Tag: ವಿಟಮಿನ್

  • ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಮಾವು ಎಂದರೆ ಭಾರತೀಯರಿಗಂತೂ ಇಷ್ಟವಾದ ಹಣ್ಣು. ಇದು ಹಣ್ಣುಗಳ ರಾಜ ಎಂದೇ ಪ್ರಸಿದ್ಧಿ ಪಡೆದಿದೆ. ತಿನ್ನಲು ರುಚಿಕರವಷ್ಟೇ ಅಲ್ಲದೇ ಸುಗಂಧವನ್ನು ಹೊಂದಿದೆ. ಬೇಸಿಗೆ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳದ್ದೇ ಕಮಾಲು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮಾವಿನ ಹಣ್ಣು ಎಂದರೆ ತುಂಬಾ ಇಷ್ಟ. ಈ ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ಅನೇಕ ಲಾಭಗಳಿವೆ.

    ಜೀರ್ಣಕ್ರಿಯೆಗೆ ಸಹಕಾರಿ: ಮಾವಿನ ಹಣ್ಣು ಹಲವಾರು ಗುಣಗಳನ್ನು ಹೊಂದಿದ್ದು, ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದರಲ್ಲಿ ಅಮೈಲೇಸ್ ಜೀರ್ಣಕಾರಿ ಕಿಣ್ವಗಳಿರುತ್ತವೆ. ಇದರ ಜೊತೆಗೆ ಮಾವಿನಲ್ಲಿ ನೀರು ಮತ್ತು ಆಹಾರದ ನಾರಿನಾಂಶ ಜಾಸ್ತಿಯಾಗಿರುವುದರಿಂದ ಮಲಬದ್ಧತೆ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ರೋಗ ನಿರೋಧಕ ಶಕ್ತಿ ಹೆಚ್ಚಳ: ಇದರಲ್ಲಿ ವಿಟಮಿನ್ ಪೋಷಕಾಂಶವು ಹೇರಳವಾಗಿರುತ್ತದೆ. ವಿಟಮಿನ್ ಎ, ಬಿ, ಸಿ ಮತ್ತು ಇ ಖನಿಜಗಳು ಹೇರಳವಾಗಿದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

    ಚರ್ಮದ ಕಾಂತಿ: ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಎ ಹೇರಳವಾಗಿದ್ದು, ಇದು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ. ಮಾವಿನ ಹಣ್ಣುಗಳನ್ನು ಮಿತವಾಗಿ ಸೇವಿಸಿದಾಗ ತ್ವಚೆಯ ಕಾಂತಿ ಹೆಚ್ಚುತ್ತದೆ. ಜೊತೆಗೆ ಇದು ಚರ್ಮದಲ್ಲಿ ಎಣ್ಣೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಚರ್ಮ ಸುಕ್ಕುಗಟ್ಟದಂತೆ ಕಾಪಾಡುತ್ತದೆ.

    ಹೃದಯದ ಆರೋಗ್ಯ: ಹೃದಯದ ಆರೋಗ್ಯವನ್ನು ವೃದ್ಧಿಸುವ ಪೋಷಕಾಂಶಗಳು ಮಾವಿನ ಹಣ್ಣಿನಲ್ಲಿ ಅಧಿಕವಾಗಿವೆ. ಮಾವಿನ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್‍ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    ತೂಕ ಕಡಿಮೆ: ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ತೂಕ ಕಡಿಮೆ ಮಾಡಬಹುದು. ಮಾವಿನಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಫೈಟೊಕೆಮಿಕಲ್‍ಗಳಿರುತ್ತವೆ. ಇದರ ಜೊತೆಗೆ ನಾರುಗಳು ಹೇರಳವಾಗಿವೆ. ನೀವು ನಾರಿನ ಹಣ್ಣು ಮತ್ತು ತರಕಾರಿಯನ್ನು ಸೇವಿಸಿದಾಗ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಆಗುತ್ತಿದೆ. ಇದರಿಂದ ತೂಕವು ಕಡಿಮೆ ಆಗುತ್ತದೆ. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

  • ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಳಿಗಾಲದಲ್ಲಿ ಸೇವಿಸಬೇಕಾದ ಆಹಾರಕ್ಕೆ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ವೈಜ್ಞಾನಿಕ ಕಾರಣಗಳನ್ನು ಅರಿತರೆ ಮಾತ್ರವೇ ಅವುಗಳ ಹಿಂದಿರುವ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

    * ಟೊಮೆಟೋ: ಹಲವಾರು ಪೋಷಕಾಂಶ ಗಳಿಂದ ಕೂಡಿದ್ದು, ಇದರಲ್ಲಿ ಶೇ.90ರಷ್ಟು ನೀರಿನಾಂಶವಿದೆ. ಇದು ದೇಹಕ್ಕೆ ಪೋಷಣೆ ನೀಡಲು ತುಂಬಾ ಸಹಕಾರಿ ಮತ್ತು ತೂಕ ಇಳಿಸಲು ಸಹಕಾರಿ ಆಗುತ್ತದೆ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    * ಹೂಕೋಸು : ಇದರಲ್ಲಿ ಸಕ್ಕರೆಯಂಶ ಇರುವುದಿಲ್ಲ. ಹೀಗಾಗಿ, ಮಧುಮೇಹಿಗಳಿಗೆ ಉತ್ತಮವಾಗಿದೆ. ವಿಟಮನ್‌ ಸಿ, ನಾರಿನಂಶ, ಪೊಟ್ಯಾಶಿಯಂ  ಅಂಶವೂ ಚೆನ್ನಾಗಿರುತ್ತದೆ.

    * ಪಾಲಕ್ ಸೊಪ್ಪು: ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕರ್ಬೋಹೈಡ್ರೇಟ್ ಹೊಂದಿದ್ದರು ಇದರಲ್ಲಿ ಇರುವ ನಾರಿನಂಶವು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ , ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನಿಸಿಯಮ್ ಅಂತಹ ಜೀವಸತ್ವಗಳು ಮತ್ತು ಖನಿಜಗಳು ಅಧಿಕವಾಗಿರುತ್ತವೆ.  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ.  ಇದನ್ನೂ ಓದಿ: ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    * ಎಲೆ ಕೋಸು: ಮಧುಮೇಹಕ್ಕೆ ಇದು ಒಳ್ಳೆಯ ಮದ್ದೂ ಹೌದು. ಎಲೆಕೋಸು ಅಮೂಲ್ಯವಾದ ಖನಿಜಗಳನ್ನು ಹೊಂದಿರುತ್ತದೆ ಮತ್ತು ಚರ್ಮಕ್ಕೆ ತುಂಬಾ ಪೋಷಣೆಯನ್ನು ನೀಡುತ್ತದೆ.  ಇದು ವಿಟಮಿನ್ ಹೊಂದಿದೆ ಹೀಗಾಗಿ  ಚರ್ಮಕ್ಕೆ ಒಳ್ಳೆಯದು.

    * ಕ್ಯಾರೆಟ್: ಹಸಿ ಕ್ಯಾರೆಟ್ ಸೇವನೆ ಒಳ್ಳೆಯದು. ದೇಹಕ್ಕೆ ಹಲವು ವಿಟಾಮಿನ್‍ಗಳು ಸಿಕ್ಕಂತಾಗುತ್ತದೆ. ವಿಟಾಮಿನ್ ಎ ಇದರಲ್ಲಿ ಹೇರಳವಾಗಿರುವುದಲ್ಲದೆ, ಕ್ಯಾಲ್ಷಿಯಂ ಸಹ ಇದರಲ್ಲಿ ಹೇರಳವಾಗಿರುತ್ತವೆ.  ಕೊಬ್ಬಿನಂಶವನ್ನು ಕಡಿಮೆಗೊಳಿಸುವಲ್ಲಿ  ಕ್ಯಾರೆಟ್‍ ಸಹಾಯಕಾರಿಯಾಗುತ್ತದೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

  • ಕಣ್ಣುಗಳ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಗೊತ್ತಾ?

    ಕಣ್ಣುಗಳ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಗೊತ್ತಾ?

    ನುಷ್ಯನ ದೇಹದಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಮನುಷ್ಯನ ಆರೋಗ್ಯ, ಸುಖ-ಸಂತೋಷ, ನೋವು-ದುಃಖ ಎಲ್ಲವೂ ಕೂಡ ಕಣ್ಣಿನಲ್ಲಿಯೇ ವ್ಯಕ್ತವಾಗುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮವಾಗಿರುತ್ತದೆ. ನಾವು ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮೊದಲು ನಮ್ಮ ಕಣ್ಣುಗಳಿಗೆ ಅಗತ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ನಮ್ಮ ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳನ್ನು ಸೇವಿಸಿದರೆ ಮಾತ್ರ ಸಾಧ್ಯ.

    * ಕ್ಯಾರೆಟ್ ಮತ್ತು ಇತರ ಹಣ್ಣು-ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಉತ್ತಮ. ವಿಟಮಿನ್ ಎ ಇರುವ ಆಹಾರ ಪದಾರ್ಥಗಳು ರೆಟಿನಾ ಮತ್ತು ಕಣ್ಣಿನ ಇತರ ಭಾಗಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

    * ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂಡ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

     

    * ಮೊಟ್ಟೆಯನ್ನು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಬಹುದು. ನಿಮ್ಮ ಉಪಹಾರಕ್ಕೆ ಒಂದು ಮೊಟ್ಟೆಯನ್ನು ಸೇರಿಸಿದರೆ ನಿಮ್ಮ ದಿನಪೂರ್ತಿ ಅಗತ್ಯವಿರುವ ವಿಟಮಿನ್‍ಗಳ ಮತ್ತು ಜೀವಸತ್ವಗಳ ಪೂರೈಕೆಯಾಗುತ್ತದೆ.

     

    * ಬೀಟ್‍ರೂಟ್ ವಿಟಮಿನ್ ಎ ಸಮೃದ್ಧವಾಗಿ ಇರುವ ಬೇರಿನ ಜಾತಿಯ ಆಹಾರ. ನಿಮ್ಮ ಕಣ್ಣುಗಳು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರಬೇಕಾದಲ್ಲಿ ಈ ಬೀಟ್‍ರೂಟ್ ತರಕಾರಿಯನ್ನು ಸಾಕಷ್ಟು ಸೇವಿಸಬೇಕು.

    * ಕ್ಯಾರೆಟ್ ಜ್ಯೂಸ್ ಕಣ್ಣಿನ ದೃಷ್ಟಿಗೆ ವಿಟಮಿನ್ ಎ ಬಹಳ ಮುಖ್ಯ. ಕ್ಯಾರೆಟ್‍ನಲ್ಲಿ ವಿಟಮಿನ್ ಎ ಅಧಿಕವಾಗಿದ್ದು,ಕಣ್ಣುಗಳ ರೆಟಿನಾದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    *   ಪಾಲಕ್, ಮೆಂತ್ಯೆ, ಹರಿವೆ ಮುಂತಾದ ಸೋಪ್ಪುಗಳಲ್ಲಿ ವಿಟಮಿನ್ ಸಿ ಇರುತ್ತದೆ.

    * ಮೂಸಂಬಿ, ಕಿತ್ತಳೆ, ನಿಂಬೆ, ದಾಳಿಂಬೆ ಮುಂತಾದ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಈ ವಿಟಮಿನ್ ಕಣ್ಣಿನ ನರಗಳು ಆರೋಗ್ಯವನ್ನು ಕಾಪಾಡುತ್ತದೆ.