Tag: ವಿಜಯ್ ದೇವರಕೊಂಡ

  • ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

    ಬೆಟ್ಟಿಂಗ್‌ ಆಪ್‌ ಪ್ರಚಾರ – ದೇವರಕೊಂಡ, ಪ್ರಕಾಶ್‌ ರಾಜ್‌, ರಾಣಾ ಸೇರಿದಂತೆ 25 ಮಂದಿ ಮೇಲೆ ಕೇಸ್‌

    ಹೈದರಾಬಾದ್‌: ಬೆಟ್ಟಿಂಗ್‌ ಅಪ್ಲಿಕೇಶನ್‌ (Betting Application) ಪ್ರಚಾರ ಮಾಡಿದ್ದಕ್ಕೆ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್‌ ರಾಜ್‌ ಸೇರಿದಂತೆ ಟಾಲಿವುಡ್ 25 ಕ್ಕೂ ಹೆಚ್ಚು ನಟ ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

    ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮಿಯಾಪುರ್ ಪೊಲೀಸರು ಟಾಲಿವುಡ್ ನಟರು ಮತ್ತು ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯನ್ಸ್‌ರ್‌ಗಳ ಮೇಲೆ ಕೇಸ್‌ ದಾಖಲಿಸಿದ್ದಾರೆ.

    ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್ , ಅನನ್ಯಾ, ಶ್ರೀಮುಖಿ, ಸಿರಿ ಹನುಮಂತು, ಶ್ಯಾಮಲಾ, ವರ್ಷಿಣಿ, ಶೋಭಾ, ನೇಹಾ, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಸನ್ನಿ ಯಾದವ್, ಟೇಸ್ಟಿ ತೇಜಾ ಮತ್ತು ರಿತು ಸೇರಿದಂತೆ ಹಲವರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಈ ಪ್ರಸಿದ್ಧ ನಟರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಉದ್ದೇಶಪೂರ್ವಕವಾಗಿ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇವರ ಪ್ರಚಾರ ಮಡುವ ಮೂಲಕ ಯುವ ಜನರ ಮನಸ್ಸು ಹಾಳಾಗುತ್ತಿದೆ. ಇದರಿಂದ ಅನೇಕ ಮನೆಗಳಲ್ಲಿ ಆರ್ಥಿಕ ತೊಂದರೆಗೆ ಕಾರಣವಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಹಾಕಿ ಯುವ ಜನತೆ ನಷ್ಟಕ್ಕೆ ತುತ್ತಾಗಿದ್ದಾರೆ. ಈ ಆಪ್‌ನಲ್ಲಿ ಹಣ ಕಳೆದುಕೊಂಡು ಹಲವು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ತೆಲಂಗಾಣ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಇದರ ಹೊರತಾಗಿಯೂ ಬೆಟ್ಟಿಂ ಗ್ಆಪ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

  • ತಡರಾತ್ರಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

    ತಡರಾತ್ರಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

    ‘ಪುಷ್ಪ 2′ ಸಿನಿಮಾದ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣ (Rashmika Mandanna) ವೆಕೇಷನ್ ಮೂಡ್‌ನಲ್ಲಿದ್ದಾರೆ. ಡಿ.23ರ ತಡರಾತ್ರಿ ಮುಂಬೈ ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಹಾಗೂ ವಿಜಯ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾದ ಅಲ್ಲು ಅರ್ಜುನ್

    ಡಿ.23ರಂದು ತಡರಾತ್ರಿ ಮುಂಬೈ ಏರ್‌ಪೋರ್ಟ್‌ನಲ್ಲಿ ವಿಜಯ್ (Vijay Devarakonda) ಮತ್ತು ರಶ್ಮಿಕಾ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ. ಆದರೂ ಇಬ್ಬರೂ ಜೊತೆಯಾಗಿ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಕ್ಲ್ಯಾರಿಟಿ ಸಿಕ್ಕಿಲ್ಲ.

