Tag: ವಿಜಯ್ ರೂಪಾನಿ

  • ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

    ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

    ಅಹಮದಾಬಾದ್: ಏರ್ ಇಂಡಿಯಾ (Air India) ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ (Vijay Rupani) ಅವರ ಅಂತ್ಯಕ್ರಿಯೆ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ (Rajkot) ನಡೆಯಲಿದೆ.

    ವಿಜಯ್ ರೂಪಾನಿ ರಾಜ್‌ಕೋಟ್ ಪ್ರತಿನಿಧಿಸುತ್ತಿದ್ದರು. ಭಾನುವಾರ ವಿಜಯ್ ರೂಪಾನಿ ಡಿಎನ್‌ಎ ಮ್ಯಾಚ್ ಆಗಿತ್ತು. ಅವರ ಸಹೋದರಿ ಡಿಎನ್‌ಎ ಜೊತೆಗೆ ವಿಜಯ್ ರೂಪಾನಿ ಡಿಎನ್‌ಎ ಮ್ಯಾಚ್ ಆಗಿತ್ತು. ಇಂದು ಬೆಳಗ್ಗೆ 11:30ಕ್ಕೆ ಸಿವಿಲ್ ಆಸ್ಪತ್ರೆಯಿಂದ ಮೃಹದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಬಳಿಕ ಮೃತದೇಹವನ್ನು ವಿಮಾನದ ಮೂಲಕ ರಾಜ್‌ಕೋಟ್‌ಗೆ ಕೊಂಡೊಯ್ಯಲಾಗುವುದು. ಇದನ್ನೂ ಓದಿ: ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು

    ಮಧ್ಯಾಹ್ನ 2 ಗಂಟೆಯ ವೇಳೆಗೆ ರಾಜ್‌ಕೋಟ್ ತಲುಪುವ ನಿರೀಕ್ಷೆಯಿದೆ. ಸಂಜೆ 5 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದ್ದು, 6 ಗಂಟೆಯ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

  • ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ

    ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ

    ಗಾಂಧಿನಗರ: ವಿಜಯ್ ರೂಪಾನಿ (Vijay Rupani) ಡಿಎನ್‌ಎ ಮ್ಯಾಚ್ ಇನ್ನು ಸಿಕ್ಕಿಲ್ಲ. ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆಯಾಗಿಲ್ಲ ಎಂದು ಸಿವಿಲ್ ಆಸ್ಪತ್ರೆ ಹೆಚ್ಚುವರಿ ಸೂಪರ್ ಇಂಟೆಂಡೆಂಟ್ ಡಾ. ರಜನೀಶ್ ಪಟೇಲ್ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 31 ಡಿಎನ್‌ಎ ಮ್ಯಾಚ್ ಆಗಿದೆ. 12 ಮೃತದೇಹಗಳ ಹಸ್ತಾಂತರ ಮಾಡಲಾಗಿದೆ. ಡಿಎನ್‌ಎ ಪರೀಕ್ಷೆ ಮೂಲಕ 31 ಶವದ ಗುರುತು ಪತ್ತೆ ಹಚ್ಚಲಾಗಿದೆ. ಜನರಿಂದ ಯಾವುದೇ ಹಣ ಪಡೆಯುತ್ತಿಲ್ಲ ಎಂದರು. ಇದನ್ನೂ ಓದಿ: ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

    ಡಿಎನ್‌ಎ ಪರೀಕ್ಷೆಯ ಮೂಲಕ ಸ್ಯಾಂಪಲ್ ಮ್ಯಾಚ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದು ಚಾಲೆಂಜಿಂಗ್ ಕೆಲಸ. ಉದಯಪುರ, ಖೇಡಾ, ಅಹಮದಾಬಾದ್ ಜಿಲ್ಲೆಯ ಜನರಿಗೆ ಮೃತ ದೇಹ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ – ಕೆನಡಾ ಸೇರಿ ಮೂರು ರಾಷ್ಟ್ರಗಳಿಗೆ ಭೇಟಿ

    ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಈವರೆಗೂ 31 ಮೃತ ದೇಹಗಳ ಡಿಎನ್‌ಎ ಮ್ಯಾಚ್ ಆಗಿದ್ದು, 12 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಬಾಕಿ ಮೃತದೇಹಗಳ ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ. ಈ ಹಿನ್ನಲೆ ಆಸ್ಪತ್ರೆ ಹೊರಗೆ ಕುಟುಂಬಸ್ಥರು ಕಾಯುತ್ತಿದ್ದಾರೆ. ಇದನ್ನೂ ಓದಿ: ಉರ್ದು, ಪರ್ಷಿಯನ್‌ ಬದಲಿಗೆ ಹಿಂದಿಯಲ್ಲಿ ಮಾತನಾಡಿ: ಪೊಲೀಸರಿಗೆ ರಾಜಸ್ಥಾನ ಸಚಿವ ಸೂಚನೆ

  • ತಮ್ಮ ಫೇವರೇಟ್‌ ನಂಬರ್‌ ದಿನವೇ ಮೃತಪಟ್ಟ ಗುಜರಾತ್‌ ಮಾಜಿ ಸಿಎಂ ರೂಪಾನಿ

    ತಮ್ಮ ಫೇವರೇಟ್‌ ನಂಬರ್‌ ದಿನವೇ ಮೃತಪಟ್ಟ ಗುಜರಾತ್‌ ಮಾಜಿ ಸಿಎಂ ರೂಪಾನಿ

    ನವದೆಹಲಿ: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ (Vijay Rupani) ಅವರು ಫೇವರೇಟ್‌ ಲಕ್ಕಿ ಸಂಖ್ಯೆಯ ದಿನವೇ ಮೃತಪಟ್ಟಿದ್ದಾರೆ.

    ಹೌದು. ರೂಪಾನಿ ಅವರು ಖರೀದಿಸಿದ ಮೊದಲ ವಾಹನದ ಸಂಖ್ಯೆ 1206. ಇದು ತಮ್ಮ ಫೇವರೇಟ್‌ ಸಂಖ್ಯೆ ಎಂದು ಭಾವಿಸಿದ ರೂಪಾನಿ ಅವರು ನಂತರ ಖರೀದಿಸಿದ ವಾಹನಗಳಿಗೆ ಈ ಸಂಖ್ಯೆಯ ನಂಬರ್‌ ಅನ್ನೇ ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ದಿನಾಂಕ 12 ಮತ್ತು 6ನೇ ತಿಂಗಳು (1206) ಲಂಡನ್‌ಗೆ ಪ್ರಯಾಣ ಬೆಳೆಸುತ್ತಿದ್ದಾಗ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

     

    ರೂಪಾನಿ ಅವರ ಬಳಿ ಎರಡು ಕಾರು ಇತ್ತು. ಇನ್ನೋವಾ ಕಾರಿನ ಸಂಖ್ಯೆ GJ-03-ER-1206 ಆಗಿದ್ದರೆ ಮಾರುತಿ ವಾಗನರ್‌ ಕಾರಿನ ಸಂಖ್ಯೆ GJ-03-HK-1206 ಆಗಿತ್ತು. ಇದನ್ನೂ ಓದಿ: ಟೇಕಾಫ್‌ ಆದ 30 ಸೆಕೆಂಡ್‌ನಲ್ಲಿ ದೊಡ್ಡ ಶಬ್ಧ ಬಂತು – ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು

    ಲಂಡನ್‌ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12 A ಸೀಟಿನಲ್ಲಿ ಕುಳಿತುಕೊಂಡಿದ್ದರು. ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲು ರೂಪಾನಿ ಏರ್‌ ಇಂಡಿಯಾ ವಿಮಾನ ಹತ್ತಿದ್ದರು. ಮಗಳ ಮನೆಗೆ ಪತ್ನಿ 6 ತಿಂಗಳ ಹಿಂದೆ ತೆರಳಿದ್ದರು. ಪತ್ನಿಯನ್ನು ಕರೆ ತರುವ ಉದ್ದೇಶದಿಂದ ರೂಪಾನಿ ಪ್ರಯಾಣ ಬೆಳೆಸಿದ್ದರು.

  • ವಿಮಾನ ಪತನ –  ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

    ವಿಮಾನ ಪತನ – ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

    ಅಹಮದಾಬಾದ್‌: ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ (Former Gujarat CM Vijay Rupani) ವಿಮಾನ ದುರಂತದಲ್ಲಿ (Plane Crash)  ಮೃತಪಟ್ಟಿದ್ದಾರೆ.

