Tag: ವಿಜಯ್ ಭಾಸ್ಕರ್

  • ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 4 & 5ನೇ ವರದಿ ಸಲ್ಲಿಕೆ – 3,630 ಶಿಫಾರಸು ಮಾಡಿದ ಆಯೋಗ

    ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 4 & 5ನೇ ವರದಿ ಸಲ್ಲಿಕೆ – 3,630 ಶಿಫಾರಸು ಮಾಡಿದ ಆಯೋಗ

    – ಅಪೌಷ್ಟಿಕತೆ ನೀಗಿಸಲು 2 ಬದಲು 5 ಮೊಟ್ಟೆ

    ಬೆಂಗಳೂರು: ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ (Karnataka Administrative Reforms Commission) 4 ಮತ್ತು 5ನೇ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸಲ್ಲಿಕೆ ಮಾಡಲಾಯಿತು. ಆಯೋಗದ ಅಧ್ಯಕ್ಷ ವಿಜಯ್ ಭಾಸ್ಕರ್, ಸಿಎಂಗೆ ವರದಿ ಸಲ್ಲಿಕೆ ಮಾಡಿದರು.

    ಆಯೋಗದ ವರದಿಯಲ್ಲಿ ವಿವಿಧ ಇಲಾಖೆಗಳಿಂದ ಸುಮಾರು 3,630 ಶಿಫಾರಸುಗಳನ್ನು ಆಯೋಗ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಪ್ರಾರಂಭಿಸಿ ಅದೇ ಶಾಲೆಯಲ್ಲೇ ಶಿಕ್ಷಣ (Education) ಪಡೆಯಲು ಅನುಕೂಲ ಮಾಡಿಕೊಡುವುದು. ವಿದ್ಯಾರ್ಥಿಗಳು ಶಾಲೆಗಳನ್ನು ಬಿಡುವುದನ್ನು ತಪ್ಪಿಸಲು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವುದು. 1-12ನೇ ತರಗತಿವರೆಗೆ ಕ್ಲಸ್ಟರ್ ಶಾಲೆ ಮಾಡಿ ವರ್ಗವಾಣಿ ಪ್ರಮಾಣ ಪತ್ರವನ್ನು (TC) ಪದೇ ಪದೇ TC ಪಡೆದುಕೊಳ್ಳುವುದು ಕಡಿಮೆ ಮಾಡಿದಂತಾಗುತ್ತದೆ ಎಂದು ಶಿಫಾರಸು ಮಾಡಿದೆ. ಇದನ್ನೂ ಓದಿ: ಸಿಡಿ ರಾಡಿ: ರಮೇಶ್ ಜಾರಕಿಹೊಳಿಗೆ ಬೆಂಬಲ- ಮಂತ್ರಿಯೂ ಬೇಡ ಎಂದ ಈಶ್ವರಪ್ಪ

    ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡಿ ಪೌಷ್ಟಿಕತೆ ಸುಧಾರಿಸಬೇಕು. ಅಪೌಷ್ಟಿಕತೆ ನೀಗಿಸಲು 2 ಬದಲು 5 ಮೊಟ್ಟೆ ನೀಡಬಹುದಾ ಎಂದು ಪರಿಶೀಲಿಸಿ. MBBS ಸೀಟು ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾ ಅಡಿಯಲ್ಲಿ ಶೇಕಡಾ 15ರಷ್ಟು ಸೀಟು ಮೀಸಲಿಡುವುದು. ಲೋಕಸೇವಾ ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ.

    BBMPಯಲ್ಲಿ 30 ಕಂದಾಯ ವಿಭಾಗಗಳಿಗೆ ವಿಕೇಂದ್ರೀಕರಣ ಮತ್ತು ಸಮನ್ವಯ ಸಾಧಿಸಲು 30 KAS ಅಧಿಕಾರಿಗಳನ್ನು ನೇಮಿಸಿ 5 ಲಕ್ಷಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ಸಂಘಗಳು 5 ವರ್ಷಗಳಿಗೊಮ್ಮೆ ಲೆಕ್ಕಪತ್ರ ಸಲ್ಲಿಸಲು ಚಾರ್ಟರ್ಡ್ ಅಕೌಂಟೆಂಟ್‍ರಿಂದ ಲೆಕ್ಕ ಪರಿಶೋಧನೆ ಮಾಡಿಸುವ ಅಗತ್ಯವಿಲ್ಲ ಎಂದು ಶಿಫಾರಸು ಮಾಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ 5 ರಿಂದ 10 NRI ಕೋಟಾ ಸೃಷ್ಟಿ ಮಾಡಬಹುದು ಅಂತ ಸಲಹೆ ನೀಡಿದೆ.

    ಸಂಪನ್ಮೂಲ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ಮಾಡಿ ಶೇಕಡಾ ಒಂದರಷ್ಟು 1% ಕ್ರೀಡಾ ಸೆಸ್ಸ್ ಹೆಚ್ಚಿಸಬಹುದು. ರಾಜ್ಯ ಸರ್ಕಾರ ಚುನಾವಣಾ ಪ್ರಾಧಿಕಾರ ರದ್ದುಗೊಳಿಸಬಹುದು. ಉದ್ಯೋಗ ಸೇವೆ ಇಲಾಖೆಯನ್ನು ಕೌಶಲ್ಯ ಮಿಷನ್ ಜೊತೆ ಅಂತಿಮಗೊಳಿಸಬಹುದು. ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮಸೂದೆ 2020ನ್ನು ಅಂತಿಮಗೊಳಿಸಬಹುದು ಅಂತ ಶಿಫಾರಸು ಮಾಡಿದೆ. ಇದನ್ನೂ ಓದಿ: NIAಗೆ ತಾಲಿಬಾನ್ ಹೆಸರಲ್ಲಿ ಭಯೋತ್ಪಾದನಾ ದಾಳಿ ಸಂದೇಶ – ದೇಶಾದ್ಯಂತ ಹೈಅಲರ್ಟ್ ಘೋಷಣೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯವನ್ನು ಎರಡು ನಿರ್ದೇಶನಾಲಯಗಳನ್ನಾಗಿ ಪ್ರತ್ಯೇಕಿಸಬಹುದು. 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ಕೆಲಸದ ಹೊರೆ ಇಳಿಸಲು BSC ನರ್ಸಿಂಗ್ ಕೋರ್ಸ್ ಹಾಗೂ ಪ್ಯಾರಾಮೇಡಿಕಲ್ ಕೋರ್ಸ್ ಆರಂಭಿಸಬಹುದು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಸರ್ಕಾರಿ ವೈದ್ಯರು ಖಾಸಗಿ ವೃತ್ತಿಯನ್ನು (Pravite Practice) ನಿಷೇಧಿಸಬಹುದು. ಸರ್ಕಾರಿ ಆಸ್ಪತ್ರೆಗಳಲ್ಲೇ ಸಂಜೆ OPD ಪ್ರಾರಂಭಿಸಲು ಸಲಹೆಯನ್ನು ಆಯೋಗ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ರವಿಕುಮಾರ್ ನೇಮಕ

    ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ರವಿಕುಮಾರ್ ನೇಮಕ

    ಬೆಂಗಳೂರು: ನಿರೀಕ್ಷೆಯಂತೆ ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಪಿ.ರವಿಕುಮಾರ್ ನೇಮಕವಾಗಿದ್ದಾರೆ. ಪಿ ರವಿಕುಮಾರ್ ಅವರನ್ನು ಮಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿ ಇಂದು ಸರ್ಕಾರ ಆದೇಶಿಸಿದೆ.

    ಹಾಲಿ ಸಿಎಸ್ ಟಿ ಎಂ ವಿಜಯ್ ಭಾಸ್ಕರ್ ಸೇವಾವಧಿ ನಾಳೆ ಮುಕ್ತಾಯವಾಗಲಿದ್ದು, ತೆರವಾಗಲಿರುವ ಸ್ಥಾನಕ್ಕೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಪಿ ರವಿಕುಮಾರ್‌ನ್ನು  ನೇಮಿಸಲಾಗಿದೆ.

    ಪಿ ರವಿಕುಮಾರ್ 1984ರ ಬ್ಯಾಚ್  ಐಎಎಸ್ ಅಧಿಕಾರಿಯಾಗಿದ್ದಾರೆ. ನಾಳೆ ವಿಧಾನಸೌಧದಲ್ಲಿ ಪಿ ರವಿಕುಮಾರ್‌ಗೆ ವಿಜಯಭಾಸ್ಕರ್ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಪಿ ರವಿಕುಮಾರ್ ಸರ್ಕಾರದ 38ನೇ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

    1984 ಬ್ಯಾಚ್‍ನ ಅಧಿಕಾರಿಯಾಗಿರುವ ರವಿ ಕುಮಾರ್ ಹಿರಿತನದ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕ ಕೇಡರ್‌ನ  ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ, ಸಹಕಾರ, ಸಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

