Tag: ವಿಜ್ಞಾನಿಗಳು

  • ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ಬೆಂಗಳೂರು: ಸೆಪ್ಟೆಂಬರ್ 7ರಂದು ಸಂಪೂರ್ಣ ರಕ್ತಚಂದ್ರಗ್ರಹಣ (Blood Moon Eclipse 2025) ಸಂಭವಿಸಲಿದೆ. ನಭೋಮಂಡಲದ ಈ ವಿಸ್ಮಯದ ಬಗ್ಗೆ ವಿಜ್ಞಾನಿಗಳು (Scientists) ಕಾತುರದಿಂದ ನೋಡುತ್ತಿದ್ದಾರೆ. ಈ ಬಗ್ಗೆ ವಿಜ್ಞಾನಿಗಳು ಮಾತನಾಡಿದ್ದಾರೆ.

    ಏನಿದು ಚಂದ್ರಗ್ರಹಣ?
    ಚಂದ್ರಗ್ರಹಣ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಸಂಭವಿಸುತ್ತದೆ. ಭೂಮಿಯ ನೆರಳು ಕೆಲ ಕಾಲ ಚಂದಿರನ ಮೇಲೆ ಬೀಳುವುದರಿಂದ ಅದು ಮರೆಯಾಗುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗ ಇದೆ. ಒಂದು ಗಾಢ ಕತ್ತಲೆಯ ಭಾಗ, ಇದನ್ನು ಅಂಬ್ರಾ ಎನ್ನಲಾಗುತ್ತದೆ. ಹೊರಗಿನ ಮಬ್ಬಾದ ಭಾಗವನ್ನು ಪೆನಾಂಬ್ರಾ ಎನ್ನಲಾಗುತ್ತದೆ. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಸಂಪೂರ್ಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ. ಇದನ್ನೂ ಓದಿ: ಸೆ.7 ರಕ್ತಚಂದ್ರಗ್ರಹಣ – ಗರ್ಭಿಣಿಯರು ಏನು ಮಾಡಬೇಕು? ತಜ್ಞ ವೈದ್ಯರ ಸಲಹೆಗಳೇನು?

    ಈ ಪ್ರಕ್ರಿಯೆ ಯಾವಾಗ ಆರಂಭ?
    ಸೆಪ್ಟೆಂಬರ್ 7ರಂದು ರಾತ್ರಿ 9:57ಕ್ಕೆ ಚಂದ್ರ ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತಾನೆ. ನಂತರ ಚಂದ್ರ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಅವರಿಸಲ್ಪಡಿಸುತ್ತಾ 11:01ಕ್ಕೆ ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣ 82 ನಿಮಿಷದವರೆಗೆ ಅಂದರೆ 12:23ರವರೆಗೆ ಮುಂದುವರೆಯಲಿದೆ. ಪಾರ್ಶ್ವ ಹಂತವು 1:26ರವರೆಗೆ ಮುಂದುವರೆಯಲಿದೆ. ಪಾರ್ಶ್ವಛಾಯ ಹಂತ ರಾತ್ರಿ 8:58ಕ್ಕೆ ಆರಂಭವಾಗಿ ಬೆಳಗಿನ ಜಾವ 2:25ಕ್ಕೆ ಅಂತ್ಯಗೊಳ್ಳುತ್ತದೆ.

    ವೀಕ್ಷಣೆ ಹೇಗೆ?
    ಚಂದ್ರಗ್ರಹಣ ವೀಕ್ಷಣೆಗೆ ಯಾವ ಸಾಧನ ಬೇಕಾಗಿಲ್ಲ, ಬರಿಗಣ್ಣಿನಲ್ಲಿ ನೋಡಬಹುದು. ಆದರೆ ದೂರದರ್ಶಕ, ದುರ್ಬಿನು ಬಳಸಿದರೆ ಇನ್ನಷ್ಟು ವೀಕ್ಷಣೆಯ ಅನುಭವ ಸುಂದರವಾಗುತ್ತದೆ.

    ವೀಕ್ಷಣೆಗೆ ಸ್ಥಳದ ಆಯ್ಕೆ ಹೇಗಿರಬೇಕು?
    ಗ್ರಹಣದ ಸಮಯ ತಡರಾತ್ರಿಯಾಗಿರೋದ್ರಿಂದ ತಮ್ಮ ಮನೆಗಳ ಹೊರಾಂಗಣ ಅಥವಾ ತಾರಸಿಗಳಲ್ಲಿ ವೀಕ್ಷಣೆ ಮಾಡಬಹುದು. ಮೋಡವಿದ್ದರೂ ಕೆಲಕಾಲ ಸ್ಪಷ್ಟವಾಗಿ ಕಾಣಿಸುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಅನೇಕ ಸಂಸ್ಥೆಗಳಿಂದ ಗ್ರಹಣ ವೀಕ್ಷಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

  • ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಕಾರಿಕೊ, ವೈಸ್‌ಮನ್‌ಗೆ ನೋಬೆಲ್ ಪುರಸ್ಕಾರ

    ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿದ ಕಾರಿಕೊ, ವೈಸ್‌ಮನ್‌ಗೆ ನೋಬೆಲ್ ಪುರಸ್ಕಾರ

    ಸ್ಟಾಕ್‌ಹೋಮ್: ಕೋವಿಡ್-19 ಲಸಿಕೆಗಳನ್ನು (Covid-19 Vaccine) ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ಹಂಗೇರಿ ಹಾಗೂ ಅಮೆರಿಕದ ವಿಜ್ಞಾನಿಗಳಾದ ಕ್ಯಾಲಿಟನ್ ಕಾರಿಕೊ (Katalin Kariko) ಹಾಗೂ ಡ್ರೂ ವೈಸ್‌ಮನ್ (Drew Weissman) ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪುರಸ್ಕಾರ (Nobel Prize) ದೊರೆತಿದೆ.

    ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್ ವೈದ್ಯಕೀಯ ವಿಶ್ವವಿದ್ಯಾಲಯದ ನೊಬೆಲ್ ಅಸೆಂಬ್ಲಿ ಆಯ್ಕೆ ಮಾಡಿದೆ. ಪ್ರಶಸ್ತಿ ವಿಜೇತರಿಗೆ 8.31 ಕೋಟಿ ರೂ. ನಗದು ಬಹುಮಾನ ರೂಪದಲ್ಲಿ ಸಿಗಲಿದೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ಕೋವಿಡ್-19 ವಿರುದ್ಧ ಪರಿಣಾಮಕಾರಿಯಾದ ಎಮ್‌ಆರ್‌ಎನ್‌ಎ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕಾರಿಕೊ ಹಾಗೂ ವೈಸ್‌ಮನ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ 2023ರ ನೋಬೆಲ್ ಪುರಸ್ಕಾರವನ್ನು ಅವರಿಗೆ ನೀಡಲು ನಿರ್ಧರಿಸಿದ್ದಾಗಿ ಆಯ್ಕೆಯ ಸಮಿತಿ ತಿಳಿಸಿದೆ. ಇದನ್ನೂ ಓದಿ: ಭಾರತದ 74 ಲಕ್ಷ ವಾಟ್ಸಪ್ ಖಾತೆಗಳು ನಿಷೇಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಯಾನ-3 ಯಶಸ್ಸಿಗೆ ತಿರುಪತಿ ದೇವರಲ್ಲಿ ಪ್ರಾರ್ಥನೆ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರ ಖಂಡನೆ

    ಚಂದ್ರಯಾನ-3 ಯಶಸ್ಸಿಗೆ ತಿರುಪತಿ ದೇವರಲ್ಲಿ ಪ್ರಾರ್ಥನೆ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರ ಖಂಡನೆ

    – ವಿಜ್ಞಾನಿಗಳ ಟೀಕಿಸೋ ಭರದಲ್ಲಿ ಮಂಗಳಯಾನ-3 ಅಂತ ಉಲ್ಲೇಖಿಸಿ ಪೇಚಿಗೆ ಸಿಲುಕಿದ ಪ್ರಗತಿಪರರು

    ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ಸಿಗಾಗಿ ತಿರುಪತಿಗೆ ತೆರಳಿ ದೇವರಲ್ಲಿ ಪ್ರಾರ್ಥಿಸಿದ ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರು ಖಂಡನೆ ವ್ಯಕ್ತಪಡಿಸಿದ್ದಾರೆ.

    ಚಂದ್ರಯಾನಕ್ಕೂ ಮುನ್ನ ವಿಜ್ಞಾನಿಗಳು ನಿನ್ನೆ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಚಂದ್ರಯಾನ-3 ಯಶಸ್ಸಿಗಾಗಿ ಪ್ರಾರ್ಥಿಸಿದ್ದರು. ಈ ಸುದ್ದಿ ವೈರಲ್‌ ಆಗಿತ್ತು. ವಿಜ್ಞಾನಿಗಳ ನಡೆಗೆ ಪ್ರಗತಿಪರರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

     

     

     

    ಈ ಬಗ್ಗೆ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಪೋಸ್ಟ್ ಹಾಕಿ ಹಿರಿಯ ಸಾಹಿತಿ ಸನತ್ ಕುಮಾರ್ ಬೆಳಗಲಿ ಆಕ್ರೋಶ ಹೊರಹಾಕಿದ್ದಾರೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯ ಸಂಸ್ಥೆ ನಡೆ ಸಾಮಾನ್ಯ ಜನರ ದಿಕ್ಕು ತಪ್ಪಿಸುವಂತಿದೆ ಎಂದು ಟೀಕಿಸಿದ್ದಾರೆ.

    ತಾವೇ ಪರೀಕ್ಷಿಸಿ, ಸಂಶೋಧಿಸಿ ರೂಪಿಸಿರುವ ಯಾನದ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂಬುದನ್ನ ಈ ಮೂಲಕ ಸಾಬೀತುಮಾಡಿದ್ದಾರೆ. ಇದರಿಂದ ಆತ್ಮಸ್ಥೈರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತೆ. ಈ ನಿಟ್ಟಿನಲ್ಲಿ ಈ ಕೃತ್ಯವು ಖಂಡನರ್ಹವಾಗಿದೆ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌

    ಪತ್ರದ ಕೆಳಗೆ ಹಿರಿಯ ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಅಲ್ಲಮಪ್ರಭು ಬೆಟ್ಟದೂರು, ವೆಂಕಟಯ್ಯ ಅಪ್ಪಗೆರೆ, ಸನತ್‌ ಕುಮಾರ್‌ ಬೆಳಗಲಿ, ಎಲ್.ಎನ್.ಮುಕುಂದರಾಜ್‌, ಆರ್‌.ಎನ್.ರಾಜಾನಾಯಕ್‌, ಕೆ.ಬಿ.ಮಹದೇವಪ್ಪ, ನಾಗೇಶ್‌ ಅರಳಕುಪ್ಪೆ, ಹುಲಿಕುಂಟಿಮೂರ್ತಿ, ಹೆಚ್‌.ಕೆ.ವಿವೇಕಾನಂದ, ಹೆಚ್‌.ಕೆ.ಎಸ್‌.ಸ್ವಾಮಿ, ಡಿ.ಎಂ.ಮಂಜುನಾಥಸ್ವಾಮಿ, ಕೆ.ಮಹಂತೇಶ್‌, ಡಾ.ಕೆ.ಎನ್.ನಾಗೇಶ್‌, ಪ್ರಭಾ ಬೆಳವಂಗಲ, ಆಲ್ಬೂರು ಶಿವರಾಜ ಹೆಸರನ್ನು ಉಲ್ಲೇಖಿಸಲಾಗಿದೆ.