    ಲಂಡನ್‌ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12ನೇ ಸೀಟಿನಲ್ಲಿ ಕುಳಿತುಕೊಂಡಿದ್ದರು. ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲು ರೂಪಾನಿ ವಿಮಾನ ಹತ್ತಿದ್ದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

     

    ಇಬ್ಬರು ಪೈಲಟ್‌, 10 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈಗಾಗಲೇ 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಿದೆ.

    ಆಸ್ಪತ್ರೆಗೆ ಸೇರಿದ ಹಲವು ಮಂದಿಯ ಸ್ಥಿತಿ ಗಂಭೀರವಾಗಿದೆ. ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೆಲಿನ ಅಡುಗೆ ಮನೆ ಮೇಲೆ ಬಿದ್ದಿದೆ. ಮಧ್ಯಾಹ್ನ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲೇ ಪತನ ಗೊಂಡಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಪೈಲಟ್‌ಗೆ ಇತ್ತು 8,200 ಗಂಟೆಗಳ ಹಾರಾಟದ ಅನುಭವ

  • ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿದ್ದರು ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ

    ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿದ್ದರು ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ

    ಅಹಮದಾಬಾದ್‌: ಪತನಗೊಂಡ ಏರ್‌ ಇಂಡಿಯಾ (Air India) ವಿಮಾನದಲ್ಲಿ ಗುಜರಾತಿನ ಮಾಜಿ ಸಿಎಂ ವಿಜಯ್‌ ರೂಪಾನಿ (Vijay Rupani) ಪ್ರಯಾಣಿಸುತ್ತಿದ್ದರು.

    ಪತನಗೊಂಡ ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. ಈಗಾಗಲೇ ಸ್ಥಳಕ್ಕೆ ಅಂಬುಲೆನ್ಸ್‌ ಮತ್ತು ಅಗ್ನಿಶಾಮಕ ದಳ ಧಾವಿಸಿವೆ.

    ಟೇಕಾಫ್‌ ಆದ ಕೆಲವೇ ನಿಮಿಷದಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನ ಪತನಗೊಂಡಿದೆ. ವಿಮಾನ ಮಧ್ಯಾಹ್ನಅಹಮದಾಬಾದ್‌ನಿಂದ ಟೇಕಾಫ್‌ ಆಗಿತ್ತು. ಟೇಕಾಫ್‌ ಆದ 10 ನಿಮಿಷದಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡು ಜನವಸತಿ ಕಟ್ಟಡದ ಮೇಲೆ ಬಿದ್ದಿದೆ.

  • ಮೋದಿ ಆಪ್ತ ಭೂಪೇಂದ್ರ ಪಟೇಲ್  ಗುಜರಾತಿನ ಮುಂದಿನ ಸಿಎಂ

    ಮೋದಿ ಆಪ್ತ ಭೂಪೇಂದ್ರ ಪಟೇಲ್ ಗುಜರಾತಿನ ಮುಂದಿನ ಸಿಎಂ

    ಗಾಂಧಿನಗರ: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ ಆಗಿದ್ದಾರೆ.

    ವಿಜಯ್ ರೂಪಾನಿ ರಾಜೀನಾಮೆ ಬಳಿಕ ಬಿಜೆಪಿ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ಎಂಬಂತೆ ಪಾಟೀದರ್ ಸಮುದಾಯದ ಭೂಪೇಂದ್ರ ಪಟೇಲ್ ಅವರನ್ನು ಆಯ್ಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿರುವ ಇವರು ಗುಜರಾತಿನ 17 ಮುಖ್ಯಮಂತ್ರಿ ಆಗಲಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ 

    2017ರ ಚುನಾವಣೆಯಲ್ಲಿ ಘಟ್ಲೋಡಿಯಾದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ದಾಖಲೆಯ 175,652 ಮತಗಳನ್ನು ಪಡೆದಿದ್ದರೆ ಇವರ ಪ್ರತಿಸ್ಪರ್ಧಿ ಎರಡನೇ ಸ್ಥಾನ ಪಡೆದ ಕಾಂಗ್ರೆಸ್ ಅಭ್ಯರ್ಥಿ 57,902 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: ಮುಂಬೈ ರೇಪ್, ಮಹಿಳೆ ಸಾವು- ಸೆ.21ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ

    ಕರ್ನಾಟಕದಲ್ಲಿ ಯಡಿಯೂರಪ್ಪನವರ ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಈಗ ಗುಜರಾತಿನಲ್ಲೂ ಹೈಕಮಾಂಡ್ ಕ್ಲೀನ್ ಇಮೇಜ್ ಹೊಂದಿರುವ ಭೂಪೇಂದ್ರ ಪಟೇಲ್ ಅವರನ್ನು ಆಯ್ಕೆ ಮಾಡಿದೆ.

  • ಗುಜರಾತ್ ಮುಂದಿನ ಸಿಎಂ ಯಾರು?- ಪಟೇಲ್ ಸಮುದಾಯಕ್ಕೆ ಮಣೆ ಹಾಕುವ ಚಿಂತನೆ

    ಗುಜರಾತ್ ಮುಂದಿನ ಸಿಎಂ ಯಾರು?- ಪಟೇಲ್ ಸಮುದಾಯಕ್ಕೆ ಮಣೆ ಹಾಕುವ ಚಿಂತನೆ

    ಗಾಂಧಿನಗರ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ಸಿಎಂ ಯಾರಾಗಲಿದ್ದಾರೆ ಎಂಬುದು ಕೂತುಹಲ ಮೂಡಿಸಿದೆ.

    ಕರ್ನಾಟಕದಂತೆ ಗುಜರಾತ್‍ನಲ್ಲೂ ನಾಯಕತ್ವ ಬದಲಾವಣೆಯಾಗಿದ್ದು, ಇಂದು ಅಥವಾ ನಾಳೆ ನೂತನ ಸಿಎಂ ಆಯ್ಕೆ ಮಾಡವ ಸಾಧ್ಯತೆ ಇದೆ. ಮುಂದಿನ ಸಿಎಂ ಆಯ್ಕೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದ್ದು, ಪಟೇಲ್ ಸಮುದಾಯಕ್ಕೆ ಮಣೆ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಅವರದಿಯಾಗಿದೆ. ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ರಾಜ್ಯ ಕೃಷಿ ಸಚಿವರಾದ ಆರ್.ಸಿ ಫಾಲ್ಡು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ, ಮನ್ಸುಖ್ ಮಾಂಡವೀಯ ಸೇರಿದಂತೆ ಕೆಲ ನಾಯಕರ ಹೆಸರುಗಳು ನೂತನ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ

    ಗುಜರಾತ್‍ನಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದು ವರ್ಷವಷ್ಟೇ ಬಾಕಿ ಇದೆ. ಈ ನಡುವೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಯಾವುದೇ ಕಾರಣವನ್ನೂ ತಿಳಿಸದೇ ಸಿಎಂ ಬದಲಾವಣೆ ಮಾಡಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಈ ಮಧ್ಯೆ ರಾಜೀನಾಮೆ ಬಳಿಕ ಮಾತನಾಡಿದ ವಿಜಯ್ ರೂಪಾನಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ. ಗುಜರಾತ್ ಪ್ರಗತಿಗೆ ಹೊಸ ನಾಯಕತ್ವ ಬರಬೇಕೆಂದು ನಾನು ನಂಬುತ್ತೇನೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ

    ಇದೀಗ ಹೊಸ ನಾಯಕರ ರೇಸ್ ನಲ್ಲಿ ಪಟೇಲ್, ಫಾಲ್ಡು, ರೂಪಾಲ, ಮಾಂಡವೀಯ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸಿದ್ದಾರೆ ಹಾಗಾಗಿ ಅಚ್ಚರಿಯ ಹೆಸರು ಸೇರ್ಪಡೆಗೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಅಭಿಪ್ರಾಯವು ಕೇಳಿಬರುತ್ತಿದೆ.

