ಬಳ್ಳಾರಿ: ಸಿದ್ದರಾಮಯ್ಯ (Siddaramaiah) ರಾಜ್ಯದ ಯಾವ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ. ಅವರು ಪಾಕಿಸ್ತಾನ (Pakistan) ಅಥವಾ ಅಫ್ಘಾನಿಸ್ತಾನ (Afghanistan), ಬಾಂಗ್ಲದೇಶಕ್ಕೆ (Bangladesh) ಹೋದರೆ ಒಳ್ಳೆಯದು ಎಂದು ಪದೇ ಪದೇ ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಕುರಿತು ಸಚಿವ ಆರ್.ಅಶೋಕ್ (R.Ashok) ಸಿದ್ದರಾಮಯ್ಯನವರ ಕಾಲೆಳೆದರು.
ಬಳ್ಳಾರಿಯಲ್ಲಿ (Ballari) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 224 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲು ಚಾನ್ಸೇ ಇಲ್ಲ. ಯಾಕೆಂದರೆ ಅವರು ಎಲ್ಲಿ ಹೋದರೂ ಸೋಲುತ್ತಾರೆ, ಯಾವುದೇ ಒಂದು ಕ್ಷೇತ್ರದಲ್ಲಿ ನಿಂತಿಲ್ಲ. ಸಿದ್ದರಾಮಯ್ಯ ಈಗಾಗಲೇ ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ಬಾದಾಮಿ (Badami) ಬಿಟ್ಟು ಓಡಿ ಬಂದಿದ್ದಾರೆ. ಅವರು ಕೋಲಾರದಲ್ಲಿ (Kolar) ಗೆಲ್ಲುವುದೂ ಕಷ್ಟವಿದೆ. ಆದ್ದರಿಂದ ಕರ್ನಾಟಕದ 224 ಕ್ಷೇತ್ರಗಳು ಸಿದ್ದರಾಮಯ್ಯನವರಿಗೆ ಒಳ್ಳೆಯದಲ್ಲ. ಸಿದ್ದರಾಮಯ್ಯ ಬೇರೆ ರಾಜ್ಯ ಅಥವಾ ಬೇರೆ ದೇಶವನ್ನು ನೋಡಿಕೊಂಡರೆ ಒಳ್ಳೆಯದು. ಇಲ್ಲಿ ಅವರನ್ನು ಎಲ್ಲಿಯೂ ನಿಲ್ಲಲು ಬಿಡುವುದಿಲ್ಲ. ಅವರ ಪಕ್ಷದವರೇ ಅವರಿಗೆ ವಿಲನ್. ಡಿ.ಕೆ.ಶಿವಕುಮಾರ್ (D.K.Shivakumar) ಅವರನ್ನು ಸೋಲಿಸುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸಿಸ್ಟರ್ ಸಿಟಿ ಹಗರಣ – ನಿತ್ಯಾನಂದನ ನಕಲಿ ದೇಶದೊಂದಿಗೆ ಅಮೆರಿಕದ 30 ನಗರಗಳು ಒಪ್ಪಂದ!
ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ (Vijaya Sankalpa Yatra) ಮೂಲಕ ಜನ ಜಾಗೃತಿಯನ್ನು ಮಾಡುತ್ತಿದ್ದೇವೆ. 224 ಕ್ಷೇತ್ರಗಳಲ್ಲಿ ರಿಚ್ ಆಗಿರುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ (BJP) ಮಾತ್ರ. ಯಾಕೆಂದರೆ ನಮ್ಮಲ್ಲಿ ಬಹಳಷ್ಟು ಜನ ರಾಜ್ಯ ಹಾಗೂ ಕೇಂದ್ರ ನಾಯಕರಿದ್ದಾರೆ. ಆದರೆ ಕಾಂಗ್ರೆಸ್‌ಗೆ (Congress) ಕೇವಲ ಇಬ್ಬರು ಮಾತ್ರ ನಾಯಕರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಮೂರನೇ ಲೀಡರಿಲ್ಲ. ಅವರು 224 ಕ್ಷೇತ್ರಕ್ಕೆ ಹೋಗಲಿಲ್ಲ. ಟಿಕೆಟ್ ಹಂಚಿಕೆಯಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮತ್ತೊಮ್ಮೆ ಅಧಿಕಾರದ ರುಚಿ ನೋಡಬೇಕೆಂದು ಕನಸು ಕಾಣುತ್ತಿದ್ದಾರೆ. 50 ವರ್ಷ ಆಡಳಿತ ಮಾಡಿದ್ದಾರೆ. ಆದ್ದರಿಂದ ಜನ ಇವರ 50 ವರ್ಷ ನೋಡಿ ಬದಲಾವಣೆ ಮಾಡುತ್ತಾರೆ ಎಂದರು. ಇದನ್ನೂ ಓದಿ: ಜೆಡಿಎಸ್ ಒಂದು ಪುಟ್ಗೋಸಿ ಪಕ್ಷ – ಮಾಜಿ ಸಚಿವ ನರೇಂದ್ರ ಸ್ವಾಮಿ ಅವಾಜ್
ಸೋಮಣ್ಣನವರ (V.Somanna) ಸಿಟ್ಟು 100 ಪರ್ಸೆಂಟ್ ಶಮನವಾಗಿದೆ. ಯಾವುದೇ ಸಂದರ್ಭದಲ್ಲೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅದೇ ರೀತಿ ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ (N.Y.Gopalakrishna) ಅವರು ಕೂಡಾ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: Bengaluru-Mysuru Expressway ನಲ್ಲಿ ಬೇಸಿಗೆ ಮಳೆಗೇ ಅವಾಂತರ- ವಾಹನ ಸವಾರರ ಪರದಾಟ
ಉಡುಪಿ: ಫೈಟರ್ ರವಿ (Fighter Ravi) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಸ್ಪರ ನಮಸ್ಕಾರ ಮಾಡಿಕೊಂಡ ಫೋಟೊ ಬಹಳಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಮನಮೋಹನ್ ಸಿಂಗ್ (Manmohan Singh) ಫೋಟೋವನ್ನು ಹೋಲಿಕೆ ಮಾಡಿ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿಗೆ ಕೈ ಮುಗಿಯಬಾರದು ಎಂದು ನಾವು ಹೇಳಲು ಆಗುವುದಿಲ್ಲ. ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಪ್ರಧಾನ ಮಂತ್ರಿಗೆ ಕೈಮುಗಿಯುತ್ತಾರೆ. ಯಾರೇ ಕೈಮುಗಿದರೂ ವಾಪಾಸ್ ಕೈಮುಗಿಯುವುದು ಪ್ರಧಾನ ಮಂತ್ರಿಗಳು ಇಟ್ಟುಕೊಂಡ ಸಂಪ್ರದಾಯ. ಆತ ಯಾವ ವ್ಯಕ್ತಿ? ಆತನ ಹೆಸರೇನು? ಯಾವ ಸೀಟು ಎನ್ನುವುದು ಪ್ರಧಾನಿಗೆ ಗೊತ್ತಿರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಹೆಸರಿನಲ್ಲಿ ಜೆಡಿಎಸ್, ಕಾಂಗ್ರೆಸ್ ರಾಜಕೀಯ – PSI ಮೇಲೆ ಹಲ್ಲೆ