    ಕೆಪಿಟಿಸಿಎಲ್ ಎಂಡಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ರವಿ ಕುಮಾರ್ ಅವರ ಸೇವಾವಧಿ 2022ರ ಮೇ ವರೆಗೆ ಇದೆ. 1 ವರ್ಷ 5 ತಿಂಗಳು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ರವಿ ಕುಮಾರ್ ಸೇವೆಯಲ್ಲಿ ಇರಲಿದ್ದಾರೆ

  • ಉಡುಗೊರೆ ನೀಡಿದ್ದ ಚಿನ್ನದ ಕಿರೀಟವನ್ನ ಸರ್ಕಾರಕ್ಕೆ ಹಸ್ತಾಂತರಿಸಿದ ಕಾರಜೋಳ

    ಉಡುಗೊರೆ ನೀಡಿದ್ದ ಚಿನ್ನದ ಕಿರೀಟವನ್ನ ಸರ್ಕಾರಕ್ಕೆ ಹಸ್ತಾಂತರಿಸಿದ ಕಾರಜೋಳ

    – 140 ಗ್ರಾಂದ ಏಳು ಲಕ್ಷ ಮೌಲ್ಯದ ಕಿರೀಟ

    ಬೆಂಗಳೂರು: ಉಡುಗೊರೆಯಾಗಿ ನೀಡಿದ್ದ 140 ಗ್ರಾಂ ತೂಕವುಳ್ಳ ಚಿನ್ನದ ಕಿರೀಟವನ್ನ ಡಿಸಿಎಂ ಗೋವಿಂದ ಕಾರಜೋಳ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ನೀಡಿದ್ದಾರೆ.

    ಚಿನ್ನದ ಕಿರೀಟ ಹಸ್ತಾಂತರಿಸಿದ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿಗಳು, ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದ ಜನರು ಪ್ರೀತಿಯಿಂದ ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ನೀಡಿದ್ದರು. ಇದೀಗ ನಿಯಮಗಳ ಪ್ರಕಾರ ವಿಜಯಭಾಸ್ಕರ್ ಅವರ ಮೂಲಕ ಉಡುಗೊರೆಯನ್ನ ಸರ್ಕಾರಕ್ಕೆ ಹಸ್ತಾಂತರಿಸಿದ್ದೇನೆ ಎಂದು ತಿಳಿಸಿದರು. ಚಿನ್ನದ ಕಿರೀಟ ಹಸ್ತಾಂತರಿಸಿದ ಕುರಿತು ಟ್ವಿಟ್ಟರ್ ಮೂಲಕ ಸಹ ಮಾಹಿತಿ ನೀಡಿದ್ದಾರೆ.

    ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ನನಗೆ ಸಮರ್ಪಿಸಿದ್ದ ಬಂಗಾರದ ಕಿರೀಟವನ್ನು ಇಂದು ಮುಖ್ಯಕಾರ್ಯದರ್ಶಿಯರ ಮೂಲಕ ಸರ್ಕಾರಕ್ಕೆ ಒಪ್ಪಿಸಿದೆ. ನನ್ನ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ಕಾರಜೋಳ ಗ್ರಾಮದ ಅಭಿವೃದ್ಧಿಗಾಗಿ ರೂಪಿಸಿ ಅನುಷ್ಟಾನ ಗೊಳಿಸಿದ ಯೋಜನೆಗಳು, ನೀರಾವರಿ ಯೋಜನೆಗಳ ಅನುಷ್ಟಾನ, ಗ್ರಾಮದ ಮನೆಯ ಮಗನು ಉಪಮುಖ್ಯಮಂತ್ರಿಯಾಗಿರುವುದಕ್ಕೆ ಅತ್ಯಂತ ಪ್ರೀತಿ ಗೌರವದಿಂದ ಗ್ರಾಮಸ್ಥರು ಸನ್ಮಾನಿಸಿದ್ದರು. ಕಳೆದ 6 ವರ್ಷಗಳಿಂದ ಸನ್ಮಾನ ಮಾಡಲು ಪ್ರಯತ್ನಿಸುತ್ತಿದ್ದರು.  ಇದನ್ನೂ ಓದಿ: ನಮೋ ಹುಟ್ಟುಹಬ್ಬಕ್ಕೆ ಹನುಮನಿಗೆ 1.25 ಕೆಜಿ ತೂಕದ ಚಿನ್ನದ ಕಿರೀಟ ನೀಡಿದ ಅಭಿಮಾನಿ

    ಕಾರಜೋಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಒತ್ತಾಯ ಪೂರ್ವಕವಾಗಿ ಸನ್ಮಾನಿಸಿ, ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ಶಾಸಕ, ಸಚಿವರಾಗಿ ಸಲ್ಲಿಸಿದ ಸೇವೆಗಾಗಿ ಮಾಡಿದ ಸನ್ಮಾನ ಸರ್ಕಾರಕ್ಕೆ ಸಲ್ಲಬೇಕು. ಹೀಗಾಗಿ ಈ ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗೋವಿಂದ್ ಕಾರಜೋಳ, ಎಂ.ಬಿ ಪಾಟೀಲ್, ಶಿವಾನಂದ್ ಪಾಟೀಲ್‍ಗೆ ಚಿನ್ನದ ಕಿರೀಟ

  • ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಸೂಚನೆ

    ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಸೂಚನೆ

    ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

    ಕೊರೊನಾ ಭೀತಿಯಿಂದ ಕೆಲ ಸರ್ಕಾರಿ ಇಲಾಖೆಗಳಿಗೆ ರಜೆ ನೀಡಲಾಗಿತ್ತು. ಈಗ ಸೂಚಿಸಿರುವ ಎಲ್ಲ ಸರ್ಕಾರಿ ಅಧಿಕಾರಿಗಳು ಮರಳಿ ಕೆಲಸಕ್ಕೆ ಹಾಜರಗಬೇಕು ಎಂದು ವಿಜಯ್ ಭಾಸ್ಕರ್ ಸುತ್ತೋಲೆ ಹೊರಡಿಸಿ ಸೂಚಿಸಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯಮಟ್ಟದ ಕಚೇರಿಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ರಾಜ್ಯದಲ್ಲಿರುವ ಎಲ್ಲಾ ಖಜಾನೆಗಳನ್ನು ಸೇರಿದಂತೆ ಆರ್ಥಿಕ ಇಲಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮತ್ತು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವರ್ಗದ ಅಧಿಕಾರಿ/ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

    ಮೇಲ್ಕಾಣಿಸಿದ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸರ್ಕಾರಿ ನಿಗಮ ಮಂಡಳಿಗಳಲ್ಲಿ ಮತ್ತು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಎ ವೃಂದದ ಎಲ್ಲಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

    ಆದರೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ ಅಥವಾ ಸಿಬ್ಬಂದಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

  • ಶೌಚಾಲಯವಿದ್ದರೂ ಬಳಸದ ಸಾರ್ವಜನಿಕರು- ವಿಜಯ್ ಭಾಸ್ಕರ್ ಫುಲ್ ಕ್ಲಾಸ್

    ಶೌಚಾಲಯವಿದ್ದರೂ ಬಳಸದ ಸಾರ್ವಜನಿಕರು- ವಿಜಯ್ ಭಾಸ್ಕರ್ ಫುಲ್ ಕ್ಲಾಸ್

    ಯಾದಗಿರಿ: ಸರ್ಕಾರ ಪ್ರತಿ ಮನೆಗೆ ಸಾವಿರಾರು ರೂಪಾಯಿ ನೀಡಿ, ಸಾರ್ವಜನಿಕರಿಗೆ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ಇದನ್ನು ಬಳಸಲು ಸಾರ್ವಜನಿಕರು ನಿರ್ಲಕ್ಷ್ಯ ವಹಿಸುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ವಿಜಯ ಭಾಸ್ಕರ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಯಾದಗಿರಿ ಜಿಲ್ಲೆಯ ಪ್ರವಾಸದಲ್ಲಿರುವ ವಿಜಯ್ ಭಾಸ್ಕರ್, ಇಂದು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಬಂದಳ್ಳಿ ಗ್ರಾಮದ ಮಾರ್ಗ ಮಧ್ಯೆ ಬಹಿರ್ದೆಸೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ತಮ್ಮ ವಾಹನ ನಿಲ್ಲಿಸಿ, ವ್ಯಕ್ತಿಯನ್ನು ತಡೆದು ಶೌಚಾಲಯ ಬಳಕೆ ಬಗ್ಗೆ ಪಾಠ ಮಾಡಿದ್ದಾರೆ.

    ಈ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅದನ್ನು ಬಳಸಲು ಗ್ರಾಮಸ್ಥರು ಆಸಕ್ತಿ ತೋರುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಶೌಚಾಲಯ ಬಳಸದಿದ್ದರೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ವಿಜಯ್ ಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ಪ್ರೋತ್ಸಾಹ ಧನ ಮರುಪಾವತಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಜಯ್ ಭಾಸ್ಕರ್ ಜೊತೆ ಧ್ವನಿಗೂಡಿಸಿದ, ಜಿ.ಪಂ ಸಿಇಓ ಶಿಲ್ಪಾ ಶರ್ಮಾ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಶೌಚಾಲಯ ಬಳಕೆ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿದರು.