡಿಕೆ ಇಟ್ಟಿರುವ ಶಾಂಕಿಂಗ್ ಘಟನೆ ಗುಜರಾತಿನಲ್ಲಿ ನಡೆದಿದೆ.

    ಈ ಘಟನೆ ಗುಜರಾತ್‍ನ ಅಹಮದಾಬಾದ್‍ನ ಒಗ್ನಾಜ್ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯ ವಿರುದ್ಧ 22 ವರ್ಷದ ಯುವತಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿದ್ದಾರೆ.

    ಯುವತಿ ಬಹಳ ದಿನಗಳಿಂದ ಪಬ್‍ಜಿ ಆಡುತ್ತಿದ್ದಳು. ಇದರ ಜೊತೆಗೆ ಸಮಯವಿದ್ದಾಗ ತನ್ನ ಇನ್ನೊಬ್ಬ ಸ್ನೇಹಿತೆಯ ಜೊತೆಗೂ ಪಬ್‍ಜಿ ಆಡುತ್ತಿದ್ದಳು. ಈ ವೇಳೆ ಆ ಯುವತಿ ಜಿತೇಂದ್ರ ಕುಮಾರ್ ಅನ್ನು ಈಕೆಗೆ ಪರಿಚಯ ಮಾಡಿಕೊಟ್ಟಿದ್ದಾಳೆ. ಆಗ ಜಿತೇಂದ್ರ ಕುಮಾರ್ ಯುವತಿಯನ್ನು ಪರಿಚಯ ಮಾಡಿಕೊಂಡು ನಂಬರ್ ಪಡೆದು ಮಾತನಾಡಿದ್ದಾನೆ. ಆದರೆ ಜಿತೇಂದ್ರನ ನಡುವಳಿಕೆ ಸರಿಯಿಲ್ಲದ ಕಾರಣ ಆಕೆ ಸ್ವಲ್ಪ ದಿನದ ನಂತರ ಮಾತನಾಡುವುದನ್ನು ಯುವತಿ ಬಿಟ್ಟಿದ್ದಾಳೆ.

    ಇದಾದ ಸ್ವಲ್ಪ ದಿನಕ್ಕೆ ಯುವಕ ಆಕೆಯ ಮೊಬೈಲ್ ನಂಬರ್ ಬಳಸಿ ಯುವತಿಯ ಫೇಸ್‍ಬುಕ್ ಐಡಿ ಮತ್ತು ಮೇಲ್ ಹ್ಯಾಕ್ ಮಾಡಿ ಪಾಸ್‍ವಾರ್ಡ್ ಚೇಂಜ್ ಮಾಡಿದ್ದಾನೆ. ಒಂದು ದಿನ ಯುವತಿ ಫೇಸ್‍ಬುಕ್ ಮತ್ತು ಮೇಲ್ ಖಾತೆಗೆ ಲಾಗಿನ್ ಆದಾಗ ಈ ವಿಚಾರ ತಿಳಿದೆ. ಆಗ ಯುವತಿ ಅವನ ಸಹೋದರನ ಜೊತೆ ಚರ್ಚಿಸಿ ಜಿತೇಂದ್ರ ಕುಮಾರ್ ಬಳಿ ಮಾತನಾಡಲು ಹೋಗಿದ್ದಾಳೆ. ಈ ವೇಳೆ ಆತ 50 ಸಾವಿರ ಹಣ ನೀಡಿದರೆ ನಿನಗೆ ಪಾಸ್‍ವಾರ್ಡ್ ವಾಪಸ್ ನೀಡುತ್ತೇನೆ ಎಂದು ಬೇಡಿಕೆ ಇಟ್ಟಿದ್ದಾನೆ.

    ಇದಕ್ಕೆ ಒಪ್ಪದ ಯುವತಿ ವಾಪಸ್ ಬಂದಿದ್ದಾಳೆ. ಆದರೆ ಒಂದು ದಿನ ಕರೆ ಮಾಡಿದ ಜಿತೇಂದ್ರ ಕುಮಾರ್ ನಿನಗೆ ದುಡ್ಡು ಕೊಡಲು ಆಗಲಿಲ್ಲ ಎಂದರೆ ಒಂದು ಬಾರಿ ನಗ್ನ ವಿಡಿಯೋ ಕಾಲ್ ಮಾಡು ಎಂದು ಹೇಳಿದ್ದಾನೆ. ಇದರಿಂದ ಬೇಸತ್ತ ಯುವತಿ ಗಟ್ಟಿ ಮನಸ್ಸು ಮಾಡಿ ಯುವಕನ ಮೇಲೆ ಪೊಲೀಸ್ ಕಂಪ್ಲೇಟ್ ಕೊಟ್ಟಿದ್ದಾಳೆ. ಈ ಸಂಬಂಧ ಸೋಲಾ ಪೊಲೀಸರು ಈಗ ಜಿತೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಪೇಜಾವರ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ

    ಪೇಜಾವರ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ

    ಉಡುಪಿ: ಮಹಾಮಾರಿ ಕೊರೊನಾ ಎಫೆಕ್ಟ್ ನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇನ್ನೂ ದಿನಾಂಕವೇ ಫಿಕ್ಸ್ ಮಾಡೋದಕ್ಕೆ ಆಗುತ್ತಿಲ್ಲ. ಪಿಯುಸಿ ವಿದ್ಯಾರ್ಥಿಗಳ ಒಂದು ಪರೀಕ್ಷೆ ಬಾಕಿಯಾಗಿದೆ. ಆದ್ರೆ ಪೇಜಾವರ ಶ್ರೀಗಳು ಲಾಕ್‍ಡೌನ್ ನಡುವೆಯೇ ಪರೀಕ್ಷೆ ನಡೆಸುತ್ತಿದ್ದಾರೆ.

    ಸ್ಥಗಿತವಾದ ಪರೀಕ್ಷೆಗಳ ಬಗ್ಗೆ ಸಚಿವರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ಈ ನಡುವೆ ಪೇಜಾವರ ಮಠ ನಿರಾತಂಕವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖುದ್ದಾಗಿ ವಾಟ್ಸಪ್‍ನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಸ್ವಾಮೀಜಿ ಮತ್ತು ಪ್ರಾಚಾರ್ಯರು 400 ವಿದ್ಯಾರ್ಥಿಗಳಿಗೆ ಓರಲ್ ಎಕ್ಸಾಂ ಮಾಡುತ್ತಿದ್ದಾರೆ.

    ವಾಟ್ಸಪ್ ವಿಡಿಯೋ ಕಾಲ್ ಮೂಲಕ ಪೇಜಾವರ ಸ್ವಾಮೀಜಿ ಪ್ರಶ್ನೆ ಕೇಳ್ತಾರೆ. ವಿದ್ಯಾರ್ಥಿಗಳು ಅದಕ್ಕೆ ಉತ್ತರ ಕೊಡುತ್ತಾರೆ. ಕಾವ್ಯ-ವ್ಯಾಕರಣ, ವೇದಾಂತ, ನ್ಯಾಯ ಶಾಸ್ತ್ರ, ಮೀಮಾಂಸದ ಪ್ರಶ್ನೆಗಳನ್ನು ಶ್ರೀಗಳು ಮಧ್ಯ ಮಧ್ಯ ಕೇಳುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪರೀಕ್ಷೆ ಮಾಡಲು ಕನಿಷ್ಟ 2 ಗಂಟೆ ಬೇಕಾಗುತ್ತದೆ. ಬೆಳಗ್ಗೆ 3:30ಕ್ಕೆ ಎದ್ದು, ನಿತ್ಯಕರ್ಮ ಮುಗಿಸುವ ಶ್ರೀಗಳು ಬೆಳಗ್ಗೆ 5ರಿಂದ ಪರೀಕ್ಷೆ ಆರಂಭಿಸುತ್ತಾರೆ. 9 ಗಂಟೆಗೆ ಪೂಜೆ ನೆರವೇರಿಸುತ್ತಾರೆ. ಮಧ್ಯಾಹ್ನ ಮತ್ತೆ ಪರೀಕ್ಷೆ ಆರಂಭಿಸುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.

    ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯುತ್ತದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳು, ದೆಹಲಿ, ಚೆನ್ನೈ, ಹೈದರಾಬಾದ್‍ನಲ್ಲಿರುವ ವಿದ್ಯಾರ್ಥಿಗಳು ಆನ್‍ಲೈನ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ವಿಡಿಯೋ ಕಾಲ್‍ನಲ್ಲಿ ಪರೀಕ್ಷೆ ನಡೆಸುವುದು ಸವಾಲು ಎಂದಿದ್ದಾರೆ.