Tag: ವಿಜೇತ ಅನಂತ್ ಕುಮಾರ್

  • ಜೆಡಿಎಸ್ ಸ್ಟ್ರಾಂಗ್ ಎಂದ ಅನಂತ್ ಕುಮಾರ್ ಪುತ್ರಿ, ತೆನೆ ಹೊರುತ್ತಾರಾ?

    ಜೆಡಿಎಸ್ ಸ್ಟ್ರಾಂಗ್ ಎಂದ ಅನಂತ್ ಕುಮಾರ್ ಪುತ್ರಿ, ತೆನೆ ಹೊರುತ್ತಾರಾ?

    ಬೆಂಗಳೂರು: ಕೇಂದ್ರದ ಮಾಜಿ ಸಚಿವ ದಿ.ಅನಂತ ಕುಮಾರ್ ಅವರ ಪುತ್ರಿ ವಿಜೇತ ಅನಂತ್ ಕುಮಾರ್ ಟ್ವೀಟ್ ತೀವ್ರ ಕುತೂಹಲ ಮೂಡಿಸಿದ್ದು, ಜೆಡಿಎಸ್ ಸ್ಟ್ರಾಂಗ್ ಎಂದು ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕದ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಕೆಳಗಿನ ಸಾಲಿನಲ್ಲಿ ಇದಕ್ಕೆ ಉತ್ತರ ನೀಡಿದ್ದು, ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿದೆ ಎಂದು ಉತ್ತರರಿಸಿದ್ದಾರೆ. ಈ ಮೂಲಕ ಜೆಡಿಎಸ್ ಸ್ಟ್ರಾಂಗ್ ಎಂದು ವಿಜೇತ ಅನಂತ್ ಕುಮಾರ್ ಟ್ಟೀಟ್ ಮಾಡಿದ್ದಾರೆ.

    ಅವರ ತಾಯಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಸಿಡಿದೆದ್ದಿದ್ದಾರಾ, ಜೆಡಿಎಸ್ ಸೇರುತ್ತಾರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಅನಂತ್ ಕುಮಾರ್ ಪುತ್ರಿಯ ಈ ದಿಢೀರ್ ಟ್ವೀಟ್ ಗೆ ಕಾರಣ ಏನು ಎಂಬುದು ತಿಳಿಯುತ್ತಿಲ್ಲ. ಅಲ್ಲದೆ ಸಾಕಷ್ಟು ಕುತೂಹಲವನ್ನು ಸಹ ಕೆರಳಿಸಿದೆ.

    ವಿಜೇತ ಅನಂತ್ ಕುಮಾರ್ ಟ್ಟೀಟ್ ನೋಡಿ ಜೆಡಿಎಸ್ ಕಾರ್ಯಕರ್ತರು ಸಂತಸ ಪಟ್ಟಿದ್ದು, ಟ್ಟೀಟ್ ಮೂಲಕವೇ ಜೆಡಿಎಸ್‍ಗೆ ಬನ್ನಿ ಎಂದು ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ತಾಯಿಯೊಂದಿಗೆ ಜೆಡಿಎಸ್ ಗೆ ಬನ್ನಿ ಎಂದು ಹೇಳಿದ್ದಾರೆ.