Tag: ವಿಜಯ ಮಲ್ಯ

  • ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

    ನವದೆಹಲಿ: 2015-16ರ ಅವಧಿಯಲ್ಲಿ ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್ ನಗದು ಕೊರತೆ ಎದುರಿಸುತ್ತಿದ್ದ ಸಮಯದಲ್ಲೇ ಉದ್ಯಮಿ ವಿಜಯ ಮಲ್ಯ (Vijaya Mallya) ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ 330 ಕೋಟಿ ರೂ. (ಬ್ರಿಟನ್ ನಲ್ಲಿ 80 ಕೋಟಿ ರೂ., ಫ್ರಾನ್ಸ್‌ನಲ್ಲಿ 250 ಕೋಟಿ ರೂ. ಮೌಲ್ಯದ ಆಸ್ತಿ) ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (CBI) ಮುಂಬೈ ಸಿಬಿಐ ವಿಶೇಷ ನ್ಯಾಯಾಲಯಕ್ಕೆ (CBI Speical Court) ಸಲ್ಲಿಸಿರುವ 3ನೇ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

    ಅಷ್ಟೇ ಅಲ್ಲದೇ 2017ರಲ್ಲಿ ವಿಜಯ ಮಲ್ಯ ಅವರ ಆಸ್ತಿ ಮೌಲ್ಯ 7,500 ಕೋಟಿ ರೂ. ಎಂದು ಸ್ವಿಸ್ ಬ್ಯಾಂಕ್ (Swiss Bank) ಅಂದಾಜಿಸಿದ್ದು, ಬ್ಯಾಂಕ್‌ಗಳ ಸಾಲ ತೀರಿಸಲು ಬೇಕಾದಷ್ಟು ಹಣ ಅವರ ಬಳಿ ಇದೆ. ಯುಕೆನಲ್ಲಿ ಸುಮಾರು 44 ಮದ್ಯ ಘಟಕಗಳನ್ನ ಅವರು ಸ್ಥಾಪಿಸಿದ್ದರು. ಆ ಮೂಲಕ ಅವರು ಯುರೋಪಿನಾದ್ಯಂತ ಹಲವಾರು ಕಡೆ ಹೂಡಿಕೆ ಮತ್ತು ಆಸ್ತಿ ಖರೀದಿಸಿದ್ದಾರೆ ಎಂದು ಹೇಳಿದೆ.

    900 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಐಡಿಬಿಐ ಬ್ಯಾಂಕ್ (ADBI Bank) -ಕಿಂಗ್‌ಫಿಷರ್ ಏರ್‌ಲೈನ್ಸ್ (Kingfisher Airlines) ಸಾಲ ವಂಚನೆ ಪ್ರಕರಣದಲ್ಲಿ ವಿಜಯ ಮಲ್ಯ ಆರೋಪಿಯಾಗಿದ್ದು, ಈ ಸಂಬಂಧ ಸಿಬಿಐ ಇತ್ತೀಚೆಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!

    ಸಿಬಿಐ ಹಿಂದಿನ ಚಾರ್ಜ್‌ಶೀಟ್‌ಗಳಲ್ಲಿ ಹೆಸರಿಸಲಾದ ಎಲ್ಲಾ 11 ಆರೋಪಿಗಳ ಜೊತೆಗೆ, ತನಿಖಾ ಸಂಸ್ಥೆ ತನ್ನ ಇತ್ತೀಚಿನ ಪೂರಕ ಆರೋಪ ಪಟ್ಟಿಯಲ್ಲಿ ಐಡಿಬಿಐ ಬ್ಯಾಂಕ್‌ನ ಮಾಜಿ ಜನರಲ್ ಮ್ಯಾನೇಜರ್ ಬುದ್ಧದೇವ್ ದಾಸ್‌ಗುಪ್ತಾ ಅವರ ಹೆಸರನ್ನು ಸೇರಿಸಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಕಾರ್ಯಾಚರಣೆ – ದಾಖಲೆ ಇಲ್ಲದ 9 ಕೆಜಿ ಚಿನ್ನ ಜಪ್ತಿ

    2009ರ ಅಕ್ಟೋಬರ್‌ನಲ್ಲಿ 150 ಕೋಟಿ ರೂ. ಅಲ್ಪಾವಧಿ ಸಾಲ ಮಂಜೂರಾತಿ ಮತ್ತು ವಿತರಣೆಗಾಗಿ ದಾಸ್‌ಗುಪ್ತಾ ಅವರು ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡಿದ್ದಾರೆ. ವಿಜಯ ಮಲ್ಯ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಏರ್‌ಲೈನ್ಸ್‌ಗೆ ಸಾಲ ನೀಡುವ ವಿಚಾರದಲ್ಲಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

  • ವಿಡಿಯೋ: ಕ್ರಿಕೆಟ್ ನೋಡಲು ಬಂದ ಮಲ್ಯಗೆ ಕಳ್ಳ… ಕಳ್ಳ… ಎಂದು ಕೂಗಿದ ಜನ

    ವಿಡಿಯೋ: ಕ್ರಿಕೆಟ್ ನೋಡಲು ಬಂದ ಮಲ್ಯಗೆ ಕಳ್ಳ… ಕಳ್ಳ… ಎಂದು ಕೂಗಿದ ಜನ

    ಲಂಡನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸಲು ಬಂದ ವಿಜಯ ಮಲ್ಯರನ್ನು ಕ್ರಿಕೆಟ್ ಅಭಿಮಾನಿಗಳು ಕಳ್ಳ…. ಕಳ್ಳ…. ಎಂದು ಕರೆದಿದ್ದಾರೆ.

    ಭಾನುವಾರದಂದು ಲಂಡನ್‍ನ ಓವಲ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದ ವೇಳೆ ಗಣ್ಯರ ಪ್ರವೇಶದ್ವಾರದ ಸರ್ ಜ್ಯಾಕ್ ಹಾಬ್ಸ್ ಗೇಟ್ ಮೂಲಕ ಒಳ ಪ್ರವೇಶಿಸುತ್ತಿದ್ದಾಗ ಅಲ್ಲಿದ್ದ ಕೆಲವು ಜನರು ಚೋರ್ ಗಯಾ ಚೋರ್(ಕಳ್ಳ ಹೋಗ್ತಿದ್ದಾನೆ) ಚೋರ್… ಚೋರ್… (ಕಳ್ಳ..ಕಳ್ಳ) ಎಂದು ಕೂಗಿದ್ರು. ಮೊಬೈಲ್ ತೆಗೆದು ವಿಡಿಯೋ ಮಾಡತೊಡಗಿದ್ರು. ಆದ್ರೆ ಮಲ್ಯ ಇದ್ಯಾವುದಕ್ಕೂ ಕಿವಿಗೊಡದಂತೆ ಒಳಗೆ ಹೋದ್ರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ವಿವಿಧ ಬ್ಯಾಂಕ್‍ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದಿರುವ ಮಲ್ಯ, ಕಳೆದ ವರ್ಷ ಮಾರ್ಚ್‍ನಲ್ಲಿ ಲಂಡನ್‍ಗೆ ಹೋಗಿ ನೆಲೆಸಿದ್ದಾರೆ.

    ಇತ್ತೀಚೆಗೆ ವಿರಾಟ್ ಕೊಹ್ಲಿ ಫೌಂಡೇಷನ್ ವಿಶೇಷ ಭೋಜನ ಕಾರ್ಯಕ್ರಮಕ್ಕೆ ಮಲ್ಯ ಆಗಮಿಸಿದ್ದರು. ಈ ವೇಳೆ ಟೀಂ ಇಂಡಿಯಾ ಆಟಗಾರರು ಮಲ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಈ ಮುಜಗುರದ ಸನ್ನಿವೇಶದ ನಂತರ ಈಗ ಮತ್ತೊಂದು ಅಂತಹದ್ದೇ ಘಟನೆಯಾಗಿದೆ.

    https://www.youtube.com/watch?v=LB6Jr7B1odI