Tag: ವಿಜಯ ಕಿರಗಂದೂರು

  • ‘ಸಲಾರ್ 2’ ಚಿತ್ರದ ಶೂಟಿಂಗ್, ರಿಲೀಸ್ ಮಾಹಿತಿ ನೀಡಿದ ವಿಜಯ್ ಕಿರಗಂದೂರು

    ‘ಸಲಾರ್ 2’ ಚಿತ್ರದ ಶೂಟಿಂಗ್, ರಿಲೀಸ್ ಮಾಹಿತಿ ನೀಡಿದ ವಿಜಯ್ ಕಿರಗಂದೂರು

    ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿ ಗಳಿಸಿ, ಇನ್ನೂ ಮುನ್ನುಗ್ಗುತ್ತಿದೆ. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಿದೆ.

    ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಲಾರ್ 2 ಸಿನಿಮಾದ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಕೂಡ ಶುರು ಮಾಡಲಿದ್ದಾರಂತೆ. ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಸಲಾರ್ (Salaar) ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ  ಕೋಟಿ ಕೋಟಿ ಹಣವನ್ನು ಗಳಿಸಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ‘ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.

     

    ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದಲ್ಲಿ ಪ್ರಭಾಸ್‍ (Prabhas) ಜೊತೆಗೆ ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍, ಜಗಪತಿ ಬಾಬು ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

  • ಐದು ವರ್ಷ, 3000 ಕೋಟಿ ಬಂಡವಾಳ: ಇದು ಹೊಂಬಾಳೆ ಫಿಲ್ಮ್ಸ್ ಸಂಕಲ್ಪ

    ಐದು ವರ್ಷ, 3000 ಕೋಟಿ ಬಂಡವಾಳ: ಇದು ಹೊಂಬಾಳೆ ಫಿಲ್ಮ್ಸ್ ಸಂಕಲ್ಪ

    ಭಾರತೀಯ ಸಿನಿಮಾ ರಂಗಕ್ಕೆ ಅತ್ಯುತ್ತಮ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್, ಒಂದು ಮಹತ್ವದ ನಿರ್ಧಾರ ತಗೆದುಕೊಂಡಿದೆ ಅನ್ನುವ ವಿಚಾರ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಅದು ಚಿತ್ರೋದ್ಯಮಕ್ಕೆ ಮೂರು ಸಾವಿರ ಕೋಟಿ ಬಂಡವಾಳ ಹೂಡಲಿದೆಯಂತೆ. ಭಾರೀ ಬಜೆಟ್ ಸಿನಿಮಾಗಳ ಜೊತೆಗೆ ಉತ್ತಮ ಬಜೆಟ್ ನಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಲಿದ್ದಾರಂತೆ.

    ಕೆಜಿಎಫ್, ಕಾಂತಾರ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿವೆ. ಅತೀ ಹೆಚ್ಚು ಲಾಭವನ್ನೂ ತಂದುಕೊಟ್ಟಿವೆ. ಅಲ್ಲದೇ, ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಕನ್ನಡದಲ್ಲಿ ಮೂರು, ಮಲಯಾಳಂನಲ್ಲಿ ಒಂದು ಮತ್ತು ತಮಿಳಿನಲ್ಲಿ ಒಂದು ಸಿನಿಮಾವನ್ನು ಘೋಷಣೆ ಮಾಡಲಾಗಿದೆ. ಹಿಂದಿಯಲ್ಲೂ ಒಂದು ಚಿತ್ರವನ್ನು ಮಾಡುವ ಯೋಜನೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಹಲವು ಭಾಷೆಗಳಲ್ಲಿ ಸಿನಿಮಾ ಮಾಡಲಿದೆಯಂತೆ ಹೊಂಬಾಳೆ ಫಿಲ್ಮ್ಸ್.

    ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಗೆ ಸಿದ್ಧವಾಗಿದೆ. ಪವನ್ ಕುಮಾರ್ ಮಲಯಾಳಂನಲ್ಲಿ ಭರ್ಜರಿಯಾಗಿಯೇ ಶೂಟಿಂಗ್ ಶುರು ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ದೊಡ್ಮನೆಯ ಕುಡಿ ಯುವರಾಜ್ ನನ್ನು ಲಾಂಚ್ ಮಾಡುತ್ತಿದ್ದಾರೆ. ಜೊತೆಗೆ ಕಾಂತಾರ 2 ಮತ್ತು ಕೆಜಿಎಫ್ ಸಿನಿಮಾದ ಮುಂದುವರೆ ಭಾಗ ಕೂಡ ಸಿನಿಮಾವಾಗಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಹಿಂದಿಯಲ್ಲಿ ಸ್ಟಾರ್ ನಟನ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ

    ನಾನಾ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ ಕಿರಗಂದೂರು ಈ ಕುರಿತು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ, ಯಾವೆಲ್ಲ ಸಿನಿಮಾಗಳನ್ನು ಮಾಡಲಿದ್ದಾರೆ? ನಟನಾರು? ನಿರ್ದೇಶಕರಾರು ಅನ್ನುವ ವಿಷಯವನ್ನು ಬಹಿರಂಗ ಪಡಿಸಿಲ್ಲ. ಅಲ್ಲದೇ, ಕೆಲವು ವಿಷಯಗಳನ್ನು ಅವರು ಅಧಿಕೃತಗೊಳಿಸಿಲ್ಲ. ಆದರೂ, ಸಾಕಷ್ಟು ವಿಷಯಗಳು ಗಾಂಧಿನಗರ ಪಡಸಾಲೆಯಲ್ಲಿ ಕೇಳಿ ಬರುತ್ತಿರುದು ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]

  • ಯಶ್ ಹೊಸ ಚಿತ್ರದ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್ ವಿಜಯ್ ಕಿರಗಂದೂರ್

    ಯಶ್ ಹೊಸ ಚಿತ್ರದ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್ ವಿಜಯ್ ಕಿರಗಂದೂರ್

    ಕೆಜಿಎಫ್ 3 ಸಿನಿಮಾದ ಬಗ್ಗೆ ಕಳೆದ ಒಂದೂವರೆ ತಿಂಗಳಿಂದ ಭಾರೀ ಸುದ್ದಿಯಾಗುತ್ತಿದೆ. ಈ ಸಿನಿಮಾದ ಮುಹೂರ್ತ ಯಾವಾಗ? ಯಾರೆಲ್ಲ ಈ ಚಿತ್ರದಲ್ಲಿ ಇರಲಿದ್ದಾರೆ? ಎಷ್ಟೆಲ್ಲ ಭಾಷೆಗಳಲ್ಲಿ ಮೂಡಿ ಬರಲಿದೆ? ಬಜೆಟ್ ಎಷ್ಟು? ಹೀಗೆ ನಾನಾ ರೀತಿಯ ಚರ್ಚೆಗಳು ನಡೆದಿವೆ. ಅಲ್ಲದೇ, ರಾಣಾ ದುಗ್ಗುಬಾಟಿ, ಹೃತಿಕ್ ರೋಷನ್ ಸೇರಿದಂತೆ ಹಲವು ಹೆಸರುಗಳು ಕೂಡ ತಾರಾಗಣದಲ್ಲಿ ಕೇಳಿ ಬಂದಿತ್ತು. ಈ ವರ್ಷವೇ ಚಿತ್ರಕ್ಕೆ ಮುಹೂರ್ತ ಎಂದು ಸುದ್ದಿಯಾಗಿತ್ತು. ಇದನ್ನೂ ಓದಿ : 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

    ಹೊಂಬಾಳೆ ಫಿಲ್ಮ್ಸ್ ಮಾಲೀಕ, ನಿರ್ಮಾಪಕ ವಿಜಯ್ ಕಿರಂಗದೂರ್ ಅವರೇ ಮಾಧ್ಯಮಗಳ ಜೊತೆ ಮಾತನಾಡಿ, ಅತೀ ಶೀಘ್ರದಲ್ಲೇ ಕೆಜಿಎಫ್ 3 ಸಿನಿಮಾ ಶುರುವಾಗಲಿದೆ ಎಂದು ಹೇಳಿರುವ ಸುದ್ದಿಯೂ ಕೂಡ ಪ್ರಕಟವಾಯಿತು. ಕೆಜಿಎಫ್ 3 ಸಿನಿಮಾದಲ್ಲಿ ಯಶ್ ಇರುತ್ತಾರಾ? ಅಥವಾ ಅವರ ಪಾತ್ರ ಇರುತ್ತಾ ಎನ್ನುವಲ್ಲಿಗೆ ಸುದ್ದಿ ಆಯಿತು. ಆನಂತರ ಆದ ಲೆಕ್ಕಾಚಾರವೇ ಬೇರೆ. ಈ ಎಲ್ಲದರ ಕುರಿತು ವಿಜಯ ಕಿರಗಂದೂರು ಮತ್ತೆ ಮಾತನಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ಕೆಜಿಎಫ್ 3 ಸಿನಿಮಾ ಸದ್ಯಕ್ಕಂತೂ ಇಲ್ಲವೆಂದು ವಿಜಯ್ ಕಿರಂಗದೂರು ಹೇಳಿದ್ದಾರೆ ಎನ್ನುವ ಸುದ್ದಿಯಿದೆ. ಅವರು ಸಲಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ, ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್ ಕೂಡ ತೊಡಗಿಕೊಂಡಿದ್ದರಿಂದ ಮತ್ತು ಯಶ್ ಕೂಡ ತಮ್ಮ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಸದ್ಯಕ್ಕಂತೂ ಕೆಜಿಎಫ್ 3 ಸಿನಿಮಾ ಆಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಯಶ್ ಅವರು ಹೊಸ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

    ಯಶ್ ನಟನೆಯ ಹೊಸ ಸಿನಿಮಾವನ್ನು ಯಾರು ಮಾಡುತ್ತಾರೆ? ನಿರ್ಮಾಪಕರು ಯಾರು? ಹೀಗೆ ಇತ್ಯಾದಿ ವಿಷಯಗಳನ್ನು ಹೇಳದೇ ಇದ್ದರೂ, ಯಶ್ ಹೊಸ ಸಿನಿಮಾ ಸದ್ಯದಲ್ಲೇ ಮುಹೂರ್ತ ಕಾಣಲಿದೆ ಎನ್ನುವ ಸುಳಿವಂತೂ ವಿಜಯ್ ಅವರು ನೀಡಿದ್ದಾರೆ. ಹೀಗಾಗಿ ಯಶ್ ಹೊಸ ಸಿನಿಮಾ ಸದ್ಯದಲ್ಲೇ ಪಕ್ಕಾ ಎನ್ನುವುದು ಖುಷಿ ವಿಚಾರ.

  • Exclusive Details- ಕೆಜಿಎಫ್ 2 ರಿಲೀಸ್: ಮಾ.27ಕ್ಕೆ ಟ್ರೇಲರ್ ಲಾಂಚ್, 7 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್, ಯಾರೆಲ್ಲ ಗೆಸ್ಟ್?

    Exclusive Details- ಕೆಜಿಎಫ್ 2 ರಿಲೀಸ್: ಮಾ.27ಕ್ಕೆ ಟ್ರೇಲರ್ ಲಾಂಚ್, 7 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್, ಯಾರೆಲ್ಲ ಗೆಸ್ಟ್?

    ಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಏ.14 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಮಾ.27ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ಮಾಡಿಕೊಂಡಿದೆ. ಅವತ್ತು ಬೆಂಗಳೂರಿಗೆ ಪ್ರತಿಷ್ಠತ ಸ್ಟಾರ್ ಹೋಟೆಲ್ ನಲ್ಲಿ ಕೇವಲ ಮಾಧ್ಯಮ ಗೋಷ್ಠಿ ಮಾಡುವ ಮೂಲಕ ಟ್ರೇಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಅಂದು ಟ್ರೇಲರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

    ಮಾರ್ಚ್ 27ರ ಸಂಜೆ 6.45ಕ್ಕೆ ಟ್ರೇಲರ್ ಬಿಡುಗಡೆ ಆಗಲಿದ್ದು, ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಹೆಸರಾಂತ ನಟರು ಹಾಗೂ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಇದನ್ನೂ ಓದಿ : ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ

    ಅತಿಥಿಗಳು ಯಾರು?

    ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಶಿವರಾಜ್ ಕುಮಾರ್ ಆಗಮಿಸುತ್ತಿದ್ದು, ಸಿನಿಮಾದ ಕಲಾವಿದರಾದ ಬಾಲಿವುಡ್ ನಟ ಸಂಜಯ್ ದತ್, ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್, ಬಾಲಿವುಡ್ ನಟಿ ರವೀನಾ ಟಂಡನ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರಲಿದ್ದಾರೆ. ಇದನ್ನೂ ಓದಿ:  ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

    7 ಸಾವಿರ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್

    ಕೆಜಿಎಫ್ 2 ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ 2 ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಯ ಚಿತ್ರಮಂದಿರಗಳಲ್ಲಿ ಸಾವಿರ ಸಾವಿರ ಥಿಯೇಟರ್ ನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಇದನ್ನೂ ಓದಿ : ಅನಿಲ್ ಕಪೂರ್ ಈ ಫೋಟೋ ಹಾಕಬಾರದಿತ್ತು: ಕಿವಿ ಹಿಂಡಿದ ಅಭಿಮಾನಿಗಳು

    ಅರೆಬಿಕ್ ಮತ್ತು ಇಂಗ್ಲಿಷ್ ನಲ್ಲಿ ಸಬ್ ಟೈಟಲ್

    ಐದು ಭಾಷೆಗಳ ಹೊರತಾಗಿ ಉಳಿದಂತೆ ಎಲ್ಲ ಭಾಷೆಯ ಚಿತ್ರಗಳಲ್ಲೂ ಇಂಗ್ಲಿಷ್ ನಲ್ಲಿ ಸಬ್ ಟೈಟಲ್ ಇರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಆದರೆ, ದುಬೈನಲ್ಲಿ ಮಾತ್ರ ಸಬ್ ಟೈಟಲ್ ಭಾಷೆ ಬದಲಾಗಲಿದೆ. ಇಲ್ಲಿ ಅರೆಬಿಕ್ ಭಾಷೆಯ ಸಬ್ ಟೈಟಲ್ ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಚೀನಾ ಸೇರಿದಂತೆ ಇತರ ಭಾಷೆಯ ಸಬ್ ಟೈಟಲ್ ಗೂ ಬೇಡಿಕೆಯಿದ್ದು, ಅಲ್ಲೆಲ್ಲ ಇಂಗ್ಲಿಷ್ ನಲ್ಲಿಯೇ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಇದನ್ನೂ ಓದಿ : ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ

    70 ದೇಶಗಳಲ್ಲಿ ಕೆಜಿಎಫ್ 2 ಬಿಡುಗಡೆ

    ಜಪಾನ್, ಅಮೆರಿಕಾ, ಇಂಗ್ಲೆಂಡ್, ದುಬೈ ಹೀಗೆ 70ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ ನಿರ್ಮಾಪಕರು. ಈಗಾಗಲೇ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬಂದಿದ್ದು, ಅಷ್ಟೂ ದೇಶಗಳಲ್ಲೂ ಏಕಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಲಾಗಿದೆ. ಚಿತ್ರಕ್ಕೆ ಹೆಚ್ಚಿನ ಹಣವೂ ವಿದೇಶದಿಂದಲೇ ಹರಿದು ಬರಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ : ಸ್ವಂತ ಜಮೀನು ಮಾರಿ ಆಸ್ಪತ್ರೆ ಕಟ್ಟಿಸಲು ಮುಂದಾದ ಹಿರಿಯ ನಟಿ ಲೀಲಾವತಿ: ಬಹುಪರಾಕ್ ಹೇಳಿದ ಕನ್ನಡ ಜನತೆ

    ಪ್ರಿ ರಿಲೀಸ್ ಇವೆಂಟ್ ಇಲ್ಲ

    ಕೋವಿಡ್ ನಿಯಮ ಮತ್ತು ಅಪ್ಪು ನಿಧನದಿಂದಾಗಿ ಈ ಬಾರಿ ಪ್ರಿ ರಿಲೀಸ್ ಇವೆಂಟ್ ಇರುವುದಿಲ್ಲ ಎಂದು ತಿಳಿಸಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್. ಪ್ರಿ ರಿಲೀಸ್ ಇವೆಂಟ್ ಮಾಡುವಂತೆ ನಿರ್ಮಾಪಕರಿಗೆ ಸಾಕಷ್ಟು ಒತ್ತಡವಿದ್ದು, ಬೇರೆ ಭಾಷೆಯಲ್ಲೂ ಪ್ರಿ ರಿಲೀಸ್ ಇವೆಂಟ್ ಮಾಡುವಂತೆ ಕೇಳುತ್ತಿದ್ದಾರೆ. ಆದರೆ, ಕೋವಿಡ್ ನಿಯಮ ಮತ್ತು ಅಪ್ಪು ನಿಧನದ ಕಾರಣದಿಂದಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಿಲ್ಲ ಚಿತ್ರತಂಡ.