     

    View this post on Instagram

     

    A post shared by Snehkumar Zala (@snehzala)

    ವಿಜಯ್‌ ಮತ್ತು ರಶ್ಮಿಕಾ ಜೊತೆಯಾಗಿ 2 ಸಿನಿಮಾ ಮಾಡಿರೋದ್ರಿಂದ ಇಬ್ಬರ ನಡುವಿನ ರಿಲೇಷನ್‌ಶಿಪ್ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಅಧಿಕೃತವಾಗಿ ತಿಳಿಸಿಲ್ಲ. ಡೇಟಿಂಗ್ ವದಂತಿ ನಿಜನಾ? ಸುಳ್ಳಾ? ಎಂಬುದು ಈ ಜೋಡಿಯೇ ಖಾತ್ರಿಪಡಿಸಬೇಕಿದೆ.

     

    View this post on Instagram

     

    A post shared by Viral Bhayani (@viralbhayani)

    ಅಂದಹಾಗೆ, ಡಿ.5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಸಿನಿಮಾದ ಸಕ್ಸಸ್‌ನಿಂದ ರಶ್ಮಿಕಾ ಮಂದಣ್ಣ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ನಟಿಗೆ ಬೇಡಿಕೆ ಹೆಚ್ಚಾಗಿದೆ.

  • ಜೀವನದ ಪ್ರತಿ ಹಂತದಲ್ಲೂ ಸಂಗಾತಿ ಜೊತೆಯಾಗಿರಬೇಕು: ಲೈಫ್ ಪಾರ್ಟ್ನರ್ ಬಗ್ಗೆ ರಶ್ಮಿಕಾ ಮಾತು

    ಜೀವನದ ಪ್ರತಿ ಹಂತದಲ್ಲೂ ಸಂಗಾತಿ ಜೊತೆಯಾಗಿರಬೇಕು: ಲೈಫ್ ಪಾರ್ಟ್ನರ್ ಬಗ್ಗೆ ರಶ್ಮಿಕಾ ಮಾತು

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಚಿತ್ರದ ಸಕ್ಸಸ್ ಖುಷಿಯ ನಡುವೆ ತಮ್ಮ ಲೈಫ್ ಪಾರ್ಟ್ನರ್ ಹೇಗಿರಬೇಕು? ಎಂದು ನಟಿ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ. ನನ್ನ ಸಂಗಾತಿ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿರಬೇಕು ಎಂದು ಸಂಗಾತಿ ಬಗ್ಗೆ ಬಣ್ಣಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಿಂದ ಹೊಸಕೆರೆಹಳ್ಳಿ ಫ್ಲ್ಯಾಟ್‌ಗೆ ಆಗಮಿಸಿದ ದರ್ಶನ್

    ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನ್ನ ಸಂಗಾತಿ ನನ್ನನ್ನು ಬೆಂಬಲಿಸಬೇಕು. ಯಾವಾಗಲೂ ನನ್ನನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಕಷ್ಟದ ಸಮಯದಲ್ಲಿ ನನ್ನನ್ನು ಬೆಂಬಲಿಸಬೇಕು. ಪರಸ್ಪರ ಗೌರವಿಸಬೇಕು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಹೊಂದಿಲ್ಲದಿದ್ದರೆ, ನಾವು ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲ ಎಂದು ಮಾತನಾಡಿದ್ದಾರೆ.

    ಪ್ರೀತಿ ಎಂದರೆ ಸಂಗಾತಿಯೊಂದಿಗಿನ ಗಟ್ಟಿಯಾದ ಬಾಂಧವ್ಯ. ಜೀವನದ ವಿವಿಧ ಹಂತಗಳಲ್ಲಿ ಯಾರಾದರೂ ನಮ್ಮೊಂದಿಗೆ ಇರೋದೇ ಪ್ರೀತಿ. ಬಂಡೆಯಂತೆ ನಮ್ಮೊಂದಿಗೆ ನಿಲ್ಲಬೇಕು ಮತ್ತು ಜೀವನದ ಎಲ್ಲಾ ಸಂದರ್ಭಗಳನ್ನು ಜೊತೆಯಾಗಿ ಎದುರಿಸಬೇಕು ಎಂದು ಬಾಳ ಸಂಗಾತಿ ಹೇಗಿರಬೇಕು ಎಂದು ಮಾತನಾಡಿದ್ದಾರೆ. ಇನ್ನೂ ಸಾಕಷ್ಟು ವರ್ಷಗಳಿಂದ ರಶ್ಮಿಕಾ ಹೆಸರು ವಿಜಯ್‌ ದೇವರಕೊಂಡ ಜೊತೆ ತಳುಕು ಹಾಕಿಕೊಂಡಿದೆ. ಆದರೆ ಇದುವರೆಗೂ ಇಬ್ಬರೂ ರಿಲೇಷನ್‌ಶಿಪ್‌ ಇದ್ದಾರಾ? ಇಲ್ವಾ? ಎಂಬುದರ ಬಗ್ಗೆ ಕ್ಲ್ಯಾರಿಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಗುಡ್‌ ನ್ಯೂಸ್‌ ಸಿಗುತ್ತಾ? ಎಂದು ಕಾದುನೋಡಬೇಕಿದೆ.

    ಇನ್ನೂ ಡಿ.5ರಂದು ರಿಲೀಸ್ ಆಗಿದ್ದ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಫಹಾದ್ ಫಾಸಿಲ್, ತಾರಕ್ ಪೊನ್ನಪ್ಪ, ಜಗಪತಿ ಬಾಬು ನಟಿಸಿದರು. ಈ ಚಿತ್ರ ಇದೀಗ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ.

  • ರಿಲೇಷನ್‌ಶಿಪ್ ವದಂತಿ ನಡುವೆ ವಿಜಯ್ ದೇವರಕೊಂಡ ಫ್ಯಾಮಿಲಿಗೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

    ರಿಲೇಷನ್‌ಶಿಪ್ ವದಂತಿ ನಡುವೆ ವಿಜಯ್ ದೇವರಕೊಂಡ ಫ್ಯಾಮಿಲಿಗೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಆಗಾಗ ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ಒಡನಾಟದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ವಿಜಯ್ ಕುಟುಂಬಕ್ಕೆ ನಟಿ ‘ಪುಷ್ಪ 2’ (Pushpa 2) ತೋರಿಸಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಪ್ರದರ್ಶನದ ವೇಳೆ ಕಾಲ್ತುಳಿತ: ವಿಷಾದ ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ

    ಡಿ.5ರಂದು ರಾತ್ರಿ ಹೈದರಾಬಾದ್‌ನ ಎಎಂಬಿ ಸಿನಿಮಾಸ್‌ನಲ್ಲಿ ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ‘ಪುಷ್ಪ 2’ ಚಿತ್ರವನ್ನು ರಶ್ಮಿಕಾ ವೀಕ್ಷಿಸಿದ್ದಾರೆ. ವಿಜಯ್ ತಾಯಿ ಮಾಧವಿ ಮತ್ತು ಸಹೋದರ ಆನಂದ್ ದೇವರಕೊಂಡ ಅವರು ನಟಿಯ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ವಿಜಯ್ ಇಲ್ಲ. ಆದರೆ ವಿಜಯ್ ಒಡೆತನದ ‘ರೌಡಿ’ ಕಸ್ಟ್‌ಮೈಸ್  ಟೀ- ಶರ್ಟ್ ಅನ್ನು ರಶ್ಮಿಕಾ ಧರಿಸಿರೋದು ಅಭಿಮಾನಿಗಳ ಗಮನ ಸೆಳೆದಿದೆ.

    ಇನ್ನೂ ಇತ್ತೀಚೆಗೆ ನಟಿ ‘ಪುಷ್ಪ 2’ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಸುಳಿವು ನೀಡಿದ್ದರು. ಅದಷ್ಟೇ ಅಲ್ಲ, ಇತ್ತ ವಿಜಯ್ ಕೂಡ ಸಂದರ್ಶನವೊಂದರಲ್ಲಿ ನನಗೆ 35 ವರ್ಷವಾಗಿದೆ. ನಾನು ಸಿಂಗಲ್ ಆಗಿದ್ದೇನೆ ಎಂದು ಭಾವಿಸುತ್ತೀರಾ? ಎಂದು ನಿರೂಪಕಿಯನ್ನು ಪ್ರಶ್ನಿಸಿದರು. ಈ ಮೂಲಕ ತಾವು ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಸುಳಿವು ನೀಡಿದ್ದರು. ಈ ಬೆನ್ನಲ್ಲೇ ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ಕಾಣಿಸಿಕೊಂಡಿರೋದು ಇಬ್ಬರ ರಿಲೇಷನ್‌ಶಿಪ್ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ. ಮುಂದಿನ ವರ್ಷ ವಿಜಯ್‌ ಜೊತೆ ನಟಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

    ಅಂದಹಾಗೆ, ‘ಪುಷ್ಪ 2’ ಸಿನಿಮಾ ಡಿ.5ರಂದು ರಿಲೀಸ್ ಆಗಿ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಗಳಿಸಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನ್ಯಾಷನಲ್ ಕ್ರಶ್ ರಶ್ಮಿಕಾ, ಶ್ರೀಲೀಲಾ, ಡಾಲಿ, ತಾರಕ್ ಪೊನ್ನಪ್ಪ, ಅನಸೂಯ, ಫಹಾದ್ ಫಾಸಿಲ್, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಅಲ್ಲು ಅರ್ಜುನ್, ರಶ್ಮಿಕಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ವಿಲನ್?

    ಅಲ್ಲು ಅರ್ಜುನ್, ರಶ್ಮಿಕಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ವಿಲನ್?

    ಲ್ಲು ಅರ್ಜುನ್‌ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ.5ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ‘ಪುಷ್ಪ 3’ ಬರೋದು ಪಕ್ಕಾ ಆಗಿದೆ. ಇದರ ನಡುವೆ ಹೊಸದೊಂದು ವಿಚಾರ ಚರ್ಚೆಗೆ ಗ್ರಾಸವಾಗಿದೆ. ‘ಪುಷ್ಪ 3’ನಲ್ಲಿ ಸ್ಟಾರ್ ನಟ ವಿಜಯ್ ದೇವರಕೊಂಡ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:UI: ಕಂಟೆಂಟ್ ಇರುವ ಸಿನಿಮಾವನ್ನು ಜನ ಕೈಬಿಡಲ್ಲ: ನಟ ಉಪೇಂದ್ರ

    ಪವರ್‌ಫುಲ್‌ ಪಾತ್ರಗಳನ್ನು ಸೃಷ್ಟಿಸಿ ಪ್ರತಿಭಾವಂತ ನಟರಿಗೆ ಅವಕಾಶ ಕೊಡೋದ್ರಲ್ಲಿ ಸುಕುಮಾರ್ ಯಾವಾಗಲೂ ಮುಂದು. ಪುಷ್ಪ 2ನಲ್ಲಿ ಈಗಾಗಲೇ ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಿದ್ದಾರೆ. ‘ಪುಷ್ಪ 3’ನಲ್ಲಿ (Pushpa 3) ವಿಜಯ್ ದೇವರಕೊಂಡ (Vijay Devarakonda) ಅವರು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮುಂದೆ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜನಾ? ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    ಇನ್ನೂ ಡಿ.5ರಂದು ‘ಪುಷ್ಪ 2’ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ, ಅನಸೂಯ, ಫಹಾದ್ ಫಾಸಿಲ್, ಶ್ರೀಲೀಲಾ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ರಿಲೇಷನ್‌ಶಿಪ್‌ನಲ್ಲಿರೋದಾಗಿ ಒಪ್ಪಿಕೊಂಡ ವಿಜಯ್ ದೇವರಕೊಂಡ

    ರಿಲೇಷನ್‌ಶಿಪ್‌ನಲ್ಲಿರೋದಾಗಿ ಒಪ್ಪಿಕೊಂಡ ವಿಜಯ್ ದೇವರಕೊಂಡ

    ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ಇದೀಗ ಸಿನಿಮಾಗಿಂತ ಅವರ ವೈಯಕ್ತಿಕ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ರಿಲೇಷನ್‌ಶಿಪ್‌ನಲ್ಲಿರೋದಾಗಿ (Dating) ವಿಜಯ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ

    ಸಂದರ್ಶನವೊಂದರಲ್ಲಿ ಪ್ರೀತಿ, ಮದುವೆ ಬಗ್ಗೆ ಓಪನ್ ಆಗಿ ವಿಜಯ್ ಮಾತನಾಡಿದ್ದಾರೆ. ಯಾರಾದರೂ ಪ್ರೀತಿ ಮಾಡಿದ್ರೆ ಆ ಅನುಭವ ಹೇಗಿರುತ್ತದೆ ಎಂಬುದು ತಿಳಿದಿದೆ. ಪ್ರೀತಿ ನಿರೀಕ್ಷೆಯಿಂದ ಬರುತ್ತದೆ ಎಂದಿದ್ದಾರೆ. ಬೇಷರತ್ತಾದ ಪ್ರೀತಿಯನ್ನು ನಿರೀಕ್ಷಿಸುವುದು ಸರಿಯೇ ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ.

    vijaydevarakonda

    ಯಾರನ್ನಾದರೂ ಸರಿಯಾಗಿ ತಿಳಿದುಕೊಂಡು ಸ್ನೇಹ ಬೆಳೆಸಿದ ನಂತರವೇ ಅವರಿಗೆ ನಾನು ಹತ್ತಿರವಾಗುತ್ತೇನೆ. ನಾನು ಡೇಟ್‌ಗೆ ಹೋಗುವುದಿಲ್ಲ ಎಂದಿದ್ದಾರೆ. ಆಗ ನಿರೂಪಕಿಗೆ ನನಗೆ 35 ವರ್ಷವಾಗಿದೆ. ನಾನು ಒಬ್ಬಂಟಿಯಾಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ? ಎಂದು ವಿಜಯ್ ಕೇಳಿದ್ದಾರೆ.

    ಆ ನಂತರ ಮದುವೆ ಬಗ್ಗೆ ಮಾತನಾಡಿ, ಮದುವೆ ಮಹಿಳೆಯರಿಗೆ ಸಾಕಷ್ಟು ಸವಾಲಿನ ಸಂಗತಿಯಾಗಿದೆ. ಮದುವೆ ಯಾರ ವೃತ್ತಿಗೂ ಅಡ್ಡಿಯಾಗಬಾರದು. ಮಹಿಳೆಯರಿಗೆ ಮದುವೆ ಕಷ್ಟ. ಇದು ನೀವು ಮಾಡುತ್ತಿರುವ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಈ ವೇಳೆ, ರಿಲೇಷನ್‌ಶಿಪ್‌ನಲ್ಲಿರೋದಾಗಿ ನಟ ಒಪ್ಪಿಕೊಂಡರು. ಇನ್ನೂ ನಟನ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ವಿಜಯ್ ಎಂಗೇಜ್ ಆಗಿದ್ದಾರೆ ಎಂದೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ವಿಜಯ್ ಡೇಟಿಂಗ್ ವಿಚಾರ ಕೇಳಿ ಮಹಿಳಾಭಿಮಾನಿಗಳಿಗೆ ಬೇಸರವಾಗಿದೆ.

  • ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಿದ ರಶ್ಮಿಕಾ

    ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಿದ ರಶ್ಮಿಕಾ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈ ಬಾರಿ ದೀಪಾವಳಿ ಹಬ್ಬವನ್ನು ವಿಜಯ್ ದೇವರಕೊಂಡ ಮನೆಯಲ್ಲಿ ಆಚರಿಸಿದ್ದಾರೆ. ಹಬ್ಬದ ಸೆಲೆಬ್ರೇಷನ್ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

    ವಿಜಯ್ ದೇವರಕೊಂಡ  (Vijay Devarakonda) ಜೊತೆ ರಶ್ಮಿಕಾ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೊಂದಿಗೆ ಮತ್ತು ಅವರ ಫ್ಯಾಮಿಲಿ ಜೊತೆ ಉತ್ತಮ ಒಡನಾಟವಿದೆ. ಇಬ್ಬರ ಬಗ್ಗೆ ಆಗಾಗ ಡೇಟಿಂಗ್ ವದಂತಿ ಹರಿದಾಡುತ್ತಲೇ ಇರುತ್ತದೆ. ಇದರ ಬಗ್ಗೆ ಈ ಜೋಡಿ ರಿಯಾಕ್ಟ್ ಮಾಡಿರಲಿಲ್ಲ. ಈಗ ಅವರಿಬ್ಬರ ಡೇಟಿಂಗ್‌ ವಿಚಾರದಲ್ಲಿ ನೆಟ್ಟಿಗರಿಗೆ ಸಾಕ್ಷಿ ಸಿಕ್ಕಿದೆ.

    ಈ ಬಾರಿ ಬೆಳಕಿನ ಹಬ್ಬವನ್ನು ವಿಜಯ್‌ ಮನೆಯಲ್ಲಿ ಆಚರಿಸಿದ್ದಾರೆ. ಹಬ್ಬದ ಕೆಲ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ದೀಪಾವಳಿ ಹಬ್ಬವನ್ನು ವಿಜಯ್ ಕುಟುಂಬದ ಜೊತೆ ಆಚರಿಸಿಕೊಂಡಿರುವ ಕುರಿತು ನಟಿ ಎಲ್ಲವೂ ರಿವೀಲ್ ಮಾಡಿಲ್ಲ. ಆದರೆ ಅವರು ಶೇರ್ ಮಾಡಿರುವ ಪೋಸ್ಟ್‌ಗೆ ಫೋಟೋ ಕ್ರೆಡಿಟ್ ಅನ್ನು ವಿಜಯ್‌ ಸಹೋದರ ಆನಂದ ದೇವರಕೊಂಡಗೆ (Anand Devarakonda) ನೀಡಿದ್ದಾರೆ. ಥ್ಯಾಂಕ್ಯೂ ಆನಂದ ಎಂದು ತಿಳಿಸಿದ್ದಾರೆ. ಇದರಿಂದ ವಿಜಯ್ ಮನೆಯಲ್ಲಿ ರಶ್ಮಿಕಾ ದೀಪಾವಳಿ ಹಬ್ಬ ಆಚರಿಸಿರೋದು ಪಕ್ಕಾ ಆಗಿದೆ. ಡೇಟಿಂಗ್‌ ಸುದ್ದಿಗೆ ಮತ್ತೆ ಪುಷ್ಠಿ ಸಿಕ್ಕಂತಾಗಿದೆ.

    ಇನ್ನೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಮದುವೆ ಕುರಿತು ಸಿಹಿಸುದ್ದಿ ಕೊಡುತ್ತಾರಾ? ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

  • VD 12:ಲೀಕ್ ಆಯ್ತು ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಲುಕ್

    VD 12:ಲೀಕ್ ಆಯ್ತು ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಲುಕ್

    ‘ಫ್ಯಾಮಿಲಿ ಸ್ಟಾರ್’ ಚಿತ್ರದ ಬಳಿಕ ಟಾಲಿವುಡ್‌ನ ಲೈಗರ್ ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ‘VD 12’ ಸಿನಿಮಾ ಚಿತ್ರೀಕರಣದ ಫೋಟೋ ಲೀಕ್ ಆಗಿದೆ. ವಿಜಯ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಕಳೆದ ಕೆಲವು ದಿನಗಳಿಂದ ವಿಜಯ್ ದೇವರಕೊಂಡ, 12ನೇ ಸಿನಿಮಾದ ಚಿತ್ರೀಕರಣ ಶ್ರೀಲಂಕಾದಲ್ಲಿ (Srilanka) ಮಾಡಲಾಗ್ತಿದೆ. ವಿಭಿನ್ನ ಕಥೆಗೆ ಡಿಫರೆಂಟ್ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ತಿದ್ದಾರೆ. ಸದ್ಯ ಕೂದಲು ಟ್ರೀಮ್ ಮಾಡಿಸಿಕೊಂಡಿದ್ದು, ಬೈಕ್‌ನಲ್ಲಿ ಹೋಗುತ್ತಿರುವ ಶೂಟಿಂಗ್ ಫೋಟೋ ಈಗ ಲೀಕ್ ಆಗಿದೆ.