ಭಾರತೀಯನೊಬ್ಬ ಪ್ರಧಾನಿಗೆ ಕೈಮುಗಿದಿದ್ದಾನೆ. ಆತ ರೌಡಿಶೀಟರ್ ಆಗಿದ್ದರೆ ಯಾವ ರಕ್ಷಣೆಯೂ ಇಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಏನಾದರು ಅಪರಾಧ ಮಾಡಿದರೆ ಸಂವಿಧಾನದ ಪ್ರಕಾರ ಕ್ರಮ ಆಗುತ್ತದೆ. ಬಿಜೆಪಿ (BJP) ಪಕ್ಷದ ವಿಜಯ ಸಂಕಲ್ಪ ರಥಯಾತ್ರೆಗೆ (Vijaya Sankalpa Yatra) ಅಭೂತಪೂರ್ವ ಸ್ಪಂದನೆಯನ್ನು ಜನತೆ ನೀಡಿದ್ದಾರೆ. ಯುವಕರ ರಣೋತ್ಸವ, ಕಾಯಕರ್ತರ ಉತ್ಸಾಹದಿಂದಾಗಿ ಸಾವಿರಾರು ಜನರು ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇದರ ಆಧಾರದಲ್ಲಿ ಬಿಜೆಪಿ ಪಕ್ಷವು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ
ಹಳೇ ಮೈಸೂರು (Mysuru) ಭಾಗದಲ್ಲಿ ಅಭ್ಯರ್ಥಿಯ ಆಯ್ಕೆಗೂ ತಡಕಾಡುತ್ತಿದ್ದ ಕಾಲವಿತ್ತು. ಆದರೆ ಈಗ ನೂರಕ್ಕೆ ನೂರು ಶಕ್ತಿ ವೃದ್ಧಿಸಿದೆ. ಪ್ರಧಾನಿ ಮೋದಿಯವರ ಮಂಡ್ಯ (Mandya) ಭೇಟಿ ವೇಳೆ ಜನರು ತೋರಿದ ಪ್ರೀತಿಯೇ ಇದಕ್ಕೆ ಸಾಕ್ಷಿ ಎಂದರು. ಲೋಕಾಯುಕ್ತಕ್ಕೆ ಹಲ್ಲು ಕೊಟ್ಟದ್ದು ಬಿಜೆಪಿ ಸರ್ಕಾರ. ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Madal Virupakshappa) ವಿರುದ್ಧ ದಾಖಲಾಗಿರುವ ಲೋಕಾಯುಕ್ತ ಪ್ರಕರಣವು ಚುನಾವಣಾ ಸನಿಹದಲ್ಲಿರುವುದರಿಂದ ಸ್ವಾಭಾವಿಕವಾಗಿ ಚರ್ಚೆಯಾಗುತ್ತದೆ. ಆದರೆ ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿ, ಎಸಿಬಿ ರಚಿಸಿದ್ದು ಯಾರು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಲೋಕಾಯುಕ್ತಕ್ಕೆ ಮರುಜೀವ ನೀಡಿ, ಶಕ್ತಿ ಕೊಟ್ಟು, ಹಲ್ಲು ಕೊಟ್ಟಿರುವುದು ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ ಎಂದರು. ಇದನ್ನೂ ಓದಿ: ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್
ಪಾರದರ್ಶಕ ಆಡಳಿತ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ಸಲುವಾಗಿ ಲೋಕಾಯುಕ್ತವನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಬಿಟ್ಟು ಬೇರೆ ಯಾವ ಸರ್ಕಾರ ಇದ್ದರೂ, ಆಡಳಿತ ಪಕ್ಷದ ಶಾಸಕನ ಮೇಲೆ ಪ್ರಕರಣ ದಾಖಲಾಗಲು ಸಾಧ್ಯವಿತ್ತೆ? ಆರೋಪವಿದೆ, ಅದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ
ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಒಳ್ಳೆಯದಾಗಲಿ, ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ ಎಂದು ಬಿಜೆಪಿ (BJP) ನಾಯಕ ಈಶ್ವರಪ್ಪ (K.S.Eshwarappa) ದೇವರಲ್ಲಿ ಬೇಡಿಕೊಂಡಿದ್ದಾರೆ.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ (Vijaya Sankalpa Yatra) ಉಡುಪಿಗೆ ಬಂದಿದ್ದು ಕಾರ್ಕಳ ಮತ್ತು ಉಡುಪಿ (Udupi) ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿ ಮತ್ತು ಸಭೆಗಳನ್ನು ನಡೆಸಿದೆ. ಈ ಸಂಬಂಧ ಮಣಿಪಾಲದಲ್ಲಿ (Manipal) ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಕೃಷ್ಣ ಮಠಕ್ಕೆ (Krishna Math) ಬಾರದಿರುವ ಬಗ್ಗೆ ಗಮನ ಸೆಳೆದರು. ಇದನ್ನೂ ಓದಿ: ಸಿ.ಟಿ ರವಿಗೆ 20 ವರ್ಷ ಸಾಕಾಗಿಲ್ವಾ, ಏನು ಮಾಡಿದ್ದಾರೆ?- ಮತದಾರರಿಂದ ಕ್ಲಾಸ್
ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಿದ್ದರಾಮಯ್ಯನವರು ಬಹಳ ಸಲ ಉಡುಪಿಗೆ ಬಂದರು. ಆದರೆ ಒಮ್ಮೆಯೂ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೂ ವಿಶೇಷವಾದ ಸಂಬಂಧವಿದೆ. ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತು. ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ನೀಡಲಿಲ್ಲ? ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಬರಲಿಲ್ಲ. ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ. ಇನ್ನಾದರೂ ಕೃಷ್ಣಮಠಕ್ಕೆ ಬನ್ನಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಹಾರೈಸಿದರು. ಇದನ್ನೂ ಓದಿ: ಬಿಜೆಪಿ ವಕ್ರದೃಷ್ಟಿ – ಮೋದಿ ರೋಡ್‌ಶೋಗೆ ಕುಮಾರಸ್ವಾಮಿ ಒಕ್ಕಲಿಗ ಕಾರ್ಡ್ ಪ್ಲೇ