    2016 ರಲ್ಲಿ ಆನಂದಿ ಬೆನ್ ಪಟೇಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ, ನಿತಿನ್ ಪಟೇಲ್ ಮುಂದಿನ ಸಿಎಂ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರೂಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ನಿತಿನ್ ಪಟೇಲ್ ಅವರನ್ನೇ ಸಿಎಂ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಹೈಕಮಾಂಡ್ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

  • ವಿಶೇಷ ಹೂಡಿಕೆ ವಲಯ ಚರ್ಚೆಗೆ ಗುಜರಾತ್ ಭೇಟಿ: ಜಗದೀಶ್ ಶೆಟ್ಟರ್

    ವಿಶೇಷ ಹೂಡಿಕೆ ವಲಯ ಚರ್ಚೆಗೆ ಗುಜರಾತ್ ಭೇಟಿ: ಜಗದೀಶ್ ಶೆಟ್ಟರ್

    ಗಾಂಧಿನಗರ: ಗುಜರಾತ್ ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ ವಿಶೇಷ ಹೂಡಿಕೆ ವಲಯ (ಎಸ್‍ಐಆರ್) ದ ಕುರಿತು ಗುಜರಾತ್ ಸರ್ಕಾರದೊಂದಿಗೆ ಚರ್ಚೆ ನಡೆಸಲು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ಧೋಲೇರಾ (SIR) ದೇಶದ ಮೊದಲ ವ್ಯವಸ್ಥಿತವಾಗಿ ಯೋಜನೆ ಮಾಡಿ ನಿರ್ಮಿಸಲಾಗುತ್ತಿರುವ ವಿಶೇಷ ಹೂಡಿಕೆ ವಲಯ. ದೇಶದ ಮೊದಲ ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆಯೂ ಇದರದ್ದಾಗಿದೆ. ಈ ವಿಶೇಷ ಹೂಡಿಕೆ ವಲಯ (ಎಸ್‍ಐಆರ್) ದಿಂದ ಗುಜರಾತ್ ನಲ್ಲಿ ಹೆಚ್ಚಿನ ಹೂಡಿಕೆ ಯಾಗುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ನೀತಿಯಲ್ಲಿ ಈಗಾಗಲೇ ಘೋಷಣೆ ಮಾಡಿರುವಂತಹ ವಿಶೇಷ ಹೂಡಿಕೆ ವಲಯ ರಚನೆಗೆ ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಈ ಸಂಬಂಧ ಗುಜರಾತ್ ರಾಜ್ಯ ಹೊರತಂದಿರುವ ನೀತಿ ನಿಯಮಗಳಲ್ಲಿ ಮಾಡಲಾದಂತಹ ಬದಲಾವಣೆಯ ಬಗ್ಗೆ ಗುಜರಾತ್ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದೇವೆ ಎಂದರು.

    ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಮತ್ತು ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಧಿಕಾರಿಗಳ ತಂಡದ ಜೊತೆ ದೋಲೇರಾ, ಗಿಫ್ಟ್ ಸಿಟಿ ಸೇರಿದಂತೆ ಹಲವಾರು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಗಮನಿಸಿದ್ದೇವೆ. ಅಲ್ಲದೆ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಭೇಟಿಯಾದ ಸಂಧರ್ಭದಲ್ಲಿ ಗುಜರಾತ್ ರಾಜ್ಯದಲ್ಲಿ ಕೈಗಾರಿಕಾಭಿವೃದ್ದಿಗೆ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಇದರೊಂದಿಗೆ ನಮ್ಮ ರಾಜ್ಯದಲ್ಲಿ ಹೊರತಂದಿರುವ ನೀತಿಗಳ ಬಗ್ಗೆಯೂ ತಿಳಿಸಿಕೊಡಲಾಯಿತು. ಮುಂಬರುವ ಫೆಬ್ರವರಿಯಲ್ಲಿ ರಾಜ್ಯದಲ್ಲಿ ವಿಶ್ವ ಹೂಡಿಕೆದಾರರ ಸಭೆ ದಿನಾಂಕ ಘೋಷಣೆಯ ಬಗ್ಗೆಯೂ ಚರ್ಚಿಸಲಾಯಿತು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಉಮಾಪತಿಗೆ ಬ್ಲ್ಯಾಕ್‍ಮೇಲ್, ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಆಡಿಯೋ ಬಾಂಬ್

    ಸಚಿವರ ನೇತೃತ್ವದ ತಂಡದಲ್ಲಿ ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರಾದ ರೇವಣ್ಣ ಗೌಡ, ಇನ್‍ವೆಸ್ಟ್ ಕರ್ನಾಟಕ ಫೋರಂನ ಸಿಓಓ ಬಿ.ಕೆ ಶಿವಕುಮಾರ್, ಕೆಐಎಡಿಬಿ ಸಿಡಿಓ ಬಿ.ಕೆ ಪವಿತ್ರ, ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಸುನಿಲ್, ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸಪ್ಪ, ಮಧು ರೆಡ್ಡಿ ಉಪಸ್ಥಿತರಿದ್ದರು.