    ಚಿತ್ರತಂಡ ಲೀಕ್ ಆಗದಂತೆ ಜಾಗ್ರತೆ ವಹಿಸಿದ್ದರು ಕೂಡ ಹೀಗೆ ಆಗಿರೋದಕ್ಕೆ ತಲೆಕೆಡಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ವಿಜಯ್‌ ಫೋಟೋವನ್ನು ಎಲ್ಲೂ ಶೇರ್‌ ಮಾಡದಂತೆ ಮನವಿ ಮಾಡಿದ್ದಾರೆ. ಆದರೆ ಹೊಸ ಸಿನಿಮಾದಲ್ಲಿ ವಿಜಯ್ ಲುಕ್ ಹೇಗಿದೆ ಎಂದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಕತ್ರಿನಾ ಕೈಫ್ ಜೊತೆ ಸಿನಿಮಾ ಮಾಡುವ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ವಿಕ್ಕಿ ಕೌಶಲ್

    ಈ ಚಿತ್ರಕ್ಕೆ ಗೌತಮ್ ನಾಯ್ಡು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ವಿಜಯ್‌ಗೆ ಜೋಡಿಯಾಗಿ ‘ಪ್ರೇಮಲು’ ನಟಿ ಮಮಿತಾ ಬೈಜು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಈ ಚಿತ್ರದ ಮೇಲೆ ಫ್ಯಾನ್ಸ್ ಭಾರೀ ನಿರೀಕ್ಷೆಯಿದೆ.

  • ಶ್ರೀಲಂಕಾದಲ್ಲಿ ವಿಜಯ್ ದೇವರಕೊಂಡ- ಅಭಿಮಾನಿಗಳಿಂದ ಸರ್ಪ್ರೈಸ್

    ಶ್ರೀಲಂಕಾದಲ್ಲಿ ವಿಜಯ್ ದೇವರಕೊಂಡ- ಅಭಿಮಾನಿಗಳಿಂದ ಸರ್ಪ್ರೈಸ್

    ಮೃಣಾಲ್‌ ಠಾಕೂರ್‌ ಜೊತೆಗಿನ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾದ ನಂತರ ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾದ ಶೂಟಿಂಗ್‌ಗಾಗಿ ಶ್ರೀಲಂಕಾಗೆ ಬಂದಿಳಿದಿದ್ದಾರೆ. ಅದ್ಧೂರಿಯಾಗಿ ಸ್ವಾಗತಿಸಿ ಫ್ಯಾನ್ಸ್‌ ವಿಜಯ್‌ಗೆ ಸರ್ಪ್ರೈಸ್ ನೀಡಿದ್ದಾರೆ. ಇದನ್ನೂ ಓದಿ:ರಜನಿಕಾಂತ್ ಹೊಸ ಸಿನಿಮಾದಲ್ಲಿ ಕರ್ನಾಟಕದ ಹುಡುಗ‌

    ತಮ್ಮ 12ನೇ ಸಿನಿಮಾಗಾಗಿ ಶ್ರೀಲಂಕಾಗೆ ವಿಜಯ್ ಎಂಟ್ರಿ ಕೊಟ್ಟಿದ್ದು, ಅಲ್ಲಿನ ಅಭಿಮಾನಿಗಳು ಹೂವಿನ ಹಾರ ಹಾಕಿ ಊರಿನ ಪದ್ಧತಿಯಂತೆ ಕ್ಯಾಂಡಿಯನ್‌ ನೃತ್ಯ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನೂ ಹೊಸ ಚಿತ್ರಕ್ಕಾಗಿ ತಂಡದ ಜೊತೆ ಶ್ರೀಲಂಕಾ ಬೀಡು ಬಿಟ್ಟಿದ್ದಾರೆ.

    ‘ಜೆರ್ಸಿ’ ನಿರ್ದೇಶಕ ಗೌತಮ್ ಜೊತೆ ಕೈಜೋಡಿಸಿರುವ ವಿಜಯ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ತಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟ ಕಾಣಿಸಿಕೊಳ್ತಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ತೆರೆಕಂಡ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಮತ್ತು ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

  • ವಿಜಯ್ ಹೆಸರು ಹೇಳ್ತಿದ್ದಂತೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ವಿಜಯ್ ಹೆಸರು ಹೇಳ್ತಿದ್ದಂತೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸ್ನೇಹಿತ ಆನಂದ್ ದೇವರಕೊಂಡ ನಟಿಸಿರುವ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಈ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಹೆಸರು ಕೇಳ್ತಿದ್ದಂತೆ ರಶ್ಮಿಕಾ ನಾಚಿ ನೀರಾಗಿದ್ದಾರೆ.

    ‌’ಬೇಬಿ’ ಸಿನಿಮಾದ ಸಕ್ಸಸ್ ನಂತರ ಆನಂದ್ ದೇವರಕೊಂಡ (Anand Devarakonda) ಹೊಸ ಚಿತ್ರ ‘ಗಂ ಗಂ ಗಣೇಶ’ ಪ್ರಿ ರಿಲೀಸ್ ಕಾರ್ಯಕ್ರಮ ಸೋಮವಾರ (ಮೇ 27) ರಾತ್ರಿ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ‌, ನಟ ಆನಂದ್ ಕೆಲವು ಇಂಟ್ರಸ್ಟಿಂಗ್ ಪ್ರಶ್ನೆಗಳನ್ನು ನಟಿಗೆ ಕೇಳಿದರು. ನಿಮ್ಮ ಫೇವರಿಟ್ ನಟ ಯಾರು? ಎಂದು ಕೇಳಿದಾಗ ರಶ್ಮಿಕಾ ಉತ್ತರಿಸಲು ಹಿಂದು ಮುಂದು ನೋಡುತ್ತಿದ್ದರು.

    ಆಗ ಅಭಿಮಾನಿಗಳು ‘ರೌಡಿ’ ಎಂದು ವಿಜಯ್ ದೇರವಕೊಂಡ (Vijay Devarakonda) ಹೆಸರು ಕೂಗಲು ಆರಂಭಿಸಿದರು. ಆಗ ರಶ್ಮಿಕಾ, ನೀನು ನನ್ನ ಫ್ಯಾಮಿಲಿ ಕಣೋ ಆನಂದ್ ಯಾಕೋ ಹೀಗೆ ತಗ್ಲಾಕ್ತೀಯಾ? ಬಿಡಪ್ಪಾ ಎಂದು ನಗುತ್ತಲೇ ನಟಿ ಉತ್ತರಿಸಿದ್ದಾರೆ. ನಂತರ ನನ್ನ ಫೇವರಿಟ್ ಹೀರೋ ರೌಡಿನೇ ಎಂದಿದ್ದಾರೆ. ಚಿಕ್ಕ ರೌಡಿ ಎಂದು ಆನಂದ್ ದೇವರಕೊಂಡ ಪರ ವಹಿಸಿ ನಟಿ  ಮಾತನಾಡಿದ್ದಾರೆ. ಸದ್ಯ ರಶ್ಮಿಕಾ ಹಾಗೂ ಆನಂದ್ ದೇವರಕೊಂಡ ಕ್ಯೂಟ್ ಸಂಭಾಷಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಎಂಟು ನಟಿಯರ ಜೊತೆ ಕಾಣಿಸಿಕೊಂಡ ನಟ ಗಣೇಶ್: ಕೃಷ್ಣಂ ಪ್ರಣಯ ಸಖಿ ಗೀತ

    ಈ ಮೂಲಕ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ನಟಿ ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಹೇಳುವ ಮೂಲಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಸಿಹಿಸುದ್ದಿ ಕೊಡ್ತಾರಾ ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಸಿಖಂದರ್, ಅನಿಮಲ್ ಪಾರ್ಕ್, ಪುಷ್ಪ 2, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.