Tag: ವಿಜಯ ರಾಘವೇಂದ್ರ

  • ಶ್ರೀರಂಗಪಟ್ಟಣದಲ್ಲಿ ನಾಳೆ ಸ್ಪಂದನಾ ಅಸ್ತಿ ವಿಸರ್ಜನೆ

    ಶ್ರೀರಂಗಪಟ್ಟಣದಲ್ಲಿ ನಾಳೆ ಸ್ಪಂದನಾ ಅಸ್ತಿ ವಿಸರ್ಜನೆ

    ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಅವರ (Vijay Raghavendra) ಪತ್ನಿ ಸ್ಪಂದನಾ (Spandana) ಅಸ್ತಿ ವಿಸರ್ಜನೆ ಕಾರ್ಯ ನಾಳೆ (ಆಗಸ್ಟ್ 11)ರಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ ಎಂದು ವಿಜಯ ಆಪ್ತರ ವಲಯದಿಂದ ಮಾಹಿತಿ ತಿಳಿಸಿದೆ.

    ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮನೆಯ ಬೆಳಕು ಸ್ಪಂದನಾ ವಿಜಯ ವಿಧಿವಶರಾಗಿ 5 ದಿನಗಳು ಕಳೆದಿದೆ. ಈಡಿಗ ಪದ್ಧತಿಯಂತೆ 3ನೇ ದಿನದ ಕಾರ್ಯ, ಅಸ್ತಿ ವಿಸರ್ಜನೆ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ. 11ನೇ ದಿನದ ಕಾರ್ಯ ಸಹ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ ಎನ್ನಲಾಗಿದೆ.

    ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಆಗಸ್ಟ್ 6ರಂದು ಭಾನುವಾರದಂದು ಹೃದಯಾಘಾತದಿಂದ ಸ್ಪಂದನಾ ವಿಧಿವಶರಾದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್‌ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್‌ ನೀಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದ ಸ್ಪಂದನಾ ಅಂತ್ಯಸಂಸ್ಕಾರ

    ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದ ಸ್ಪಂದನಾ ಅಂತ್ಯಸಂಸ್ಕಾರ

    ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅವರ ಅಂತ್ಯಕ್ರಿಯೆ ಇಂದು (ಆಗಸ್ಟ್ 9) ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು. ಈಡಿಗ ಪದ್ಧತಿಯಂತೆ ಸ್ಪಂದನಾ ಅವರ ಅಂತ್ಯಕ್ರಿಯೆ (Funeral) ಮಾಡಲಾಯಿತು. ಪತ್ನಿಯ ಅಂತಿಮ ವಿದಾಯದ ವೇಳೆ ವಿಜಯ ರಾಘವೇಂದ್ರ ಭಾವುಕರಾದರು. ಇದನ್ನೂ ಓದಿ:ಹರಿಶ್ಚಂದ್ರ ಘಾಟ್‍ನತ್ತ ಸ್ಪಂದನಾ ಪಾರ್ಥಿವ ಶರೀರದ ಮೆರವಣಿಗೆ

    ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಬ್ಯಾಂಕಾಕ್‌ನಿಂದ ಎಲ್ಲಾ ಪ್ರಕ್ರಿಯೆ ಮುಗಿಸಿ ನಿನ್ನೆ ತಡರಾತ್ರಿ ಸ್ಪಂದನಾ ಮೃತದೇಹ ತರಲಾಯಿತು. ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಯಲ್ಲಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಲಾಗಿತ್ತು. ಸಿನಿಮಾ ರಂಗದ ಗಣ್ಯರು, ಆಪ್ತರು, ರಾಜಕೀಯ ಗಣ್ಯರು ಸ್ಪಂದನಾರ ಅಂತಿಮ ದರ್ಶನ ಪಡೆದರು.

    ಮಧ್ಯಾಹ್ನ 3ರ ಬಳಿಕ ಮಲ್ಲೇಶ್ವರಂ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೂ ಸ್ಪಂದನಾರ ಅಂತಿಮ ಯಾತ್ರೆ ಮಾಡಲಾಯಿತು. ಬಳಿಕ ಈಡಿಗ ಸಂಪ್ರದಾಯದಂತೆ ಸ್ಪಂದನಾ ಅಂತ್ಯ ಸಂಸ್ಕಾರ ಮಾಡಲಾಗಿದೆ. ಪತಿ ರಾಘು- ಪುತ್ರ ಶೌರ್ಯ ಸ್ಪಂದನಾರ ಅಂತಿಮ ಕಾರ್ಯವನ್ನ ಸಲ್ಲಿಸಿದ್ದಾರೆ.

    ಕಳೆದ ಒಂದು ವಾರದಿಂದ ಸ್ಪಂದನಾ ಸೋದರ ಸಂಬಂಧಿಗಳ ಜೊತೆ ಬ್ಯಾಂಕಾಕ್ ಪ್ರವಾಸದಲ್ಲಿದ್ದರು. ಭಾನುವಾರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ರಾತ್ರಿ ಮಲಗಿದವರು ಎದ್ದೇಳಲಿಲ್ಲ ಎನ್ನುವ ಮಾಹಿತಿಯನ್ನು ನಟ ಶ್ರೀಮುರಳಿ ನೀಡಿದ್ದರು. ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್‌ಗೆ ತೆರಳಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಶ್ಚಂದ್ರ ಘಾಟ್‍ನತ್ತ ಸ್ಪಂದನಾ ಪಾರ್ಥಿವ ಶರೀರದ ಮೆರವಣಿಗೆ

    ಹರಿಶ್ಚಂದ್ರ ಘಾಟ್‍ನತ್ತ ಸ್ಪಂದನಾ ಪಾರ್ಥಿವ ಶರೀರದ ಮೆರವಣಿಗೆ

    ಹೃದಯಾಘಾತದಿಂದ ನಿಧನ ಹೊಂದಿರುವ ನಟ ವಿಜಯ ರಾಘವೇಂದ್ರ  (Vijaya Raghavendra) ಪತ್ನಿ ಸ್ಪಂದನಾ (Spandana) ಅವರ ಪಾರ್ಥಿವ ಶರೀರವನ್ನು ಹರಿಶ್ಚಂದ್ರ ಘಾಟ್‍ನತ್ತ ತೆಗೆದುಕೊಂಡು ಹೋಗಲಾಗುತ್ತಿದೆ.

    ಇಂದು ಮುಂಜಾನೆ 5.30ಯಿಂದ ಮಧ್ಯಾಹ್ನ 2.30ವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಂತೆಯೇ ಸಿನಿಮಾ ರಂಗದವರು, ರಾಜಕೀಯ ಗಣ್ಯರು ಸೇರಿದಂತೆ ಹಲವಾರು ಮಂದಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು. ಇಂದು ಸಂಜೆ 4 ಗಂಟೆಗೆ ಹರಿಶ್ಚಂದ್ರ ಘಾಟ್‍ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾರ್ಥಿವ ಶರೀರದ ಯಾತ್ರೆ ಮಲ್ಲೇಶ್ವರಂನಲ್ಲಿರುವ ಅವರ ಮನೆಯಿಂದ ಹರಿಶ್ಚಂದ್ರ ಘಾಟ್‍ನತ್ತ  ಹೊರಟಿದೆ.

    ದಾರಿಯುದ್ಧಕ್ಕೂ ಜನಸಾಗರವೇ ನಿಂತಿದ್ದು, ಪುಷ್ಪವೃಷ್ಠಿ ಸುರಿಯುತ್ತದೆ. ಕುಟುಂಬಸ್ಥರು ಕೂಡ ಕಣ್ಣೀರ ವಿದಾಯ ಹೇಳುತ್ತಿದ್ದಾರೆ. ಅಂಬುಲೆನ್ಸ್ ಮೂಲಕ ಸ್ಪಂದನಾ ಪಾರ್ಥಿವ ಶರೀರದ ಮೆರವಣಿಗೆ ಹೊರಟಿದೆ. ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂಬುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ 4 ಗಂಟೆಗೆ ಸ್ಪಂದನಾ ಅಂತ್ಯಸಂಸ್ಕಾರ

