Tag: ವಿಜಯ ರಾಘವೇಂದ್ರ

  • ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ- ರಾಘಣ್ಣ

    ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ- ರಾಘಣ್ಣ

    ಹೋದವರು ಹೊರಟು ಹೋಗುತ್ತಾರೆ. ಆದರೆ ಇರೋರಿಗೆ ಕಷ್ಟ ನೋಡಿ ಎಂದು ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar)  ಅವರು ಭಾವುಕರಾಗಿದ್ದಾರೆ. ಸ್ಪಂದನಾ (Spandana) ನಿಧನನ ಬಗ್ಗೆ ನಟ ಸಂತಾಪ ಸೂಚಿಸಿದ್ದಾರೆ.

    ವಿಜಯ್ (Vijay Raghavendra) ಪತ್ನಿ ಸ್ಪಂದನಾ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ರಾಘವೇಂದ್ರ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದರು. ಹೋದವರು ಹೊರಟು ಹೋಗುತ್ತಾರೆ ಆದರೆ ಬದುಕುವವರಿಗೆ ಕಷ್ಟ ನೋಡಿ. ಅವರ ಕುಟುಂಬಕ್ಕೆ ಆಗಿದೆಲ್ಲ ಮರೆತು ಬಿಡಿ ಎಂದು ಹೇಳೋಕೆ ಆಗುತ್ತಾ? ಕೆಲವು ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ಕಡೆಯದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳಬೇಕು.

    ಈ ಪ್ರಪಂಚದಲ್ಲಿ ಈ ತರಹ ನಡೆಯುತ್ತದೆ. ಅವರು ನಮ್ಮ ಹತ್ತಿರದವರು ಆದಾಗ ನಮಗೆ ಕಷ್ಟವಾಗುತ್ತದೆ. ಪ್ರಪಂಚದಲ್ಲಿ ಎಲ್ಲಾ ವಯಸ್ಸಿನವರು ತೀರಿ ಹೋಗುತ್ತಾರೆ. ನಮ್ಮ ಮನೆಯಲ್ಲೇ ಹೀಗೆ ಆದಾಗ ಆ ಸಂಕಟ ತಡೆದುಕೊಳ್ಳೋಕೆ ಆಗೋದಿಲ್ಲ. ಅಪ್ಪು, ರಾಘು ಎಲ್ಲಾ ನಮ್ಮ ಜೊತೆ ನಮ್ಮ ಮನೆಯಲ್ಲಿ ಬೆಳೆದವರು. ಚಿಕ್ಕವಯಸ್ಸಿಗೆ ಸ್ಪಂದನಾ ಹೋಗಿದ್ದಾರೆ ಎಂದು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ರಾಘುನ ನೋಡೋಕೆ ತುಂಬಾ ಕಷ್ಟ ಆಗುತ್ತಿದೆ. ನನ್ನ ಹೆಸರೇ ಅವನಿಗೆ ಇದೆ. ನಾನು ದೊಡ್ಡ ರಾಘು, ಅವನಿಗೆ ಚಿಕ್ಕ ರಾಘು ಎಂದು ಕರೆಯುತ್ತಾರೆ. ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ? ನಮಗೇನು ತೋಚುತ್ತಿಲ್ಲ ಎಂದು ರಾಘವೇಂದ್ರ ರಾಜ್‌ಕುಮಾರ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ರಾಘು- ಸ್ಪಂದನಾ ಜೋಡಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ- ಸುಧಾರಾಣಿ

    ಬ್ಯಾಂಕಾಕ್‌ಗೆ (Bankok) ತೆರಳಿದ್ದಾಗ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. ಮಂಗಳವಾರ ರಾತ್ರಿ ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತಂದ ಮೃತದೇಹವನ್ನ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಘು- ಸ್ಪಂದನಾ ಜೋಡಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ- ಸುಧಾರಾಣಿ

    ರಾಘು- ಸ್ಪಂದನಾ ಜೋಡಿ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ- ಸುಧಾರಾಣಿ

    ಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಂತಿಮ ದರ್ಶನದಲ್ಲಿ ಸುಧಾರಾಣಿ (Sudhrani) ಭಾಗಿಯಾಗಿದ್ದಾರೆ. ಸ್ಪಂದನಾ ಸಾವು ನಿಜಕ್ಕೂ ಬೇಸರ ಸಂಗತಿ. ರಾಘು ಮತ್ತು ಸ್ಪಂದನಾ ಒಳ್ಳೆಯ ಸಂಸ್ಕೃತಿ ಇದ್ದ ದಂಪತಿಯಾಗಿದ್ದರು ಎಂದು ನಟಿ ಸುಧಾರಾಣಿ ಭಾವುಕರಾದರು.

    ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ನಟಿ ಸುಧಾರಾಣಿ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ರಾಘು- ಸ್ಪಂದನಾ ಒಳ್ಳೆಯ ಸಂಸ್ಕೃತಿ ಇದ್ದ ದಂಪತಿಗಳಾಗಿದ್ದರು. ಈ ಜೋಡಿಯ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಸ್ಪಂದನಾ ಮೃದು ಸ್ವಭಾವದ ಹುಡುಗಿಯಾದರು. ನಾವು ಎಲ್ಲೇ ಮೀಟ್ ಮಾಡಿದ್ರೂ ನಗು ನಗುತಾ ಮಾತಾಡ್ತಿದ್ದರು. ಇತ್ತೀಚೆಗೆ ಸಿಕ್ಕಿದ್ದರು. ಹೆಚ್ಚಿಗೆ ಮಾತಾಡೋಕೆ ಆಗಲಿಲ್ಲ. ಸ್ಪಂದನಾ ತುಂಬಾ ಒಳ್ಳೆಯ ಹುಡುಗಿ. ಏನು ಹೇಳಬೇಕೋ ಗೊತ್ತಾಗ್ತಿಲ್ಲ. ಮಗ ಶೌರ್ಯ ಇನ್ನೂ ಚಿಕ್ಕವನು. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಎಂದು ನಟಿ ಮಾತನಾಡಿದರು. ಇದನ್ನೂ ಓದಿ:ಹೃದಯಾಘಾತದಿಂದ ಹೆಸರಾಂತ ನಿರ್ದೇಶಕ ಸಿದ್ದಿಕಿ ನಿಧನ

    ಬ್ಯಾಂಕಾಕ್‌ಗೆ ತೆರಳಿದ್ದಾಗ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. ಮಂಗಳವಾರ ರಾತ್ರಿ ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತಂದ ಮೃತದೇಹವನ್ನ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಂದರ ಸಂಸಾರವನ್ನು ದೇವರು ಹಾಳು ಮಾಡಿಬಿಟ್ಟ: ಗಿರಿಜಾ ಲೋಕೇಶ್

    ಸುಂದರ ಸಂಸಾರವನ್ನು ದೇವರು ಹಾಳು ಮಾಡಿಬಿಟ್ಟ: ಗಿರಿಜಾ ಲೋಕೇಶ್

    ಬೆಂಗಳೂರು: ಒಂದು ಸುಂದರವಾದ ಸಂಸಾರವನ್ನು ದೇವರು ಹಾಳುಮಾಡಿ ಬಿಟ್ಟ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಕಣ್ಣೀರು ಹಾಕಿದ್ದಾರೆ.

    ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಂದರವಾದ ಸಂಸಾರವನ್ನ ದೇವರು ಹಾಳು ಮಾಡುಬಿಟ್ಟ. ಅವಳನ್ನ ನೋಡ್ತಿದ್ರೆ ಬದುಕೇ ಇದ್ದಾಳೆ ಅನಿಸುತ್ತೆ. ಸ್ಪಂದನಾ ಮುಖದಲ್ಲಿ ಕಳೆ ಹಾಗೇ ಇದೆ. ಈ ರೀತಿಯ ಸಾವು ಯಾರಿಗೂ ಬರಬಾರದು ಎಂದು ಭಾವುಕರಾದರು.