ಸಿದ್ದರಾಮಯ್ಯನವರ ಮೇಲೆ ಪ್ರೀತಿಯಿಂದ, ಅವರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ (Politics) ಉದ್ದೇಶದಿಂದ ಈ ರೀತಿ ಹೇಳಲಿಲ್ಲ. ಪ್ರೀತಿ ಇಲ್ಲದೇ ಇದ್ದರೆ ರಾಜಕೀಯ ಮಾಡಲು ಸಾಧ್ಯವಿಲ್ಲ. ದೇಶದ್ರೋಹ ಹಾಗೂ ಧರ್ಮ ದ್ರೋಹಿಗಳನ್ನು ದ್ವೇಷಿಸಬೇಕು. ಸಿದ್ದರಾಮಯ್ಯನವರು ಎಲ್ಲಾ ಕಡೆ ದೇವಸ್ಥಾನಕ್ಕೆ ಹೋಗುತ್ತಾರೆ ಆದರೆ ಕೃಷ್ಣ ಮಠಕ್ಕೆ ಬರುವುದಿಲ್ಲ ಎಂದರು. ಇದನ್ನೂ ಓದಿ: ಮಂಡ್ಯ ಜನರ ಎದುರು ಮತ್ತೆ ಸಿಎಂ ಆಗುವ ಮಹಾದಾಸೆ ವ್ಯಕ್ತಪಡಿಸಿದ ಡಿಕೆಶಿ
ಸಿದ್ದರಾಮಯ್ಯನವರು ಮಠಗಳಿಗೆ ಹಣವನ್ನು ಕೊಡುತ್ತಾರೆ, ಮುಖ್ಯಮಂತ್ರಿ ಆಗಿದ್ದಾಗ ನನಗೂ ಹಣ ಕೊಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿರುವ ದೇವಸ್ಥಾನ ಹಾಗೂ ಮಠಗಳಿಗೂ ಸಿದ್ದರಾಮಯ್ಯ ಕೊಡುಗೆಗಳನ್ನು ಕೊಟ್ಟಿದ್ದರು. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹವಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ. ಪಕ್ಷದ ವಿಚಾರ ಬಂದಾಗ, ಮೋದಿಯನ್ನು (Narendra Modi) ಟೀಕೆ ಮಾಡಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ಎಂದು ನಿಮಗೆ ಗೊತ್ತು. ಮೋದಿಯನ್ನು ನರಹಂತಕ ಎಂದು ಕರೆದರೆ ಸುಮ್ಮನೆ ಬಿಡುತ್ತೇವಾ ಎಂದು ಹಾರೈಕೆಯ ಜೊತೆ ಸಿದ್ದರಾಮಯ್ಯನವರ ಕಿವಿ ಹಿಂಡಿದರು. ಇದನ್ನೂ ಓದಿ: ಮಂಡ್ಯ ಬಿಜೆಪಿಗೆ ಸುಮಲತಾ ಬೂಸ್ಟರ್- ಹಾಡಿಹೊಗಳಿದ ಬಿ.ಎಲ್ ಸಂತೋಷ್
ವಿಜಯಪುರ: ಕಾಂಗ್ರೆಸ್ (Congress) ಮತ್ತು ಜೆಡಿಎಸ್‌ನಲ್ಲಿ (JDS) ಲೀಡರ್‌ಶಿಪ್ ಡಿಎನ್‌ಎ ಮೂಲಕ ಬರುತ್ತದೆ. ಈ ಎರಡೂ ಪಕ್ಷದಲ್ಲೂ ಅನುವಂಶೀಯ ನಾಯಕತ್ವವಿದೆ. ಈ ಎರಡೂ ಪಕ್ಷಗಳಿಗೂ ಪ್ರಜಾಪ್ರಭುತ್ವದ (Democracy) ಮೇಲೆ ನಂಬಿಕೆ ಇಲ್ಲ. ಆದರೆ ಬಿಜೆಪಿಗೆ (BJP) ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದೆ ಎಂದು ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿದರು.
ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿಯಲ್ಲಿ ಸೋಮವಾರ ಬಿಜೆಪಿ ವಿಜಯಸಂಕಲ್ಪ ಯಾತ್ರೆ (Vijaya Sankalpa Yatra) ಕೈಗೊಂಡಿದ್ದು, ಯಾತ್ರೆಗೂ ಮುನ್ನ ಬಿಜೆಪಿ ನಾಯಕರ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಪಕ್ಷವು ಜನ ಸಾಮಾನ್ಯರ ನೇತೃತ್ವದಿಂದ ಬೆಳೆದು ಬಂದಿದ್ದು, ನೀತಿಗೆ ಅಂಟಿಕೊಂಡಿದೆ. ರಾಜೀವ್ ಗಾಂಧಿ (Rajiv Gandhi) ಇದ್ದ ಸಂದರ್ಭದಲ್ಲಿ ಕಳ್ಳರೆಲ್ಲಾ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಇದು ರಾಜೀವ್ ಗಾಂಧಿಯವರಿಗೂ ಗೊತ್ತಿತ್ತು. ನಮಗೆ ನಿಯತ್ತಿದೆ. ನಾವು ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಮತಗಳನ್ನು ಕೇಳುತ್ತೇವೆ. ಪ್ರಣಾಳಿಕೆಯಲ್ಲಿ ಹೇಳದೇ ಇರುವಂತಹ ಯೋಜನೆಗಳನ್ನು ನಾವು ಕೊಟ್ಟಿದ್ದೇವೆ. ಅಲ್ಲದೇ ಅದರ ಕೆಲಸಗಳನ್ನು ಯಾರಿಗೂ ಹೇಳದೆ ಮಾಡಿ ತೋರಿಸಿದ್ದೇವೆ ಎಂದರು. ಇದನ್ನೂ ಓದಿ: ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟ
ಇದೇ ವೇಳೆ ಮಾಜಿ ಸಚಿವ ಎಂ.ಬಿ ಪಾಟೀಲ್ (M.B.Patil) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಕೆರೆ ತುಂಬುವ ಯೋಜನೆಯನ್ನು ನಿಮ್ಮದೇ ಸರ್ಕಾರ ತಿರಸ್ಕಾರ ಮಾಡಿತ್ತು. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೀರಾವರಿ ಸಚಿವರಾಗಿದ್ದಾಗ ಕೆರೆ ತುಂಬುವ ಯೋಜನೆಗೆ ಅನುಮತಿ ನೀಡಿರಲಿಲ್ಲ. ಬಿಜೆಪಿ ಸರ್ಕಾರ ಕೆರೆ ತುಂಬುವ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ನೀವೂ ಅದೇ ಯೋಜನೆಯ ಹೆಸರಿನಲ್ಲಿ ಫೋಟೋ ಹಾಕಿಕೊಳ್ಳುತ್ತೀರಿ ಎಂದು ಹೇಳಿದರು. ಇದನ್ನೂ ಓದಿ: Special- ‘ಆಸ್ಕರ್’ ಪ್ರಶಸ್ತಿ ಪಡೆದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದ ವಿಶೇಷತೆ ಏನು?