    ಸಭೆಯಲ್ಲಿ ಗುಜರಾತ್ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ರಾಜೀವ್ ಕುಮಾರ್ ಗುಪ್ತಾ, ಗುಜರಾತ್ ಮುಖ್ಯಮಂತ್ರಿ ಅವರ ಚೀಫ್ ಪ್ರಿನ್ಸಿಪಲ್ ಸೆಕ್ರೆಟರಿ ಕೈಲಾಶ್‍ನಾಥನ್, ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಅಶ್ವಿನಿ ಕುಮಾರ್, ಕೈಗಾರಿಕಾಭಿವೃದ್ದಿ ಆಯುಕ್ತ ರಾಹುಲ್ ಗುಪ್ತಾ ಪಾಲ್ಗೊಂಡಿದ್ದರು.

  • ಗುಜರಾತ್ ಸಿಎಂಗೆ ಕೊರೊನಾ ಸೋಂಕು ದೃಢ

    ಗುಜರಾತ್ ಸಿಎಂಗೆ ಕೊರೊನಾ ಸೋಂಕು ದೃಢ

    ಅಹಮದಾಬಾದ್: ಗುಜರಾತ್ ಸಿಎಂ ವಿಜಯ್ ರೂಪಾನಿ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಐಸೋಲೇಷನ್ ನಲ್ಲಿದ್ದಾರೆ. ಭಾನುವಾರ ಚುನಾವಣೆ ಪ್ರಚಾರದ ವೇಳೆ ವೇದಿಕೆಯ ಮೇಲೆ ಸಿಎಂ ಕುಸಿದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರೋದು ದೃಢವಾಗಿದೆ.

    ಮುಖ್ಯಮಂತ್ರಿಗಳು ನಿರಂತರವಾಗಿ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗುತ್ತಿದ್ದರು. ನಿರಂತರವಾಗಿ ಜನರ ಸಂಪರ್ಕದಲ್ಲಿದ್ದರಿಂದ ಕೊರೊನಾ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಕಳೆದ ಮೂರು ದಿನಗಳಿಂದ ಭಾಗಿಯಾಗಿದ್ದರು. ಸದ್ಯ ಆಸ್ಪತ್ರೆಯಲ್ಲಿ ಒಂದು ವಾರ ಇರಲಿದ್ದಾರೆ ಎಂದು ಡಿಸಿಎಂ ನಿತಿನ್ ಪಟೇಲ್ ಮಾಹಿತಿ ನೀಡಿದ್ದಾರೆ.

    ವೇದಿಕೆಯಲ್ಲಿಯೇ ಕುಸಿದಿದ್ರು:  ಭಾನುವಾರ ವಡೋದರಾದ ನಿಜಾಮಪುರನಲ್ಲಿ ಮುಖ್ಯಮಂತ್ರಿಗಳು ಎಲೆಕ್ಷನ್ ಕ್ಯಾಂಪನ್ ನಲ್ಲಿ ಭಾಗಿಯಾಗಿದ್ದ ವೇಳೆ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾಗಲೇ ಕುಸಿದಿದ್ದರು. ವಡೋದರಾದ ನಿಜಾಮಪುರನಲ್ಲಿ ಮೂರನೇ ಬಾರಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ವೇದಿಕೆ ಮೇಲೆ ಮತದಾರರನ್ನು ಉದ್ದೇಶಿಸಿ ಮತನಾಡುವಾಗ ಸಿಎಂ ದಿಢೀರ್ ಕುಸಿದರು. ಚುನಾವಣೆ ಹಿನ್ನೆಲೆ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಿಎಂ ಕಳೆದ ಎರಡು ದಿನಗಳಿಂದ ಸರಿಯಾಗಿ ವಿಶ್ರಾಂತಿ ಸಹ ಪಡೆದುಕೊಂಡಿರಲಿಲ್ಲ. ಈ ಹಿನ್ನೆಲೆ ಕಡಿಮೆ ರಕ್ತದೊತ್ತಡದಿಂದಾಗಿ ಕುಸಿದಿದ್ದಾರೆ ಎಂದು ವರದಿಯಾಗಿದೆ.