    ಬ್ಯಾಂಕಾಕ್‍ಗೆ (Bankok) ತೆರಳಿದ್ದಾಗ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. ಮಂಗಳವಾರ ರಾತ್ರಿ ಬ್ಯಾಂಕಾಕ್‍ನಿಂದ ಕಾರ್ಗೋ ವಿಮಾನದಲ್ಲಿ ತಂದ ಮೃತದೇಹವನ್ನ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ (Vijay Raghavendra) ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇದನ್ನೂ ಓದಿ: ತಾಯಿಯನ್ನು ಕರೆತಂದು ಪತ್ನಿಯ ಪಾರ್ಥಿವ ಶರೀರ ತೋರಿಸಿದ ವಿಜಯ ರಾಘವೇಂದ್ರ

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‍ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೃದಯಾಘಾತದಿಂದ ಹೆಸರಾಂತ ನಿರ್ದೇಶಕ ಸಿದ್ದಿಕಿ ನಿಧನ

    ಹೃದಯಾಘಾತದಿಂದ ಹೆಸರಾಂತ ನಿರ್ದೇಶಕ ಸಿದ್ದಿಕಿ ನಿಧನ

    ಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ, ನಿರ್ಮಾಪಕಿ ಸ್ಪಂದನಾ (Spandana) ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ದಿ ಸ್ಯಾಂಡಲ್‌ವುಡ್ ಗೆ ಶಾಕ್ ನೀಡಿದೆ. ಈ ರೀತಿಯ ಹೃದಯಾಘಾತಗಳು ಯಾಕೆ ಆಗುತ್ತಿವೆ ಎನ್ನುವ ಚರ್ಚೆ ಕೂಡ ನಡೆದಿದೆ. ಈ ಮಧ್ಯೆ ಮಲಯಾಳಂ ಸಿನಿಮಾ ರಂಗದಲ್ಲೂ ಹೃದಯಾಘಾತದಿಂದ ಸಾವು ಸಂಭವಿಸಿದೆ.

    ಮಲಯಾಳಂ (Malayalam) ಸಿನಿಮಾ ರಂಗದ ಖ್ಯಾತ ನಿರ್ದೇಶಕ (Director) ಸಿದ್ದಿಕಿ (Siddiqui) ತೀವ್ರ ಹೃದಯಾಘಾತದಿಂದ(Heart attack) ಮಂಗಳವಾರ ರಾತ್ರಿ ನಿಧನ ಹೊಂದಿದ್ದಾರೆ. ಇದನ್ನೂ ಓದಿ:ಮಧ್ಯರಾತ್ರಿಯಿಂದಲೇ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದ ಗಣ್ಯರು, ಅಭಿಮಾನಿಗಳು

    ಸೋಮವಾರ ಸಂಜೆ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಕ್ಸ್ ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಬೆಂಬಲದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 24 ಗಂಟೆ ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಿದ್ದಿಕಿ ನಿಧನ ಹೊಂದಿದ್ದಾರೆ.

    ಸಿದ್ದಿಕಿ ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ತೆಲುಗು, ಮಲಯಾಳಂ, ಹಿಂದಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಿದ್ದಿಕಿ, ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರ ಬಾಡಿಗಾರ್ಡ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದರು.

    ಕಾಬುಲಿವಾಲಾ, ಗಾಡ್ ಫಾದರ್, ರಾಮ್‍ ಜಿ ರಾವ್ ಸ್ಪೀಕಿಂಗ್, ಫ್ರೆಂಡ್ಸ್, ಹಿಟ್ಲರ್ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಿದ್ದಿಕಿ ಆಕ್ಷನ್ ಕಟ್ ಹೇಳಿದ್ದಾರೆ. ಸಿದ್ದಿಕಿ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಪ್ರಾರ್ಥನೆ ಈಡೇರಲಿಲ್ಲ. ಅಗಲಿದೆ ನಿರ್ದೇಶಕನಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಧ್ಯರಾತ್ರಿಯಿಂದಲೇ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದ ಗಣ್ಯರು, ಅಭಿಮಾನಿಗಳು

    ಮಧ್ಯರಾತ್ರಿಯಿಂದಲೇ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದ ಗಣ್ಯರು, ಅಭಿಮಾನಿಗಳು

    ಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅವರ ಪಾರ್ಥಿವ ಶರೀರ ಮಧ್ಯ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಅವರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ನಿವಾಸಕ್ಕೆ ಗಣ್ಯರು ಹಾಗೂ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಜಮಾಯಿಸಿದ್ದಾರೆ. ಇದನ್ನೂ ಓದಿ:ಪುತ್ರ ಶೌರ್ಯನನ್ನು ಬಿಟ್ಟು ಇಷ್ಟು ಬೇಗ ಸ್ಪಂದನಾ ಹೋಗಬಾರದಿತ್ತು: ಸಂಬಂಧಿಕರ ಆಕ್ರಂದನ

    ಬೆಂಗಳೂರು ವಿಮಾನ ನಿಲ್ದಾಣದಿಂದ ಪಾರ್ಥಿವ ಶರೀರ ನಿವಾಸಕ್ಕೆ ಆಗಮಿಸುತ್ತಿದ್ಷಂತೆಯೇ ನಟ ಶಿವರಾಜಕುಮಾರ್(Shivarajkumar) , ಪತ್ನಿ ಗೀತಾ ಶಿವರಾಜಕುಮಾರ್, ನಟಿ ಅನು ಪ್ರಭಾಕರ್, ಸಂಗೀತ ನಿರ್ದೇಶಕ ಗುರುಕಿರಣ್, ನಟ ವಿಕ್ರಮ್ ಸೂರಿ ಅನು ಪ್ರಭಾಕರ್‌ ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.

    ಪುತ್ರ ಶೌರ್ಯ ಜೊತೆ ಪತ್ನಿಯ ಮೃತದೇಹದೊಂದಿಗೆ ಆಗಮಿಸಿದ ವಿಜಯ ರಾಘವೇಂದ್ರ ಕಂಡು ಅಭಿಮಾನಿಗಳು ಕಣ್ಣೀರಿಟ್ಟರು. ಅಂತಿಮ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಜನಸಾಗರ ಹರಿದು ಬಂದಿತ್ತು. ಅನೇಕರು ಸ್ಪಂದನಾ ಕುಟುಂಬಕ್ಕೆ ಮತ್ತು ವಿಜಯ ರಾಘವೇಂದ್ರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

    ಸಂಬಂಧಿಕರ ಜೊತೆ ವಾರದ ಹಿಂದೆಯೇ ಬ್ಯಾಂಕಾಕ್ ಗೆ ತೆರಳಿದ್ದ ಸ್ಪಂದನಾಗೆ ಭಾನುವಾರವೇ ಹೃದಯಾಘಾತವಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಅವರು ಬ್ಯಾಕಾಂಕ್ ಆಸ್ಪತ್ರೆಯಲ್ಲೇ ನಿಧರಾಗಿದ್ದರು. ಅಲ್ಲಿನ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಮಂಗಳವಾರ ಸ್ಪಂದನಾ ಅವರ ಮೃತದೇಹವನ್ನು ನಿನ್ನೆ ರಾತ್ರಿ ಬೆಂಗಳೂರಿಗೆ ಕರೆತರಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುತ್ರ ಶೌರ್ಯನನ್ನು ಬಿಟ್ಟು ಇಷ್ಟು ಬೇಗ ಸ್ಪಂದನಾ ಹೋಗಬಾರದಿತ್ತು: ಸಂಬಂಧಿಕರ ಆಕ್ರಂದನ

    ಪುತ್ರ ಶೌರ್ಯನನ್ನು ಬಿಟ್ಟು ಇಷ್ಟು ಬೇಗ ಸ್ಪಂದನಾ ಹೋಗಬಾರದಿತ್ತು: ಸಂಬಂಧಿಕರ ಆಕ್ರಂದನ

    ಪುಟ್ಟ ಕಂದಮ್ಮ ಶೌರ್ಯನನ್ನು ಬಿಟ್ಟು ಇಷ್ಟು ಬೇಗ ಸ್ಪಂದನಾ (Spandana) ಹೋಗಬಾರದಿತ್ತು ಎಂದು ಕಣ್ಣೀರಿಟ್ಟವರ ಸಂಖ್ಯೆಯೇ ಹೆಚ್ಚಾಗಿತ್ತು. ಮೃತ ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದಿದ್ದ ಅವರ ಸಂಬಂಧಿಕರ ಶೌರ್ಯನನ್ನು ಕಂಡು ಕಣ್ಣೀರಾದರು. ಅಮ್ಮನ ಮೃತದೇಹದ ಪಕ್ಕದಲ್ಲೇ ನಿಂತಿದ್ದ ಶೌರ್ಯನನ್ನು ಕಂಡು ಅನೇಕರು ಭಾವುಕರಾದರು.

    ತಾಯಿಗೆ ಹೃದಯಾಘಾತವಾಗಿದೆ ಎಂದು ತಿಳಿಯುತ್ತಲೇ ತಂದೆ ವಿಜಯ ರಾಘವೇಂದ್ರ (Vijay Raghavendra) ಜೊತೆ ಶೌರ್ಯನೂ (Shourya) ಬ್ಯಾಂಕಾಕ್ ಗೆ ತೆರಳಿದ್ದರು. ಅಮ್ಮನ ಮೃತದೇಹದ ಜೊತೆ ಶೌರ್ಯ ಬೆಂಗಳೂರಿಗೆ ವಾಪಸ್‌ ಆದರು. ವಿಮಾನ ನಿಲ್ದಾಣದಿಂದ ಅಪ್ಪನ ಕೈ ಹಿಡಿದುಕೊಂಡೆ ತಾಯಿಯ ಮನೆಗೆ ಆಗಮಿಸಿದ್ದ ಪುಟಾಣಿ ಶೌರ್ಯ. ಇದನ್ನೂ ಓದಿ:ತಾಯಿಯನ್ನು ಕರೆತಂದು ಪತ್ನಿಯ ಪಾರ್ಥಿವ ಶರೀರ ತೋರಿಸಿದ ವಿಜಯ ರಾಘವೇಂದ್ರ

    ಪುತ್ರನ ಮೇಲೆ ಅತೀವ ಪ್ರೀತಿ ಹೊಂದಿದ್ದರು ಸ್ಪಂದನಾ. ಪತಿಯಂತಿಯೇ ಮಗನನ್ನು ಕೂಡ ಸಿನಿಮಾ ರಂಗದಲ್ಲಿ ಬೆಳಸಬೇಕು ಎಂದು ಕನಸು ಕಂಡಿದ್ದರು. ಮಗನನ್ನು ಹೀರೋ ಮಾಡಬೇಕು ಎನ್ನುವ ಉದ್ದೇಶದಿಂದಲೇ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಬಳಿ ತರಬೇತಿಗೂ ಕಳುಹಿಸುತ್ತಿದ್ದರು.

    ಬ್ಯಾಂಕಾಕ್‌ನಲ್ಲಿ ಸ್ಪಂದನಾಗೆ ಹೃದಯಾಘಾತವಾದಾಗ ನಾಗಾಭರಣ (Nagabharana) ಜೊತೆಯಲ್ಲೇ ಶೌರ್ಯ ತರಬೇತಿ ಪಡೆಯುತ್ತಿದ್ದರು. ಭಾನುವಾರ ಸಂಜೆ ನಾಗಾಭರಣ ಮನೆಯಿಂದ ವಿಜಯ ರಾಘವೇಂದ್ರ (Vijay Raghavendra) ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಯಿಯನ್ನು ಕರೆತಂದು ಪತ್ನಿಯ ಪಾರ್ಥಿವ ಶರೀರ ತೋರಿಸಿದ ವಿಜಯ ರಾಘವೇಂದ್ರ

    ತಾಯಿಯನ್ನು ಕರೆತಂದು ಪತ್ನಿಯ ಪಾರ್ಥಿವ ಶರೀರ ತೋರಿಸಿದ ವಿಜಯ ರಾಘವೇಂದ್ರ

    ನಿಜಕ್ಕೂ ಈ ದೃಶ್ಯ ಕರುಳು ಹಿಂಡುತ್ತಿತ್ತು. ವಾರದ ಹಿಂದೆಯಷ್ಟೇ ಸಂಭ್ರಮದಿಂದ ಮನೆ ಬಿಟ್ಟಿದ್ದ ಪತ್ನಿ ಸ್ಪಂದನಾ (Spandana) ಇದೀಗ ಶವವಾಗಿ ಮನೆಗೆ ವಾಪಸ್ಸಾಗಿದ್ದಾರೆ. ಬ್ಯಾಂಕಾಕ್ ಗೆ ಪ್ರವಾಸಕ್ಕೆಂದು ಹೋಗಿದ್ದ ಪತ್ನಿಯನ್ನು ಶವವಾಗಿ ಮನೆಗೆ ಕರೆತಂದಿದ್ದಾರೆ ವಿಜಯ ರಾಘವೇಂದ್ರ. ಪತ್ನಿಯ ಅಂತಿಮ ದರ್ಶನಕ್ಕೆ ವಿಜಯ ರಾಘವೇಂದ್ರ (Vijay Raghavendra)  ತಾಯಿಯನ್ನು ಕರೆತಂದರು. ಆ ದೃಶ್ಯ ಅಲ್ಲಿದ್ದವರ ಕಣ್ಣನ್ನು ಒದ್ದೆ ಮಾಡಿತು.

    ತಾಯಿಯನ್ನು ಕರೆತಂದ ಶ್ರೀಮುರಳಿ ಮತ್ತು ವಿಜಯ ರಾಘವೇಂದ್ರ, ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿಸಿದರು. ಸೊಸೆಯನ್ನು ಕಂಡ ಅತ್ತೆ ಕೆಲ ಕ್ಷಣ ಭಾವುಕರಾಗಿ ಕಣ್ಣೀರಿಟ್ಟರು. ಎರಡು ದಿನದಿಂದ ಸೊಸೆಯ ಮುಖ ನೋಡಲು ಕಾಯುತ್ತಿದ್ದ ಅತ್ತೆ, ಸೊಸೆಯ ಮುಖ ಕಾಣುತ್ತಿದ್ದಂತೆಯೇ ಕಣ್ಣಿರಿನ ಕಟ್ಟೆಯೇ ಒಡೆದಿತ್ತು. ಇದನ್ನೂ ಓದಿ:ಕುಟುಂಬಸ್ಥರಿಗೆ ಸ್ಪಂದನಾ ಮೃತದೇಹ ಹಸ್ತಾಂತರ – ಮಲ್ಲೇಶ್ವರಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

    ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಸ್ಪಂದನಾ ಅವರ ಮೃತದೇಹದ ಅಂತಿಮ ದರ್ಶನ ಪಡೆಯಲು ಅವರ ಮನೆ ಮುಂದೆ ಅಭಿಮಾನಿಗಳು ಸಾಗರವೇ ಹರಿದು ಬಂದಿತ್ತು. ಶಿವರಾಜಕುಮಾರ್ (Shivarajkumar), ಗೀತಾ ಶಿವರಾಜಕುಮಾರ್, ಅನು ಪ್ರಭಾಕರ್, ನಿರ್ಮಾಪಕ ಮುನಿರತ್ನ ಸೇರಿದಂತೆ ಅನೇಕ ಗಣ್ಯರು ಮಧ್ಯರಾತ್ರಿಯೇ ಬಂದು ಅಂತಿಮ ದರ್ಶನ ಪಡೆದರು.

