Tag: ವಿಠಲ ಗೌಡ

  • ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು

    ಸೌಜನ್ಯ ಮಾವ ವಿಠಲ ಗೌಡ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರಿಂದ ಎಸ್‌ಐಟಿಗೆ ದೂರು

    ಮಂಗಳೂರು: ಸೌಜನ್ಯ ಮಾವ ವಿಠಲ ಗೌಡ (Vittal Gowda) ವಿರುದ್ಧ ಧರ್ಮಸ್ಥಳ ಗ್ರಾಮಸ್ಥರು ಎಸ್‌ಐಟಿಗೆ ದೂರು ನೀಡಿದ್ದಾರೆ.

    ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಧರ್ಮಸ್ಥಳ ಗ್ರಾಮಸ್ಥ ಸಂದೀಪ್ ರೈ ದೂರು ಕೊಟ್ಟಿದ್ದಾರೆ. ತನಿಖಾ ಹಂತದಲ್ಲಿ ವಿಠಲ ಗೌಡನಿಂದ ಎಸ್ಐಟಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲಿರುವ ಎಸ್‍ಐಟಿ

    ವಿಚಾರಣೆ ಮುಗಿಸಿ ಹೊರಬಂದು ವಿಡಿಯೋ ಹರಿಬಿಟ್ಟಿದ್ದಾರೆ. ಎಸ್ಐಟಿ ಯಾವುದೇ ಮಾಹಿತಿ ನೀಡದೇ ಇದ್ದರೂ ವಿಡಿಯೋ ಹರಿಬಿಟ್ಟು ತನಿಖೆ ಹಾದಿ ತಪ್ಪಿಸುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

    ವಿಠಲ ಗೌಡನ ಹಿಂದೆ ಕೆಲ ವ್ಯಕ್ತಿಗಳು ಸೇರಿಕೊಂಡು ಷಡ್ಯಂತ್ರ ನಡೆಸುತ್ತಿದ್ದಾರೆ. ವಿಚಾರಣೆ ಮುಗಿಸಿ ಹೊರಗೆ ಬಂದ ಬಳಿಕ ಯೂಟ್ಯೂಬ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಮೂಲಕ ತನಿಖೆಯ ಹಾದಿ ತಪ್ಪಿಸಲು ವಿಠಲ ಗೌಡ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮತ್ತೆ ಅಸ್ಥಿಪಂಜರ ಸದ್ದು – ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 113 ಮೂಳೆಗಳು ಪತ್ತೆ

    ಸಾಕ್ಷ್ಯ ನಾಶ ಮಾಡಲು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಬಗ್ಗೆಯೂ ದೂರು ನೀಡಲಾಗಿದೆ. ವಿಠಲ ಗೌಡ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ಸ್ವೀಕರಿಸಿರುವ ಎಸ್‌ಐಟಿ ಅಧಿಕಾರಿಗಳು ಸ್ವೀಕೃತಿ ನೀಡಿದ್ದಾರೆ.

  • ಬಿಜೆಪಿಯವ್ರ ಧರ್ಮರಕ್ಷಣೆಯ ನಾಟಕ 4 ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತ: ಪ್ರಿಯಾಂಕ್ ಖರ್ಗೆ

    ಬಿಜೆಪಿಯವ್ರ ಧರ್ಮರಕ್ಷಣೆಯ ನಾಟಕ 4 ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತ: ಪ್ರಿಯಾಂಕ್ ಖರ್ಗೆ

    – ಧರ್ಮಸ್ಥಳವನ್ನು ಮರೆತು ಮದ್ದೂರು ಚಲೋ ಮಾಡ್ತಿದ್ದಾರೆ
    – ವಿಠಲ ಗೌಡರ ಹೇಳಿಕೆಯ ಬಗ್ಗೆ ಬಿಜೆಪಿಯವರ ಮೌನವೇಕೆ?

    ಬೆಂಗಳೂರು: ಬಿಜೆಪಿಯವರ ಧರ್ಮರಕ್ಷಣೆಯ ನಾಟಕವು 4 ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವ್ಯಂಗ್ಯವಾಡಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಧರ್ಮಸ್ಥಳ ಚಲೋ (Dharmasthala Chalo) ಮಾಡಿದ್ದ ಬಿಜೆಪಿಯವರು (BJP) ಧರ್ಮಸ್ಥಳವನ್ನು ಮರೆತು ಮದ್ದೂರು ಚಲೋ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಧರ್ಮಸ್ಥಳ ಪ್ರಕರಣದಲ್ಲಿ ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Hassan Tragedy | ಮೃತರೆಲ್ಲ ಹಳ್ಳಿಯವ್ರು, 10 ಲಕ್ಷ ಪರಿಹಾರ ಕೊಟ್ರೆ ಒಳ್ಳೆಯದು – ಸರ್ಕಾರಕ್ಕೆ ಆರ್.ಅಶೋಕ್ ಮನವಿ

    ಬಿಜೆಪಿಯವರ ಧರ್ಮರಕ್ಷಣೆಯ ನಾಟಕವು ನಾಲ್ಕು ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತವೇ? ಸೌಜನ್ಯ ಸಂಬಂಧಿ ವಿಠಲ ಗೌಡರವರು (Vittal Gowda) ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ ಎಂಬ ಅಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಆ ಸ್ಥಳವು ಅಕ್ಷರಶಃ ಯುದ್ಧಕಣದಂತೆ ಭಾಸವಾಗುತ್ತದೆ ಎಂದು ವರದಿಗಳು ಹೇಳುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಮೈಸೂರು | ಕೋರ್ಟ್ ಆವರಣದಿಂದ ಧರ್ಮಸ್ಥಳ ಯಾತ್ರೆ ಹೊರಟ ವಕೀಲರು

    ಸೌಜನ್ಯಳ ಮನೆಗೆ ಭೇಟಿ ನೀಡಿದ್ದ ಬಿಜೆಪಿಯವರು ಆ ಕುಟುಂಬದವರ ಹೇಳಿಕೆಯ ಬಗ್ಗೆ ಏನು ಹೇಳುತ್ತಾರೆ? ವಿಠಲ ಗೌಡರ ಹೇಳಿಕೆಯ ಬಗ್ಗೆ ಬಿಜೆಪಿಯವರ ಮೌನವೇಕೆ? ಬಿಜೆಪಿ ನಾಯಕರು ತಾವು ಸೌಜನ್ಯ ಕುಟುಂಬದವರ ಪರವೋ ಅಥವಾ ಅವರು ಆರೋಪಿಸುತ್ತಿರುವವರ ಪರವೋ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

  • ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಹೆಣಗಳ ರಾಶಿಯೇ ಸಿಕ್ಕಿದೆ: ವಿಠಲ ಗೌಡ ಸ್ಫೋಟಕ ಹೇಳಿಕೆ

    ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಹೆಣಗಳ ರಾಶಿಯೇ ಸಿಕ್ಕಿದೆ: ವಿಠಲ ಗೌಡ ಸ್ಫೋಟಕ ಹೇಳಿಕೆ

    ಧರ್ಮಸ್ಥಳ: ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಧರ್ಮಸ್ಥಳದಲ್ಲಿ (Dharmasthala) ಹೆಣಗಳ ರಾಶಿಯೇ ಸಿಕ್ಕಿದೆ ಎಂದು ಸೌಜನ್ಯ ಮಾವ ವಿಠಲ ಗೌಡ (Vital Gowda) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅವರು, ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಮೂರು ಮನುಷ್ಯರ ಕಳೆಬರಹಗಳು ಸಿಕ್ಕಿವೆ. ಹತ್ತಿರ ಹತ್ತಿರ ಹತ್ತು ಫೀಟ್‍ಗಳಲ್ಲಿ ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು, ಸಣ್ಣ ಮಗುವಿನ ಎಲುಬು ಇದೆ ಎಂದು ಗೋಚರ ಆಗುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಮಾವ ವಿಠಲ ಗೌಡ: ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ

    ವಾಮಾಚಾರಕ್ಕೆ ಬಳಸುವ ವಸ್ತುಗಳು ಕೂಡಾ ಸಿಕ್ಕಿವೆ. ಹೂತಿಟ್ಟ ಶವಗಳನ್ನು ಕಾಣದ ಹಾಗೇ ಮಾಡಲು ಮಣ್ಣು ತೆಗೆದು ಹಾಕಿದ ಹಾಗೇ ಕಾಣುತ್ತಿತ್ತು. ಐದಾರು ಫೀಟ್‍ನಲ್ಲಿ ಬುರುಡೆ ರಾಶಿ ಇದೆ, ಎಲುಬು ಅಲ್ಲಲ್ಲಿ ಹರಡಿಕೊಂಡಿವೆ. ಬುರುಡೆಗಳು ಮಣ್ಣಲ್ಲಿ ಎದ್ದು ಕಾಣುತ್ತಿದ್ದವು. ನೋಡಿದ ಬುರುಡೆಗಳು ಹಾಗೆ ಇದೆ ಅದನ್ನು ಮುಟ್ಟಿಲ್ಲ ಎಂದಿದ್ದಾರೆ.

    ತನಿಖೆಗೆ ಯಾವಾಗ ಕರೆದರೂ ಬರ್ತೇನೆ ಅಂತ ಹೇಳಿದ್ದೇನೆ. ಚಿನ್ನಯ್ಯ, ತಾನಾಸಿ, ರಂಗ, ಸುಬ್ರಹ್ಮಣ್ಯ ಎಲ್ಲ ಹೇಳಿದ್ದಾರೆ. ಅವರ ಮಾಹಿತಿ ಪ್ರಕಾರ ಜಾಗ ತೋರಿಸಲು ತಯಾರಾಗಿದ್ದೇನೆ. ಅದೇ ಊರಲ್ಲಿ ಇದ್ದು ಒಂದೇ ಕಡೆ ರಾಶಿ ಹಾಕಿದ್ದು ನೋಡಿ ಅಚ್ಚರಿ ಆಗಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಂಗ್ಲೆಗುಡ್ಡಕ್ಕೆ ಸೌಜನ್ಯ ಮಾವ ವಿಠಲಗೌಡನ ಕರೆದೊಯ್ದ SIT