Tag: ವಿಜಯ್ ಶಾ

  • ಸೋಫಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ – ವಿಜಯ್ ಶಾರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

    ಸೋಫಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ – ವಿಜಯ್ ಶಾರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

    ನವದೆಹಲಿ: ಕರ್ನಲ್ ಸೋಫಿಯಾ (Colonel Sofiya Qureshi) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಜಯ್ ಶಾ (Vijay Shah) ಅವರನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

    ಹೇಳಿಕೆ ಸಂಬಂಧ ವಿಚಾರಣೆ ನಡೆಸಿದ್ದ ಜಬ್ಬಲ್ಪುರ ಹೈಕೋರ್ಟ್ (Jabbalpur High Court) ಸಚಿವ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಈ ಆದೇಶದ ಬೆನ್ನಲ್ಲೇ ವಿಜಯ್ ಶಾ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಈ ರೀತಿ ಹೇಳಿಕೆಗಳನ್ನು ನೀಡುವಾಗ ಎಚ್ಚರವಿರಲಿ ಎಂದಿದೆ.ಇದನ್ನೂ ಓದಿ: ಸೋಫಿಯಾ‌ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ

    ವಿಜಯ್ ಶಾ ನೀಡಿದ ಹೇಳಿಕೆಗಳನ್ನು ಟೀಕಿಸಿದ ಕೋರ್ಟ್, ದೇಶವು ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಸಚಿವರು ಜವಾಬ್ದಾರಿಯುತರಾಗಿರಬೇಕು ಎನ್ನುವುದು ನಮ್ಮೆಲ್ಲರ ನಿರೀಕ್ಷೆ ಎಂದು ಒತ್ತಿ ಹೇಳಿದೆ.

    ವಿಜಯ್ ಶಾ ಹೇಳಿದ್ದೇನು?
    ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಶಾ ಅವರು ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸನ್ನು ಹೇಳಿ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದರು.

    ಭಾಷಣದಲ್ಲಿ, ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಆ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ನಾವು ಕಳುಹಿಸಿದ್ದೇವೆ ಎಂದು ಹೇಳಿದ್ದರು.

    ಭಾಷಣದಲ್ಲಿ ವಿಜಯ್ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರರನ್ನು ಸದೆ ಬಡಿಯಲು ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಸ್ಪಷ್ಟವಾಗಿ ಹೇಳದೇ ಇದ್ದರೂ ಅವರನ್ನು ಉಲ್ಲೇಖಿಸಿಯೇ ಭಾಷಣ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬಳಿಕ ಜಬ್ಬಲ್ಪುರ ಹೈಕೋರ್ಟ್ ಇದನ್ನು ಅಶ್ಲೀಲ ಭಾಷೆ ಎಂದು ಪರಿಗಣಿಸಿತ್ತು. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು.ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಏಟಿಗೆ ಪಾಕಿಸ್ತಾನ ಬಾಲ ಮುದುರಿದ ನಾಯಿಯಂತೆ ಓಡಿದೆ: ಪೆಂಟಗನ್‌ ಮಾಜಿ ಅಧಿಕಾರಿ ವ್ಯಂಗ್ಯ

  • ಸಚಿವರ ಭೋಜನಕೂಟ ತಿರಸ್ಕರಿಸಿದ ವಿದ್ಯಾ- ಮರುದಿನ ಅಧಿಕಾರಿಗಳಿಂದ ಶೂಟಿಂಗ್ ಸ್ಥಗಿತ

    ಸಚಿವರ ಭೋಜನಕೂಟ ತಿರಸ್ಕರಿಸಿದ ವಿದ್ಯಾ- ಮರುದಿನ ಅಧಿಕಾರಿಗಳಿಂದ ಶೂಟಿಂಗ್ ಸ್ಥಗಿತ

    ಮುಂಬೈ/ಭೋಪಾಲ್: ಅರಣ್ಯ ಸಚಿವರ ಔತನಕೂಟ ತಿರಸ್ಕರಿಸಿದ್ದಕ್ಕೆ ವಿದ್ಯಾ ಬಾಲನ್ ಸಿನಿಮಾದ ಚಿತ್ರೀಕರಣ ತಡೆಯಲಾಗಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸುತ್ತಿವೆ.

    ಮಧ್ಯಪ್ರದೇಶದ ಅರಣ್ಯ ಸಚಿವ ವಿಜಯ್ ಶಾ ತಮ್ಮ ರಾಜ್ಯದಲ್ಲಿ ಶೂಟಿಂಗ್ ನಡೆಸುತ್ತಿರುವ ನಟಿ ವಿದ್ಯಾ ಬಾಲನ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಆದ್ರೆ ವಿದ್ಯಾ ಬಾಲನ್ ತಮ್ಮ ಶೆಡ್ಯೂಲ್ ಮೊದಲ ನಿಗದಿಯಾಗಿದ್ದರಿಂದ ಭೋಜನಕೂಟಕ್ಕೆ ತೆರಳಿರಲಿಲ್ಲ. ಇದರಿಂದ ಸಚಿವರು ಮರುದಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ತಡೆ ನೀಡಿದ್ದರು ಎನ್ನಲಾಗಿದೆ. ಕೊನೆಗೆ ಚಿತ್ರತಂಡ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ ಬಳಿಕ ಶೂಟಿಂಗ್ ನಡೆಸಲು ಅನುಮತಿ ನೀಡಲಾಗಿದೆ ಎಂದು ವರದಿ ಆಗಿದೆ.

    ವಿದ್ಯಾ ಬಾಲನ್ ನಟಿಸುತ್ತಿರುವ ‘ಶೇರರ್ನಿ’ ಚಿತ್ರೀಕರಣ ಬಾಲಾಘಾಟ್ ನಲ್ಲಿ ನಡೆಯುತ್ತಿದ್ದು, ಚಿತ್ರತಂಡ ಅಕ್ಟೋಬರ್ 20 ರಿಂದ ನವೆಂಬರ್ 21ರ ವರೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿತ್ತು. ಶೂಟಿಂಗ್ ಹಿನ್ನೆಲೆ ವಿದ್ಯಾ ಬಾಲನ್ ಮಹಾರಾಷ್ಟ್ರದ ಗೋಂದಿಯಾದಲ್ಲಿ ಉಳಿದುಕೊಂಡಿದ್ದರು. ಸಂಜೆ 5 ಗಂಟೆಗೆ ಸಚಿವ ವಿಜಯ್ ಶಾ ನಟಿಯನ್ನ ಔತಣಕೂಟಕ್ಕೆ ಆಹ್ವಾನಿಸಿದ್ದರು. ಆದ್ರೆ ವಿದ್ಯಾ ಬಾಲನ್ ಊಟಕ್ಕೆ ತೆರಳಿರಲಿಲ್ಲ. ಮರುದಿನ ಶೂಟಿಂಗ್ ಸ್ಥಳಕ್ಕೆ ಆಗಮಿಸಿ ಜಿಲ್ಲಾ ರಣ್ಯಾಧಿಕಾರಿಗಳು ಶೂಟಿಂಗ್ ವಾಹನಗಳನ್ನು ಅರಣ್ಯ ಪ್ರವೇಶಿಸುವದನ್ನ ತಡೆದಿದ್ದರು. ಕೆಲ ಸಮಯದ ಬಳಿಕ ಚಿತ್ರೀಕರಣಕ್ಕೆ ಅನಮತಿ ನೀಡಲಾಗಿತ್ತು.

    ವಿಜಯ್ ಶಾ ಸ್ಪಷ್ಟನೆ: ಔತಣಕೂಟವನ್ನ ಜಿಲ್ಲಾಡಳಿತ ಆಯೋಜಿಸಿತ್ತು. ಅಧಿಕಾರಿಗಳು ಶೂಟಿಂಗ್ ವಾಹನಗಳನ್ನ ತಡೆದಿರೋದು ನಿಜ. ಪ್ರತಿದಿನ ಚಿತ್ರತಂಡ ಅರಣ್ಯದೊಳಗೆ ಎರಡು ಜನರೇಟರ್ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿತ್ತು. ಆದ್ರೆ ಅಂದು ಎರಡಕ್ಕಿಂತ ಹೆಚ್ಚು ಜನರೇಟರ್ ವಾಹನ ಅರಣ್ಯದೊಳಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಸಚಿವ ವಿಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.