    ಇಂದು ಮಧ್ಯಾಹ್ನ 1 ಗಂಟೆವರೆಗೂ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ಮನೆ ಮುಂದೆಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾವು ಯಾಕೆ ದೇವರಿಗೆ ಪೂಜೆ ಮಾಡಬೇಕು ಎಂದು ಸುಂದರ್‌ ರಾಜ್‌ ಭಾವುಕ

    ನಾವು ಯಾಕೆ ದೇವರಿಗೆ ಪೂಜೆ ಮಾಡಬೇಕು ಎಂದು ಸುಂದರ್‌ ರಾಜ್‌ ಭಾವುಕ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಸಲಿಗೆ ಆಗಿದ್ದೇನು ಚಿನ್ನಾರಿ ಮುತ್ತನ ಮನದರಸಿಗೆ..!?

    ಅಸಲಿಗೆ ಆಗಿದ್ದೇನು ಚಿನ್ನಾರಿ ಮುತ್ತನ ಮನದರಸಿಗೆ..!?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಟುಂಬಕ್ಕೆ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಪೂರ್ಣ

    ಕುಟುಂಬಕ್ಕೆ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಪೂರ್ಣ

    ಟ ವಿಜಯ ರಾಘವೇಂದ್ರ  (Vijaya Raghavendra) ಪತ್ನಿ ಸ್ಪಂದನಾ (Spandana) ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬರುತ್ತಿದ್ದಂತೆಯೇ ಮುಂದಿನ ಪ್ರಕ್ರಿಯೆಗಳು ಚುರುಕುಗೊಂಡಿದ್ದರಿಂದ ಇದೀಗ ಸ್ಪಂದನಾ ಅವರ ಮೃತದೇಹವನ್ನು ಬೆಂಗಳೂರಿಗೆ ತರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾತ್ರಿ 8.30ರ ಹೊತ್ತಿಗೆ ಮೃತದೇಹ ಹೊತ್ತ ವಿಮಾನ ಬ್ಯಾಂಕಾಕ್ (Bangkok) ನಿಂದ ಹೊರಟರೆ, ಬೆಂಗಳೂರಿಗೆ (Bangalore) 11.15ಕ್ಕೆ ವಿಮಾನ ಆಗಮನವಾಗಲಿದೆ.

    ಬೆಂಗಳೂರಿನಲ್ಲೂ ಅಂತಿಮ ದರ್ಶನಕ್ಕೆ ಸ್ಪಂದನಾ ಅವರ ತವರು ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಲ್ಲೇಶ್ವರಂ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇವತ್ತು ರಾತ್ರಿಯಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನ ಮಾಡಬಹುದಾಗಿದೆ.

    ಮರಣೋತ್ತರ ಪರೀಕ್ಷೆಯ ನಂತರದ ಪ್ರಕ್ರಿಯೆಗಳು ಏನಿದ್ದವು?

    ಕನ್ನಡದ ಹೆಸರಾಂತ ನಟ ವಿಜಯ ರಾಘವೇಂದ್ರ ಪತ್ನಿ ಹಾಗೂ ನಿರ್ಮಾಪಕಿ ಸ್ಪಂದನಾ ಸೋಮವಾರ ಬೆಳಗ್ಗೆ ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೂ ಈವರೆಗೂ ಅವರ ಮೃತದೇಹ ಭಾರತಕ್ಕೆ ತರಲಾಗಿಲ್ಲ. ಕಾರಣ, ವಿದೇಶದಲ್ಲಿ ಯಾವುದೇ ಪ್ರಜೆ ನಿಧನ ಹೊಂದಿದರೂ, ಅವರ ಮೃತದೇಹ ತರುವುದು ಸುಲಭವಲ್ಲ. ಅದರಲ್ಲೂ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ನಿಧನ ಹೊಂದಿದರೆ ಪ್ರಕ್ರಿಯೆ ಇನ್ನೂ ಕಠಿಣವಾಗಿರುತ್ತದೆ.

    ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪ್ರವಾಸಕ್ಕೆಂದು ಬಂದು ಮೃತರಾದ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ತಡವಾಗುವುದು ಸಾಮಾನ್ಯ. ಭಾರತದಂತೆಯೇ ಅಲ್ಲಿಯೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆ ವರದಿಯನ್ನು ಮೊದಲು ಪೊಲೀಸರು ಪಡೆದುಕೊಳ್ಳುತ್ತಾರೆ. ಸಾವಿಗೆ ಕಾರಣ ಏನು ಎನ್ನುವುದು ಮೊದಲು ಗೊತ್ತಾಗುವುದು ಅಲ್ಲಿನ ಪೊಲೀಸ್ ವ್ಯವಸ್ಥೆಗೆ.

    ಪೊಲೀಸರಿಗೆ ಮರಣೋತ್ತರ ವರದಿ ಬಂದ ತಕ್ಷಣವೇ ಪರಿಶೀಲಿಸಿ ಅದು ಸಹಜ ಸಾವು ಅಂದ ಬಳಿಕವಷ್ಟೇ ಕುಟುಂಬಸ್ಥರಿಗೆ ಮೃತದೇಹವನ್ನು ನೀಡಲಾಗುತ್ತದೆ. ನಂತರ ಕುಟುಂಬದವರು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುತ್ತಾರೆ. ಮರಣೋತ್ತರ ವರದಿ, ಮರಣ ಪ್ರಮಾಣ ಪತ್ರ ಹಾಗೂ ಪೊಲೀಸ್ ವರದಿಗಳನ್ನು ಪಡೆದುಕೊಂಡು ಆಯಾ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಬೇಕಾಗುತ್ತದೆ.

    ಸ್ಪಂದನಾ ಬ್ಯಾಂಕಾಕ್ ನಲ್ಲಿ ನಿಧನರಾಗಿದ್ದರಿಂದ ಅವರ ಕುಟುಂಬವು ಈ ಎಲ್ಲ ವರದಿಗಳನ್ನು ಪಡೆದುಕೊಂಡು ಬ್ಯಾಂಕಾಕ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕು. ರಾಯಭಾರಿ ಕಚೇರಿ ಮತ್ತು ಸ್ಥಳೀಯ ಆಡಳಿತ ಸೇರಿಕೊಂಡು ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಲಾಗುತ್ತದೆ.

    ಈ ಸಮಯದಲ್ಲಿ ಸ್ಪಂದನಾ ಅವರ ಪಾಸ್ ಪೋರ್ಟ್ ಮತ್ತೆ ವೀಸಾವನ್ನು ವಾಪಸ್‌ ಪಡೆದುಕೊಳ್ಳಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರವಷ್ಟೇ ಮೃತದೇಹವನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲು ಅನುಮತಿಸಲಾಗುತ್ತದೆ.

    ಏರ್‌ಪೋರ್ಟ್‌ಗೆ ಮೃತದೇಹ ತಂದ ತಕ್ಷಣವೇ ಅಲ್ಲೂ  ಹಲವು ಪ್ರಕ್ರಿಯೆಗಳು ನಡೆಯಲಿವೆ. ಅಲ್ಲಿಯೂ ಕೂಡ ರಾಯಭಾರಿ ಕಚೇರಿಯಿಂದ ಪಡೆದಿರುವಂತಹ ಎಲ್ಲ ವರದಿಗಳನ್ನೂ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡಬೇಕು. ಆನಂತರವಷ್ಟೇ ಮೃತದೇಹವನ್ನು ವಿಮಾನದಲ್ಲಿ ಸಾಗಿಸಲು ಪರವಾನಿಗೆ ದೊರೆಯುತ್ತದೆ. ಈ ಎಲ್ಲಾ ಕಾರಣದಿಂದಾಗಿ ಸ್ಪಂದನಾ ಅವರ ಮೃತ ದೇಹ ಬೆಂಗಳೂರಿಗೆ ತರಲು ತಡವಾಗುತ್ತಿದೆ.