  • ವೇದಿಕೆಯ ಮೇಲೆ ಕುಸಿದ ಸಿಎಂ ವಿಜಯ್ ರೂಪಾನಿ

    ವೇದಿಕೆಯ ಮೇಲೆ ಕುಸಿದ ಸಿಎಂ ವಿಜಯ್ ರೂಪಾನಿ

    ಅಹಮದಾಬಾದ್: ಚುನಾವಣೆ ಪ್ರಚಾರದ ವೇಳೆ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾಗಲೇ ಗುಜರಾತ್ ಸಿಎಂ ವಿಜಯ್ ರೂಪಾನಿ ಕುಸಿದಿದ್ದಾರೆ. ಭಾನುವಾರ ವಡೋದರಾದ ನಿಜಾಮಪುರನಲ್ಲಿ ಮುಖ್ಯಮಂತ್ರಿಗಳು ಎಲೆಕ್ಷನ್ ಕ್ಯಾಂಪನ್ ನಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಸಿಎಂ ಕುಸಿಯುತ್ತಿದ್ದಂತೆ ಅಧಿಕಾರಿಗಳು ಕಾರ್ಯಕ್ರಮವನ್ನ ರದ್ದುಗೊಳಿಸಿ, ವೇದಿಕೆಯಲ್ಲಿಯೇ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳನ್ನ ಅಹಮಾದಾಬಾದ್ ಗೆ ಶಿಫ್ಟ್ ಮಾಡಲಾಗಿದೆ. ಸಿಎಂ ಅವರ ವೈದ್ಯಕೀಯ ವರದಿ ಬಂದಿದ್ದು, ಗಾಬರಿಯಾಗುವಂತಿದಿಲ್ಲ. ಇಸಿಜಿ, ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲ ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಾಗಿದ್ದು, ಸಿಎಂ ಆರೋಗ್ಯವಾಗಿದ್ದಾರೆ. 24 ಗಂಟೆ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದು ಯು.ಎನ್. ಆಸ್ಪತ್ರೆಯ ಡಾಕ್ಟರ್ ಆರ್.ಕೆ.ಪಟೇಲ್ ಮಾಹಿತಿ ನೀಡಿದ್ದಾರೆ.

    ವಡೋದರಾದ ನಿಜಾಮಪುರನಲ್ಲಿ ಮೂರನೇ ಬಾರಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ವೇದಿಕೆ ಮೇಲೆ ಮತದಾರರನ್ನು ಉದ್ದೇಶಿಸಿ ಮತನಾಡುವಾಗ ಸಿಎಂ ದಿಢೀರ್ ಕುಸಿದರು. ಚುನಾವಣೆ ಹಿನ್ನೆಲೆ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಿಎಂ ಕಳೆದ ಎರಡು ದಿನಗಳಿಂದ ಸರಿಯಾಗಿ ವಿಶ್ರಾಂತಿ ಸಹ ಪಡೆದುಕೊಂಡಿರಲಿಲ್ಲ. ಈ ಹಿನ್ನೆಲೆ ಕಡಿಮೆ ರಕ್ತದೊತ್ತಡದಿಂದಾಗಿ ಕುಸಿದಿದ್ದಾರೆ ಎಂದು ವರದಿಯಾಗಿದೆ.

    ವಡೋದರ ಸೇರಿದಂತೆ 6 ಮಹಾನಗರ ಪಾಲಿಕೆಗಳಲ್ಲಿ ಫೆಬ್ರವರಿ 21ರಂದು ಚುನಾವಣೆ ನಡೆಯಲಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ ಡಿಸಿಎಂ ನಿತಿನ್ ಪಟೇಲ್ ಹೇಳಿದ್ದಾರೆ.