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ವಾರೆಂಟ್ ಅವಧಿ ಮುಗಿದಿದೆ. ಇನ್ನು ವಾರೆಂಟಿ ಕಾರ್ಡ್ ನೀಡಿ ಏನು ಪ್ರಯೋಜನ? ಎಲ್ಲಾ ಕಡೆಯೂ ಕಾಂಗ್ರೆಸ್ ಪಕ್ಷ ತಿರಸ್ಕಾರಕ್ಕೆ ಒಳಗಾಗುತ್ತಿದೆ. ಇಷ್ಟಕ್ಕೂ ನೀವು ಕೊಡುತ್ತಿರುವುದು ಫಾಲ್ಸ್ ಕಾರ್ಡ್ ಎಂಬುವುದು ಜನರಿಗೆ ಗೊತ್ತಿದೆ. ನೀವು ಅಧಿಕಾರದಲ್ಲಿ ಇದ್ದ ಸಂದರ್ಭ ಇದನ್ನು ಅನುಷ್ಠಾನಕ್ಕೆ ತಂದಿದ್ದರೆ ಅದೊಂದು ಮಾದರಿಯಾಗುತ್ತಿತ್ತು. ನೀವು ಈ ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದರೆ ಅದು ಸತ್ಯದ ಮಾತಾಗುತ್ತಿತ್ತು. ಈ ಫಾಲ್ಸ್ ಕಾರ್ಡ್‌ಗೆ ಮೂರು ಕಾಸಿನ ಕಿಮ್ಮತ್ತು ಕೂಡಾ ಇಲ್ಲ. ಹಾಗಾಗಿ ಫಾಲ್ಸ್ ಕಾರ್ಡ್ ವಿರುದ್ಧ ನಾವು ರಿಪೋರ್ಟ್ ಕಾರ್ಡ್ ಕೊಡುತ್ತೇವೆ. ಕೆಲಸ ಮಾಡಿರುವುದನ್ನು ಜನರ ಮುಂದೆ ಇಟ್ಟು ಮತ ಕೇಳುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: `ಕಾಂತಾರ 2’ಗೆ ಚಾಲನೆ ಸಿಗುವ ಮುನ್ನವೇ ಹೊಸ ಸಿನಿಮಾ ನಿರ್ಮಾಣದತ್ತ ರಿಷಬ್ ಶೆಟ್ಟಿ
ಸಿದ್ದರಾಮಯ್ಯ (Siddaramaiah) ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತದೆ. ಈ ಹಿಂದೆ ಮೋದಿ ಪ್ರಧಾನಿ ಆಗುವುದಿಲ್ಲ ಎಂದಿದ್ದರು, ಆದರೆ ಮೋದಿ (Narendra Modi) ಪ್ರಧಾನಿಯಾದರು. ಯಡಿಯೂರಪ್ಪ (Yediyurappa) ಸಿಎಂ ಆಗುವುದಿಲ್ಲ ಎಂದರು, ಆದರೆ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಇನ್ನುಮುಂದೆ ಸಿದ್ದರಾಮಯ್ಯನವರು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಚಾರ ಮಾಡಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಜಕೀಯದಿಂದ ದೂರವಿರಲು ಕಾರಣರಾದ ಆ ವ್ಯಕ್ತಿ ಬಗ್ಗೆ ಬಹಿರಂಗಪಡಿಸಿದ ರಜನಿಕಾಂತ್
ಮಂಡ್ಯದಲ್ಲಿ ಉರಿಗೌಡ ನಂಜೇಗೌಡ ಮಹಾದ್ವಾರ ತೆರವು ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಾದ್ವಾರ ತೆರವು ಮಾಡಿದ್ದು ಅಕ್ಷಮ್ಯ ಅಪರಾಧ. ದೊಡ್ಡ ನಂಜೇಗೌಡ ಹಾಗೂ ಉರಿಗೌಡ ಅವರು ಟಿಪ್ಪುವನ್ನು ಹತ್ಯೆ ಮಾಡಿದರು. ಯಾಕೆ ಹತ್ಯೆ ಮಾಡಿದರು ಎಂಬ ಸತ್ಯ ಹೊರಬರಬೇಕಾಗಿದೆ. ಅವರಿಗೆ ಇತಿಹಾಸದಲ್ಲಿ ಯಾವ ಗೌರವ ಸಿಗಬೇಕಾಗಿತ್ತೋ ಆ ಗೌರವ ಸಿಕ್ಕಿರಲಿಲ್ಲ. ಅವರಿಗೆ ಮತ್ತೆ ಆ ಗೌರವ ಸಿಗಬೇಕು. ಅದಕ್ಕಾಗಿ ಆ ದ್ವಾರ ಹಾಕಿದ್ದು ಸರಿಯಾಗಿದೆ. ಆ ದ್ವಾರವನ್ನು ತೆರವು ಮಾಡಿದ್ದು ತಪ್ಪು. ಜನರ ಮೂಲಕ ಶಾಶ್ವತವಾಗಿ ಆ ದ್ವಾರವನ್ನು ನಿರ್ಮಾಣ ಮಾಡಲು ಬೇಕಾದ ಶಕ್ತಿಯನ್ನು ನಾವು ಮಂಡ್ಯ(Mandya) ಜನರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ದೆಹಲಿ ಶಾಸಕರ ಸಂಬಳ ಭರ್ಜರಿ ಹೆಚ್ಚಳ
ರಾಯಚೂರು: ಸಿದ್ದರಾಮಯ್ಯ (Siddaramaiah) ಹರಕೆಯ ಕುರಿಯಾಗಿದ್ದಾರೆ. ಅವರು ಹರಕೆಯ ಕುರಿಯಾಗಬಾರದು. ಕಾಂಗ್ರೆಸ್‍ಗೆ (Congress) ದಮ್, ತಾಕತ್ ಇದ್ರೆ ಸಿದ್ದರಾಮಯ್ಯ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಸಾರಿಗೆ ಸಚಿವ ಶ್ರೀರಾಮುಲು (Sriramulu) ಸವಾಲು ಹಾಕಿದ್ದಾರೆ.
ರಾಯಚೂರಿನ (Raichuru) ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijaya sankalpa yatre) ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇವರಾಜ ಅರಸು (Devaraj Arasu), ನಿಜಲಿಂಗಪ್ಪ (Nijalingappa), ವೀರೇಂದ್ರ ಪಾಟೀಲ್, ಬಂಗಾರಪ್ಪ (Bangarappa) ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಂಡರೋ, ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ನಡೆಸಿಕೊಳ್ಳುತ್ತಿದೆ. ಆ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದು ಎಂದಿದ್ದಾರೆ. ಇದನ್ನೂ ಓದಿ: ಶಾಸಕ ಹಂಚಿದ ಕುಕ್ಕರ್ ಅಸಲಿ ಮುಖ ತೆರೆದಿಟ್ಟ ಶೃಂಗೇರಿಯ ಮತದಾರರು
ಕಾಂಗ್ರೆಸ್‍ನಲ್ಲಿ ಒಗ್ಗಟ್ಟಿಲ್ಲ, ಒಳ ಜಗಳಗಳು ಪ್ರಾರಂಭವಾಗಿ ಮನೆಯೊಂದು ಮೂರು ಬಾಗಿಲಾಗಿದೆ ಎಂದು ವ್ಯಂಗ್ಯಮಾಡಿದ್ದಾರೆ.
ನಾನು ಉಪ ಮುಖ್ಯಮಂತ್ರಿ ಸ್ಥಾನ ಕೇಳವ ಕಾಲ ಹೋಗಿದೆ. ಈಗ ಪ್ರಮೋಷನ್ ಆಗಿ ಸಿಎಂ ಸ್ಥಾನ ಕೇಳುವ ಸಮಯ ಬಂದಿದೆ. ಪಕ್ಷ ಮುಂದೆ ನನ್ನನ್ನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಬಹುದು ಎಂದು ಸಿಎಂ ಬಯಕೆಯನ್ನು ತೆರೆದಿಟ್ಟಿದ್ದಾರೆ.