    ಮಂಗಳಯಾನ-3 ಅಂತ ತಪ್ಪಾಗಿ ಉಲ್ಲೇಖ
    ಇಸ್ರೋ ಇಂದು ಉಡಾವಣೆ ಮಾಡುತ್ತಿರುವುದು ಚಂದ್ರಯಾನ-3 ಗಗನನೌಕೆ. ಆದರೆ ಇಸ್ರೋ ವಿಜ್ಞಾನಿಗಳನ್ನು ಟೀಕಿಸುವ ಭರದಲ್ಲಿ ಪ್ರಗತಿಪರ ಚಿಂತಕರು ಪೇಚಿಗೆ ಸಿಲುಕಿದ್ದಾರೆ. ಚಂದ್ರಯಾನ-3 ಬದಲಿಗೆ ಮಂಗಳಯಾನ-3 ಎಂದು ತಪ್ಪಾಗಿ ಉಲ್ಲೇಖಿಸಿದ್ದಾರೆ. ಈ ತಪ್ಪಿಗೆ ಪ್ರಗತಿಪರ ಚಿಂತಕರನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 48,500 ವರ್ಷಗಳ ಹಿಂದಿನ ಮಾರಣಾಂತಿಕ ವೈರಸ್‌ಗೆ ಮರುಜನ್ಮ – ವಿಶ್ವಕ್ಕೆ ಕಾದಿದೆಯಾ ಆಪತ್ತು?

    48,500 ವರ್ಷಗಳ ಹಿಂದಿನ ಮಾರಣಾಂತಿಕ ವೈರಸ್‌ಗೆ ಮರುಜನ್ಮ – ವಿಶ್ವಕ್ಕೆ ಕಾದಿದೆಯಾ ಆಪತ್ತು?

    ಮಾಸ್ಕೋ: ಹವಾಮಾನ ವೈಪರಿತ್ಯದಿಂದಾಗಿ ಪ್ರಾಚೀನ ಪರ್ಮಾಫ್ರಾಸ್ಟ್ (Ancient Permafrost) ಕರಗುವಿಕೆಯು ಮಾನವ ಜಗತ್ತಿಗೆ ಮತ್ತೊಂದು ವೈರಸ್ (Virus) ಭೀತಿ ತಂದೊಡ್ಡಿದೆ. ಸಾವಿರಾರು ವರ್ಷಗಳ ಹಿಂದೆ ಹೂತಿದ್ದ ಮಾರಣಾಂತಿಕ ವೈರಸ್‌ಗೆ ಮರುಜನ್ಮ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

    ಹೌದು, ಸುಮಾರು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೂತಿದ್ದ ವೈರಸ್‌ಗಳಿಗೆ ಈಗ ಮರುಜನ್ಮ ನೀಡಲಾಗಿದೆ. ‘ಜೊಂಬಿ ವೈರಸ್’ (Zombie Virus) ಹೆಸರಿನ 13 ಹೊಸ ರೋಗಕಾರಕಗಳನ್ನು ಯುರೋಪಿಯನ್ ಸಂಶೋಧಕರು ರಷ್ಯಾದ (Russia) ಸೈಬೀರಿಯಾ ಪ್ರದೇಶದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಅವು ಹೆಪ್ಪುಗಟ್ಟಿದ ನೆಲದಲ್ಲಿ ಸಹಸ್ರಮಾನಗಳನ್ನು ಕಳೆದರೂ ಅವು ಸಾಂಕ್ರಾಮಿಕವಾಗಿ ಉಳಿದಿವೆ ಎನ್ನಲಾಗಿದೆ.  ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    ವಾತಾವರಣದ ತಾಪಮಾನ ಏರಿಕೆಯಿಂದಾಗಿ ಪರ್ಮಾಫ್ರಾಸ್ಟ್ (ಮಂಜುಗಡ್ಡೆಯ ಮೇಲಿನ ಪದರ) ಕರಗುವಿಕೆಯು ಈ ಹಿಂದೆ ಸಿಕ್ಕಿಬಿದ್ದಿರುವ ಮಿಥೇನ್‌ನಂತಹ ಹಸಿರುಮನೆ ಅನಿಲಗಳನ್ನು ಮುಕ್ತಗೊಳಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಈ ವೈರಸ್ ದೀರ್ಘಕಾಲದ ವರೆಗೆ ಸಾಂಕ್ರಾಮಿಕವಾಗಿ ಉಳಿಯಬಹುದು. ಒಮ್ಮೆ ಇವು ಹೊರಾಂಗಣ ಪರಿಸ್ಥಿತಿಗೆ ಹೊಂದಿಕೊಂಡರೆ ನಂತರದಲ್ಲಿ ಯಾವ ಪ್ರಮಾಣದಲ್ಲಿ ಸೋಂಕು ಹರಡುತ್ತದೆ, ಎಷ್ಟು ಪ್ರಮಾಣದಲ್ಲಿ ಅಪಾಯ ಬೀರುತ್ತದೆ ಅನ್ನೋದನ್ನ ಅಂದಾಜು ಮಾಡಲು ಸಾಧ್ಯವಿಲ್ಲ. ಈ ವೈರಸ್, ಮನುಷ್ಯ ಹಾಗೂ ಪ್ರಾಣಿಗಳಿಗೂ ತಗುಲುವಂತಹದ್ದಾಗಿದ್ದು, ಹೆಚ್ಚು ಸಮಸ್ಯಾತ್ಮಕವಾಗಲಿದೆ ಎಂದು ವಿಜ್ಞಾನಿಗಳು (Scientists) ಎಚ್ಚರಿಸಿದ್ದಾರೆ.

    ಜೊಂಬಿ ವೈರಸ್ ಕುರಿತು ಈಗಾಗಲೇ ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆ ಕಂಡಿವೆ. ಇತ್ತೀಚೆಗೆ ಬಿಡುಗಡೆಯಾದ ತಮಿಳು ನಟ ಜಯಂ ರವಿ ಅಭಿನಯದ `ಮಿರುತನ್’ ಸಿನಿಮಾದಲ್ಲೂ (Cinema) ಜೊಂಬಿ ವೈರಸ್ ಕುರಿತು ಜಾಗೃತಿ ಮೂಡಿಸಲಾಗಿದೆ. ಇದನ್ನೂ ಓದಿ: ಟ್ವಿಟ್ಟರ್‌ ಅಕ್ಷರ ಮಿತಿ 280ರಿಂದ 1,000ಕ್ಕೆ ಏರಿಕೆ – ಸುಳಿವು ನೀಡಿದ ಮಸ್ಕ್‌

    Live Tv
    [brid partner=56869869 player=32851 video=960834 autoplay=true]

  • ಹೊಸ ವೈರಸ್‌ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!

    ಹೊಸ ವೈರಸ್‌ NeoCoV ಬಗ್ಗೆ ಚೀನಾ ಎಚ್ಚರ – ಮೂವರು ಸೋಂಕಿತರಲ್ಲಿ ಒಬ್ಬರು ಸಾವು!

    ಬೀಜಿಂಗ್: ಕೋವಿಡ್‌-19 ರೂಪಾಂತರಿಗಳೊಂದಿಗೆ ಮನುಕುಲವನ್ನು ಕಂಗೆಡಿಸುತ್ತಿರುವ ಸಂದರ್ಭದಲ್ಲೇ ಚೀನಾ ವಿಜ್ಞಾನಿಗಳು ಹೊಸ ಮಾದರಿಯ ಕೊರೊನಾ ವೈರಸ್‌ ʻನಿಯೋಕೋವ್‌ʼ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

    ಏನಿದು ನಿಯೋಕೋವ್?
    ಹೊಸ ಕೊರೊನಾ ವೈರಸ್‌, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿದೆ. ಇದು ಹೆಚ್ಚಿನ ಸಾವು ಮತ್ತು ಸೋಂಕು ಪ್ರಸರಣ ದರವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಈ ಸೋಂಕು ಕಂಡುಬಂದಿದೆ. ಇದನ್ನೂ ಓದಿ: ಮೂಗಿನ ಮೂಲಕ ನೀಡಲಾಗುವ ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಒಪ್ಪಿಗೆ

    CORONA-VIRUS.

    ಪತ್ತೆಯಾಗಿದ್ದೆಲ್ಲಿ?
    ನಿಯೋಕೋವ್‌ ಹೊಸ ವೈರಸ್‌ ಏನೂ ಅಲ್ಲ. ಅದು ಎಂಇಆರ್‌ಎಸ್‌-ಕೋವ್‌ ವೈರಸ್‌ನೊಂದಿಗೆ ಸಂಯೋಗ ಹೊಂದಿದೆ. ಇದು 2012 ಮತ್ತು 2015ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಏಕಾಏಕಿ ಪತ್ತೆಯಾಗಿದೆ. ಇದು ಸಾರ್ಸ್‌-ಕೋವ್‌-2 ಅನ್ನು ಹೋಲುತ್ತದೆ. ಅಲ್ಲದೇ ಇದು ಮಾನವರಲ್ಲಿ ಕೊರೊನಾ ವೈರಸ್‌ನ್ನು ಉಂಟು ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    ವೈರಸ್‌ ಮಾರಣಾಂತಿಕವೇ?
    ವೈರಸ್‌ಗೆ ಮಾನವ ಜೀವಕೋಶಗಳಿಗೆ ನುಸುಳುವ ಒಂದು ರೂಪಾಂತರದ ಅಗತ್ಯವಿದೆ. ಕೊರೊನಾ ವೈರಸ್‌ ರೋಗಕಾರಕಕ್ಕಿಂತ ವಿಭಿನ್ನವಾಗಿ ಎಸಿಇ2 ಗ್ರಾಹಕಕ್ಕೆ ಬಂಧಿಸುವ ಈ ಕೊರೊನಾ ವೈರಸ್‌ ಅಪಾಯವನ್ನುಂಟು ಮಾಡುತ್ತದೆ ಎಂದು ವುಹಾನ್‌ ವಿಶ್ವವಿದ್ಯಾಲಯ ಮತ್ತು ಚೈನೀಸ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಫಿಸಿಕ್ಸ್‌ ಸಂಶೋಧಕರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಎರಡನೇ ಮಂಗನ ಕಾಯಿಲೆ ಪ್ರಕರಣ ಪತ್ತೆ

    ಮೂವರಲ್ಲಿ ಒಬ್ಬರು ಸಾವು
    ನಿಯೋಕೋವ್‌ ಸೋಂಕಿಗೆ ತುತ್ತಾದ ಪ್ರತಿ ಮೂರು ಮಂದಿಯಲ್ಲಿ ಒಬ್ಬರು ಸಾವಿಗೀಡಾಗುತ್ತಾರೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

  • ಮೀನುಗಳಿಂದ ವಾಹನ ಚಾಲನೆ – ವೀಡಿಯೋ ವೈರಲ್

    ಮೀನುಗಳಿಂದ ವಾಹನ ಚಾಲನೆ – ವೀಡಿಯೋ ವೈರಲ್

    ಇಸ್ರೇಲ್: ಗೋಲ್ಡ್ ಫೀಶ್‍ಗಳಿಗೆ ವಿಜ್ಞಾನಿಗಳು ವಾಹನ ಚಾಲನೆ ಮಾಡುವ ತರಬೇತಿಯನ್ನು ಕೊಟ್ಟಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

    6 ಗೋಲ್ಡ್ ಫೀಶ್‍ಗಳಿಗೆ ವಾಹನ ಚಲಾಯಿಸುವ ತರಬೇತಿಯನ್ನು ವಿಜ್ಞಾನಿಗಳು ನೀಡಿದ್ದಾರೆ. ಮೀನುಗಳು ವಾಹನವನ್ನು ಚಲಾಯಿಸುವ ವೀಡಿಯೋವನ್ನು ವಿಜ್ಞಾನಿಗಳ ತಂಡ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳು ಬಿಹೇವಿಯರಲ್ ಬ್ರೈನ್ ರಿಸರ್ಚ್ ಜರ್ನಲ್‍ನಲ್ಲಿ ಮೀನುಗಳು ಕೂಡ ವಾಹನವನ್ನು ನಿಯಂತ್ರಿಸುವುದನ್ನು ಕಲಿಯಬಹುದು ಎನ್ನುವ ಬಗ್ಗೆ ನಡೆಸಿದ ಸಂಶೋಧನೆಯ ವರದಿಯನ್ನು ಪ್ರಕಟಿಸಿದ್ದಾರೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

    ವೀಡಿಯೋದಲ್ಲಿ  ಏನಿದೆ?: ಮೀನು ವಾಹನ ಚಲಾಯಿಸುತ್ತಿರುವ ವೀಡಿಯೋದಲ್ಲಿ ಮೋಟಾರ್ ಅಳವಡಿಸಿದ ನಾಲ್ಕು ಚಕ್ರದ ವಾಹನವನ್ನು ಕಾಣಬಹುದು, ಚಕ್ರದ ಮೇಲೆ ಗ್ಲಾಸ್‍ನ ಟ್ಯಾಂಕನ್ನು ನಿಲ್ಲಿಸಿದ್ದಾರೆ. ಅದರಲ್ಲಿ ನೀರನ್ನು ಹಾಕಲಾಗಿದೆ. ನೀರಿನೊಳಗೆ ಗೋಲ್ಡ್ ಫೀಶ್‍ಗಳನ್ನು ಬಿಡಲಾಗಿದೆ. ಅದರಲ್ಲಿರುವ ಮೀನುಗಳು ತಮ್ಮ ಬಾಯಿಯ ಮೂಲಕ ಗ್ಲಾಸ್ ಟ್ಯಾಂಕ್ ಮುಟ್ಟುತ್ತವೆ. ಆಗ ವಾಹನವು ಚಲಿಸುತ್ತದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಮೀನುಗಳ ಚಲನೆಯನ್ನು ಪತ್ತೆಹಚ್ಚಲು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮೀನುಗಳು ಮೂರರಿಂದ ನಾಲ್ಕು ಮೀಟರ್ ಕೋಣೆಯಲ್ಲಿ ನ್ಯಾವಿಗೇಟ್ ಮಾಡುವುದನ್ನು ಮೊದಲು ಕಲಿತೆವು. ನಂತರ ಕೆಲವು ದಿನಗಳ ತರಬೇತಿಯ ಬಳಿಕ ಮೀನುಗಳು ಯಶಸ್ವಿಯಾಗಿವೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ತೆಂಗಿನಕಾಯಿ ತದ್ರೂಪಿ ಸೃಷ್ಠಿ ಯತ್ನ ಯಶಸ್ವಿ

    ತೆಂಗಿನಕಾಯಿ ತದ್ರೂಪಿ ಸೃಷ್ಠಿ ಯತ್ನ ಯಶಸ್ವಿ

    ತಿರುವನಂತಪುರಂ: ತೆಂಗಿನಕಾಯಿಯನ್ನು ಕಲ್ಪತರು ಎಂದು ಕರೆಯುತ್ತಾರೆ. ಈ ತೆಂಗಿನಕಾಯಿಯ ಮರದಿಂದ ಹಿಡಿದು ತೆಂಗಿನಕಾಯಿಯ ಸಿಪ್ಪೆಯವರೆಗೂ ಮನುಷ್ಯ ತನ್ನ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾನೆ. ಇದರ ಕುರಿತಾಗಿ ವಿಜ್ಞಾನಿಗಳು ಸಂಶೋಧನೆಯೊಂದನ್ನು ಮಾಡಿದ್ದಾರೆ. ಜಗತ್ತಿನಲ್ಲಿ ಮೊದಲ ಬಾರಿಗೆ ತೆಂಗಿನ ಮರದ ತದ್ರೂಪಿ ಸೃಷ್ಠಿಸುವಲ್ಲಿ ಬೆಲ್ಜಿಯಂನ ಜೀವಶಾಸ್ತ್ರ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

    ಬೆಲ್ಜಿಯಂನ ಸಾಧನೆ: ತೆಂಗಿನ ಬೀಜವು ಒಂದೇ ಮೊಳಕೆಯೊಡೆದು ರೆಂಬೆಗಳಿಲ್ಲದೆ ನೇರವಾಗಿ ಬೆಳೆಯುವುದರಿಂದ ತದ್ರೂಪಿ ಸೃಷ್ಠಿ ಸಾಧ್ಯವಾಗಿರಲಿಲ್ಲ. ಹೊಸ ಕಸಿ ವಿಧಾನದ ಮೂಲಕವಾಗಿ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಈ ವಿಧಾನದಿಂದ ಒಂದೇ ಬೀಜದಿಂದ ಹಲವು ತೆಂಗಿನ ಸಸಿಗಳನ್ನು ತಯಾರಿಸ ಬಹುದಾಗಿದೆ. ಇದರಿಂದ ರೈತರಿಗೆ ತೆಂಗಿನ ತೋಟಕ್ಕೆ ಮಾಡುವ ಖರ್ಚು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ:  ವರುಣನ ಆರ್ಭಟಕ್ಕೆ ಬೆಳೆ ಹಾನಿ ಭೀತಿ – ಕೋಲಾರದಲ್ಲಿ ತೋಟದಲ್ಲೇ ಕೊಳೆಯುತ್ತಿವೆ ಟೊಮೆಟೋ

    ಕಸಿ ಮಾಡುವ ಮೂಲಕವಾಗಿ ತೆಂಗಿನ ತದ್ರೂಪಿ ಸೃಷ್ಠಿಸುವುದು ಹಾಗೂ ತೆಂಗಿನ ತಳಿಗಳನ್ನು ರಕ್ಷಿಸುವ ವಿಧಾನ ಇದಾಗಿದ್ದು, ತೆಂಗಿನ ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಅಡಗಿದೆ. ಈ ತಂತ್ರಜ್ಞಾನ ಜನಸಾಮಾನ್ಯರ ಬಳಕೆಗೆ ಯಾವಾಗ ಸಿಗುತ್ತದೆ ಎನ್ನುವುದರ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ – ರಾಜ್ಯಾದ್ಯಂತ ಅಬ್ಬರಿಸ್ತಿದೆ ಮಳೆ

    ಬೆಲ್ಜಿಯಂನ ಕೆ.ಯು ಲೀವನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತದ್ರೂಪಿ ಸೃಷ್ಠಿಯ ಮೂಲಕ ತೆಂಗಿನ ಸಸಿಗಳು ಬೇಗ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತೆಂಗಿನ ವಂಶವಾಯಿ ಗುಣಗಳನ್ನು ದೀರ್ಘಾವಧಿಗೆ ಸಂರಕ್ಷಿಸಿಡುವ ವಿಧಾನವನ್ನೂ ಕಂಡುಹಿಡಿದಿದ್ದು, ಇದರಿಂದ ಭಾರತ ಮುಂತಾದ ದೇಶಗಳಲ್ಲಿ ತೆಂಗು ಬೆಳೆಗಾರರು ಎದುರಿಸುತ್ತಿರುವ ಹಳದಿರೋಗ, ಹವಾಮಾನ ಬದಲಾವಣೆ, ಸಮುದ್ರ ಮಟ್ಟದ ಏರುವಿಕೆ ಹಾಗೂ ತೆಂಗಿನ ತೋಟಗಳು ಹಳೆಯದಾಗಿರುವುದು ಮುಂತಾದ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

  • ಕೋಲಾರಕ್ಕೂ ಒಕ್ಕರಿಸಿತಾ ಆಫ್ರಿಕನ್ ಮಿಡತೆ? ಜಿಲ್ಲೆಯ ರೈತರಲ್ಲಿ ಆತಂಕ

    ಕೋಲಾರಕ್ಕೂ ಒಕ್ಕರಿಸಿತಾ ಆಫ್ರಿಕನ್ ಮಿಡತೆ? ಜಿಲ್ಲೆಯ ರೈತರಲ್ಲಿ ಆತಂಕ

    – ಸ್ಥಳಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ಪರಿಶೀಲನೆ

    ಕೋಲಾರ: ಜಿಲ್ಲೆಗೂ ಮಿಡತೆಗಳು ವಕ್ಕರಿಸಿವೆಯಾ ಎಂಬ ಅನುಮಾನ ಇದೀಗ ಕಾಡುತ್ತಿದ್ದು, ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

    ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮಗಳ ಬಳಿ ಮಿಡತೆಗಳ ಗುಂಪು ಕಾಣಿಸಿಕೊಳ್ಳುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿವೆ. ಗ್ರಾಮದ ತೋಟಗಳು, ರಸ್ತೆ ಬದಿಯ ಗಿಡಗಳು ಸೇರಿದಂತೆ ವಿದ್ಯುತ್ ಕಂಬಗಳ ಮೇಲೆ ಗುಂಪು ಗುಂಪಾಗಿ ಮಿಡತೆಗಳು ಕಾಣಿಸಿಕೊಂಡಿವೆ.

    ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ರಸ್ತೆ ಬದಿಯ ಗಿಡಗಳ ಮೇಲೆ ಗುಂಪಾಗಿದ್ದ ಮಿಡತೆಗಳನ್ನು ಸ್ಥಳೀಯರು ಸುಟ್ಟಿದ್ದಾರೆ. ಈಗಾಗಲೇ ದೇಶದ ಹಲವೆಡೆ ಕಾಣಿಸಿಕೊಂಡಿರುವ ಆಫ್ರಿಕನ್ ಮಿಡತೆಗಳನ್ನು ಹೋಲುತ್ತಿವೆ. ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

  • ಪ್ರತಿ ವರ್ಷ ಕೊರೊನಾ ಕಾಡುವ ಸಾಧ್ಯತೆ ಇದೆ ಎಂದ ಚೀನಾ ವಿಜ್ಞಾನಿಗಳು

    ಪ್ರತಿ ವರ್ಷ ಕೊರೊನಾ ಕಾಡುವ ಸಾಧ್ಯತೆ ಇದೆ ಎಂದ ಚೀನಾ ವಿಜ್ಞಾನಿಗಳು

    – ಭಾರತದಂತಹ ರಾಷ್ಟ್ರಗಳಲ್ಲಿ ನಿಯಂತ್ರಣದಲ್ಲಿದೆ

    ಬೀಜಿಂಗ್: ಮಹಾಮಾರಿ ಕೊರೊನಾ ಅಟ್ಟಹಾಸ ಇಲ್ಲಿಗೇ ಮುಗಿಯುವುದಿಲ್ಲ ಪ್ರತಿ ವರ್ಷವೂ ಕಾಡುವ ಸಾಧ್ಯತೆ ಇದೆ ಎಂಬ ಭಯಾನಕ ಅಂಶವನ್ನು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ.

    ಚೀನಾದ ಬೀಜಿಂಗ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಶೋಧಕರು ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೊರೊನಾ ವೈರಸನ್ನು ಓಡಿಸಿದರೆ ಮುಗಿಯಿತು ಮತ್ತೆ ಬರಲ್ಲ ಎಂದುಕೊಳ್ಳುವಂತಿಲ್ಲ. ವಿಶ್ವವ್ಯಾಪಿ ಇದರ ಬೆಳವಣಿಗೆಯನ್ನು ಗಮನಿಸಿದಾಗ ಕೊರೊನಾ ಪ್ರತಿ ವರ್ಷ ಬರುವ ಸಾಧ್ಯತೆ ಇದ್ದು, ಜ್ವರದ ರೂಪದಲ್ಲಿ ಜನರನ್ನು ಕಾಡಲಿದೆ ಎಂದು ಹೇಳಿದ್ದಾರೆ.

    ಇದು 17 ವರ್ಷಗಳ ಹಿಂದೆ ಕಾಡಿದ ಸಾರ್ಸ್ ರೀತಿ ಸಂಪೂರ್ಣವಾಗಿ ತೊಲಗುವ ವೈರಸ್ ಅಲ್ಲ. ಸ್ಪಷ್ಟ ರೋಗಲಕ್ಷಣಗಳನ್ನು ಹೊಂದಿಲ್ಲದ ಕಾರಣ ಕೆಲವು ಜನರಲ್ಲಿ ಸೋಂಕು ಇರುತ್ತದೆ. ಇದರ ಲಕ್ಷಣಗಳು ಸ್ಪಷ್ಟವಾಗದಿರುವುದರಿಂದ ಇದನ್ನು ಪತ್ತೆ ಹಚ್ಚಿ ಸಂಪೂರ್ಣವಾಗಿ ತೊಲಗಿಸುವುದು ಕಷ್ಟ ಎಂದು ಚೀನಾದ ವೈರಲ್ ಮತ್ತು ಮೆಡಿಕಲ್ ಸಂಶೋಧಕರ ಗುಂಪು ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.

    ಸಾರ್ಸ್ ವೈರಸ್‍ನಿಂದ ಸೋಂಕಿತರು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಇದರಿಂದಾಗಿ ಅವರನ್ನು ಪತ್ತೆ ಹಚ್ಚುವುದು ಸುಲಭವಾಗಿತ್ತು. ಅಲ್ಲದೆ ಅಂತಹವರನ್ನು ಹುಡುಕಿ ಕ್ವಾರಂಟೈನ್ ಮಾಡಿದ ನಂತರ ಹರಡುವುದನ್ನು ನಿಲ್ಲಿಸಿತ್ತು. ಆದರೆ ಕೊರೊನಾ ವೈರಸ್ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿಯೇ ಚೀನಾ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತಂದರೂ ಪ್ರತಿದಿನ ನೂರಾರು ಲಕ್ಷಣರಹಿತ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ.

    ಕೊರೊನಾ ವೈರಸ್ ದೀರ್ಘ ಕಾಲದ ವರೆಗೆ ಮಾನವರೊಂದಿಗೆ ಇರಲಿದ್ದು, ಋತುಮಾನಕ್ಕೆ ತಕ್ಕಂತೆ ಮಾನವನ ದೇಹದಲ್ಲಿ ನಿರಂತರವಾಗಿ ಉಳಿಯುವ ಸಾಂಕ್ರಾಮಿಕ ರೋಗವಾಗಿದೆ ಎಂದು ಚೀನಾದ ವೈದ್ಯಕೀಯ ವಿಜ್ಞಾನ ಅಕಾಡೆಮಿಯ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯ ರೋಗಕಾರಕ ಜೀವಶಾಸ್ತ್ರ ಸಂಸ್ಥೆಯ ನಿರ್ದೇಶಕ ಜಿನ್ ಕ್ವಿ ತಿಳಿಸಿದ್ದಾರೆ.

    ವಿಶ್ವಾದ್ಯಂತ ಉನ್ನತ ಸಂಶೋಧಕರು ಮತ್ತು ಸರ್ಕಾರಗಳ ಮಧ್ಯೆ ಒಮ್ಮತ ರೂಪುಗೊಳ್ಳುತ್ತಿದೆ. ಲಾಕ್‍ಡೌನ್‍ಗಳ ಹೊರತಾಗಿಯೂ, ಜಾಗತಿಕ ಆರ್ಥಿಕತೆಯ ಬಹುಭಾಗವನ್ನು ಸ್ಥಗಿತಗೊಳಿಸಿದೆ. ಯುವ ಸಮೂಹವನ್ನು ಹೆಚ್ಚು ಒಳಗೊಂಡ ಭಾರತದಂತಹ ರಾಷ್ಟ್ರಗಳಲ್ಲಿ ವೈರಸ್ ಹರಡುವುದು ನಿಯಂತ್ರಣದಲ್ಲಿದೆ. ಅಲ್ಲದೆ ಕಟ್ಟುನಿಟ್ಟಿನ ಲಾಕ್‍ಡೌನ್ ಪಾಲಿಸುತ್ತಿರುವ ಸ್ವೀಡನ್‍ನಂತಹ ದೇಶಗಳಲ್ಲಿ ಇದು ನಿಯಂತ್ರಣದಲ್ಲಿದೆ ಎಂದು ಇನ್ನೂ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೊರೊನಾ ಸದ್ಯಕ್ಕೆ ನಮ್ಮನ್ನು ಬಿಟ್ಟು ತೊಲಗುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

    ವಿಶ್ವಾದ್ಯಂತ 30 ಲಕ್ಷಕ್ಕೂ ಅಧಿಕ ಜನರಗೆ ಕೊರೊನಾ ಸೋಂಕು ಹಬ್ಬಿದ್ದು, 2 ಲಕ್ಷಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಅಮೆರಿಕ ಒಂದರಲ್ಲೇ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 29,974 ಪ್ರಕರಣಗಳು ಪತ್ತೆಯಾಗಿವೆ. 937ಜನ ಸಾವನ್ನಪ್ಪಿದ್ದಾರೆ.

  • ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ಮಂಡ್ಯ: ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವ ಬೆನ್ನಲ್ಲೆ ಇದೀಗ ಮತ್ತೊಂದು ಅಮೂಲ್ಯವಾದ ಖನಿಜ ಸಂಪನ್ಮೂಲ ಇದೆ ಎಂದು ಹೇಳಲಾಗುತ್ತಿದೆ.

    ಸದ್ಯ ಕೆಲವು ದಿನಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಹಾಗೂ ಮರಳಗಾಲ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ವಾಹನ ತಯಾರಿಕೆಗೆ ಬೇಕಾದ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಅತ್ಯಮೂಲ್ಯವಾದ ಖನಿಜ ಸಂಪತ್ತಾದ ಚಿನ್ನದ ನಿಕ್ಷೇಪ ಇರುವುದು ಬೆಳಕಿಗೆ ಬಂದಿದೆ. ಅದೂ ಸಹ ಶ್ರೀರಂಗಪಟ್ಟಣ ತಾಲೂಕಿನಲ್ಲೇ ಇದೆ ಎನ್ನಲಾಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

    ಬ್ರಿಟಿಷ್ ಕಾಲದಲ್ಲೇ ಸಂಶೋಧನೆ:
    ಇಷ್ಟು ದಿನ ಜನರು ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಮಾತಾನಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಈ ಅರಣ್ಯ ಪ್ರದೇಶವನ್ನು ಬಂಗಾರದ ಗುಡ್ಡ ಅಂತಾನೇ ಕರೆಯುತ್ತಿದ್ದರು. ಇದೀಗ ಈ ಅರಣ್ಯ ಪ್ರದೇಶದಲ್ಲಿ ಮೂರು ಗುಹೆಗಳು ಪತ್ತೆಯಾಗಿವೆ. ಅವು ಕೂಡ ಬ್ರಿಟಿಷ್ ಕಾಲದಲ್ಲಿ ಕೊರೆಯಲಾಗಿರುವ ಗುಹೆಗಳಾಗಿದ್ದು, ಈ ಗುಹೆಗಳನ್ನು ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಲು ಕೊರೆಯಲಾಗಿದೆ ಎನ್ನಲಾಗುತ್ತಿದೆ. ಬ್ರಿಟಿಷ್ ವಿಜ್ಞಾನಿಗಳು 1882ರಿಂದ 1913ರವರೆಗೆ ಈ ಸ್ಥಳದಲ್ಲಿ ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಸಂಶೋಧನೆ ಬಗ್ಗೆ ಮಂಡ್ಯ ಗೆಜೆಟ್‍ನಲ್ಲೂ ಸಹ ಉಲ್ಲೇಖ ಆಗಿರುವುದು ಗಮನಾರ್ಹವಾಗಿದೆ.

    ಬಂಗಾರದ ಗುಡ್ಡ:
    ಇಂದಿಗೂ ಸಹ ಹುಂಜನಕೆರೆ ಅರಣ್ಯ ಪ್ರದೇಶವನ್ನು ಜನರು ಬಂಗಾರದ ಗುಡ್ಡ ಎಂದೇ ಕರೆಯುತ್ತಾರೆ. ಇಲ್ಲಿ ಚಿನ್ನಕ್ಕಾಗಿ ನಡೆದ ಸಂಶೋಧನೆಯಿಂದಾಗಿ ಜನರು ಅಂದಿನಿಂದ ಇಂದಿನವರೆಗೂ ಇಲ್ಲಿ ಅಪಾರ ಪ್ರಮಾಣದ ಚಿನ್ನ ಇದೆ ಎನ್ನುವ ಕಾರಣಕ್ಕೆ ಬಂಗಾರದ ಗುಡ್ಡ ಎನ್ನುತ್ತಾರೆ. ಈ ಪ್ರದೇಶದ ನಕಾಶೆಯಲ್ಲೂ ಸಹ ಬಂಗಾರದ ಗಣಿ ಎಂದೇ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಂದು ಬ್ರಿಟಿಷ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪಳೆಯುಳಿಕೆಗಳು ಇಂದಿಗೂ ಸಹ ಇರುವುದು ಅಚ್ಚರಿಯಾಗಿದೆ. ಸದ್ಯ ಇಲ್ಲಿರುವ ಮೂರು ಗುಹೆಗಳು ಮುಚ್ಚಿಕೊಂಡಿದ್ದು, ಗುಹೆಗಳ ಸ್ವಲ್ಪ ಭಾಗ ಮಾತ್ರ ಕಾಣಲು ಸಿಗುತ್ತಿದೆ.

    ಮಂಡ್ಯ ಇಷ್ಟು ದಿನ ಸಕ್ಕರೆ ನಗರಿ ಎಂದು ಕರೆಯಲ್ಪಡುತ್ತಿತ್ತು. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆ ಬೆನ್ನಲ್ಲೆ ಚಿನ್ನದ ನಿಕ್ಷೇಪದ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಈ ಚಿನ್ನದ ನಿಕ್ಷೇಪದ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ಇಲ್ಲಿ ಚಿನ್ನ ಇರುವುದು ನಿಜನಾ? ಇದ್ದರು ಸಹ ಎಷ್ಟು ಪ್ರಮಾಣದಲ್ಲಿ ಇದೆ? ಹಾಗೂ ದೇಶಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತೆ ಎನ್ನುವುದನ್ನ ಪತ್ತೆ ಮಾಡಬೇಕಿದೆ.