    ಭಾನುವಾರ ಬ್ಯಾಂಕಾಕ್‍ನಲ್ಲಿ ನಿಧನರಾಗಿರುವ ಸ್ಪಂದನಾ ಮೃತದೇಹವನ್ನು ಎರಡು ದಿನಗಳ ಬಳಿಕ ಬೆಂಗಳೂರಿಗೆ ವಿಮಾನದ ಮೂಲಕ ತರಲಾಯಿತು. ಅಲ್ಲಿಂದ ನೇರವಾಗಿ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಗೆ ತಂದು ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫಿಟ್ ಆಗಲು ಜಿಮ್‌ಗೆ ಸೇರಿದ್ರು ಸ್ಪಂದನಾ- ಜಿಮ್ ಟ್ರೈನರ್ ಸ್ಪಷ್ಟನೆ

    ಫಿಟ್ ಆಗಲು ಜಿಮ್‌ಗೆ ಸೇರಿದ್ರು ಸ್ಪಂದನಾ- ಜಿಮ್ ಟ್ರೈನರ್ ಸ್ಪಷ್ಟನೆ

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಈ ಆಘಾತಕಾರಿ ಘಟನೆ ನಡೆಯುವ 2 ತಿಂಗಳ ಮುಂಚೆ ಬೆಂಗಳೂರಿನ ಸಹಕಾರ ನಗರದ ಜಿಮ್‌ಗೆ ಜಾಯಿನ್ ಆಗಿದ್ದರು. ಈ ಬಗ್ಗೆ ಸ್ಪಂದನಾ ಜಿಮ್ ಟ್ರೈನರ್ ನರಸಿಂಹ ಅವರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ 4 ಗಂಟೆಗೆ ಸ್ಪಂದನಾ ಅಂತ್ಯಸಂಸ್ಕಾರ

    ಸ್ಪಂದನಾ ಅವರು 2 ತಿಂಗಳ ಹಿಂದೆಯಷ್ಟೇ ಜಿಮ್‌ಗೆ ಸೇರಿದ್ದರು. ಅವರ ಪರ್ಸನಲ್ ಜಿಮ್ ಟ್ರೈನರ್ ಆಗಿದ್ದ ನರಸಿಂಹ ಅವರು ಸ್ಪಂದನಾ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಪಂದನಾ ಅವರು ಜಿಮ್‌ಗೆ ಜಾಯಿನ್ ಆಗುವ ಮುನ್ನವೇ ಅವರಿಗೆ ಲೋ ಬಿಪಿ ಇತ್ತು ಎಂಬುದಾಗಿ ಜಿಮ್ ಟ್ರೈನರ್ ನರಸಿಂಹ ಹೇಳಿದ್ದಾರೆ. ಹಾಗಾಗಿ ಅವರ ಹೆಲ್ತ್ ಇಶ್ಯೂ ನೋಡಿಕೊಂಡೆ ಟ್ರೈನಿಂಗ್ ನೀಡುತ್ತಿದ್ದೆ ಎಂದು ಜಿಮ್ ಟ್ರೈನರ್ (Jim Trainer) ನರಸಿಂಹಮೂರ್ತಿ ಮಾತನಾಡಿದ್ದಾರೆ.

    16 ಕೆಜಿ ತೂಕ ಇಳಿಸಿಕೊಂಡಿದ್ದ ಸ್ಪಂದನಾ ಫಿಟ್ ಆಗಲಿಕ್ಕೆ ಜಿಮ್‌ಗೆ ಜಾಯಿನ್ ಆದರು. ಎರಡು ತಿಂಗಳ ಹಿಂದೆ ಜಾಯಿನ್ ಆಗಿ 15 ದಿನ ಮಾತ್ರ ಜಿಮ್‌ಗೆ ಬಂದಿದ್ದರು. ಜಿಮ್‌ಗೆ ಜಾಯಿನ್ ಆಗೋಕು ಮುಂಚೆ ಕೆಲವೊಂದು ಮಾಹಿತಿಯನ್ನ ತೆಗೆದುಕೊಳ್ಳುತ್ತೇವೆ. ಈ ಮೊದಲು ವರ್ಕೌಟ್ ಎಲ್ಲಿ ಮಾಡ್ತಾ ಇದ್ರು, ಅಲ್ಲಿ ಬಿಟ್ಟು ಎಷ್ಟು ದಿನ ಆಯ್ತು ಅಂತಾ ಮಾಹಿತಿ ತೆಗೆದುಕೊಳ್ಳುತ್ತೇವೆ. ಆರೋಗ್ಯದ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಏನಾದ್ರು ಆರೋಗ್ಯ ಸಮಸ್ಯೆ ಇದೆಯಾ, ಏನಾದ್ರು ಇಂಜುರಿಸ್ ಇತ್ತಾ ಎಂಬ ಮಾಹಿತಿ ಪಡೆದುಕೊಳ್ಳುತ್ತೇವೆ.

    ನನಗೆ ಲೋ ಬಿಪಿ ಇದೆ ಅಂತಾ ಸ್ಪಂದನಾ ಹೇಳಿದ್ದರು. ವಿಜಯ್ ರಾಘವೇಂದ್ರ ದಂಪತಿ ಇಬ್ಬರು ನಮ್ಮ ಜಿಮ್‌ಗೆ ಬರ್ತಾ ಇದ್ದರು. ಇಬ್ಬರು ಜೊತೆಯಲ್ಲೇ ವರ್ಕೌಟ್ ಮಾಡ್ತಾ ಇದ್ದರು. ನಮ್ಮ ಜಿಮ್‌ಗೆ ಬರೋಕು ಮುಂಚೆ ಅವರು ಯಾವ ಜಿಮ್‌ಗೆ ಹೋಗಿದ್ರು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ 16 ಕೆಜಿ ಸಣ್ಣ ಆಗಿದ್ರು. ಸಣ್ಣ ಆದ ಮೇಲೆ ಸ್ಕಿನ್ ಲೂಸ್ ಇತ್ತು ಟೈಟ್ ಆಗಬೇಕು ಅಂತಾ ವರ್ಕೌಟ್ ಮಾಡ್ತಾ ಇದ್ದರು. ಲೋ ಬಿಪಿ ಇದೆ ಅಂತಾ ಗೊತ್ತಾದ ಮೇಲೆ ಯಾವುದೇ ವರ್ಕೌಟ್ ಮಾಡಿಸೋಕೆ ಪ್ಲ್ಯಾನ್ ಮಾಡಿರಲಿಲ್ಲ. ವಿಜಯ್ ರಾಘವೇಂದ್ರ ಸರ್, ಸ್ಪಂದನಾ ಮೇಡಂ ಪಿಟಿ ಸ್ಟಾರ್ಟ್ ಮಾಡಿಸಿದ್ರು. ನಾವು ಪಿಟಿ ಸ್ಟಾರ್ಟ್ ಮಾಡಿಸೋಣ ಅಂತಾ ಪ್ಲ್ಯಾನ್ ಮಾಡಿದ್ವಿ. ಅಷ್ಟರಲ್ಲಿ ಟ್ರಿಪ್ ಇದೆ ಮುಗಿಸಿಕೊಂಡು ಬರುತ್ತೇವೆ ಅಂತಾ ಸ್ಪಂದನಾ ಹೇಳಿದ್ದರು. ಲಾಸ್ಟ್ 15 ದಿನದ ಹಿಂದೆ ಅಷ್ಟೇ ಜಿಮ್‌ಗೆ ಬಂದಿದ್ರು ಆಮೇಲೆ ಬಂದಿರಲಿಲ್ಲ. ಸಡನ್ ಆಗಿ ಈ ರೀತಿ ಆಗೋದಕ್ಕೆ ಕಾರಣ ಏನು ಗೊತ್ತಿಲ್ಲ. ಅವರ ಲೈಫ್ ಸ್ಟೈಲ್ ನಮಗೆ ಗೊತ್ತಿಲ್ಲ. ಅವರ ಕುಟುಂಬಕ್ಕೆ ದುಃಖವನ್ನ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಜಿಮ್ ಟ್ರೈನರ್ ನರಸಿಂಹ ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ 4 ಗಂಟೆಗೆ ಸ್ಪಂದನಾ ಅಂತ್ಯಸಂಸ್ಕಾರ

    ಹರಿಶ್ಚಂದ್ರ ಘಾಟ್‌ನಲ್ಲಿ ಸಂಜೆ 4 ಗಂಟೆಗೆ ಸ್ಪಂದನಾ ಅಂತ್ಯಸಂಸ್ಕಾರ

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಅವರ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಇಂದು ಸಂಜೆ (ಆಗಸ್ಟ್‌ 9) 4 ಗಂಟೆಗೆ ಸ್ಪಂದನಾ ಕಡೆಯ ಹಂತದ ವಿಧಿ ವಿಧಾನ ಪದ್ಧತಿ ನಡೆಯಲಿದೆ. ಈಡಿಗ ಪದ್ಧತಿಯಂತೆ ಅಂತ್ಯಸಂಸ್ಕಾರ ನಡೆಯಲಿದೆ.

    ಸ್ಪಂದನಾ ತಂದೆ ಬಿ.ಕೆ ಶಿವರಾಂ ಅವರ ಮನೆಯಲ್ಲಿ ಸ್ಪಂದನಾ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು. ಕನ್ನಡದ ಚಿತ್ರರಂಗದ ಹಲವು ಸೆಲೆಬ್ರಿಟಿಗಳು, ಆಪ್ತರು, ರಾಜಕೀಯ ಗಣ್ಯರು, ಅಭಿಮಾನಿಗಳು ಬಂದು ಸ್ಪಂದನಾಗೆ ಅಂತಿಮ ನಮನ ಸಲ್ಲಿಸಿದ್ದರು. ಇದೀಗ ಮಧ್ಯಾಹ್ನ 3 ಗಂಟೆಗೆ ಅಂತಿಮ ಯಾತ್ರೆ ಶುರುವಾಗಲಿದೆ. ಬಳಿಕ ಸಂಜೆ 4ಕ್ಕೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇದನ್ನೂ ಓದಿ:ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್

    ಕಳೆದ ವಾರ ಕಾಲೇಜು ಸ್ನೇಹಿತರೊಂದಿಗೆ ಥಾಯ್‌ಲ್ಯಾಂಡ್‌ಗೆ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಭಾನುವಾರ ಶಾಪಿಂಗ್‌ಗೆ ಹೊರಟಿದ್ದರು. ಸಂಜೆ ಶಾಪಿಂಗ್ ಮುಗಿಸಿ ಹೋಟೆಲ್ ನತ್ತ ಹೋಗ್ಬೇಕಾದ್ರೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್

    ವಿಜಯ ರಾಘವೇಂದ್ರಗೆ ಧೈರ್ಯ ತುಂಬಿದ ಯಶ್

    ಟ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಅಂತಿಮ ದರ್ಶನದಲ್ಲಿ ಯಶ್ (Yash)  ಭಾಗಿಯಾಗಿದ್ದಾರೆ. ನೋವಿನಲ್ಲಿರೋ ಸ್ನೇಹಿತ ವಿಜಯಗೆ ಯಶ್ ತಬ್ಬಿ ಧೈರ್ಯ ತುಂಬಿದ್ದಾರೆ.

    ಬಿ.ಕೆ ಶಿವರಾಂ ಅವರ ನಿವಾಸಕ್ಕೆ ಯಶ್ ಭೇಟಿ ನೀಡಿದ್ದಾರೆ. ಕಣ್ಣೀರ ಕಡಲಲ್ಲಿರೋ ವಿಜಯಗೆ ಯಶ್ ಧೈರ್ಯ ತುಂಬಿದ್ದಾರೆ. ಸ್ನೇಹಿತನಿಗೆ ಶಕ್ತಿ ತುಂಬುವ ಮಾತುಗಳನ್ನಾಡಿದ್ದಾರೆ. ರಾಘು ಸಂಕಷ್ಟದ ಸಮಯದಲ್ಲಿ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ:ಸ್ಪಂದನಾ ಸಾವಿನ ಬಗ್ಗೆ ಅಪಪ್ರಚಾರ ಮಾಡಬೇಡಿ- ಮೇಘನಾ ರಾಜ್

    ವಿಜಯ ರಾಘವೇಂದ್ರ ಸ್ನೇಹಿತರಾದ ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ, ರಕ್ಷಿತಾ ಪ್ರೇಮ್, ಅನುಶ್ರೀ, ಡಿಕೆಡಿ ಡ್ಯಾನ್ಸ್ ಟೀಮ್ ಸ್ಪಂದನಾ ಅಂತಿಮ ದರ್ಶನದಲ್ಲಿ ಭಾಗಿಯಾಗಿ ನೋವಿನಲ್ಲಿರೋ ವಿಜಯಗೆ ಸಾಂತ್ವಾನ ಹೇಳಿದ್ದಾರೆ. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಪ್ತರಿಗೆ, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.

    ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 3:30ಕ್ಕೆ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ ಸಾವಿನ ಬಗ್ಗೆ ಅಪಪ್ರಚಾರ ಮಾಡಬೇಡಿ- ಮೇಘನಾ ರಾಜ್

    ಸ್ಪಂದನಾ ಸಾವಿನ ಬಗ್ಗೆ ಅಪಪ್ರಚಾರ ಮಾಡಬೇಡಿ- ಮೇಘನಾ ರಾಜ್

    ರಾಘು- ಸ್ಪಂದನಾ ಅನೋನ್ಯವಾಗಿ ಬದುಕುತ್ತಿದ್ದರು. ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ನಟಿ ಮೇಘನಾ ರಾಜ್ (Meghanaraj) ಮನವಿ ಮಾಡಿದ್ದಾರೆ.

    ಸ್ಪಂದನಾ(Spandana) ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ನಟಿ ಮೇಘನಾ ಮಾತನಾಡಿದ್ದಾರೆ. ರಾಘು-ಸ್ಪಂದನಾ ನಮಗೆ ಬಹಳ ಆತ್ಮೀಯರಾಗಿದ್ದರು. ಏನು ನಡೆದಿದೆ, ಏನು ಆಗಿದೆ ಅನ್ನೋದು ಅವರ ಕುಟುಂಬಕ್ಕೆ ತಿಳಿದಿರುತ್ತದೆ. ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ. ಆಕೆಗೆ ಮರ್ಯಾದೆ ಕೊಡಿ. ಸೋಷಿಯಲ್ ಮೀಡಿಯಾದಲ್ಲಿ ಇಲ್ಲದೇ ಇರುವ ಸುದ್ದಿಗಳನ್ನ ಹರಡಬೇಡಿ. ಅವರ ಕುಟುಂಬಕ್ಕೆ ಸ್ಪೆಸ್ ಕೊಡಿ.

    ರಾಘು- ಸ್ಪಂದನಾ ನನ್ನ ಫಾಮಿಲಿ ಇದ್ದಂತೆ. ನಾವು ಇರೋ ಪರಿಸ್ಥಿತಿಯಲ್ಲಿ ಇನ್ನೊಂದು ಕುಟುಂಬನ ಹಾಗೇ ನೋಡೋಕೆ ಆಗಲ್ಲ. ನಮ್ಮ ಕುಟುಂಬನೇ ಅವರು. ನನ್ನ ಕುಟುಂಬಕ್ಕೆ ಆಗಿರೋ ನೋವಿದು ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ- ವಿನೋದ್ ರಾಜ್ ಭಾವುಕ

    ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ- ವಿನೋದ್ ರಾಜ್ ಭಾವುಕ

    ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ- ವಿನೋದ್ ರಾಜ್ ಭಾವುಕ

    ಚಿಕ್ಕ ವಯಸ್ಸಿನಲ್ಲಿ ಸ್ಪಂದನಾಗೆ ಹೀಗೆ ಆಗಬಾರದಿತ್ತು. ವಿಧಿಯ ಲೀಲೆ ಇದು, ನನಗೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ನಟ ವಿನೋದ್ ರಾಜ್ (Vinod Raj) ಭಾವುಕರಾಗಿದ್ದಾರೆ. ಇದನ್ನೂ ಓದಿ:ಸ್ಪಂದನಾ ಅಂತಿಮ ದರ್ಶನ: ಗಳಗಳನೆ ಅತ್ತ ಅಶ್ವಿನಿ ಪುನೀತ್‌ರಾಜ್‌ಕುಮಾರ್

    ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ವಿನೋದ್ ರಾಜ್ (Vinod Raj) ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಕಾಲಿಕ ಮರಣದ ಬಗ್ಗೆ ನಾವು ಏನೂ ಮಾತನಾಡೋಕೆ ಆಗಲ್ಲ. ವಿಜಯ ರಾಘವೇಂದ್ರ ನೊಂದಿರೋದನ್ನ ನೋಡಿದಾಗ ಅವರಿಗೆ ದೇವರು ಅಪಾರವಾದ ಶಕ್ತಿ ಕೊಟ್ಟು ಕಾಪಾಡಲಿ. ನಾವು ಎಷ್ಟೇ ಧೈರ್ಯ ಹೇಳಿದ್ರು ಸಾಲಲ್ಲ. ಅವರೇ ಅವರ ಗಾಯವನ್ನ ಸರಿ ಮಾಡಿಕೊಳ್ಳಬೇಕಾಗುತ್ತದೆ.

    ಯಾರ ಮಾತಿನಿಂದಲೂ ಆರುವಂತಹ ನೋವಲ್ಲ ಅದು. ವಿಧಿ ಆಟನೋ ದೇವರೋ ಸ್ಪಂದನಾ ಸ್ಥಿತಿ ನೋಡಿದ್ರೆ ಏನು ಹೇಳೋಕೆ ಆಗುತ್ತಿಲ್ಲ. ವಿಚಿತ್ರ ಇದು ನಮಗೆ ತಲೆ ಕೆಟ್ಟು ಹೋಗುತ್ತಿದೆ. ಈಗ ನಾನು ಮತ್ತು ಅಮ್ಮಾ ಕೂಡ ಟೆಸ್ಟ್ ಮಾಡಿಕೊಂಡಿದ್ವಿ. ನಾನು ಹೋದರೆ ಕೂಡ ನನ್ನ ತಾಯಿನ ನೋಡಿಕೊಳ್ಳೋಕೆ ಯಾರು ಇಲ್ಲ. ದೇವರನ್ನ ಯಾವ ರೀತಿ ಕೈ ಮುಗಿಬೇಕು ಅಂತಾ ನಮಗೆ ಗೊತ್ತಾಗುತ್ತಿಲ್ಲ. ದೇವರಿಗೆ ಕನ್ನಡದವರ ಮೇಲೆ ಕೋಪ ಬಂದಿದ್ಯಾ ಅಂತಾ ನಮಗೆ ಅರ್ಥ ಆಗುತ್ತಿಲ್ಲ. ದೇವರನ್ನ ಪೂಜೆ ಮಾಡಿದಕ್ಕೆ ಈ ಪ್ರತಿಫಲ ಕೊಟ್ರಾ ತಿಳಿಯುತ್ತಿಲ್ಲ.

    ಅಪ್ಪು ನಿಧನರಾಗಿ 2 ವರ್ಷ ಆಯ್ತು. ಅವರ ಕುಟುಂಬದಲ್ಲಿ ಅವರ ಜನ್ಮ ಇರೋವರೆಗೂ ಅಪ್ಪು ಕಳೆದುಕೊಂಡ ನೋವು ಮರೆಯೋಕೆ ಆಗಲ್ಲ. ಅವರಿಗೆ ದೈವಿಕ ಕಳೆಯಿತ್ತು ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ.

    ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ (Vijay Raghavendra) ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ ಅಂತಿಮ ದರ್ಶನ: ಗಳಗಳನೆ ಅತ್ತ ಅಶ್ವಿನಿ ಪುನೀತ್‌ರಾಜ್‌ಕುಮಾರ್

    ಸ್ಪಂದನಾ ಅಂತಿಮ ದರ್ಶನ: ಗಳಗಳನೆ ಅತ್ತ ಅಶ್ವಿನಿ ಪುನೀತ್‌ರಾಜ್‌ಕುಮಾರ್

    ಸ್ಪಂದನಾ (Spandana) ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಪಂದನಾ ಮೃತದೇಹ ನೋಡ್ತಿದಂತೆ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ (Ashwini Puneeth Rajkumar) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಪ್ಪು ಪತ್ನಿ ಮತ್ತು ಪುತ್ರಿಯರು ಸ್ಪಂದನಾ ನಿಧನಕ್ಕೆ ಕಣ್ಣೀರಿಟ್ಟಿದ್ದಾರೆ.

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ ನಿಧನ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಸ್ಪಂದನಾ ಅಂತಿಮ ದರ್ಶನದಲ್ಲಿ ಪುನೀತ್ ಪತ್ನಿ, ವಿನಯ್, ಯುವರಾಜ್‌ಕುಮಾರ್, ಪುನೀತ್ ಮಕ್ಕಳಾದ ದೃತಿ ಮತ್ತು ವಂದನಾ ಭಾಗಿಯಾಗಿದ್ದಾರೆ. ಬಿಕ್ಕಿ ಬಿಕ್ಕಿ ಅಳ್ತಿರೋ ಅಶ್ವಿನಿ ಮತ್ತು ಅಪ್ಪು ಮಕ್ಕಳಿಗೆ ಶ್ರೀಮುರಳಿ ಸಂತೈಸಿದ್ದಾರೆ. ಇದನ್ನೂ ಓದಿ:ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ತ್ನಿ ಸ್ಪಂದನಾ (Spandana) ನಿಧನ ವಿಜಯ ರಾಘವೇಂದ್ರಗೆ (Vijay Raghavendra) ಬರ ಸಿಡಿಲು ಬಡಿದಂತೆ ಆಗಿದೆ. ಅಂತಿಮ ವಿದಾಯಕ್ಕೆ ಕುಟುಂಬ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಣ್ಣೀರ ಕಡಲಲ್ಲಿ ಇರೋ ಅಣ್ಣ ವಿಜಯ್‌ಗೆ ಶ್ರೀಮುರಳಿ (Srimurali) ಸಂತೈಸುತ್ತಿದ್ದಾರೆ.

    ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಒಂದರ ಹಿಂದೆ ಒಂದು ಆಘಾತ ಎದುರಾಗಿದೆ. ಅಪ್ಪು ನಿಧನದ ನಂತರ ಸ್ಪಂದನಾ ಸಾವು ಅರಗಿಸಿಕೊಳ್ಳದ ಆಘಾತವಾಗಿದೆ. ಜೋಡಿ ಹಕ್ಕಿಯಂತೆ ಇದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಜೋಡಿಯೇ ಮೇಲೆ ಅದು ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಎಂದು ವಿಜಯ ಆಪ್ತರು ಭಾವುಕರಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಅಣ್ಣನ ಜೊತೆಯಾಗಿ ಶ್ರೀಮುರಳಿ ನಿಂತಿದ್ದಾರೆ. ಇದನ್ನೂ ಓದಿ:ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ- ರಾಘಣ್ಣ

    ಮಗ ಶೌರ್ಯನಿಗೆ ತಂದೆ ಮತ್ತು ಚಿಕ್ಕಪ್ಪ ಶ್ರೀಮುರಳಿ ಸಂತೈಸುತ್ತಿದ್ದಾರೆ. ಸ್ಪಂದನಾ ಇಲ್ಲದೇ ವಿಜಯ ಮುಂದೆ ಬದುಕಿನ ರಥವನ್ನ ಹೇಗೆ ನಡೆಸುತ್ತಾರೆ ಎಂಬುದು ಎಲ್ಲರಿಗೂ ಪ್ರಶ್ನೆ ಮೂಡಿದೆ.