ಬಿಎಂಟಿಸಿ (BMTC) ಬಸ್‍ನಲ್ಲಿ ಕಂಡಕ್ಟರ್ ಸಜೀವ ದಹನ ವಿಚಾರವಾಗಿ, ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶ ಮಾಡಿದ್ದೇನೆ. ಕುಟುಂಬದವರಿಗೆ ಉದ್ಯೋಗ ನೀಡಲು ಆದೇಶಿಸಿಸಲಾಗಿದೆ. ಇನ್ಸೂರೆನ್ಸ್ ಬಗ್ಗೆಯೂ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ, ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇವೆ. 10% ವೇತನ ಹೆಚ್ಚಳಕ್ಕೆ ನಾವು ಒಪ್ಪಿದ್ದೇವೆ. ಆದರೆ ನೌಕರರು ಒಪ್ಪುತ್ತಿಲ್ಲ ಎಂದಿದ್ದಾರೆ.
ಜನಾರ್ದನ ರೆಡ್ಡಿಗೆ (Janardhana Reddy) ಸಿಬಿಐ (CBI) ಸಮನ್ಸ್ (Summons) ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸಾಮಾನ್ಯ ಪ್ರಕ್ರಿಯೆ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿಗರ (BJP) ಮೇಲೂ ದಾಳಿಯಾಗಿವೆ. ಕಾನೂನು ಚೌಕಟ್ಟಿನಲ್ಲಿ ಸಿಬಿಐ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ: ಸುಮಲತಾ
ಮಂಡ್ಯ: ಕರ್ನಾಟಕದ ಸಮಗ್ರ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಸಾಧ್ಯ. ದೇಶ ವಿರೋಧಿ ಕಾಂಗ್ರೆಸ್ಸಿಗರನ್ನು (Congress) ಮನೆಯಲ್ಲೇ ಕೂರಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು ಹೇಳಿದರು.
ನಗರದ ಕೆ.ಆರ್.ಪುರದಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮಾನಸಿಕವಾಗಿ ದಿವಾಳಿ ಆಗಿದ್ದಾರೆ. ಒಡೆದು ಆಳುವ ನೀತಿಯ ಕಾಂಗ್ರೆಸ್ ಮುಖಂಡರನ್ನು ಸೋಲಿಸಿ ಮನೆಯಲ್ಲೇ ಕೂರಿಸಿ ಎಂದು ಕರೆ ನೀಡಿದರು.
ದೇಶದ 2ನೇ ದೊಡ್ಡ ಅರ್ಥ ವ್ಯವಸ್ಥೆಯಾಗಿ ಕರ್ನಾಟಕ ಹೊರಹೊಮ್ಮಿದೆ. ರೈತ ವಿದ್ಯಾನಿಧಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ರೈತರಿಗೆ ಸಾಲ, ಮೀಸಲಾತಿ ಹೆಚ್ಚಳ ಸೇರಿ ಸಮಗ್ರ ಅಭಿವೃದ್ಧಿಯ ಕಾರ್ಯವನ್ನು ಗಮನದಲ್ಲಿಟ್ಟು ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಬಲೂನು ಪತ್ತೆ – ಆತಂಕದಲ್ಲಿ ಜನ
ಪ್ರಧಾನಿಯವರು ಬಡವರು, ಮಹಿಳೆಯರು ಸೇರಿ ಎಲ್ಲ ವರ್ಗದ ಜನರಿಗೆ ನೆರವಾಗಿದ್ದಾರೆ. ಉಜ್ವಲ, ಉಜಲಾ, ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಮತ್ತಿತರ ಯೋಜನೆಗಳಿಂದ ಜನಸಾಮಾನ್ಯರಿಗೆ ಪ್ರಯೋಜನ ಸಿಕ್ಕಿದೆ ಎಂದ ಅವರು, ಜೆಡಿಎಸ್- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಭ್ರಷ್ಟಾಚಾರ, ಒಡೆದು ಆಳುವ ನೀತಿ, ಕಮಿಷನ್, ಜಾತಿ ರಾಜಕೀಯ ಮತ್ತು ಕುಟುಂಬ ರಾಜಕೀಯದ ಪಕ್ಷಗಳಿವು ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಜಾಮೀನಿನಲ್ಲಿದ್ದಾರೆ. ಜೆಡಿಎಸ್ (JDS) ಕೂಡ ಭ್ರಷ್ಟರ ಪಕ್ಷ. ಇವು ಭಾಯಿ ಭಾಯಿ ಪಕ್ಷಗಳು ಎಂದರಲ್ಲದೆ, ಜೆಡಿಎಸ್‍ಗೆ ಮತ ಕೊಟ್ಟರೆ ಅದು ಕಾಂಗ್ರೆಸ್‍ಗೆ ಮತ ಕೊಟ್ಟಂತೆ ಎಂದು ಎಚ್ಚರಿಸಿದರು. ಪಿಎಫ್‍ಐ ನಾಯಕರನ್ನು ಕಾಂಗ್ರೆಸ್ ಬೆಂಬಲಿಸಿ ಅವರ ಕೇಸುಗಳನ್ನು ರದ್ದು ಮಾಡಿತ್ತು. ಆದರೆ, ಬಿಜೆಪಿ ಪಿಎಫ್‍ಐ ನಿಷೇಧಿಸಿದೆ ಎಂದು ವಿವರಿಸಿದರು.
ದೇಶದ ಸುರಕ್ಷತೆಗಾಗಿ ಮೋದಿಜಿ, ಯಡಿಯೂರಪ್ಪ- ಬೊಮ್ಮಾಯಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೆ ಗರಿಷ್ಠ ಕೊಡುಗೆ ಕೊಟ್ಟಿದ್ದಾರೆ ಎಂದರಲ್ಲದೆ, ಬೈರತಿ ಬಸವರಾಜ್ ಅವರನ್ನೂ ಅಭಿನಂದಿಸಿದರು.
ಕೋವಿಡ್ ಕಾಲದಲ್ಲಿ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಅನೇಕ ದೇಶಗಳು ಸಂಕಷ್ಟದಲ್ಲಿ ಸಿಲುಕಿದವು. ಆದರೆ, ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ಆರ್ಥಿಕ ಕ್ಷೇತ್ರ ಮತ್ತು ಅಭಿವೃದ್ಧಿಯಲ್ಲಿ ಸಾಧನೆ ಮಾಡಿದೆ. ಮೋದಿಜಿ ಅವರನ್ನು ವಿರೋಧಿಸುವ ಚಿಂತನೆಯೊಂದಿಗೆ ಕಾಂಗ್ರೆಸ್ಸಿಗರು ದೇಶ ವಿರೋಧಿಗಳಾಗಿದ್ದಾರೆ ಎಂದು ಟೀಕಿಸಿದರು.
ರಷ್ಯಾ, ಇಟೆಲಿ, ಬ್ರಿಟನ್ ಸೇರಿ ಇತರೆಡೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಆದರೆ, ಭಾರತದಲ್ಲಿ ಅದು ಕನಿಷ್ಠ ಮಟ್ಟದಲ್ಲಿದೆ. ಭಾರತವು ವಿಶ್ವದಲ್ಲೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಗರಿಷ್ಠ ಬೆಳವಣಿಗೆ ಸಾಧಿಸುವ ನಗರವಾಗಿ ಹೊರಹೊಮ್ಮಿದೆ ಎಂದು ಪ್ರಶಂಸಿಸಿದರು.
2014ರಲ್ಲಿ ಭಾರತವು ಗರಿಷ್ಠ ಮೊಬೈಲ್‍ಗಳನ್ನು ವಿದೇಶದಿಂದ ಖರೀದಿಸುತ್ತಿತ್ತು. ಈಗ ಶೇ.97ರಷ್ಟು ಮೊಬೈಲ್‍ಗಳನ್ನು ಆಂತರಿಕವಾಗಿ ಉತ್ಪಾದಿಸುತ್ತಿದೆ. ಡಿಜಿಟಲ್ ವ್ಯವಹಾರವೂ ಹೆಚ್ಚುತ್ತಲೇ ಸಾಗಿದೆ. ಕರ್ನಾಟಕದಲ್ಲಿ 11 ವಿಮಾನನಿಲ್ದಾಣಗಳು ನಿರ್ಮಾಣವಾಗುತ್ತಿವೆ. 9 ವರ್ಷಗಳಲ್ಲಿ 74 ವಿಮಾನನಿಲ್ದಾಣಗಳು ನಿರ್ಮಾಣವಾಗಿದೆ ಎಂದರು.
ರೈಲ್ವೆ ಬಜೆಟ್ ಮೊತ್ತ ಗಮನಾರ್ಹವಾಗಿ ಹೆಚ್ಚಾಗಿದೆ. ಹೈವೇ ನಿರ್ಮಾಣದ ವೇಗವೂ ಹೆಚ್ಚಾಗಿದೆ. ಅಭಿವೃದ್ಧಿಯ ವೇಗ ಹೆಚ್ಚಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಧಾನಿಯವರು ಶಿವಮೊಗ್ಗ ವಿಮಾನನಿಲ್ದಾಣ ಉದ್ಘಾಟಿಸಿದ್ದಾರೆ. 2 ಹೊಸ ರೈಲ್ವೆ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಬೆಳಗಾವಿಯಲ್ಲೂ 2,700 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ ಎಂದು ವಿವರಿಸಿದರು.ʼ
ಬೆಂಗಳೂರಿಗೆ ದೇಶ ಮತ್ತು ವಿಶ್ವದಲ್ಲಿ ವಿಶೇಷ ಸ್ಥಾನಮಾನ ಇದೆ. ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡರ ನಾಡಿದು. ಸ್ಟಾರ್ಟಪ್, ತಂತ್ರಜ್ಞಾನದಲ್ಲಿ ಬೆಂಗಳೂರಿಗೆ ದೊಡ್ಡ ಹೆಸರಿದೆ ಎಂದು ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸೌಭಾಗ್ಯ. ಮತ್ತೆ ಕರ್ನಾಟಕದಲ್ಲಿ ಕಮಲ ಅರಳುವ ಭರವಸೆ ಮೂಡಿದೆ. ಕೆಂಪೇಗೌಡ ವಿಮಾನನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆ, ಎಚ್‍ಎಎಲ್ ಫ್ಯಾಕ್ಟರಿಯ ಕಾಮಗಾರಿ ಉದ್ಘಾಟನೆ ಮಾಡಿದ್ದನ್ನು ಅವರು ಜನರ ಮುಂದಿಟ್ಟರು. ಮೈಸೂರು- ಚೆನ್ನೈ ವಂದೇ ಭಾರತ್ ಟ್ರೈನ್ ಆರಂಭ, ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ ಮಾಡಿದ್ದನ್ನು ತಿಳಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಭಾನುವಾರ ಏನೇನು ಕಾರ್ಯಕ್ರಮ?
ರಾಜ್ಯದ ಸಚಿವ ಆರ್.ಅಶೋಕ್ ಅವರು ಮಾತನಾಡಿ ಬಿಜೆಪಿಗೆ ಮತ ಕೊಡಲು ವಿನಂತಿಸಿದರು. ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಮಾತನಾಡಿ, ಗರಿಷ್ಠ ಸುಳ್ಳು ಹೇಳುವವರು ಕಾಂಗ್ರೆಸ್ಸಿಗರು ಎಂದು ಟೀಕಿಸಿದರು. ತಮಿಳುನಾಡಿನಲ್ಲೂ ಇದೇ ಮಾದರಿಯ ಸುಳ್ಳು ಆಶ್ವಾಸನೆ ಕೊಟ್ಟಿದ್ದು, ಅವನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಆಕ್ಷೇಪಿಸಿದರು. ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ರಾಜ್ಯದ ಸಚಿವ ಬೈರತಿ ಬಸವರಾಜ್ ಅವರು ಮಾತನಾಡಿ, ಬಿಜೆಪಿ ಗರಿಷ್ಠ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. 2023ರ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು. ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಸರಕಾರ 9 ಸಾವಿರ ಕೋಟಿ ನೀಡಿದೆ. ನಮ್ಮದು ಅಭಿವೃದ್ಧಿಯ ಸಂಕಲ್ಪ ಎಂದು ತಿಳಿಸಿದರು. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು ತಂದುಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.
ರಾಜ್ಯದ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮುನಿರತ್ನ, ಪಕ್ಷದ ಸಚಿವರು, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಅ.ದೇವೇಗೌಡ, ಮುಖಂಡ ಸಚ್ಚಿದಾನಂದ ಮೂರ್ತಿ, ಜಿಲ್ಲಾಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಿದ್ದರಾಜು, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಮತ್ತು ಸಿದ್ದರಾಮಯ್ಯ (Siddaramaiah) ಮನೆಗೆ ಹೋಗುವುದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.
ಬೈಲಹೊಂಗಲ, ಸವದತ್ತಿಯಲ್ಲಿ ಶನಿವಾರ ಬಿಎಸ್‌ವೈ ಜೊತೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijaya Sankalpa Yatra) ಪಾಲ್ಗೊಂಡು ಮಾತನಾಡಿದ ಅವರು, ʼಕೈʼ ನಾಯಕರು ಎಲ್ಲೆಡೆ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಅಂತಾ ಹೇಳಿಕೊಂಡು ತಿರುಗಾಡ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಮನೆಗೆ ಹೋಗುವುದು ಗ್ಯಾರಂಟಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ-ಬೆಂಗಳೂರು ನಡುವೆ ಮತ್ತೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ – ಪ್ರಹ್ಲಾದ್ ಜೋಶಿ
ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಬಗ್ಗೆ ಹೋದ ಕಡೆಯಲ್ಲೆಲ್ಲಾ ಮಾತಾಡ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ದಲಿತ ನಾಯಕರ ಬೆಳವಣಿಗೆಯನ್ನ ಹತ್ತಿಕ್ಕುತ್ತಿರುವವರು ಇದೇ ಸಿದ್ದರಾಮಯ್ಯ. ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ ಎಂದು ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಅವರು ಮೊದಲು ಮಲ್ಲಿಕಾರ್ಜುನ ಖರ್ಗೆ ಅವರನ್ನ ರಾಜ್ಯ ರಾಜಕಾರಣದಿಂದ ದೂರ ಸರಿಸಿದರು. ನಂತರ ಜಿ.ಪರಮೇಶ್ವರ್ ಅವರನ್ನ ಹತ್ತಿಕ್ಕಿದರು. ಇದೀಗ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಹೋಗಿ ಕೆ.ಹೆಚ್.ಮುನಿಯಪ್ಪ ಅವರನ್ನ ಮುಗಿಸಲು ಹೊರಟಿದ್ದಾರೆ. ಮೂವರು ದಲಿತ ನಾಯಕರನ್ನ ಹತ್ತಿಕ್ಕಿರುವ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕದ ಜನ ಒಳ್ಳೆಯವ್ರು, ಆದ್ರೆ ನಾಯಕರು ಕೆಟ್ಟವ್ರು – ರಾಜ್ಯವನ್ನ ಬರ್ಬಾದ್ ಮಾಡ್ತಿದ್ದಾರೆ: ಕೇಜ್ರಿವಾಲ್ ಕಿಡಿ
58 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಏನು ಮಾಡಲಿಲ್ಲ. ರೈತರ ಸಾಲ ಮನ್ನಾ ಮಾಡ್ತೀವಿ. ರೈತರ ಅಕೌಂಟ್‌ಗೆ ನೇರ ಹಣ ವರ್ಗಾವಣೆ ಮಾಡ್ತೀವಿ ಅಂತಾ ಸುಳ್ಳು ಹೇಳಿದ್ದರು. ಆದರೆ ಕಿಸಾನ್ ಸಮ್ಮಾನ್ ಮೂಲಕ ರೈತರ ಖಾತೆಗೆ 6 ಸಾವಿರ ಹಣವನ್ನು ಮೋದಿ ಅವರು ಕೊಟ್ರು. ಅಲ್ಲದೇ ರೈತ ನಾಯಕ ಬಿಎಸ್‌ವೈ 4 ಸಾವಿರ ಹೆಚ್ಚಿಗೆ ಸೇರಿಸಿ ಒಟ್ಟು 10 ಸಾವಿರ ಹಣವನ್ನು ರೈತರ ಖಾತೆಗೆ ಜಮಾ ಮಾಡಿಸಿದ್ದಾರೆ ಎಂದು ಬಣ್ಣಿಸಿದರು.
ಈಗ ಕಾಂಗ್ರೆಸ್‌ನವರು ಉಚಿತ ವಿದ್ಯುತ್ ಕೊಡ್ತೇವೆ ಅಂತಾ ಬುರುಡೆ ಬಿಡ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಕರೆಂಟೇ ಕೊಡ್ತಿರಲಿಲ್ಲ. ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ 24 ಗಂಟೆ ಕರೆಂಟ್ ಕೊಡ್ತಿದ್ದೇವೆ. ಫ್ರೀ ಕರೆಂಟ್ ಕೊಡಲು ಸಾಧ್ಯವಿಲ್ಲ. ಬಿಜೆಪಿ ಕ್ವಾಲಿಟಿ ಕರೆಂಟ್ ಕೊಡುವ ನೀತಿ ಅನುಸರಿಸುತ್ತಿದೆ. ಜನರು ಕಾಂಗ್ರೆಸ್ ಸುಳ್ಳುಗಳಿಗೆ ಮರುಳಾಗಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಣ ಕೊಡದಿದ್ದಕ್ಕೆ ಬಿಜೆಪಿ ಬಾವುಟಕ್ಕೆ ಬೆಂಕಿ – ಚಿನ್ನ ಗಿರವಿಯಿಟ್ಟು ಕಾರ್ಯಕರ್ತರಿಗೆ ಹಣ ಕೊಟ್ಟ ಮುಖಂಡ
ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಕೇವಲ ರಾಜಕೀಯ ಮಾಡಿತು. ಗೋವಾಗೆ ಹೋಗಿ ಹನಿ ನೀರು ಕೊಡಲ್ಲ ಎಂದವರು ಸೋನಿಯಾ ಗಾಂಧಿಯವರು. ಆದರೆ ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ಮಹದಾಯಿ ನೀರು ಬೈಲಹೊಂಗಲ, ಸವದತ್ತಿಗೆ ತರುತ್ತಿದ್ದರೆ ಅದು ಬಿಜೆಪಿ ಅನ್ನೋದನ್ನ ಜನ ಮರೆಯಬಾರದು ಎಂದು ಒತ್ತಿ ಹೇಳಿದರು.
ಮೈಸೂರು: ವಿಜಯ ಸಂಕಲ್ಪ ಯಾತ್ರೆಗೆ (Vijaya Sankalpa Yatra) ಬಂದ ಜನರಿಗೆ ಹಣ ಕೊಡದ ಹಿನ್ನೆಲೆ ಬಿಜೆಪಿ ಬಾವುಟಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೈಸೂರು (Mysuru) ಜಿಲ್ಲೆಯ ಕೆ.ಆರ್ ನಗರದಲ್ಲಿ ನಡೆದಿದೆ.
ಶುಕ್ರವಾರ ಕೆ.ಆರ್ ನಗರದಲ್ಲಿ (KR Nagar) ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K. S. Eshwarappa) ನೇತೃತ್ವದ ವಿಜಯ ಸಂಕಲ್ಪ ಯಾತ್ರೆ ನಡೆದಿತ್ತು. ಯಾತ್ರೆಯಲ್ಲಿ ಮಾಜಿ ಸಿಎಂ ಸದಾನಂದ ಗೌಡ (D. V. Sadananda Gowda) ಸೇರಿದಂತೆ ಕೆ.ಆರ್ ನಗರ ತಾಲೂಕಿನ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಗಳು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಯಾತ್ರೆಗೆ ಬಂದ ಜನರಿಗೆ ಆಯೋಜಕರು ಹಣ ನೀಡಿರಲಿಲ್ಲ. ಇದನ್ನೂ ಓದಿ: ಶಾಸಕರ ಮನೆ ಬೆನ್ನಲ್ಲೇ ಪ್ರತಿಷ್ಠಿತ ಉದ್ಯಮಿ ಮನೆಯಲ್ಲಿದ್ದ ಕೋಟಿ.. ಕೋಟಿ.. ಅಕ್ರಮ ಹಣ ಸೀಜ್
80 ಬೈಕ್‌ಗಳಿಗೆ ಪೆಟ್ರೋಲ್‌ಗೆ ದುಡ್ಡು ಕೊಡಲಿಲ್ಲ ಎಂದು ರೊಚ್ಚಿಗೆದ್ದ ಕಾರ್ಯಕರ್ತರು ಬಿಜೆಪಿ ಬಾವುಟಕ್ಕೆ (BJP Flag) ಬೆಂಕಿ ಹಚ್ಚಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡರ (Mirle Srinivas Gowda) ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಾಟಕ ಟಿಪ್ಪು ವಿರುದ್ಧ ಅಲ್ಲ, ತುಕ್ಡೆ ತುಕ್ಡೆ ಅನ್ನೋರ ವಿರುದ್ಧ- ಅಡ್ಡಂಡ ಕಾರ್ಯಪ್ಪ
ಬೆಳಗಾವಿ: ಮತ್ತೆ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ಮಾಡುತ್ತೇವೆ. ಎರಡು ಬಾರಿ ನಮಗೆ ಸ್ಪಷ್ಟ ಬಹುಮತ ಬಂದಿರಲಿಲ್ಲ. ಈಗ ಜನ ತೀರ್ಮಾನ ಮಾಡಿದ್ದಾರೆ. ನಾವು ಮಾಡಿದ ಸಾಧನೆ, ಕೆಲಸದ ಮೇಲೆ ಆತ್ಮವಿಶ್ವಾಸವಿದೆ, ನಾವು ಗೆದ್ದು ಬರುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತಕ್ಕೆ (Lokayukta) ಸದೃಢ ಶಕ್ತಿ ನೀಡಿದ್ದೇವೆ. ಇಂದು ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಪಕ್ಷ, ಪಂಗಡ, ಜಾತಿ, ಧರ್ಮ ಯಾವುದೂ ನೋಡದೆ ನಿಷ್ಪಕ್ಷಪಾತ ಕೆಲಸಕ್ಕೆ ಅವಕಾಶ ನೀಡಲಾಗಿದೆ. ನಿವೃತ್ತ ಜಡ್ಜ್ ಗಳು ಅದರ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ (Congress) ಪಕ್ಷದವರು ತಿಪ್ಪರಲಾಗ ಹಾಕಿದರೂ ಮೇ ತಿಂಗಳಿನಲ್ಲಿ ಬಿಜೆಪಿ (BJP) ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಮಾಡುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ಕಾಯುತ್ತಿದ್ದಾರೆ; ಜೆಡಿಎಸ್‌ಗೆ ಮತ ಕೊಟ್ರೆ ಕಾಂಗ್ರೆಸ್‌ಗೆ ಕೊಟ್ಟಂತೆ – ಅಮಿತ್ ಶಾ
ಬೆಳಗಾವಿ (Belagavi) ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆ (Vijay Sankalpa Yatra) ಆರಂಭಿಸಿದ್ದೇವೆ. ದೊಡ್ಡ ಸಮಾವೇಶ ಮಾಡಿ ರೋಡ್ ಶೋ ಮಾಡಿದ್ದೇವೆ. ಕಾಂಗ್ರೆಸ್‌ನವರು ಪ್ರಜಾಧ್ವನಿ (Prajadhwani) ಯಾತ್ರೆ ಶುರು ಮಾಡಿದ್ದಾರೆ. 60 ವರ್ಷ ಆಡಳಿತ ಮಾಡಿ ಪ್ರಜೆಗಳ ಧ್ವನಿ ಕಳೆದಿಟ್ಟವರು ಪ್ರಜಾಧ್ವನಿಗಾಗಿ ಓಡಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವುದರಿಂದ ನಿಮಗೆ ಯಾವುದೇ ಲಾಭವಾಗುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಜ್ಯಪಾಲರನ್ನು ಭೇಟಿಯಾದ ಕಾನ್ರಾಡ್ ಸಂಗ್ಮಾ – ಮೇಘಾಲಯದಲ್ಲಿ ಸರ್ಕಾರ ರಚನೆಗೆ ಮನವಿ
60 ವರ್ಷದ ಆಡಳಿತದಲ್ಲಿ ಏನು ಮಾಡಿದ್ದೀರಿ ಅದನ್ನು ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಆರೋಪ ಮಾಡುತ್ತಿದ್ದಾರೆ. ಆದರೆ ನಾವು ಯಾವತ್ತಿಗೂ ಇದಕ್ಕೆ ಅವಕಾಶ ಕೊಡಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) 9 ವರ್ಷಗಳ ಸಾಧನೆ, ದೇಶದ ಅಭಿವೃದ್ಧಿ, ಗೌರವ, ರಕ್ಷಣೆ ಬಗ್ಗೆ ಜನರಿಗೆ ತಿಳಿಸಿರುವುದಷ್ಟೇ ಅಲ್ಲದೇ ಯಡಿಯೂರಪ್ಪ (B.S.Yediyurappa) , ಬೊಮ್ಮಾಯಿ (Basavaraj Bommai) ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸವನ್ನೂ ತಿಳಿಸುತ್ತಿದ್ದೇವೆ. ನಾವು ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲಂಚ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ರಣದೀಪ್ ಸುರ್ಜೇವಾಲ
ಮೈಸೂರು: ನನಗೆ ಕಾಂಗ್ರೆಸ್ (Congress) ಪಕ್ಷದಿಂದ ಯಾವುದೇ ಆಫರ್‌ಗಳು ಬರಲಿಲ್ಲ. ಸಚಿವ ನಾರಾಯಣ ಗೌಡ (Narayana Gowda) ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ನನಗೆ ಆಫರ್ ಬರಲಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ (BJP) ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿ ಎಂದು ಜವಾಬ್ದಾರಿ ಕೊಟ್ಟಿದ್ದಾರೆ. ಆ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್ (S.T.Somashekhar) ಸ್ಪಷ್ಟನೆ ನೀಡಿದರು.
ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಒಂದು ತಿಂಗಳಿನಿಂದ ಬರದಿರುವುದಕ್ಕೆ ಚುನಾವಣೆ(Election) ಕಾರಣವಲ್ಲ. ಇಲಾಖೆಯ ಬೇರೆ ಬೇರೆ ಕಾರ್ಯಕ್ರಮಗಳ ಕಾರಣದಿಂದಾಗಿ ಬೇರೆ ಜಿಲ್ಲೆಗಳಿಗೆ ಓಡಾಡುತ್ತಿದ್ದೇನೆ. ಹೀಗಾಗಿ ಬರಲಿಲ್ಲ ಅಷ್ಟೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijay Sankalpa Yatra) ನನಗೆ ಬೆಂಗಳೂರು ಜವಾಬ್ದಾರಿ ಇದೆ. ಅಲ್ಲಿ ಆ ಕೆಲಸ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ- 8.12 ಕೋಟಿ ಹಣ ಸೀಜ್
ಬಿಜೆಪಿ ಶಾಸಕನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಪಕ್ಷಕ್ಕೆ ಯಾವುದೇ ಮುಜುಗರ ಇಲ್ಲ. ಲೋಕಾಯುಕ್ತ ಬಲಪಡಿಸಿದ ಕಾರಣಕ್ಕೆ ಇಂತಹ ದಾಳಿ ನಡೆದಿದೆ. ನನಗೆ ಇನ್ನೂ ಹೆಚ್ಚಿನ ವಿವರಗಳು ಬರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ದಾಖಲೆಯಲ್ಲವೇ?- ಸಿಎಂಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಟಿ